Author: roovari

ಬಂಟ್ವಾಳ : ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ದಿನಾಂಕ 05-05-2024ರಂದು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ಸಂಘಟಕ, ಕವಿ ಅಬೂಬಕರ್ ಅಮ್ಮುಂಜೆ “ಭಾಷೆಯನ್ನು ಸಮರ್ಪಕವಾಗಿ ಬಳಕೆ ಮಾಡಿ ಉತ್ತಮ ಸಾಹಿತ್ಯ ರಚಿಸಿ ಓದುಗರ ಶೋತೃಗಳ ಮನಸನ್ನು ಗೆದ್ದಾಗ ಉದ್ದೇಶ ಸಾರ್ಥಕ ಆಗುತ್ತದೆ. ಪರಿಷತ್ತಿನ ಹುದ್ದೆಯನ್ನು ವಹಿಸಿಕೊಂಡರಷ್ಟೇ ಸಾಲದು, ಪರಿಷತ್ತಿನ ಉದ್ದೇಶವನ್ನು ಕನ್ನಡಿಗರಿಗೆ ತಿಳಿಸುವಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು ಅನಿವಾರ್ಯ” ಎಂದು ಹೇಳಿದರು. ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಸಾರಥ್ಯವನ್ನು ನೀರ್ಪಾಜೆ ಭೀಮ ಭಟ್ಟರಿಂದ ವಿಶ್ವನಾಥ ಬಂಟ್ವಾಳ ತನಕ ಹಲವರು ಸಮರ್ಥವಾಗಿ ನಿರ್ವಹಿಸಿದ್ದಾರೆ‌‌. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಬಂಟ್ವಾಳ ತಾಲ್ಲೂಕಿನಲ್ಲಿ ಇರುವಷ್ಟು ದತ್ತಿ ಉಪನ್ಯಾಸಗಳು ಇನ್ನೆಲ್ಲೂ ಇಲ್ಲ‌. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಉತ್ತಮ ಸಾಹಿತಿಗಳನ್ನು, ಕಲಾವಿದರನ್ನು…

Read More

ಮಂಗಳೂರು : ಖ್ಯಾತ ಕೊಂಕಣಿ ಸಾಹಿತಿ ಮತ್ತು ಸಂಘಟಕ, ಕೊಂಕಣಿ ಸಾಹಿತಿ ಮತ್ತು ಕಲಾವಿದ ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ ಅಲ್ಪಕಾಲದ ಅನಾರೋಗ್ಯದಿಂದ ದಿನಾಂಕ 06-05-2024ರಂದು ಕಂಕನಾಡಿ ಫಾ. ಮುಲ್ಲರ್ ಆಸ್ಪತ್ರೆಯಲ್ಲಿ ಮುಂಜಾನೆ 3.30ಕ್ಕೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಸಣ್ಣ ಕತೆ ಮತ್ತು ಲಲಿತ ಪ್ರಬಂದ ಸಾಹಿತ್ಯ ಪ್ರಕಾರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ರೊನಾಲ್ಡ್ ಸಿಕ್ವೇರಾ ‘ಶಿಕೇರಾಮ್ ಸುರತ್ಕಲ್’ ಕಾವ್ಯನಾಮದಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಅವರ ‘ಗರ್ಜೆಕ್ ಪಡತ್’ ಕಥಾಸಂಗ್ರಹಕ್ಕೆ ಮಣಿಪಾಲದ ಡಾ. ಟಿ.ಎಮ್.ಎ. ಪೌಂಡೇಶನ್ ವತಿಯಿಂದ ವರ್ಷದ ಉತ್ತಮ ಕೃತಿ ಎಂಬ ಪ್ರಶಂಸಾ ಪುರಸ್ಕಾರ ಲಭಿಸಿತ್ತು. ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷರಾಗಿ ಕೊಂಕಣಿ ಸಾಹಿತಿ ಮತ್ತು ಕಲಾವಿದರ ಹಕ್ಕು ಮತ್ತು ಕ್ಷೇಮಾಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿದ್ದರು. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿದ್ದ ಶ್ರೀಯುತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂದುಮಿತ್ರರನ್ನು ಅಗಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ…

