Author: roovari

4 ಏಪ್ರಿಲ್ 2023, ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ‌”ಪಾರ್ಥ ಸಾರಥ್ಯ” ಮಹತೋಬಾರ‌ ಶ್ರೀ ಮಹಾಲಿಂಗೇಶ್ವರ ದೇವಾಲಯದ ರಾಜಗೋಪುರದಲ್ಲಿ ದಿನಾಂಕ 03-04-2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ, ಗುರುಮೂರ್ತಿ ಅಮ್ಮಣ್ಣಾಯ, ಅಚ್ಯು ತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ) ಗುಂಡ್ಯಡ್ಕ ಈಶ್ವರ ಭಟ್ (ಕೌರವ) ಕು೦ಬ್ಳೆ ಶ್ರೀಧರ್ ರಾವ್ (ಅರ್ಜುನ) ಗುಡ್ಡಪ್ಪ ಬಲ್ಯ (ಬಲರಾಮ) ಸಹಕರಿಸಿದರು. ಟಿ.ರಂಗನಾಥ ರಾವ್‌ ಸ್ವಾಗತಿಸಿ ವಂದಿಸಿದರು.

Read More

04 ಏಪ್ರಿಲ್ 2023, ಮಂಗಳೂರು: ದಿನಾಂಕ 01-04-23ರಂದು ಕರಾವಳಿ ಲೇಖಕಿಯರ-ವಾಚಕಿಯರ ಸಂಘದಲ್ಲಿ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್ ರವರ ‘ಗೃಹಾವರಣ’ ಎಂಬ ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ ನಡೆಯಿತು. ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿಯನ್ನು ಬಿಡುಗಡೆಗೊಳಿಸಿ, “ಗೃಹದೊಳಗಿನ ಹಲವು ಮುಖಗಳು ಕೃತಿಯಲ್ಲಿ ಅನಾವರಣಗೊಂಡಿವೆ. ಮನೆ ಎಂದರೆ ಅದು ಕಲ್ಲು ಕಟ್ಟಡದ ಭೌತಿಕ ಸ್ವರೂಪವಲ್ಲ. ಮನಸ್ಸುಗಳನ್ನು ಬೆಸೆಯುವ ಮೂಲಕ ಸಂಬಂಧಗಳನ್ನು ಹೆಣೆಯುವ ಆಶ್ರಯ ತಾಣ. ‘ಗೃಹಾವರಣ’ ಮನಸ್ಸುಗಳನ್ನು ಬೆಸೆಯುವ ಕಾಯಕ ಗೈದ ಪ್ರೀತಿಯ ಕೃತಿ” ಎಂದರು. ಸೈಂಟ್ ಆಗ್ನೆಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜ ಕೆ. ಇವರು ಕೃತಿಯನ್ನು ಪರಿಚಯ ಮಾಡಿ “ಇವರ ಬರಹಗಳ ಲಾಲಿತ್ಯಮಯ ಶೈಲಿ ಓದುಗರನ್ನು ಸೆಳೆಯುತ್ತದೆ. ಗೃಹಿಣಿ ಗೃಹ ಮುಚ್ಯೆತೆ ಎಂದ ಪ್ರಾಜ್ಞರ ಮಾತನ್ನು ನೆನಪಿಸಿಕೊಂಡು ಗೃಹ ನಿರ್ವಹಣೆಯಲ್ಲಿ ಗೃಹಣಿಯ ಪಾತ್ರ ಮಹತ್ವದ್ದು. ಆಕೆಯ ಸಮಯ, ಶ್ರಮ, ಪ್ರೇಮ, ಮನೆಯೊಳಗಿನ ಭಾವಜಗತ್ತನ್ನು ಅವರಿಸಿಕೊಳ್ಳುತ್ತದೆ” ಎಂದರು. ಕೃತಿಯ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್…

