Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸಂಗೀತ ಪರಿಷತ್ ಮಂಗಳೂರು ವತಿಯಿಂದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಾರತೀಯ ವಿದ್ಯಾಭವನ ಮಂಗಳೂರು ಸಹಯೋಗದೊಂದಿಗೆ ದಿನಾಂಕ 31-12-2023ರಂದು ನಗರದ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ‘ಕರ್ನಾಟಕ ಸಂಗೀತ ಕಾರ್ಯಕ್ರಮ’ ಆಯೋಜಿಸಲಾಗಿದೆ. ಸಂಜೆ 4ಕ್ಕೆ ಶ್ರೀಮತಿ ಸುನಾದ ಪಿ.ಎಸ್.ಮಾವೆ ಇವರಿಂದ ಹಾಡುಗಾರಿಕೆ ನಡೆಯಲಿದ್ದು, ಕು. ಸುಪ್ರೀತಾ ಪಿ.ಎಸ್. ವಯಲಿನ್, ಸುಮುಖ ಕಾರಂತ್ ಮೃದಂಗದಲ್ಲಿ ಸಹಕಾರ ನೀಡುವರು. ಸಂಜೆ 5ರಿಂದ ವಯಲಿನ್ ಕಲಾವಿದರಾದ ರಘುರಾಮ್ ಹೊಸಹಳ್ಳಿ, ವಿಶ್ವಜಿತ್ ಮತ್ತೂರು ಮತ್ತು ಕಾರ್ತಿಕೇಯ ರಾಮಚಂದ್ರ ಇವರ ವಯಲಿನ್ ಕಛೇರಿಗೆ ಮೃದಂಗದಲ್ಲಿ ಅನೂರು ವಿನೋದ ಶ್ಯಾಮ್ ಬೆಂಗಳೂರು ಹಾಗೂ ಖಂಜೀರದಲ್ಲಿ ಸುಮುಖ ಕಾರಂತ್ ಸಹಕರಿಸುವರು.
ಬೆಳಗಾವಿ : ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ವತಿಯಿಂದ ಡಾ. ಡಿ.ಎಸ್. ಕರ್ಕಿಯವರ 116ನೇ ಜನ್ಮದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ 2023 ಕಾರ್ಯಕ್ರಮವು ದಿನಾಂಕ 31-12-2023ರಂದು ಮುಂಜಾನೆ 11 ಗಂಟೆಗೆ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಪೂಜ್ಯ ಶ್ರೀ ಜಗದ್ಗುರು ಡಾ. ಸಿದ್ಧರಾಮಸ್ವಾಮಿಗಳ ಆಶೀರ್ವಾದದೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಡಾ. ರಮೇಶ ಮು. ಕರ್ಕಿಯವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಾರವಾರದ ಶ್ರೀಮತಿ ಶ್ರೀದೇವಿ ಕೆರೆಮನೆ ಇವರ ‘ಆಸೆಯೆಂಬ ಶೂಲದ ಮೇಲೆ’, ಬೆಳಗಾವಿಯ ಶ್ರೀಮತಿ ಆಶಾ ಕಡಪಟ್ಟಿ ಇವರ ‘ಹರಕು ಕೌದಿಯ ಕಿಂಡಿ’ ಮತ್ತು ಶ್ರೀಮತಿ ಇಂದಿರಾ ಮೊಟೆ ಬೆನ್ನೂರು ಇವರ ‘ಭಾವ ಬೆಳಗು’ ಕೃತಿಗಳಿಗೆ ‘ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಿರುವರು.
