Author: roovari

ಮಂಗಳೂರು : ಶಾಂತಿ ಕಲಾ ಕೇಂದ್ರ ಬಜ್ಪೆ ಮತ್ತು ಸಾಧನಾ ಸಂಗೀತ ಪ್ರತಿಷ್ಠಾನ (ರಿ) ಪುತ್ತೂರು ಇದರ ಆಶ್ರಯದಲ್ಲಿ ಎರಡು ದಿನಗಳ ‘ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ’ವು ಕಟೀಲು ದೇವಸ್ಥಾನದ ಶಾಲಾ ವಠಾರದಲ್ಲಿ ದಿನಾಂಕ 11-05-2024 ಮತ್ತು 12-05-2024ರಂದು ನಡೆಯಿತು. ಶಿಬಿರದ ಉದ್ಘಾಟನೆಯನ್ನು ಕಟೀಲಿನ ಅನುವಂಶಿಕ ಮುಕ್ತೇಸರರಾದ ಕಮಲಾದೇವಿ ಪ್ರಸಾದ ಅಸ್ರಣ್ಣರು ನೆರವೇರಿಸಿಕೊಟ್ಟರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಸಂಗೀತ ಕಲಾವಿದರಾದ ವಿದುಷಿ ಡಾ. ಸುಚಿತ್ರ ಹೊಳ್ಳ ಅವರು ಶಿಬಿರಾರ್ಥಿಗಳಿಗೆ ಅಪರೂಪದ ಪ್ರಸಿದ್ಧ ಕೃತಿಗಳು ಹಾಗೂ ದೇವರ ನಾಮಗಳನ್ನು ಮನಮುಟ್ಟುವಂತೆ ಹೇಳಿಕೊಟ್ಟರು. ಸುಮಾರು 65 ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದ ಎರಡನೆಯ ದಿನ ಕಟೀಲು ದೇವಸ್ಥಾನದ ಪ್ರಾಂಗಣದಲ್ಲಿ ಶಿಬಿರಾರ್ಥಿಗಳಿಂದ ಗೋಷ್ಠಿ ಗಾಯನ ನಡೆಯಿತು. ಪಕ್ಕವಾದ್ಯದಲ್ಲಿ ವಯಲಿನ್ ನಲ್ಲಿ ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಶೈಲೇಶ್ ಸಹಕರಿಸಿದರು. ಶಾಂತಿ ಕಲಾ ಕೇಂದ್ರ ಬಜ್ಪೆ ಇದರ ನಿರ್ದೇಶಕರಾದ ಶ್ರೀಮತಿ ಚಂದ್ರಕಲಾ ಆರ್. ಆಚಾರ್ ಉಪಸ್ಥಿತರಿದ್ದರು.

Read More

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ ಆಯೋಜಿಸಿರುವ ಶಾಸ್ತ್ರೀಯ ಹಿಂದುಸ್ತಾನಿ ಸಂಗೀತ ಜುಗಲ್ ಬಂಧಿ ಕಾರ್ಯಕ್ರಮ ‘ಸ್ವರ ಸಂಧ್ಯಾ’ ದಿನಾಂಕ 19-05-2024ರಂದು ಸಂಜೆ 5.30ಕ್ಕೆ ಸೇಂಟ್ ಅಲೋಶಿಯಸ್ ಕಾಲೇಜು ಆವರಣದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 5.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಮೊದಲು, ರಾಷ್ಟ್ರ ಮಟ್ಟದ ಕಲಾವಿದ ದೆಹಲಿಯ ಪಿಟೀಲು ವಾದಕ ಪಂಡಿತ್ ಸಂತೋಷ್ ಕುಮಾರ್ ನಹರ್ ಇವರ ವಯಲಿನ್ ವಾದನ ನಡೆಯಲಿದೆ. ನಂತರ ಶಿವಮೊಗ್ಗದ ನೌಶಾದ್ ಹರ್ಲಾಪುರ್ ಮತ್ತು ನಿಶಾದ್ ಹರ್ಲಾಪುರ್ ಅವರಿಂದ ಗಾಯನ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ರಾಜೇಂದ್ರ ನಾಕೋಡ್, ಶ್ರೀಧರ್ ಭಟ್ ಹಾಗೂ ಗುರುರಾಜ್ ಅಡುಕಳ ಅವರು ತಬ್ಲಾ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

Read More

ಮಂಗಳೂರು : ಹರಿಕಥಾ ಪರಿಷತ್‌ (ರಿ.) ಮಂಗಳೂರು ಇದರ 14ನೇ ವಾರ್ಷಿಕೋತ್ಸವವು ದಿನಾಂಕ 18-05-2024ರಂದು ಉರ್ವಸ್ಟೋರ್‌ನ ಶ್ರೀ ಮಹಾಗಣಪತಿ ದೇವಸ್ಥಾನದ ಅಂಗಣದಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್ ಇವರು ದೀಪ ಪ್ರಜ್ವಲನೆಗೊಳಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು ಶುಭಾಶಂಸನೆಗೈಯಲಿದ್ದಾರೆ. ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಉದ್ಯಮಿಗಳಾದ ಹರಿದಾಸ್ ಎಸ್‌.ಪಿ. ಆಚಾರ್ಯ, ಕೆ. ದಾಮೋದರ ರೈ, ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ, ಶೈಲೇಂದ್ರ ವೈ. ಸುವರ್ಣ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ಹರಿದಾಸರು, ಪ್ರವಚನಕಾರ ಶ್ರೀ ಯಜ್ಞೇಶ್ ಹೊಸಬೆಟ್ಟು, ಹಿರಿಯ ಕಲಾಪೋಷಕರಾದ ಶ್ರೀ ರಘುರಾಮ್ ಭಟ್ ಕಣ್ವತೀರ್ಥ, ಹಿರಿಯ ಹಾರ್ಮೋನಿಯಂ, ಕೀಬೋರ್ಡ್ ವಾದಕ ಶ್ರೀ ಸತೀಶ್ ಸುರತ್ಕಲ್ ಇವರಿಗೆ ಗೌರವ ಸಮ್ಮಾನವು ಇದೇ ಸಂದರ್ಭದಲ್ಲಿ ನಡೆಯಲಿದೆ. ಅಪರಾಹ್ನ 2.30ರಿಂದ ಹರಿಕಥಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತೆ ಕುಮಾರಿ ಶೃದ್ಧಾ ಗುರುದಾಸ್ ಅವರಿಂದ ‘ಏಕಲವ್ಯ’ ಹಾಗೂ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿ…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 11-05-2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಕೇನೋಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಜ್ಯೋತಿ ಶಂಕರ್ “ಬದುಕನ್ನು ಸರಿಯಾದ ಕ್ರಮದಲ್ಲಿ ಬದುಕುವುದಕ್ಕೆ ಗುರುಗಳ ಮುಖಾಂತರ ಯಾವ ಉಪದೇಶಗಳನ್ನು ಕೇಳಬೇಕೋ ಅದನ್ನು ಕೇಳಿ ತಿಳಿದುಕೊಳ್ಳುವ, ಸಂದೇಹಗಳನ್ನು ನಿವಾರಿಸುವ ಕಾರ್ಯವನ್ನು ಕೇನೋಪನಿಷತ್ತು ಮಾಡುತ್ತದೆ. ಪಂಚೇಂದ್ರಿಯಗಳಿಂದ ಕೂಡಿದ ಈ ಶರೀರದ ಕ್ರಿಯೆಗಳೇ ಒಂದು ವಿಸ್ಮಯವಾದರೂ ಇಂದ್ರಿಯಗಳಿಗೆ ಅತೀತವಾಗಿ ನಿಲ್ಲುವುದೇ ಪರಬ್ರಹ್ಮ, ಗುರುವಿನ ಮತ್ತು ಶಾಸ್ತ್ರಗಳ ವಚನಗಳನ್ನು ಒಟ್ಟಿಗೆ ಮನನ ಮಾಡುವುದರಿಂದ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಬ್ರಹ್ಮನೆಡೆಗೆ ಸಾಗಲು ಸಾಧ್ಯವಾಗುತ್ತದೆ. ಬ್ರಹ್ಮಜ್ಞಾನವನ್ನು ಪಡೆದುಕೊಳ್ಳುವುದರಿಂದ ಸತ್ಯದ ಅರಿವಾಗುತ್ತದೆ. ಅಂಥವರು ಹೇಡಿಗಳಾಗದೆ ಆತ್ಮವಿಶ್ವಾಸ ವೃದ್ಧಿಯೊಂದಿಗೆ ಸತ್ಯವನ್ನು ಎದುರಿಸುವ ಧೀರರಾಗುತ್ತಾರೆ.…

Read More

ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದ್ರಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯ ಸದಾ ಜೀವಂತವಾಗಿರುತ್ತದೆ. ಬದುಕಿನ ಮುಖ್ಯ ಆಸರೆಯಾದ ಪ್ರೀತಿಗೆ ಆದ್ಯತೆಯನ್ನು ನೀಡುವ ವನಜಾಕ್ಷಿ ಪಿ. ಚೆಂಬ್ರಕಾನ ಅವರ ‘ಮೌನಭಾವ’ ಸಂಕಲನದ ಕವಿತೆಗಳಲ್ಲಿ ಪ್ರೀತಿಯ ವೈವಿಧ್ಯಪೂರ್ಣ ಮುಖಗಳಿವೆ. ಒಲವಿನ ಎಳೆಗಳಿಂದ ಸಂಬಂಧವನ್ನು ಬೆಸೆಯಲಾಗಿದೆ. ಪ್ರೀತಿಗಾಗಿ ಮಿಡುಕುತ್ತಾ ನಲ್ಲನಿಗಾಗಿ ಕಾತರಪಡುವ, ನೆನಪಿನ ದೋಣಿಯಲ್ಲಿ ಸಾಗುವ, ಕನಸಿನ ಮುಗಿಲಲ್ಲಿ ತೇಲುವ, ಹತಾಶೆಯಿಂದ ಚಡಪಡಿಸುವ, ನಿರೀಕ್ಷೆಯಲ್ಲಿ ಬೇಯುವ ನಲ್ಲೆಯ ಚಿತ್ರಗಳು ಎದುರಾಗುತ್ತವೆ. ಯಾವುದೇ ಹಳಹಳಿಕೆ ತಕರಾರುಗಳಿಲ್ಲದೆ ನಲ್ಲನನ್ನು ಕನವರಿಸುವ ಕವಿಯತ್ರಿಯು ಪ್ರೀತಿ, ಚೆಲುವು, ಮೌನ ಮತ್ತು ವಿರಹದ ಭಾವಗಳನ್ನು ಹೆಣೆದಿದ್ದಾರೆ. ಕಣ್ಣಿನಿಂದ ಮರೆಯಾದರೂ ಹೃದಯದಲ್ಲಿ ಉಳಿದುಕೊಂಡಿರುವ ವ್ಯಕ್ತಿಯನ್ನು ನೆನೆಯುತ್ತಾ ಒಲವಿನ ಮುಖಗಳನ್ನು ಹುಡುಕಾಡಿದ್ದಾರೆ. ತಾರುಣ್ಯದ ಸವಿಗನಸು, ಗಂಡುಹೆಣ್ಣಿನ ಪ್ರೇಮ-ವಿರಹಗಳಿಗೆ ಸಂಬಂಧಿಸಿದ ರಚನೆಗಳಲ್ಲಿ…

Read More

ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ವತಿಯಿಂದ ದಿನಾಂಕ 06-05-2024ರಿಂದ ಪ್ರಾರಂಭಗೊಂಡ ಯಕ್ಷಗಾನ ವೇಷಭೂಷಣ ಮತ್ತು ಬಣ್ಣಗಾರಿಕೆ ಬೇಸಿಗೆ ಶಿಬಿರವು ದಿನಾಂಕ 13-05-2024ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲ.ವಿ.ಜಿ. ಶೆಟ್ಟಿಯವರು “ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ ಇದು ಯಕ್ಷಗಾನದ ಮೂಲಮಠ ಎಂಬುದಾಗಿ ಹೇಳುವುದು ಸಾರ್ಥಕವಾಗಿದೆ. ಯಕ್ಷಗಾನದ ಪಾರಂಪರಿಕ ಶೈಲಿಯ ಸಂರಕ್ಷಣೆಗೆ ಈ ಕೇಂದ್ರ ಅನುಪಮವಾದ ಕೊಡುಗೆ ಸಲ್ಲಿಸಿದೆ. ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರಗಳು ಎಲ್ಲಾ ಕಡೆ ನಡೆಯುತ್ತದೆ. ಆದರೆ ಇದೊಂದು ವಿಶಿಷ್ಟವಾದ ಶಿಬಿರ” ಎಂಬುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆಯವರು ಯಕ್ಷಗಾನ ಕೇಂದ್ರವು ಈ ವಿಶಿಷ್ಟ ಶಿಬಿರ ನಡೆಸುವುದಕ್ಕೆ ಕಾರಣವಾದ ಪ್ರೇರಣೆಯನ್ನು ತಿಳಿಸಿ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರವನ್ನಿತ್ತರು. ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಭುವನ ಪ್ರಸಾದ್ ಹೆಗ್ಡೆ, ಶ್ರೀ ಮಂಜುನಾಥ ಮಯ್ಯ ಹಾಗೂ ಶ್ರೀಮತಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ…

