Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: 2023ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಚಾವುಂಡ ರಾಯ ದತ್ತಿ` ಪ್ರಶಸ್ತಿಗೆ ಹಿರಿಯ ಲೇಖಕಿ ಡಾ. ಪ್ರೀತಿ ಶುಭಚಂದ್ರ ಆಯ್ಕೆಯಾಗಿದ್ದಾರೆ. ಶ್ರವಣ ಬೆಳಗೊಳದ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಭಾಷೆಯಲ್ಲಿ ರಚಿಸಿದ ಪ್ರಬಂಧ, ಸಂಶೋಧನೆ, ವಿಮರ್ಶೆ, ಕಾದಂಬರಿ, ನಾಟಕ, ಕಥಾ ಸಾಹಿತ್ಯ ಪ್ರಕಾರಗಳ ಲೇಖಕರಿಗೆ ಅಥವಾ ಗ್ರಂಥ ಸಂಪಾದಕರಿಗೆ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವುದು ದತ್ತಿಯ ಆಶಯವಾಗಿದೆ. ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾವಾದಿಯಾಗಿ ಹೆಸರನ್ನು ಮಾಡಿರುವ ಡಾ. ಪ್ರೀತಿ ಶುಭಚಂದ್ರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮೊತ್ತ ಮೊದಲ ಮಹಿಳಾ ನಿರ್ದೇಶಕಿಯಾದ ಹೆಗ್ಗಳಿಕೆ ಇವರದು. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಇವರ ಪ್ರಧಾನ ಆಸಕ್ತಿಯ ವಿಷಯಗಳು. ‘ಇಪ್ಪತ್ತನೆಯ ಶತಮಾನದ ವಚನ ಸಾಹಿತ್ಯ: ಒಂದು ಅಧ್ಯಯನ’ ಅವರ ಪಿ. ಎಚ್.ಡಿ. ಮಹಾ ಪ್ರಬಂಧ. ಸ್ತ್ರೀವಾದದ ಕುರಿತೂ…
ಮಂಗಳೂರು : ಯೂತ್ ಆಫ್ ಜಿ. ಎಸ್. ಬಿ. ವಾಹಿನಿಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪರವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಹಾನ್ ಸಾಧಕರಾದ ಪಂಡಿತ್ ಉಪೇಂದ್ರ ಭಟ್ ಅವರಿಗೆ 75 ನೇ ಜನ್ಮ ಸಂವತ್ಸರದ ಪಂಚ ಸಪ್ತತಿ ಸನ್ಮಾನ ಕಾರ್ಯಕ್ರಮವು ದಿನಾಂಕ 04-05-2024 ರಂದು ಟಿ. ವಿ. ರಮಣ್ ಪೈ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂಡಿತ್ ಉಪೇಂದ್ರ ಭಟ್ ತಮ್ಮ ಗುರು ಭಾರತ್ ರತ್ನ ಭೀಮಸೇನ್ ಜೋಷಿಯವರು ತಮ್ಮ ಸಂಗೀತ ಬದುಕಿಗೆ ಹಾಕಿಕೊಟ್ಟ ಅಡಿಪಾಯವನ್ನು ಸ್ಮರಿಸಿ “ಯೂತ್ ಆಫ್ ಜಿ. ಎಸ್. ಬಿ. ವಾಹಿನಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ತಮ್ಮಂತಹ ಸರಸ್ವತಿ ಆರಾಧಕರನ್ನು ಗೌರವಿಸುತ್ತಿರುವುದು ನಿಜಕ್ಕೂ ಮಾದರಿಯಾಗಿದೆ.” ಎಂದರು. ಪಂಡಿತ್ ಉಪೇಂದ್ರ ಭಟ್ ಅವರ ಸಾಧನೆಯ ಬಗ್ಗೆ ವಿದ್ವಾಂಸ ಪ್ರಭಾಕರ ಜೋಷಿ ಅಭಿನಂದನೆಯ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸುವ ಪೂರ್ವಭಾವಿಯಾಗಿ ಪಂಡಿತ್ ಉಪೇಂದ್ರ ಭಟ್ ಅವರು ತಮ್ಮ ಜನಪ್ರಿಯ ಗೀತೆಗಳನ್ನು ಹಾಡಿ ನೆರೆದ ಅಸಂಖ್ಯಾತ ಸಂಗೀತಾಭಿಮಾನಿಗಳನ್ನು…
ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ.) ದೇಲಂಪಾಡಿ ಇವುಗಳ ಆಶ್ರಯದಲ್ಲಿ ‘ಕೃತಿಗಳ ಅನಾವರಣ’ವು ದಿನಾಂಕ 19-05-2024 ಆದಿತ್ಯವಾರ ಅಪರಾಹ್ನ ಗಂಟೆ 2.00ರಿಂದ ಶ್ರೀ ಎಡನೀರು ಕ್ಷೇತ್ರದ ಭಾರತೀಸದನ ಸಭಾಂಗಣ ನಡೆಯಲಿದೆ. ಅಪರಾಹ್ನ ಗಂಟೆ 2.00ರಿಂದ ಡಾ. ಬನಾರಿಯವರ ‘ಕಾವ್ಯವಾಚನ ಮತ್ತು ಗಾಯನ’ ಕವಿಗಳು ಮತ್ತು ಗಾಯಕರಿಂದ ಹಾಗೂ ‘ಕರ್ನಾಟಕದೊಂದಿಗೆ ಕಾಸರಗೋಡಿನ ವಿಲೀನೀಕರಣ’ ಎಂಬ ವಿಷಯದ ಬಗ್ಗೆ ಸಂವಾದ ಗೋಷ್ಠಿ ನಡೆಯಲಿದೆ. ಮಾಧ್ಯಮತಜ್ಞರು ಹಾಗೂ ಕಲಾವಿದರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಸಂವಾದ ಗೋಷ್ಠಿ ನಡೆಸಿಕೊಡಲಿದ್ದು, ಡಾ. ರಮಾನಂದ ಬನಾರಿ, ಡಾ. ವಸಂತಕುಮಾರ ಪೆರ್ಲ, ಶ್ರೀ ಟಿ.ಎ.ಎನ್. ಖಂಡಿಗೆ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಇವರುಗಳು ಸಹಭಾಗಿಗಳಾಗುವರು. ಅಪರಾಹ್ನ ಗಂಟೆ 3.30ರಿಂದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಇವರ ಆಶೀರ್ವಚನದೊಂದಿಗೆ ಕೃತಿಗಳ ಲೋಕಾರ್ಪಣೆ ನೆರವೇರಲಿದ್ದು, ಮೈಸೂರಿನ ಖ್ಯಾತ ಸಂಶೋಧಕರು, ಅಷ್ಟಾವಧಾನಿಗಳಾದ ಡಾ. ಕಬ್ಬಿನಾಲೆ ವಸಂತ…
ಬಂಟ್ವಾಳ : ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಬಿ.ವಿ. ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ ರಂಗ ಭೂಮಿಕಾ -2024 ದಿನಾಂಕ 17-05-2024ರಿಂದ 19-05-2024ರವರೆಗೆ ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ. ದಿನಾಂಕ 17-05-2024ರಂದು ಸಂಜೆ 6-00ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಂತರಾಷ್ಟ್ರೀಯ ಜಾದೂಗಾರರಾದ ಪ್ರೊ. ಶಂಕರ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ನಾಟಕೋತ್ಸವವನ್ನು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಧ್ಯಕ್ಷರಾದ ಶ್ರೀ ವಿಶ್ವನಾಥ ಶೆಣೈ ಉಡುಪಿ ಇವರು ಉದ್ಘಾಟಿಸಲಿದ್ದು, ಕ್ಯಾಂಪ್ಕೋ ಲಿ. ಇದರ ನಿರ್ದೇಶಕರಾದ ಡಾ. ಜಯಪ್ರಕಾಶ್ ನಾರಾಯಣ ಟಿ.