Subscribe to Updates
Get the latest creative news from FooBar about art, design and business.
Author: roovari
ಶಿರಸಿ : ಸಾಹಿತ್ಯ ಸಂಚಲನ ಶಿರಸಿ (ಉ.ಕ.) ಹಾಗೂ ನಯನಾ ಫೌಂಡೇಶನ್ ಶಿರಸಿ (ಉ.ಕ.) ಇವರ ಸಹಯೋಗದೊಂದಿಗೆ ಆಯೋಜಯಿಸಿದ ಡಾ.ಎಚ್. ಆರ್. ವಿಶ್ವಾಸ ಅವರ ‘ಸಂಗಮ’ ಕಾದಂಬರಿ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 14-01-2024ರ ಭಾನುವಾರದಂದು ಶಿರಸಿ ದೇವಿಕೆರೆಯ ಗಣೇಶ ನೇತ್ರಾಲಯದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿಗಳಾದ ಶ್ರೀ ಗಣಪತಿ ಭಟ್ಟ, ವರ್ಗಾಸರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸರಾದ ವಿ. ಶ್ರೀ ರವಿಶಂಕರ ಹೆಗಡೆ ದೊಡ್ಡಳ್ಳಿ ಉದ್ಘಾಟಿಸಲಿದ್ದು, ಪರಿಸರ ತಜ್ಞರಾದ ಶ್ರೀ ಶಿವಾನಂದ ಕಳವೆ ಪುಸ್ತಕ ಲೋಕಾರ್ಪಣೆಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸ್ಕೃತ ಸಾಹಿತಿಗಳಾದ ಡಾ. ಎಚ್.ಆರ್.ವಿಶ್ವಾಸ, ಶಿರಸಿಯ ಗಣೇಶ ನೇತ್ರಾಲಯದ ನೇತ್ರತಜ್ಞರಾದ ಡಾ. ಶಿವರಾಮ ಕೆ.ವಿ. ಹಾಗೂ ಸಾಹಿತ್ಯ ಸಂಚಲನದ ಸಂಚಾಲಕರಾದ ಶ್ರೀ ಕೃಷ್ಣ ಪದಕಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಆಮಂತ್ರಿತ ಕವಿಗಳಿಂದ ‘ರಾಮೋಪಾಸನೆ’ ಕವಿಗೋಷ್ಠಿ ನಡೆಯಲಿದ್ದು, ಕವಿಗಳಾದ ದಾಕ್ಷಾಯಿಣಿ ಪಿ.ಸಿ. ಶಿರಸಿ, ಶೋಭಾ ವಿ. ಭಟ್ ಶಿರಸಿ, ರಾಜಲಕ್ಷ್ಮಿ ಭಟ್ ಬೊಮ್ಮನಳ್ಳಿ, ದಿನೇಶ ಭಾಗ್ವತ ಶಿರಸಿ,…
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೇಬಂಡಾಡಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷವಾಕ್ಯದಲ್ಲಿ ದಿನಾಂಕ 23-12-2023ರಂದು ‘ಗ್ರಾಮ ಸಾಹಿತ್ಯ ಸಂಭ್ರಮ’ದ 11ನೇ ಸರಣಿ ಕಾರ್ಯಕ್ರಮವು ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾಮ ಸಾಹಿತ್ಯ ಸಂಭ್ರಮದ ಮಹಾ ಪೋಷಕರಾಗಿರುವ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿಯವರು “ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮವು ಅಂತರ್ಜಾಲಗಳ ಮೂಲಕ ವಿದೇಶಗಳಲ್ಲೂ ವ್ಯಾಪಕ ಪ್ರಚಾರವನ್ನು ಪಡೆಯುತ್ತಿದೆ ಹಾಗೂ ಹೊರನಾಡ ಕನ್ನಡಿಗರಿಂದ ಮುಕ್ತ ಕಂಠದ ಪ್ರಶಂಸನೆಗೆ ಪಾತ್ರವಾಗುತ್ತಿದೆ’ ಎಂದು ಹೇಳಿದರು. ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅವರು “ಇಂದು ಸಾಹಿತ್ಯದ ಮೂಲಕ ಮತ್ತೊಮ್ಮೆ ಮಕ್ಕಳನ್ನ…
