Subscribe to Updates
Get the latest creative news from FooBar about art, design and business.
Author: roovari
24 ಫೆಬ್ರವರಿ 2023, ಮಂಗಳೂರು: ಹಳೆಯ ತಳಹದಿಯಲ್ಲಿ ಹೊಸದು ರೂಪುಗೊಳ್ಳುವಲ್ಲಿ ವಸ್ತು ಸಂಗ್ರಹಾಲಯಗಳು ಹಿರಿದಾದ ಪಾತ್ರ ವಹಿಸುತ್ತಿವೆ. ಇದರಿಂದ ಈ ಕಾಲದಲ್ಲಿ ನಿಂತು ಭೂತ ಕಾಲವನ್ನು ನೋಡುವ ಜತೆಗೆ ತುಳುನಾಡಿನ ಬದುಕು ಕೃಷಿ ಪರಂಪರೆ, ಅವಿಭಕ್ತ ಕುಟುಂಬದ ಕಲ್ಪನೆಯನ್ನು ಕಟ್ಟಿಕೊಡುವ ಕಾರ್ಯವನ್ನು ತುಳು ವಸ್ತು ಸಂಗ್ರಹಾಲಯ ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅವರು ಬಿ.ಸಿ. ರೋಡ್ ನ ಸಂಚಯ ಗಿರಿಯಲ್ಲಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಳಿಕೆಯ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 23, ಫೆಬ್ರವರಿಯಂದು ಉದ್ಘಾಟಿಸಿ ಮಾತನಾಡಿದರು. ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವು ಅಬ್ಬಕ್ಕನ ಇತಿಹಾಸ ಪರಿಚಯಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆ, ವಿದ್ವಾಂಸರಿಗೆ ಅಧ್ಯಯನ ಕೇಂದ್ರವಾಗಿದ್ದು, ನಾಡಿನ ತನ್ಮಯತೆ ಕಲಾತ್ಮಕತೆಯನ್ನು ಪರಿಚಯಿಸುತ್ತಿದೆ . ಪ್ರೊ | ತುಕಾರಾಮ ಪೂಜಾರಿ ದಂಪತಿ ರಾಣಿಯ…
23 ಫೆಬ್ರವರಿ 2023, ಬೆಂಗಳೂರು: ಸಂಚಾರಿ ಥಿಯೇಟರ್ ಅರ್ಪಿಸುವ “ಮಿಸ್ ಅಂಡರ್ ಸ್ಟ್ಯಾಂಡಿಂಗ್” ನಾಟಕ ದಿನಾಂಕ 24ರಂದು ಕಲಾಗ್ರಾಮ, ಬೆಂಗಳೂರು ಹಾಗೂ ದಿನಾಂಕ 25ರಂದು ರಂಗ ಶಂಕರ, ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ. ಟಿಕೆಟಿಗಾಗಿ 9884345569, 9611666711 ಸಂಪರ್ಕಿಸಿ ಸಂಸಾರದಲ್ಲಿ ಸನಿದಪ – ದಾರಿಯೋಫೊ ಅವರ ಮೂಲಕೃತಿಯಾದ ಈ ನಾಟಕವನ್ನು ಕೆ.ವಿ. ಅಕ್ಷರ ಅವರು ಕನ್ನಡಕ್ಕೆ ತಂದಿದ್ದಾರೆ. ಇಡೀ ನಾಟಕದಲ್ಲಿ ಜೋಡಿಗಳ ಸಂಬಂಧಗಳ ಭಾವ, ಸ್ಥಿತಿಗಳು ಬೇರೆ ಬೇರೆ ಘಟನೆಗಳಿಗೆ ಪೂರಕವಾಗಿ ಬದಲಾಗುವ, ಬದಲಾಗಿಸುವ ವಿಚಿತ್ರ ಸಂಕಷ್ಟಗಳಿಗೆ ಸಿಲುಕಿಕೊಳ್ಳುವ ಮತ್ತು ಮತ್ತೆ ಮತ್ತೆ ವಿಷಯಗಳನ್ನು ಅಪಾರ್ಥ ಮಾಡಿಕೊಂಡು ಸಂಕಷ್ಟಗಳನ್ನು ತಂದುಕೊಳ್ಳುವ ಮತ್ತು ಅವುಗಳ ಜೊತೆಯಲ್ಲೇ ಕನಸು ಕಾಣುವ ಹಲವಾರು ಘಟನೆಗಳ ಜೊತೆಯಲ್ಲಿ ಬದುಕಿನ ಸಂಬಂಧಗಳ ಸಂಕೀರ್ಣತೆಯನ್ನು ಪ್ರಹಸನದ ಮೂಲಕ ಅಭಿವ್ಯಕ್ತಿಸುವ ಪ್ರಯತ್ನ ಇದಾಗಿದೆ. ಇಂದಿನ ಬದುಕಿನಲ್ಲಿ, ಸಂಬಂಧಗಳ ಆಯಸ್ಸು ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಈ ನಾಟಕ ಹೆಚ್ಚು ಪ್ರಸ್ತುತ ಎನಿಸುತ್ತದೆ. ಪಿನೋಕಿಯೋ ನಾಟಕದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಸಂಚಾರಿ ವಿಜಯ್ ಅವರ…
