Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಮಹಾಗಣಪತಿ ಆಂಜನೇಯ ದೇವಸ್ಥಾನದಲ್ಲಿ ನಡೆಸಲಾಗುತ್ತಿರುವ ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ವತಿಯಿಂದ ‘ರಾಜ್ಯ ಮಟ್ಟದ ನೃತ್ಯೋತ್ಸವ’ವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ದಿನಾಂಕ 04-02-2024ರಂದು ನಡೆಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಕುಂದಾಪುರದ ಶ್ರೀ ಶನೇಶ್ವರ ದೇವಸ್ಥಾನದ ಧರ್ಮದರ್ಶಿಯಾದ ಡಾ. ಅಶೋಕ್ ಶೆಟ್ಟಿ ವಹಿಸಿದ್ದರು. ನಟ ಸುಧೀರ್ ಅವರ ಪತ್ನಿ ಮಾಲತಿ ಸುಧೀರ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ಸಂಸ್ಥಾಪಕರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಸುವರ್ಣ ಸಂಭ್ರಮ ಕನ್ನಡಿಗ ಪ್ರಶಸ್ತಿ’ ಹಾಗೂ ‘ಸುವರ್ಣ ಶ್ರೀ ಕನ್ನಡ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಸಮಾಜ ಸೇವಕ ಸೋಮನ್ ಎನ್.ಕೆ., ಷಣ್ಮುಗಂ ಎಂ., ಡಾ. ಮಮತಾ ಅಶೋಕ್, ಡಾ. ಪಿ. ಶ್ರೀಧರ್, ಶ್ರೀ ಮಹೇಂದರ್ ಮುಣೋತ್, ಬಾಲ ಪ್ರತಿಭೆ ಅಮೋಘ…
ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಪ್ರಿಯ ಸುಳ್ಯರವರ ‘ಬಾಳಿಗೆ ಬೆಳಕು’ ಕವನ ಸಂಕಲನ ಬಿಡುಗಡೆ ಸಮಾರಂಭವು ದಿನಾಂಕ 25-02-2024ರಂದು ಪುತ್ತೂರಿನ ಜೈನ ಭವನ ರಸ್ತೆಯಲ್ಲಿರುವ ‘ಮನಿಷಾ ಸಭಾಂಗಣ’ದಲ್ಲಿ ನಡೆಯಲಿದೆ. ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಸಾಹಿತಿ ಮತ್ತು ವಿಮರ್ಶಕರಾದ ಶ್ರೀ ಭಾಸ್ಕರ ಕೋಡಿಂಬಾಳ ಇವರು ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಪಡ್ನೂರು ಸ.ಹಿ.ಪ್ರಾ. ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕು. ಮಣಿ ಕೃತಿ ಬಿಡುಗಡೆ ಮಾಡಲಿದ್ದು, ಬೆಂಗಳೂರಿನ ಪತ್ರಕರ್ತರಾದ ಶ್ರೀ ರಾಜು ಕೃತಿಗಾರರ ಪರಿಚಯ ಹಾಗೂ ಸಾಹಿತಿ ಮತ್ತು ವಿಮರ್ಶಕರಾದ ಶ್ರೀಮತಿ ವಿಂಧ್ಯಾ ಎಸ್. ರೈ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ 11-30 ಗಂಟೆಗೆ ನಡೆಯಲಿರುವ ‘ಬಾಳಿಗೆ ಬೆಳಕು ಕವನಕೆ ಹೊಳಪು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವ…
ಮಂಗಳೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಂಗಳೂರು ಸಮೀಪದ ಕೋಟೆಕಾರು ಬಳಿ ಶ್ರೀ ಕೊಲ್ಯ ಮಠದ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 36ನೆಯ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 20-02-2023ನೇ ಮಂಗಳವಾರ ‘ದಕ್ಷಯಜ್ಞ’ ಎಂಬ ತಾಳಮದ್ದಳೆ ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ). ಶುಭಾ ಗಣೇಶ್ (ದಕ್ಷ), ಜಯಂತಿ ಹೆಬ್ಬಾರ್ (ವೀರಭದ್ರ), ಗಾಯತ್ರಿ ಹೆಬ್ಬಾರ್ (ವೃದ್ಧ ಬ್ರಾಹ್ಮಣ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಹರಿದಾಸ ಕೂಡ್ಲು ಮಹಾಬಲ ಶೆಟ್ಟಿ (ದೇವಕೀ ತನಯ) ವಂದಿಸಿದರು.
