Subscribe to Updates
Get the latest creative news from FooBar about art, design and business.
Author: roovari
ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯು ದಿನಾಂಕ 13 ಜೂನ್ 2025ರಂದು ಜರಗಿತು. ಈ ಸಭೆಯಲ್ಲಿ ಪಾಲ್ಗೊಂಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ “ನಾಡು-ನುಡಿ ಸೇವೆಯಲ್ಲಿ ತೊಡಗಿರುವ ಕನ್ನಡಪರ ಸಂಘಟನೆಗಳಿಗೆ ಪಾರದರ್ಶಕ ಹಾಗೂ ಪ್ರಮಾಣಿಕ ವ್ಯವಹಾರ ದೃಷ್ಠಿಕೋನಗಳು ಬಹಳ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಕಳೆದ ಮೂರೂ ತಾಲೂಕು ಸಮ್ಮೇಳನಗಳ ಖರ್ಚುವೆಚ್ಚಗಳನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಾರದರ್ಶಕವಾಗಿ ನೀಡಿರುವುದು ಸ್ತುತ್ಯಾರ್ಹ ಸಂಗತಿ. ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಪ್ರಾರಂಭದಿಂದಲೂ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸುವ ಹಿನ್ನೆಲಯಲ್ಲಿ ಸರಳ ಹಾಗೂ ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಕನ್ನಡಪರ ಮನಸ್ಸುಗಳನ್ನು ಒಂದುಗೂಡಿಸಿ ಉತ್ತಮೋತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಹರಿಹಳ್ಳಿಯಲ್ಲಿ ನಡೆದ ಆಲೂರು ತಾಲೂಕು ಮೂರನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಕೊಡುಗೆ ಅಪಾರವಿದೆ” ಎಂದು ಅಭಿಪ್ರಾಯಪಟ್ಟರು. ಸಾಹಿತ್ಯ…
ಯಶವಂತ ಸರದೇಶಪಾಂಡೆ ಒಬ್ಬ ಹುಟ್ಟುಕಲಾವಿದ. ಎಳವೆಯಲ್ಲಿಯೇ ನಾಟಕದ ಬಗ್ಗೆ ಅತಿಯಾದ ಒಲವು ಬೆಳೆಸಿಕೊಂಡವರು. ಇವರ ನಿರ್ದೇಶನದ ‘ಆಲ್ ದಿ ಬೆಸ್ಟ್’ ನಾಟಕ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದೆ. ಉತ್ತಮ ನಿರ್ದೇಶಕ, ನಾಟಕಕಾರ ಹಾಗೂ ಹಾಸ್ಯ ನಾಟಕಗಳ ರಚನೆ ಮತ್ತು ತಮ್ಮ ನಟನಾ ಕೌಶಲ್ಯದಿಂದ ಕರ್ನಾಟಕದಾದ್ಯಂತ ಜನಮನ ಗೆದ್ದವರು ಯಶವಂತ ಸರದೇಶಪಾಂಡೆಯವರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಒಕ್ಕಲಿ ಎಂಬ ಹಳ್ಳಿಯಲ್ಲಿ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ ಮತ್ತು ಕಲ್ಪನಾದೇವಿ ದಂಪತಿಗಳ ಸುಪುತ್ರರಾಗಿ 1965 ಜೂನ್ 13ರಂದು ಜನಿಸಿದರು. ನಾಟಕದಲ್ಲಿ ಅತಿಯಾದ ಆಸಕ್ತಿ ಇದ್ದ ಇವರಿಗೆ ಹೆಗ್ಗೋಡಿನ ‘ನೀನಾಸಮ್’ ನಾಟಕ ಸಂಸ್ಥೆಯಿಂದ ಪಡೆದ ಡಿಪ್ಲೋಮಾ ಪದವಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ದೊರೆತ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯು ಇವರ ಆಸಕ್ತಿಯನ್ನು ಕೆರಳಿಸಿ, ಆ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿತು. ರಾಜ್ಯದಾದ್ಯಂತ ಸಂಚರಿಸಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ ಖ್ಯಾತಿ ಇವರದು. ‘ಅಂಧ ಯುಗ’, ‘ಇನ್ಸ್ಪೆಕ್ಟರ್ ಜನರಲ್’, ‘ಮಿಡ್ ಸಮ್ಮರ್…
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಬಂಟ್ವಾಳ ಘಟಕದ ಪದಾಧಿಕಾರಿಗಳ ಸಭೆ ಅಧ್ಯಕ್ಷರಾದ ಚಂದ್ರಹಾಸ. ಡಿ. ಶೆಟ್ಟಿ ರಂಗೋಲಿ ಇವರ ಅಧ್ಯಕ್ಷತೆ ಯಲ್ಲಿ ದಿನಾಂಕ 09 ಜೂನ್ 2025ರಂದು ಬಿ. ಸಿ. ರೋಡಿನ ಹೋಟೆಲ್ ರಂಗೋಲಿಯಲ್ಲಿ ಜರಗಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಪರಾರಿ ಗುತ್ತು, ಸಂಚಾಲಕರಾಗಿ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ದೇವದಾಸ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಮೋಹನ ದಾಸ್ ಕೊಟ್ಟಾರಿ, ಉಪಾಧ್ಯಕ್ಷರುಗಳಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಯಪ್ರಕಾಶ್ ಬಿಕ್ರಿಬೆಟ್ಟು, ಸತೀಶ್ ಶೆಟ್ಟಿ ಮೊಡಂಕಾಪು, ಕೋಶಾಧಿಕಾರಿಗಳಾಗಿ ಶಂಕರ ಶೆಟ್ಟಿ ಪರಾರಿ, ಗೌರವ ಸಲಹೆಗಾರರಾಗಿ ರಾಜೇಶ್ ನಾಯ್ ಉಳಿಪ್ಪಾಡಿ, ಬಿ. ರಮಾನಾಥ ರೈ, ಚಂದ್ರಹಾಸ್. ಡಿ. ಶೆಟ್ಟಿ ರಂಗೋಲಿ, ಸತೀಶ್ ಶೆಟ್ಟಿ ಪಟ್ಲ, ಎ. ರುಕ್ಮಯ್ಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಸದಾನಂದ. ಡಿ. ಶೆಟ್ಟಿ ರಂಗೋಲಿ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಸೇಸಪ್ಪ ಮಾಸ್ಟರ್. ಆಯ್ಕೆಗೊಂಡರು. ಸಮಾರಂಭದಲ್ಲಿ ಜಗನ್ನಾಥ ಚೌಟ ಬದಿಗುಡ್ಡೆ, ಸದಾನಂದ…
ಮಂಗಳೂರು: ಬ್ಯಾರಿ ಕಲಾರಂಗ ಮಂಗಳೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಥಮ ಕಾರ್ಯಕ್ರಮವಾಗಿ ಸಂಘದ ಅಧ್ಯಕ್ಷ ಅಜೀಜ್ ಬೈಕಂಪಾಡಿ ವಿರಚಿತ ‘ಬ್ಯಾರಿ ಬಾಸೆ ಪಡಿಕೋರು’ ಎಂಬ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 12 ಜೂನ್ 2025ರ ಗುರುವಾರದಂದು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ ಮಾತನಾಡಿ “ದ. ಕ. ಜಿಲ್ಲೆ ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಭಾಷೆ ಹೀಗೆ ವೈವಿಧ್ಯಮಯ ಭಾಷಿಗರ ಪ್ರದೇಶವಾಗಿದೆ. ‘ಬ್ಯಾರಿ ಭಾಷೆ ಪಡಿಕೋರು’ ಪುಸ್ತಕ ಭಾಷೆಯ ಬೆಳವಣಿಗೆಯ ಜತೆಗೆ ಹೊಸಬರಿಗೆ ಬ್ಯಾರಿ ಭಾಷೆಯ ಶಬ್ದಗಳನ್ನು ತಿಳಿಯಲು ಸಹಕಾರಿಯಾಗಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಮ್ಮದ್ ಬಡ್ಡೂರು ಮಾತನಾಡಿ “ಭಾಷೆಯಲ್ಲಿ ಮೇಲು, ಕೀಳು ಎಂಬುವುದಿಲ್ಲ. ಮಾತನಾಡುವವರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಉತ್ತಮ ಕೈಪಿಡಿಯಾಗಿದೆ” ಎಂದರು. ಬ್ಯಾರಿ…
ಕಾರ್ಕಳ: ಇಲ್ಲಿನ ಕಲ್ಲೊಟ್ಟೆ ನಿವಾಸಿ ಹೆಸರಾಂತ ಶಿಲ್ಪಿ ಶೇಷಪ್ಪ ಆಚಾರ್ಯ ಅಲ್ಪ ಕಾಲದ ಅಸೌಖ್ಯದಿಂದಾಗಿ 12 ಜೂನ್ 2025 ರಂದು ರಾತ್ರಿ ನಿಧನ ಹೊಂದಿದರು. ಅವರಿಗೆ 68ವರ್ಷ ವಯಸ್ಸಾಗಿತ್ತು. ಅನೇಕ ದೇವಾಲಯಗಳನ್ನು ಹಾಗೂ ವಿಗ್ರಹಗಳನ್ನು ನಿರ್ಮಿಸಿರುವ ಇವರು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ಕಾಳಿಕಾಂಬೆಯ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಮಾಡಿದ್ದರು. ಶಿಲ್ಪ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಗಣನೀಯ ಸೇವೆಗೆ ಅನೇಕ ದೇವಸ್ಥಾನ, ಸಂಘ ಸಂಸ್ಥೆಯವರು ಇವರನ್ನು ಸನ್ಮಾನಿಸಿದ್ದರು. ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತಾರನೇ ಉಪನ್ಯಾಸ ಕಾರ್ಯಕ್ರಮ ದಿನಾಂಕ 12 ಜೂನ್ 2025 ರಂದು ಮಂಗಳೂರಿನ ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಜರುಗಿತು ಕಾರ್ಯಕ್ರಮದಲ್ಲಿ “ವಿವೇಕಾನಂದರ ಕನಸಿನ ಭಾರತ” ಎಂಬ ವಿಷಯದ ಕುರಿತು ಮಾತನಾಡಿದ ರಾಮಕೃಷ್ಣ ಮಠ, ಮಧುರೈ ಮುಖ್ಯಸ್ಥರಾದ ಸ್ವಾಮಿ ನಿತ್ಯದೀಪಾನಂದ ಜೀ “ಯಶಸ್ಸು ಎಂದರೆ ಕೇವಲ ಹೆಸರು, ಹುದ್ದೆ, ವೈಭವವಲ್ಲ. ಅದು ವ್ಯಕ್ತಿಯ ಒಳಗಿನ ಶಕ್ತಿಯ ವ್ಯಕ್ತೀಕರಣ. ಸ್ವಾಮಿ ವಿವೇಕಾನಂದರು ಸದಾ ಯುವಕರಿಗೆ ಮನದಟ್ಟಾಗಿ ಒತ್ತಿ ಹೇಳಿದ ಒಂದು ಮಾತು —”ನೀವು ದೇವರುಗಳು; ನಿಮ್ಮ ಶಕ್ತಿಯನ್ನು ಅರಿಯಿರಿ” ಅವರ ದೃಷ್ಟಿಯಲ್ಲಿ ಯಶಸ್ಸಿನ ಮೂಲ ಶಕ್ತಿ ಆತ್ಮವಿಶ್ವಾಸ. ಈ ಆತ್ಮವಿಶ್ವಾಸವೇ ವ್ಯಕ್ತಿಯಲ್ಲಿರುವ ಅಪಾರ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಜೀವನದಲ್ಲಿ ಗುರಿ ಅತ್ಯಂತ ಅಗತ್ಯ; ಗುರಿಯಿಲ್ಲದವರು ದಿಕ್ಕಿಲ್ಲದ ಹಡಗಿನಂತೆ. ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ, ಅದನ್ನು ಸಾಧಿಸಲು ಶ್ರದ್ಧೆ, ಶ್ರಮ, ಶಿಸ್ತು ಮತ್ತು ಧೈರ್ಯದಿಂದ…