23 ಫೆಬ್ರವರಿ 2023, ಉಡುಪಿ: ಇಪ್ಪತ್ತೊಂದು ವರ್ಷಗಳಿಂದ ನಿರಂತರ ರಂಗಪ್ರಕ್ರಿಯೆಯಲ್ಲಿ ತೊಡಗಿರುವ ಸುಮನಸಾ ಕೊಡವೂರು ಉಡುಪಿ ಸಂಸ್ಥೆಗೆ ಹತ್ತನೇ ವರ್ಷದಲ್ಲಿ ಮೂಡಿದ ಕಲ್ಪನೆ ರಂಗಹಬ್ಬ. ಈ ಬಾರೀ ಹನ್ನೊಂದನೇ ರಂಗಹಬ್ಬ. ಒಂದೊಂದು ಬಾರೀ ಬಿನ್ನ ಬಿನ್ನ ಕಲ್ಪನೆಯೊಂದಿಗೆ ಮೂಡಿ ಬರುತ್ತಿರುವ ಈ ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಯಿಂದ ಬಂದು ಬೇರೆ ಬೇರೆ ಬಾಷೆಯ ನಾಟಕ ಪ್ರದರ್ಶನ ನೀಡಿರುತ್ತಾರೆ. ಈ ಬಾರೀ ರಾಜ್ಯದೊಳಗಿನ ನಾಟಕ ತಂಡಗಳು ಭಾಗವಹಿಸುವುದರೊಂದಿಗೆ ಕನ್ನಡ-ತುಳು ಹಾಗೂ ಮಹಿಳಾ ಯಕ್ಷಗಾನ ಕೂಡಾ ಈ ಹಬ್ಬದ ಭಾಗವಾಗಲಿದೆ. ಸುಮನಸಾ ಕೊಡವೂರು-ಉಡುಪಿ (ರಿ.) ಆಯೋಜಿಸಿರುವ ರಂಗ ಹಬ್ಬ 11, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನಗರ ಸಭೆ ಉಡುಪಿಯ ಸಹಯೋಗದೊಂದಿಗೆ ಫೆಬ್ರವರಿ 26ರಿಂದ ಮಾರ್ಚ್ 4ರವರೆಗೆ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ನಡೆಯಲಿದೆ. ಕಲಾಸಕ್ತರಿಗೆ ಉಚಿತ ಪ್ರವೇಶ ಒದಗಿಸಿದ್ದು, ಸಾರ್ವಜನಿಕರು ಈ ಹಬ್ಬದ ರಸದೌತಣವನ್ನು ಸವಿಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ. ಫೆಬ್ರವರಿ…
23, ಫೆಬ್ರವರಿ, 2023, ತುಮಕೂರು: ದೃಶ್ಯ (ರಿ.) ಬೆಂಗಳೂರು ಪ್ರಯೋಗಿಸುತ್ತಿರುವ ಶ್ರೀಮತಿ ದಾಕ್ಷಾಯಣ ಭಟ್ ಎ. ನಿರ್ದೇಶದ ಐತಿಹಾಸಿಕ ನಾಟಕ “ರಕ್ತ ಧ್ವಜ” ದಿನಾಂಕ 21 -02 -2023ರ ಮಂಗಳವಾರದಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸಂಜೆ 6-30ಕ್ಕೆ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಿ.ಎಂ. ರವಿ ಕುಮಾರ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಇವರು ನೆರವೇರಿಸಿದರು. ಅತಿಥಿಗಳಾಗಿ ಡಾ| ಲಕ್ಷ್ಮಣ ದಾಸ್ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರು, ಶ್ರೀಮತಿ ಖಾ.ಹ. ರವಿಕುಮಾರಿ ಸಾಹಿತಿಗಳು ಹಾಗೂ ನಿಕಟ ಪೂರ್ವ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶ್ರೀ. ಉಗಮ ಶ್ರೀನಿವಾಸ ಪತ್ರಕರ್ತರು ರಂಗ ಸಂಘಟಕರು ಜಿನ್ ಟೀಮ್, ಶ್ರೀ ಮಳೀವಲ್ಲಿ ದೇವರಾಜ್ ರಂಗ ನಿರ್ದೇಶಕರು ತುಮಕೂರು ಇವರುಗಳು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಣುಚ ಆಯೋಜಿಸಿದರು. ನಾಟಕದ ಬಗ್ಗೆ :…