ಬೆಂಗಳೂರು : ಕಲಾ ಗಂಗೋತ್ರಿ ರಂಗ ತಂಡದ ಸುವರ್ಣ ಸಂಭ್ರಮದ ಪ್ರಯುಕ್ತ ಡಾ. ವಿದ್ವಾನ್ ಮಂಜುನಾಥ ಭಟ್ಟ ಅವರ ನೆನಪಿನಲ್ಲಿ ‘ಮೂಕಜ್ಜಿಯ ಕನಸುಗಳು’ ನಾಟಕ ಪ್ರದರ್ಶನ ದಿನಾಂಕ 31-12-2023ರಂದು ಬೆಂಗಳೂರಿನ ಜೆ.ಪಿ. ನಗರದ ರಂಗ ಶಂಕರದಲ್ಲಿ ನಡೆಯಲಿದೆ. ಡಾ. ಕೋಟ ಶಿವರಾಮ ಕಾರಂತ ಇವರ ಕಾದಂಬರಿ ಆಧಾರಿತ ಈ ನಾಟಕದ ರಂಗರೂಪ ಎಸ್. ರಾಮಮೂರ್ತಿ, ವಿನ್ಯಾಸ ಮತ್ತು ನಿರ್ದೇಶನ ಡಾ. ಬಿ.ವಿ. ರಾಜಾರಾಂ ಇವರದ್ದು. ಈ ನಾಟಕಕ್ಕೆ ನಾರಾಯಣ ರಾಯಚೂರ್ ಗೀತ ರಚಿಸಿದ್ದು, ಪ್ರವೀಣ್ ಡಿ. ರಾವ್ ಹಿನ್ನೆಲೆ ಸಂಗೀತ ಸಂಯೋಜಿಸಿ ಎಂ.ಡಿ. ಪಲ್ಲವಿ ಧ್ವನಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸ ಕೈವಾರ 9972398931 ಇವರನ್ನು ಸಂಪರ್ಕಿಸಿ.
ಗರಿಗೆದರಿ ನರ್ತಿಸುತ್ತಿರುವ ನವಿಲು, ಮೋಡದ ಮರೆಯಿಂದ ಇಣುಕುತ್ತಿರುವ ಸೂರ್ಯ, ಮರದಿಂದ ಮರಕ್ಕೆ ಹಾರಿ ಬರುತ್ತಿರುವ ಪಕ್ಷಿಗಳು, ವರ್ಷಧಾರೆಗೆ ಪ್ರಕೃತಿಯ ರಮ್ಯ ನೋಟ, ಸರೋವರದ ವಿಹಂಗಮ ದೃಶ್ಯ, ಆಕಾಶದೆತ್ತರಕ್ಕೆ ನಿಂತ ಪರ್ವತಗಳ ಸಾಲು, ಮರಗಿಡಗಳಲ್ಲಿ ಅರಳಿ ನಿಂತ ಹೂವುಗಳು ಹೀಗೆ ಒಂದಕ್ಕಿಂತ ಒಂದು ಕಣ್ಮನ ಸೆಳೆಯುವ ಚಿತ್ರಗಳು, ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕು ಎಂಬ ಚಿತ್ರಗಳ ಸರಣಿ ಮಾಲೆಯನ್ನು ಕಲಾಸಕ್ತರ ಮಡಿಲಿಗೆ ಅರ್ಪಿಸಿದ್ದಾರೆ ಹವ್ಯಾಸಿ ಕಲಾವಿದೆ ಶ್ರೀಮತಿ ಭಾರತಿ ಭಂಡಾರಿ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯವರು. ಪ್ರಸ್ತುತ ಈಗ ಬೆಂಗಳೂರಿನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಾ ತರಗತಿಗೆ ಹೋಗಿ ಅಧ್ಯಯನ ಮಾಡಿದವರಲ್ಲ. ಇವರಿಗೆ ಕಲಾಸಕ್ತಿ ಮೂಡಿದ್ದು ಬಾಲ್ಯದಲ್ಲಿ ಇವರ ತಾಯಿ ಮಾಡಿರುವ ಚಿಕ್ಕಪುಟ್ಟ ಕಲಾಕೃತಿಗಳನ್ನು ನೋಡಿ. ಅದೇ ರೀತಿ ಕಲಾಕೃತಿಯನ್ನು ತಾವು ಕೂಡ ಮಾಡಬೇಕೆಂಬ ಹಂಬಲವನ್ನು ಮೂಡಿಸಿಕೊಂಡರು. ಬಾಲ್ಯದಲ್ಲಿ ಇವರ ಪ್ರತಿಭೆಗೆ ನೀರೆರೆದು ಪೋಷಿಸಿದವರು ಇವರ ತಾಯಿ. ನಂತರದ ದಿನಗಳಲ್ಲಿ ತಾವು…
ಮಂಗಳೂರು : ‘ಯಕ್ಷ ಮಿತ್ರರು ಕುಡುಪು’ ತಂಡದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 18-12-2023ರಂದು ಮಂಗಳೂರಿನ ಕುಡುಪು ಅನಂತ ಪದ್ಮನಾಭ ಕ್ಷೇತ್ರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ‘ಯಕ್ಷ ಮಿತ್ರರು ಕುಡುಪು’ ಪರವಾಗಿ ಕುಡುಪು