Read More

ಮಂಗಳೂರು : ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ಉಳ್ಳಾಲದಲ್ಲಿ ಪ್ರಪ್ರಥಮ ಬಾರಿಗೆ ‘ಸುಗಿತ್ ನಲಿಪುಗ -2024’ ತ್ರಿವಳಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ದಿನಾಂಕ 19-05-2024ರಂದು ಬೆಳಗ್ಗೆ 10-00ರಿಂದ ತೊಕ್ಕೊಟ್ಟು ಅಂಬಿಕಾರೋಡು ಗಟ್ಟಿ ಸಮಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ತಂಡಗಳಿಂದ ನಗದು, ಮಾನ ಫಲಕ, ಪ್ರಶಂಸಾ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹ ಧನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು.

Read More

ಸುರತ್ಕಲ್ : ಹಿರಿಯ ಸಂಗೀತ ಗುರುಗಳಾದ ದಿವಂಗತ ಪಡುಬಿದ್ರೆ ಸುಬ್ರಾಯ ಮಾಣಿ ಭಾಗವತರ್ ಇವರ ಸ್ಮರಣಾರ್ಥ ಸಂಗೀತ ಕಛೇರಿಯು ದಿನಾಂಕ 12-05-2024ರಂದು ಸುರತ್ಕಲ್ಲಿನ ‘ಅನುಪಲ್ಲವಿ’ಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುರತ್ಕಲ್ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀಮತಿ ಗುಣವತಿ ಇವರು ಮೆಚ್ಚಿಗೆಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಮಂಗಳೂರು ವಿಭಾಗದ ಸ್ಪಿಕ್ ಮೆಕೆ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳ ಕಾಲ ದುಡಿದ ಸೂರ್ಯ ಗಣೇಶ್ ಮತ್ತು ಪ್ರಣವ್ ಸುಬ್ರಹ್ಮಣ್ಯ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಸಂಗೀತ ಕಛೇರಿಗೆ ಮೊದಲು ದೀಕ್ಷಾ ಶೆಟ್ಟಿ ಇವರು ಪ್ರಾರ್ಥನೆಯ ರೂಪದಲ್ಲಿ ಕೃತಿಗಳು ಹಾಗೂ ನಾಮ ಸಂಕೀರ್ತನೆಯನ್ನು ಪ್ರಸ್ತುತಪಡಿಸಿದರು. ಸಂಗೀತ ಕಛೇರಿ ನಡೆಸಿಕೊಟ್ಟ ಶ್ರೇಯಾ ಕೊಳತ್ತಾಯ ತನ್ನ ಶಾಸ್ತ್ರೀಯತೆ ಹಾಗೂ ಗಾಂಭೀರ್ಯದಿಂದ ಎಲ್ಲರ ಮನ ಸೆಳೆದರು. ಪಿ. ನಿತ್ಯಾನಂದ ರಾವ್ ಇವರ ಸಾಹಿತ್ಯಕ್ಕೆ ಡಾ. ರಾಜಕುಮಾರ್ ಭಾರತಿಯವರಿಂದ ರಾಗ ಸಂಯೋಜನೆಗೊಂಡ ‘ನಾಟಕುರುಂಜಿ’ ರಾಗ ವರ್ಣದ ಪ್ರಕೃತಿಯು ಸಂಗೀತ ಕಚೇರಿಗೆ ಉತ್ತಮ ಮುನ್ನುಡಿಯನ್ನು ಬರೆಯಿತು. ಪ್ರಧಾನವಾಗಿ…

