Author: roovari

ಪುತ್ತೂರು : ಸಂಘಟನೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸಾರ ಜೋಡುಮಾರ್ಗ ಸಂಸ್ಥೆಯ ನೇತೃತ್ವದಲ್ಲಿ ನಾಲ್ಕು ದಿನಗಳ ‘ಅಟ್ಟಾಮುಟ್ಟಾ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11-05-2024ರಿಂದ 14-05-2024ರವರೆಗೆ ಪುತ್ತೂರಿನ ಲಯನ್ಸ್‌ ಹಾಲ್‌ ನಲ್ಲಿ ನಡೆಯಲಿದೆ. ಬೆಳಿಗ್ಗೆ 9.30ರಿಂದ ಸಂಜೆ 4ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಯೋಗ, ರಂಗಾಟಗಳು, ಕರಕುಶಲ ಕಲೆ, ಚಿತ್ರಕಲೆ, ವಿಜ್ಞಾನ ಲೋಕ, ಹೊರಸಂಚಾರ, ಕಥೆಗಳ ಪ್ರಪಂಚ, ಶಿಶುಗೀತೆ, ಜಾಗೃತಿ ಗೀತೆ ಹಾಗೂ ರಂಗ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಬಿರದ ಭಾಗವಾಗಿ ಮಕ್ಕಳಿಂದ ಪುತ್ತೂರು ನಗರ ಪೊಲೀಸ್‌ ಠಾಣೆ ಹಾಗೂ ಪುತ್ತೂರು ಸಂಚಾರ ಪೊಲೀಸ್‌ ಠಾಣೆಗಳ ಭೇಟಿ ನಡೆಸಲಾಗುವುದು, ದಿನಾಂಕ 13-05-2024ರ ಸೋಮವಾರ ಅಪರಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಕಿಲ್ಲೆ ಮೈದಾನ ಸಮೀಪ ‘ಮಕ್ಕಳ ಸಂತೆ’ಯನ್ನೂ ಆಯೋಜಿಸಲಾಗಿದೆ. ಜ್ಞಾನ ಬೆಳಕು ಬಳಗ, ಲಯನ್ಸ್‌ ಕ್ಲಬ್‌ ಪುತ್ತೂರು ಹಾಗೂ ರೋಟರಿ ಪುತ್ತೂರು ಎಲೈಟ್‌ ಶಿಬಿರದ ಆಯೋಜನೆಗೆ ನೆರವು ನೀಡಲಿದೆ. 8ರಿಂದ 14 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು…

Read More

ಕೋಟ : ಬೆಂಗಳೂರಿನ ಪ್ರಸಿದ್ದ ಯಕ್ಷಗಾನ ತಂಡವಾದ ಯಕ್ಷದೇಗುಲ ತಂಡದವರಿಂದ ಉಡುಪಿ ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ 09-05-2024ರಂದು ಸಂಜೆ 7-30ಕ್ಕೆ ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಧುಕುಮಾರ್ ಬೋಳಾರ್ ವಿರಚಿತ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಲಾವಿದರಾಗಿ ಹಿಮ್ಮೇಳದಲ್ಲಿ ಲಂಬೋದರ ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ ಭಾಗವಹಿಸುತ್ತಾರೆ. ಮುಮ್ಮೇಳದಲ್ಲಿ ಸುಜಯೀಂದ್ರ ಹಂದೆ, ಕಡಬಾಳ ಉದಯ ಹೆಗಡೆ, ತಮ್ಮಣ್ಣ ಗಾಂವ್ಕರ್, ಆದಿತ್ಯ ಭಟ್, ಕ್ಯಾದಿಗೆ ಮಹಾಬಲೇಶ್ವರ ಭಟ್, ಸ್ಪೂರ್ತಿ ಭಟ್, ರಾಜು ಪೂಜಾರಿ, ನಾಗರಾಜ್ ಪೂಜಾರಿ ಇನ್ನಿತರರೂ ಭಾಗವಹಿಸಲಿದ್ದಾರೆ.