ಬೆಂಗಳೂರು : ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಾದ ರಂಗಚಂದಿರ ಟ್ರಸ್ಟ್ ಮತ್ತು ರಂಗನಾಯಕ ಟ್ರಸ್ಟ್ ಆಯೋಜಿಸಿರುವ ರಂಗಜಂಗಮ ಸಿ.ಜಿ.ಕೆ. ಮತ್ತು ಟೆಲಿಕಾಂ ದತ್ತಾತ್ರೇಯರವರ ನೆನಪಿನ ಅಂಗವಾಗಿ ರಂಗಸಂಗೀತ, ಅಭಿನಂದನೆ ಮತ್ತು ನಾಟಕಗಳ ಪ್ರದರ್ಶನವು ದಿನಾಂಕ 11-01-2024ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ತಂಡದ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಆರ್. ಹೆಗಡೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೋಕದಲ್ಲಿ ವಿವಿಧ ಪ್ರಶಸ್ತಿ ಪಡೆದ ಪುರಸ್ಕೃತರಿಗೆ ಸನ್ಮಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ಬೇಲೂರು ಕೃಷ್ಣಮೂರ್ತಿ ರಚನೆಯ ಜಿ.ಪಿ.ಒ. ಚಂದ್ರು ನಿರ್ದೇಶನದ ‘ಕುದುರೆ ಮೊಟ್ಟೆ’ ಎಂಬ ಕಿರುನಾಟಕ ಮತ್ತು ಡಾ. ಬೇಲೂರು ರಘುನಂದನ್ ರಚನೆ, ಗೀತೆ ರಚನೆಯ ಹಾಗೂ ಕೃಷ್ಣಮೂರ್ತಿ ಕವತ್ತಾರ್ ರಂಗವಿನ್ಯಾಸ, ಸಂಗೀತ ನಿರ್ದೇಶನದ ಸವಿಗಾನ ಸವಿತಕ್ಕ ಅಭಿನಯಿಸುವ ‘ಉಧೋ ಉಧೋ ಎಲ್ಲವ್ವ’ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನಗೊಳ್ಳಲಿದೆ.
ಮಂಗಳೂರು : ಮಾತಾ ಅಮೃತಾನಂದಮಯಿ ಮಠ ಬೋಳೂರು ಮತ್ತು ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರ ಇದರ ಆಶ್ರಯದಲ್ಲಿ ಮಠದ 25ನೇ ವರ್ಷದ ಸಂಭ್ರಮಾಚರಣೆ ಮತ್ತು ರಾಷ್ಟ್ರೀಯ ಯುವದಿನದ ಅಂಗವಾಗಿ ‘ಯುವ ಸಾಹಿತ್ಯ ಸಮ್ಮೇಳನ 2024’ ಕಾರ್ಯಕ್ರಮವು ದಿನಾಂಕ 13-01-2024ರ ಶನಿವಾರದಂದು ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಆವರಣದಲ್ಲಿ ನಡೆಯಲಿದೆ. ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ವಸಂತಕುಮಾರ್ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಾತಾ ಅಮೃತಾನಂದಮಯಿ ಮಠ ಮಂಗಳೂರಿನ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಪ್ರೊ. ಎಂ.ಬಿ. ಪುರಾಣಿಕ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪೂರ್ವಾಹ್ನ 11 ಗಂಟೆಗೆ ವೀಣಾ ಟಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪ್ರಬಂಧಗೋಷ್ಠಿ ನಡೆಯಲಿದ್ದು, ಶ್ವೇತಾ ಕಾರ್ಕಳ, ಪ್ರಜ್ಞಾ ಕೆ. ವೈ.,…
ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಿದ 9ನೇ ವಚನ ಸಂಭ್ರಮ ಕಾರ್ಯಕ್ರಮ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಮಕ್ಕಳಿಗೆ ವಚನಕಾರರು ಸಮಾಜಕ್ಕೆ ನೀಡಿದ ಕೊಡುಗೆ’ ಎಂಬ ವಿಷಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 30-12-2023 ರಂದು ಮಂಗಳೂರಿನ ಕೊಡಿಯಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರು ಮಾತನಾಡಿ “ವಚನಗಳು ಮನುಷ್ಯನ ಮನಸ್ಸನ್ನು ಶುದ್ಧಿಗೊಳಿಸುವ ಸರಳ ನುಡಿಗಳು ಇದರ ಸಾರ ಸರ್ವರಲ್ಲಿ ಬೆರೆಯಲಿ. ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ತುಳು ಪರಂಪರೆಯ ಸಂಶೋಧನೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು. ಬೆಸೆಂಟ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರಿ ರವಿರಾಜ್ ಇವರು ವಚನಕಾರರು ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. “ಜಾತಿಭೇದಗಳನ್ನು ತೊಡೆದು ಹಾಕಲು ಮತ್ತು ಸ್ತ್ರೀ ಪುರುಷ ಸಮಾನತೆ…
ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 34ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯ ಯಕ್ಷರಂಗ ಯಕ್ಷಗಾನ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 14-01-2024ನೇ ಭಾನುವಾರ ಬೆಳಿಗ್ಗೆ 9-30ಕ್ಕೆ ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣದಲ್ಲಿ ಯಕ್ಷಗಾನ ಚಿತ್ರ ವೀಕ್ಷಿಸಿ ಸ್ಥಳದಲ್ಲಿಯೇ ಚಿತ್ರ ಬರೆಯುವ ಉಚಿತ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಯೋಮಾನಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸುತ್ತಿದ್ದು, ಚಿತ್ರ ಬರೆಯುವ ಹಾಳೆ (ಡ್ರಾಯಿಂಗ್ ಶೀಟ್) ಉಚಿತವಾಗಿ ವಿತರಿಸಲಾಗುವುದು. ಇನ್ನುಳಿದಂತೆ ಚಿತ್ರ ಬರೆಯುವ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಯಕ್ಷಗಾನ ಚಿತ್ರ ಬರೆಯಲು ಕೇವಲ ಒಂದು ಗಂಟೆ ಕಾಲಾವಕಾಶವಿದ್ದು 10-01-2024ರೊಳಗೆ ಈ ಕೆಳಗಿನ ಜಂಗಮವಾಣಿಗೆ ಸಂಪರ್ಕಿಸಿ ಹೆಸರು ನೊ೦ದಾಯಿಸಬಹುದು. ಹೆಸರು ನೊಂದಾಯಿಸುವ ಜಂಗಮವಾಣಿ 9731062936. ಹೆಚ್ಚಿನ ಮಾಹಿತಿಗೆ 9538732777 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಮತ್ತು ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನವನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ದಿನಾಂಕ 24-12-2023ರಂದು