Author: roovari

ಮೂಡುಬಿದಿರೆ: ಪುಸ್ತಕ ಓದುವ ಅಭಿರುಚಿ ಜತೆಗೆ ಶಿಕ್ಷಣ, ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಶುರುವಾದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ‘ಕ್ರಿಯೇಟಿವ್ ಪುಸ್ತಕ ಮನೆ’ ಮೂಡುಬಿದಿರೆಯಲ್ಲಿ ತನ್ನ ಎರಡನೇ ಪುಸ್ತಕ ಮಳಿಗೆಯನ್ನು ದಿನಾಂಕ 05-05-2024ರಂದು ಲೋಕಾರ್ಪಣೆ ಮಾಡಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಎಂ. ಮೋಹನ್ ಆಳ್ವ, ಎಕ್ಸಲೆಂಟ್ ಸಂಸ್ಥೆಯ ಮುಖ್ಯಸ್ಥರಾದ ಯುವರಾಜ್ ಜೈನ್ , ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಇವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ ಬಿ. , ಅಮೃತ್ ರೈ, ಅಶ್ವಥ್ ಎಸ್. ಎಲ್, ಆದರ್ಶ ಎಂ. ಕೆ. , ವಿಮಲ್ ರಾಜ್ ಜಿ. , ಗಣಪತಿ ಕೆ. ಎಸ್. ಇವರ ಉಪಸ್ಥಿತಿಯಲ್ಲಿ, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕದ ಪುಸ್ತಕ ಲೋಕದಲ್ಲಿ ‘ಕ್ರಿಯೇಟಿವ್ ಪುಸ್ತಕ ಮನೆ’ ಹೊಸ ಮೈಲುಗಲ್ಲು ಸಾಧಿಸಿದ್ದು, ಕರಾವಳಿಯಲ್ಲಿ ತನ್ನ ಎರಡನೇ ಮಳಿಗೆ ಶುರುಮಾಡಿದೆ. ನೂರಾರು…

Read More

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕಸಾಪ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ‘ಮತ ಹಾಕೋಣ ಬನ್ನಿ’ ಜಾಗೃತ ಕಾರ್ಯಕ್ರಮ ದಿನಾಂಕ 05-05-2024ರ ಭಾನುವಾರದಂದು ಶಿವಮೊಗ್ಗದ ಚಾಲುಕ್ಯ ನಗರ ಬಡಾವಣೆಯ ಸಾಹಿತ್ಯ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ರಾಜೇಶ್ವರಿ “ಕನ್ನಡ ಸಾಹಿತ್ಯ ಪರಿಷತ್ 109 ವರ್ಷ ಪೂರೈಸಿ ಸಶಕ್ತವಾಗಿ ಮುನ್ನಡೆಯುತ್ತಿರುವುದು ಕನ್ನಡಿಗರು ಹೆಮ್ಮೆಪಡುವ ವಿಷಯ. ಜಿಲ್ಲೆಯಲ್ಲಿ ಕನ್ನಡ ಪರ ಕಾರ್ಯಕ್ರಮಗಳು ನಿರಂತರವಾಗಿ, ವೈವಿಧ್ಯಮಯವಾಗಿ ಹಾಗೂ ಗುಣಮಟ್ಟದ ಚಟುವಟಿಕೆಗಳನ್ನು ನಡೆಸಲು ಪರಿಷತ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಂದೆ ಸಾಗುವುದು ಅಭಿನಂದನೀಯ. ಈ ಚಟುವಟಿಕೆಗಳಲ್ಲಿ ತಮ್ಮ ಸಹಭಾಗಿತ್ವವೂ ಮುಖ್ಯವಾಗುತ್ತದೆ. ಆಳಿವಿನಂಚಿನಲ್ಲಿರುವ ಜನಪದ ಕಲೆ ಉಳಿಸಬೇಕು. ಕಾಡಿಲ್ಲದೆ ಪರಿಸರ ನಾಶವಾಗುತ್ತಿದೆ. ಮನುಷ್ಯನ ಬದುಕು ಸಂಕಷ್ಟಕ್ಕೆ ಒಳಗಾಗಿದೆ.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ “ಪರಿಷತ್ತು ತನ್ನದೇ ಭವನ ಹೊಂದಿದೆ. ವಿಶಾಲ ನಿವೇಶನದಲ್ಲಿ ಕನಸಿನ ಸಾಹಿತ್ಯ ಗ್ರಾಮ ಯೋಜನೆ…