Read More

03-04-2023,ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಗಳು ನಡೆಸಿಕೊಂಡು ಬರುತ್ತಿರುವ ಉದಯರಾಗದ 42ನೇ ಸಂಗೀತ ಕಚೇರಿಯು ಸುರತ್ಕಲ್ ನ ಅನುಪಲ್ಲವಿಯಲ್ಲಿ ದಿನಾಂಕ 02-04- 2022ರಂದು ನಡೆಯಿತು. ಪುತ್ತೂರಿನ ತನ್ಮಯಿ ಉಪ್ಪಂಗಳ ಸುಶ್ರಾವ್ಯವಾದ ಹಾಡುಗಾರಿಕೆ ಕಚೇರಿ ನಡೆಸಿಕೊಟ್ಟರು. ಇವರಿಗೆ ಗೌತಮ್ ಭಟ್ ಪಿ.ಜಿ ವಯಲಿನ್ ನಲ್ಲಿ ಮತ್ತು ಅಜಯ ಕೃಷ್ಣ ಉಪ್ಪಂಗಳ ಮೃದಂಗದಲ್ಲಿ ಸಹಕರಿಸಿದರು.ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಲಾವಿದರನ್ನು ಪರಿಚಯಿಸಿ ಕೃತಜ್ಞತೆ ಸಲ್ಲಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ ರಾಜಮೋಹನ್ ರಾವ್, ಸಚ್ಚಿದಾನಂದ ಕೆ, ರಘುರಾಮ್ ರಾವ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು .ರಘುರಾಮ ಮತ್ತು ಸುಮನ ಉಪ್ಪಂಗಳ ಇವರ ಪುತ್ರಿಯದ ಕು. ತನ್ಮಯ ಉಪ್ಪಂಗಳ ಇವರು ವಿದುಷಿ ಶ್ರೀಮತಿ ವೀಣಾ ರಾಘವೇಂದ್ರ ಮತ್ತು ವಿದುಷಿ ಶ್ರೀಮತಿ ಶೈಲಜಾ ಶ್ರೀರಾಮ್ ಇವರಿಂದ ಸಂಗೀತಾಭ್ಯಾಸವನ್ನು ಮತ್ತು ವಿದ್ವಾನ್ ವೇಣುಗೋಪಾಲ ಶಾನುಭಾಗ್ ಮತ್ತು ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಇವರುಗಳಿಂದ ವಾಯ್ಲಿನ್ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 97…

Read More

ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ಯಕ್ಷಗಾನ ಮಹಿಳಾ ಪ್ರಸಂಗಕರ್ತರು ಕಾಣ ಸಿಗುವುದು ಅಪರೂಪ. ಇಂತಹ ಪ್ರಸಂಗಕರ್ತೆ ಪೈಕಿ ಮಿಂಚುತ್ತಿರುವವರು ಶ್ರೀಮತಿ ಶಾಂತಾ ವಾಸುದೇವ ಪೂಜಾರಿ. ಮಹಾಬಲ ಪೂಜಾರಿ, ದೇವಲ್ಕುಂದ ಹಾಗೂ ನೀಲು ಪೂಜಾರ್ತಿ,ಆನಗಳ್ಳಿ ಇವರ ಮಗಳಾಗಿ 11.07.1976ರಂದು ಜನನ. ಶ್ರೀ ಶಾರದ‌ ಕಾಲೇಜು, ಬಸ್ರೂರುನಲ್ಲಿ ಬಿ.ಎ.ಪದವಿ ಹಾಗೂ ಕಂಪ್ಯೂಟರ್ ಶಿಕ್ಷಣ ಇವರ ವಿದ್ಯಾಭ್ಯಾಸ. ತವರುಮನೆ, ಅಜ್ಜ ಬಳ್ಕೂರು ನಂದಿ ಪೂಜಾರಿ ಮತ್ತು ಅಜ್ಜಿ ರುಕ್ಮಿಣಿ ಪೂಜಾರ್ತಿ ಯವರಿಂದ ರಕ್ತಗತವಾಗಿ ಹರಿದು ತಾಯಿಯಿಂದ ವರಪ್ರಸಾದವಾಗಿ ಪಡೆದ ಯಕ್ಷಗಾನದ ಮೇಲಿನ ಅದಮ್ಯ ಪ್ರೇಮ ಬರವಣಿಗೆಯಲ್ಲಿ ಚಿರಂತನವಾಯಿತು.  ತಂದೆ ಮಹಾಬಲ ಪೂಜಾರಿಯವರ ಕಲಾಸೇವೆ,  ಸೋದರಮಾವ ಕೃಷ್ಣ ಪೂಜಾರಿಯವರು ಮತ್ತು ಅಣ್ಣ ರವಿಕುಮಾರ್, ಹಾಗೂ ತಮ್ಮ ಸಂತೋಷ ಕುಮಾರ್ ರವರು ಶ್ರೀ ಲಕ್ಷ್ಮೀ ಚೆನ್ನಕೇಶವ ಯಕ್ಷಗಾನ ಕಲಾ ಮಂಡಳಿ, ಆನಗಳ್ಳಿ ಯಲ್ಲಿ ಹವ್ಯಾಸಿ ಕಲಾವಿದರಾಗಿ ಸಲ್ಲಿಸಿದ ಸೇವೆ ಇವರ ಬರವಣಿಗೆಗೆ ಪ್ರೇರಣೆ. ಶ್ರೀಮತಿ ಶಾಂತಾ ವಾಸುದೇವ ಪೂಜಾರಿ ಅವರು ಬರೆದಿರುವ…

