Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿ ನಗರದ ಕ.ಸಾ.ಪ. ಕಛೇರಿಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 05-05-2024ರಂದು ನಡೆಯಿತು. ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರು ಮಾತನಾಡಿ “ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೀಗ 110ನೆಯ ವರ್ಷದ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶೇಷ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಇಂದಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ. ಕನ್ನಡ ನಾಡಿನಲ್ಲಿ ಕೈಗಾರಿಕೆ, ವಿದ್ಯೆ, ಕೃಷಿಗೆ ಆದ್ಯತೆ ನೀಡಿದ್ದ ಅವರು, ಮೈಸೂರು ಸಂಸ್ಥಾನದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ…
ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗವು ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ‘ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ಗುರುರಾಜ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ. ಮಾರ್ಪಳ್ಳಿಯವರು ಯಕ್ಷಗಾನವಲ್ಲದೆ ನಾಟಕ, ಸಿನೇಮಾ, ಸಂಗೀತಾ, ಶಿಲ್ಪ ಮತ್ತು ಸಾಹಿತ್ಯ ಹೀಗೆ ಕಲೆಯ ಬಹು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಹುಮುಖೀ ಕಲಾಸಾಧಕರಾಗಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಪರಿಕರ ಸಹಿತ ರೂಪಾಯಿ 40,000/- ನಗದು ಪುರಸ್ಕಾರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 19-05- 2024ರ ಭಾನುವಾರದಂದು ಯಕ್ಷಗಾನ ಕಲಾರಂಗದ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಸ್ಥಾಪಕ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಅತಿಥಿ ಗಣ್ಯರ ಸಮಕ್ಷಮದಲ್ಲಿ ನಡೆಯಲಿದೆ.
ಸುರತ್ಕಲ್ : ಸುರತ್ಕಲ್ ರೋಟರಿ ಕ್ಲಬ್ ಆಯೋಜಿಸಿದ್ದ ಸಾಹಿತ್ಯ ಮತ್ತು ಬದುಕು ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 04-05-2024ರಂದು ಸುರತ್ಕಲ್ಲಿನ ವಿದ್ಯಾದಾಯಿನಿ ಸಂಕಿರಣದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯುವ ಸಾಹಿತಿ ಹಾಗೂ ಸುರತ್ಕಲ್ ಎಂ. ಆರ್. ಪಿ. ಎಲ್. ಸಂಸ್ಥೆಯ ಸಹಾಯಕ ಮೇಲ್ವಿಚಾರಕ ಅಧಿಕಾರಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು “ಬದುಕಿನ ಪರಿಪೂರ್ಣತೆಗೆ ಸಾಹಿತ್ಯದ ಓದು ಅಗತ್ಯ. ಮನೋರಂಜನೆಯೊಂದಿಗೆ ಜ್ಞಾನದ ವಿಸ್ತರಣೆಗೆ ಕಾರಣವಾಗುವ ಸಾಹಿತ್ಯಾಭಿರುಚಿಯನ್ನು ಪ್ರತಿಯೊಬ್ಬರು ಮೂಡಿಸಿಕೊಳ್ಳಬೇಕು. ಭಾವನಾತ್ಮಕ ಕೌಶಲ್ಯ ಇಂದಿನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳ ಕಾರ್ಯ ಮಹತ್ತರದ್ದಾಗಿದೆ.” ಎಂದು ಹೇಳಿದರು. ಕೃಷ್ಣರಾಜ ತಂತ್ರಿ ಯು. ಎಸ್. ಎ. ಮಾತನಾಡಿ “ಮಕ್ಕಳ ಶಾಲೆಗೆ ಹೋಗುವ ಹಂತದಲ್ಲಿಯೇ ಓದಿನ ಅಭಿರುಚಿ ಬೆಳೆಸುವ ಕಾರ್ಯ ನಡೆಯಬೇಕಿರುವುದು ಭಾವನೆಗಳ ಅಭಿವ್ಯಕ್ತಿಗೆ ಸಾಹಿತ್ಯ ಮಾಧ್ಯಮ ಉಪಯುಕ್ತವಾಗಿದೆ.” ಎಂದರು. ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಯೋಗಿಶ್ ಕುಳಾಯಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣಮೂರ್ತಿ ಆಶಯನುಡಿಗಳನ್ನಾಡಿದರು. ರೋಟರಿ ಕ್ಲಬ್…
ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ ‘ರಜಾರಂಗು-24’ ಶಿಬಿರದಲ್ಲಿ ಮಕ್ಕಳ ನಾಟಕೋತ್ಸವದ ಎರಡನೇಯ ದಿನದ ಕಾರ್ಯಕ್ರಮವು ದಿನಾಂಕ 07-05-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರದ ನಿರ್ದೇಶಕರಾದ ನಾಗೇಶ್ ಕೆದೂರು ಅವರನ್ನು ಅಭಿವಂದಿಸಿ ಮಾತನಾಡಿದ ಪ್ರಸಿದ್ಧ ಸಾಹಿತಿ ಸುಧಾ ಆಡುಕುಳ “ಸಾಂಸ್ಕೃತಿಕ ಚಟುವಟಿಕೆಗಳು ಜೀವಂತವಾಗಿದ್ದರೆ ಆ ಊರನ್ನು ಹೊರಗಿನವರು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸುತ್ತಾರೆ. ತೆಕ್ಕಟ್ಟೆಯ ಸಾಂಸ್ಕೃತಿಕ ಕಾರ್ಯಕ್ರಮದ ಸುದ್ದಿಗಳು ಇತ್ತೀಚಿಗೆ ಬಹಳವಾಗಿ ಪತ್ರಿಕೆಗಳಲ್ಲಿ ಬರುತ್ತಿವೆ. ಕಲಾವಿದರ ಬಳಗವೇ ಇಲ್ಲಿಯ ಕೇಂದ್ರಗಳಲ್ಲಿ ಸೃಷ್ಠಿಯಾಗುತ್ತಿದೆ. ಮನಸ್ಸುಗಳನ್ನು ಮತ್ತು ಸಾಂಸ್ಕೃತಿಕ ರೂಪಗಳನ್ನು ಒಟ್ಟು ಗೂಡಿಸಿ ಹೊಲಿಯುವ ಕಾರ್ಯ ತೆಕ್ಕಟ್ಟೆಯ ಸಂಸ್ಥೆಗಳದ್ದಾಗುತ್ತಿದೆ. ಮಕ್ಕಳ ಶಿಬಿರಗಳನ್ನು ನೆರವೇರಿಸುವುದು ಸುಲಭದ ಕೆಲಸವಲ್ಲ. ದಶವಾರ್ಷಿಕವಾದ ಬೆಳೆಗಾಗಿ ನಿರೀಕ್ಷಿಸುತ್ತಿರುವ ಕೆಲಸವಾಗಿದೆ. ಮುಂದೊಂದು ದಿನ ಚಿತ್ರಕಾರನಾಗಬೇಕು, ಡಾಕ್ಟರ್ ಆಗಬೇಕು, ಕಲಾವಿದನಾಗಬೇಕು ಎಂದು ನಿರ್ಣಯವನ್ನು ತೆಗೆದುಕೊಳ್ಳುವ ತೀರ್ಮಾನ ಶಿಬಿರದಲ್ಲಿ ಆಗುತ್ತದೆ.” ಎಂದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದಯ್ ಕುಮಾರ್ ಶೆಟ್ಟಿ ಮಾತನಾಡಿ “ಕರಾವಳಿಯ ಸಾಂಸ್ಕೃತಿಕ…
ದಿನಕರ ದೇಸಾಯಿಯವರ ಬಳಿಕ ಚುಟುಕು ಸಾಹಿತ್ಯವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡವರಲ್ಲಿ ಹಿರಿಯ ಕವಿ ಗೋಪಾಲಕೃಷ್ಣ ಶಗ್ರಿತ್ತಾಯರೂ ಒಬ್ಬರು. ‘ತೊದಲ್ನುಡಿ’, ‘ಕಂದನ ಕವನಗಳು’, ‘ನೂರೊಂದು ಚುಟುಕುಗಳು’, ’76 ಚುಟುಕುಗಳು’, ‘ಚುಟುಕು-ಗುಟುಕು’, ‘ಒಳ್ನುಡಿಗಳು’, ‘ಚಿಂತನ ಲಹರಿ’, ‘ಗಾಳಿಪಟ’, ‘ಚುಟುಕು ಲೋಕ’ ಮುಂತಾದ ಸಂಕಲನಗಳನ್ನು ಪರಿಶೀಲಿಸಿದರೆ ಕವಿಯ ಚೇತನವು ಕ್ರಮವಾಗಿ ವಿಕಾಸ ಹೊಂದುತ್ತಾ ಪ್ರಬುದ್ಧತೆ ಮತ್ತು ಸಾರ್ಥಕತೆಯ ಕಡೆ ಸಾಗಿರುವುದು ವ್ಯಕ್ತವಾಗುತ್ತದೆ. ‘ಚುಟುಕು ಲೋಕ’ ಸಂಕಲನದ ಮೊದಲ ನಲುವತ್ತು ಚುಟುಕಗಳು ಕವಿಯ ರಸಿಕತೆ, ಬೆರಗು ಮತ್ತು ಉತ್ಸಾಹಗಳ ಪ್ರತೀಕವಾಗಿದೆ. ನಯವಾದ, ನವಿರಾದ ಬಣ್ಣ ಬಣ್ಣದ ಭಾವನೆಗಳು ಸರಳ ಸವಿ ಮಾತುಗಳಲ್ಲಿ ಮೈದಾಳಿದರೂ ಆದರ್ಶ, ಭರವಸೆ, ಕಲ್ಪನೆಗಳಿಗೆ ವಿಮುಖವಾಗದೆ ವಾಸ್ತವ ಜಗತ್ತಿನ ಓರೆಕೋರೆಗಳನ್ನು ಗಮನಿಸುವ, ಅದರ ಬಗ್ಗೆ ಸಾತ್ವಿಕ ರೋಷವನ್ನು ತಳೆಯುವ ನಿಲುವು ಮುಖ್ಯವಾಗುತ್ತದೆ. ವಸ್ತುವಿನ ಆಯ್ಕೆಯಲ್ಲಿ ತಂದುಕೊಂಡ ವ್ಯಾಪಕತೆ, ಧೋರಣೆಯಲ್ಲಿ ಕಾಣಿಸಿಕೊಳ್ಳುವ ಸಾಮಾಜಿಕ ಕಾಳಜಿ, ವಿಡಂಬನೆಯ ತೀಕ್ಷ್ಣತೆ ಮತ್ತು ವಿನ್ಯಾಸದಲ್ಲಿ ಅಳವಡಿಸಿಕೊಂಡ ಮುಕ್ತಛಂದಸ್ಸುಗಳನ್ನು ಗಮನಿಸಿದರೆ ಅವರು ದಿನಕರ ದೇಸಾಯಿಯವರ ಪರಂಪರೆಯನ್ನು ಮುಂದುವರಿಸುವಂತೆ ಕಂಡರೂ ಹಲವು ರಚನೆಗಳು…
ಮಂಗಳೂರು : ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ (ರಿ.) ಇದರ ‘ದಶಮ ಸಂಭ್ರಮ’ವು ದಿನಾಂಕ 11-05-2024ರಿಂದ 13-05-2024ರವರೆಗೆ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ. ದಿನಾಂಕ 11-05-2024ರಂದು ಬೆಳಗ್ಗೆ ಗಂಟೆ 7-15ಕ್ಕೆ ಶ್ರೀ ಅಮೃತೇಶ್ವರ ಸಾನಿಧ್ಯದಲ್ಲಿ ಗೆಜ್ಜೆ ಪೂಜೆ, ಗಂಟೆ 8-00ರಿಂದ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದಲ್ಲಿ ಭಾಗವತಿಕೆ ತರಬೇತಿ ಪಡೆಯುತ್ತಿರುವ ಕಟೀಲು ಮೇಳದ ಪ್ರಸಿದ್ಧ ಭಾಗವತರಾದ ಶ್ರೀ ಶ್ರೀನಿವಾಸ ಬಳ್ಳಮಂಜ ಇವರ ಶಿಷ್ಯ ವೃಂದದವರಿಂದ ‘ಯಕ್ಷ ಗಾನ ವೈಭವ’ ಮತ್ತು ಗಂಟೆ 9-00ರಿಂದ ಕೃಷಿ ಮೇಳದ ಹಾಗೂ ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 12-30ರಿಂದ ಆಳ್ವಾಸ್ ವಿದ್ಯಾ ಸಂಸ್ಥೆಯ ಯಕ್ಷಗಾನ ವಿದ್ಯಾರ್ಥಿಗಳಿಂದ ‘ಹನುಮ ಒಡ್ಡೋಲಗ’, ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಿಂದ ‘ಯಕ್ಷಗಾನ ಹಾಸ್ಯ ವೈಭವ’, ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ರಂಗಪ್ರವೇಶ ಮತ್ತು ‘ಮೇದಿನಿ ನಿರ್ಮಾಣ ಮಹಿಷ ವಧೆ’ ಮತ್ತು ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ದಿನಾಂಕ 12-05-2024ರಂದು ಬೆಳಗ್ಗೆ ಗಂಟೆ…