Read More

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಮತ್ತು ಪ್ರಥಮ ದರ್ಜೆ ಕಾಲೇಜು ಹೆಬ್ರಿಯ ಕನ್ನಡ ವಿಭಾಗದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 06-05-2024 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ವಿ. ಹಾಲ್ ನಲ್ಲಿ ನಡೆಯಿತು. ಕ.ಸಾ.ಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸುರೇಶ ಮರಕಾಲ ಉದ್ಘಾಟಿಸಿ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯದ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಬಳಿಕ ಮಾತನಾಡಿದ ಅವರು “ಸಾಹಿತ್ಯ ಕೃತಿಗಳ ಓದು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಒಬ್ಬ ಉತ್ತಮ ಕೇಳುಗ ಉತ್ತಮ ಭಾಷಣಕಾರನಾಗಬಲ್ಲ, ಒಬ್ಬ ಉತ್ತಮ ಓದುಗ ಉತ್ತಮ ಬರಹಗಾರನಾಗಬಲ್ಲ. ಉತ್ತಮ ಪುಸ್ತಕಗಳು ಬದುಕಿಗೆ ಪ್ರೇರಣೆಯನ್ನು ನೀಡುತ್ತವೆ. ಮಾರ್ಗದರ್ಶನ ಮಾಡುತ್ತವೆ. ನಿರಂತರ ಓದು ಬದುಕನ್ನು ರೂಪಿಸುತ್ತವೆ.” ಎಂಬುವುದನ್ನು ತಮ್ಮದೇ ಬದುಕಿನ ಉದಾಹರಣೆಗಳ ಮೂಲಕ ವಿವರಿಸಿದರು.…

Read More

ಕಲಬುರಗಿ : ವಿಶ್ವರಂಗ (ರಿ.) ಕಲಬುರಗಿ ಇದರ ವತಿಯಿಂದ ಅನುಭವಿ ರಂಗ ನಿರ್ದೇಶಕ ಡಾ. ವಿಶ್ವರಾಜ್ ಪಾಟೀಲರವರ ಸಾರಥ್ಯದಲ್ಲಿ ‘ಚಿಣ್ಣರ ಮೇಳ 2024’ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10-05-2024ರಿಂದ 30-05-2024ರವರೆಗೆ ಕಲಬುರಗಿಯ ಎಂ.ಎಂ.ಕೆ. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರಕ್ಕೆ 5ರಿಂದ 15 ವರ್ಷ ವಯೋಮಿತಿ ಮಕ್ಕಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ನೊಂದಣೆಗಾಗಿ ಸಂಪರ್ಕಿಸಿ 9901495905, 8660926667 ಮತ್ತು 7022220144.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ರಾಜ ಗೋಪುರದಲ್ಲಿ ತಿಂಗಳ ಸರಣಿ ಕಾರ್ಯಕ್ರಮ ಪ್ರಯುಕ್ತ ಬಲಿಪ ನಾರಾಯಣ ಭಾಗವತ ಸಂಪಾದಿತ ‘ಇಂದ್ರಜಿತು ಕಾಳಗ’ ಎಂಬ ತಾಳಮದ್ದಳೆಯು ದಿನಾಂಕ 06-05-2023ನೇ ಸೋಮವಾರದಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮಾಸ್ಟರ್ ಪರೀಕ್ಷಿತ್ ಮತ್ತು ಮಾಸ್ಟರ್ ಹರ್ಷ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಧರ್ ರಾವ್ ಕುಂಬ್ಳೆ, ಭಾಸ್ಕರ ಬಾರ್ಯ ಹಾಗೂ ದುಗ್ಗಪ್ಪ ನಡುಗಲ್ಲು (ಶ್ರೀ ರಾಮ), ಗುಂಡ್ಯಡ್ಕ ಈಶ್ವರ ಭಟ್ (ಹನೂಮಂತ), ಪಕಳಕುಂಜ ಶ್ಯಾಂ ಭಟ್ (ಇಂದ್ರಜಿತು), ಗುಡ್ಡಪ್ಪ ಬಲ್ಯ (ಲಕ್ಷ್ಮಣ), ಮಾಂಬಾಡಿ ವೇಣುಗೋಪಾಲ್ ಭಟ್ (ಮಾಯಾ ಸೀತೆ), ಶಾರದಾ ಅರಸ್ (ಜಾಂಬವ), ಕಿಶೋರಿ ದುಗ್ಗಪ್ಪ ನಡುಗಲ್ಲು (ವಿಭೀಷಣ) ಸಹಕರಿಸಿದರು. ಸಂಘದ ಅಧ್ಯಕ್ಷ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ್ ರಾವ್ ವಂದಿಸಿದರು.