Read More

ಮಂಗಳೂರು : ಶಾಂತಿ ಕಲಾ ಕೇಂದ್ರ ಬಜ್ಪೆ ಹಾಗೂ ಸಾಧನಾ ಸಂಗೀತ ಪ್ರತಿಷ್ಠಾನ (ರಿ.) ಪುತ್ತೂರು ಇವುಗಳ ಸಹಯೋಗದಲ್ಲಿ ‘ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ’ವು ದಿನಾಂಕ 11-05-2024 ಮತ್ತು 12-05-2024ರಂದು ಕಟೀಲು ದೇವಸ್ಥಾನದ ಶಾಲಾ ವಠಾರದಲ್ಲಿ ಹಾಗೂ ‘ಗೋಷ್ಠಿ ಗಾಯನ’ವು ದಿನಾಂಕ 13-05-2024ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಪುತ್ತೂರಿನ ವಿದುಷಿ ಸುಚಿತ್ರ ಹೊಳ್ಳ ಇವರು ಸಂಪನ್ಮೂಲ ವ್ಯಕ್ತಿಯಾಗಿ ಸಂಗೀತ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448365113 ಮತ್ತು 7975105367 ಸಂಪರ್ಕಿಸಿರಿ.

Read More

ಬೆಂಗಳೂರು : 2024ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಮನೋಹರಿ ಪಾರ್ಥಸಾರಥಿ ‘ಮನುಶ್ರೀ ದತ್ತಿ ಪ್ರಶಸ್ತಿ’ಗೆ ಹಿರಿಯ ಲೇಖಕ ಪ. ರಾಮಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀಮತಿ ಮನೋಹರಿ ಪಾರ್ಥಸಾರಥಿಯವರು ಈ ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಬರಹಗಾರರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಬೆಳ್ತಂಗಡಿಯ ತೆಂಕಕಾರಂದೂರಿನವರಾದ ಪ. ರಾಮಕೃಷ್ಣ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಕಂಡ ವಿಶಿಷ್ಟ ಲೇಖಕರು. ವೃತ್ತಿಯಲ್ಲಿ ಕೃಷಿಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಕರು. 1964ರಿಂದ ಹಿಡಿದು ಇಂದಿನವರೆಗೂ ದಣಿವರಿಯದೆ ನಿರಂತರವಾಗಿ ಬರೆಯುತ್ತಾ ಬರುತ್ತಿರುವ ಇವರ ಹನ್ನೆರಡು ಸಾವಿರಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ವಿವಿಧ ಪ್ರಾಕಾರದಲ್ಲಿ 104 ಕೃತಿಗಳು ಅಚ್ಚಾಗಿವೆ. ಇದರಲ್ಲಿ ಮಕ್ಕಳಿಗಾಗಿಯೇ 50 ಕಥಾ ಸಂಕಲನಗಳಿರುವುದು ವಿಶೇಷ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಕಥೆ-ಕಾದಂಬರಿಗಳನ್ನು ಬರೆದಿರುವ ಇವರು ವಿಜ್ಞಾನ, ಅಧ್ಯಾತ್ಮ, ವೈಚಾರಿಕ ಕ್ಷೇತ್ರಗಳಲ್ಲಿಯೂ ಬರಹಗಳನ್ನು ಮಾಡಿದ್ದಾರೆ. ಮೂವತ್ತಕ್ಕೂ ಹೆಚ್ಚು ವಿವಿಧ ಪುರಸ್ಕಾರಗಳನ್ನು ಪಡೆದಿರುವ ರಾಮಕೃಷ್ಣ ಶಾಸ್ತ್ರಿಗಳು…