ಕುಂದಾಪುರ : ಅರೆಹೊಳೆ ಪ್ರತಿಷ್ಠಾನ ಮತ್ತು ನಂದಗೋಕುಲ ಜಂಟಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ‘ಋತುಮಾನ’ ರಂಗ ತರಬೇತಿ ಕಾರ್ಯಾಗಾರದ ಸಮಾರೋಪ ಮತ್ತು ನಂದಗೋಕುಲ ನೃತ್ಯ ತರಗತಿಯ ವಾರ್ಷಿಕೋತ್ಸವ ‘ನೃತ್ಯವರ್ಷ 2024’ ಕಾರ್ಯಕ್ರಮವು ದಿನಾಂಕ 10-05-2024ರಂದು ಅರೆಹೊಳೆಯ ಡಾ. ಹಂದಟ್ಟು ಹರೀಶ್ ಹಂದೆ ರಂಗಮಂದಿರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ನಂದಗೋಕುಲ ನೃತ್ಯ ತರಗತಿಯ ವಿದ್ಯಾರ್ಥಿನಿಯರಿಂದ ‘ನೃತ್ಯ ಸಂಕಲನ’ ಮತ್ತು ಕಾರ್ಯಾಗಾರದ ಶಿಬಿರಾರ್ಥಿಗಳಿಂದ ಎಚ್.ಎಸ್. ಶಿವಪ್ರಕಾಶ್ ರಚನೆಯ ರೋಹಿತ್ ಬೈಕಾಡಿ ನಿರ್ದೇಶನದಲ್ಲಿ ‘ಮದುವೆ ಹೆಣ್ಣು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಹುಬ್ಬಳ್ಳಿ : ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಲೋಕವೇದ ಇತ್ಯಾದಿ ಕ್ಷೇತ್ರಕ್ಕೆ ಹಾಗೂ ತಮ್ಮ ಸುತ್ತಲ ಸಮಾಜಕ್ಕೆ ಅಪಾರ ದೇಣಿಗೆ, ಸೇವೆ ನೀಡಿಯೂ ಕೊಂಕಣಿ ಭಾಷಾ ಸಮೂಹದಿಂದ ಗುರುತಿಸಲ್ಪಡದ ಅಪಾರ ಸಾಧಕರು ನಮ್ಮ ನಡುವೆ ಇದ್ದಾರೆ. ಅವರು ಕೊಂಕಣಿ ಭಾಷೆಗೆ 30ರಿಂದ 50 ವರ್ಷಗಳ ಕಾಲ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ. ಆದರೂ ನಾನಾ ಕಾರಣಗಳಿಂದ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕದಲ್ಲಿರುವ ಇಂಥಹ ಕೊಂಕಣಿ ಸಾಧಕರನ್ನು ಗುರುತಿಸಿ ಗೌರವಿಸಬೇಕೆನ್ನುವ ಉದ್ದೇಶದಿಂದ ಹುಬ್ಬಳ್ಳಿಯಿಂದ ನಿಯಮಿತವಾಗಿ ಪ್ರಕಟಗೊಳ್ಳುತ್ತಾ ಇದೀಗ ಪ್ರಕಟಣೆಯ 35 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿಯಮಿತ ಪ್ರಕಟಣೆಯ 36ನೇ ವರ್ಷಕ್ಕೆ ಪಾದಾರ್ಪಣೆಗೊಂಡಿರುವ ‘ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆ’ಯು 2022ರಿಂದ ವಯೋವೃದ್ಧ ಕೊಂಕಣಿ ಭಾಷಾ ಸಾಧಕರನ್ನು ಆಯ್ಕೆ ಮಾಡಿ ‘ಸರಸ್ವತಿ ಪ್ರಭಾ ಪುರಸ್ಕಾರ’ವನ್ನು ನೀಡುತ್ತಾ ಬಂದಿದೆ. 2024ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಕುಂದಾಪುರದ 75 ವರ್ಷ ಪ್ರಾಯದ, ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಅವರನ್ನು ಆಯ್ಕೆ ಮಾಡಲಾಗಿದೆ.…
