Subscribe to Updates
Get the latest creative news from FooBar about art, design and business.
Author: roovari
ಕುರುಡಪದವು : ಕುರಿಯ ವಿಠಲ ಶಾಸ್ತ್ರೀ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕುರುಡಪದವು ಇದರ ವತಿಯಿಂದ ಸಂಸ್ಮರಣೆ, ಸಮ್ಮಾನ ಮತ್ತು ಯಕ್ಷಗಾನ ಬಯಲಾಟ ಪ್ರದರ್ಶನವು ದಿನಾಂಕ 10-05-2024ರಂದು ಸಂಜೆ ಗಂಟೆ 3-00ರಿಂದ ಕುರುಡಪದವು ಕುರಿಯ ವಿಠಲ ಶಾಸ್ತ್ರೀ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ದಿವಂಗತ ಕುರಿಯ ವಿಠಲ ಶಾಸ್ತ್ರೀ, ದಿವಂಗತ ನೆಡ್ಲೆ ನಹಸಿಂಹ ಭಟ್ಟ ಹಾಗೂ ದಿವಂಗತ ಕರುವೋಳು ದೇರಣ್ಣ ಶೆಟ್ಟಿ ಇವರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಇದೇ ಸಮಾರಂಭದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಶ್ರೀ ಪುಂಡರೀಕಾಕ್ಷ ಉಪಾಧ್ಯಾಯ ಅವರಿಗೆ ‘ವಿಠಲ ಶಾಸ್ತ್ರಿ ಪ್ರಶಸ್ತಿ’, ಹಿರಿಯ ಮದ್ಲೆಗಾರ ಶ್ರೀ ಮೋಹನ ಶೆಟ್ಟಿಗಾರು ಮಿಜಾರು ಅವರಿಗೆ ‘ನೆಡ್ಲೆ ನರಸಿಂಹ ಭಟ್ಟ ಪ್ರಶಸ್ತಿ’, ಕೋಟಿ ಖ್ಯಾತಿಯ ಶ್ರೀ ಕೆ.ಎಚ್. ದಾಸಪ್ಪ ರೈ ಅವರಿಗೆ ‘ದೇರಣ್ಣ ದೇರಣ್ಣ ಶೆಟ್ಟಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಯಕ್ಷಗಾನ ಸಂಘಟಕ ಪಣಂಬೂರು ಮಧುಕರ ಭಾಗವತರು ಅಧ್ಯಕ್ಷತೆ ವಹಿಸಲಿರುವರು. ಸಂಸ್ಮರಣ ಮತ್ತು ಅಭಿನಂದನ ಭಾಷಣವನ್ನು ಡಾ. ಮುರಳೀಧರ ಶೆಟ್ಟಿ ಮಾಡಲಿರುವರು.…
ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಮತ ಹಾಕೋಣ ಬನ್ನಿ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 05-05-2024ರಂದು ಸಂಜೆ ಗಂಟೆ 6-30ಕ್ಕೆ ಶಿವಮೊಗ್ಗ ಗೋಪಿಶೆಟ್ಟಿಕೊಪ್ಪ ಚಾಲುಕ್ಯ ನಗರ ಸಾಹಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ ಇವರು ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಶ್ವರಿ ಎನ್. ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸದಸ್ಯರಿಗೆ ಅಭಿನಂದನೆ, ಮತದಾನ ಜಾಗೃತಿ ಕವಿ ಸಮಯ ಮತ್ತು ಕನ್ನಡ ಹಾಡು ಕಾರ್ಯಕ್ರಮಗಳು ನಡೆಯಲಿದೆ.
ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠ ಇವುಗಳ ಸಹಯೋಗದೊಂದಿಗೆ ‘ಯುವ ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 05-05-2024ರಂದು ಹಮ್ಮಿಕೊಂಡಿರುತ್ತದೆ. ಬೆಳಗ್ಗೆ ಗಂಟೆ 10-00ರಿಂದ ಕುಮಾರಿ ಚಿನ್ಮಯಿ ವಿ. ಭಟ್ ಇವರ ಹಾಡುಗಾರಿಕೆಗೆ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಶ್ರೀ ಅವಿನಾಶ್ ಬೆಳ್ಳಾರೆ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 11-30ಕ್ಕೆ ಶ್ರೀ ವೆಂಕಟ ಯಶಸ್ವಿ ಮತ್ತು ಶ್ರೀ ವಿಜೇತ ಸುಬ್ರಹ್ಮಣ್ಯ ಇವರ ಹಾಡುಗಾರಿಕೆಗೆ ಕುಮಾರಿ ಧನಶ್ರೀ ಶಬರಾಯ ವಯೋಲಿನ್ ಮತ್ತು ಶ್ರೀ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 1-30ರಿಂದ ಕುಮಾರಿ ಮೇಧಾ ಉಡುಪ ಇವರ ಕೊಳಲು ವಾದನಕ್ಕೆ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಶ್ರೀ ಅವಿನಾಶ್ ಬೆಳ್ಳಾರೆ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಗಂಟೆ 3-00ರಿಂದ ಕುಮಾರಿ ತನ್ಮಯೀ ಹಸನಡ್ಕ ಇವರ ಹಾಡುಗಾರಿಕೆಗೆ…
ಮಂಗಳೂರು : ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ ‘ಮ್ಯಾಜಿಕ್ ಕೋರ್ಸ್’ 5 ದಿನಗಳ ಕಾರ್ಯಾಗಾರವು ದಿನಾಂಕ 14-05-2024ರಿಂದ 18-05-2024ರವರೆಗೆ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ನಲಪಾಡ್ ಬಿಲ್ಡಿಂಗ್, 2ನೇ ಮಹಡಿಯಲ್ಲಿ ಸಿ.ಐ.ಎಲ್. ಲೈಫ್ ಸಿಲ್ಕ್ ಹಬ್ ಇಲ್ಲಿ ನಡೆಯಲಿದೆ. ಸೀನಿಯರ್ಸ್ – 8, 9 ಮತ್ತು 10ನೇ ತರಗತಿ ಮಕ್ಕಳಿಗೆ ಬೆಳಗ್ಗೆ 9-30ರಿಂದ 12.30ರವರೆಗೆ ಹಾಗೂ ಜೂನಿಯರ್ಸ್ – 5, 6 ಮತ್ತು 7ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2-00ರಿಂದ 5-00ರವರೆಗೆ ಕಾರ್ಯಾಗಾರ ನಡೆಯಲಿದ್ದು, ಕೋರ್ಸ್ ಶುಲ್ಕ ರೂ.3,000/- ಆಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9986134542 ಸಂಪರ್ಕಿಸಿ.
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 53’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ಕೆಳಗಡೆ ದಿನಾಂಕ 05-05-2024 ಭಾನುವಾರ ಪೂರ್ವಾಹ್ನ ಗಂಟೆ 6-00ಕ್ಕೆ ನಡೆಯಲಿದೆ. ಶ್ರೀಮತಿ ಗೀತಾ ಸಾರಾಡ್ಕ ಇವರ ಹಾಡುಗಾರಿಕೆಗೆ ಪುತ್ತೂರಿನ ಅನನ್ಯ ಪಿ.