23, ಫೆಬ್ರವರಿ 2023, ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘ(ರಿ). ಸಾರ್ವಜನಿಕ ಹಾಗೂ ಜಿಲ್ಲಾ ಗ್ರಂಥಾಲಯ ಕೇಂದ್ರ ಮಂಗಳೂರು ಕರ್ನಾಟಕ ಸರಕಾರ ಇವರು ಜಂಟಿಯಾಗಿ ನಡೆಸಿದ ಅಕ್ಷರ ಜಾಗೃತಿ ಮತ್ತು ಕವಿಗೋಷ್ಟಿ ಕಾರ್ಯಕ್ರಮ ಫೆಬ್ರವರಿ 19ರಂದು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ನಡೆಯಿತು. ಅಕ್ಷರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಡಶಾಲಾವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆಗಳನ್ನು ಕ.ಲೇವಾ.ಸಂಘದ ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ನಡೆಸಿದರು. ಬಿ.ಎಂ.ರೋಹಿಣಿ, ಮಂಜುಳಾ ಸುಕುಮಾರ್, ರೂಪಕಲಾ ಆಳ್ವ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕ.ಲೇ.ವಾ.ಸಂಘದ ಸದಸ್ಯೆಯರಾದ ಸುಮಾಬಾರ್ಕೂರು ಮತ್ತು ಸರಸ್ವತಿಯವರ ಆಶಯ ಗೀತೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಶಿಲೇಖ ಬಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀ ಬಾಹುಬಲಿ ಪ್ರಸಾದ್ ಇವರು ಮಾತನಾಡಿ ” ಒಂದು ಉತ್ತಮ ಪುಸ್ತಕದಿಂದ ಮೌಲ್ಯಯುತ ಜೀವನ ನಡೆಸಲು ಸಾಧ್ಯವಿದೆ. ಸಾಹಿತಿಗಳಾಗುವುದು ಬಹಳ ಸುಲಭದ ಕೆಲಸವಲ್ಲ. ಭಾಷೆಯನ್ನು ಉಳಿಸಲು ಹಾಗೂ ಬೆಳೆಸಲು ಬರಹಗಾರರ…
22 ಫೆಬ್ರವರಿ 2023, ಮುಡಿಪು: ಕವಿ, ತುಳು – ಕನ್ನಡ ಬರಹಗಾರ್ತಿ, ಸಂಶೋಧಕಿ ವಿಜಯಲಕ್ಷ್ಮಿ ರೈ ಕಲ್ಲಿಮಾರ್ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ಹೋಬಳಿ ಘಟಕದ ಅಧ್ಯಕ್ಷರಾಗಿ ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ನೇಮಕ ಮಾಡಿದ್ದಾರೆ ಎಂದು ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಪ್ರಕಟಿಸಿದ್ದಾರೆ. ವಿಜಯಲಕ್ಷ್ಮಿ ರೈ ಇವರು ಸಾಮಾಜಿಕ ಸಂಘಟನೆ, ತುಳು- ಕನ್ನಡ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ತುಳು ಎಂ ಎ ಪದವೀಧರರೂ ಆಗಿರುವ ಇವರ ಹಲವು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೊಣಾಜೆ ಬಂಟರ ಸಂಘ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಇದರ ಸಕ್ರಿಯ ಸದಸ್ಯೆ. ಅಬ್ಬಕ್ಕ ಪ್ರಶಸ್ತಿ, ಲಯನ್ ಇಂಟರ್ ನ್ಯಾಶನಲ್ ಮಲ್ಟಿಪಲ್ ಅವಾರ್ಡ್ ಮೊದಲಾದ ಗೌರವಗಳು ಇವರಿಗೆ ಸಂದಿವೆ. ಇವರು ಸಾಮಾಜಿಕ ಮುಖಂಡ ಪ್ರಸಾದ್ ರೈ ಕಲ್ಲಿಮಾರ್ ಇವರ ಪತ್ನಿ.