Read More

ಕನ್ನಡ ಸಾಹಿತ್ಯ ಪರಿಷತ್ 1915 ಮೇ 5ರಂದು ಶ್ರೀ ಕೃಷ್ಣ ರಾಜ ಪರಿಷನ್ಮಂದಿರದಲ್ಲಿ ಆಗಿನ ಮೈಸೂರು ಅರಸರಾಗಿದ್ದ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಆರಂಭವಾಗುವಾಗ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ನಾಮಕರಣಗೊಂಡರೂ ಮುಂದೆ 1935ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್’ ಎಂದು ಮರು ನಾಮಕರಣಗೊಂಡಿತ್ತು. ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ನಾಡು- ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುತ್ತದೆ. ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಿ, ಉತ್ತೇಜಿಸಲು ಕಟ್ಟಲಾಗಿರುವ ಈ ಸಂಸ್ಥೆ ಕರ್ನಾಟಕ ರಾಜ್ಯದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತದೆ. ಸಮೃದ್ಧವಾಗಿರುವ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ ನಾಡಿನ ಮೂಲೆ ಮೂಲೆಗೆ ಕನ್ನಡದ ಕಂಪನ್ನು ಪಸರಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ. ನಮ್ಮ ಕನ್ನಡ ನಾಡಿನ ಜನರ ಜೀವನಾಡಿಯಂತೆ ಕೆಲಸ ಮಾಡುವ ಕನ್ನಡ ಸಾಹಿತ್ಯ ಪರಿಷತ್ ಆರಂಭವಾದ ದಿನ ಮೇ 5ರಂದು ರಾಜ್ಯದಾದ್ಯಂತ ಸಂತಸ ಸಡಗರ…

Read More

ಲಾವಣ್ಯ (ರಿ) ಬೈಂದೂರು ಮಕ್ಕಳ ತಂಡದ ಮುದ್ದು ಮಕ್ಕಳು ನಾನು ಬರೆದಿರುವ ‘ನಿದ್ರಾನಗರಿ’ ನಾಟಕವನ್ನು ದಿನಾಂಕ 01-05-2024ರಂದು ಬೈಂದೂರಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದರು. ಲಾವಣ್ಯ ಬೈಂದೂರು ತಂಡದ ಗಣೇಶ್ ಕಾರಂತರ ಸಮರ್ಥ ನಿರ್ದೇಶನದಲ್ಲಿ ಪುಟಾಣಿ ಮಕ್ಕಳು ವಿಶಿಷ್ಟ ಪ್ರತಿಭೆಯಿಂದ ಅಭಿನಯಿಸಿ ಪ್ರೇಕ್ಷಕರ ಮನೆಗೆದ್ದರು. ಪುಟ್ಟ ಚಿಕುಣಿ ಮಗುವಿಂದ ಹಿಡಿದು 13-14 ವರ್ಷದ ಮಕ್ಕಳ ತಂಡ ಇದಾಗಿದ್ದು, ಪ್ರತಿಯೊಂದು ಮಗುವಿನ ಸ್ಪಷ್ಟ ಕನ್ನಡ ಮಾತು, ತುಂಟತನದ ಜೀವಜೀವ ಆಂಗಿಕ ಅಭಿನಯ, ಅತ್ಯುತ್ತಮ ಬೆಳಕನ್ನು ಬಳಸಿಕೊಂಡ ರೀತಿ ವಿಶೇಷವಾದದ್ದು. ನಾಟಕಕ್ಕೆ ಪೂರಕವಾದ ರಂಗಸಂಗೀತ ಹಾಗೂ ಮಕ್ಕಳಿಗೆ ಇಷ್ಟವಾಗುವ ಬಣ್ಣ ಬಣ್ಣದ ವೇಷಭೂಷಣ, ರಂಗಪರಿಕರ ಚಂದಮಾಮದ ಬಣ್ಣದ ಚಿತ್ರಗಳಂತೆ ಅದ್ಭುತ ಮಾಂತ್ರಿಕ ಲೋಕದಲ್ಲಿ ಹಿರಿಯರೂ ಮಕ್ಕಳಾಗಿ ಮೈಮರೆಯುವಂತೆ ಮಾಡಿತು. ಮಾಟಗಾತಿ, ಕಾಕಿ, ಕಿನ್ನರಿಯರು, ರಾಜ-ರಾಣಿ, ರಾಜಕುಮಾರ ಮುಂತಾದ ಕೇಂದ್ರ ಪಾತ್ರಗಳು ಮಾತ್ರವಲ್ಲ ಪ್ರತಿಯೊಂದು ಚಿಕ್ಕ ಪಾತ್ರವೂ ಮನದಲ್ಲಿ ನಿಂತು ನಾಟಕದ ಯಶಸ್ಸಿಗೆ ಕಾರಣವಾಯಿತು. ಸುಮಾರು 14 ವರ್ಷಗಳ ಹಿಂದೆ ನಾನು ಬರೆದ ನಾಟಕ ‘ನಿದ್ರಾನಗರಿ’. ಈ ಮಕ್ಕಳ…