Read More

ಕನ್ನಡದ ಮಹತ್ವದ ಸಂಶೋಧಕರಲ್ಲೊಬ್ಬರಾದ ಡಾ. ಶ್ರೀಧರ ಎಚ್. ಜಿ ಅವರು ಪ್ರಾಧ್ಯಾಪಕ ಹುದ್ದೆಯ ಜೊತೆಗೆ ಸಾಹಿತ್ಯ ವಿಮರ್ಶೆ, ಸಂಪಾದನೆ, ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು. ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದರೂ ಸಂಶೋಧನೆಯ ಮೇಲಿನ ಆಸಕ್ತಿ ಇನ್ನೂ ಬತ್ತಿಲ್ಲ ಎನ್ನುವುದಕ್ಕೆ ಇವರು ಇತ್ತೀಚೆಗೆ ಹೊರತಂದ ‘ಶಾಸ್ತ್ರ ಸಂಕಲ್ಪ’ವೇ ಸಾಕ್ಷಿ. ವಿಶೇಷ ಒಳನೋಟಗಳಿಂದ ಕೂಡಿದ ಈ ಕೃತಿಯು ಕನ್ನಡ ಸಂಶೋಧನಾ ಜಗತ್ತಿನಲ್ಲಿ ಹೊಸ ಭಾಷ್ಯವನ್ನು ಬರೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ವ್ಯಕ್ತಿಯ ಪ್ರತಿಭೆಯು ಪ್ರಕಟಗೊಂಡಾಗ ಆಯಾ ಕಾಲದ ಸನ್ನಿವೇಶ ಮತ್ತು ಪರಿಣಾಮಗಳು ಚಾರಿತ್ರಿಕ ದಾಖಲೆಗಳಾಗಿ ಉಳಿಯುತ್ತವೆ. ಅವುಗಳು ಆ ಸಂದರ್ಭದ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಮತ್ತು ಬದುಕಿನ ಮೌಲ್ಯಗಳ ಅಭಿವ್ಯಕ್ತಿಯಾಗಿರುವುದರಿಂದ ಅವುಗಳ ಅಧ್ಯಯನ ನಿರಂತರವಾಗಿರುತ್ತವೆ. ಒಮ್ಮೆ ಓದಿದಾಗ ಗಮನಕ್ಕೆ ಬಾರದಿದ್ದ ವಿಚಾರವು ಮರು ಓದಿನ ಬಳಿಕ ಥಟ್ಟನೆ ಹೊಳೆದು, ಮೊದಲು ಅರ್ಥೈಸಿಕೊಂಡಿದ್ದ ವಿಚಾರ ಇನ್ನಷ್ಟು ಸ್ಫುಟಗೊಂಡಾಗ ಇಂಥ ಅಧ್ಯಯನ ಸಾರ್ಥಕವಾಗುತ್ತದೆ. ವಿಶ್ವದ ಎಲ್ಲ ಗ್ರಂಥಸ್ಥ ಭಾಷೆಗಳ ಜೀವನದಿ…

Read More

ಮಂಗಳೂರು : ಮಾಂಡ್‌ ಸೊಭಾಣ್‌ ಆಯೋಜಿಸಿದ ನವದಿನಗಳ ಮಕ್ಕಳ ರಜಾ ಶಿಬಿರ ʻವೋಪ್‌ʼ ಇದರ ಸಮಾರೋಪ ಸಮಾರಂಭವು ದಿನಾಂಕ 05-05-2024ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲಾಂಗಣ ಆಡಳಿತ ಸಮಿತಿ ಅಧ್ಯಕ್ಷ ರೊನಾಲ್ಡ್‌ ಮೆಂಡೊನ್ಸಾ ಮಾತನಾಡಿ “ಇದುವರೆಗೆ ಇಂತಹ ಶಿಬಿರಗಳಿಂದ ಸಾವಿರಾರು ಪ್ರತಿಭೆಗಳು ಬೆಳಕಿಗೆ ಬಂದಿವೆ. ಈ ಮೂಲಕ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಶ್ರಮ ಪಡುತ್ತಿರುವ ಮಾಂಡ್‌ ಸೊಭಾಣ್‌ ಪದಾಧಿಕಾರಿಗಳು ಮತ್ತು ತರಬೇತುದಾರರನ್ನು ಅಭಿನಂದಿಸುತ್ತೇನೆ.” ಎಂದು ಹೇಳಿದರು. ಶಿಬಿರದಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿದರು. ಶಿಬಿರ ಶ್ರೇಷ್ಟಳಾಗಿ ಜಿಯಾನ್ನಾ ಫರ‍್ನಾಂಡಿಸ್‌ ಪಾಲಡ್ಕಾ ರೂಪಾಯಿ 3೦೦೦/-, ವಿಭಾಗಗಳ ಶ್ರೇಷ್ಠರಾಗಿ ಶರ್ಲಿನ್ ಪಿಂಟೊ ಬೊಂದೆಲ್‌ (ನೃತ್ಯ), ಆಲನಿ ದಾಂತಿ ಪರ‍್ನಾಲ್‌ (ನಾಟಕ), ವಿಯೊನಾ ಜಾನಿಸ್‌ ಪಿಂಟೊ (ಗಾಯನ) ಮತ್ತು ಸಂಜನಾ ರಿವಾ ಮತಾಯಸ್ (ಕೊಂಕಣಿ) ಆಯ್ಕೆಯಾದರು. ಎಲ್ಲರಿಗೂ ತಲಾ ರೂಪಾಯಿ 2೦೦೦/- ನಗದು ಬಹುಮಾನ ನೀಡಲಾಯಿತು. ಗೌರವ ಅತಿಥಿಯಾಗಿ ಆಗಮಿಸಿದ ಡಾ. ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯ…

Read More

ಪುತ್ತೂರು : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇದರ ವತಿಯಿಂದ ನೀಡಲಾಗುತ್ತಿರುವ ಮೂರನೇ ವರ್ಷದ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ, ಸಾಧಕರಿಗೆ ಅಭಿನಂದನೆ, ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ವಾರ್ಷಿಕ ಮಹಾಸಭೆಯು ದಿನಾಂಕ 04-05-2024ರಂದು ಜೈನ ಭವನ ಸಭಾಂಗಣದಲ್ಲಿ ನಡೆಯಿತು. 2024ನೇ ಸಾಲಿನಲ್ಲಿ ಸಂಘದ ವತಿಯಿಂದ ನೀಡಲಾಗುತ್ತಿರುವ ‘ಸ್ವರ್ಣ ಸಾಧನಾ ಪ್ರಶಸ್ತಿ’ಯನ್ನು ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕ, ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ನೀಡಲಾಯಿತು. ಸುಬ್ರಾಯ ಚೊಕ್ಕಾಡಿ ಹಾಗೂ ಲಕ್ಷ್ಮೀ ದಂಪತಿಯನ್ನು ಪ್ರಶಸ್ತಿಯೊಂದಿಗೆ ರೂ.15 ಸಾವಿರ ನಗದು, ಫಲಕ, ಸ್ಮರಣಿಕೆ, ಫಲಪುಷ್ಪಗಳೊಂದಿಗೆ ಗೌರವಿಸಲಾಯಿತು. ಕ್ಯಾಂಪ್ಲೋ ನಿವೃತ್ತ ಆಡಳಿತ ನಿರ್ದೇಶಕ ಕೆ. ಪ್ರಮೋದ್ ಕುಮಾರ್ ರೈ ಪ್ರಶಸ್ತಿ ಪ್ರದಾನ ಮಾಡಿದರು. ಸುಬ್ರಾಯ ಚೊಕ್ಕಾಡಿ ಕೃತಜ್ಞತೆ ಸಲ್ಲಿಸಿದರು. ಅಭಿನಂದನಾ ಭಾಷಣ ಮಾಡಿದ ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ. “ಪ್ರಕೃತಿಯೊಂದಿಗೆ ಮಾತನಾಡಲು ಮನೋಧರ್ಮ ಬೇಕು. ಕಾವ್ಯ ಪರಂಪರೆಯ ಮೂಲಕ ಅವರು ನಮ್ಮನ್ನು ಸೆಳೆದಿದ್ದಾರೆ. ತಮ್ಮ ಮನೆಯ ಎದುರಿನ ಒಂದು…