ಎಸ್. ವಯೋಲಿನ್ ಹಾಗೂ ಹರಿಕೃಷ್ಣ ಪಾವಂಜೆ ಮೃದಂಗ ಸಾಥ್ ನೀಡಲಿದ್ದಾರೆ. ಸುರತ್ಕಲ್ಲಿನ ರೋಟರಿ ಕ್ಲಬಿನ ಶ್ರೀ ಸಂದೀಪ್ ರಾವ್ ಇಡ್ಯಾ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಏಪ್ರಿಲ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 06-05-2024, 13-05-2024, 20-05-2024 ಮತ್ತು 27-05-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 06-05-2024ರಂದು ನಡೆಯಲಿರುವು ಸರಣಿ 44ರಲ್ಲಿ ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ, ದಿನಾಂಕ 13-05-2024ರಂದು ನಡೆಯಲಿರುವು ಸರಣಿ 45ರಲ್ಲಿ ವಿದುಷಿ ಶ್ರೇಯಾ ಬಾಲಾಜಿ ಬೆಂಗಳೂರು, ದಿನಾಂಕ 20-05-2024ರಂದು ನಡೆಯಲಿರುವು ಸರಣಿ 46ರಲ್ಲಿ ಶ್ರೀ ಲಕ್ಷ್ಮೀ ಪಿ.ವೈ. ಬೆಂಗಳೂರು ಮತ್ತು ದಿನಾಂಕ 27-05-2024ರಂದು ನಡೆಯಲಿರುವು ಸರಣಿ 47ರಲ್ಲಿ ಕುಮಾರಿ ಕೀರ್ತನ ಯು. ಭಟ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರ ದಿನಾಚರಣೆಯು ದಿನಾಂಕ 05-05-2024ರಂದು ಪುತ್ತೂರು ದರ್ಬೆ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದ ಕ.ಸಾ.ಪ. ಕಚೇರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ವಹಿಸಲಿದ್ದು, ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಪ್ಪಿನಂಗಡಿ ಹೋಬಳಿ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ ಮತ್ತು ಪುತ್ತೂರು ಹೋಬಳಿ ಅಧ್ಯಕ್ಷರಾದ ಕಡಮಜಲು ಸುಭಾಸ್ ರೈ ಇವರು ಗೌರವ ಉಪಸ್ಥಿತರಿರಲಿದ್ದಾರೆ.
ಮೈಸೂರು : ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದೊಂದಿಗೆ ಮೈಸೂರಿನ ನಟನ ಇವರ ವತಿಯಿಂದ ಮಂಡ್ಯ ರಮೇಶ ನೇತೃತ್ವದಲ್ಲಿ ನಡೆಯುತ್ತಿರುವ ‘ರಜಾಮಜಾ’ ಬೇಸಿಗೆ ಶಿಬಿರದ ಸಮಾರೋಪ ಸಡಗರವು ಮೈಸೂರಿನ ವಿನೋಬಾ ರಸ್ತೆ, ಕರ್ನಾಟಕ ಕಲಾ ಮಂದಿರದಲ್ಲಿ ದಿನಾಂಕ 05-05-2024ರಂದು ಸಂಜೆ ಗಂಟೆ 4-00ರಿಂದ ನಡೆಯಲಿದೆ. ಇದೇ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯ ಹಿರಿಯ ನಟಿ ಶ್ರೀಮತಿ ಇಂದಿರಮ್ಮ ಎಚ್.ಟಿ. ಇವರಿಗೆ ನಟನ ಪುರಸ್ಕಾರವನ್ನು ನೀಡಲಾಗುವುದು. ರಂಗ ಗೀತೆಗಳು, ಕಂಸಾಳೆ, ಯಕ್ಷಗಾನ, ಕಂಗೀಲು, ಡೊಳ್ಳು, ಮಲ್ಲಗಂಬ, ಹಗ್ಗದ ಮಲ್ಲಕಂಬ, 6 ಮಕ್ಕಳ ನಾಟಕಗಳು, ಕಂಪನಿ ನಾಟಕ ಇನ್ನೂ ಹತ್ತು ಹಲವು ಆ ಸಂಜೆಯ ಆಕರ್ಷಣೆಯಾಗಿದೆ.