ಉಡುಪಿ : ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ತುಳು ಕಾದಂಬರಿಗಳ ಹಸ್ತಪ್ರತಿ ಆಹ್ವಾನಿಸಲಾಗಿದೆ. ಪ್ರಶಸ್ತಿಯು 8 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಇದುವರೆಗೆ ಯಾವುದೇ ಪ್ರಶಸ್ತಿ, ಬಹುಮಾನಕ್ಕೆ ಆಯ್ಕೆಯಾಗದ, ಮುದ್ರಿತವಾಗದ, ಕ್ರೌನ್ 1/8 ಆಕಾರದಲ್ಲಿ 120 ಪುಟ ಮೀರಿರುವ ಕೃತಿಯಾಗಿರಬೇಕು. ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿ ಬಿಂಬಿಸುವ ಅಂಶಗಳಿಂದ ಕೂಡಿರಬೇಕು. ದಿನಾಂಕ 30-03-2024ರ ಒಳಗೆ ಪಣಿಯಾಡಿ ಪ್ರಶಸ್ತಿ ಸಂಚಾಲಕಿ, ತಾರಾ ಉಮೇಶ್ ಆಚಾರ್ಯ, ವೆಂಕಟರಮಣ ಕಲ್ಮಂಜೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಮಣಿಪುರ ಪೋಸ್ಟ್, ಉಡುಪಿ -576120 ವಿಳಾಸಕ್ಕೆ ಕಳುಹಿಸಬೇಕು. ಮೊ. 98445 32629 ಸಂಪರ್ಕಿಸಲು ತುಳುಕೂಟ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಮಲ್ಪೆ : ಕಡೆಕಾರು ಕಿದಿಯೂರು ಶ್ರೀ ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿಯ ವಜ್ರ ಮಹೋತ್ಸವ ಸಮಾರಂಭ ದಿ. ತೋನ್ಸೆ ಜಯಂತ್ ಕುಮಾರ್ ನಿರ್ದೇಶಿಸಲ್ಪಟ್ಟ ಆಯ್ದ ಹವ್ಯಾಸಿ ಯಕ್ಷಗಾನ ಸಂಘಗಳ ಯಕ್ಷಗಾನ ಸ್ಪರ್ಧೆಯ ಸಮಾರೋಪವು ದಿನಾಂಕ 10-02-2024ರಂದು ಕಿದಿಯೂರು ಗರಡಿ ವಠಾರದಲ್ಲಿ ಜರಗಿತು. ಯಕ್ಷಗಾನ ಸ್ಪರ್ಧೆಯಲ್ಲಿ ಕುತ್ಪಾಡಿಯ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಪ್ರಥಮ ಸ್ಥಾನ ಹಾಗೂ ತೊಟ್ಟಂ ಗಜಾನನ ಯಕ್ಷಗಾನ ಕಲಾ ಮಂಡಳಿ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದೆ. ಅತ್ಯುತ್ತಮವಾಗಿ ಅಭಿನಯಿಸಿದ ಕಲಾವಿದರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ಕಲ್ಮಾಡಿ ಬ್ರಹ್ಮಬೈದರ್ಕಳ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷ ಅಚ್ಚುತ ಅಮೀನ್ ಕಲ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಣ್ಣದ ವೇಷಧಾರಿ ಎಲ್ಲಂಪಳ್ಳಿ ಜಗನ್ನಾಥ ಆಚಾರ್ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಗುರು ಕೆ. ರತ್ನಾಕರ ಆಚಾರ್ಯ ಅವರಿಗೆ ಗುರುವಂದನೆ ನೀಡಲಾಯಿತು. ಸಂಘದ ಹಿರಿಯ ಸದಸ್ಯರಾದ 13 ಮಂದಿಯನ್ನು ಸಮ್ಮಾನಿಸಲಾಯಿತು. ಕಡೆಕಾರು ಮತ್ತು ಕಿದಿಯೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ…
