Subscribe to Updates
Get the latest creative news from FooBar about art, design and business.
Author: roovari
ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಪ್ರಸಕ್ತ ಸಾಲಿನ ಭಾರತ ಸರಕಾರದ ಸಂಸ್ಕೃತ ಇಲಾಖೆಯ ಸಂಶೋಧನ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಡಾ. ಉಮಾ ರಾವ್ ಅವರು ‘ಭೈರಪ್ಪನವರ ಕಾದಂಬರಿಗಳಲ್ಲಿ ಏಕೀಕೃತವಾಗಿ ಮೂಡಿರುವ ಭಾರತೀಯ ಸಂಸ್ಕೃತಿಯ ಚಿತ್ರಣ (ಒಂದು ಬಹುಭಾಷಿಕ ಸಂವೇದನೆ) ಮುಂದಿನ ಎರಡು ವರ್ಷಗಳಲ್ಲಿ ಸಂಶೋಧನೆಯನ್ನು ನಡೆಸಲಿದ್ದಾರೆ. ಮುಂಬೈನ ಹಿರಿಯ ಕನ್ನಡ ಸಾಧಕರಲ್ಲಿ ಡಾ. ಉಮಾ ರಾಮರಾವ್ ಅವರೂ ಒಬ್ಬರು. ಇಂಜಿನಿಯರಿಂಗ್ ಪದವಿ ಪಡೆದು ಮುಂಬೈನ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡುತ್ತಲೇ ಕನ್ನಡದಲ್ಲಿ ಪ್ರಭುತ್ವ ಸಾಧಿಸಿ ಓದು ಬರವಣಿಗೆ ಮಾಡಿ ಸೈ ಎನಿಸಿಕೊಂಡವರು ಡಾ. ಉಮಾ ರಾವ್ ಅವರು. ಸಾಂಪ್ರತ ಮುಂಬೈನ ಮುಂಚೂಣಿಯಲ್ಲಿರುವ ಲೇಖಕರಲ್ಲಿ ಅವರದು ಎದ್ದು ಕಾಣುವ ಹೆಸರು. ಸಾಹಿತ್ಯ, ಇತಿಹಾಸ, ಸಂಗೀತ, ಪುರಾಣ ಎಲ್ಲದರಲ್ಲೂ ಅವರಿಗೆ ವಿಶೇಷ ಆಸ್ಥೆ. ಅವರು ಒಳ್ಳೆಯ ವಾಗ್ಮಿ. ನೇರ ನಡೆನುಡಿಗೆ ಹೆಸರಾಗಿರುವ ಡಾ. ಉಮಾರಾವ್ ಅವರು ದಕ್ಷ ಆಡಳಿತಗಾರರು, ಶಿಸ್ತಿನ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ 23-03-2024 ಮತ್ತು 24-03-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುವ ಎರಡು ದಿನಗಳ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭುವನೇಶ್ವರಿ ಹೆಗಡೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ. ಪ್ರಾಧ್ಯಾಪಕಿ, ಸಾಹಿತಿ, ಲೇಖಕಿ, ಹಾಸ್ಯ ಭಾಷಣಗಾರ್ತಿ, ಅಂಕಣಗಾರ್ತಿ ಹೀಗೆ ಕನ್ನಡ ಸಾರಸ್ವತ ಲೋಕದ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ಭುವನೇಶ್ವರಿ ಹೆಗಡೆ ಅವರ ಮುಡಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷತೆಯ ಸೇರ್ಪಡೆಯಾಗುತ್ತಿದೆ. ಕನ್ನಡದ ಪ್ರಮುಖ ಹಾಸ್ಯ ಲೇಖಕಿಯಾದ ಭುವನೇಶ್ವರಿ ಹೆಗಡೆ ಬಹುಮುಖ ಸಾಧಕಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಕರ್ನಾಟಕ ರಾಜ್ಯ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 4ನೇ ದಿನದ ಕಾರ್ಯಕ್ರಮವು ದಿನಾಂಕ 28-02-2024ರಂದು ನಡೆಯಿತು. ಈ ದಿನದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ ಅವರು ಮಾತನಾಡಿ “ಕಲಾಪ್ರಕಾರಗಳಲ್ಲಿ ನಾಟಕವೇ ಶ್ರೇಷ್ಠವಾದುದು. ಪ್ರೇಕ್ಷಕನಿಗೆ ಬೇಕಾದ ಎಲ್ಲವೂ ನಾಟಕ ಒಳಗೊಂಡಿರುತ್ತದೆ. ಕೊಡವೂರಿನಲ್ಲಿ ಹಿಂದೆ ಶಂಕರನಾರಾಯಣ ನಾಟಕ ಮಂಡಳಿ ಇತ್ತು. ಬಳಿಕ ಅದು ನಿಂತು ಹೋಯಿತು. ಕೊಡವೂರು ಯಕ್ಷಗಾನ ಕಲೆಗೆ ಪ್ರಸಿದ್ಧವಾಗಿತ್ತು. ಈಗ ಸುಮನಸಾ ಕೊಡವೂರು ಸಂಸ್ಥೆಯಿಂದಾಗಿ ನಾಟಕ ರಂಗದಲ್ಲಿಯೂ ಹೆಸರುವಾಸಿಯಾಗುತ್ತಿದೆ. ಕಲಾ ಪ್ರದರ್ಶನಗಳನ್ನು ನೋಡಲು ಹಿರಿಯರೇ ಹೆಚ್ಚಾಗಿ ಬರುತ್ತಾರೆ. ಮಕ್ಕಳು ಇರುವುದಿಲ್ಲ. ಆದರೆ ಇಲ್ಲಿ ಸಣ್ಣ ಮಕ್ಕಳನ್ನೂ ತೊಡಗಿಸಿಕೊಂಡಿದ್ದಾರೆ. ಇದು ಇತರರಿಗೂ ಪ್ರೇರಣೆ. ಕಲಾ ವೇದಿಕೆ ಎಷ್ಟು ಮುಖ್ಯವೋ ಸುತ್ತಲ ಪರಿಸರವೂ ಅಷ್ಟೇ ಮುಖ್ಯ. ಈ ಬಯಲು ರಂಗಮಂದಿರದಲ್ಲಿ ಪರಿಸರವನ್ನು ಉಳಿಸಿಕೊಂಡೇ ರಂಗಪ್ರದರ್ಶನಗಳು ನಡೆಯುತ್ತಿವೆ. ತೆರೆದ…
ಕೊಪ್ಪಳ : ಧಾರವಾಡದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳ 110ನೇ ಜನ್ಮದಿನದ ಅಂಗವಾಗಿ ಸಂಗೀತೋತ್ಸವ ಹಾಗೂ ‘ಪುಟ್ಟರಾಜ ಸಮ್ಮಾನ-2024’ ಪ್ರದಾನ ಸಮಾರಂಭವು ದಿನಾಂಕ 03-03-2024ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಜ್ಯುನಿಯರ್ ಕಾಲೇಜಿನ ಆವರಣ ಹತ್ತಿರ, ಐ.ಎಂ.ಎ. ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭವು ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಚಾಲಕರಾದ ಪರಮಪೂಜ್ಯ ಶ್ರೀ ಡಾ. ಕಲ್ಲಯ್ಯಜ್ಜನವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಗಂಗಾವತಿ ವಿಧಾನ ಸಭೆಯ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅಧ್ಯಕ್ಷತೆಯಲ್ಲಿ ಮಾನ್ಯ ಸಚಿವರಾದ ಶ್ರೀ ಶಿವರಾಜ ತಂಗಡಗಿಯವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ದೇವರಹೊಸಪೇಟೆಯ ಶ್ರೀ ಮಂಜುನಾಥ ಭಜಂತ್ರಿ ಇವರಿಂದ ಶಹನಾಯಿ ವಾದನ ನಡೆಯಲಿದೆ. ಇವರಿಗೆ ಹುಬ್ಬಳ್ಳಿ ಶ್ರೀ ಆಂಜನೇಯ ಭಜಂತ್ರಿ ತಬಲಾ ಸಾಥ್ ನೀಡಲಿದ್ದಾರೆ. ಪಂಡಿತ ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಇವರ ಗಾಯನಕ್ಕೆ ಸಂವಾದಿನಿಯಲ್ಲಿ ಶ್ರೀ…
ಮೈಸೂರು : ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ ನವದೆಹಲಿ ಇವರು ಜೆ.ಎಸ್.ಎಸ್.ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ನಡೆಸಿದ ದಕ್ಷಿಣ ವಲಯ ಅಂತರ್ ವಿ.ವಿ. ಯುವಜನೋತ್ಸವದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ, ಯುವ ಸಾಹಿತಿ ಶಶಿರಾಜ್ ರಾವ್ ಕಾವೂರು ರಚಿಸಿ ಖ್ಯಾತ ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ನಿರ್ದೇಶನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ‘ಏಕಾದಶಾನನ’ ನಾಟಕವು ಪ್ರಥಮ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಅದಕ್ಕೂ ಮೊದಲು ಮಂಗಳೂರು ವಿ.ವಿ. ಅಂತರ್ ಕಾಲೇಜು ರಂಗಭೂಮಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಏಕಾದಶಾನನ ಪ್ರಥಮ ಪ್ರಶಸ್ತಿ ಪಡೆದು ದಕ್ಷಿಣ ವಲಯಕ್ಕೆ ಆಯ್ಕೆಯಾಗಿತ್ತು. ಜೀವನ್ ರಾಂ ಸುಳ್ಯ ಆಳ್ವಾಸ್ ಗೆ ನಿರ್ದೇಶಿಸಿದ ಊರುಭಂಗ, ಮಧ್ಯಮ ವ್ಯಾಯೋಗ, ಏಕಾದಶಾನನ, ಬರ್ಬರೀಕ, ದೂತವಾಕ್ಯ ಮುಂತಾದ ನಾಟಕಗಳೊಂದಿಗೆ ದೇಶದ ನಾನಾ ಭಾಗಗಳಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ 14 ಬಾರಿ ಭಾಗವಹಿಸಿದ್ದರು. ಮಂಗಳೂರು ವಿ.ವಿ., ರಾಜೀವ ಗಾಂಧಿ ವಿ.ವಿ.