Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ‘ಯಕ್ಷ ಸಂಕ್ರಾಂತಿ’ ಭಾವ ಬಣ್ಣಗಳ ಒಡ್ಡೋಲಗ ದಿನಾಂಕ 18-11-2023ರಂದು ರಾತ್ರಿ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಡೆಯಲಿರುವ ‘ಭೀಷ್ಮ ಪರ್ವ’ ಯಕ್ಷಗಾನ ಪ್ರಸಂಗದಲ್ಲಿ ಭೀಷ್ಮನಾಗಿ ಕೃಷ್ಣ ಯಾಜಿ ಬಳ್ಕೂರು, ಕೃಷ್ಣನಾಗಿ ವಿಶ್ವನಾಥ್ ಹೆನ್ನಾಬೈಲ್, ಅರ್ಜುನನಾಗಿ ಚಂದ್ರಹಾಸ ಹೊಸಪಟ್ಣ ಮತ್ತು ಧರ್ಮರಾಯನಾಗಿ ಮಂಜುನಾಥ ರಾವ್ ಚೌಕುಳಮಕ್ಕಿ ಪಾತ್ರ ನಿರ್ವಹಿಸಲಿದ್ದಾರೆ. ಭೀಷ್ಮನ ಬದುಕು, ಅದೆಷ್ಟು ಒಗಟುಗಳ ಸಂಕಥನ ! ಭೀಷ್ಮನಿಗಿಂತ ಮುಂಚೆ ಹುಟ್ಟಿದ ಏಳು ಮಂದಿ ಮಕ್ಕಳನ್ನು ಹೆತ್ತಬ್ಬೆ ಗಂಗಾ ಭವಾನಿ ನದಿಗೆಸೆಯುವಾಗ, ಸ್ತ್ರೀ ವ್ಯಾಮೋಹದಿಂದ ಖಂಡಿಸದೇ ಉಳಿದವನು ಶಂತನು!. ಭೀಷ್ಮನ ಸರದಿ ಬಂದಾಗ, ಈ ಮಗು ಬೇಕು ಎನ್ನುತ್ತಾನೆ ಶಂತನು. ಆ ಕಾರಣಕ್ಕಾಗಿ ಗಂಗೆ ದೂರವಾಗುತ್ತಾಳೆ, ಮಗ ಬದುಕುಳಿಯುತ್ತಾನೆ!. ತಂದೆಗೋಸುಗ ಸತ್ಯವತಿಯನ್ನು ಕರೆ ತರುವಾಗ ಕಂದರನ ಇಚ್ಚೆಯಂತೆ ವ್ಯವಹರಿಸುತ್ತಾನೆ ದೇವವ್ರತ. ವಧುವನ್ನು ಮನೆ ತುಂಬಿಕೊಳ್ಳುವ ಸಲುವಾಗಿ, ಆಡಿದ ಮಾತಿನಂತೆ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾನೆ. ಆದರೆ ಹಸ್ತಿನಾವತಿಗೆ ಒಳಪಡದೆ ಸ್ವತಂತ್ರ ರಾಜ್ಯವಾಗಿದ್ದ ಕಾಶಿಯ…
ಉಡುಪಿ : ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ಕೊಡಲ್ಪಡುವ ಐದನೇ ವರುಷದ ‘ಕೃಷ್ಣಪ್ರೇಮ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 19-11-2023 ಆದಿತ್ಯವಾರದಂದು ಸಂಜೆ 5-30ರಿಂದ ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತ್ಯ ವಿಮರ್ಶಕರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿಕೊಳ್ಳಲಿದ್ದಾರೆ. ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸಾಧು ಸಾಲ್ಯಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಉಡುಪಿಯ ಹಿರಿಯ ಉದ್ಯಮಿಗಳಾದ ಶ್ರೀ ವಿಶ್ವನಾಥ್ ಶೆಣೈಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ ನೃತ್ಯ ಸಾಹಿತ್ಯ ಕ್ಷೇತ್ರದ ಸಾಧಕಿ ವಿದುಷಿ ಬಿ.ಸುಮಂಗಲಾ ರತ್ನಾಕರ್ ಮಂಗಳೂರು, ನೃತ್ಯವಾದ್ಯ ಸಂಗೀತ ಕ್ಷೇತ್ರದ ಸಾಧಕರಾದ ಶ್ರೀ ಬಾಲಚಂದ್ರ ಭಾಗವತ್ ಉಡುಪಿ, ನೃತ್ಯವರ್ಣಾಲಂಕಾರ ಕ್ಷೇತ್ರದ ಸಾಧಕ ಶ್ರೀ ರಮೇಶ್ ಕೆ. ಪಣಿಯಾಡಿ, ನಾಟಕ, ಸಂಗೀತ ಮತ್ತು ನಿರ್ದೇಶನದ ಸಾಧಕ ಶ್ರೀ ಗುರುರಾಜ್ ಮಾರ್ಪಳ್ಳಿ, ನಾಟಕದ ನಟನಾ…