ಕೆ. ಮತ್ತು ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕರಾದ ಶ್ರೀ ಸಂದೇಶ ಜವಳಿ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ತೀರ್ಥಹಳ್ಳಿಯ ‘ನಟ ಮಿತ್ರರು’ ತಂಡದವರು ಶಿವಕುಮಾರ್ ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ‘ಸಂಸಾರದಲ್ಲಿ ಸನಿದಪ’ ಕನ್ನಡ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ 18-05-2024ರಂದು…
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು ದಿನಾಂಕ 18-05-2024ರಂದು ಸಂಜೆ 5-30ಕ್ಕೆ ಪೆನ್ನು ಮತ್ತು ಕುಂಚಗಳೊಂದಿಗೆ ಕುಡ್ಲಾವನ್ನು ಜೋಡಿಸುವ ಮಂಗಳೂರಿನ ಪರಂಪರೆಯ ರೇಖಾಚಿತ್ರಗಳು ಮತ್ತು ರೇಖಾಚಿತ್ರಗಳ ಪ್ರದರ್ಶನವು ನಗರದ ಬಂಗಾರು ಗುತ್ತು ರೋಡ್, ಕೊಡಿಯಾಲ್ ಗುತ್ತು (ಪಶ್ಚಿಮ), ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರ ಇಲ್ಲಿ ಜರಗಲಿದೆ. ಹರೀಶ್ ಕೊಡಿಯಾಲ್ಬೈಲ್, ಜೀವನ್ ಸಾಲಿಯಾನ್, ಸಂತೋಷ್ ಅಂದ್ರಾದೆ, ಸೈಯದ್ ಆಸಿಫ್ ಅಲಿ ಮತ್ತು ವಿಲ್ಸನ್ ಸೋಜಾ ಮುಂತಾದ ಕಲಾವಿದರು ಭಾಗವಹಿಸಲಿದ್ದು, ರೇಖಾಚಿತ್ರಗಳ ಪ್ರದರ್ಶನವು ದಿನಾಂಕ 25-05-2024ರವರೆಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 7-00 ಗಂಟೆಯವರೆಗೆ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಡೇರೆ ಮೇಳದ ಯಕ್ಷಗಾನ ಜಾಸ್ತಿ ನೋಡುತ್ತಿದ್ದ ನಾನು ಬಯಲಾಟ ಮೇಳದ ಆಟಕ್ಕೆ ಹೋದರೂ ಕೂಡ ಸ್ವಲ್ಪ ನೋಡಿ ಬರುತ್ತಿದ್ದೆ… ಆದ್ರೆ ಈ ವರ್ಷ ಎಲ್ಲರ ಬಾಯಲ್ಲೂ ಕೂಡ ಹಾಲಾಡಿ ಮೇಳದ ‘ಹಂಸ ಪಲ್ಲಕ್ಕಿ’ ಆಟ ಒಳ್ಳೆ ಉಂಟು ಅಂತ…. ಆಗ ಒಂದು ಕುತೂಹಲ ಮೂಡಿತ್ತು… ಆದ್ರೆ ಹೋಗಲು ಸಮಯ ಆಗ್ಲಿಲ್ಲ… ದಿನಾಂಕ 06-05-24ರಂದು ನಮ್ಮೂರು ಕಟ್ಟ್ ಬೆಲ್ತುರ್ ಅಲ್ಲಿ ಪ್ರದರ್ಶನ ಇದ್ದಿದ್ರಿಂದ ಹೋಗಿ ಸ್ವಲ್ಪ ನೋಡಿ ಬರುವ ಅಂತ ಹೋದೆ…ಆದ್ರೆ ಬಂದಿದ್ದು ಮಾತ್ರ ಆಟ ಮುಗಿದ ನಂತರನೆ…… ವಾವ್ ಅದ್ಭುತ ಪ್ರದರ್ಶನ…. ಪ್ರೊ. ಪವನ್ ಕಿರಣಕೆರೆ ಅವರ ಪ್ರಸಂಗ ಅಂದ್ರೆ ಒಂದು ವಿಶೇಷತೆ ಇರುತ್ತದೆ ಅಂತ ಗೊತ್ತಿತ್ತು… ಆದ್ರೆ ಪ್ರಸಂಗವನ್ನು ಅಚ್ಚುಕಟ್ಟಾಗಿ ವೀಕ್ಷಕರಿಗೆ ಸ್ವಲ್ಪ ಕೂಡ ಬೇಜಾರು ಆಗದ ಹಾಗೆ ಜನರ ಮುಂದೆ ಇಟ್ಟಿದ್ದು ಹಾಲಾಡಿ ಮೇಳದ ಕಲಾವಿದರು. ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಹೊಂದಾಣಿಕೆ ಅದ್ಭುತ. ಒಂದು ಬಯಲಾಟ ಮೇಳದಲ್ಲಿ ಒಂದು ಪ್ರಸಂಗ 120ಕ್ಕೂ ಅಧಿಕ ಪ್ರದರ್ಶನ…
ಕನ್ನಡದಲ್ಲಿ ಸಣ್ಣಕತೆಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನಲಾಗುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ಧ್ವನಿಯನ್ನು ಹೊಂದಿದ ಅನೇಕ ಕತೆಗಳು ಬರುತ್ತಿವೆ. ನವೋದಯ ಮಾರ್ಗದ ಕತೆಗಳೂ ಬೆಳಕು ಕಾಣುತ್ತಿವೆ. ಡಾ. ಸಬಿತಾ ಮರಕಿಣಿಯವರ ‘ಮಾಂಗ್ಣಿ ಮಾಸ್ಟ್ರಂಗೆ ನಮಸ್ಕಾರ’ ಎಂಬ ಹವಿಗನ್ನಡ ಕಥಾಸಂಕಲನವು ನವೋದಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಯಾವುದೇ ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಆರು ಕತೆಗಳಲ್ಲಿ ಆತ್ಮಶೋಧನೆ, ದ್ವಂದ್ವ ಮತ್ತು ಪ್ರತಿಮೆ ಸಂಕೇತಗಳಿಲ್ಲ. ಹವಿಗನ್ನಡದ ಆಡುಮಾತಿನ ಲಯವಿದೆ. ಆಕರ್ಷಕ ಆರಂಭ ಮತ್ತು ಅನಿರೀಕ್ಷಿತ ಮುಕ್ತಾಯಗಳಿಲ್ಲ. ಆಪ್ತವೆನಿಸುವ ನಿರೂಪಣೆಯಿದೆ. ‘ಅಬ್ಬೆ: ಮಣ್ಣಿಲಿ ಮಣ್ಣಾಗಿ’, ‘ಎಂಕಿಯ ದಿಬ್ಬಾಣ’, ‘ಮಾಂಗ್ಣಿ ಮಾಸ್ತ್ರನೂ…
ಕೊಪ್ಪಳ : ಹೌದು, ವಿಠ್ಠಪ್ಪ ಗೋರಂಟ್ಲಿಯವರು ಹುಟ್ಟಿನಿಂದ ಬಡತನದ ಬೇಗೆಯಲ್ಲಿ ಬೆಂದು ನೊಂದು ಬೆಳೆದು ಬಂದವರು. ಬಡತನವೇ ಅವರನ್ನು ಗಡಿಗೆರೆ ದಾಟಲು ಕಲಿಸಿದ್ದು.. ಆಶ್ಚರ್ಯದ ಸಂಗತಿ ಎಂದರೆ ಔಪಚಾರಿಕ ಶಿಕ್ಷಣದಲ್ಲಿ ಅವರು ಓದಿದ್ದು ಕೇವಲ ನಾಲ್ಕನೇಯ ತರಗತಿ. ಅಪಾರವಾಗಿ ಓದುವ ಹವ್ಯಾಸ ಅವರನ್ನು ಬಹಳ ಎತ್ತರಕ್ಕೆ ಒಯ್ದು ನಿಲ್ಲಿಸಿತು. ಎಷ್ಟೆಂದರೆ ನಾವೆಲ್ಲ ಅವರನ್ನು ಕೊಪ್ಪಳದ ನಡೆದಾಡುವ ವಿಶ್ವಕೋಶ ಎಂದೇ ಹೇಳುವಂತಾಯಿತು. ಅವರು ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ಜೀವನ ನಿರ್ವಹಣೆಗೆ ಬಟ್ಟೆ ನೇಯಲು ಆರಂಭಿಸಿದರು. ಆದರೂ ಅವರ ಓದುವ ಹವ್ಯಾಸ ಮಾತ್ರ ಕಡಮೆ ಆಗಲಿಲ್ಲ. ದುಡಿತದ ಜೊತೆಗೆ ರೂಢಿಸಿಕೊಂಡಿದ್ದ ನಿರಂತರ ಓದು ಅವರನ್ನು ಚಿಂತನಶೀಲ ಬರಹಗಾರರನ್ನಾಗಿ ರೂಪಿಸಿತು. ಕಪ್ಪೋಡಲ ಕರೆ, ಈ ನೆಲದೊಡಲಲ್ಲಿ, ಶ್ರೀ ಸದಾನಂದ ಸಂದೇಶ, ತನಿಖಾ ವರದಿ, ಯಾರು ಹಾಡದ ಹಾಡು, ನಿನ್ನ ನೀ ತಿಳಿ, ಕಡಲೊಳಗಿನ ನೂರೆಂಟು ಹನಿಗಳು, ತುಂಗಭದ್ರೆಯ ಅಳಲು, ಜಿಲ್ಲಾ ರಂಗ ಮಾಹಿತಿ ಅವರ ಪ್ರಕಟಿತ ಕೃತಿಗಳು. ಮಾತ್ರವಲ್ಲದೆ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕ…
ಧಾರವಾಡ : ವಿಶ್ವ ಪುಸ್ತಕ ದಿನದ ಅಂಗವಾಗಿ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ್ದ ‘ಉತ್ತಮ ಓದುಗ’ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಶ್ರೀಮತಿ ಶ್ರೀರಂಜನಿ ಅಡಿಗ (ಬೆಂಗಳೂರು), ಶ್ರೀಮತಿ ರಂಜಿತಾ ಮಹಾಜನ (ಬೆಳಗಾವಿ), ಕುಮಾರಿ ನಯನಾ ಜಿ.ಎಸ್. ಕಳಂಜ (ದಕ್ಷಿಣ ಕನ್ನಡ), ಶ್ರೀಮತಿ ಮಾಲಾ ಹೆಗಡೆ ಕೆರೆಕೋಣ (ಉತ್ತರ ಕನ್ನಡ) ಮತ್ತು ಕುಮಾರಿ ವಿಭಾಶ್ರೀ ಭಟ್ (ಮೈಸೂರು) ‘ಉತ್ತಮ ಓದುಗ’ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಕುಮಾರಿ ಭವ್ಯ ಭಟ್ (ಮಡಿಕೇರಿ) ಅವರು ತೀರ್ಪುಗಾರರಾಗಿದ್ದರು. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರು ಬಹುಮಾನವನ್ನು ಪಡೆದ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀಮತಿ ಶ್ರೀರಂಜನಿ ಅಡಿಗ ಶ್ರೀಮತಿ ರಂಜಿತಾ ಮಹಾಜನ ಕುಮಾರಿ ನಯನಾ ಜಿ.ಎಸ್. ಕಳಂಜ ಶ್ರೀಮತಿ ಮಾಲಾ ಹೆಗಡೆ ಕೆರೆಕೋಣ ಕುಮಾರಿ ವಿಭಾಶ್ರೀ ಭಟ್
ತುಮಕೂರು : ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ‘ಚಿಣ್ಣರ ಬಣ್ಣದ ಶಿಬಿರ’ದ ಸಮಾರೋಪ ಸಮಾರಂಭವು ತುಮಕೂರು ತಾಲೂಕಿನ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ದಿನಾಂಕ 10-05-2024ರಂದು ಸಂಪನ್ನಗೊಂಡಿತು. ಈ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಮಕ್ಕಳ ಹಕ್ಕುಗಳ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡುತ್ತಾ “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಬಹಳ ಮುಖ್ಯ. ಡಮರುಗ ಸಂಸ್ಥೆ ಗ್ರಾಮೀಣ ಮಕ್ಕಳನ್ನು ಗುರಿಯಾಗಿಸಿಕೊಂಡು ಉಚಿತವಾಗಿ ರಂಗಶಿಬಿರ ನಡೆಸಿಕೊಂಡು ಬರುತ್ತಿರುವುದು ಅಭಿನಂದರಾರ್ಹ” ಎಂದು ಅಭಿಪ್ರಾಯಪಟ್ಟರು. ನಂತರ ಮಾತನಾಡಿದ ಸುಧಾ, “ನಾನು 40 ವರ್ಷ ದೆಹಲಿ ಮತ್ತು 10 ವರ್ಷ ಬೆಂಗಳೂರಿನಲ್ಲಿ ಇದ್ದು ರಂಗ ತಂಡಗಳ ನಿರಂತರ ಸಂಪರ್ಕದಲ್ಲಿದ್ದುಕೊಂಡು ಬಂದವಳು. ಆದರೆ ಗ್ರಾಮೀಣ ಮಟ್ಟದಲ್ಲಿ ಒಂದು ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೆ ಪೂರ್ಣಾವಧಿ ರಂಗಶಿಬಿರವನ್ನು ಆಯೋಜಿಸಿರುವುದು ತೀರಾ ಅಪರೂಪ. ಆದ್ದರಿಂದಲೇ ವಿಷಯ ತಿಳಿದು ಒಂದು ದಿನ ಮುಂಚಿತವಾಗಿ ಬಂದು ಶಿಬಿರದಲ್ಲಿ ಭಾಗವಹಿಸಿ ಅಂತರಾಳದಿಂದ ಹೇಳುತ್ತಿದ್ದೇನೆ. ಇದೊಂದು ಅದ್ವಿತೀಯ ರಂಗಕಾರ್ಯ. ಇದರ ರೂವಾರಿ ಮೆಳೇಹಳ್ಳಿ ದೇವರಾಜ್ ಮತ್ತು…