ಅಲ್ಲಿಯ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ “ಮನಸ್ಸಿಗೆ ಮದ ನೀಡದೆ ಮುದ ನೀಡುವ ಮೋಹಕ ಕಲೆ ಭರತನಾಟ್ಯ. ಕರಾವಳಿಯ ನೃತ್ಯ ಕಲಾವಿದರ ಈ ಸಂಘಟನೆ ಸ್ತುತ್ಯಾರ್ಹ” ಎಂದು ಹೇಳಿದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಸ್ಥಾಪಕ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್’ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷ ಮೈಸೂರಿನ ಪ್ರೊ. ಕೆ. ರಾಮಮೂರ್ತಿ ರಾವ್ ದಂಪತಿಯನ್ನು ಗೌರವಿಸಲಾಯಿತು. ಗೋಷ್ಠಿಗಳಲ್ಲಿ ವಿದ್ವಾನ್ ಚಂದ್ರಶೇಖರ ನಾವಡ ಅಧ್ಯಕ್ಷತೆಯಲ್ಲಿ ಗುರು ಉಷಾ ದಾತಾರ್ ದೇವಾಲಯ ನೃತ್ಯದ ಬಗ್ಗೆ, ಲಂಡನ್‌ನ ಚಿತ್ರಲೇಖ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶೀಲಾ ಚಂದ್ರಶೇಖರ್ ಭಕ್ತಿಯ ವಿವಿಧ ಆಯಾಮಗಳ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಠಿಯಲ್ಲಿ ಭರತನಾಟ್ಯಕ್ಕೆ ಧ್ವನಿಸುರುಳಿ: ಸಜೀವ ಹಿಮ್ಮೇಳ…
ಮಡಿಕೇರಿ : ಏಳು ವರ್ಷದ ಬಾಲಕಿ ಮಾಯಾ ಅಪ್ಪಚ್ಚು ತನ್ನ ಶಾಲೆಯ ಆರಂಭದ ದಿನಗಳಲ್ಲಿ ಅಲ್ಲಿಯ ಹೊಸ ವಾತಾವರಣದಲ್ಲಿ ತನಗೆ ಉಂಟಾದ ಭಯ, ಆತಂಕ, ಮನಸ್ಸಿನ ಗೊಂದಲಗಳು ಹಾಗೂ ಅದ್ಭುತ ಕಲ್ಪನಾ ಶಕ್ತಿಯನ್ನು ಸ್ವತಃ ತಾನೇ ವಿವರಿಸಿರುವ ‘ಮಾಯಾಳ ಮಾಂತ್ರಿಕ ಜಗತ್ತು’ ಪುಸ್ತಕ ದಿನಾಂಕ 21-12-2023ರಂದು ಬಿಡುಗಡೆಗೊಂಡಿತು. ಮಡಿಕೇರಿಯಲ್ಲಿ ಮಾಯಾ ಅಪ್ಪಚ್ಚು ಬರೆದಿರುವ ‘ಮಾಯಾಳ ಮಾಂತ್ರಿಕ ಜಗತ್ತು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು ತಂದೆ ಕಾರ್ತಿಕ್ ಅಪ್ಪಚ್ಚು ಮಾಯಾಳ ನೆನಪುಗಳನ್ನು ಮೆಲುಕು ಹಾಕಿ, ಅವಳ ಬರಹಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿದ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಮಾಯಾಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕೊಡಗಿನ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕವನ್ನು ನೀಡಲಾಗುವುದೆಂದರು. ಮಾಯಾಳ ಪುಟ್ಟ ಸಹೋದರ ವರುಣ್ ಹಾಜರಿದ್ದರು. ಅಮೆರಿಕಾದ ಹೈಕ್ರಾಫ್ಟ್ ಡ್ರೈವ್…