Read More

3 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿ‌ನಗರ-ಬೈಕಾಡಿ‌ ಪ್ರಸ್ತುತ ಪಡಿಸುವ ‘ರಂಗೋತ್ಸವ-2023’ ಕಾರ್ಯಕ್ರಮವು ಶನಿವಾರ 01-04-2023ರಂದು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಸದಾಶಯದ ರಂಗಗೀತೆಗಳಿಂದ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ರಂಗಭೂಮಿ ಭಾವನೆಗಳ ಸಮುದ್ರ, ಮಾನವನ ಅಂತಃಕರಣ ಕಲಕಿ ಅಂತರಂಗ ಅವಿಭಾವಗೊಳಿಸಿ ವೈಶಾಲ್ಯತೆ ಮೂಡಿಸಲು ಸಶಕ್ತವಾದ ಮಾಧ್ಯಮ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದು” ಅಂತಾ ಹೇಳುತ್ತಾ “ನಮ್ಮ ಜಿಲ್ಲೆಯ ಈ ಮಂದಾರ ಸಂಘಟನೆ ಕಲಾ ಚಟುವಟಿಕೆಯಲ್ಲಿ ಇನ್ನಷ್ಟು ತಮ್ಮನ್ನು ತಾವು ತೊಡಗಿಸಿಕೊಳ್ಳಲಿ” ಅಂತಾ ಹಾರೈಸಿದರು. ಈ ವೇಳೆ ರಂಗಭೂಮಿ ಕಲಾವಿದರಾದ ಆಲ್ವಿನ್ ಅಂದ್ರಾದೆ, ಉದ್ಯಮಿಗಳಾದ ಎಸ್. ನಾರಾಯಣ್, ಎಸ್.ಎಮ್.ಎಸ್.ಪ.ಪೂ. ಕಾಲೇಜು ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಂತರ ಅಗಲಿದ ಸಹಕಲಾವಿದ ಕನಸು ಕಾರ್ತಿಕ್ ಗೆ ರಂಗಗೀತೆಗಳ ಮೂಲಕ ರಂಗನಮನ ಸಲ್ಲಿಸಲಾಯಿತು. ಇದೇ ಸಂಧರ್ಭದಲ್ಲಿ ಮನು…