Read More

ದಲಿತೋತ್ತರ ಕಾವ್ಯದ ದಿನಗಳ ಭರವಸೆಯ ಕವಿಯಾಗಿರುವ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ತೀವ್ರಗೊಳ್ಳುತ್ತಿರುವ ಸಾಮಾಜಿಕ ಕೋಲಾಹಲಗಳ ನಡುವೆ ಹೆಚ್ಚು ಅಬ್ಬರಿಸದೆ, ತಮ್ಮೊಳಗಿನ ಪ್ರತಿಭಟನೆಯ ಕಾವನ್ನು ಆರಲೂ ಬಿಡದೆ ಮೆಲುನುಡಿಗಳ ಅಲಗಿನ ಮೇಲೆ ಕವಿತೆಗಳನ್ನು ರಚಿಸುತ್ತಿರುವ ಕವಿ. ಕನಸುಗಾರ ಕವಿಗಳು ಎಚ್ಚರ ತಪ್ಪಿದರೆ ಕವಿತೆಗಳು ಬೀದಿ ಬದಿಯ ಭಾಷಣಗಳಾಗಿಯೋ ಬಣಗು ಕವಿಗಳ ಆತ್ಮಪ್ರತ್ಯಯದ ಕವಿತೆಗಳಾಗುವ ಅಪಾಯವಿರುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಅಸಹನೆಗಳು ಯಾವ ಸಭ್ಯತೆಯೂ ಇಲ್ಲದೆ ಬಹಿರಂಗವಾಗಿ ವ್ಯಕ್ತಗೊಳ್ಳುವ ನಂಜು ಮುಸುಕಿದ ಈ ವಾತಾವರಣದಲ್ಲಿ ಉಗ್ರವಾದಿಗಳಂತೆ ಅಥವಾ ಧರ್ಮಭೀರುಗಳಂತೆ ಎಲ್ಲವನ್ನೂ ಸರಳಗೊಳಿಸಿ ಪರಿಹಾರವನ್ನು ಸೂಚಿಸುವ ಕವಿತೆಗಳನ್ನು ಬರೆಯುವುದು ಸುಲಭ. ಇಂಥ ಕವಿತೆಗಳಲ್ಲಿ ಕನ್ನಡವೂ ಬಳಲುತ್ತಿರುವುದನ್ನು ಕಾಣಬಹುದು. ಅಂತೆಯೇ ಜನಪ್ರಿಯ ಮಾರ್ಗಗಳ ರೂಪನಿಷ್ಠೆಯನ್ನು ಮುರಿದು ಹೊಸ ದಾರಿಯ ಹುಡುಕಾಟದೆಡೆಗೆ ಹೊರಳುವ ಕಾವ್ಯವು ಆಳದಲ್ಲಿ ಕಲಾತ್ಮಕ ಸಿದ್ಧಿಯನ್ನು ಪಡೆದುಕೊಳ್ಳದೆ ಹಾಗೆಯೇ ಮುಂದುವರಿದರೆ ತನ್ನ ರೆಕ್ಕೆಗಳನ್ನು ತಾನೇ ಕಡಿದುಕೊಂಡಂತೆ ಎಂಬುದನ್ನು ಎಂಬತ್ತರ ದಶಕದಲ್ಲಿ ಹೊರಬಂದ ಕಾವ್ಯಗಳ ಅಧ್ಯಯನದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಈ ಎಲ್ಲಾ ತೊಡಕುಗಳ ಬಗ್ಗೆ…