Read More

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಶ್ರೀನಿವಾಸ ಯೋಗ-ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಆಯೋಜಿಸಿದ ‘ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ಸಾಹಿತ್ಯದ ಕೊಡುಗೆ ಮತ್ತು ಅಪ್ಲಿಕೇಶನ್’ ಕುರಿತು ರಾಷ್ಟ್ರೀಯ ಸಮ್ಮೇಳನವು ದಿನಾಂಕ 11-05-2024 ರಂದು ಮುಕ್ಕದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ನಡೆಯಿತು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಂ ಇಲ್ಲಿಂದ ಶ್ರೀ ಜನಾರ್ದನತೀರ್ಥ ಪೀಠ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸಂಸ್ಕೃತ ಭಾಷೆಯ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿ. “ಇದನ್ನು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಲ್ಲಿ ವ್ಯಾಪಕವಾಗಿ ಅಳವಡಿಸಲಾಗಿದೆ. ಧ್ಯಾನದ ಪ್ರಾಮುಖ್ಯತೆ ಮಾನಸಿಕ ಗಮನ ಮತ್ತು ಯಶಸ್ಸನ್ನು ಸಾಧಿಸಲು ದೇವರ ಅನುಗ್ರಹ ಅಗತ್ಯ.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ಮಾತನಾಡಿ “ಸಂಸ್ಕೃತ ಮತ್ತು ವೇದಗಳಲ್ಲಿ ಆಳವಾದ ಸಂಶೋಧನೆ ನಡೆಸುವುದು ವಿಶ್ವವಿದ್ಯಾಲಯದ ಧ್ಯೇಯ. ಸಂಸ್ಕೃತವು ಹೆಚ್ಚು ವ್ಯಾಪಕವಾಗಿ…

Read More

ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ವಿದುಷಿ. ಸರಿತಾ ಪ್ರಸಾದ್ ಕೊಟ್ಟಾರಿ ಉತ್ತಮ ಭರತನಾಟ್ಯ ಕಲಾವಿದೆ ಹಾಗೂ ದಕ್ಷ ಗುರುಗಳಾಗಿ ಹೆಸರು ಮಾಡಿದ್ದಾರೆ. ‘ಚಿಗುರು ನೃತ್ಯಾಲಯ’ದ ಸ್ಥಾಪಕಿ . ತಮ್ಮ ಶಿಷ್ಯರ ಬೆಳವಣಿಗೆಗೆ ಪೂರಕವಾಗುವಂತೆ ನಾಡಿನಾದ್ಯಂತ ಅನೇಕ ವೇದಿಕೆಗಳನ್ನು ಒದಗಿಸಿ ಉದಯೋನ್ಮುಖ ಕಲಾವಿದರ ಪ್ರತಿಭೆಯನ್ನು ಬೆಳೆಸುತ್ತಿರುವ ಪ್ರಗತಿಪರ ಮನೋಭಾವದ ಮಾರ್ಗದರ್ಶಕಿ ಕೂಡ. ಇವರ ನುರಿತ ಗರಡಿಯಲ್ಲಿ ತಯಾರಾಗುತ್ತಿರುವ ಭರವಸೆಯ ಪ್ರತಿಭೆ ಕೆ. ಎ. ತುಷಾರ ಇವರು ಶ್ರೀ ಕಮಲೇಶ್ ಮತ್ತು ನಂದಾ ಅವರ ಪುತ್ರಿ. ನೃತ್ಯದ ಬಗ್ಗೆ ಅಪಾರ ಆಸಕ್ತಿಯುಳ್ಳ ಹನ್ನೆರಡು ವರ್ಷದ ಈ ಬಾಲಪ್ರತಿಭೆ ದಿನಾಂಕ 18-05-2024 ರಂದು ಸಂಜೆ 5 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾಳೆ.ಅವಳ ಸುಂದರ ನರ್ತನ ವಲ್ಲರಿಯನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸುಸ್ವಾಗತ. ಪುಟ್ಟಬಾಲಕಿ ತುಷಾರಳಿಗೆ ಬಾಲ್ಯದಿಂದಲೂ ನೃತ್ಯ ಎಂದರೆ ಅತೀವ ಆಸಕ್ತಿ. ಸಾಂಸ್ಕೃತಿಕ ಕುಟುಂಬದ ವಾತಾವರಣ. ಗಾಯನ-ನರ್ತನದಲ್ಲಿ ಆಸಕ್ತಿ ತೋರಿದ ಮಗಳ ಪ್ರತಿಭೆಗೆ ತಂದೆ ಕಮಲೇಶ್ ಮತ್ತು ತಾಯಿ ನಂದಾ ಸಂಪೂರ್ಣ…

Read More