Read More

1 ಏಪ್ರಿಲ್ 2023, ಬೆಂಗಳೂರು: ದಿನಾಂಕ 29-03-2023 ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಿರಿಯ ಸಾಹಿತಿ ಡಾ. ವೈದೇಹಿಯವರಿಗೆ “ನೃಪತುಂಗ ಸಾಹಿತ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಜಾನಕಿ ಶ್ರೀನಿವಾಸಮೂರ್ತಿ ಎಂಬ ನಿಜ ನಾಮದೇಯದ, ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಯನ್ನು ನೀಡಿದ ಲೇಖಕಿ ಡಾ. ವೈದೇಹಿಯವರು ದ.ಕ.ಜಿಲ್ಲೆಯ ಕುಂದಾಪುರದವರು. ಕನ್ನಡ ಕಾವ್ಯ ಲೋಕಕ್ಕೆ ಹೊಸ ತಿರುವನ್ನು ಕೊಟ್ಟವರು ಇವರು. ಅವರ ಕವಿತೆಗಳು ಸೂಕ್ಷ್ಮ ಸಂವೇದನೆಗಳ ಜೊತೆಗೆ ಮಾನವತಾವಾದದ ವಿಸ್ತಾರವನ್ನು ಕನ್ನಡ ಕಾವ್ಯ ಪ್ರಪಂಚಕ್ಕೆ ನೀಡಿದವು. ಇದರೊಂದಿಗೆ ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ನೃಪತುಂಗ ಅತ್ಯಂತ ಶ್ರೇಷ್ಟ ಹಾಗೂ ಮೌಲಿಕ ಸಾಹಿತ್ಯ ಪ್ರಶಸ್ತಿ. ಕನ್ನಡದ ಪ್ರಥಮ ಉಪಲಬ್ದ ಗ್ರಂಥ “ಕವಿರಾಜ ಮಾರ್ಗ”ದ ಕರ್ತೃ ನೃಪತುಂಗನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಕನ್ನಡದಲ್ಲಿ ಮೌಲಿಕ ಸಾಹಿತ್ಯ ರಚನೆ ಮಾಡಿರುವ ಹಿರಿಯ ಸಾಹಿತಿಯೊಬ್ಬರಿಗೆ ಪ್ರತೀ ವರ್ಷ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ.…

Read More

1 ಏಪ್ರಿಲ್ 2023, ಬೆಂಗಳೂರು: ದಿನಾಂಕ 29-03-2023 ಬುಧವಾರ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಹಾಗೂ ವಸಂತ ಪ್ರಕಾಶನ ಬೆಂಗಳೂರು ಸಹಯೋಗದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೈದೇಹಿಯವರನ್ನು ಅಭಿನಂದಿಸಲಾಯಿತು. “ಸ್ತ್ರೀವಾದಕ್ಕೆ ಹೊಸ ಆಯಾಮ ನೀಡಿದವರು ಲೇಖಕಿ ವೈದೇಹಿ. ಅವರು ‘ಅಕ್ಕು’ ಪಾತ್ರದ ಮೂಲಕ ಸ್ತ್ರೀಯ ತಾಳ್ಮೆ, ಹುದುಗಿದ ಶಕ್ತಿ ಅನಾವರಣಗೊಳಿಸಿದ್ದಾರೆ” ಎಂದು ಹಿರಿಯ ವಿಮರ್ಶಕ ಪ್ರೊ. ಸಿ.ಎನ್. ರಾಮಚಂದ್ರನ್ ಹೇಳಿದರು. ಇದೇ ಸಂದರ್ಭದಲ್ಲಿ ಸಾಹಿತಿ ಲಲಿತಮ್ಮ ಚಂದ್ರಶೇಖರ್ ಇವರ “ನೆನಪಿನ ಉಗ್ರಾಣ” ಕೃತಿ ಬಿಡುಗಡೆ ಮಾಡಲಾಯಿತು. ಡಾ. ವೈದೇಹಿಯವರಿಗೆ ಅಭಿನಂದನೆ