ಬೆಂಗಳೂರು : 2024ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿಗೆ ಮೈಸೂರಿನ ಹಿರಿಯ ಜನಪದ ವಿದ್ವಾಂಸ ಡಾ. ಹಿ.ಶಿ. ರಾಮಚಂದ್ರೇ ಗೌಡ ಮತ್ತು ಬೆಂಗಳೂರಿನ ಚಿಂತಕಿ ಮತ್ತು ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾ ಬಾಯಿಯವರನ್ನು ಆಯ್ಕೆ ಮಾಡಲಾಗಿದೆ. ನಾಡೋಜ ಡಾ. ಮನು ಬಳಿಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧ್ಯಕ್ಷರಿಗೆ ನೀಡುವ ಗೌರವ ಧನವನ್ನು ಸ್ವೀಕರಿಸದೆ ಆ ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ಇರಿಸಿ, ಕನ್ನಡ ನಾಡು-ನುಡಿಗೆ ಮಹತ್ವದ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಯನ್ನು ನೀಡಲೆಂದು ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಹಾಸನ ಜಿಲ್ಲೆಯ ರಂಗನಾಥ ಪುರದಲ್ಲಿ ಜನಿಸಿದ ಡಾ. ಹಿ.ಶಿ. ರಾಮಚಂದ್ರೇ ಗೌಡರು, ಕೇರಳದಲ್ಲಿ ಜನಪದ ಅಧ್ಯಯನವನ್ನು ಮಾಡಿ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ‘ಕನ್ನಡ ಜನಪದ ಕಥಾ ವರ್ಗಗಳು’ ಎನ್ನುವ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿರುವ ಇವರು ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷರಾಗಿ ಮತ್ತು ಕರ್ನಾಟಕ…
ಇವರು ಮಡಿಕೇರಿ ತಾಲೂಕು ಚೇರಂಬಾಣೆ-ಕೋಪಟ್ಟಿ ಗ್ರಾಮದ ಕೊಟ್ಟು ಕತ್ತೀರಾ ಕಾರ್ಯಪ್ಪ ಮತ್ತು ರಾಗಿಣಿ ದಂಪತಿಯರ ಪುತ್ರ. ತಮ್ಮ ವಿದ್ಯಾಭ್ಯಾಸವನ್ನು ಕಾಲೂರು ಹಾಗೂ ಗಾಳಿಬೀಡು ಶಾಲೆಯಲ್ಲಿ ಮುಗಿಸಿ 1983ರಲ್ಲಿ ಭಾರತೀಯ ಸೇನೆಗೆ ಸೇರಿ ಜಮ್ಮು, ಕಾಶ್ಮೀರ, ಪಂಜಾಬ್ ಬ್ಲೂ ಸ್ಟಾರ್, ಗ್ವಾಲಿಯರ್, ಐ. ಪಿ. ಕೆ. ಎಫ್, ಶ್ರೀಲಂಕಾ ಮತ್ತು ನಾರ್ತ್ ಈಸ್ಟ್ ಸೆಕ್ಟರ್, ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಗ್ರಿಪ್ ಲ್ ಡೆಪ್ಯೂಟೇಷನ್ ಮತ್ತು ರಾಜಸ್ತಾನ್, ಪಂಜಾಬ್ ಬಾರ್ಡರ್, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಅಟ್ಯಾಚ್ಮೆಂಟ್ ಆಗಿ ಕೆಲಸ ಮಾಡಿರುತ್ತಾರೆ. 2000ರಲ್ಲಿ ಸೇನಾ ನಿವೃತ್ತಿ ಹೊಂದಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ‘ಸ್ವಸ್ತಿಕ್ ಕನ್ಸ್ಟ್ರಕ್ಷನ್ ಮತ್ತು ಸ್ವಸ್ತಿಕ್ ಕಾಂಕ್ರೀಟ್ ಪ್ರಾಡಕ್ಟ್’ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ಭಾಷೆಯಲ್ಲಿ ‘ಬೈಸಿಕಲ್’, ‘ವೀರ ಚಕ್ರ’, ‘ಮೋಹ ಪಾಶ’ ಹಾಗೂ ‘ಕರಗಿದ ಬದುಕು’ ಎನ್ನುವ 4 ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಇವರು ಕೊಡವ ಭಾಷೆಯಲ್ಲಿ ಬರೆದ ‘ವಿಧಿರ ಕಳಿಲ್’ ಎನ್ನುವ ಕಾದಂಬರಿಯು ‘ಪೋಮ್ಮಲೆ ಕೊಡಗ್’ ಎನ್ನುವ ಕೊಡವ…