Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ : ಕುಂದಾಪುರ ರಂಗನಹಿತ್ಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಯಾನದ 9ನೇ ಕಾರ್ಯಕ್ರಮ ಶ್ವೇತ ಸಂಜೆಯಲ್ಲಿ ‘ಯಕ್ಷಗಾನ ವೈಭವ’ ಕಾರ್ಯಕ್ರಮವು ದಿನಾಂಕ 17-03-2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜೇಶ್ ಕಾವೇರಿ ಕುಂದಾಪುರ ಇವರು ಪ್ರಾಯೋಜಕರಾದ ಗೋಪಾಲ ಪೂಜಾರಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ “ಸಂಸ್ಥೆಯ ಕಲಾ ಚಟುವಟಿಕೆಯು ನಿರಂತರವಾದಾಗ ಪ್ರೋತ್ಸಾಹಿಸಿ ಸಂಭ್ರಮಿಸಬೇಕಾದದ್ದು ಕಲಾಭಿಮಾನಿಗಳು. ಯಶಸ್ವಿ ಕಲಾವೃಂದದ ಪ್ರದರ್ಶನಗಳು ಕೇವಲ ಸ್ಥಳೀಯವಾಗಿರದೇ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳಲ್ಲೂ ಪ್ರದರ್ಶನಕ್ಕೆ ಅವಕಾಶ ದೊರೆತಾಗ ಕಲಿತ ಚಿಣ್ಣರ ಕಲಾ ಪ್ರತಿಭೆಗಳು ಇನ್ನಷ್ಟು ಬೆಳೆಯುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಕಲಾಭಿಮಾನಿಗಳ ಪ್ರೋತ್ಸಾಹ ಸಂಸ್ಥೆಯ ಶ್ವೇತಯಾನಕ್ಕೆ 108 ಕಾರ್ಯಕ್ರಮಗಳು ದೊರೆಯಬೇಕು” ಎಂದು ಹೇಳಿದರು. “ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಾದದ್ದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈವರೆಗೆ ಅದೆಷ್ಟೋ ಚಿಣ್ಣರ ಕಾರ್ಯಕ್ರಮಗಳು ರಾಜ್ಯದಾದ್ಯಂತ ಪ್ರದರ್ಶಿಸಲ್ಪಟ್ಟಿದ್ದವು. ಎಲ್ಲಾ ಕಾರ್ಯಕ್ರಮಗಳೂ ಪ್ರೇಕ್ಷಕರನ್ನು ಗೆದ್ದು ನಿಂತ ಕಾರ್ಯಕ್ರಮಗಳಾಗಿದ್ದವು. ಯಶಸ್ವಿ ಕಲಾವೃಂದದ ಚಿಣ್ಣರ ಕಾರ್ಯಕ್ರಮಗಳು ಯಶಸ್ಸಿನ ಕಾರ್ಯಕ್ರಮಗಳು” ಎಂದು ಅಭಿನಂದನೆ…
ಬಂಟ್ವಾಳ : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಯುವಜನತೆ ಮತ್ತು ರಾಷ್ಟ್ರ : ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಸಂದೇಶಗಳ ಮರುಶೋಧನೆ” ಎಂಬ ವಿಷಯದ ಕುರಿತು ದಿನಾಂಕ 12-03-2024ರಂದು ಮೂವತ್ತಮೂರನೇ ಉಪನ್ಯಾಸ ನಡೆಯಿತು. ಈ ಕಾರ್ಯಕ್ರಮವು ಬೆಂಜನಪದವು ಇಲ್ಲಿರುವ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ಪ್ರೊ. ನಂದನ್ ಪ್ರಭು “ರಾಷ್ಟ್ರಕವಿ ರವೀಂದ್ರನಾಥ ಠಾಗೋರ್ ನುಡಿದಂತೆ, ಭಾರತವನ್ನು ತಿಳಿಯ ಬಯಸುವ ಯುವಕರು ಮೊಟ್ಟ ಮೊದಲು ಸ್ವಾಮಿ ವಿವೇಕಾನಂದರನ್ನು ಓದಬೇಕು. ಸ್ವಾಮೀಜಿ ಸಕಾರಾತ್ಮಕತೆಗಳ ಅಪರಿಮಿತ ಗಣಿ. ತ್ಯಾಗ ಮತ್ತು ಸೇವೆ ಈ ದೇಶದ ಅವಳಿ ಆದರ್ಶಗಳು. ಯುವಕರು ಕೇವಲ ಉದ್ಯೋಗಕ್ಕಾಗಿ ಸೀಮಿತಗೊಳ್ಳದೆ, ಸಾಮಾಜಿಕ ಸೇವೆಗಳಲ್ಲಿಯೂ ಭಾಗಿಯಾಗಬೇಕು. ‘ನಾನು ಸುಧಾರಣೆಯಲ್ಲಿ ನಂಬುವುದಿಲ್ಲ. ಬೆಳವಣಿಗೆಯಲ್ಲಿ ನಂಬುತ್ತೇನೆ. ನಾನು ದೇವರ ಸ್ಥಾನದಲ್ಲಿ ನಿಂತು ಸಮಾಜಕ್ಕೆ ನೀನು ಹೀಗೆ ಚಲಿಸಬೇಕು, ಹಾಗಲ್ಲ ಎಂದು ಕಟ್ಟಪ್ಪಣೆ ಮಾಡಲಾರೆ.…