ಬಿ.ಸಿ. ರೋಡ್ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು- ಬಂಟ್ವಾಳ ತಾಲೂಕು ಘಟಕದ ಪ್ರಥಮ ವಾರ್ಷಿಕೋತ್ಸವು ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ 07-05-2024ರಂದು ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಬಿ.ಸಿ. ರೋಡ್, ರಂಗಭೂಮಿ ಕಲಾವಿದ ರಮಾ ಬಿ.ಸಿ. ರೋಡ್, ನಾಟಿವೈದ್ಯೆ ಶ್ರೀಮತಿ ಮೀನಾಕ್ಷಿ ಆಚಾರ್ಯ ಇವರನ್ನು ಗೌರವ ಧನದೊಂದಿಗೆ ಸಂಮಾನಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವರಾದ ಬಿ. ರಮಾನಾಥ ರೈ ಮುಖ್ಯ ಅಭ್ಯಾಗತರಾಗಿದ್ದರು. ಬಂಟ್ವಾಳ ಘಟಕದ ವತಿಯಿಂದ ಪಟ್ಲ ಫೌಂಡೇಶನ್’ನ ಕೇಂದ್ರೀಯ ಸಮಿತಿಗೆ ರೂ. 50,000/- ದೇಣಿಗೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಪಟ್ಲ ಯಕ್ಷಾಶ್ರಯ ಯೋಜನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರು ಒಂದು ಮನೆ ನಿರ್ಮಾಣದ ವೆಚ್ಚವನ್ನು ನೀಡುವುದಾಗಿ ಘೋಷಿಸಿದರು. ಘಟಕದ ಅಧ್ಯಕ್ಷರಾದ ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿ, ಪ್ರಧಾನ…
ಕಾಸರಗೋಡು : ಬೇಕಲದ ಗೋಕುಲಂ ಗೋಶಾಲೆಯಲ್ಲಿ ದಿನಾಂಕ 08-05-2024ರಿಂದ 16-05-2024ರ ತನಕ ಗೆಜ್ಜೆಯ ನಾದ ಕೇಳಿಬರಲಿದೆ. ಕಾಸರಗೋಡು ಜಿಲ್ಲೆಯ ಮೊದಲ ದೇಶೀಯ ನೃತ್ಯೋತ್ಸವ ಇದಾಗಿದ್ದು, ಪ್ರತೀವರ್ಷ ದೀಪಾವಳೀ ಸಂಗೀತೋತ್ಸವವನ್ನು ನಡೆಸಲಾಗುತ್ತಿದೆ. ಈ ಬಾರೀ ಅದಕ್ಕೂ ಮೊದಲು ಒಂಭತ್ತು ದಿನಗಳ ದೇಶೀಯ ನೃತ್ಯೋತ್ಸವ ಜರಗಲಿದೆ. ಪ್ರತೀದಿನ ಸಂಜೆ 5ರಿಂದ 9 ಗಂಟೆಯ ತನಕ ನಡೆಯುವ ನೃತ್ಯೋತ್ಸವದಲ್ಲಿ ದೇಶದ ಹೆಸರಾಂತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರತೀವರ್ಷ ಪೆರಿಯ ಗೋಕುಲಂ ಗೋಶಾಲೆಯಲ್ಲಿ ದೀಪಾವಳಿ ಸಂಗೀತೋತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು ಭಾರತದ ನಾನಾ ಭಾಗಗಳಿಂದ ನುರಿತ ಸಂಗೀತ ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೃತ್ಯಕಲಾವಿದರಿಗೂ ಅವಕಾಶವನ್ನು ಕಲ್ಪಿಸುವ ಸಲುವಾಗಿ ದೇಶೀಯ ನೃತ್ಯೋತ್ಸವ 9 ದಿನಗಳ ಕಾಲ ನಡೆಯಲಿದೆ. ದಿನಾಂಕ 08-05-2024ರಂದು ಸಂಜೆ 5ರಿಂದ ಗಾಯತ್ರಿ ರಾಜಾಜಿ, ತೀರ್ಥ ಇ.ಪೊದುವಾಳ್, ವರ್ಷಾ ರಾಜಕುಮಾರ್, ಕಲಾಕ್ಷೇತ್ರ ಎಂ.ಎಸ್. ಸನೀಶ್ ಅವರಿಂದ ಭರತನಾಟ್ಯ ನಡೆಯಲಿದೆ. ಮೇ.16ರ ತನಕ ಮುಂದುವರಿಯಲಿರುವ ನೃತೋತ್ಸವದಲ್ಲಿ ದೇಶದ ನಾನಾ ಭಾಗಗಳ 372 ಮಂದಿ ನೃತ್ಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪೆರಿಯ ಗೋಕುಲಂ…