Author: roovari

ಮಂಗಳೂರು : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ಇದರ ಸುವರ್ಣ ಸಂಭ್ರಮ ಆಚರಣೆಯ ಸಂಭ್ರಮದಲ್ಲಿ ‘ಸುಧನ್ವ ಮೋಕ್ಷ’ ಪ್ರಸಂಗದ ತಾಳಮದ್ದಳೆ ದಿನಾಂಕ 08 ಅಕ್ಟೋಬರ್ 2024ರಂದು ಕಡೆಕಾರಿನ ಶ್ರೀಕ್ಷೇತ್ರ ಗುರುವನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು ಹಾಗೂ ಕೊರಗಪ್ಪ ಉಪಸ್ಥಿತರಿದ್ದರು. ಹಿಮ್ಮೇಳ ಮತ್ತು ಅರ್ಥದಾರಿಗಳಾಗಿ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್, ನವೀನ್, ಮುಡಿಪು ಪ್ರಶಾಂತ ಹೊಳ್ಳ, ಕುಶಾಲ ಮುಡಿಪು, ರಾಧಾಕೃಷ್ಣ, ವರ್ಕಾಡಿ ಮಾಧವ ನಾವಡ, ಸುಧಾಕರ ಸಾಲ್ಯಾನ್, ರಾಧಾಕೃಷ್ಣ ಭಟ್ ಕುಳಾಯಿ ಕಾರ್ಯಕ್ರಮ ನಡೆಸಿಕೊಟ್ಟರು.

Read More

ವಿಜಯಪುರ : ಬಿಜಾಪುರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ನೂರಾರು ಕಂಠಗಳಲ್ಲಿ ಹಲಗೆ ಬಡಿತದ ಸದ್ದು ಮೀರಿ ಹೋರಾಟದ ಹಾಡುಗಳು ರಿಂಗಣಿಸುತ್ತಿದ್ದವು. ಅಲ್ಲಿದ್ದ ಮೈಸೂರಿನ ಗೆಳೆಯ ಜನ್ನಿ ಇವರಿಗೆ ಪಕ್ಕನೆ ನೆನಪಾಗಿದ್ದು 1974ರ ದ.ಲೇ.ಕ. ಸಮಾವೇಶ (ದಲಿತ ಲೇಖಕರ ಕಲಾವಿದರ ಸಮಾವೇಶ) ನಾವೇ ಮರೆತ ನಮ್ಮದೇ ಚರಿತ್ರೆಯನ್ನು ಮರುಕಳಿಸಿದ ‘ಜನಕಲಾ ಸಾಂಸ್ಕೃತಿಕ ಮೇಳ’ ನಿಜಕ್ಕೂ ಇದೊಂದು ಐತಿಹಾಸಿಕ ಸಮಾವೇಶ. ಕಳೆದ ಐವತ್ತು ವರ್ಷಗಳಿಂದ ನಾನು ಅನೇಕ ಸಮಾವೇಶ/ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಮೇಳಕ್ಕೆ ಇರುವ ತಾಕತ್ತು ಬೇರೆ ಎಂದರು. ಪ್ರಗತಿಪರ ಅಕ್ಷರ ಯಜಮಾನಿಕೆ ನಿರ್ಲಕ್ಷ್ಯ ಮಾಡಿದ ಸಮುದಾಯ ಪ್ರತಿನಿಧಿಗಳಾಗಿದ್ದ ಓದು ಬರದ ಐದು ಹಿರಿಯ ಮಹಿಳೆಯರಲ್ಲಿ ಕೆಲವರ ಕೈಗಳು ನಡುಗುತ್ತಿದ್ದರೂ ಅವರ ದನಿಗಳಲ್ಲಿ ನಡುಕವಿರಲಿಲ್ಲ. ಎಂಥ ದನಿ, ತಮ್ಮ ಎದೆಗಳಲ್ಲಿ ಹುದುಗಿರುವ ಅಂಬೇಡ್ಕರ್ ರನ್ನು ಹಾಡಾಗಿಸುತ್ತಿದ್ದರು. ಅವರೆಷ್ಟು ಪ್ರತಿಭಾವಂತರೆಂದರೆ ಹೋರಾಟದ ಹಾಡು ಹಾಡುತ್ತಲೇ ಐವತ್ತು ವರ್ಷ ಕಳೆದವರು ಎಂದರು ಗೆಳೆಯ ಜನ್ನಿ. ಈ ನಾಡಿಗೆ ಇವರ ದನಿಗಳನ್ನು ಪರಿಚಯಿಸುವ ಕೆಲಸ ಇನ್ನಾದರೂ ಆಗಬೇಕು.…