Read More

ಮಂಗಳೂರು : ರಂಗ ಸ್ವರೂಪ ಕುಂಜತ್ತಬೈಲ್ ವತಿಯಿಂದ ನಡೆದ ನಾಲ್ಕು ದಿನಗಳ ‘ರಂಗೋತ್ಸವ ಬೇಸಿಗೆ ಶಿಬಿರ-2024’ದ ಸಮಾರೋಪ, ‘ರಂಗ ಸ್ವರೂಪ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಮರಕಡ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 04-05-2024ರಂದು ನಡೆಯಿತು. ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆ ಉಪನ್ಯಾಸಕ ಡಾ. ಎನ್‌. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ಕ್ರಿಯಾಶೀಲ ಶಿಕ್ಷಕಿ ಎ.ಪಿ. ಸುಮತಿ ಶೆಣೈ ಅವರಿಗೆ ‘ರಂಗಸ್ವರೂಪ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ತುಳು ವಿದ್ವಾಂಸ ಕೆ.ಕೆ. ಪೇಜಾವರ, ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ, ಜ್ಯೋತಿ ಸುಬ್ರಹ್ಮಣ್ಯ, ತಸ್ಲೀಮಾ ಬಾನು, ಹುಸೈನ್ ರಿಜಾಝ್, ರಂಗ ಸ್ವರೂಪದ ಅಧ್ಯಕ್ಷ ರಹಮಾನ್ ಖಾನ್ ಕುಂಜತ್ತಬೈಲ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು, ಕಲಾವಿದರಾದ ಝುಬೇರ್ ಕುಡ್ಲ, ಪ್ರೇಮ್ ನಾಥ್ ಮರ್ಣೆ ಮತ್ತಿತರರಿದ್ದರು. ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನಡೆಯಿತು.

Read More

ಕೋಟ : ಕೋಟ ಹಂದಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಿತೈಷಿಗಳು ಹಮ್ಮಿಕೊಂಡ ಸೂರ್ಯನಾರಾಯಣ ಉರಾಳ ಸನ್ಮಾನ ಮತ್ತು ಯಕ್ಷಗಾನ ಕಾರ್ಯಕ್ರಮವು ದಿನಾಂಕ 01-05-2024 ರಂದು ಉರಾಳಕೇರಿ ಹಂದಟ್ಟುವಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಂದಟ್ಟು ಸೂರ್ಯನಾರಾಯಣ ಉರಾಳ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ್ ಕಲ್ಕೂರ “ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲಿ ಬದುಕಿನ ವೈಯಕ್ತಿಕ ಸುಖ ಸಂತೋಷವನ್ನೆಲ್ಲ ತೊರೆದು ಸಮರ್ಪಣಾ ಭಾವದಿಂದ ಸೇವೆ ಮಾಡಿದ ಕಲಾವಿದರು, ಸಂಘಟಕರು ಹಾಗೂ ಪರಿಚಾರಕರಿಂದಾಗಿ ಯಕ್ಷಗಾನ ಕಲೆ ಇಲ್ಲಿಯವರೆಗೆ ಶ್ರೀಮಂತವಾಗಿ ಉಳಿದಿದೆ. ಶ್ರೀಯುತರು ಬಡಗುತಿಟ್ಟಿನ ಹಲವು ವೃತ್ತಿ ಮೇಳಗಳಲ್ಲಿ ಮೂರು ದಶಕಗಳ ಕಾಲ ತ್ಯಾಗ ಮನೋಭಾವನೆಯಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಕಳಕಳಿಯೊಂದಿಗೆ ಸಾಮಾಜಿಕ ಸಾರ್ಥಕ ಜೀವನವನ್ನೂ ನಡೆಸಿದ್ದಾರೆ. ಯಕ್ಷಾರಾಧಕರಾಗಿರುವ ಉರಾಳರ ಸಾಧನೆ ಅನನ್ಯವಾದುದು ಹಾಗೂ ಅವರ ವೈಯಕ್ತಿಕ ಬದುಕು, ವೃತ್ತಿ ಬದುಕು ಹಾಗೂ ಸಾಮಾಜಿಕ ಬದುಕು ಎಲ್ಲರಿಗೂ ಅನುಕರಣೀಯವಾದುದು.” ಎಂದು ಹೇಳಿದರು. ಬಂಗಾರದ ಸರ, ಉಂಗುರ, ಬೆಳ್ಳಿಯ ಹರಿವಾಣ ಮತ್ತು ರೂಪಾಯಿ…

Read More

ಬೆಂಗಳೂರು : ಭಾರತೀಯ ವಿದ್ಯಾ ಭವನದ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೋಮೋ ಕೋರ್ಸಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಇದು ದೇಶದ ಅತ್ಯಂತ ಹಳೆಯ ಪತ್ರಿಕೋದ್ಯಮ ಕಾಲೇಜಾಗಿದ್ದು ಅರವತ್ತು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಹೆಗ್ಗಳಿಕೆ ಇದಕ್ಕಿದೆ. ಇಲ್ಲಿ ತರಬೇತಿ ಪಡೆದ ಪತ್ರಕರ್ತರು ದೇಶಾದ್ಯಂತ ಅನೇಕ ಪತ್ರಿಕೆ, ವಾಹಿನಿಗಳ ಪ್ರಮುಖ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಒಂದು ವರ್ಷ ಅವಧಿಯ ಈ ಕೋರ್ಸಿನಲ್ಲಿ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಕಾರ್ಪೋರೇಟ್ ಮಾಧ್ಯಮ ಹೀಗೆ ಮೂರೂ ವಿಭಾಗಗಳಲ್ಲಿಯೂ ತರಬೇತಿ ನೀಡಲಾಗುವುದು. ಇಲ್ಲಿ ಆಯಾ ಕ್ಷೇತ್ರದ ಪರಿಣಿತರೇ ತರಬೇತಿ ನೀಡಲಿದ್ದು, ಪತ್ರಿಕೋದ್ಯಮದ ಇತ್ತೀಚಿನ ಬೆಳವಣಿಗೆಗಳ ಕುರಿತೂ ಪರಿಣತಿ ಮೂಡಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಬೆಂಗಳೂರು ಭಾರತೀಯ ವಿದ್ಯಾ ಭವನದ ಕೇಂದ್ರ ಕಚೇರಿಯಲ್ಲಿ ದಿನಾಂಕ 31-05-2024ರೊಳಗೆ ಬೆಳಗಿನ ಹತ್ತರಿಂದ ಸಂಜೆ ಆರರವರೆಗೆ ವಿವರಗಳನ್ನು ಪಡೆಯಬಹುದು. ಇಲ್ಲವೇ ಮೊಬೈಲ್ ಸಂಖ್ಯೆ 9538181140 ಇಲ್ಲಿಗೆ ಸಂಪರ್ಕಿಸಬಹುದು ಎಂದು ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್. ಸುರೇಶ್ ತಿಳಿಸಿದ್ದಾರೆ.

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 06-05-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ ಇವರು ತುಂಬೆಗುತ್ತು ರಾಜಕುಮಾರ ಶೆಟ್ಟಿ ಮತ್ತು ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಇವರ ಸುಪುತ್ರಿ. ಕರ್ನಾಟಕ ಕಲಾಶ್ರೀ ವಿದ್ವಾನ್ ದಿವಂಗತ ಕುದ್ಕಾಡಿ ವಿಶ್ವನಾಥ ರೈ ಮತ್ತು ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈಯವರ ಮೊಮ್ಮಗಳು. ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ (ರಿ.) ಪುತ್ತೂರು ಇದರ ವಿದ್ಯಾರ್ಥಿನಿ. ಮನೆಯಲ್ಲಿಯೇ ನೃತ್ಯ ಶಿಕ್ಷಣದ ಆರಂಭ. ಅಜ್ಜ, ಅಜ್ಜಿ, ಅಮ್ಮ, ಚಿಕ್ಕಮ್ಮ, ಅಕ್ಕನವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿದ್ದು, ತದನಂತರ ಕೆಲವೊಂದು ಪ್ರತಿಷ್ಠಿತ…