Read More

ಮಂಗಳೂರು : ದ.ಕ. ಜಿಲ್ಲಾ ಕ.ಸಾ.ಪ. ಮಂಗಳೂರು ತಾಲೂಕು ಘಟಕದ ವತಿಯಿಂದ ಪರಿಷತ್ತಿನ ಸಂಸ್ಥಾಪನ ದಿನಾಚರಣಾ ಕಾರ್ಯಕ್ರಮವು ದಿನಾಂಕ 05-05-2024ರ ರವಿವಾರದಂದು ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜು ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆನರಾ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕಿಯಾದ ಶೈಲಜಾ ಪುದುಕೋಳಿ “ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಶಾಲೆ ಕಾಲೇಜುಗಳಲ್ಲಿ ಆಚರಿಸುವಂತಾಗಬೇಕು. ಈ ಮೂಲಕ ಇಂದಿನ ಯುವ ಜನತೆಯಲ್ಲಿ ಕನ್ನಡದ ಅಭಿಮಾನ ಮತ್ತು ಮಮತೆ ತುಂಬಬೇಕು. ಅದ್ಭುತವಾದ ಸಮಾಜಮುಖಿ ಕಾರ್ಯಗಳನ್ನು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯ‌ರ್ ದೇವ ದೂತರಂತೆ ಕಂಡುಬರುತ್ತಾರೆ. ಅವರ ಆಶಯದಂತೆ ಇಂದಿಗೂ ಪರಿಷತ್ತು ಕನ್ನಡದ ಧ್ವನಿಯಾಗಿ ಹತ್ತು ಹಲವು ಮಹತ್ತರ ಕಾರ್ಯಗಳನ್ನೆಸಗುತ್ತಾ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಶಾಲೆ ಹಾಗೂ ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡುವಲ್ಲಿ ಉತ್ಸಾಹ ತೋರುತ್ತಿರುವ ಮಂಗಳೂರು ತಾಲೂಕು ಘಟಕ ಅಭಿನಂದನಾರ್ಹ. ಕ.ಸಾ.ಪ. ಕನ್ನಡಿಗರ ಏಕತೆಯ ಸಂಕೇತ.” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಾಡೋಜ ಕಯ್ಯಾರರ ಪುತ್ರ, ನಿವೃತ್ತ ಪ್ರಾಧ್ಯಾಪಕ ಡಾ.…

Read More

ಉದ್ಯಾವರ : ಉದ್ಯಾವರ ಮಾಡ ಶ್ರೀ ದೈವಗಳ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಹರಿಕಥಾ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ ‘ಹರಿಕಥಾ ಸಪ್ತಾಹ’ದ ಉದ್ಘಾಟನಾ ಸಮಾರಂಭವು ದಿನಾಂಕ 01-05-2024ರಂದು ಉದ್ಯಾವರ ಮಾಡ ಶ್ರೀ ದೈವಗಳ ಕ್ಷೇತ್ರದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅರಸು ಮಂಜಿಸ್ನಾರ್ ಶ್ರೀ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಕಿರಣ್ ಶೆಟ್ಟಿ “ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಸಮಾಜಕ್ಕೆ ಭಕ್ತಿ ಶ್ರದ್ಧೆಗಳ ಸುಸಂಸ್ಕೃತ ಜೀವನ ಸಂದೇಶ ನೀಡುವ ಕಲೆ ಹರಿಕಥೆ ಆಗಿದೆ. ಜಾತ್ರೆಯಲ್ಲಿ ಬಂದು ಭಾಗವಹಿಸುವ ಭಕ್ತರಿಗೆ ಅದರ ಉದ್ದೇಶ ಮತ್ತು ಇನ್ನಷ್ಟು ಆಧ್ಯಾತ್ಮ ಸಂಗತಿಗಳ ತಿಳುವಳಿಕೆಗಾಗಿ ವಿವಿಧ ಹರಿಕಥಾ ಕಲಾವಿದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.” ಎಂದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅರಸು ಮಂಜಿಸ್ನಾರ್ ವ್ಯಾಯಾಮ ಶಾಲೆಯ ಅಧ್ಯಕ್ಷ ಸದಾನಂದ ಮಾಡ, ಶ್ರೀ ದೈವಗಳ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಮಾಡ, ನಿವೃತ್ತ ಅಧ್ಯಾಪಕ ಈಶ್ವರ ಮಾಸ್ಟರ್…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಮಠದ ಸಹಯೋಗದಲ್ಲಿ ‘ಯುವ ಸಂಗೀತೋತ್ಸವ 2024’ ಕಾರ್ಯಕ್ರಮವು ದಿನಾಂಕ 05-05-2024ರ ರವಿವಾರದಂದು ಮಂಗಳೂರಿನ ಮಂಗಳಾದೇವಿಯಲ್ಲಿರುವ ಶ್ರೀ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನೆರವೇರಿತು. ಖ್ಯಾತ ಯುವ ಗಾಯಕಿ ಸೂರ್ಯ ಗಾಯತ್ರಿ ಅವರ ಹಾಡುಗಾರಿಕೆ ಸಂಗೀತೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವರು ಶಾಸ್ತ್ರೀಯವಾದ ಹಲವು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಸುಮಾರು ಮೂರು ಗಂಟೆಗಳ  ಕಾಲ ಸಂಗೀತ ಕಾರ್ಯಕ್ರಮ ನೆರವೇರಿತು. ಸೂರ್ಯ ಗಾಯತ್ರಿಯ ಅಭಿಮಾನಿಗಳು ಹಾಗೂ ಸಂಗೀತ ಪ್ರೇಮಿಗಳು ಸಂಗೀತ ಆಸ್ವಾದಿಸಿದರು. ಸೂರ್ಯ ಗಾಯತ್ರಿ ಅವರಿಗೆ ವಯಲಿನ್ ನಲ್ಲಿ ಗಣರಾಜ ಕಾರ್ಲೆ, ಮೃದಂಗದಲ್ಲಿ ಅನಿಲ್ ಕುಮಾರ್ ವಡಗರ ಮತ್ತು ಘಟಂ ನಲ್ಲಿ ಮಂಜೂರ್ ಉಣ್ಣಿಕೃಷ್ಣನ್ ಸಾಥ್ ನೀಡಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಚಿನ್ಮಯಿ ವಿ. ಭಟ್ ಅವರಿಂದ ನಡೆದ ಹಾಡುಗಾರಿಕೆಗೆ ವಯಲಿನ್‌ನಲ್ಲಿ ಗೌತಮ್…