Read More

ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ “ಯಕ್ಷಕಲಾ ಕೇಂದ್ರ” ಮತ್ತು ದೇಶಭಕ್ತ ಎನ್. ಎಸ್. ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ‘ಮೋಕ್ಷ ಸಂಗ್ರಾಮ’ ಯಕ್ಷಗಾನ ಪ್ರದರ್ಶನ ದಿನಾಂಕ 06 ಅಕ್ಟೋಬರ್ 2024ರ ಭಾನುವಾರದಂದು ಸಂಜೆ ಪುತ್ತೂರಿನ ಕೆದಂಬಾಡಿ ಸನ್ಯಾಸಿ ಗುಡ್ಡೆಯ ಸದ್ಗುರು ಗೋಪಾಲನ್ ನಾಯರ್ ಸಭಾಭವನದಲ್ಲಿ ಸಂಪನ್ನಗೊಂಡಿತು. ಯಕ್ಷಕಲಾ ಕೇಂದ್ರದ ನಿರ್ದೇಶಕ ಮತ್ತು ಉಪನ್ಯಾಸಕರಾದ ಪ್ರಶಾಂತ್ ರೈ ಮುಂಡಾಳಗುತ್ತು ಇವರು ಸಾಂಸ್ಕೃತಿಕ ವಿಸ್ತರಣೆ ಚಟುವಟಿಕೆಗಳ ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಮೊಳೆಯಾರ ಮಾತನಾಡಿ “ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಕಿಲ್ಲೆ ಪ್ರತಿಷ್ಠಾನದೊಂದಿಗೆ ತಿಳುವಳಿಕೆ ಜ್ಞಾಪಕ ಪತ್ರ ಒಡಂಬಡಿಕೆ ಮಾಡಿಕೊಂಡಿದೆ.” ಎಂದರು.  ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ “ಸಂಸ್ಥೆಯು ಸಾಹಿತ್ಯ ಮತ್ತು ಸಂಸ್ಕೃತಿಯ ವಿಸ್ತರಣೆಗೆ ವಿಶೇಷ ಪ್ರಾತಿನಿಧ್ಯವನ್ನು ನೀಡುತ್ತಿದ್ದು ,ಸಾಮಾಜಿಕ ಔನ್ನತ್ಯಕ್ಕೆ ಹೇತುವಾದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಲು ಸರ್ವರೂ ಸಹಕರಿಸಬೇಕು.” ಎಂದು ವಿನಂತಿಸಿ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಕಳೆದ 45 ವರ್ಷಗಳಿಂದ ಸದಾ ಚಟುವಟಿಕೆಯಿಂದಿರುವ ಹಾಗೂ ಗುಣಾತ್ಮಕ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿರುವ ಯಕ್ಷದೇಗುಲ ತಂಡದ ವತಿಯಿಂದ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ದಿನಾಂಕ 5 ಅಕ್ಟೋಬರ್ 2024ರಂದು ಬೆಂಗಳೂರಿನ ಗವಿಪುರಂನ ಉದಯಭಾನು ಸಭಾಂಗಣದಲ್ಲಿ ರಾಮಾಯಣ ದರ್ಶನದ ಯಕ್ಷಗಾನ ಉತ್ಸವವು ನಡೆಯಿತು. ಶಿಕ್ಷಾಲೋಕಮ್ ಮ್ಯಾನೇಜರ್ ಶ್ರೀವಾತ್ಸವ್ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಹೆರಂಜಾಲ್ ಸುಬ್ಬಣ್ಣ ಗಾಣಿಗ ಇವರುಗಳು ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಹಿರಿಯ ಮತ್ತು ಯುವ ಕಲಾವಿದರ ಕೂಡುವಿಕೆಯಲ್ಲಿ ಪಾರ್ಥಿ ಸುಬ್ಬ ವಿರಚಿತ ‘ಭರತಾಗಮನ’ ತಾಳಮದ್ದಲೆ ನಡೆಯಿತು. ನಂತರ ಯಕ್ಷದೇಗುಲ ಮಕ್ಕಳ ತಂಡದಿಂದ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯ ‘ಕೃಷ್ಣಂ ವಂದೇ ಜಗದ್ಗುರುಂ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಮಧ್ಯಾಹ್ನ 2-00 ಗಂಟೆಯಿಂದ ‘ರಾಮಾಯಣ ದರ್ಶನ’ದ ನೃತ್ಯ ಸ್ಪರ್ಧೆ ನಡೆಯಿತು. ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ…