ಉಡುಪಿ : ಎಂ.ಜಿ.ಎಂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು, ನಿರಂತರ ಕಲೆ ಹಾಗು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡಿದ್ದ ಲಕ್ಷ್ಮೀನಾರಾಯಣ ಕಾರಂತರಿಗೆ ದಿನಾಂಕ 12 ಜೂನ್ 2025ರ ಗುರುವಾರದಂದು ಉಡುಪಿ ತುಳು ಕೂಟದ ವತಿಯಿಂದ ಹೋಟೆಲ್ ಡಯಾನದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಅಹಮದಾಬಾದ್ ನಲ್ಲಿ ವಿಮಾನ ದುರಂತದಲ್ಲಿ ಅಸುನೀಗಿದವರಿಗೆ ಮೌನ ಪ್ರಾರ್ಥನೆಯೊಂದಿಗೆ ಶೃದ್ಧಾ೦ಜಲಿ ಸಲ್ಲಿಸಲಾಯಿತು. ಇತ್ತೀಚಿಗೆ ವೃತ್ತಿಯಿಂದ ನಿವೃತ್ತರಾದ ತುಳುಕೂಟದ ಸದಸ್ಯ ಜಯರಾಂ ಮಣಿಪಾಲ ಇವರನ್ನು ಸಂಮಾನಿಸಲಾಯಿತು. ಈ ಸಂದರ್ಭದಲ್ಲಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಗೌರಾವಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ ಕಿದಿಯೂರ್, ಕೋಶಾಧಿಕಾರಿ ಚೈತನ್ಯ ಎಂ.ಜಿ., ವಿವೇಕಾನಂದ ಹಾಗೂ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.
ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಸಂಘಟಿಸಿದ ‘ಸಂಭ್ರಮ – 2025’ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕ್ರತಿಕ ಸ್ವರ್ಧೆಯು ದಿನಾಂಕ 11 ಜೂನ್ 2025ರಂದು ಮಂಗಳೂರಿನ ಕೋಣಾಜೆಯಲ್ಲಿರುವ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಇವರು ಮಾತನಾಡಿ “ವಿದ್ಯಾರ್ಥಿಗಳಿಗೆ ಓದಿನ ಜೊತೆ ಜೊತೆಗೆ ವಿವಿಧ ಕಲೆಗಳ ಅಭಿವ್ಯಕ್ತಿಗೆ ಅವಕಾಶ ನೀಡುವ ವಿಶ್ವವಿದ್ಯಾನಿಲಯದ ಕ್ರಮ ಶ್ಲಾಘನೀಯವಾದದ್ದು. ಕಲೆ ಮತ್ತು ಕಲಾಭಿರುಚಿ ಉತ್ತಮ ನಾಗರೀಕರನ್ನು ಬೆಳೆಸುತ್ತದೆ, ಕಲೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಮುಂದೆ ತಾವು ಮಾಡಬೇಕಾಗಿರುವ ಉದ್ಯೋಗ – ವ್ಯಾಪಾರಗಳಲ್ಲಿ ಉನ್ನತಿಯಲ್ಲಿ ಸಾಧಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. “ವಿದ್ಯಾರ್ಥಿಗಳಿಗೆ ಭೋಧಿಸುವ ಉಪನ್ಯಾಸಕರು ಒಂದು ರೀತಿಯಿಂದ ಜಾದೂಗಾರರಿದ್ದಂತೆ. ತಮ್ಮ ಜ್ಞಾನದಿಂದ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳೆಸುವ ಜಾದೂ ಮಾಡುತ್ತಾರೆ. ಜ್ಞಾನದ ಕೇಂದ್ರವಾದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಖುಶಿ ಖುಶಿಯಾಗಿ ಸಂಭ್ರಮದಂತಹ…