ಮಂಗಳೂರು : ಮಂಗಳೂರಿನ ಸಂಗೀತ ಪರಿಷತ್, ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಕಾರದೊಂದಿಗೆ ‘ಮಂಗಳೂರು ಸಂಗೀತೋತ್ಸವ 2023’ ಕಾರ್ಯಕ್ರಮವನ್ನು ದಿನಾಂಕ 22-11-2023ರಿಂದ 26-11-2023ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22-11-2023ರಂದು ಸಂಜೆ ಗಂಟೆ 4.45ಕ್ಕೆ ಉದ್ಘಾಟನಾ ಸಮಾರಂಭ ಹಾಗೂ ಬೆಂಗಳೂರಿನ ಶ್ರೀಮತಿ ಗೀತಾ ರಮಾನಂದ್ ಇವರಿಂದ ವೀಣಾವಾದನ, ದಿನಾಂಕ 23-11-2023ರಂದು ಸಂಜೆ ಗಂಟೆ 5ಕ್ಕೆ ವಿಶಾಖಪಟ್ಟಣದ ಶ್ರೀಮತಿ ರಮ್ಯಾ ಕಿರಣ್ಮಯಿ ಚಗಂಟಿಯವರಿಂದ ಹಾಡುಗಾರಿಕೆ, ದಿನಾಂಕ 24-11-2023ರಂದು ಸಂಜೆ ಗಂಟೆ 5ಕ್ಕೆ ಬೆಂಗಳೂರಿನ ಶ್ರೀ ಹೇಮಂತ್ ಮತ್ತು ಶ್ರೀ ಹೇರಂಭ ಇವರಿಂದ ಕೊಳಲುವಾದನ, ದಿನಾಂಕ 25-11-2023ರಂದು ಮಧ್ಯಾಹ್ನ ಗಂಟೆ 3ಕ್ಕೆ ಚೆನ್ನೈಯ ಶ್ರೀ ಅನಿರುದ್ಧ್ ಸುಬ್ರಮಣಿಯನ್ ಇವರಿಂದ ಹಾಡುಗಾರಿಕೆ ಹಾಗೂ ಸಂಜೆ ಗಂಟೆ 5ಕ್ಕೆ ಪುತ್ತೂರಿನ ಶ್ರೀಮತಿ ಸುಚಿತ್ರಾ ಹೊಳ್ಳ ಇವರಿಂದ ಹಾಡುಗಾರಿಕೆ, ದಿನಾಂಕ 26-11-2023ರಂದು ಬೆಳಿಗ್ಗೆ ಗಂಟೆ 10ಕ್ಕೆ ಚೆನ್ನೈಯ ಶ್ರೀ ಪಾಲ್ಘಾಟ್…
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ, ಹನ್ನೊಂದನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಶ್ರೀ ಹರಿ ಚರಿತ್ರೆ’ ಏಕಾದಶ ಸರಣಿಯು ದಿನಾಂಕ 19-11-2023ರಿಂದ 25-11-2023ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ. ಈ ಸಮಾರಂಭದ ಕರೆಯೋಲೆಯನ್ನು ಕದ್ರಿ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿದ ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಎ.ಜೆ. ಶೆಟ್ಟಿಯವರು ಮಾತನಾಡುತ್ತಾ “ಕರ್ನಾಟಕದಲ್ಲಿ ಪರಿಶುದ್ಧವಾದ ಕನ್ನಡ ಭಾಷೆಯನ್ನು ಬಳಸುವ ಒಂದು ಕಲಾಪ್ರಕಾರವಿದ್ದರೆ ಅದು ಯಕ್ಷಗಾನ ಮಾತ್ರ. ಕಳೆದ ಹತ್ತು ವರ್ಷಗಳಿಂದ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಪ್ರತೀ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ ಯಕ್ಷಗಾನ ತಾಳಮದ್ದಳೆಯ…
