Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಬೇಕಲದ ಗೋಕುಲಂ ಗೋಶಾಲೆಯಲ್ಲಿ ದಿನಾಂಕ 08-05-2024ರಿಂದ 16-05-2024ರ ತನಕ ಗೆಜ್ಜೆಯ ನಾದ ಕೇಳಿಬರಲಿದೆ. ಕಾಸರಗೋಡು ಜಿಲ್ಲೆಯ ಮೊದಲ ದೇಶೀಯ ನೃತ್ಯೋತ್ಸವ ಇದಾಗಿದ್ದು, ಪ್ರತೀವರ್ಷ ದೀಪಾವಳೀ ಸಂಗೀತೋತ್ಸವವನ್ನು ನಡೆಸಲಾಗುತ್ತಿದೆ. ಈ ಬಾರೀ ಅದಕ್ಕೂ ಮೊದಲು ಒಂಭತ್ತು ದಿನಗಳ ದೇಶೀಯ ನೃತ್ಯೋತ್ಸವ ಜರಗಲಿದೆ. ಪ್ರತೀದಿನ ಸಂಜೆ 5ರಿಂದ 9 ಗಂಟೆಯ ತನಕ ನಡೆಯುವ ನೃತ್ಯೋತ್ಸವದಲ್ಲಿ ದೇಶದ ಹೆಸರಾಂತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರತೀವರ್ಷ ಪೆರಿಯ ಗೋಕುಲಂ ಗೋಶಾಲೆಯಲ್ಲಿ ದೀಪಾವಳಿ ಸಂಗೀತೋತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು ಭಾರತದ ನಾನಾ ಭಾಗಗಳಿಂದ ನುರಿತ ಸಂಗೀತ ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೃತ್ಯಕಲಾವಿದರಿಗೂ ಅವಕಾಶವನ್ನು ಕಲ್ಪಿಸುವ ಸಲುವಾಗಿ ದೇಶೀಯ ನೃತ್ಯೋತ್ಸವ 9 ದಿನಗಳ ಕಾಲ ನಡೆಯಲಿದೆ. ದಿನಾಂಕ 08-05-2024ರಂದು ಸಂಜೆ 5ರಿಂದ ಗಾಯತ್ರಿ ರಾಜಾಜಿ, ತೀರ್ಥ ಇ.ಪೊದುವಾಳ್, ವರ್ಷಾ ರಾಜಕುಮಾರ್, ಕಲಾಕ್ಷೇತ್ರ ಎಂ.ಎಸ್. ಸನೀಶ್ ಅವರಿಂದ ಭರತನಾಟ್ಯ ನಡೆಯಲಿದೆ. ಮೇ.16ರ ತನಕ ಮುಂದುವರಿಯಲಿರುವ ನೃತೋತ್ಸವದಲ್ಲಿ ದೇಶದ ನಾನಾ ಭಾಗಗಳ 372 ಮಂದಿ ನೃತ್ಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪೆರಿಯ ಗೋಕುಲಂ…
ಕಾಸರಗೋಡು : ನವಪುರಂ ಪುಸ್ತಕ ದೇವಾಲಯದ ಆಶ್ರಯದಲ್ಲಿ ಚೆರುಶ್ಶೇರಿ ಕಲಾ ಸಾಹಿತ್ಯ ಸಭಾ ಏರ್ಪಡಿಸಿದ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕಾರಕ್ಕೆ ಕನ್ನಡ ಮತ್ತು ತುಳು ಸಾಹಿತಿ ಸುಂದರ ಬಾರಡ್ಕ ಆಯ್ಕೆಯಾಗಿದ್ದು ದಿನಾಂಕ 04-05-2024ರಂದು ನವಪುರಂ ಮಹೋತ್ಸವದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಹು ಭಾಷಾ ಸಾಹಿತ್ಯ ಗೋಷ್ಠಿ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು. ಕವನ, ಕಥೆ, ಲೇಖನಗಳನ್ನು ಬರೆಯುತ್ತಿರುವ ಸುಂದರ ಬಾರಡ್ಕ ಅವರು ಜಾನಪದ ವೈದ್ಯ ವಿಭಾಗಕ್ಕೆ ಸಂಬಂಧಿಸಿ ಶೋಧನೆ ನಡೆಸಿದ್ದಾರೆ. ಸ್ಥಳೀಯ ಇತಿಹಾಸ, ಜನಾಂಗಿಕ ಅಧ್ಯಯನದಲ್ಲೂ ತೊಡಗಿಸಿಕೊಂಡಿದ್ದಾರೆ. ಕಪ್ಪು ಹಾದಿಯ ಕೆಂಪು ಹೆಜ್ಜೆಗಳು, ಮಿತ್ತಮ್ಮನ ಕೆಡೆಂಜೋಳು, ಪೊಲದ್ಯೆ, ನೆಲದನಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಜಿಲ್ಲಾಮಟ್ಟದ ಕವಿಗೋಷ್ಠಿ ವಿಚಾರಗೋಷ್ಠಿಗಳಲ್ಲೂ ಭಾಗವಹಿಸಿದ್ದ ಇವರು ಕೇರಳ ತುಳು ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ ಸಹಿತ ಹಲವು ಸಂಸ್ಥೆಗಳಿಂದ ಗೌರವಾಭಿನಂದನೆ ಗಳಿಸಿದ್ದಾರೆ. ಅಕ್ಷರ ದೀಪವನ್ನು ಹಚ್ಚಿ ಅದರ ಬೆಳಕಿನಲ್ಲಿ ವಿಶ್ವವನ್ನು ಸ್ಪರ್ಶಿಸಿ ಅದನ್ನು…
ಉಪ್ಪಿನಂಗಡಿ : ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟರಮಣ ಭಟ್ ಅವರು ಕೊಡಮಾಡುವ ‘ಪಾತಾಳ ಕಲಾ ಮಂಗಳಾ’ ಪ್ರಶಸ್ತಿ ಪ್ರದಾನ ಸಮಾರಂಭ ಕೀರ್ತಿಶೇಷ ಶ್ರೀ ನಿರಂಜನ ಸ್ವಾಮಿ ಸಂಸ್ಥಾಪಿತ ಸುಂಕದಕಟ್ಟೆ ಮೇಳದ ರಂಗ ವೇದಿಕೆಯಲ್ಲಿ ದಿನಾಂಕ 26-04-2024ರಂದು ನಡೆಯತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಲಾಪೋಷಕ ಶ್ರೀಪತಿ ಭಟ್ ಮೂಡುಬಿದಿರೆ, ಭುಜಬಲಿ ಧರ್ಮಸ್ಥಳ, ಜನಾರ್ದನ ಹಂದೆ, ಅಂಬಾಪ್ರಸಾದ್ ಪಾತಾಳ, ರಾಮ ಭಟ್ ಭಾಗವಹಿಸಿದ್ದರು. ಪ್ರಬುದ್ಧ ಸ್ತ್ರೀ ಪಾತ್ರಧಾರಿಗಳಾದ ಸಂಜಯ ಕುಮಾರ್, ಸರವು ರಮೇಶ ಭಟ್, ರಮೇಶ ಕುಲಶೇಖರ ಇವರಿಗೆ ರೂ.10,000/- ಗೌರವ ನಿಧಿಯೊಂದಿಗೆ ‘ಪಾತಾಳ ಕಲಾ ಮಂಗಳ’ ಪ್ರಶಸ್ತಿ ಪ್ರದಾನಿಸಲಾಯಿತು. ಇದೇ ಸಂದರ್ಭದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ಅವರಿಂದ ಪಾತಾಳ ವೆಂಕಟರಮಣ ಭಟ್ ಅವರಿಗೆ ‘ಕುರಿಯ ಪ್ರಶಸ್ತಿ’…
ಮಂಗಳೂರು : ಸನಾತನ ನಾಟ್ಯಾಲಯ ಮಂಗಳೂರು ನೃತ್ಯ ಸಂಸ್ಥೆಯ ಆಶ್ರಯದಲ್ಲಿ 5 ಅವಧಿಗಳನ್ನು ಒಳಗೊಂಡ ನಟುವಾಂಗ ಕಾರ್ಯಗಾರವು ದಿನಾಂಕ 05-05-2024ರಂದು ಮಂಗಳೂರಿನ ಬಲ್ಲಾಳ್ ಬಾಗ್ ನಲ್ಲಿರುವ ಸನಾತನ ನಾಟ್ಯಾಲಯದಲ್ಲಿ ನಡೆಯಿತು. ಕರಾವಳಿಯ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ನೃತ್ಯ ಸಂಸ್ಥೆಯ ಸುಮಾರು 20 ನೃತ್ಯ ವಿದ್ಯಾರ್ಥಿಗಳು ಹಾಜರಿದ್ದರು ಮತ್ತು ನೃತ್ಯ ಸೌರಭ ಸಂಸ್ಥೆಯ ಗುರುಗಳಾದ ಡಾ. ಶ್ರೀವಿದ್ಯಾ ಮುರಳೀಧರ್ ಅವರ ಓರ್ವ ಶಿಷ್ಯೆ ಶಿವಾನಿ ರಾವ್ ಅವರು ಭಾಗವಹಿಸಿದ್ದರು ಸಂಸ್ಥೆಯ ನಿರ್ದೇಶಕರಾದ ಹಿರಿಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಮಣಿ ಶೇಖರ್ ಮತ್ತು ಗುರು ವಿದುಷಿ ಶ್ರೀಲತಾ ನಾಗರಾಜ್ ಉಪಸ್ಥಿತರಿದ್ದರು.
ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ನೇತೃತ್ವದಲ್ಲಿ ಯಕ್ಷಗಾನ ವೇಷಭೂಷಣ ಮತ್ತು ಬಣ್ಣಗಾರಿಕೆ ತರಬೇತಿ ಶಿಬಿರವು ದಿನಾಂಕ 06-05-2024 ರಿಂದ 13-05-2024 ರ ವರೆಗೆ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ಕೇಂದ್ರದ ಸಲಹಾಸಮಿತಿ ಸದಸ್ಯರಾದ ಶ್ರೀ ವಿಶ್ವನಾಥ ಶೆಣೈಯವರು ನೆರವೇರಿಸಿದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳಿಗೆ ಶುಭಕೋರಿದರು. ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಭುವನ ಪ್ರಸಾದ್ ಹೆಗ್ಡೆ, ಶ್ರೀಮತಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು. ಗುರು ಉಮೇಶ್ ಸುವರ್ಣರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ 25 ಮಂದಿ ಯಕ್ಷಗಾನ ಆಸಕ್ತರು ಭಾಗವಹಿಸುತ್ತಿದ್ದಾರೆ.
ಪುತ್ತೂರು : ಕನ್ನಡ ಹಾಗೂ ತುಳು ಸಾಹಿತಿ, ತುಳು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ ಪುತ್ತೂರಿನ ಸ್ವಗೃಹದಲ್ಲಿ ಮಂಗಳವಾರ ದಿನಾಂಕ 07-05-2024ರಂದು ನಿಧನರಾದರು ಅವರಿಗೆ 79ವರ್ಷ ವಯಸ್ಸಾಗಿತ್ತು. ಕಾವ್ಯ, ಸಣ್ಣಕತೆ, ನಾಟಕ, ವಿಮರ್ಶೆ ರಚನೆಯಲ್ಲಿ ತೊಡಗಿದ್ದ ಶ್ರೀಯುತರು ಜಾನಪದ ಕ್ಷೇತ್ರದ ಸಂಶೋಧನೆಯ ಮೂಲಕ ತುಳುನಾಡಿನ ಪರಂಪರೆಯನ್ನು ಜನರಿಗೆ ತಿಳಿಸುವಲ್ಲಿ ಹಾಗೂ ಅವುಗಳ ರಕ್ಷಣೆಗೆ ತಮ್ಮದೇ ಅದ ಕೊಡುಗೆ ನೀಡಿದ್ದರು. ಕೆದಂಬಾಡಿ ರಾಮೇಗೌಡರ ನೇತೃತ್ವದಲ್ಲಿ ಬ್ರಿಟಷರ ವಿರುದ್ಧ 1830ರ ದಶಕದಲ್ಲಿ ನಡೆದಿದ್ದ ತುಳುನಾಡಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬೆಳಕಿಗೆ ತರುವಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು. ಬೆಟ್ಟಂಪಾಡಿ ಹಾಗೂ ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ಳಾರೆ ಬೋರ್ಡ್ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ. ಪೂರೈಸಿದರು. ನಂತರ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿ. ಸಿ. ಎಚ್. ಶಿಕ್ಷಣ ಪಡೆದಿದ್ದರು. ಪುತ್ತೂರು ತಾಲ್ಲೂಕಿನ ಕುಂತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕನಾಗಿ ತಮ್ಮ ವೃತ್ತಿ…
