Subscribe to Updates
Get the latest creative news from FooBar about art, design and business.
Author: roovari
ಹಾನಗಲ್ಲ : 19ನೆಯ ಶತಮಾನದ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ, ಪ್ರೊ. ಜಿ.ಹೆಚ್. ಹನ್ನೆರಡುಮಠ ವಿರಚಿತ ‘ಯುಗಪುರುಷ’ ನಾಟಕವನ್ನು ಶ್ರೀ ಸಿದ್ದೇಶ್ವರ ಸಾಂಸ್ಕೃತಿಕ ಕಲಾ ಸಂಘ (ರಿ) ಹುಲಗಿನಕಟ್ಟಿ ರಂಗತಂಡವು ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಸೇವಾ ಸಮಿತಿ ನವದೆಹಲಿ ಇವರ ಸಹಯೋಗದಲ್ಲಿ ದಿನಾಂಕ 25-11-2023ರಂದು ಶ್ರೀ ಶಿವಯೋಗ ಮಂದಿರದ ಬಯಲು ಮಂಟಪದಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗದಗ ಜಿಲ್ಲೆಯ ಶಿರಹಟ್ಟಿಯ ಹಿಂದು-ಮುಸ್ಲಿಂ ಭಾವೈಕ್ಯತಾ ಮಹಾಸಂಸ್ಥಾನದ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ್ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಟಕ ಮಾಧ್ಯಮದ ಪ್ರಾಮುಖ್ಯತೆಯನ್ನು ಮತ್ತು ಅದರ ಪರಿಣಾಮಗಳ ಕುರಿತು ಔಚಿತ್ಯಪೂರ್ಣವಾಗಿ ತಿಳಿಸಿ ನಾಟಕಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಿವಯೋಗ ಮಂದಿರದ ವಟು ಸಾಧಕರು, ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರುಗಳು, ಹಾವೇರಿ, ಅಥಣಿ, ಅಕ್ಕಿಆಲೂರು ಮತ್ತು ಹಲವಾರು ಮಠಗಳ ಶ್ರೀಗಳು, ಸುತ್ತಮುತ್ತ ಗ್ರಾಮಗಳ ಭಕ್ತರು ಮತ್ತು ದೂರದ ಊರುಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.…
ಅದೊಂದು ‘ರಂಗಪ್ರವೇಶ’ ಎನ್ನುವಂತೆಯೇ ಇರಲಿಲ್ಲ. ನಗುಮೊಗದ ನೃತ್ಯಕಲಾವಿದೆ ಲಿಖಿತಾ ನಾರಾಯಣ ಪಳಗಿದ ನರ್ತಕಿಯಂತೆ ರಂಗದ ಮೇಲೆ ಆತ್ಮವಿಶ್ವಾಸದಿಂದ ಚೈತನ್ಯಪೂರ್ಣವಾಗಿ ನರ್ತಿಸಿದಳು. ‘ಸಾಧನ ನೃತ್ಯಶಾಲೆ’ಯ ಪರಿಣತ ನೃತ್ಯಗುರು ಭಾವನಾ ವೆಂಕಟೇಶ್ವರ ಅವರ ಶಿಸ್ತುಬದ್ಧ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ಲಿಖಿತಾ ಇತ್ತೀಚೆಗೆ ಜೆ.ಎಸ್.ಎಸ್. ರಂಗ ಮಂದಿರದಲ್ಲಿ ವಿಧ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು. ಷೋಡಶ ತರುಣಿ, ನೃತ್ಯಕ್ಕೆ ಹೇಳಿ ಮಾಡಿಸಿದ ಮಾಟವಾದ ಸಪೂರ ಮೈಕಟ್ಟು ಹೊಂದಿದ್ದು, ಕಣ್ಮನ ತುಂಬುವಂತೆ ಅನೇಕ ದೈವೀಕ ಕೃತಿಗಳನ್ನು ರಮ್ಯವಾಗಿ ಸಾಕ್ಷಾತ್ಕರಿಸಿದ್ದು ಕಲಾರಸಿಕರಿಗೆ ಆನಂದ ತಂದಿತು. ಲಿಖಿತಾ, ಹಕ್ಕಿ ಹಗುರಿನ ಹೆಜ್ಜೆಗಳಲ್ಲಿ ರಂಗದ ತುಂಬಾ ನಲಿವಿನ ಗೆಜ್ಜೆಕಾಲ್ಗಳನ್ನು ಝಣಿಸುತ್ತ ಗುರುಗಳ ಹಾಗೂ ವಾದ್ಯಗಾರರ ಪಾದಗಳಿಗೆರಗುತ್ತ ವಿನಯದ ನಮನ ಸಲ್ಲಿಸಿ ‘ಪುಷ್ಪಾಂಜಲಿ’ಯ ಮೂಲಕ ದೇವಾನುದೇವತೆಗಳಿಗೆ ನೃತ್ತನೈವೇದ್ಯ ಸಲ್ಲಿಸಿ ನೃತ್ಯಾರಾಧನೆಗೆ ತೊಡಗಿದ್ದು ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆಯನ್ನು ಪಡೆಯಿತು. ‘ಕಮಲಾಕುಚ ಚೂಚುಕ ಕುಂಕುಮತೋ..’ ಎಂಬ ಶ್ರೀವೆಂಕಟೇಶ ಸುಪ್ರಭಾತದ ಸ್ತುತಿ, ವೆಂಕಟೇಶ್ವರನಿಗೆ ಸಂದ ಪ್ರಥಮ ನೃತ್ಯ ಪೂಜಾರ್ಪಣೆ. ನೃತ್ಯದ ಅಚ್ಚುಕಟ್ಟುತನ ಮನಕ್ಕೆ ಮುದತಂದಿತು. ಗುರು ಭಾವನಾ ನೃತ್ಯ…
ಉಡುಪಿ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಹಕ್ಲಾಡಿಯ ಸರಕಾರಿ ಪ್ರೌಢಶಾಲೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿಸ್ತರಣಾ ಉಪನ್ಯಾಸ ಮಾಲಿಕೆಯ 5ನೇ ಉಪನ್ಯಾಸ ಕಾರ್ಯಕ್ರಮವು ಬಾರ್ಕೂರಿನ ನೇಶನಲ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 16-11-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ‘ಕನಕದಾಸರ ಕೃತಿಗಳಲ್ಲಿ ಭಕ್ತಿಭಾವದ ಪರಿಕಲ್ಪನೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಪ್ರಜ್ಞಾಮಾರ್ಪಳ್ಳಿ ಮಾತನಾಡಿ “ಕನಕದಾಸರು ಸಾರಸ್ವತ ಲೋಕ ಕಂಡ ಅಪೂರ್ವ ಕವಿ, ಚಿಂತಕ, ದಾರ್ಶನಿಕ ಎಲ್ಲವೂ. ಅವರು ದಾಸಪರಂಪರೆಯಲ್ಲಿ ಭಿನ್ನಸ್ಥಾನವನ್ನು ಪಡೆಯಲು ಪ್ರಮುಖ ಕಾರಣ ಅವರು ಕೇವಲ ಕೀರ್ತನಕಾರರಾಗಿರದೆ ನಾಲ್ಕು ಅಮೂಲ್ಯ ಕೃತಿಗಳನ್ನು ನೀಡಿರುವುದು. ಕಾವ್ಯಪ್ರಭೇದಗಳ ಅರಿವು ಕನಕದಾಸರಿಗಿತ್ತು. ಭಕ್ತಿಯ ಪರಾಕಾಷ್ಠೆಯೇ ಕನಕದಾಸರ ಕೀರ್ತನೆಗಳ ಹೆಗ್ಗುರುತೆನ್ನಬಹುದು. ‘ಮೋಹನ ತರಂಗಿಣಿ’ ಕನಕದಾಸರ ವಿಭಿನ್ನ ಕೃತಿ. ಅದು ವಿಜಯನಗರದ ಸಮಕಾಲೀನ ಚಿಂತನೆಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಭಾವಾಭಿವ್ಯಕ್ತಿಯ ದೃಷ್ಟಿಯಿಂದ ನೋಡಿದಾಗ ಕನಕದಾಸರಿಗೆ ವಿಜಯನಗರದ ವೈಭವದ ಬಗೆಗಿದ್ದ ಅಭಿಮಾನ ಮತ್ತು…
ಸುರತ್ಕಲ್ : ಹರಿದಾಸ, ಯಕ್ಷಗಾನ ಅರ್ಥಧಾರಿ, ಸಂಘಟಕ ಹಾಗೂ ಶೇಣಿ ಪ್ರತಿಷ್ಠಾನದ ಕಾರ್ಯದರ್ಶಿಯಾದ ಪೇಜಾವರ ಶ್ರೀ ವಿಜಯಾನಂದ ರಾವ್ ದಿನಾಂಕ 19-11-2023 ರಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ ಮಣಿ ಕೃಷ್ಣಸ್ವಾಮಿ ಅಕಾಡಮಿಯ ವತಿಯಿಂದ ದಿನಾಂಕ 01-12-2023ರ ಶುಕ್ರವಾರ ಸಂಜೆ ಗಂಟೆ 5.00ರಿಂದ ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರಸ್ತೆಯಲ್ಲಿರುವ ‘ಅನುಪಲ್ಲವಿ’ಯಲ್ಲಿ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ನ್ಯಾಯವಾದಿ ಕೂಡ್ಲು ಶ್ರೀ ಮಹಾಬಲ ಶೆಟ್ಟಿ ನುಡಿ ನಮನ ಸಲ್ಲಿಸಲಿರುವರು. ಬಳಿಕ ಶ್ರೀಯುತರ ಸ್ಮರಣಾರ್ಥ ‘ಸುಧನ್ವ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವ ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಶ್ರೀಮತಿ ಶಾಲಿನಿ ಹೆಬ್ಬಾರ್, ಶ್ರೀ ಪಿ. ನಿತ್ಯಾನಂದ ರಾವ್ ಭಾಗವಹಿಸುವರು. ಮದ್ದಳೆಯಲ್ಲಿ ಶ್ರೀ ಕೆ. ರಾಮ ಹೊಳ್ಳ ಭಾಗವಹಿಸಲಿದ್ದು, ಅರ್ಥದಾರಿಗಳಾಗಿ ಸರ್ವ ಶ್ರೀ ಜಿ.ಕೆ. ಭಟ್, ಸೇರಾಜೆ ಸೀತಾರಾಮ ಭಟ್, ಪೇಜಾವರ ಸತ್ಯಾನಂದ ರಾವ್, ಶ್ರೀ ಚಂದ್ರಶೇಖರ ಕೋಡಿಪ್ಪಾಡಿ…
ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಹಯೋಗದೊಂದಿಗೆ ನಡೆಯುವ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-11-2023 ರಂದು ಕಾರ್ಕಳ ಸರಕಾರಿ.ಪ.ಪೂ.ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಅಕ್ಕಮಹಾದೇವಿಯ ವಚನಗಳು : ಒಂದು ಪ್ರವೇಶ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಹಪ್ರಾಧ್ಯಾಪಕಿಯಾದ ಡಾ.ಜ್ಯೋತಿ ರೈ “ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪತಿ ಕೌಶಿಕನನ್ನು ಮತ್ತು ಸಕಲ ಸೌಭಾಗ್ಯಗಳನ್ನು ತಿರಸ್ಕರಿಸಿ ಏಕಾಂಗಿಯಾಗಿ ಆಧ್ಯಾತ್ಮದ ಹಾದಿಯಲ್ಲಿ ನಡೆದ ಅಕ್ಕಮಹಾದೇವಿಯ ದಿಟ್ಟತನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಅಲ್ಲಮಪ್ರಭುಗಳು ಹೇಳುವಂತೆ ಶಿವಶಕ್ತಿಯ ಸ್ತ್ರೀ ರೂಪವೇ ಆಗಿದ್ದ ಅಕ್ಕಮಹಾದೇವಿಯನ್ನು ಅನುಭವ ಮಂಟಪದಲ್ಲಿ ಪರೀಕ್ಷೆಗೆ ಒಡ್ಡಿ ಆಕೆಯ ವ್ಯಕ್ತಿತ್ವ, ಅಸ್ತಿತ್ವವನ್ನು ಅಲ್ಲಮಪ್ರಭುಗಳು ಜಗತ್ತಿಗೆ ಪರಿಚಯಿಸಿದರು. ಲೌಕಿಕ ಪುರುಷನನ್ನು ತಿರಸ್ಕರಿಸಿ ಅಲೌಕಿಕ ಪುರುಷ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಾವಿಸಿ ಅರಿಷಡ್ವೈರಿಗಳನ್ನೆಲ್ಲ ತೊರೆದು ಮಾನಸಿಕವಾಗಿಯೂ ಬೆತ್ತಲಾಗಿ ಶ್ರೇಷ್ಠ ವಚನಗಳನ್ನೂ ನೀಡಿದ ಆಕೆಯಲ್ಲಿ ದೈಹಿಕ ಭಾವವನ್ನು ಮೀರಿದ ಅಕ್ಕಮಹಾದೇವಿಯನ್ನು ಕಾಣಬಹುದಾಗಿದೆ. ಅಕ್ಕನ ವಚನಗಳಲ್ಲಿ…
ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ವಿವಿಧ ಜಿಲ್ಲೆಗಳ ಕವಿ, ಕವಯತ್ರಿಯವರ ಕವನ ಸಂಗ್ರಹದ ‘ಕಾವ್ಯ ಕುಂಚ’ ಭಾಗ ಮೂರು ಮತ್ತು ಕಲಾಕುಂಚ ಅಭಿಮಾನಿಗಳ ಲೇಖನಗಳ ಸಂಗ್ರಹದ ಕಿರುಹೊತ್ತಿಗೆ ‘ಕುಂಚ ಕೈಪಿಡಿ’ಗಳ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 26-11-2023 ರಂದು ನಡೆಯಿತು. ದಾವಣಗೆರೆಯ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರೋಟರಿ ಬಾಲ ಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ನಾಡಿನ ಖ್ಯಾತ ಹಿರಿಯ ಸಾಹಿತಿ ಕವಯತ್ರಿ ಹಾಗೂ ರಂಗಕರ್ಮಿಯಾದ ಧಾರವಾಡದ ಡಾ. ಹೇಮಾ ಪಟ್ಟಣಶೆಟ್ಟಿ “ನವ, ಯುವ ಸಾಹಿತಿಗಳು, ಕವಿಗಳು, ಕವಯಿತ್ರಿಯರು ಕವನ ರಚಿಸಿ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡುವುದಕ್ಕೇ ಸೀಮಿತವಾಗದೆ. ಅಕ್ಷರಜ್ಞಾನದೊಂದಿಗೆ ಅಂತರಾಳದಿಂದ ಅರಿವು ಮೂಡಿಸಿ ಆಗ ಕವನ, ಕಾವ್ಯ ರಚನೆಗಳಿಗೆ ಪರಿಪೂರ್ಣತೆ ಬರುತ್ತದೆ. ನಾಲ್ಕು ಗೋಡೆಯ ಮಧ್ಯೆ ಅಡಿಗೆಮನೆಗೆ ಸೀಮಿತವಾದ ಮಹಿಳೆಯರನ್ನು ಹೊರತಂದು ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತವಾದ ಸೂಕ್ತವಾದ ವೇದಿಕೆ ಕಲ್ಪಿಸುತ್ತಿರುವ ಕಲಾಕುಂಚದ ಮೂರುವರೆ ದಶಕಗಳ ಸಾಧನೆ…
ಉಡುಪಿ : ತುಳು ಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ದಿ. ನಿಟ್ಟೂರು ಸಂಜೀವ ಭಂಡಾರಿ ನೆನಪಿನಲ್ಲಿ ‘ತುಳು ಭಾವಗೀತೆ ಪಂಥೊ -2023’ ಕಾರ್ಯಕ್ರಮವು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಇಲ್ಲಿ ದಿನಾಂಕ 26-11-2023ರಂದು ನಡೆಯಿತು. ತುಳು ಸುಗಮ ಸಂಗೀತ ಕಲಾವಿದ ಶ್ರೀ ಬಿ.ಕೆ. ಕಾರಂತ್ ಜ್ಯೋತಿ ಬೆಳಗಿಸಿ ಭಾವಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ “ಉಸಿರು ನಿಂತರೂ ಹೆಸರು ಉಳಿಸಿಸುವ ಕಾರ್ಯಕ್ರಮವನ್ನು ನಿರಂತರ ತುಳುಕೂಟ ಮಾಡುತ್ತಿದೆ. ಒಳ್ಳೆ ಕೆಲಸ ಮಾಡಿದವರ ಹೆಸರು ಅಜರಾಮರವಾಗಿರಬೇಕು. ಶಾಲೆಗೆ ಸೇರಿಸುವಾಗ ಮಾತೃ ಭಾಷೆ ತುಳು ಎಂದು ನಮೂದಿಸಿ. ಹತ್ತು ವರ್ಷದ ಬಳಿಕ ತುಳು ಕೋಟಾದಲ್ಲಿ ಸೀಟು ಸಿಗುವುದು” ಎಂದು ಹೇಳಿದರು. “ಭಾವಗೀತೆಯಲ್ಲಿ ಭಾವನಾತ್ಮಕ ಸಂಬಂಧವಿದೆ. ತಂತಜ್ಞಾನದೊಂದಿಗೆ ನಮ್ಮತನವನ್ನು ಬಿಟ್ಟುಕೊಡಬಾರದು” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆಯ…
ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಕಲಾವಿದರ ಯಕ್ಷ ಪಯಣದ ಸ್ವಗತ ‘ಯಕ್ಷಾಯಣ’ ದಾಖಲೀಕರಣ ಸರಣಿ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 01-12-2023ರಂದು ಶುಕ್ರವಾರ ಸಂಜೆ ಗಂಟೆ 4ಕ್ಕೆ ಮಂಗಳಗಂಗೋತ್ರಿ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಲಿದೆ. ಯಕ್ಷಾಯಣ ಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ಣಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಉದ್ಘಾಟಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಜಯರಾಜ್ ಅಮೀನ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ಪ್ರಾಧ್ಯಾಪಕರಾದ ಡಾ. ಬೋಜ ಪೂಜಾರಿ ಅವರು ಗೌರವ ಉಪಸ್ಥಿತಿಯಲ್ಲಿ ಯಕ್ಷಗಾನ ವಿದ್ವಾಂಸರು ಹಾಗೂ ಅರ್ಥಧಾರಿಗಳಾಗಿರುವ ಡಾ. ಎಂ.ಪ್ರಭಾಕರ ಜೋಶಿ ಅವರು ಕಾರ್ಯಕ್ರಮದಲ್ಲಿ ತಮ್ಮ ಮಂಗಳೂರು ಯಕ್ಷಪಯಣದ ಅನುಭವ ಕಥನವನ್ನು ಹಂಚಿಕೊಳ್ಳಲಿದ್ದಾರೆ.
ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ದತ್ತಿನಿಧಿ ಸಮಿತಿ ಮಂಗಳೂರು ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ – ವಿಶುಕುಮಾರ್ ಸಾಹಿತ್ಯೋತ್ಸವ ಮತ್ತು 20ನೇ ವರ್ಷದ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 26-11-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಡಿ. ವೇದವ್ಯಾಸ ಕಾಮತ್ “ಹಿರಿಯರ ಕೊಡುಗೆಗಳು ಯುವಕರಿಗೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಘಟಕ ವರ್ಷವಿಡೀ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತಿದೆ. ವಿಶುಕುಮಾರ್ ಅವರು ತಮ್ಮನ್ನು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಸಾಹಿತ್ಯದ ಜತೆ ಗೀತೆ ಹಾಡುತ್ತಿದ್ದರು. ಹಾರ್ಮೋನಿಯಂ ನುಡಿಸುತ್ತಿದ್ದರು. ನಾಟಕದ ಪಾತ್ರ ಮಾಡುತ್ತಿದ್ದರು. ನಿರ್ದೇಶಕರಾಗಿದ್ದರು. ಹಲವು ಪ್ರತಿಭೆಗಳನ್ನು ಹೊಂದಿದ ಅವರ ಸಾಧನೆ ಅಪಾರ” ಎಂದರು. ಕಾರ್ಯಕ್ರಮವನ್ನು ಕೆಸ್ಯಾಟ್ ಬೆಂಗಳೂರಿನ ಉಪ ನಿರ್ದೇಶಕ ಉಲ್ಲಾಸ್ ರಂಗಯ್ಯ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ.…
ಬೆಳ್ತಂಗಡಿ : ವಾಣಿ ಕಾಲೇಜು ಆವರಣದಲ್ಲಿ ದಿನಾಂಕ 17-12-2023ರಂದು ನಡೆಯಲಿರುವ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಎ.ಕೃಷ್ಣಪ್ಪ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ವಿಶ್ರಾಂತ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ ಕಡಬ ತಾಲೂಕಿನ ಆಲಂಕಾರು ಗ್ರಾಮದ ಎಂ. ತಿಮ್ಮಪ್ಪ ಪೂಜಾರಿ ಮತ್ತು ಮುತ್ತಕ್ಕೆ ಅವರ ಮಗನಾಗಿ ದಿನಾಂಕ 15-11-1947ರಂದು ಜನಿಸಿದರು. ಅವರು ಹಿರಿಯರ ಆಶಯದಂತೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ದೀರ್ಘಾವಧಿ ದುಡಿಮೆಯಲ್ಲಿ ಅಪಾರ ಶಿಷ್ಯ ವರ್ಗವನ್ನು ಪಡೆದಿದ್ದಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಹಾಗೂ ಬಿಇಡಿ ಪದವಿ ಗಳಿಸಿರುವ ಇವರು, 1996ರಿಂದ 2006ರ ವರೆಗೆ ಬೇರೆ ಬೇರೆ ಸರಕಾಲ ಪ್ರಾಥಮಿಕ ಶಾಲೆಗಳಲ್ಲಿ, ಸರಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ನಂತರ ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟು 53 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ…