Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ರಂಗಚಂದಿರ ಟ್ರಸ್ಟ್ (ರಿ.) ಪ್ರಸ್ತುತ ಪಡಿಸುವ ಡಾ. ಚಂದ್ರಶೇಖರ ಕಂಬಾರ ರಚಿಸಿರುವ ‘ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶನವು ದಿನಾಂಕ 02-03-2024ರಂದು ಸಂಜೆ 6.30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಮೂಲ ಜೋತಪ್ಪ ಈ ನಾಟಕದ ನಿರ್ದೇಶನ ಮಾಡಿದ್ದು, ಎಸ್.ಟಿ. ಮಲ್ಲು (ತಿಮ್ಮಯ್ಯ), ಶೀಬಾ ಮತ್ತು ಆರ್.ಕೆ. ಪ್ರವೀಣ್ ಮೇಳದಲ್ಲಿದ್ದಾರೆ. ಸಿ.ಎಂ.ಟಿ. ಇವರು ಸಹನಿರ್ದೇಶನ ಮಾಡಿದ್ದು, ಜಿ. ಪಿ. ಒ. ಚಂದ್ರು ನಿರ್ವಹಣೆ ಮಾಡಿರುತ್ತಾರೆ. ಸಂಸ್ಕೃತಿ ಸಚಿವಾಲಯ ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ನಡೆಯಲಿದೆ. ನಿವೃತ್ತ ಮುಖ್ಯ ಇಂಜಿನಿಯರ್ ಹಾಗೂ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಆರ್. ನರೇಂದ್ರ ಬಾಬು ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀಮತಿ ಎನ್. ನಮೃತ ಇವರು ನಾಟಕ ಪ್ರದರ್ಶನದ ಉದ್ಘಾಟನೆ ಮಾಡಲಿದ್ದಾರೆ. ‘ಸಂಗ್ಯಾಬಾಳ್ಯಾ’ ನಡೆದ ಘಟನೆಯನ್ನು ಬಯಲಾಟವಾಗಿಸಿದ ಜಾನಪದ ರೂಪಕ. ಹಾಡುಗಳ ಜನಪ್ರಿಯ ಧಾಟಿಗಳು ಹಾಗೂ ನಡೆದ ಘಟನೆಯ ಆಧಾರದ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷರಂಗಾಯಣ ಕಾರ್ಕಳ ವತಿಯಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ದಿನಾಂಕ 05-03-2024ರ ಮಂಗಳವಾರ ಸಂಜೆ ಗಂಟೆ 6:15ಕ್ಕೆ ಡಾ. ಗೀತಾ ಪಿ. ಸಿದ್ಧಿ ಅವರ ಕಥೆ ಆಧಾರಿತ ಶಿವಮೊಗ್ಗ ರಂಗಾಯಣ ಪ್ರಸ್ತುತಪಡಿಸುವ ‘ಮಾರ್ನಮಿ’ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕದ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಕಾಂತ್ ಕುಮಟಾ ಇವರು ಮಾಡಿದ್ದು, ಶ್ರೀಪಾದ್ ತೀರ್ಥಹಳ್ಳಿ ಇವರ ಸಂಗೀತ ಇರುತ್ತದೆ. ನೃತ್ಯ ಸಂಯೋಜನೆ ಮತ್ತು ಸಿದ್ಧಿ ಹಾಡುಗಳು ಗಿರೀಶ್ ಪಿ. ಸಿದ್ಧಿ ಮಂಚಿಕೇರಿಯವರು ಸಂಯೋಜನೆ ಮಾಡಿರುತ್ತಾರೆ. ರಂಗಸಜ್ಜಿಕೆ ಮತ್ತು ಪರಿಕರ ಮಧುಸೂದನ್, ವಸ್ತ್ರವಿನ್ಯಾಸ ರಾಜಣ್ಣ ಗಡಿಕಟ್ಟೆ ಮತ್ತು ಬೆಳಕು ಚಂದನ್ ಎನ್. ಇವರು ನಿರ್ವಹಿಸಿರುತ್ತಾರೆ. ಕನ್ನಡ ಮತ್ತು ಕೊಂಕಣಿ ಮಿಶ್ರಿತ ‘ಮಾರ್ನಮಿ’ ಎಂಬ ನಾಟಕ ಶ್ರೀಕಾಂತ್ ಕುಮಟಾ ಇವರ ನಿರ್ದೇಶನದಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ 4 ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮನಗೆದ್ದ ನಾಟಕವಾಗಿದೆ. ಈ ನಾಟಕವನ್ನು ಶ್ರೀಕಾಂತ್ ಕುಮಟಾ ಇವರು ಉತ್ತರ…