ಉಡುಪಿ : ನಾಟಕ ಸ್ಪರ್ಧಾ ಸಮಿತಿ ರಂಗಭೂಮಿ (ರಿ.) ಉಡುಪಿ ಆಯೋಜಿಸುವ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್. ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 44ನೇಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ 2023 ಇದರ ಉದ್ಘಾಟನಾ ಸಮಾರಂಭವು ದಿನಾಂಕ 22-11-2023ರ ಬುಧವಾರ ಸಂಜೆ ಘಂಟೆ 6.00ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ರಂಗಭೂಮಿ (ರಿ.) ಉಡುಪಿ ಇದರ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್.ಬಲ್ಲಾಳ್ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿ, ಆತ್ರಾಡಿಯ ಉದ್ಯಮಿಯಾದ ಶ್ರೀ ಸತ್ಯಾನಂದ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದಿನಾಂಕ 22-11-2023ರಂದು ಬಳ್ಳಾರಿಯ ಧಾತ್ರಿ ರಂಗ ಸಂಸ್ಥೆ (ರಿ) ಸಿರಿಗೇರಿ ಪ್ರಸ್ತುತಪಡಿಸುವ ಸಾಮಾಜಿಕ ನಾಟಕ ‘ಸೋರುತಿಹುದು…
ಉಡುಪಿ : ರಥಬೀದಿ ಗೆಳೆಯರು (ರಿ.) ಉಡುಪಿ ಇವರ ವತಿಯಿಂದ ನೆಹರೂ ಜಯಂತಿ ಪ್ರಯುಕ್ತ ‘ಮಕ್ಕಳ ನಾಟಕ ಹಬ್ಬ -2023’ ದಿನಾಂಕ 19-11-2023ರಂದು ಸಂಜೆ 3 ಘಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ. ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಅಭಿಜ್ಞಾನ ಮಕ್ಕಳ ನಾಟಕ ಬಳಗದವರು ಐಕೆ ಬೊಳುವಾರು ಇವರ ರಂಗಪಠ್ಯ ಮತ್ತು ನಿರ್ದೇಶನದಲ್ಲಿ ‘ಕಾರಂತಜ್ಜನಿಗೊಂದು ಪತ್ರ’, ಕಟಪಾಡಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಬಾಲರಂಗ ಮಕ್ಕಳ ನಾಟಕ ಶಾಲೆಯ ಮಕ್ಕಳಿಂದ ಸಂತೋಷ್ ನಾಯಕ್ ಪಟ್ಲ ರಚನೆ ಮತ್ತು ನಿರ್ದೇಶನದಲ್ಲಿ ‘ಜ್ಞಾನ ವಿಜ್ಞಾನ ಜಿಂದಾಬಾದ್’ ಮತ್ತು ಕಿನ್ನರಮೇಳ ತುಮುರಿ ಪ್ರಸ್ತುತ ಪಡಿಸುವ ಸಾಲಿಯಾನ್ ಉಮೇಶ್ ನಾರಾಯಣ್ ನಿರ್ದೇಶನದಲ್ಲಿ ‘ಆನ್ಯಾಳ ಡೈರಿ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿಯ ನಿವೃತ್ತ ಪ್ರಾಂಶುಪಾಲರಾದ ಉದಯ್ ಕುಮಾರ್ ಇರ್ವತ್ತೂರು ಮತ್ತು ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಭಾಗವಹಿಸಲಿರುವರು.