Read More

ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ಸುರತ್ಕಲ್ ರೋಟರಿ ಕ್ಲಬ್ ಪ್ರಾಯೋಜಕತ್ವದ ಸುರತ್ಕಲ್ ಫೈ ಓವರ್ ಕೆಳಗಡೆ ಉದಯರಾಗ – 53 ಶಾಸ್ತ್ರೀಯ ಸಂಗೀತದ ಸರಣಿ ಕಾರ್ಯಕ್ರಮವು ದಿನಾಂಕ 05-05-2024ರ ಭಾನುವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುರತ್ಕಲ್ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ “ಶಾಸ್ತ್ರೀಯ ಸಂಗೀತದಿಂದ ಪರಿಪೂರ್ಣ ಅನುಭವದ ಆನಂದ ಲಭ್ಯವಾಗುತ್ತದೆ. ಸಾಮಾಜಿಕ ಸೇವಾ ಸಂಸ್ಥೆಗಳು ಆದ್ಯತೆಯ ನೆಲೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು.’ ಎಂದು ನುಡಿದರು. ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್ ಕುಳಾಯಿ ಶುಭ ಹಾರೈಸಿದರು. ಉಡುಪಿಯ ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ, ಆರಾಧನ ಕಲಾಭವನ ಸಾರಡ್ಕದ ಶಂಕರ್ ಸಾರಡ್ಕ, ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಉಪಸ್ಥಿತರಿದ್ದರು. ಗೀತಾ ಸಾರಡ್ಕ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಇವರಿಗೆ ಅನನ್ಯ ಪಿ. ಎಸ್. ಪುತ್ತೂರು ವಯಲಿನ್‌ನಲ್ಲಿ ಹಾಗೂ ಹರಿಕೃಷ್ಣ ಪಾವಂಜೆ ಮೃದಂಗದಲ್ಲಿ…

Read More

ಬೆಂಗಳೂರು : ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ವಿಜಯನಗರ ಬಿಂಬ, ರಂಗ ಶಿಕ್ಷಣ ಕೇಂದ್ರದವರು ಕಳೆದ ಇಪ್ಪತ್ತೆಂಟು ವರ್ಷಗಳಿಂದ ಮಕ್ಕಳಿಗಾಗಿ ಮಕ್ಕಳ ಬೇಸಿಗೆ ಶಿಬಿರಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಈ ವರ್ಷದ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 29-03-2024ರಂದು ಪ್ರಾರಂಭವಾಗಿ ದಿನಾಂಕ 01-05-2024ರಂದು ಮುಕ್ತಾಯವಾಯಿತು. 3 ವರ್ಷದಿಂದ 8 ವರ್ಷದ ಮಕ್ಕಳಿಗಾಗಿ ‘ಚಿಣ್ಣರ‌ ಚಿತ್ತಾರ’ ಮತ್ತು 8ರಿಂದ 15 ವರ್ಷದ ಮಕ್ಕಳಿಗಾಗಿ ‘ಚಿಣ್ಣರ ಚಾವಡಿ’ ಈ ಶೀರ್ಷಿಕೆಗಳ ಅಡಿಯಲ್ಲಿ ಬೇಸಿಗೆ ಶಿಬಿರಗಳು ನಡೆಯತ್ತವೆ. ಈ ಎರಡೂ ಶಿಬಿರಗಳಲ್ಲೂ ಮಕ್ಕಳ ವಯೋಮಾನಕ್ಕೆ ತಕ್ಕಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಮನೋವಿಕಾಸಕ್ಕೆ, ಬೌದ್ಧಿಕ ಬೆಳವಣಿಗೆಗೆ ಅನಕೂಲಕರವಾಗುವಂತಹ ತರಗತಿಗಳು ನಡೆಯಿತು. ಚಿತ್ರಕಲೆ, ಕುಶಲ ಕಲೆ, ರಂಗ ಸಂಗೀತ, ಸುಗಮ ಸಂಗೀತ, ರಿದಂ, ಸಂವಾದ, ಪ್ರಶ್ನಾರ್ಥ ಪತ್ರಿಕಾಗೋಷ್ಠಿ, ಸಮೂಹ ಮಾಧ್ಯಮಗಳಾದ ದೂರದರ್ಶನ, ರೇಡಿಯೋ ಸೃಜನಶೀಲ ಮಾಧ್ಯಮಗಳಾದ ಅನಿಮೇಷನ್‌, ರೋಬೋಟಿಕ್ಸ್, ಪಬ್ಲಿಕ್ ಫೋರಂನಲ್ಲಿ ಮಕ್ಕಳಿಂದಲೇ ನಡೆದ ಹೊರಾಂಗಣ ಚಿತ್ರೀಕರಣ, ಮಕ್ಕಳೇ ಬರೆದ ಸ್ವರಚಿತ ಕವನಗಳ ವಾಚನ ಹೀಗೇ ಅನೇಕ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದವು.…