Read More

ಕಾಸರಗೋಡು ಜಿಲ್ಲೆಯ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿರುವ ಡಾ. ಸುಭಾಷ್ ಪಟ್ಟಾಜೆ ಅವರ ‘ಕಥನ ಕಾರಣ- ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳ ಅಧ್ಯಯನ’ ಎಂಬ ಅಧ್ಯಯನ ಕೃತಿಯನ್ನು ಓದುವಾಗ ಎಂ. ಗೋವಿಂದ ಪೈಗಳು 1947ರಲ್ಲಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚಿತ್ತಾಯರ ‘ಸ್ವರಾಜ್ಯ ಗೀತಾ ಲೋಕ’ಕ್ಕೆ ಬರೆದ ಮುನ್ನುಡಿಯ ಸಾಲುಗಳು ನೆನಪಾದವು. “ಇವುಗಳಲ್ಲಿ ಒಂದೊಂದೇನೋ ಕುಂದು ಇರಲೂಬಹುದು. ಇಲ್ಲದಿರಲೂಬಹುದು. ಯಾರಲ್ಲಿ ಇಲ್ಲ? ಎಷ್ಟೆಂದರೂ ಮನುಷ್ಯರು ಸರ್ವಥಾ ಅಪೂರ್ಣ. ಅಥವಾ ಮನುಷ್ಯರೇ ಏಕೆ? ಸೃಷ್ಟಿಯೇ ಅಪರ್ಯಾಪ್ತ. ಪ್ರಕೃತಿಯೇ ವಿಕಲ. ಆದರೆ ಅಂಥಾ ಕೊರತೆಗಳನ್ನು ಮುಟ್ಟಿ ತೋರಿಸುವುದು ಮುನ್ನುಡಿಗಾರನ ಕೆಲಸವಲ್ಲ. ಸರ್ವಥಾ ಅಲ್ಲ. ಅದಕ್ಕೆ ಸಹಸ್ರಾಕ್ಷನಾದ ವಿಮರ್ಶಕನಿದ್ದಾನೆ. ಭಾಪು ಭಾಪು ಎಂದು ತನ್ನ ಲೇಖಕನ ಬೆನ್ನು ಚಪ್ಪರಿಸುವುದು, ಜಾಗು ಜಾಗು ಎಂದು ಆತನನ್ನು ಹುರಿದುಂಬಿಸುವುದು ಇದಷ್ಟೇ ಮುನ್ನುಡಿಗಾರನ ಕೆಲಸ. ಮುನ್ನುಡಿಗಾರನು ಪುರೋಹಿತನಂತೆ ತನ್ನ ಬಳಿಗೆ ಬಂದಾತನ ಪೌರೋಹಿತ್ಯವನ್ನು ನಡೆಸಿ, ಅವನಿಗೆ ಶ್ರೇಯಸ್ಸನ್ನು ಕೋರಿ ಆಶೀರ್ವದಿಸಬೇಕು. ಆತನ ಊಣಿಗಳ…

Read More

1 ಏಪ್ರಿಲ್ 2023, ಮಂಗಳೂರು: ರಾಗತರಂಗ ಮಂಗಳೂರು ವತಿಯಿಂದ ಝೇಂಕಾರ -23 ಹಾಗೂ ಗುರುವಂದನೆ ಕೊಡಿಯಾಲಬೈಲ್ ಶಾರದಾ ವಿದ್ಯಾಲಯದಲ್ಲಿ ದಿನಾಂಕ 26-03-2023ರಂದು ನಡೆಯಿತು. ಬಾಲಪ್ರತಿಭಾ ಹಾಗೂ ನಿನಾದ ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಂಡಿತು. ಗುರುವಂದನ ಕಾರ್ಯಕ್ರಮದಲ್ಲಿ ಹಿರಿಯ ಭರತನಾಟ್ಯ ಗುರುಗಳಾದ ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಅವರನ್ನು ಅಭಿನಂದಿಸಿ ಸಮ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಟ್ಯಾಚಾರ್ಯರು “ಕಲಾವಿದರಿಗೆ ಕಲೆಗಳ ಮೂಲಕ ನೀಡುವ ಪ್ರೀತಿ ಪೂರ್ವಕ ಗೌರವವು ಅತ್ಯಮೂಲ್ಯವಾದುದು. ಶಾಸ್ತ್ರೀಯ ನೃತ್ಯದ ಬಗ್ಗೆ ಅಧ್ಯಯನ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕರನ್ನು ತಯಾರು ಮಾಡಿದ್ದೇನೆ. ರಾಜ್ಯದ ವಿವಿಧ ಭಾಗಗಳ ವಿದ್ವಾಂಸರು ದಕ್ಷಿಣ ಕನ್ನಡ ಜಿಲ್ಲೆ ಶಾಸ್ತ್ರೀಯ ನೃತ್ಯದಲ್ಲಿ ಉತ್ತಮ ಸ್ಥಾನ ಪಡೆದಿದೆ ಎಂದು ಹೇಳುವಾಗ ನನ್ನ ಜೀವನ ಸಾರ್ಥಕ ಎಂಬ ಭಾವನೆ ಬಂದಿದೆ” ಎಂದರು. ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರಾಗತರಂಗದ ಬಗ್ಗೆ ಅಭಿಮಾನವನ್ನು ತೋರಿದರು. ಡಾ. ದೇವರಾಜ್ ಮಾತನಾಡುತ್ತಾ ರಾಗತರಂಗದ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ…