ಉಡುಪಿ : ಯಕ್ಷಗಾನ ಕಲಾರಂಗದ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 18-11-2023 ಶನಿವಾರ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಸಂಜೆ 5.00 ಗಂಟೆಗೆ ಜರಗಲಿದೆ. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿರುವರು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶ್ರೀ ಕೆ. ವಾಸುದೇವ ಆಸ್ರಣ್ಣರು ಕಲಾವಿದರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿರುವರು. ಕಟೀಲು ದೇವಳದ ಅಧ್ಯಕ್ಷರು ಹಾಗೂ ಆನುವಂಶಿಕ ಮೊಕ್ತೇಸರರಾಸ ಶ್ರೀ ಕೆ. ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಅರ್ಚಕರುಗಳಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ವೆಂಕಟರಮಣ ಆಸ್ರಣ್ಣ, ಶ್ರೀ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕರಾದ ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬೆಂಗಳೂರಿನ ಶ್ರೀ ಕೆ. ಸದಾಶಿವ ಭಟ್, ದುಬೈಯ ಶ್ರೀ ಪ್ರಭಾಕರ ಸುವರ್ಣ, ಶ್ರೀ…
ಬೆಂಗಳೂರು : ರಂಗಪಯಣ ಪ್ರಸ್ತುತ ಪಡಿಸುವ ‘ಶಂಕರ್ ನಾಗ್ ನಾಟಕೋತ್ಸವ 2023’ ಕಾರ್ಯಕ್ರಮವು ದಿನಾಂಕ 20-11-2023ರಿಂದ 24-11-2023ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ದಿನಾಂಕ 20-11-2023ರಂದು ಸಂಜೆ ಗಂಟೆ 6ಕ್ಕೆ ಸಾತ್ವಿಕ ರಂಗ ತಂಡದ ‘ರಂಗ ಗೀತೆ’ಯೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀಯುತ ಶಶಿಧರ ಅಡಪ ಇವರಿಗೆ ರಂಗ ಮಕ್ಕಳಿಂದ ರಂಗ ಗೌರವ. 7.30ಕ್ಕೆ ರಂಗಪಯಣ ತಂಡದವರಿಂದ ರಾಜ್ ಗುರು ರಚನೆಯ ಸಂಗೀತ ಮತ್ತು ನಿರ್ದೇಶನದ ‘ಸೋಮಾಲಿಯಾ ಕಡಲ್ಗಳ್ಳರು’ ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 21-11-2023ರಂದು ಸಂಜೆ ಗಂಟೆ 5ಕ್ಕೆ ‘ನನ್ನೊಳಗಿನ ಕಡಲು’ ಕೃತಿ ಲೋಕಾರ್ಪಣೆ ಮತ್ತು ಶ್ರೀಯುತ ಪ್ರವೀಣ್ ಬಿ.ಎಂ. ಇವರಿಂದ ಕಾವ್ಯ ವಾಚನ, 6-05ಕ್ಕೆ ‘ನಮ್ಮ ನಾಟಕ – ನಿಮ್ಮ ಮಾತು’ : ಗುಲಾಬಿ ಗ್ಯಾಂಗ್ 100ರ ಸಂಭ್ರಮ ಪ್ರಯುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ. ಗಂಟೆ 7.15ಕ್ಕೆ ಸಾತ್ವಿಕ ತಂಡ ಅಭಿನಯಿಸುವ ರಾಜ್ ಗುರು ರಚನೆಯ ಹಾಗೂ ಕೃಷ್ಣಮೂರ್ತಿ ಕವತ್ತಾರ್ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದ…