ಕಾರ್ಕಳ : ಕಾರ್ಕಳ ಪೆರ್ವಾಜೆಯ ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಧ್ಯಾನ ಯೋಗ ಮತ್ತು ಸೇವಾಮಂದಿರದಲ್ಲಿ ಹೊಸಸಂಜೆ ಬಳಗದ ಸಹಯೋಗದಲ್ಲಿ ಆಯೋಜಿಸಲಾದ ‘ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವು ದಿನಾಂಕ 17-03-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾದ ಸಾವಿತ್ರಿ ಮನೋಹರ್ ಮಾತನಾಡಿ “ಮಹಿಳಾ ಸಾಹಿತ್ಯ ಅಂದರೆ ಅಡುಗೆಮನೆ ಸಾಹಿತ್ಯ ಎಂದು ಹೀಗಳೆಯದಿರಿ .ಇಂದು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಮಹಿಳೆಯರು ಜನಸಾಮಾನ್ಯರಿಂದ ವಿದ್ವಾಂಸರವರೆಗೆ ಮೆಚ್ಚುಗೆ ಗಳಿಸುವಂತಹ ಕೃತಿಗಳನ್ನು ರಚಿಸಿ ಯಶಸ್ವಿಯಾಗಿದ್ದಾರೆ .ಆದ ಕಾರಣ ಸಾಹಿತ್ಯದಲ್ಲಿ ಸ್ತ್ರೀ ಮತ್ತು ಪುರುಷ ಸಾಹಿತ್ಯ ಎಂಬ ಭೇದ ಸರ್ವಥಾ ಸಲ್ಲದು. ಹಾಸ್ಯ ಅಂದರೆ ಸಂತೋಷ ಕೊಡುವಂತದ್ದು .ಹಾಸ್ಯದಲ್ಲಿ ಲಘುಹಾಸ್ಯ , ತಿಳಿಹಾಸ್ಯ , ಬಿಗುಹಾಸ್ಯ ಹೀಗೆ ನಾನಾ ಪ್ರಕಾರಗಳಿವೆ . ಇನ್ನೊಬ್ಬರ ಮನಸ್ಸನ್ನು ನೋಯಿಸದೆ ನಕ್ಕು ಹಗುರಾಗುವ ಹಾಸ್ಯ ಸಾಹಿತ್ಯ ಸ್ರಷ್ಟಿ ಪ್ರಸ್ತುತ ತೀರಾ ಅತ್ಯಗತ್ಯವಾಗಿದೆ .ನಗು ಮನುಷ್ಯನ ಸಹಜಸ್ವಭಾವವಾಗಬೇಕು. ಆದಕಾರಣ ಶಿಸ್ತಿನ ಪರಿಧಿಯೊಳಗೆ ನಗುವನ್ನು ಬಂಧಿಸಿಡುವ…
ಬೆಂಗಳೂರು : ವೀರಲೋಕ ಇದರ ಆಶ್ರಯದಲ್ಲಿ 84ನೇ ‘ಬಿಂಬ ಬಿಂಬನ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 24-03-2024ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಲಿದೆ. ಮಾಜಿ ಸಚಿವರು ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ, ನಿರ್ಮಾಪಕಿ ಡಾ. ಜಯಮಾಲ ಇವರು ಕೃತಿ ಬಿಡುಗಡೆ ಮಾಡಲಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಪಿ. ಶೇಷಾದ್ರಿ ಇವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನೆಮಾ ಲೇಖಕರಾದ ಶ್ರೀ ಕೆ. ಪುಟ್ಟಸ್ವಾಮಿ ಮತ್ತು ಖ್ಯಾತ ಪತ್ರಕರ್ತರು ಮತ್ತು ಲೇಖಕರಾದ ಶ್ರೀ ರಘುನಾಥ ಚ.ಹ. ಇವರು ಕೃತಿ ಕುರಿತು ಮಾತನಾಡಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಡಾ.ಗಿರೀಶ್ ಕಾಸರವಳ್ಳಿ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ ಸಾಹಿತಿ ಹಾಗೂ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗೋಪಾಲ ಕೃಷ್ಣ ಪೈ ಇವರ ಗೌರವ ಉಪಸ್ಥಿತಿಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ…