Read More

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಾಂಸ್ಕೃತಿಕ ಸಮಿತಿ ಹಾಗೂ ಕಲಾಕೇಂದ್ರದ ಸಹಯೋಗದೊಂದಿಗೆ ದಿನಾಂಕ 05-05-2024ರ ಭಾನುವಾರ ಸಂಜೆ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಎಸ್.ಡಿ.ಎಂ. ಕಲಾವೈಭವ ವಿದ್ಯಾರ್ಥಿಗಳ ತಂಡದಿಂದ ‘ಸುಧನ್ವ ಮೋಕ್ಷ’ ಎಂಬ ಒಂದು ಘಂಟೆ ಅವಧಿಯ ಯಕ್ಷಗಾನ ಪ್ರಸಂಗವು ಪ್ರದರ್ಶಿಸಲ್ಪಟ್ಟಿತು. ಹಿಮ್ಮೇಳದಲ್ಲಿ ಭಾಗವತಿಕೆ ಸಿಂಚನ ಮೂಡುಕೋಡಿ, ಚೆಂಡೆ ಆದಿತ್ಯ ಹೊಳ್ಳ ಮತ್ತು ಮದ್ದಳೆಯಲ್ಲಿ ಪುರಂದರ ನಾರಿಯ ಸಹಕರಿಸಿದರು. ಮುಮ್ಮೇಳದಲ್ಲಿ ಸೌರವ್ ಶೆಟ್ಟಿ – ಅರ್ಜುನನಾಗಿ, ಸೌಜನ್ಯ – ವೃಷಕೇತುವಾಗಿ, ಶ್ರುತಿ – ಪ್ರದ್ಯುಮ್ನನಾಗಿ, ಜಿ.ವಿ. ವಿಜೇತ್ – ಅನುಸಾಲ್ವನಾಗಿ, ಅಮೋಘ ಶಂಕರ್ – ದೂತನಾಗಿ, ಕೀರ್ತನ್ ಯು. ಹಂಸಧ್ವಜನಾಗಿ, ಜಿ. ಸುಬ್ರಹ್ಮಣ್ಯ – ಸುಧನ್ವನಾಗಿ, ಸಾಕ್ಷಿ ಎಂ.ಕೆ. – ಸುಗರ್ಭೆಯಾಗಿ, ದೀಪಶ್ರೀ – ಪ್ರಭಾವತಿಯಾಗಿ ಮತ್ತು ಪ್ರಾವಿಣ್ಯ – ಕೃಷ್ಣನಾಗಿ ಸಹಕರಿಸಿದರು. ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಶ್ರೀಮತಿ ಸೋನಿಯಾ ಯಶೋವರ್ಮ ಹಾಗೂ ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎ. ಕುಮಾರ ಹೆಗ್ಡೆ ಆಗಮಿಸಿದ್ದರು. ಊರಿನ ಗಣ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು,…

Read More