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಭಾವಿಯಾಗಿ ವಾರಪೂರ್ತಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ಭಾಗವಾಗಿ ಚರ್ಚೆ, ಛದ್ಮವೇಷ ಹಾಗೂ ಕವನ ರಚನೆ ಸ್ಪರ್ಧೆಗಳು ಆಳ್ವಾಸ್ ಕಾಲೇಜಿನಲ್ಲಿ ದಿನಾಂಕ 29-02-2024 ರಂದು ಪ್ರಾರಂಭಗೊಂಡಿತು. ಪದವಿ ಪೂರ್ವ ಹಾಗೂ ಪದವಿ ಮತ್ತು ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಚರ್ಚಾ ಸ್ಪರ್ಧೆಯಲ್ಲಿ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಶೆಟ್ಟಿ ಪ್ರಥಮ, ಆಳ್ವಾಸ್ ಕಾಲೇಜಿನ ಬಿ. ಬಿ. ಎ. ವಿದ್ಯಾರ್ಥಿ ಶಶಾಂಕ್ ದ್ವಿತೀಯ ಹಾಗೂ ಶ್ಯಾಮ್ ಪ್ರಸಾದ್ ತೃತೀಯ ಬಹುಮಾನ ಪಡೆದರು. ಚರ್ಚಾ ಸ್ಪರ್ಧೆಯಲ್ಲಿ ‘ಸೌಂದರ್ಯ ಹಾಗೂ ಕಾಸ್ಮೆಟಿಕ್ಸ್ ಕ್ಷೇತ್ರ ಮಹಿಳೆಯರಿಗೆ ವರದಾನವೇ?’, ‘ವಿವಾಹಿತ ಮಹಿಳೆಯರಿಗೆ ವೃತ್ತಿ ಹಾಗೂ ಸಾಂಸಾರಿಕ ಜವಾಬ್ದಾರಿಗಳು’, ‘ಚಲನಚಿತ್ರಗಳಲ್ಲಿ ಬಿಂಬಿಸುವ ಮಹಿಳಾ ಚಿತ್ರಣಗಳು ನೈಜತೆ ಸಾರುತ್ತವೆಯೇ?’ ಹಾಗೂ ‘ಸರ್ಕಾರದ ಮೀಸಲಾತಿ ಹಾಗೂ ಮಹಿಳಾ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆಯೇ?’ ಮತ್ತಿತರ ವಿಷಯಗಳ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’. ಇದರ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 04-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಉಡುಪಿಯ ವಿದುಷಿ ಶೀತಲ್ ರಾವ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀ ಪ್ರದೀಪ್ ಕುಮಾರ್ ಹಾಗೂ ಶ್ರೀಮತಿ ಗೀತಾಂಜಲಿ ಇವರ ಸುಪುತ್ರಿಯಾಗಿರುವ ಡಾ. ಶೀತಲ್ ಉಡುಪಿಯ ಎಸ್. ಡಿ. ಎಂ. ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಕೇರಳದ ಕೊಲ್ಲಂನಲ್ಲಿರುವ ‘ಅಮೃತ ಸ್ಕೂಲ್ ಆಫ್ ಆಯುರ್ವೇದ’ ಇಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಭರತನಾಟ್ಯ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕಳೆದ ಸುಮಾರು 12 ವರ್ಷಗಳಿಂದ ಭರತನಾಟ್ಯವನ್ನು ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದ ಜೂನಿಯರ್, ಸೀನಿಯರ್ ಹಾಗೂ…
ಸುಬ್ರಹ್ಮಣ್ಯ : ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಇವರ ವತಿಯಿಂದ ಪುರಂದರದಾಸ ಹಾಗೂ ಸಂತ ತ್ಯಾಗರಾಜರ ‘ಆರಾಧನಾ ಮಹೋತ್ಸವ’ವು ಕುಕ್ಕೇ ಶ್ರೀ ಸುಬ್ರಹ್ಮಣ್ಯದ ಧರ್ಮ ಸಮ್ಮೇಳನ ಮಂಟಪದಲ್ಲಿ ದಿನಾಂಕ 03-03-2024ರಂದು ನಡೆಯಲಿದೆ. ಮುಂಜಾನೆ 6-00 ಗಂಟೆಗೆ ನಗರ ಸಂಕೀರ್ತನೆ, 8:00 ಗಂಟೆಗೆ ದೀಪೋಜ್ವಲನ, ಗಂಟೆ 8-15ಕ್ಕೆ ವಿದ್ವಾನ್ ಚಿಂತನ್ಪಲ್ಲಿ ಶ್ರೀನಿವಾಸ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, 9-00 ಗಂಟೆಗೆ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲುಕಟ್ಟೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, 9:35ಕ್ಕೆ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟದ ಸರ್ವ ಸದಸ್ಯರಿಂದ ಪಂಚರತ್ನ ಗೋಷ್ಠಿ ಗಾಯನ, ಗಂಟೆ 10-25ಕ್ಕೆ ವಿಶ್ವಮೋಹನ ನೃತ್ಯ ಕಲಾಶಾಲೆ ಕಡಬ ವಿದುಷಿ ಮಾನಸ ಪುನೀಶ್ ರೈ ಬಳಗದವರಿಂದ ಭರತನಾಟ್ಯ, 11 ಗಂಟೆಗೆ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಪಿಟೀಲು ವಾದನ, 11.30ಕ್ಕೆ ಶ್ರೀಮತಿ ವಿದುಷಿ ಡಾ. ಜಲಜಾ ಪ್ರಸಾದ್ ಇವರಿಂದ ಕರ್ನಾಟಕ ಶಾಸ್ತ್ರೀಯ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಮಾರ್ಚ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 04-03-2024, 11-03-2024, 18-03-2024 ಮತ್ತು 25-03-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 04-03-2024ರಂದು ನಡೆಯಲಿರುವು ಸರಣಿ 35ರಲ್ಲಿ ವಿದುಷಿ ಶೀತಲ್ ರಾವ್ ಉಡುಪಿ, ದಿನಾಂಕ 11-03-2024ರಂದು ನಡೆಯಲಿರುವು ಸರಣಿ 36ರಲ್ಲಿ ಶ್ರೀಕರಿ ಮಂಗಳೂರು, ದಿನಾಂಕ 18-03-2024ರಂದು ನಡೆಯಲಿರುವು ಸರಣಿ 37ರಲ್ಲಿ ಶ್ರದ್ಧಾ ಶ್ರೀನಿವಾಸ್ ಬೆಂಗಳೂರು ಮತ್ತು ದಿನಾಂಕ 25-03-2024ರಂದು ನಡೆಯಲಿರುವು ಸರಣಿ 38ರಲ್ಲಿ ವಿದುಷಿ ಚೈತ್ರಾ ರಾವ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.
ಮಂಗಳೂರು: ನಡೆದಾಡುವ ಜ್ಞಾನ ಭಂಡಾರ, ಪತ್ರಿಕಾ ರಂಗದ ಭೀಷ್ಮ, ಅಪ್ರತಿಮ ವಾಗ್ಮಿಯಾದ ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಸ್ನೇಹ ಜೀವಿ ಮನೋಹರ್ ಪ್ರಸಾದ್(64) ದಿನಾಂಕ 01-03-2024ನೇ ಶುಕ್ರವಾರ ಬೆಳಗಿನಜಾವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕು ಕರುವಾಲು ಗ್ರಾಮದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ‘ನವ ಭಾರತ’ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಮಂಗಳೂರು ಉದಯವಾಣಿ ಪತ್ರಿಕೆಯ ವರದಿಗಾರರಾಗಿದ್ದರು. ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದರು. ಉತ್ತಮ ಕಥೆಗಾರರು, ಕವಿಯಾಗಿದ್ದ ಮನೋಹರ್ ಪ್ರಸಾದ್ ಅವರು ಕರಾವಳಿ ಇತಿಹಾಸ ಕುರಿತ 600ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅಂತಿಮ ದರ್ಶನ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲೋಬೊ ಲೇನ್ ನಲ್ಲಿರುವ ‘ಈಶ ಅಪಾರ್ಟ್ಮೆಂಟ್’ ನಲ್ಲಿ ಅಪರಾಹ್ನ…
ಧರ್ಮಸ್ಥಳ : ರಂಗಶಿವ ಕಲಾಬಳಗ ಧರ್ಮಸ್ಥಳ ಅರ್ಪಿಸುವ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಕ್ಷೇತ್ರದ ಸಿಬ್ಬಂದಿಗಳು ಅಭಿನಯಿಸುವ ‘ಕೇಳೆ ಸಖಿ ಚಂದ್ರಮುಖಿ’ ಯಕ್ಷ ನಾಟಕವು ದಿನಾಂಕ 02-03-2024ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಪ್ರಜ್ಞಾ ಮತ್ತಿಹಳ್ಳಿ ಮೂಲ ರಚನೆಯ ಈ ನಾಟಕವನ್ನು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಮರು ರಂಗರೂಪಗೊಳಿಸಿದ್ದು, ವಿನ್ಯಾಸ ಮತ್ತು ನಿರ್ದೇಶನ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರದ್ದು.