Read More

ತೆಕ್ಕಟ್ಟೆ: ‘ಶ್ವೇತಸಂಜೆ-25’ ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಕ್ರಿಯೇಷನ್ಸ್ ಜೋತೆಯಾಗಿ ಆಯೋಜಿಸಿಕೊಂಡಿರುವ ‘ರಜಾರಂಗು-24’ ಶಿಬಿರದಲ್ಲಿ “ತ್ರಿವಳಿ ನಾಟಕೋತ್ಸವ”ವು ದಿನಾಂಕ 06-05-2024 ರಂದು ನಡೆಯಿತು. ತ್ರಿವಳಿ ನಾಟಕೋತ್ಸವನ್ನು ಡೋಲು ಬಾರಿಸುವುದರ ಮೂಲಕ ಉದ್ಘಾಟಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಸಮಾಜವನ್ನು ಬೆಸೆಯುವ ಶಕ್ತಿ ರಂಗಭೂಮಿಗಿದೆ. ಬದುಕು ಕೃತವಾಗಿರಬಾರದು, ಸಹಜವಾಗಿರಬೇಕು. ಮರದಿಂದ ಮಾವಿನ ಹಣ್ಣನ್ನು ನಾವು ತಿನ್ನುವುದಿಲ್ಲ. ಮಾವು ಬೆಳೆಯುವ ಮುಂಚೆಯೇ ಬೆಳೆಯುವಂತೆ ಮಾಡಿ ತಿನ್ನುತ್ತೇವೆ. ಇದು ಕೃತಕತೆ. ಹರಿಯುವ ನೀರನ್ನು ಕಟ್ಟಿ ಬಳಸುವುದು ಕೃತಕತೆ. ಹಾಗೆಯೇ ರಂಗಭೂಮಿಯಲ್ಲೂ ಕೃತಕತೆ ಸುಳಿಯದಿರಲಿ. ವೇಷಭೂಷಣದಿಂದ ಹಿಡಿದು, ಭಾಷೆಯ ತನಕ ಸಹಜತೆಯನ್ನು ಕಂಡುಕೊಳ್ಳಲಿ. ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶಿಬಿರ ಸಹಕಾರಿಯಾಗಲಿ.” ಎಂದರು. ‘ಲಂಬಕರ್ಣಣ ಉಷ್ಣೀಷ’ ನಾಟಕ ನಿರ್ದೇಶಕರಾದ ರಂಜಿತ್ ಶೆಟ್ಟಿ ಕುಕ್ಕುಡೆಯವರನ್ನು ಅಭಿನಂದಿಸಿ ಮಾತನ್ನಾಡಿದ ರಂಗ ನಿರ್ದೇಶಕ ಸದಾನಂದ ಬೈಂದೂರು “ರಂಗಭೂಮಿ ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬಹಳ ದೊಡ್ಡ ಕ್ರಾಂತಿಯನ್ನು ಮೂಡಿಸಿದೆ. ಹಲವಾರು ಸಂಘ ಸಂಸ್ಥೆಗಳು ರಂಗಭೂಮಿಯ ಕಡೆಗೆ ಒಲವು…

Read More