ಮಂಗಳೂರು : ಕೊಂಕಣಿಯಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸುವ ಮಹತ್ವದ ಪ್ರಯತ್ನವಾಗಿ, ಮಾಂಡ್ ಸೊಭಾಣ್, ತನ್ನ ’ಮಿಟಾಕಣ್’ ಸಾಹಿತ್ಯ ಅಕಾಡೆಮಿ ಮೂಲಕ 2025 ಜೂನ್ 28 ಮತ್ತು 29 ರಂದು ಕಲಾಂಗಣದಲ್ಲಿ ಮಕ್ಕಳ ಕಥೆಗಳ ಅನುವಾದ ಕಾರ್ಯಗಾರವನ್ನು ಆಯೋಜಿಸಿದೆ. ಈ ಕಾರ್ಯಾಗಾರವು, ಮಕ್ಕಳ ಕಥೆಗಳ ಕೊರತೆಯನ್ನು ಗಮನಿಸಿ ಬೇರೆ ಭಾಷೆಗಳಿಂದ ಪ್ರಸಿದ್ಧ ಮಕ್ಕಳ ಕಥೆಗಳನ್ನು ಅನುವಾದಿಸಿ, ಕೊಂಕಣಿ ಸಾಹಿತ್ಯ ಸಂಪತ್ತನ್ನು ವಿಸ್ತರಿಸುವ ಒಂದು ಪ್ರಯತ್ನವಾಗಿದೆ. ಕಾರ್ಯಾಗಾರದಲ್ಲಿ ಖ್ಯಾತ ಲೇಖಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಭಾಗವಹಿಸುವವರಿಗೆ ಅನುವಾದದ ತಾಂತ್ರಿಕತೆ ಮತ್ತು ರಚನಾತ್ಮಕತೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಭಾಗವಹಿಸುವವರು ಯಾವುದೇ ಭಾಷೆಯ ಎರಡು ಕಥೆಗಳನ್ನು ತರಬೇಕು ಹಾಗೂ ಕಾರ್ಯಾಗಾರದಲ್ಲಿ ಅನುವಾದಗೊಂಡ ಆಯ್ದ ಕಥೆಗಳನ್ನು ಮಾಂಡ್ ಸೊಭಾಣ್ ಪುಸ್ತಕ ರೂಪದಲ್ಲಿ ಪ್ರಕಟಿಸಲಿದೆ. ಈ ಕಾರ್ಯಾಗಾರಕ್ಕೆ ನೋಂದಣಿ ಶುಲ್ಕವಿರುವುದಿಲ್ಲ. ಆದರೆ ಭಾಗವಹಿಸಲು ಕನಿಷ್ಟ ವಯಸ್ಸು 18 ವರ್ಷ ಆಗಿರಬೇಕು. ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಹೆಸರು ನೋಂದಾಯಿಸಲು ಫೋ: 8105226626, ಕಲಾಂಗಣ್, ಮಕಾಳೆ, ಶಕ್ತಿನಗರ, ಮಂಗಳೂರು-16
ಕುಂದಾಪುರ : ತೆಂಕು ಹಾಗೂ ಬಡಗುತಿಟ್ಟಿನ ಮೇರು ಕಲಾವಿದ ಕೋಡಿ ಕುಷ್ಟ ಗಾಣಿಗ (78) ದಿನಾಂಕ 12 ಜೂನ್ 2025ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು ಇದ್ದಾರೆ. ಆರಂಭದಲ್ಲಿ ಬಡಗಿನ ಅಮೃತೇಶ್ವರಿ, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ನಡೆಸಿದ ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಕಲಾವಿಹಾರ ಮೇಳದ ಮೂಲಕ ತೆಂಕುತಿಟ್ಟಿಗೆ ಪ್ರವೇಶ ಮಾಡಿ, ಆನಂತರ ರಾಜರಾಜೇಶ್ವರಿ ಮೇಳದಲ್ಲಿ ಕಲಾ ವ್ಯವಸಾಯ ನಡೆಸಿದ್ದರು. ಬಡಗು ತಿಟ್ಟಿನ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿ ಕಟೀಲು ಮೇಳದಲ್ಲಿ ಎರಡು ದಶಕ ಕಾಲ ತಿರುಗಾಟ ನಡೆಸಿ ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನಮನ ಸೂರೆಗೊಂಡಿದ್ದರು. ದೇವಿ ಮಹಾತ್ಮೆಯ ದೇವಿ ಪಾತ್ರಕ್ಕೆ ಜೀವ ತುಂಬಿದವರು. ಈ ಕಲಾ ಸೇವೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಕಲಾರಂಗ, ಹಾರಾಡಿ ರಾಮ ಗಾಣಿಗ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ, ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ, ಶ್ರೀಕ್ಷೇತ್ರ ಕೋಡಿ ಪ್ರಶಸ್ತಿಗಳು ಸಂದಿದೆ.