ಉಡುಪಿ : ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ಬಡಗುತಿಟ್ಟಿನ ಶ್ರೇಷ್ಠ ಕಲಾವಿದರಾದ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ ಆಯ್ಕೆಯಾಗಿದ್ದಾರೆ. ಬಡಗುತಿಟ್ಟಿನ ಪರಂಪರೆಯ ಪ್ರಾತಿನಿಧಿಕ ವೇಷಧಾರಿಯಾಗಿರುವ ಇವರು ಗುಂಡುಬಾಳ, ಪಂಚಲಿಂಗ, ಸಾಲಿಗ್ರಾಮ ಮೇಳಗಳಲ್ಲಿ ಕಲಾಸೇವೆಗೈದಿರುತ್ತಾರೆ. ‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ’ಎಂಬ ಸ್ವಂತ ಮೇಳ ಸ್ಥಾಪಿಸಿ, ಕಾಲಮಿತಿಯ ಪ್ರದರ್ಶನಗಳನ್ನು ನೀಡುತ್ತಾ ಬಂದಿರುತ್ತಾರೆ. ನಾಲ್ಕೂವರೆ ದಶಕಗಳ ಕಲಾ ಜೀವನದಲ್ಲಿ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿ, ಯಕ್ಷಗಾನ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿರುತ್ತಾರೆ. ದಿನಾಂಕ 23-04-2024ರ ಮಂಗಳವಾರ ಪೂರ್ವಾಹ್ನ 10.30 ಗಂಟೆಗೆ ಪಲಿಮಾರಿನಲ್ಲಿ ಜರಗುವ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಈ ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು ರೂ. 50,000 ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು.
ಮಂಗಳೂರು : ನಟ, ನಿರ್ದೇಶಕ, ಸಂಘಟಕ ವೇಣುಗೋಪಾಲ ಟಿ. ಕೋಟ್ಯಾನ್ (ವಿ.ಜಿ.ಪಾಲ್) ಅನಾರೋಗ್ಯದಿಂದ ದಿನಾಂಕ 20-03-2024ರ ಬುಧವಾರ ರಾತ್ರಿ ನಿಧನರಾದರು. ತುಳು ರಂಗಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ್ದ ಅವರು ಹತ್ತಾರು ನಾಟಕಗಳಲ್ಲಿ ಹಾಗೂ ತುಳು ಮತ್ತು ಕನ್ನಡ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ‘ಕಲ್ಜಿಗದ ಕುರುಕ್ಷೇತ್ರ’ ತುಳು ನಾಟಕದ ಮೂಲಕ 1961ರಲ್ಲಿ ರಂಗಪ್ರವೇಶ ಮಾಡಿದ ವಿ.ಜಿ.ಪಾಲ್ ಹಾಸ್ಯ ಪಾತ್ರಕ್ಕೊಂದು ಮಾದರಿಯಾಗಿದ್ದರು. ಚಲನಚಿತ್ರಗಳು, ಕಿರುತೆರೆ, ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದರು. ತುಳು ನಾಟಕಗಳನ್ನು ಪ್ರಥಮ ಬಾರಿಗೆ ಕೊಲ್ಲಿ ರಾಷ್ಟ್ರದಲ್ಲಿ ಪ್ರದರ್ಶನ ನೀಡಿದ ಖ್ಯಾತಿ ಇವರದ್ದು. ಕನ್ನಡದ ‘ಜೀವನ್ಮುಖಿ’, ‘ಮಹಾನದಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಯ್ಯಮಲ್ಲಿಗೆ’, ‘ಭಾಗ್ಯವಂತೆದಿ’, ‘ಸತ್ಯ ಓಲುಂಡು’, ‘ಬಂಗಾರ್ ಪಟ್ಲೇರ್’, ‘ಮಾರಿಬಲೆ’, ‘ತುಡರ್’ ಸೇರಿ ಸುಮಾರು 2,000 ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕ ಹಾಗೂ ಸಿನೆಮಾಗಳಲ್ಲಿ ಅಭಿನಯಿಸಿದ ಹಿರಿಮೆ ಇವರದ್ದು. ಐ. ಟಿ. ಐ. ವಿದ್ಯಾಭ್ಯಾಸ ಪಡೆದಿದ್ದ ಅವರು ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಹಿರಿಯ ಸಹಾಯಕರಾಗಿ ನಿವೃತ್ತರಾಗಿದ್ದರು. ‘ಕರ್ನಾಟಕ…
ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏಪ್ರಿಲ್ ತಿಂಗಳಲ್ಲಿ ನಡೆಯುವ ಕವಿಗೋಷ್ಠಿಗೆ ದಿವ್ಯಾಂಗ ಚೇತನ ಮಕ್ಕಳಿಗಾಗಿ ಕವಿಗೋಷ್ಠಿಗೆ ಆಹ್ವಾನ ನೀಡಲಾಗಿದೆ. ಈ ಗೋಷ್ಠಿ ಕೇವಲ ದಿವ್ಯಾಂಗ ಚೇತನದವರಿಗಾಗಿ ಆಯೋಜಿಸಲಾಗಿದ್ದು, ಮೊದಲು ನೋಂದಾಯಿಸಿದ 25 ಮಂದಿಗೆ ಮಾತ್ರ ಅವಕಾಶ. ಅಲ್ಲದೇ ಕವನ ವಾಚನಕ್ಕೆ ಮಾತ್ರ ಅವಕಾಶ. ಬೇರೆ ಯಾವುದೇ ನೃತ್ಯ, ಹಾಡುಗಳಿಗೆ ಅವಕಾಶವಿಲ್ಲ. ಭಾಗವಹಿಸುವ ದಿವ್ಯಾಂಗ ಚೇತನ ವಿದ್ಯಾರ್ಥಿಗಳಿಗೆ ಅಂದು ಬಿಡುಗಡೆಯಾಗುವ ಕವನ ಸಂಕಲನದಿಂದ ಯಾವುದೇ ಕವನ ವಾಚಿಸಬಹುದು. ಭಾಗವಹಿಸಿದವರನ್ನು ಸಾಕ್ಷಿ ಪ್ರಮಾಣ ಪತ್ರ, ಪುಸ್ತಕ ಕಾಣಿಕೆಯೊಂದಿಗೆ ಗಣ್ಯರು ಗೌರವಿಸಲಿದ್ದಾರೆ. ಭಾಗವಹಿಸುವವರು ದಿನಾಂಕ 07-04-2024ರ ಒಳಗಾಗಿ ಸುಪ್ರೀತಾ ಚರಣ್ ಪಾಲಪ್ಪೆ ಇವರ ವಾಟ್ಸಪ್ಪ್ ಸಂಖ್ಯೆ 8971271027 ಮಾಹಿತಿ ನೀಡುವಂತೆ ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷರು ಚಂದ್ರಮೌಳಿ ಕಡಂದೇಲು ತಿಳಿಸಿದ್ದಾರೆ.
ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿ ಕಾರ್ಯಾಚರಿಸುತ್ತಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆ ಇದರ ಮುಖಾಂತರ ‘ಸಾನಿಧ್ಯ ಉತ್ಸವ’ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ದಿನಾಂಕ 10-03-2024ರಂದು ನಡೆಯಿತು. ಉದ್ಘಾಟನೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ತ್ರಣ್ಣರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮುಂಬೈಯ ಚಾರ್ಟರ್ಡ್ ಅಕೌಂಟೆಂಟ್ ಶ್ರೀ ಸುಧೀರ್ ಶೆಟ್ಟಿಯವರು, ಅದೇ ರೀತಿ ಮಂಡ್ಯ ಜಿಲ್ಲೆಯ ಆಶಾ ಸದನ ವಿಶೇಷ ಶಾಲೆಯ ಮುಖ್ಯಸ್ಥರಾದ ವಂದನೀಯ ಗುರುಗಳಾದ ಜಾಯ್ಸನ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನ ಅಕ್ಕರೆಯ ಬೆಳಕು ಶಾಲೆಯ ಸ್ಥಾಪಕರಾದ ಕರೆಪ್ಪ ಬಿ.ಎಚ್. ಹಾಗೂ ಮಂಗಳೂರು ಕಿನ್ನಿಗೋಳಿಯ ಸೈಂಟ್ ಮೇರಿಸ್ ಸ್ಪೆಷಲ್ ಸ್ಕೂಲಿನ ಮುಖ್ಯಸ್ಥೆಯಾದ ಶ್ರೀಮತಿ ರೇಷ್ಮಾ ಮರಿಯ ಮಾರ್ಟಿಸ್ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಕದ್ರಿ ಹವ್ಯಾಸಿ ಬಳಗದ ಮುಖ್ಯಸ್ಥರಾದ ಶರತ್ ಕುಮಾರ್ ಇವರ ನೇತೃತ್ವದಲ್ಲಿ ವಿಶೇಷ ಮಕ್ಕಳು ಪ್ರದರ್ಶಿಸಿದ…