ಮಂಗಳೂರು : ಸಾಧನ ಬಳಗದ ‘ಸ್ನೇಹ ಮಿಲನ’ ಕಾರ್ಯಕ್ರಮವು ದಿನಾಂಕ 10-12-2023ರಂದು ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಕೃಷ್ಣ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಯೋಗೀಶ್ ಕುಮಾರ್ ಜಪ್ಪು ಮಾತನಾಡಿ, “ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಲು ಮನೆಯಲ್ಲಿ ತಾಯಿಯ ಪ್ರೋತ್ಸಾಹ ಅಗತ್ಯವಿದೆ. ಮಹಿಳೆಯರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಆಚಾರ ವಿಚಾರಗಳನ್ನು ಕಲಿಸಬೇಕು” ಎಂದರು. ಯಕ್ಷಗಾನ ಕಲಾವಿದೆ ಪ್ರಫುಲ್ಲಾ ನಾಯಕ್ ಮಾತನಾಡಿ, “ಸಾಧನೆ ಮಾಡಿದರೆ ವಿದ್ಯೆಯನ್ನು ಕಲಿತು ಪಾರಂಗತರಾಗಬಹುದು” ಎಂದರು. ಸಬಿತಾ ಕಾಮತ್ ಸ್ವಾಗತಿಸಿ, ಮುರಳಿಧರ್ ನಾಯಕ್ ಅವರು ಪಂಚವಟಿ ಪ್ರಸಂಗದ ಪರಿಚಯ ಮಾಡಿಕೊಟ್ಟರು. ಪ್ರಕಾಶ ಶೆಣೈ ಪ್ರಸ್ತಾವಿಸಿದರು. ನರಸಿಂಹ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದ್ದರು. ಬಿ. ಗಣೇಶ್ ನಾಯಕ್ ವಂದಿಸಿ, ವಸುಧಾ ಪ್ರಭು, ವಿದ್ಯಾ ಮಾರುತಿ ಪ್ರಭು, ಸವಿತಾ ನಾಯಕ್ ಸಹಕರಿಸಿದರು. ಸವಿತಾ ಭಟ್ ಮತ್ತು ಪ್ರಣತಿ ನಾಯಕ್ ನಿರೂಪಿಸಿದರು. ಯಕ್ಷಗಾನ ಶಿಕ್ಷಕ ಶ್ರೀಕೃಷ್ಣಮೂರ್ತಿ ಅವರನ್ನು ಸಮ್ಮಾನಿಸಲಾಯಿತು. ಯಕ್ಷರಂಗ ಕುಂಜಿಬೆಟ್ಟು ಉಡುಪಿ ಅವರು ಬಡಗುತಿಟ್ಟು ‘ಪಂಚವಟಿ’ ಪ್ರಸಂಗ ಪ್ರದರ್ಶಿಸಿದರು.
ಪುತ್ತೂರು : ಲೇಖಕಿ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರು ಬರೆದಿರುವ ‘ಸತ್ಯದರ್ಶನ ನುಡಿಮುತ್ತುಗಳು’ ಮತ್ತು ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ ತಾಯಿತಾತ್’ ಅರೆಭಾಷೆ ಕವನ ಸಂಕಲನದ ಲೋಕಾರ್ಪಣೆಯು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ದಿನಾಂಕ 31-12-2023ರಂದು ಬೆಳಿಗ್ಗೆ ದರ್ಬೆ ಬೈಪಾಸ್ ರಸ್ತೆಯ ಮಕ್ಕಳ ಮಂಟಪದಲ್ಲಿ ನಡೆಯಿತು. ಪುಸ್ತಕ ಲೋಕಾರ್ಪಣೆ ಮಾಡಿದ ದರ್ಬೆ ಮಕ್ಕಳ ಮಂಟಪದ ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ ಅವರು ಮಾತನಾಡಿ, “ಲೇಖಕಿ ಸುಲೋಚನಾ ಅವರು ಬರೆದಿರುವ ಪುಸ್ತಕವನ್ನು ಓದಿ ಮಂಥನ ಮಾಡಿಕೊಳ್ಳಬೇಕು. ಅವರು ಬರೆದಿರುವ ಪುಸ್ತಕದ ಬಗ್ಗೆ ಏನಾದರೂ ವಿಚಾರಗಳು ಅಥವಾ ಪ್ರತಿಕ್ರಿಯೆಗಳಿದ್ದರೆ ಅವರನ್ನು ಸಂಪರ್ಕಿಸಬಹುದು. ಸುಲೋಚನಾ ಅವರ ಬರವಣಿಗೆಯು ನಿರಂತರವಾಗಿ ಮುಂದುವರಿಯಲಿ” ಎಂದರು. ಕಾರ್ಯಕ್ರಮ ಉದ್ಘಾಟಸಿದ ತಹಶೀಲ್ದಾರ್ ಜೆ. ಶಿವಶಂಕರ್ ಅವರು ಮಾತನಾಡಿ, “ನಮ್ಮ ಇಲಾಖೆಯಲ್ಲಿ ಉಪ ತಹಶೀಲ್ದಾರ್ ಆಗಿದ್ದುಕೊಂಡು ಸುಲೋಚನಾ ಅವರು ಪುಸ್ತಕ ಬರೆದಿರುವುದು ಸಂತೋಷ ತಂದಿದೆ. ಈ ಪ್ರಸ್ತಕವನ್ನು ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಂಡು ಅದರಲ್ಲಿರುವ…