ಯನ್ನು ಪ್ರತಿನಿಧಿಸಿದ ಇವರ ನಿರ್ದೇಶನದ ನಾಟಕಗಳು ಈಗಾಗಲೇ 11 ಬಾರಿ…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಹಯೋಗದಲ್ಲಿ ನಗರದ ವಿವಿ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ‘ಬ್ಯಾರಿ ಸಾಹಿತ್ಯ ಕಮ್ಮಟ’ವು ದಿನಾಂಕ 27-02-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನವಮಂಗಳೂರು ಬಂದರು ಮಂಡಳಿಯ ನಿವೃತ್ತ ಉಪನಿರ್ದೇಶಕ ಖಾಲಿದ್ ತಣ್ಣೀರುಬಾವಿ ಇವರು ಮಾತನಾಡುತ್ತಾ “ಅಕ್ಷರ ಜ್ಞಾನವಿಲ್ಲದ ಕಾಲದಲ್ಲೂ ಬ್ಯಾರಿ ಭಾಷೆಯಲ್ಲಿ ಅಲಿಖಿತ ಸಾಹಿತ್ಯವಿತ್ತು. ಅಕ್ಷರ ಜ್ಞಾನ ಪಡೆದ ಬಳಿಕ ಬ್ಯಾರಿ ಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆಯಾಗಿವೆ. ಬ್ಯಾರಿ ಭಾಷೆ ಉಳಿಸಿ ಬೆಳೆಸುವ ಸಲುವಾಗಿ ಯುವ ಪೀಳಿಗೆಯು ಬ್ಯಾರಿ ಭಾಷೆಯಲ್ಲಿ ಮತ್ತಷ್ಟು ಸಾಹಿತ್ಯ ರಚಿಸುವ ಮೂಲಕ ಬ್ಯಾರಿ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು. ಬ್ಯಾರಿ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಅಳಿವಿನಂಚಿನಲ್ಲಿರುವ ಈ ಭಾಷೆ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಸಮಕಾಲೀನರಿಂದ ನಡೆದಿದೆ. ಮುಂದಿನ ಪೀಳಿಗೆಯು ಇದನ್ನು ಬೆಳೆಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು. ಹಿರಿಯ ಕವಿ ಮುಹಮ್ಮದ್ ಬಡ್ಡೂರು ಮತ್ತು ಯುವ ಲೇಖಕಿ ಫಾತಿಮಾ ರಲಿಯಾ…
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಲಾವಿದರ ಯಕ್ಷ ಪಯಣದ ಸ್ವಗತ ಯಕ್ಷಾಯಣ ದಾಖಲೀಕರಣ ಸರಣಿಯ ಮೂರನೇ ಕಂತು ಬಿ.ಸಿ. ರೋಡಿನ ‘ಯಕ್ಷದೀಪ’ ಮನೆಯಲ್ಲಿ ದಿನಾಂಕ 28-02-2024ರಂದು ನಡೆಯಿತು. ಈ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮಾತನಾಡಿ “ಕರ್ನಾಟಕ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಯಕ್ಷಗಾನ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ರೂ.2,000/-ವನ್ನು ಕನಿಷ್ಟ ರೂ.5000/-ಗಳಿಗೆ ಹೆಚ್ಚಿಸಿ ಉಪಕರಿಸಬೇಕು. ಈಗ ನೀಡುತ್ತಿರುವ ಮಾಸಾಶನ ಕಲಾವಿದರ ಔಷಧಿಗೂ ಸಾಕಾಗುತ್ತಿಲ್ಲ. ಆದ್ದರಿಂದ ಸರಕಾರ ಈ ಕುರಿತು ಸ್ಪಂದಿಸಬೇಕು. ಹಿಂದಿನ ಕಾಲದಲ್ಲಿ ಕಲಾವಿದರೆಲ್ಲಾ ಜೊತೆಗಿದ್ದು ಪ್ರತಿಯೊಂದು ಪಾತ್ರವನ್ನೂ ನೋಡಿಕೊಂಡು ತಮ್ಮ ಅಭಿನಯ, ಅರ್ಥವನ್ನು ಕಟ್ಟುತ್ತಿದ್ದರು. ಅದರಿಂದ ಒಟ್ಟು ಪ್ರದರ್ಶನಕ್ಕೆ ಸಾವಯವ ಶಿಲ್ಪವಿರುತ್ತಿತ್ತು. ಈಗ ತನ್ನ ಪಾತ್ರಕ್ಕಾಗುವಾಗ ಬರುವುದು ಮುಗಿದ ತಕ್ಷಣ ಹೊರಡುವುದು ಎಂಬಂತಾಗಿದೆ. ಇದರಿಂದ ಪ್ರದರ್ಶನದ ಒಟ್ಟಂದಕ್ಕೆ…
ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಅನುದಾನಿತ ಭೋವಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಸೋಮೇಶ್ವರ ಇವರ ಆಶ್ರಯದಲ್ಲಿ ‘ಭಾವೈಕ್ಯ ಸಂಗೀತ ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ದಿನಾಂಕ 22-02-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮೇಶ್ವರ ಉಚ್ಚಿಲ ಮೂರೂರ ಭೋವಿ ಮಹಾಸಭಾ ಅಧ್ಯಕ್ಷ ಹರೀಶ್ ಉಚ್ಚಿಲ “ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುವ ಹೊತ್ತಿನಲ್ಲಿ ಭಾವೈಕ್ಯ ಸಂಗೀತದಂತಹ ಕಲಾ ಪ್ರಕಾರಗಳು ನಡೆದರೆ ಮಕ್ಕಳ ಮನೋವಿಕಾಸಕ್ಕೆ ಉತ್ತಮ ಪರಿಣಾಮ ಬೀರುತ್ತವೆ” ಎಂದು ಅಭಿಪ್ರಾಯಪಟ್ಟರು. ಭೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ರೋಹಿತಾಶ್ವ ಉಚ್ಚಿಲ, ಮುಂಬಯಿ ಸಮಿತಿ ಸಂಚಾಲಕ ಚಂದ್ರಕಾಂತ್ ಉಚ್ಚಿಲ, ನಿರಂಜನ ಸ್ವಾಮಿ ಎಜುಕೇಶನ್ ಟ್ರಸ್ಟಿ ದೀಪಕ್ ಕೋಟ್ಯಾನ್ ಗುರುಪುರ, ಸೋಮೇಶ್ವರ ಪುರಸಭೆ ಸದಸ್ಯ ರವಿಶಂಕರ್, ರಂಗೋಲಿ ಕ್ಯಾಟರರ್ಸ್ ಮಾಲಕ ಹರೀಶ್ ಕುಮಾರ್, ಎಸ್.ಆರ್. ಕ್ಯಾಟರಿಂಗ್ ಮಾಲಕ ವಿಜಯ್, ಶಾಲಾ ಮುಖ್ಯ ಶಿಕ್ಷಕಿ ಮೇಘಲತಾ ಶುಭ ಕೋರಿದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸ್ಥಾಪಕ ಅಧ್ಯಕ್ಷ…
ಕಾಸರಗೋಡು : ಶ್ರೀ ಪುರಂದರ ದಾಸ ಸಂಗೀತ ಕಲಾ ಮಂದಿರ ಕಾಸರಗೋಡು ಇದರ ಆಶ್ರಯದಲ್ಲಿ ದ್ವಿಂಶತಿ ಸಂಗೀತ ಆರಾಧನೋತ್ಸವವು ದಿನಾಂಕ 10-02-2024 ಮತ್ತು 11-02-2024ರಂದು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ವಿಜ್ಬ್ರಂಬಣೆಯಿಂದ ಜರಗಿತು. ಆರಾಧನೆಯಲ್ಲಿ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ, ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಮತ್ತು