ಮಂಗಳೂರು : ಆಯನ ನಾಟಕದ ಮನೆ ಮತ್ತು ರಂಗ ಅಧ್ಯಯನ ಕೇಂದ್ರ ಹಾಗೂ ಸಂತ ಆಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಮಂಗಳೂರು ಸಹಭಾಗಿತ್ವದಲ್ಲಿ ಎರಡು ನಾಟಕ ಪ್ರದರ್ಶನವು ದಿನಾಂಕ 04-03-2024 ಮತ್ತು 05-03-2024ರಂದು ಸಂಜೆ 7-00 ಗಂಟೆಗೆ ಸಂತ ಆಲೋಶಿಯಸ್ ಸಹೋದಯ ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 04-03-2024ರಂದು ಚಂದ್ರಶೇಖರ್ ಕೆ. ನಿರ್ದೇಶನದಲ್ಲಿ ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ಹೋರಾಟದ ಹಾಡುಗಳ ಹುಟ್ಟಿನ ಕಥನ ‘ಪಂಚಮಪದ’ ಮತ್ತು ದಿನಾಂಕ 05-03-2024ರಂದು ಶ್ರೀಜಿತ್ ಸುಂದರಂ ಬೆಂಗಳೂರಿನ ಪಯಣ ಪ್ರಸ್ತುತ ಪಡಿಸುವ ಮಂಗಳಮುಖಿಯರ ನಿಜ ಕನಸು ‘ತಲ್ಕಿ’ ನಾಟಕಗಳ ಪ್ರದರ್ಶನ ನಡೆಯಲಿದೆ. ಪಂಚಮಪದ : ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಆ ಹಾಡುಗಳೊಂದಿಗೆ ಇಲ್ಲಿನ ಹಲವು ಜನ ಸಮುದಾಯಗಳ ಸಂಸ್ಕೃತಿ, ಬದುಕು, ಬವಣೆ, ಚಳುವಳಿಯ ನೆನಪುಗಳು ಬೆಸೆದುಕೊಂಡಿವೆ. ಇಂತಹ ಹತ್ತಾರು ಹಾಡುಗಳ ಹುಟ್ಟಿನ ಸುತ್ತಲಿನ ಕಥನಗಳನ್ನು ನಾವು ಬಗೆಯುತ್ತಾ ಹೋದಂತೆ ಈ ನೆಲದ ಸಾಂಸ್ಕೃತಿಕ ಇತಿಹಾಸದ ಭಿನ್ನ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಪ್ರಸ್ತುತ ಪ್ರಯೋಗ ಹಾಡು,…
ಕಾಸರಗೋಡು : ಕಾವಯತ್ರಿ ರೇಖಾ ಸುದೇಶ್ ರಾವ್ ಇವರ ದ್ವಿತೀಯ ಕವನ ಸಂಕಲನ ‘ಹೊಂಬೆಳಕು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 22-02-2024 ದಂದು ಕಾಸರಗೋಡಿನ ಕನ್ನಡಭನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ಎಂ. ಪಿ. ಶ್ರೀನಾಥ್ ಕನ್ನಡ ಭವನ ಕಾಸರಗೋಡು ಅಧ್ಯಕ್ಷರಾದ ವಾಮನ್ ರಾವ್ ಬೇಕಲರಿಗೆ ‘ಹೊಂಬೆಳಕು’ ಕೃತಿ ನೀಡಿ ಬಿಡುಗಡೆಗೊಳಿಸಿದರು. ಪ್ರಕಾಶಕರಾದ ಕಥಾಬಿಂದು ಪಿ. ವಿ. ಪ್ರದೀಪ್ ಕುಮಾರ್ ಕೃತಿ ಅವಲೋಕನ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ರವಿ ನಾಯಿಕಾಪು, ಕವಯತ್ರಿ ಸುಭಾಷಿಣಿ, ಲೇಖಕ ವಿ. ಬಿ. ಕುಳಮರ್ವ, ಕವಯತ್ರಿ ಚಂಚಲಾಕ್ಷಿ ಶಾಂಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ ಜಯಪ್ರಕಾಶ್ ತೋಟ್ಟೆತೋಡಿ, ಕವಯತ್ರಿ ಉಷಾಕಿರಣ್, ಕೃತಿಕಾರ್ತಿ ರೇಖಾ ಸುದೇಶ್ ರಾವ್, ಡಾ. ಪಿ. ಕೃಷ್ಣ ಭಟ್, ಸಾಹಿತಿ ಪಿ. ವಿ. ಪ್ರದೀಪ್ ಕುಮಾರ್, ಕೇಂದ್ರ ಸಾಹಿತ್ಯ ಅಕಾಡೆಮಿ ಉಪ ಕಾರ್ಯದರ್ಶಿ ಡಾ. ಎಸ್. ಪಿ.…