Read More

ಮಂಗಳೂರು : ಜೀ ಕನ್ನಡದ ಡ್ರಾಮಾ ಜೂನಿಯರ್ಸ್‌ ಸೀಸನ್‌ 5ರ ವಿನ್ನರ್‌ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಇವರು ಕುಣಿಗಲ್‌ನ ವಿಷ್ಣು ಜತೆ ಜಂಟಿಯಾಗಿ ಟ್ರೋಫಿ ಗೆದ್ದುಕೊಂಡಿದ್ದಾರೆ. ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ, ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ರಿಷಿಕಾ ಫೈನಲ್‌ಗೆ ಲಗ್ಗೆ ಹಾಕಿದ್ದರು. 31 ಜಿಲ್ಲೆಗಳಿಂದ ಸಹಸ್ರಾರು ಬಾಲ ಪ್ರತಿಭೆಗಳ ಶೋಧ ನಡೆಸಿ ಮೇಗಾ ಅಡಿಶನ್‌ ನಲ್ಲಿ 24 ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. 22 ವಾರದಲ್ಲಿ 24 ಮಕ್ಕಳು ಬರೋಬ್ಬರಿ 200ಕ್ಕೂ ಅಧಿಕ ಸ್ಕಿಟ್‌ಗಳನ್ನು ಮಾಡಿ ಮುಗಿಸಿದ್ದರು. ವಿಜೇತರಿಗೆ 30×40 ಸೈಟ್‌ ಬಹುಮಾನವಾಗಿ ಬಂದರೆ, ಮೊದಲ ರನ್ನರ್‌ ಅಪ್‌ ಗೆ 3 ಲಕ್ಷ ನಗದು, ಎರಡನೇ ರನ್ನರ್‌ ಅಪ್ ಗೆ 1 ಲಕ್ಷ ಬಹುಮಾನ ನೀಡಲಾಗಿದೆ. ಕಲರ್‌ಫುಲ್‌ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌, ಹಿರಿಯ ನಟಿ ಲಕ್ಷ್ಮೀ ಮತ್ತು ಡಿಂಪಲ್‌ ಕ್ವೀನ್‌ ರಚಿತಾ…

Read More

ಮಂಗಳೂರು : ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗವು ಆಯೋಜಿಸಿದ್ದ ಕವಿ ಸಮಯ ಕಾರ್ಯಕ್ರಮವು ದಿನಾಂಕ 01-05-2024ರಂದು ವಿಶ್ವವಿದ್ಯಾನಿಲಯದ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸ್ಮೃತಿ ಅಮೃತರಾಜ್ “ಅನುಭವವನ್ನು ಅನುಭಾವಕ್ಕೆ ಇಳಿಸಿದಾಗ ಕವಿತೆ ಹುಟ್ಟಿಕೊಳ್ಳುತ್ತದೆ. ಏಕಾಂತದಲ್ಲಿ ಹುಟ್ಟಿದ ಕವಿತೆ ಲೋಕಾಂತಕ್ಕೆ ನೀಡಿದ ಮೇಲೆ ಅದರ ಕುರಿತು ಮಾತನಾಡುವುದು ಅನಾವಶ್ಯಕ. ಬದುಕಿನಲ್ಲಿ ಕಾಡಿದ, ಅನುಭವಕ್ಕೆ ಸಿಕ್ಕ ಭಾವನೆಗಳ ಸಣ್ಣ ಎಳೆಯೇ ಕವಿತೆಯಾಗಿ ಹೊರಹೊಮ್ಮುತ್ತದೆ.” ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸಹನಾ ಕಾಂತಬೈಲು ಮಾತನಾಡಿ “ಬರಹಗಾರನಿಗೆ ಬರವಣಿಗೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ಎಂಬುದು ಮೊದಲ ಆದ್ಯತೆಯಾಗಿರಬೇಕಾಗುತ್ತದೆ. ಬರವಣಿಗೆಯ ಹುಟ್ಟು ಎಂದಿಗೂ ಅಂತರಂಗದ ಪ್ರಕ್ರಿಯೆಯಾಗಿದೆ.” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ್ ಎಂ. ಕೆ., ಕನ್ನಡ…

Read More