ಗಾಯಕ ಶಿಖಾಮಣಿ ಹರಿಕೇಶ ನಲ್ಲೂರು ಮುತ್ತಯ್ಯ ಭಾಗವತರ ಕೀರ್ತನೆಗಳನ್ನು ಆಲಾಪಿಸಲಾಯಿತು. ದಿನಾಂಕ 10-02-2024ರಂದು ಬೆಳಗ್ಗೆ 9 ಗಂಟೆಗೆ ಮೃದಂಗ ವಿದ್ವಾನ್ ಡಾ. ಶಂಕರ್ ರಾಜ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜತೆಯಲ್ಲಿ ಕಲ್ಮಾಡಿ ಸದಾಶಿವ ಆಚಾರ್ಯ, ಪ್ರಭಾಕರ್ ಕುಂಜಾರ್, ಟಿ.ಕೆ. ವಾಸುದೇವ ಕಾಞಂಗಾಡ್, ಶ್ರೀಜಿತ್ ಕಾಞಂಗಾಡ್, ಕೆರೆಮನೆ ಮನಮೋಹನ, ಶ್ರೀಮತಿ ಸರಸ್ವತಿ ಕೃಷ್ಣ, ಶ್ರೀಪತಿ ರಂಗಾ ಭಟ್, ಕಲ್ಮಾಡಿ ಪೂರ್ಣಪ್ರಜ್ಞ ಕೆ.ಎಸ್. ಮತ್ತಿತರರು ಪಾಲ್ಗೊಂಡರು. ಕೀರ್ತನಾರಾಧನೆಯ ಉದ್ಘಾಟನಾ ಸಂಗೀತ ಸೇವೆಯು ಶ್ರೀಮತಿ ಸರಸ್ವತಿ ಕೃಷ್ಣನ್ ಮತ್ತು ಬಳಗದವರಿಂದ ಪ್ರಾರಂಭಗೊಂಡು ಕೆರೆಮನೆ ಶ್ರೀ ಮನಮೋಹನ ಮತ್ತು ಬಳಗದವರಿಂದ ಕೊಳಲು ವಾದನ,…
ಮಂಗಳೂರು : ಕಲಾಶಾಲೆ ಸಂಸ್ಥೆ ಮತ್ತು ಸ್ವರಾಲಯ ಸಾಧನಾ ಫೌಂಡೇಶನ್ ಜಂಟಿಯಾಗಿ ಮರೋಳಿಯ ಶ್ರೀ ಸೂರ್ಯ ನಾರಾಯಣ ದೇವಾಲಯದಲ್ಲಿ ಆಯೋಜಿಸಿದ್ದ ‘ದೇವಾಲಯದಲ್ಲಿ ಸ್ವರ ಲಯ’ ಕಾರ್ಯಕ್ರಮವು ದಿನಾಂಕ 25-02-2024ರಂದು ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ವೈದ್ಯ ಡಾ. ಎಂ. ಚಕ್ರಪಾಣಿ ಇವರು ಮಾತನಾಡಿ “ಹಿಂದಿನ ಕಾಲದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ರಾಜಾಶ್ರಯಗಳಿದ್ದವು. ಆದರೆ ಕಾಲ ಬದಲಾಗಿದೆ. ಇಂದು ನಮ್ಮ ದೇವಾಲಯಗಳು ಶಾಸ್ತ್ರೀಯ ಸಂಗೀತಕ್ಕೆ ಆಶ್ರಯ ನೀಡಿ ಪೋಷಿಸುವ ಅಗತ್ಯವಿದೆ. ‘ದೇವಾಲಯದಲ್ಲಿ ಸ್ವರ ಲಯ ಎಂಬುದು ಬಹಳ ಸುಂದರವಾದ ಕಲ್ಪನೆ’ ಎಂದು ಶ್ಲಾಘಿಸಿದ ಅವರು, ಕರ್ನಾಟಕ ಸಂಗೀತ ಭಕ್ತಿ ಪ್ರಧಾನವಾಗಿದೆ. ದೇವರಿಗೂ ಸಂಗೀತವೆಂದರೆ ಪ್ರಿಯ. ಇಲ್ಲಿ ಕೀರ್ತನೆ ಎಂದರೆ ದೇವರನ್ನು ಪೂಜಿಸುವ ಒಂದು ದಾರಿಯೇ ಆಗಿದೆ. ಸಂಗೀತದ ಮೂಲಕ ದೇವರನ್ನು ಪೂಜಿಸಿ ಅನುಗ್ರಹ ಪಡೆಯಬಹುದು. ಈ ನಿಟ್ಟಿನಲ್ಲಿ ದೇವಾಲಯದಲ್ಲಿ ಸ್ವರ ಲಯ ಕಾರ್ಯಕ್ರಮ ಬಹಳ ಪ್ರಸ್ತುತವಾಗಿದೆ. ಸಂಗೀತ ಎಂದರೆ ಎಲ್ಲರೂ ಆನಂದ ಪಡೆಯುವ ಒಂದು ಸುಲಭದ ದಾರಿ. ಆದರೆ ಶಾಸ್ತ್ರೀಯ ಸಂಗೀತ ಎಂದರೆ ಬಹಳ…