ಬೆಂಗಳೂರು : 2024ನೇ ಕನ್ನಡ ಸಾಹಿತ್ಯ ಪರಿಷತ್ತಿನ ‘ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ’ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ‘ಉದಯ ಕಾಲ’ ಪತ್ರಿಕೆಯ ಸಂಪಾದಕರಾದ ಕೆ.ಎನ್. ಪುಟ್ಟಲಿಂಗಯ್ಯ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಪ್ರಶಸ್ತಿ ಪುರಸ್ಕೃತರಾದ ಕೆ.ಎನ್. ಪುಟ್ಟಲಿಂಗಯ್ಯ ಗೌಡರು ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದುಕೊಂಡಿದ್ದು, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಉದಯ ಟಿ.ವಿ, ಟೈಮ್ಸ್ ಆಫ್ ಇಂಡಿಯಾ (ಕನ್ನಡ) ಸೇರಿದಂತೆ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದು, ಪತ್ರಿಕೋದ್ಯಮದ ಉನ್ನತ ಆಶಯಗಳನ್ನು ಸದಾ ಎತ್ತಿ ಹಿಡಿಯುತ್ತಾ ಬಂದಿದ್ದಾರೆ. ಪ್ರಸ್ತುತ ‘ಉದಯಕಾಲ’ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕರಾಗಿ ನಿರ್ಭೀತ ಪತ್ರಿಕೋದ್ಯಮವನ್ನು ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದ ದತ್ತಿ ದಾನಿಗಳಾದ ಕಿಟ್ಟಪ್ಪ ಗೌಡರು ಪ್ರೌಢಶಾಲೆಯಲ್ಲಿ ಓದುವಾಗಲೇ ‘ಭಾರತ…
ಕಾರ್ಕಳ : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಉಡುಪಿಯ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಹಾಗೂ ಶ್ರೀ ಭುವನೇಂದ್ರ ಕಾಲೇಜು ಆಶ್ರಯದಲ್ಲಿ ‘ರಾಷ್ಟ್ರೀಯ ಚಿಂತನೆ – ಕನಕ ವೈಚಾರಿಕತೆಯ ಸೊಬಗು’ ಎಂಬ ವಿಚಾರದ ಬಗ್ಗೆ ದಿನಾಂಕ 16-03-2024ರಂದು ರಾಷ್ಟ್ರೀಯ ವಿಚಾರ ಸಂಕಿರಣ ಜರುಗಿತು. ಈ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ದಿಕ್ಸೂಚಿ ಮಾತುಗಳನ್ನಾಡಿದ ನಾಡಿನ ಹಿರಿಯ ವಿದ್ವಾಂಸರೂ, ವಿಶ್ರಾಂತ ಪ್ರಾಚಾರ್ಯರೂ ಆದ ಡಾ. ಪಾದೇಕಲ್ಲು ವಿಷ್ಣು ಭಟ್ “ಭಾರತದಲ್ಲಿ ದಾಸಪರಂಪರೆ, ವಿದ್ವತ್ ಪರಂಪರೆ, ಪ್ರಾಜ್ಞರ ಪರಂಪರೆ ಹೀಗೆ ಹಲವಾರು ವಿಶೇಷ ಪರಂಪರೆಗಳಿವೆ. ಅವುಗಳಲ್ಲಿ ಯಾವುದೂ ಶ್ರೇಷ್ಠ ಮತ್ತು ಕನಿಷ್ಠವೆಂಬುದಿಲ್ಲ. ದಾಸಪರಂಪರೆಯಲ್ಲಿ ಕನಕದಾಸರು ಮುಖ್ಯರಾಗುತ್ತಾರೆ. ಕ್ರಾಂತದರ್ಶಿತ್ವ ಇರುವ ವ್ಯಕ್ತಿತ್ವ ಅವರದು. ಅವರು ಕವಿಗಳೂ ಹೌದು, ಪಂಡಿತರೂ ಹೌದು. ಪುರಾಣದ ಸಂಪೂರ್ಣ ನೆಲೆಗಟ್ಟು ಅವರಲ್ಲಿ ಇದ್ದುದರಿಂದ ಕಾವ್ಯಗಳನ್ನು ಕಟ್ಟುವಲ್ಲಿ ಅವರು ಯಶಸ್ವಿಯಾದರು. ದೋಷಜ್ಞರಾದುದರಿಂದ ಆತ್ಮವಿಮರ್ಶೆಯ…