Subscribe to Updates
Get the latest creative news from FooBar about art, design and business.
Author: roovari
22 ಫೆಬ್ರವರಿ 2023, ತಮಿಳುನಾಡು: ಶಿವರಾತ್ರಿಯ ಪ್ರಯುಕ್ತ ತಮಿಳುನಾಡಿನ ಚಿದಂಬರಂ ಮತ್ತು ತಂಜಾವೂರಿನ ಪ್ರತಿಷ್ಠಿತ ನಾಟ್ಯಾಂಜಲಿ 2023 ಕಾರ್ಯಕ್ರಮದಲ್ಲಿ ದಿನಾಂಕ 18 ಮತ್ತು 19ರಂದು ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಅವರು ತಮ್ಮ ಏಕವ್ಯಕ್ತಿ ನೃತ್ಯವನ್ನು ಪ್ರದರ್ಶಿಸಿದರು ಮತ್ತು ನಟುವಾಂಗ ಕಲಾವಿದರಾಗಿಯೂ ಭಾಗವಹಿಸಿದರು.ಮಂಜುನಾಥ್ ಅವರು 66ಕ್ಕೂ ಹೆಚ್ಚಿನ ನೃತ್ಯ ಮತ್ತು ತಾಳದ ಕಾರ್ಯಾಗಾರಗಳನ್ನು ನಡೆಸಿದ್ದು,ನೃತ್ಯ ಸಾಹಿತ್ಯ ಸಂಯೋಜಕರಾಗಿ ಗುರುತಿಸಿಕೊಂಡಿದ್ದಾರೆ.
22 ಫೆಬ್ರವರಿ 2023, ಬೆಳ್ತಂಗಡಿ: ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ : ಡಾ|| ಮುರಳಿ ಮೋಹನ್ ಚೂಂತಾರು. “ಹುಟ್ಟೂರಿನಲ್ಲಿ ತಮ್ಮದೇ ಜನರ ನಡುವೆ ಊರಿನ ಹಿರಿಯರೊಂದಿಗೆ ಹಿರಿಯರಿಂದ ಸನ್ಮಾನ ಪಡೆಯುವುದು ಅತ್ಯಂತ ಸೌಭಾಗ್ಯ ಮತ್ತು ಅವಿಸ್ಮರಣೀಯ . ಈ ಸನ್ಮಾನದಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ, ಮತ್ತಷ್ಟು ಉತ್ಸಾಹ, ಹುಮ್ಮಸ್ಸಿನಿಂದ ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಣೆ ನೀಡಿದೆ” ಎಂದು ಡಾ|| ಮುರಲೀ ಮೋಹನ್ ಚೂಂತಾರು ನುಡಿದರು. ವಸಂತ ಶೆಟ್ಟಿ ಬೆಳ್ಳಾರೆಯವರ ಮುಂದಾಳುತ್ವದಲ್ಲಿ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿರುವ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಾಟಕ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆ. 5ರಂದು ನಡೆಯಿತು. ಸಮಾಜ ಸೇವೆ ಹಾಗೂ ವೈದ್ಯಕೀಯ ಲೇಖನಗಳ ಮೂಲಕ ಜನಜಾಗೃತಿಗೊಳಿಸಿದ್ದಕ್ಕಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ವಸಂತ ಶೆಟ್ಟಿ ಬೆಳ್ಳಾರೆ ಅವರ ಸಮರ್ಥ ಮುಂದಾಳತ್ವದಲ್ಲಿ ಸುಳ್ಯ ಮತ್ತು ಬೆಳ್ಳಾರೆ ಪರಿಸರದ ಮಕ್ಕಳ ಪ್ರತಿಭೆಯನ್ನು ನೀರೆರೆದು ಪೋಷಿಸುವ ಕೆಲಸ ನಿನಾದ ಸಂಸ್ಥೆ ತಂಟೆಪ್ಪಾಡಿ ಮಾಡುತ್ತಿದೆ. ಈ ನಿನಾದ ಸಂಸ್ಥೆ ಮುಂದೆ ನೀನಾಸಂ ಸಂಸ್ಥೆಯ…
ಪಂಜೆಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ 22ಫೆಬ್ರವರಿ 1874ರಂದು ಜನಿಸಿದರು. ತಂದೆ ರಾಮಪ್ಪಯ್ಯ, ತಾಯಿ ಶಾಂತಾದುರ್ಗಾ ಅಥವಾ ಸೀತಮ್ಮ, ಸರಳಜೀವಿಗಳು, ದೈವಭಕ್ತರು, ಶೀಲವಂತರು, ಬಡಕುಟುಂಬದ ಪಂಜೆಮಂಗೇಶರಾಯರು ಶ್ರಮವಹಿಸಿ ಬಿ.ಎ. ಪದವೀಧರರಾದರು. ಸೈದಾಪೇಟೆಯ ತರಬೇತಿ ಕಾಲೇಜಿನಲ್ಲಿ ಎಲ್.ಟಿ. ಪಾಸು ಮಾಡಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿದರು. ಅನಂತರ ಮಂಗಳೂರಿನ ಸಬ್ ಅಸಿಸ್ಟೆಂಟ್ ಶಾಲಾ ಇನ್ಸ್ಪೆಕ್ಟರರಾಗಿ, ಕೊಡಗಿನಲ್ಲಿ ಶಾಲಾ ಇನ್ಸ್ಪೆಕ್ಟರಾಗಿ, ಮಡಕೇರಿ ಸೆಂಟ್ರಲ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸಮಾಡಿದರು. ‘ಮಕ್ಕಳ ಸಾಹಿತ್ಯ ಪಿತಾಮಹ’ರೆನಿಸಿಕೊಂಡಿದ್ದ ಇವರು ಸಣ್ಣಕಥೆ, ಕಥನಕವನ, ಹರಟೆ ಮುಂತಾದ ಕ್ಷೇತ್ರಗಳಲ್ಲಿ ಸಾಹಿತ್ಯ ಕೈಂಕರ್ಯ ಮಾಡಿದ್ದಾರೆ. ಮಂಗಳೂರಿನಲ್ಲಿ ಆರಂಭವಾದ ‘ಸುಹಾಸಿನಿ’ ಪತ್ರಿಕೆ ಇವರ ಸಾಹಿತ್ಯ ಕೆಲಸಕ್ಕೆ ಇಂಬುಕೊಟ್ಟಿತು. ಈ ಪತ್ರಿಕೆಯಲ್ಲಿ ಇವರು ಬರೆದ ‘ನನ್ನ ಚಿಕ್ಕ ತಂದೆ, ಕಮಲಾಪುರದ ಹೊಟ್ಟಿನಲ್ಲಿ’ ಮುಂತಾದ ಸರಸ, ವಿನೋದದ ಕಥೆಗಳು, ಮೃಥುಲಾ, ದುರ್ಗಾವತಿ ಮುಂತಾದ ಐತಿಹಾಸಿಕ ಕಥೆಗಳೂ ಪ್ರಕಟವಾಯಿತು. ಬ್ರಿಟಿಷ್ ವಸಾಹತುಶಾಹಿಗೆ ಬಹಳ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ ಕವಿಗಳಲ್ಲಿ ಪಂಜೆಯವರೂ ಒಬ್ಬರು. ಅವರ ನಾಗರಹಾವೆ ಹಾವೊಳು ಹೂವೆ,…
ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ ಅಗತ್ಯ : ಡಾ| ಜಯಶ್ರೀ 22 ಫೆಬ್ರವರಿ 2023, ಕಾಸರಗೋಡು: ಪ್ರತಿಯೊಬ್ಬರಲ್ಲೂ ಹುಟ್ಟಿನಿಂದಲೇ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಸುಪ್ತ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಸೂಕ್ತ ವೇದಿಕೆ, ಪ್ರೋತ್ಸಾಹ ಅತ್ಯಗತ್ಯ. ಈ ನಿಟ್ಟಿನಲ್ಲಿ ರಂಗಚಿನ್ನಾರಿ ಕಲ್ಪಿಸಿರುವ ನಾರಿ ಚಿನ್ನಾರಿ ವೇದಿಕೆ ಶ್ಲಾಘನೀಯ ಹಾಗೂ ಅಭಿನಂದನೀಯ ಎಂದು ಡಾ. ಜಯಶ್ರೀ ನಾಗರಾಜ್ ಹೇಳಿದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕವಾದ ನಾರಿ ಚಿನ್ನಾರಿಯನ್ನು ಫೆಬ್ರವರಿ 19ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಲೆ, ಸಂಸ್ಕೃತಿ ಪೋಷಣೆ ಮಾಡುತ್ತಿರುವ ರಂಗಚಿನ್ನಾರಿ ಇದೀಗ ನಾರಿ ಚಿನ್ನಾರಿ ಮಹಿಳಾ ಘಟಕದ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಬೆಳಕಿಗೆ ಬರಲು ಈ ವೇದಿಕೆ ಸೂಕ್ತ ಎಂದರು. ಕಾಸರಗೋಡು ನಗರಸಭೆ ಕೌನ್ಸಿಲರ್ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು.…
21 ಫೆಬ್ರವರಿ 2023, ಮಂಗಳೂರು: ಖ್ಯಾತ ನಾಟಕಕಾರ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ವಿರಚಿತ ‘ಬ್ರಹ್ಮ ಕಪಾಲ’ ತುಳು ಪೌರಾಣಿಕ ನಾಟಕವು ಈಗಾಗಲೇ ಹತ್ತಾರು ಪ್ರದರ್ಶನ ಕಂಡಿದೆ. ಪೂರ್ವ ಮುದ್ರಿತ ಧ್ವನಿ ಸಂಗೀತ ಬಳಸಿಕೊಂಡು ತಾರಾನಾಥ್ ಉರ್ವ ನಿರ್ದೇಶನದಲ್ಲಿ ಫೆಬ್ರವರಿ 17ರಂದು ಪ್ರದರ್ಶನವನ್ನು ಕಂಡಿತು ಮಂಗಳೂರಿನ ಪ್ರತಿಷ್ಠಿತ ಮಹಿಳಾ ನಾಟಕ ತಂಡ. ಕಾವುಬೈಲು ಪಂಚಲಿಂಗೇಶ್ವರ ಮಹಿಳಾ ಭಕ್ತ ವೃಂದ. ಆರತಿ ರಾಮಚಂದ್ರ ಆಳ್ವರ ಸಂಯೋಜನೆಯಲ್ಲಿ ಎರಡು ತಿಂಗಳ ರಂಗಾಭ್ಯಾಸದಿಂದ ಪರಿಪುಷ್ಟವಾದ ಈ ತಂಡ ಸತ್ಯೋದ ಸಿರಿ, ಭಗವತಿ, ಯಕ್ಷಮಣಿ, ಅಹಲ್ಯ, ನಳದಮಯಂತಿ ಮೊದಲಾದ ಪೌರಾಣಿಕ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಅನುಭವ ಪಡೆದಿದೆ. ಬಜಾಜ್ ಕಾವುಬೈಲ್ ಪರಿಸರದ ದೇವಸ್ಥಾನದ ಧಾರ್ಮಿಕ, ಸಾಂಸ್ಕೃತಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮಹಿಳೆಯರು ರಂಗಾಸಕ್ತಿಯಿಂದ ಕಟ್ಟಿ ಬೆಳೆಸಿದ ಮಹಿಳಾ ಕಲಾವಿದರ ಕೂಟ ಇದು. ಪೌರಾಣಿಕ ನಾಟಕ ಪ್ರದರ್ಶನಕ್ಕೆ ಹೋಗಿಕೊಳ್ಳುವ ರಂಗ ನಡೆಯನ್ನು ಅಭ್ಯಾಸಿಸಿ ಪ್ರಸ್ತುತಪಡಿಸಿ ಜನಾನುರಾಗ ಪಡೆದು ಅಗ್ರಪಂಗ್ತಿಯ ಮಹಿಳಾ ನಾಟಕ ತಂಡವಾಗಿ ರೂಪುಗೊಂಡಿದೆ. ಪಂಚಲಿಂಗೇಶ್ವರನ ಸಾನಿಧ್ಯದಲ್ಲಿ ಶಿವಮಹಿಮೆಯನ್ನು…