Read More

ಪುತ್ತೂರು : ಕುಂಜೂರು ಪಂಜ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವ ಚಂಡಿಕಾಯಾಗ, ಸಪ್ತಶತಿ ಪಾರಾಯಣ, ರಂಗ ಪೂಜೆ ಹಾಗೂ ಲಲಿತಕಲಾ ಸೇವೆಯ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ‘ವಿಂಶತಿ ಸಂಭ್ರಮ’ದ ಸರಣಿ ತಾಳಮದ್ದಳೆ ಎಂಟನೆಯ ಕೂಟವು ದಿನಾಂಕ 07 ಅಕ್ಟೋಬರ್ 2024ರಂದು ‘ಗರುಡ ಗರ್ವಭಂಗ’ ಎಂಬ ಆಖ್ಯಾನದೊಂದಿಗೆ ಶ್ರೀ ದೇವಳದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಜಯಪ್ರಕಾಶ್ ನಾಕೂರು, ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಮುರಳೀಧರ ಕಲ್ಲುರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಹನೂಮಂತ), ಜಯಂತಿ ಹೆಬ್ಬಾರ್ (ಶ್ರೀ ಕೃಷ್ಣ), ಶುಭಾ ಗಣೇಶ್ (ಬಲರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಗರುಡ), ಮನೋರಮಾ ಜಿ. ಭಟ್ (ನಾರದ) ಮತ್ತು ಶಾರದಾ ಅರಸ್ (ವನಚರ) ಸಹಕರಿಸಿದರು. ಪ್ರದೀಪ್ ಬಂಗಾರಡ್ಕ, ದೇವಳದ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ವಿ.ಕೆ., ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಹಾಗೂ ಕಲಾವಿದರನ್ನು ಶ್ರೀದೇವರ ಪ್ರಸಾದವನ್ನಿತ್ತು ಗೌರವಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ದೇವಳದ…

Read More

ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಇವರು ಸುರತ್ಕಲ್‌ನ ಮೇಲು ಸೇತುವೆಯ ತಳಭಾಗದ ಎಂ.ಸಿ.ಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸುತ್ತಿರುವ ಉದಯರಾಗ ಸರಣಿ ಕಾರ್ಯಕ್ರಮದ 56ನೇ ಕಾರ್ಯಕ್ರಮವು ದಿನಾಂಕ 06 ಅಕ್ಟೋಬರ್ 2024ರ ಭಾನುವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ ರಾವ್ ಮಾತನಾಡಿ “ಪ್ರಸಕ್ತ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಯುವ ಕಲಾವಿದರು ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ. ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಅವರ ಪ್ರತಿಭೆಯ ಪ್ರಕಾಶನಕ್ಕೆ ಸಾಮಾಜಿಕ ಸಂಸ್ಥೆಗಳು ಸಹಕಾರಿಗಳಾಗಬೇಕು.” ಎಂದು ನುಡಿದರು. ಚೆನ್ನೈ ಇಲ್ಲಿನ ನಮೃತಾ ಎಸ್. ಅವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು.ಇವರಿಗೆ ವಯಲಿನ್‌ನಲ್ಲಿ ಅನನ್ಯ ಪಿ.ಎಸ್. ಪುತ್ತೂರು ಹಾಗು ಮೃದಂಗದಲ್ಲಿ ಆಚಿಂತ್ಯ ಕೃಷ್ಣ ಪುತ್ತೂರು ಸಹಕರಿಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಇದರ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಮಾತನಾಡಿ “ಕನ್ನಡ ಕೃತಿಗಳನ್ನು ಆಧಾರಿಸಿ ಪೂರ್ಣ ಪ್ರಮಾಣದಲ್ಲಿ ಸಂಗೀತ…