Read More

31 ಮಾರ್ಚ್ 2023, ಕೋಟ: ಕೋಟ ರಸರಂಗ ತಂಡವು ಕಾರಂತ ಥೀಂ ಪಾರ್ಕ್‌ನಲ್ಲಿ ದಿನಾಂಕ 26-03-2023ರಂದು ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ, ಹಚ್ಚೇವು ಕನ್ನಡದ ದೀಪ ಸರಣಿ ಕಾರ್ಯಕ್ರಮ -3 ಇದರ ಅಧ್ಯಕ್ಷತೆಯನ್ನು ವಹಿಸಿದ್ದ ಕ.ಸಾ.ಪ. ಬ್ರಹ್ಮಾವರ ಘಟಕದ ಅಧ್ಯಕ್ಷ, ರಂಗಕರ್ಮಿ ಗುಂಡ್ಮಿ ರಾಮಚಂದ್ರ ಐತಾಳ್ ಇವರು “ಜನರ ಬಳಿಗೇ ಹೋಗಿ ಕಾರ್ಯಕ್ರಮಗಳನ್ನು ಮಾಡಿದಾಗ ಅದು ಹೆಚ್ಚು ಹೆಚ್ಚು ಜನರನ್ನು ತಲುಪುತ್ತದೆ” ಎಂದು ನುಡಿದರು. ಸಾಹಿತಿ ಸಂಘಟಕ ನರೇಂದ್ರ ಕುಮಾರ್‌ ಕೋಟ ಮಾತನಾಡಿ, ಮಕ್ಕಳ ರಂಗಭೂಮಿ ಚಟುವಟಿಕೆಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು ಎಂದರು. ಕಲಾವಿದೆ ಸುಶೀಲಾ ಹೊಳ್ಳ ಅವರು ಈಜಿಪ್ಟ್ ಅಭಿನೇತ್ರಿ ಸಮೀಹಾ ಅಯೌಬ್ -2023ರ ವಿಶ್ವ ರಂಗಭೂಮಿ ಸಂದೇಶ ವಾಚಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರೂ ಕಲಾಪೋಷಕರಾದ ಶಿವಾನಂದ ಮಯ್ಯ ಉಪಸ್ಥಿತರಿದ್ದರು. ಕನ್ನಡ ಉತ್ಸವದ ಗೌರವ ಸನ್ಮಾನವನ್ನು ನರೇಂದ್ರ ಕುಮಾರ್ ಕೋಟ ಅವರಿಗೆ, ರಾಷ್ಟ್ರೀಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಹಾಗೂ ರಂಗ ಗೌರವವನ್ನು ಸುಲೋಚನಾ ನಾಯರಿ ಅವರಿಗೆ ನೀಡಲಾಯಿತು. ಉನ್ನತಿ…

Read More