ಶ್ರೀಕ್ಷೇತ್ರದ ಆನುವಂಶಿಕ ಮೊಕ್ತೇಸರ ಮತ್ತು ಕ್ಷೇತ್ರದ ತಂತ್ರಿಗಳೂ ಆದ ವೇದಮೂರ್ತಿ ಕೆ. ನರಸಿಂಹ ತಂತ್ರಿಗಳು ಯಕ್ಷಗಾನ ಹಿಮ್ಮೇಳ ಕಲಾವಿದ ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಕುಡುಪು ವಿವಿದ್ದೋದ್ದೇಶ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜನಾರ್ದನ ಕುಡುಪು ಇವರನ್ನು ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು “ಯಕ್ಷಗಾನ ಕಲೆಯನ್ನು ನಂಬಿದವ ಎಂದೂ ಸೋತ ಇತಿಹಾಸವಿಲ್ಲ. ಯಾವುದೇ ಕಲೆಯನ್ನು ಗೌರವಿಸಿದರೂ ಅದುವೇ ಕಲಾವಿದನಿಗೆ ಗೌರವವನ್ನು ತಂದು ಕೊಡುತ್ತದೆ. ಸುಬ್ರಹ್ಮಣ್ಯ ಶಾಸ್ತಿಗಳೂ ಹಾಗೆಯೇ ಶ್ರೀಕ್ಷೇತ್ರದ ಪರಮ ಭಕ್ತರಾಗಿದ್ದು, ಕಟೀಲಮ್ಮನ ಸೇವೆ ಮಾಡುತ್ತಾ ಒಬ್ಬ ಅಪ್ರತಿಮ ಕಲಾರಾಧಾಕರಾಗಿದ್ದಾರೆ. ಆ ಕಾರಣಕ್ಕಾಗಿಯೇ ಇಂದು ಶ್ರೀಕ್ಷೇತ್ರದಲ್ಲಿ ವಿಶೇಷ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಅವರಿಗೆ ಇನ್ನು ಮುಂದೆಯೂ ಯಕ್ಷ ಸೇವೆ ಮಾಡಲು…
ಉಡುಪಿ : ದಿನಾಂಕ 07-12-2023ರಂದು ಆರಂಭವಾದ ಉಡುಪಿಯ 28 ಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನದ ಸಮಾರೋಪ ದಿನಾಂಕ 20-12-2023ರಂದು ಸಂಪನ್ನಗೊಂಡಿತು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡು ವಾರಗಳ ಪರ್ಯಂತ ನಡೆದ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ 28 ಶಾಲೆಗಳ ಸುಮಾರು 900 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು “ಈ ಕಲೆ ಮಕ್ಕಳನ್ನು ಸಂಸ್ಕೃತೀ ಸಂಪನ್ನರಾಗಿಸುವಲ್ಲಿ ಮಹತ್ತ್ವದ ಪಾತ್ರ ವಹಿಸಿದೆ. ಯಕ್ಷಶಿಕ್ಷಣ ಟ್ರಸ್ಟ್ ಇದನ್ನು ನಿರಂತರ ಮುಂದುವರಿಸಿಕೊಂಡು ಬರಲಿ” ಎಂದು ಆಶೀರ್ವದಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಶ್ರೀ ಯಶ್ಪಾತಲ್ ಸುವರ್ಣರು “ಶುದ್ಧ ಸಂಕಲ್ಪದಿಂದ ಆರಂಭಗೊಂಡ ಈ ಮಹಾ ಅಭಿಯಾನವನ್ನು ನಾವೆಲ್ಲ ಸೇರಿ ಬೆಳೆಸೋಣ” ಎಂದರು. ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಕೆ. ಗಣಪತಿಯವರು ಶುಭಾಶಂಸನೆಗೈದರು. ಅಭ್ಯಾಗತರಾಗಿ ಡಾ. ನಿ.ಬೀ. ವಿಜಯ ಬಲ್ಲಾಳ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್,…
ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ ನಿಮಿತ್ತ ರಾಜ್ಯ ಮಟ್ಟದ ‘ಲಲಿತ ಪ್ರಬಂಧ ಸ್ಪರ್ಧೆ’ ಏರ್ಪಡಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಹಾಗೂ ಡಿಜಿಟಲ್ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನುನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಗಳು * ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಒಬ್ಬ ಸ್ಪರ್ಧಿ ಒಂದು ಪ್ರಬಂಧವನ್ನು ಮಾತ್ರ ಕಳುಹಿಸಬಹುದು. * ಲಲಿತ ಪ್ರಬಂಧ 1000 ಪದಗಳ ಮಿತಿಯಲ್ಲಿರಬೇಕು. * ಪ್ರಬಂಧ ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. * ಅನುವಾದ, ಅನುಕರಣೆ ಮತ್ತು ರೂಪಾಂತರ ಮಾಡಿದ ಪ್ರಬಂಧಗಳಿಗೆ ಅವಕಾಶವಿಲ್ಲ. * ಪ್ರಬಂಧವನ್ನು ಟೈಪಿಸಿ, ಪಿ. ಡಿ. ಎಫ್. ರೂಪದಲ್ಲಿ ಮಾತ್ರ ಕಳುಹಿಸಬೇಕು. * ಸ್ಪರ್ಧಿಯ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋವನ್ನು ಪ್ರತ್ಯೇಕವಾಗಿ ಕಳುಹಿಸಬೇಕು. * ಪ್ರಬಂಧವನ್ನು ಕಳುಹಿಸಲು ಕೊನೆಯ ದಿನಾಂಕ 08-01-2024 *…
ಕುಂದಾಪುರ : ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.) ಇದರ ವತಿಯಿಂದ ‘ಬಂಟರ ಯಕ್ಷ ಸಂಭ್ರಮ’ ಆಯ್ದ ಬಡಗು ತಿಟ್ಟಿನ ಬಂಟ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಮತ್ತು ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರದಾನವು ದಿನಾಂಕ 30-12-2023ರಂದು ಅಪರಾಹ್ನ 2 ಗಂಟೆಗೆ ಬಂಟರ ಯಾನೆ ನಾಡವರ ಸಂಕೀರ್ಣ, ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ‘ಮಾಯಾಪುರಿ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರು : ಸುದೀಪಚಂದ್ರ ಶೆಟ್ಟಿ ಮೇಗದ್ದೆ (ಮಾರಣಕಟ್ಟೆ ಮೇಳ), ಗಣೇಶ ಶೆಟ್ಟಿ ಬೆಳ್ವೆ (ಮಂದಾರ್ತಿ ಮೇಳ), ಸಂತೋಷ ಶೆಟ್ಟಿ ಎಡಮೊಗೆ (ಸೌಕೂರು ಮೇಳ), ಚಂಡೆ : ಶ್ರೀಕಾಂತ್ ಶೆಟ್ಟಿ, ಎಡಮೊಗೆ (ಮಂದಾರ್ತಿ ಮೇಳ) ಮತ್ತು ಮದ್ದಳೆ : ಶಶಾಂಕ್ ಕುಮಾರ್. ಮುಮ್ಮೇಳದಲ್ಲಿ ಶತ್ರುಘ್ನ – ಅರೆಹೊಳೆ ಸಂಜೀವ ಶೆಟ್ಟ (ಮಾರಣಕಟ್ಟೆ ಮೇಳ), ದಮನ – ಕಾನ್ಕಿ ಸುಧಾಕರ ಶೆಟ್ಟಿ (ಮಾರಣಕಟ್ಟೆ ಮೇಳ), ಬಲ – ವಿಘ್ನೇಶ್ ಶೆಟ್ಟಿ ಎಡಮೊಗೆ (ಕಮಲಶಿಲೆ ಮೇಳ) ಮತ್ತು ನಂದನ್ ಶೆಟ್ಟಿ ಅಗುಂಬೆ (ಮಂದಾರ್ತಿ ಮೇಳ), ಪುಷ್ಕಳ…