22, ಫೆಬ್ರವರಿ 2023, ಮಂಗಳೂರು: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ 13ನೇ ವರ್ಷದ ಸುವರ್ಣ ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ನಾಡಿನ ಪ್ರತಿಷ್ಠಿತ ಮೂರು ಕಲಾ ಸಾಧಕರನ್ನು ಗುರುತಿಸಿ, ಗೌರವಿಸಲಾಯಿತು. ಭರತನಾಟ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ನೃತ್ಯ ಗುರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಮಲಾಕ್ಷ ಆಚಾರ್, ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅರುವ ಕೊರಗಪ್ಪ ಶೆಟ್ಟಿ, ಸ್ಯಾಕ್ಸೋಫೋನ್ ಮಾಂತ್ರಿಕ, ರಾಜ್ಯದ ಸ್ಯಾಕ್ಸೋಫೀನ್ ವಾದನದಲ್ಲಿ ಏಕೈಕ ಆಕಾಶವಾಣಿ ಎ ಗ್ರೇಡ್ ಕಲಾವಿದ ಪ್ರಕಾಶ್ ದೇವಾಡಿಗರು ಸೇರಿ ಮೂರು ಮಂದಿಗೆ ಫೆಬ್ರವರಿ 20ರಂದು ಸುವರ್ಣ ರಂಗ ಸಮ್ಮಾನ್ 2023 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾಕ್ಟರ್ ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಗಣ್ಯರು ವಿತರಿಸಿದರು. ಕಲಾ ಸಾಧಕರಿಗೆ ಸುವರ್ಣ ರಂಗ ಸನ್ಮಾನ – 2023 – Roovari
22 ಫೆಬ್ರವರಿ 2023, ಮೈಸೂರು: ಬಿರುಬೇಸಿಗೆಯ ಧಗೆಯಲ್ಲಿ ತೂರಿಬಂದ ಮಳೆಯ ತಿಳಿ ತಂಗಾಳಿಯ ಸಿಂಚನದಂತೆ ಮಕ್ಕಳ ನಗೆ, ಅದಕ್ಕೊಂದು ಕಲೆಯ ಚೌಕಟ್ಟು. ನಲಿವಿನಲ್ಲೇ ನಡೆವ ಕಲಿಕೆಯ ತಿಂಗಳ ಸಂಭ್ರಮ ‘ರಜಾಮಜಾ’. ಎಪ್ರಿಲ್ 12ರಿಂದ ಮೇ 07ರವರೆಗೆ ನಡೆಯುವ ಮಕ್ಕಳ ಈ ಸಡಗರದ ಶಿಬಿರ. ನೂರಾರು ಮಕ್ಕಳ ವೈವಿಧ್ಯಮಯ ಕಲೆಯ ಮುಖಗಳನ್ನು ಅಪ್ಪ-ಅಮ್ಮಂದಿರಿಗೆ, ಬಂಧು-ಮಿತ್ರರಿಗೆ ಮತ್ತು ಬಾಳುವ ಈ ಸಮಾಜಕ್ಕೆ ಸರಳವಾಗಿ ದಾಖಲಿಸುತ್ತಾ ಹೋಗುತ್ತದೆ. ನಮ್ಮ ಕನ್ನಡ ಜಾನಪದದ ಪ್ರಖರ ಶಕ್ತಿಯನ್ನು ಆಧುನಿಕ ರಂಗಭೂಮಿಗೆ ದಾಟಿಸುವ ಆರಂಭದ ಕಲಿಕೆಯ ಶಿಬಿರವಿದು. ಎರಡು ದಶಕಗಳ ಸುದೀರ್ಘ ಯಾನದ ಅನುಭವವೂ ಇದರೊಂದಿಗಿದೆ. ತಿಂಗಳಿಡೀ ಮಕ್ಕಳು ಹಲವು ಸಾಧಕರೊಂದಿಗೆ, ಶ್ರೇಷ್ಠ ಸಂಪನ್ಮೂಲರೊಂದಿಗೆ , ಹೊಸ ಗೆಳೆಯ-ಗೆಳತಿಯರೊಂದಿಗೆ ಒಡನಾಡುತ್ತಾ, ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾ ಸಾಗುವುದನ್ನು ಮತ್ತು ಅರಳುವುದನ್ನು ಗಮನಿಸುವುದೇ ಒಂದು ಚಂದ. ವಿವರಗಳಿಗಾಗಿ ಸಂಪರ್ಕಿಸಿ: 9480468327, 7259537777, 9845595505, 0821- 2564455