21 ಫೆಬ್ರವರಿ 2023, ಮಂಗಳೂರು: ಅತ್ಯಂತ ವಿನೀತ, ಮೃದು ಭಾಷಿ, ಸಾತ್ವಿಕ ಮನೋಭಾವದ ಸಹೃದಯಿ ವಿದ್ವಾಂಸ ಹರಿದಾಸ ಅಂಬಾತನಯ ಮುದ್ರಾಡಿ ಇಂದು ಮುಂಜಾನೆ ನಮ್ಮನ್ನಗಲಿದ್ದಾರೆ. ಶಿಕ್ಷಕ, ವೇಷಧಾರಿ, ಹರಿದಾಸ, ಅರ್ಥದಾರಿ, ಪ್ರವಚನಕಾರ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ್ಯ ಪೂರ್ಣವಾದ ಸಾಧನೆಯನ್ನು ಮಾಡಿದ, ಸಮಾಜದ ಎಲ್ಲಾ ಮಂದಿಗೆ ಮನೆಯ ಸದಸ್ಯರಂತೆ ಇದ್ದು ಮಾರ್ಗದರ್ಶನ ಮಾಡಿ ಸಾರ್ಥಕವಾಗಿ ಬದುಕನ್ನು ಪೂರೈಸಿದ ಅಂಬಾತನಯರದ್ದು ಆದರ್ಶ ಜೀವನ. ಕಳೆದ ವಾರ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಪಾಲ್ಗೊಂಡದ್ದು ಕೊನೆಯ ಕಾರ್ಯಕ್ರಮವಾಗಿತ್ತು. ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಗೌರವ ಅವರಿಗೆ ಪ್ರಾಪ್ತಿಯಾಗಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದ ಈ ದಿಗ್ಗಜ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕವನ ಸಂಕಲನ ಹಾಗೂ ಕೃತಿಗಳ ರಚನೆ ಮಾಡಿದ ಧೀಮಂತ. ಜನಮಾನಸದ ಹಿರಿಮೆಯಂತಿದ್ದ ಮಾರ್ಗದರ್ಶಕರೂ ಹಿರಿಯರೂ ಆದ ಇವರು ಕನ್ನಡ…
20 ಫೆಬ್ರವರಿ 2023, ಮಂಗಳೂರು: “ಗುರವರ”ದಲ್ಲಿ ಸಂಸ್ಕಾರ ಭಾರತಿ ಮಂಗಳೂರು ವತಿಯಿಂದ “ಭರತ ಮುನಿ ಸ್ಮೃತಿ ದಿವಸ”ವನ್ನು ದಿನಾಂಕ 19-02-2023ನೇ ಭಾನುವಾರ ಸಂಜೆ 6-30 ಗಂಟೆಗೆ ಆಚರಿಸಲಾಯಿತು. ವಿದುಷಿ ರೂಪಶ್ರೀ ಮಧುಸೂದನ್ ನಿರ್ದೇಶಕರು ನೃತ್ಯಾಂಗನ ಪ್ರದರ್ಶನ ಕೇಂದ್ರ, ನಾಗರಬಾವಿ, ಬೆಂಗಳೂರು ಇವರು ಭರತಮುನಿಗೆ ನುಡಿನಮನ ಸಲ್ಲಿಸುತ್ತಾ “ಭಾರತ ಮಾತೆಯನ್ನು ವೈಭವೀಕರಿಸಿದ ಮುನಿಪುಂಗವ ಭರತ ಮುನಿಗಳು” ಎಂದರು. ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್ ಇಲ್ಲಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ್ ನಾವಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತದ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಇವರು ಮಾತನಾಡಿ “ಮನಸ್ಸನ್ನು ಕೆರಳಿಸುವ ನೃತ್ಯದಲ್ಲಿ ಮಕ್ಕಳನ್ನು ತೊಡಗಿಸದೆ, ಸಂಸ್ಕಾರ ಉಳಿಸುವ ಬೆಳೆಸುವ ಲಲಿತ ಕಲೆಗಳ ಕಡೆಗೆ ಮಕ್ಕಳ ಒಲವು ಹರಿಯುವಂತೆ ಮಾಡಿ” ಎಂದು ಕಿವಿಮಾತು ಹೇಳಿದರು. ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಕೆ. ಭಂಡಾರಿ ಸ್ವಾಗತಿಸಿ ಮಾಧವ ಭಂಡಾರಿ ವಂದಿಸಿದರು. ಸಭಾ ಕಾರ್ಯಕ್ರಮದ ಕೊನಯಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು…
‘ತ್ರಿಪದಿ ಕವಿ’ ಸರ್ವಜ್ಞ ಜಯಂತಿಯಾದ ಇಂದು, ಹಿರಿಯ ಲೇಖಕಿ, ನಿವೃತ್ತ ಪ್ರಾಧ್ಯಾಪಿಕೆ ಡಾ| ಮೀನಾಕ್ಷಿ ರಾಮಚಂದ್ರರ ಈ ಲೇಖನದ ಮೂಲಕ ಕವಿಗೆ ನಮನಗಳನ್ನು ಸಲ್ಲಿಸುತ್ತಿದ್ದೇವೆ. ಸುಮಾರು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಸರ್ವಜ್ಞನನ್ನು ‘ತ್ರಿಪದಿ ಕವಿ’ ಎಂದು ಕರೆಯುತ್ತಾರೆ. ಈತ ಓರ್ವ ಶ್ರೇಷ್ಠ ವಚನಕಾರ ಹಾಗೂ ದಾರ್ಶನಿಕ. ಹಾವೇರಿ ಜಿಲ್ಲೆಯ ಅಂಬಲೂರು ಈತನ ಜನ್ಮಸ್ಥಳ. ತಂದೆ ಬಸವರಸ ತಾಯಿ ಕುಂಬಾರ ಮಾಳಿ. ಈತನ ಹುಟ್ಟಿನ ಬಗ್ಗೆ ಹಲವಾರು ಊಹಾಪೋಹಗಳು ಇವೆ. ಈತನ ಪೂರ್ವಾಶ್ರಮದ ಹೆಸರು ಪುಷ್ಪದತ್ತ ಎಂದೂ ಹೇಳಲಾಗುತ್ತದೆ. ‚ಸರ್ವಜ್ಞ‛ ಎನ್ನುವ ಅಂಕಿತದಲ್ಲಿ ಸರ್ವಜ್ಞ ಎನ್ನುವ ಅಂಕಿತದಲ್ಲಿ ದೊರೆಯುವ ಆತನ ವಚನವೊಂದರಲ್ಲಿ ತಾನು ಏಳು ಲಕ್ಷದ ಎಪ್ಪತ್ತೇಳು ಸಾವಿರದ ಏಳುನೂರ ಎಪ್ಪತ್ತೇಳು ವಚನಗಳನ್ನು ಬರೆದಿರುವೆ ಎಂದು ಆತ ಹೇಳಿಕೊಂಡಿದ್ದರೂ ಸಹಸ್ರಾರು ವಚನಗಳನ್ನು ಈತ ಬರೆದಿರುವನೆಂಬುದು ವೇದ್ಯವಾಗುತ್ತದೆ. ಅವುಗಳಲ್ಲಿ ಕೆಲವು ಪ್ರಕ್ಷಿಪ್ತವಾಗಿ ಸೇರಿಕೊಂಡಿರುವ ಸಾಧ್ಯತೆಗಳೂ ಇವೆ. ‘ಪರಮಾರ್ಥ’ ಎನ್ನುವ ಅಂಕಿತದಲ್ಲೂ ಈತ ಬರೆದಿದ್ದನು ಎನ್ನುವ ಊಹೆಯೂ ಇದೆ. ಸಮಾಜದ ಅಂಕುಡೊAಕುಗಳನ್ನು ಚಿಕಿತ್ಸಕ ದೃಷ್ಟಿಯಿಂದ ತನ್ನ…
19 ಫೆಬ್ರವರಿ 2023, ಮಂಗಳೂರು: 05.05.1997ರಂದು ವಿನಯ ಆಚಾರ್ಯ ಹಾಗೂ ಸುಮ ಆಚಾರ್ಯ ಇವರ ಮಗಳಾಗಿ ಅಶ್ವಿನಿ ವಿ ಭಟ್ ಅವರ ಜನನ. MSC chemistry, B.Ed ಇವರ ವಿದ್ಯಾಭ್ಯಾಸ. ತಂದೆ ವಿನಯ ಆಚಾರ್ಯ ಹಾಗೂ ಮನೆಯವರಲ್ಲಿದ್ದ ಯಕ್ಷಗಾನದ ಮೇಲಿನ ಒಲವು ಅಶ್ವಿನಿಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಪೂರ್ಣಿಮಾ ಯತೀಶ್ ರೈ ಹಾಗೂ ರಮೇಶ್ ಶೆಟ್ಟಿ ಬಾಯಾರು ಇವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಭಾಗವತರಲ್ಲಿ ಪ್ರಸಂಗ ನಡೆ ಬಗ್ಗೆ ತಿಳಿದು, ಪದ್ಯಗಳನ್ನು ನೋಡಿಕೊಂಡು ಬಳಿಕ ಸಹ ಕಲಾವಿದರಲ್ಲಿ ಪೂರ್ವಭಾವಿ ಚರ್ಚೆ ಮಾಡಿ ತಯಾರಿ ಮಾಡಿಕೊಳ್ತೇನೆ ಎಂದು ಅಶ್ವಿನಿ ಅವರು ಹೇಳುತ್ತಾರೆ. ಸುಧನ್ವ ಮೋಕ್ಷ, ದಕ್ಷಾಧ್ವರ, ಜಾಂಬವತಿ ಕಲ್ಯಾಣ, ಸುದರ್ಶನ ಗರ್ವ ಭಂಗ, ದೇವಿ ಮಹಾತ್ಮೆ, ಕನಕಾಂಗಿ ಕಲ್ಯಾಣ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ದಾಕ್ಷಾಯಿಣಿ, ಸುಧನ್ವ, ಕೃಷ್ಣ, ಲಕ್ಷ್ಮೀ, ಸುಭದ್ರೆ ಇತ್ಯಾದಿ ಇವರ ನೆಚ್ಚಿನ ವೇಷಗಳು. ಶ್ರೀ ಮಹಾ…
19 ಫೆಬ್ರವರಿ 2023, ಮಂಗಳೂರು: ಹಿಂದಿಯ ಸೆಲೆಬ್ರೇಶನ್ ಪ್ರಾದೇಶಿಕ ಭಾಷೆಯಲ್ಲಿ ಇಲ್ಲ: ನಟ ರಿಷಬ್ ಹಿಂದಿ ಸಿನಿಮಾಗಳಲ್ಲಿ ಪ್ರೇಕ್ಷಕನಿಗೆ ಸೆಲೆಬ್ರೇಶನ್ ಕಾಣಿಸಿಕೊಂಡರೆ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ಸಂಸ್ಕೃತಿಯನ್ನು ನೋಡುವ ಜತೆಗೆ ಅಷ್ಟೇ ಸಮರ್ಥವಾಗಿ ತೋರಿಸುವ ಕೆಲಸವನ್ನು ಮಾಡುವುದರಿಂದ ಕಾಂತಾರದಂತಹ ಸಿನಿಮಾ ಗೆಲುವಿನ ಹಾದಿಯನ್ನು ಹಿಡಿಯಿತು ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಅವರು ಭಾನುವಾರ ನಗರದ ಡಾ.ಟಿಎಂಎ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಭಾರತ್ ಫೌಂಡೇಶನ್ ಆಯೋಜಿಸಿರುವ ಐದನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ 2023ನಲ್ಲಿ `ಸಿನಿಮಾ ಮತ್ತು ಸಂಸ್ಕೃತಿ ಸ್ಥಳೀಯವು ಸಾರ್ವತ್ರಿಕವಾದಾಗ’ ಎನ್ನುವ ವಿಚಾರದಲ್ಲಿ ಮಾತನಾಡುತ್ತಾ, ಕೋವಿಡ್ ಬಳಿಕ ಒಟಿಟಿ ಬಹಳ ದೊಡ್ಡದಾಗಿ ಕ್ರಾಂತಿಯನ್ನೇ ಎಬ್ಬಿಸಿದೆ. ಹಿಂದಿಯ ಸಿನಿಮಾ ಪ್ರೇಕ್ಷಕರು ರಷ್ಯನ್, ಹಾಲಿವುಡ್ನ ಸಿನಿಮಾಗಳನ್ನು ಬಹಳ ಹತ್ತಿರದಿಂದ ನೋಡುತ್ತಾರೆ. ಒಟಿಟಿ ಬಂದ ಬಳಿಕವಂತೂ ಹಾಲಿವುಡ್ ಸೇರಿದಂತೆ ಇತರ ಭಾಷೆಯ ಸಿನಿಮಾಗಳನ್ನು ತಕ್ಷಣವೇ ನೋಡುವ ಅವಕಾಶ ಇರುತ್ತದೆ. ಆದರೆ ನಮ್ಮ ನೆಲೆದ ಹಾಗೂ ಸಂಸ್ಕೃತಿಯ ಎಳೆಯನ್ನು ಇಟ್ಟುಕೊಂಡು ಬಂದ ಸಿನಿಮಾಗಳನ್ನು ಒಟಿಟಿಯಲ್ಲಿ…