ಮಂಗಳೂರು : ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಹಯೋಗದಲ್ಲಿ ‘ಜಾನಪದ ಸ್ಪರ್ಧಾ ಕೂಟ’ವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 11-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿ “ತುಳು ಜಾನಪದ ಕಲೆ ಉಳಿಸುವಲ್ಲಿ ಸ್ಪರ್ಧೆಗಳ ಪಾತ್ರ ಮಹತ್ವವಾಗಿದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಲಾವಿದರ ಪಾತ್ರ ಮುಖ್ಯವಾದುದು. ತುಳುನಾಡಿನ ಜನತೆ ಜಾನಪದ ಸಂಸ್ಕೃತಿಯ ಉಳಿವಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ತುಳುನಾಡಿನ ವಿವಿಧ ಜಾನಪದ ಪ್ರಕಾರಗಳು ಕಲಾವಿದರಿಂದಾಗಿ ದೇಶ ವಿದೇಶದಲ್ಲಿ ಪ್ರತಿಬಿಂಬಿಸುತ್ತಿವೆ. ನಮ್ಮ ಕುಟುಂಬ ಪದ್ಧತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆ ಎಂಬ ಮಾನ್ಯತೆ ಸಿಗಬೇಕಾಗಿದೆ” ಎಂದು ಹೇಳಿದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, “ತುಳುನಾಡಿನ ಆಚಾರ ವಿಚಾರ, ಕಲೆ ಸಂಸ್ಕೃತಿ ವಿಶಿಷ್ಟವಾಗಿದೆ. ದೇಶ ವಿದೇಶಗಳಲ್ಲಿ ತುಳು ಮಾತನಾಡುವ ಜನರಿದ್ದು,…
ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಹ ಸಂಸ್ಥೆಯಾದ ಕದ್ರಿ ಸಂಗೀತ ವಿದ್ಯಾನಿಲಯವು ದಿನಾಂಕ 03-12-2023ರಂದು ತನ್ನ 30ನೇ ವಾರ್ಷಿಕೋತ್ಸವವನ್ನು ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ಆಯೋಜಿಸಿತು. ಅಂದು ಸಂಸ್ಥೆಯ ಸಂಗೀತ ಗುರುಗಳಾದ ವಿದುಷಿ ಉಷಾ ಪ್ರವೀಣರ ಶಿಷ್ಯ ವೃಂದದವರಿಂದ ಸುಮಾರು ಮೂರು ಗಂಟೆಗಳ ಕಾಲ ಕರ್ನಾಟಕ ಸಂಗೀತ ಕಛೇರಿಯು ನಡೆಯಿತು. ಈ ಕಛೇರಿಗೆ ಮೃದಂಗದಲ್ಲಿ ವಿದ್ವಾನ್ ಮನೋಹರ್ ರಾವ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ಶ್ರೀಧರಾಚಾರ್ ಪಾಡಿಗಾರ್ ಇವರು ಸಹಕರಿಸಿದರು. ನಂತರ ಅಂತರ್ರಾಷ್ಟ್ರೀಯ ಕಲಾವಿದರಾದ ಮೈಸೂರಿನ ಡಾಕ್ಟರ್ ವಿದುಷಿ ಸುಕನ್ಯ ಪ್ರಭಾಕರ್ ಇವರಿಂದ ಎರಡು ಗಂಟೆಗಳ ಕಾಲ ಕರ್ನಾಟಕ ಸಂಗೀತ ಕಛೇರಿಯು ನಡೆಯಿತು. ಇದರಲ್ಲಿ ಮಂಗಳೂರಿನ ಆಕಾಶವಾಣಿ ಕಲಾವಿದರಾದ ವಿದ್ವಾನ್ ಕೆ.ಎಚ್. ರವಿಕುಮಾರ್ ಮೃದಂಗದಲ್ಲಿಯೂ ಹಾಗೂ ವಿದ್ವಾನ್ ಗಣರಾಜ ಕಾರ್ಲೆಯವರು ಪಿಟೀಲಿನಲ್ಲಿಯೂ ಸಹಕರಿಸಿದರು. ಸಹ ಗಾಯಕರಾಗಿ ವಿದುಷಿ ನಿತ್ಯಶ್ರೀ ಆರ್. ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ ವಿದುಷಿ ಸುಕನ್ಯಾ ಪ್ರಭಾಕರ್ ಅವರು, “72 ವರ್ಷಗಳ ನನ್ನನ್ನು…