ಬೆಂಗಳೂರು : ಅಮೋಘ (ರಿ.) ಹಿರಿಯಡ್ಕ ಮತ್ತು ಸಪ್ನ ಬುಕ್ ಹೌಸ್ ಬೆಂಗಳೂರು ಇವರ ಆಯೋಜನೆಯಲ್ಲಿ ಶ್ರೀಮತಿ ಪೂರ್ಣಿಮಾ ಸುರೇಶ್ ಅವರ ‘ರಂಗ ರಂಗೋಲಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 19-11-2023ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ನರಸಿಂಹರಾಜ ಕಾಲೋನಿಯ 3ನೇ ಮುಖ್ಯ ರಸ್ತೆಯಲ್ಲಿರುವ ‘ಬಿ.ಎಂ.ಶ್ರೀ ಪ್ರತಿಷ್ಠಾನ’ದಲ್ಲಿ ನಡೆಯಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು, ಚಿಂತಕರು ಡಾ. ಟಿ.ಎಸ್. ನಾಗಾಭರಣ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕ.ಸಾ.ಪ.ದ ಗೌರವ ಕಾರ್ಯದರ್ಶಿಯಾದ ಡಾ. ಪದ್ಮಿನಿ ನಾಗರಾಜು ಇವರು ಕೃತಿ ಪರಿಚಯ ಮಾಡಲಿದ್ದಾರೆ. ಮಾಧ್ಯಮ ಭಾರತಿ ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶ್ರೀ ಎನ್.ಎಸ್. ಶ್ರೀಧರ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಕಾರ್ಯಕ್ರಮದ ಮೊದಲು ಖ್ಯಾತ ಗಾಯಕಿ ಭಾಗ್ಯಶ್ರೀ ಗೌಡ ಇವರಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ. ಕೃತಿಯ ಲೇಖಕಿ ಶ್ರೀಮತಿ ಪೂರ್ಣಿಮಾ ಸುರೇಶ್ ಮತ್ತು ಸಪ್ನ ಬುಕ್ ಹೌಸ್ ಇದರ ಸಂಚಾಲಕರಾದ ಶ್ರೀ ಆರ್. ದೊಡ್ಡೇಗೌಡರು ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.
ಮೈಸೂರು : ಮೈಸೂರಿನ ಅದಮ್ಯ ರಂಗಶಾಲೆಯ ವತಿಯಿಂದ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’ ಪ್ರದಾನ ಹಾಗೂ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮವು ದಿನಾಂಕ 18-11-2023ರಂದು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಶ್ರೀ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶ್ರೀ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಸಮಾರಂಭವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಉದ್ಘಾಟಿಸಲಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಪ್ರೊ. ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸಲಿರುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಲಿದ್ದು, ಪಂಪ ಪ್ರಶಸ್ತಿ ಪುರಸ್ಕೃತ ಬಹುಶ್ರುತ ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಯಾಗಿ ದಿ ನೆಸ್ಟ್ ಟ್ರಸ್ಟಿನ ಅಧ್ಯಕ್ಷ ಲಯನ್ ಡಿ.ಎಸ್. ಸತೀಶ್ ಪಾಲ್ಗೊಳ್ಳುವರು. ಡಾ.ಆರ್.ಎಸ್.ನರಸೇಗೌಡ ಎನ್. ಉದಯಶಂಕರ್ ಜಿ.ಟಿ. ಅನ್ನಪೂರ್ಣ ಎ. ರಾಮೇಗೌಡ ಕೆ. ಮಾಲತಿ ಲೋಕೇಶ ಬೆಕ್ಕಳಲೆ ಕೃ.ಪಾ. ಮಂಜುನಾಥ್ ಜಿ.ಆರ್. ಶ್ರೀವತ್ಸ ಈ ಸಾಲಿನ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’ಯನ್ನು ಮೈಸೂರಿನ ಬಿ.ಜಿ.ಎಸ್ ಶಿಕ್ಷಣ…