ಬಂಟ್ವಾಳ : ಶ್ರೀಕ್ಷೇತ್ರ ಒಡಿಯೂರಿನಲ್ಲಿ ‘ಸಿರಿರಾಮೆ’ ಎಂಬ ಪರಿಕಲ್ಪನೆಯಡಿಯಲ್ಲಿ 24ನೇ ‘ತುಳು ಸಾಹಿತ್ಯ ಸಮ್ಮೇಳನ’ವು ಮಣಿಪಾಲದ ಹಿರಿಯ ಬರಹಗಾರ, ಯಕ್ಷಗಾನ ಕಲಾವಿದ ಹಾಗೂ ಜನಪ್ರಿಯ ವೈದ್ಯ ಡಾ. ಭಾಸ್ಕರಾನಂದಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 18-02-2024ರಂದು ಜರಗಿತು. ಸಮ್ಮೇಳನದ ಅಂಗವಾಗಿ ಪುಸ್ತಕ ಬಿಡುಗಡೆ, ವಿದ್ವಾಂಸರಿಂದ ‘ರಾಮಾಯಣ’ ಬಗ್ಗೆ ‘ತುಲಿಪು’ ಎಂಬ ವಿಚಾರಸಂಕಿರಣ, ಅರವತ್ತು ಮಂದಿ ಕವಿಗಳ ಚುಟುಕು ಕವಿಗೋಷ್ಠಿ, ಕಬಿತೆ-ಪದೊ-ಚಿತ್ರ ಎಂಬ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಹನ್ನೆರಡು ಮಂದಿ ಸಾಧಕರಿಗೆ ‘ತುಳುಸಿರಿ’ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮಗಳು ಜರಗಿದವು. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿಯಲ್ಲಿ ಬರೆದ ಅಧ್ಯಾತ್ಮ ರಾಮಾಯಣದ ‘ಸುಂದರಕಾಂಡ’ ಎಂಬ ಕೃತಿ ಹಾಗೂ ಡಾ. ವಸಂತಕುಮಾರ ಪೆರ್ಲ ಅವರು ಬರೆದ ತುಳುನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತ ಲೇಖನಗಳ ಸಂಕಲನ ‘ತೂಪರಿಕೆ’ ಬಿಡುಗಡೆಗೊಂಡವು. ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಗೆನಾಡು ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ ಮತ್ತು ಕನ್ಯಾನದ…
ಬೆಂಗಳೂರು : ‘ಪದ’ ಪ್ರಸ್ತುತ ಪಡಿಸಿದ ‘ಕರ್ನಾಟಕ ಜಾನಪದ ಉತ್ಸವ’ವನ್ನು ಬೆಂಗಳೂರಿನ ಮಲತ್ತಹಳ್ಳಿಯ ಕಲಾ ಗ್ರಾಮ ಸಮುಚ್ಚಯ ಭವನದಲ್ಲಿ ದಿನಾಂಕ 19-02-2024ರಂದು ಜಾನಪದ ವಿದ್ವಾಂಸರಾದ ಹಿಚಿ ಬೋರಲಿಂಗಯ್ಯನವರು ತಮಟೆ ನುಡಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡುತ್ತಾ “ಜಾನಪದ ಕಲೆ ಜನಪದದಿಂದ ಬಂದಿದ್ದು ಸರಕಾರಗಳು ಈ ಕಲೆಗೆ ಪ್ರೋತ್ಸಾಹ ನೀಡಬೇಕಾದದ್ದು ಅದರ ಕರ್ತವ್ಯ. ಹಿಂದೆ ಸರ್ಕಾರ ಜಾನಪದ ಉತ್ಸವ ಏರ್ಪಡಿಸಿ ಜನಪದ ಕಲಾವಿದರಿಗೆ ವೇದಿಕೆಯನ್ನು ನೀಡುತಿತ್ತು. ಆದರೆ ಇತ್ತೀಚಿಗೆ ಜನಪದ ಕಲಾವಿದರನ್ನು ಮೆರವಣಿಗೆಗೆ ಮಾತ್ರ ಸೀಮಿತಗೊಳಿಸಿ ಅವರನ್ನು ಬೇರೆ ಕಲಾವಿದರಿಗಿಂತ ಕಡಿಮೆ ದರ್ಜೆಯಲ್ಲಿ ಪರಿಗಣಿಸಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮನುಷ್ಯನ ಜೀವನದಿ. ಇದಕ್ಕೆ ಸರ್ಕಾರ ಮತ್ತು ಜನಸಾಮಾನ್ಯರು ಪ್ರೋತ್ಸಾಹ ನೀಡಬೇಕಾದದ್ದು ಬಹಳ ಮುಖ್ಯ. ಈ ಸರ್ಕಾರ ಜನಪದ ಕಲಾವಿದರನ್ನು ಮತ್ತು ಜನಪದರನ್ನು ನಿರಂತರವಾಗಿ ನಡೆಸಿಕೊಳ್ಳುತ್ತಿದೆ. ಆದರೆ ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಕರ್ನಾಟಕದಲ್ಲಿ 180ಕ್ಕೂ ಮಿಕ್ಕಿ ಜನಪದ ಕಲೆಗಳಿವೆ. ದೇಶದಲ್ಲಿ ಇಂತಹ ಕಲೆಗಳು ಇರುವುದು ವಿರಳ. ಇಂತಹ…
ಮುಂಬಯಿ : ‘ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದಲ್ಲಿ ಸಾಹಿತ್ಯ ವಿಮರ್ಶೆ, ಕೃತಿ ಲೋಕಾರ್ಪಣೆ ಮತ್ತು ಜನಪದ ಹಾಡುಗಳ ಪ್ರಸ್ತುತಿ ಕಾರ್ಯಕ್ರಮವು ಮುಂಬಯಿಯ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿರುವ ಮೈಸೂರು ಅಸೋಸಿಯೇಷನ್ ಇದರ ಕಿರು ಸಭಾಗೃಹದಲ್ಲಿ ದಿನಾಂಕ 17-02-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷತೆಯನ್ನು ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ವಹಿಸಿಕೊಂಡಿದ್ದು. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಇತ್ತು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ “ಜನಪದದಲ್ಲಿ ಹಾಡುಗಳದ್ದೇ ಸಿಂಹಪಾಲು. ಇದು ಹಳ್ಳಿಯ ಜನರ ಸಂಗೀತ. ಇದು ವೇದಕಾಲದಷ್ಟು ಪುರಾತನವಾದುದು. ಇಂತಹ ಜನಪದವು ಮನುಕುಲದ ಜೀವನವಾಗಿತ್ತು. ಕನ್ನಡ ಸಾಹಿತ್ಯ ರತ್ನ ಗರ್ಭಿತ ಕಡಲಿಗೆ ಸಮಾನ. ಈ ಸಾಹಿತ್ಯದಲ್ಲಿ ಹುದುಗಿದ ಸಂಪತ್ತನ್ನು ಹೆಕ್ಕಿ ತೆಗೆದು ಬೆಳಕಿಗೆ ತರುವ ಕೆಲಸ ನಾವು ಮಾಡಬೇಕಾಗಿದೆ. ಹೊಸ ಪೀಳಿಗೆಯಲ್ಲಿ ಆಸಕ್ತಿ ಮತ್ತು ಆದ್ಯತೆಗಳು ಬದಲಾಗುತ್ತಿದ್ದು ಜನಪದ ಗೀತೆಗಳು ತೆರೆಮರೆಗೆ ಸರಿಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ‘ಸೃಜನಾ’ದಲ್ಲಿ ಜನಪದಕ್ಕೆ ಮಹತ್ವ ಕೊಟ್ಟಿದ್ದು ಸ್ತುತ್ಯವಾಗಿದೆ” ಎಂದು ಹೇಳಿದರು.…
ಮೂಡುಬಿದಿರೆ : ಮುದ್ದಣ ಪ್ರಕಾಶನ-ಬಲಿಪಗಾನ ಯಾನ ಆಶ್ರಯದಲ್ಲಿ ದಿನಾಂಕ 17-02-2024ರಂದು ಮೂಡುಬಿದಿರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮುದ್ದಣ ಕವಿಯ ‘ಶ್ರೇಷ್ಠ ಯಕ್ಷಗಾನ ಪ್ರಸಂಗಗಳ ಧ್ವನಿ ಮುದ್ರಣ’ದ ಲೋಕಾರ್ಪಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಧ್ವನಿ ಮುದ್ರಣದ ಲೋಕಾರ್ಪಣೆ ಮಾಡಿದ ಅಷ್ಟಾವಧಾನಿ ವಸಂತ ಭಾರದ್ವಾಜ್ ಕಬ್ಬಿನಾಲೆ ಮಾತನಾಡುತ್ತಾ “ಮುದ್ದಣನ ಕಾವ್ಯಗಳು ಕ್ಲಿಷ್ಟಕರವೆಂದು ಅದನ್ನು ರಂಗವೇದಿಕೆಯಲ್ಲಿ ಹಾಡುವುದಕ್ಕೆ ಕೆಲವು ಭಾಗವತರು ಆಸಕ್ತಿ ತೋರದಿರುವುದು ಮತ್ತು ಅದನ್ನು ಸಾಕ್ಷಾತ್ಕರಿಸುವ ಕೌಶಲವನ್ನು ಕಲಾವಿದರು ಪ್ರದರ್ಶಿಸದೆ ಇರುವುದೇ ಕುಮಾರತ್ರಯದ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಲು ಕಾರಣ. ಕುಮಾರ ವಿಜಯವನ್ನು ಬಿಟ್ಟರೆ ಪ್ರಸಂಗ ಇಲ್ಲ, ಮುದ್ದಣನನ್ನು ಬಿಟ್ಟರೆ ಕವಿ ಇಲ್ಲ ಎನ್ನುವ ವಿಮರ್ಶಕರ ಮಾತು ಸರಿಯಾಗಿದೆ. ಮುದ್ದಣನ ಕೃತಿಗಳ ವಿಶೇಷತೆ ಏನೆಂದರೆ ಅದರ ಛಂದೋಬದ್ಧ ಮತ್ತು ಪದ ಪ್ರಯೋಗ ಕೌಶಲ. ಪ್ರತಿ ಪದದಲ್ಲೂ ಒಂದು ಅಭಿನಯವನ್ನು ಕಾಣಬಹುದು. ಅದಕ್ಕಾಗಿಯೇ ಮುದ್ದಣನ ಕಾವ್ಯಗಳು ಇತರ ಪ್ರಸಂಗಗಳಿಗಿಂತ ವಿಶೇಷವಾಗಿರಲು ಕಾರಣ. ಮುದ್ದಣನ ಕಾವ್ಯದಲ್ಲಿರುವ ಶಬ್ದ ಚಮತ್ಕಾರದಿಂದಾಗಿ ಕಲಾವಿದರು ಅದನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಾಗದೆ…
ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಕುರಿತಂತೆ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ದಿನಾಂಕ 15-03-2024ರೊಳಗೆ ಈ ಕೆಳಗಿನ ವಿಳಾಸಕ್ಕೆ ಎ4 ಆಳತೆಯ ಹಾಳೆಯಲ್ಲಿ ಒಮ್ಮುಖವಾಗಿ 3 ಪುಟಗಳು ಮೀರದಂತೆ ಕನ್ನಡದಲ್ಲಿ ಪ್ರಬಂಧ ಬರೆದು ಕಳಿಸಬೇಕೆಂದು ತೀರ್ಪುಗಾರರಲ್ಲಿ ಒಬ್ಬರಾದ ಸಾಹಿತಿ, ಕವಿಯತ್ರಿ ಶ್ರೀಮತಿ ರೇಖಾ ಪುರಾಣಿಕ್ ತಿಳಿಸಿದ್ದಾರೆ. ಸ್ಪರ್ಧಿಗಳು ತಮ್ಮ ಪೂರ್ಣ ಪ್ರಮಾಣದ ಹೆಸರು ವಿಳಾಸ ಕನ್ನಡದಲ್ಲೇ ಬರೆಯಬೇಕು. ಆಂಗ್ಲಭಾಷೆಯಲ್ಲಿ ವಿಳಾಸ ಬರೆದರೆ ಸ್ಪರ್ಧೆಗೆ ಸ್ವೀಕರಿಸುವುದಿಲ್ಲ. ವ್ಯಾಟ್ಸಪ್ ಸಂಖ್ಯೆ ಆಂಗ್ಲ ಭಾಷೆಯಲ್ಲಿ ಬರೆಯಬಹುದು. ಯಾವುದೇ ಸಭೆ-ಸಮಾರಂಭಗಳಿಲ್ಲದೇ ಬಹುಮಾನ ವಿಜೇತರಿಗೆ ಮಾತ್ರ ಸ್ಪರ್ಧೆಯ ಫಲಿತಾಂಶ, ಅಭಿನಂದನಾ ಪತ್ರ ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಕಳಿಸುತ್ತೇವೆ. ಪ್ರಬಂಧ ಬರೆದು ಕಳಿಸುವ ವಿಳಾಸ : ಶ್ರೀಮತಿ ರೇಖಾ ಪುರಾಣಿಕ್, # 39, ರಕ್ಷಾ ಟೆಂಪಲ್ ವ್ಯೂ, ಎಸ್.ಎಫ್.1, 2ನೇ…