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸಿದೆ. ಮೊದಲ ಐದು ಅತ್ಯುತ್ತಮ ಕವಿತೆಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಎರಡು ಮೆಚ್ಚುಗೆ ಬಹುಮಾನ ನೀಡಲಾಗುವುದು. ಬಹುಮಾನ ವಿಜೇತರಿಗೆ ಡಿಜಿಟಲ್ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನು ನೀಡಲಾಗುವುದು. ನಿಯಮಗಳು : * ಈ ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಈ ಸ್ಪರ್ಧೆಗೆ ಅರವತ್ತು ವರ್ಷದೊಳಗಿನವರು ಮಾತ್ರ ಕವನ ಕಳುಹಿಸಬಹುದು. * ಒಬ್ಬರು ಒಂದು ಸ್ವತಂತ್ರ ಕವನವನ್ನು ಮಾತ್ರ ಕಳುಹಿಸಬಹುದು. * ಅನುವಾದ, ಅನುಸೃಷ್ಟಿ, ರೂಪಾಂತರಿತ ಮತ್ತು ಪ್ರೇರಿತ ಕವನಗಳಿಗೆ ಅವಕಾಶವಿಲ್ಲ. * ಯಾವುದೇ ವಿಷಯದ ಕುರಿತು ಕವನ ಬರೆದು ಕಳುಹಿಸಬಹುದು. * ಕವನವನ್ನು docx ಮತ್ತು pdf ರೂಪದಲ್ಲಿ ಕಳುಹಿಸಬೇಕು. ಸ್ಪರ್ಧಿಗಳ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋ ಪ್ರತ್ಯೇಕವಾಗಿ ಕಳುಹಿಸಬೇಕು. * ಕವನ ಕಳುಹಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2024.…

Read More

ಮಂಗಳೂರು : ಮಂಗಳೂರಿನ ಯಕ್ಷಧಾಮದ ಜನಾರ್ದನ ಹಂದೆಯವರ ನೇತೃತ್ವದಲ್ಲಿ ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಹೂವಿನಕೋಲು ಕಾರ್ಯಕ್ರಮವು ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹಕಾರದೊಂದಿಗೆ ದಿನಾಂಕ 7 ಅಕ್ಟೋಬರ್ 2024ರಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ ಇವರ ಸ್ವಗೃಹ ಕದ್ರಿ ಮಲ್ಲಿಕಾ ಬಡಾವಣೆಯಲ್ಲಿರುವ ‘ಪ್ರಾಸಾದ’ ಇಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಪ್ರಸಿದ್ಧ ತಾಳಮದ್ದಳೆಯ ಅರ್ಥದಾರಿ, ವಿದ್ವಾಂಸ ಪ್ರಭಾಕರ ಜೋಷಿ ಇವರು ಮಾತನಾಡಿ “ನವರಾತ್ರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೆಚ್ಚು ವಿಶೇಷ. ಮಂಗಳೂರು ವಿಭಾಗದಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರ್ವಹಿಸಿಕೊಂಡು, ಸಾವಿರಕ್ಕೂ ಹೆಚ್ಚು ಸಮ್ಮಾನಗಳನ್ನು ಪೂರೈಸುವ ಏಕೈಕ ದೊಡ್ಡ ಸಂಸ್ಥೆ ಕಲ್ಕೂರ ಪ್ರತಿಷ್ಠಾನ. ಕಲಾ ತಂಡಗಳನ್ನು, ಕಲಾವಿದರನ್ನು ಸ್ವಾಗತಿಸಿಕೊಂಡು ಗೌರವಿಸುತ್ತಾ ಬೆಳೆದ ಸಂಸ್ಥೆಯನ್ನು ಶ್ಲಾಘಿಸೋಣ” ಎಂದು ಹೇಳಿದರು. “ಸನಾತನ ಸಂಸ್ಕೃತಿಯ ಮೂಲ ಸ್ವರೂಪ ಹೂವಿನಕೋಲು. ಮಕ್ಕಳ ಮೂಲಕ ಮನೆ ಮನೆಗಳಲ್ಲಿ ಅರಳುವ ಅದ್ಭುತ ಕಲೆ ಹೂವಿನಕೋಲು. ಈ ಹೂವಿನಕೋಲಿಗೆ ಅವಕಾಶ ನೀಡುವುದರ ಮೂಲಕ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಸಹಕಾರಿಯಾಗುತ್ತದೆ” ಎಂದು ಪ್ರದೀಪ…