22 ಫೆಬ್ರವರಿ 2023, ಉಡುಪಿ: ಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 20 ರಂದು ಶ್ರೀ ಅನಂತೇಶ್ವರ ದೇವಸ್ಥಾನ,ಉಡುಪಿ ಇಲ್ಲಿ ನಡೆದ ಮಹೋತ್ಸವದಲ್ಲಿ ಸಂಗೀತ ಗುರುಗಳಾದ ಶ್ರೀಯುತ ಕೆ.ವಿ ರಮಣ್ ಅವರ ವಿಭಿನ್ನ ಪರಿಕಲ್ಪನೆ “ನಾಟ್ಯಾಯನ” – ವಿಶಿಷ್ಟ ನೃತ್ಯ ಕಾರ್ಯಕ್ರಮವು ಸುಸಂಪನ್ನಗೊಂಡಿತು. ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಮತ್ತು ವಿದುಷಿ ಅಯನ ವಿ ರಮಣ್ ಇವರ ಯುಗಳ ನೃತ್ಯವು ಜನಮನಸೂರೆಗೊಂಡಿತು.
22 ಫೆಬ್ರವರಿ 2023, ಮಂಗಳೂರು: ಯಕ್ಷಗಾನ ಕಲಾವಿದರ ಕಲಾ ಪ್ರೀತಿ ಅನನ್ಯ- ಗಣೇಶ್ ಕಾಮತ್ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸರಣಿ ಕಾರ್ಯಕ್ರಮ ಫೆಬ್ರವರಿ 19ರಂದು ಮಂಗಳೂರಿನ ಶ್ರೀ ಕುಡ್ತೇರಿ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ಇತ್ತೀಚಿಗೆ ಜರಗಿತು.ವಾಲ್ಪಾಡಿ ಮುರಳಿ ಭಟ್ ಇವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಸಂಮಾನ ಕಾರ್ಯಕ್ರಮದಲ್ಲಿ ಮಾರುತಿ ನ್ಯೂಸ್ ಏಜೆನ್ಸಿಯ ಗಣೇಶ್ ಕಾಮತ್ ಅಧ್ಯಕ್ಷರಾಗಿದ್ದರು. ಸುಮಾರು ಐವತ್ತು ವರುಷಗಳ ಹಿಂದೆ ಅತೀ ಕಡಿಮೆ ಸಂಭಾವನೆ ಪಡೆದೂ, ಕಷ್ಟಕರ ಜೀವನ ನಡೆಸಿಯೂ ಕಲೆಯ ಮೇಲಿನ ಪ್ರೀತಿಯಿಂದ ದುಡಿದ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತನ್ನ ತಂದೆಯವರು ಮೇಳದ ಆಟಗಳನ್ನು ಆಡಿಸುತ್ತಿದ್ದುದು ತನಗೂ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಲು ಕಾರಣವಾಯಿತೆಂದರು. ಯಕ್ಷಗಾನ ಅರ್ಥಧಾರಿ, ವೇಷಧಾರಿ ಸಂಘಟಕ ಮುರಳಿ ಭಟ್ ವಾಲ್ಪಾಡಿ ಯವರನ್ನು ಸಂಘಟಕ ಬಿ. ಟಿ. ಕುಲಾಲ್ ಅಭಿನಂದಿಸಿದರು. ಭಾರತೀಯ ವಿದ್ಯಾಭವನದಲ್ಲಿ ಯಕ್ಷಗಾನ ಕಲಿತ ಬಳಿಕ ನಮ್ಮ ಸಂಘದಲ್ಲಿ ಅರ್ಥ ಹೇಳುತ್ತಾ, ವೇಷ ಮಾಡುತ್ತಾ ಕಲಾ…