Read More

ಸುರತ್ಕಲ್ : ಹಿಂದು ವಿದ್ಯಾದಾಯಿನೀ ಸಂಘ (ರಿ.) ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನ ಸಂಸ್ಕೃತ ವಿಭಾಗವು ಆಯೋಜಿಸಿದ ‘ಸಂಸ್ಕೃತೋತ್ಸವ’ ಕಾರ್ಯಕ್ರಮವು ದಿನಾಂಕ 04 ಅಕ್ಟೋಬರ್ 2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ “ಸಂಸ್ಕೃತ ಭಾಷೆಯ ಮಹತ್ವ ಹಾಗೂ ಭಾಷೆಯ ರಕ್ಷಣೆ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಸಂಸ್ಕೃತ ಮಹಾ ವಿದ್ಯಾಲಯದ ವೇದಾಂತ ವಿಭಾಗದ ಪ್ರಾಧ್ಯಾಪಕ ಪ್ರೊ. ಷಣ್ಮುಖ ಹೆಬ್ಬಾರ್ ಮಾತನಾಡಿ “ಪ್ರಾಚೀನವಾದ ಸಂಸ್ಕೃತ ಭಾಷೆಯನ್ನು ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಸಂಸ್ಕೃತ ಭಾಷೆಯನ್ನು ದಿನ ನಿತ್ಯದ ಸಂವಹನದಲ್ಲಿ ಅಳವಡಿಸಿಕೊಂಡರೆ ಭಾಷೆಯ ರಕ್ಷಣೆಯಾಗುತ್ತದೆ.” ಎಂದು ನುಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ವೆಂಕಟರಮಣ ಭಟ್ ಮಾತನಾಡಿ “ಬಹಿರಂಗದ ಆಚರಣೆಗಳಿಗಿಂತ ಅಂತರಂಗದ ಚಿಂತನೆಗಳಿಂದ ಸುಂಸ್ಕೃತರಾಗಬೇಕು.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಸಂಸ್ಕೃತ ಭಾಷೆಗೆ ವಿಶ್ವದಲ್ಲೇ ಉನ್ನತ ಸ್ಥಾನಮಾನವಿದ್ದು ಭಾರತೀಯ ಪುರಾಣ,…

Read More

ಶಕ್ತಿನಗರ : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 274ನೇ ಕಾರ್ಯಕ್ರಮ ಅಂತರಾಷ್ಟ್ರೀಯ ಸಂಗೀತ ದಿವಸದ ಬಾಬ್ತು ಸಂಗೀತ ಸಂಧಿ ಕಾರ್ಯಕ್ರಮವು ದಿನಾಂಕ 6 ಅಕ್ಟೋಬರ್ 2024ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಸಂಗೀತಗಾರ ರೋಶನ್ ಬೇಳ ಗಂಟೆ ಬಾರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಯೊಲಿನ್ ವಾದಕ ಹಾಗೂ ತರಬೇತುದಾರ ನಿರಂಜನ್ ಸುನಿಲ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಮಾಂಡ್ ಸೊಭಾಣ್ ಖಜಾಂಚಿ ಎಲ್ರೊನ್ ರಾಡ್ರಿಗಸ್ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಸುಮೇಳ್ ಕೋಶಾಧಿಕಾರಿ ಕ್ಲಾರಾ ಪಿಂಟೊ ಉಪಸ್ಥಿತರಿದ್ದರು. ನಂತರ ಕೊಂಕಣಿ, ತುಳು, ಇಂಗ್ಲೀಷ್, ಹಿಂದಿ, ಮಲಯಾಳಮ್, ಮಣಿಪುರಿ, ಸಿಂಹಳೀ, ಸ್ಪಾನಿಶ್ ಹೀಗೆ ಎಂಟು ಭಾಷೆಗಳ ಸುಮಧುರ ಹಾಡುಗಳನ್ನು 46 ಜನ ಗಾಯಕರು ಹಾಡಿ ಮನ ರಂಜಿಸಿದರು. ರೋಶನ್ ಕ್ರಾಸ್ತಾ, ಸಂಜಯ್ ರಾಡ್ರಿಗಸ್, ಸಂಜೀತ್ ರಾಡ್ರಿಗಸ್ ಮತ್ತು ಸ್ಟಾಲಿನ್ ಡಿಸೋಜ ಸಂಗೀತದಲ್ಲಿ ಸಹಕರಿಸಿದರು. ಸುಮೇಳ್ ಸಂಯೋಜಿಕಿ ರೈನಾ ಸಿಕ್ವೇರಾ ಸ್ವಾಗತಿಸಿ, ಅನಿಲ್ ಡಿಕುನ್ಹಾ, ಅಜಯ್ ಡಿಸೋಜ ತಾಕೊಡೆ,…

Read More