ಪುತ್ತೂರು : ಸಂಘಟನೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸಾರ ಜೋಡುಮಾರ್ಗ ಸಂಸ್ಥೆಯ ನೇತೃತ್ವದಲ್ಲಿ ನಾಲ್ಕು ದಿನಗಳ ‘ಅಟ್ಟಾಮುಟ್ಟಾ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11-05-2024ರಿಂದ 14-05-2024ರವರೆಗೆ ಪುತ್ತೂರಿನ ಲಯನ್ಸ್ ಹಾಲ್ ನಲ್ಲಿ ನಡೆಯಲಿದೆ. ಬೆಳಿಗ್ಗೆ 9.30ರಿಂದ ಸಂಜೆ 4ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಯೋಗ, ರಂಗಾಟಗಳು, ಕರಕುಶಲ ಕಲೆ, ಚಿತ್ರಕಲೆ, ವಿಜ್ಞಾನ ಲೋಕ, ಹೊರಸಂಚಾರ, ಕಥೆಗಳ ಪ್ರಪಂಚ, ಶಿಶುಗೀತೆ, ಜಾಗೃತಿ ಗೀತೆ ಹಾಗೂ ರಂಗ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಬಿರದ ಭಾಗವಾಗಿ ಮಕ್ಕಳಿಂದ ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ಪುತ್ತೂರು ಸಂಚಾರ ಪೊಲೀಸ್ ಠಾಣೆಗಳ ಭೇಟಿ ನಡೆಸಲಾಗುವುದು, ದಿನಾಂಕ 13-05-2024ರ ಸೋಮವಾರ ಅಪರಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಕಿಲ್ಲೆ ಮೈದಾನ ಸಮೀಪ ‘ಮಕ್ಕಳ ಸಂತೆ’ಯನ್ನೂ ಆಯೋಜಿಸಲಾಗಿದೆ. ಜ್ಞಾನ ಬೆಳಕು ಬಳಗ, ಲಯನ್ಸ್ ಕ್ಲಬ್ ಪುತ್ತೂರು ಹಾಗೂ ರೋಟರಿ ಪುತ್ತೂರು ಎಲೈಟ್ ಶಿಬಿರದ ಆಯೋಜನೆಗೆ ನೆರವು ನೀಡಲಿದೆ. 8ರಿಂದ 14 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು…
ಕೋಟ : ಬೆಂಗಳೂರಿನ ಪ್ರಸಿದ್ದ ಯಕ್ಷಗಾನ ತಂಡವಾದ ಯಕ್ಷದೇಗುಲ ತಂಡದವರಿಂದ ಉಡುಪಿ ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ 09-05-2024ರಂದು ಸಂಜೆ 7-30ಕ್ಕೆ ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಧುಕುಮಾರ್ ಬೋಳಾರ್ ವಿರಚಿತ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಲಾವಿದರಾಗಿ ಹಿಮ್ಮೇಳದಲ್ಲಿ ಲಂಬೋದರ ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ ಭಾಗವಹಿಸುತ್ತಾರೆ. ಮುಮ್ಮೇಳದಲ್ಲಿ ಸುಜಯೀಂದ್ರ ಹಂದೆ, ಕಡಬಾಳ ಉದಯ ಹೆಗಡೆ, ತಮ್ಮಣ್ಣ ಗಾಂವ್ಕರ್, ಆದಿತ್ಯ ಭಟ್, ಕ್ಯಾದಿಗೆ ಮಹಾಬಲೇಶ್ವರ ಭಟ್, ಸ್ಪೂರ್ತಿ ಭಟ್, ರಾಜು ಪೂಜಾರಿ, ನಾಗರಾಜ್ ಪೂಜಾರಿ ಇನ್ನಿತರರೂ ಭಾಗವಹಿಸಲಿದ್ದಾರೆ.
ಮಂಗಳೂರು : ಶಾಂತಿ ಕಲಾ ಕೇಂದ್ರ ಬಜ್ಪೆ ಹಾಗೂ ಸಾಧನಾ ಸಂಗೀತ ಪ್ರತಿಷ್ಠಾನ (ರಿ.) ಪುತ್ತೂರು ಇವುಗಳ ಸಹಯೋಗದಲ್ಲಿ ‘ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ’ವು ದಿನಾಂಕ 11-05-2024 ಮತ್ತು 12-05-2024ರಂದು ಕಟೀಲು ದೇವಸ್ಥಾನದ ಶಾಲಾ ವಠಾರದಲ್ಲಿ ಹಾಗೂ ‘ಗೋಷ್ಠಿ ಗಾಯನ’ವು ದಿನಾಂಕ 13-05-2024ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಪುತ್ತೂರಿನ ವಿದುಷಿ ಸುಚಿತ್ರ ಹೊಳ್ಳ ಇವರು ಸಂಪನ್ಮೂಲ ವ್ಯಕ್ತಿಯಾಗಿ ಸಂಗೀತ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448365113 ಮತ್ತು 7975105367 ಸಂಪರ್ಕಿಸಿರಿ.
ಬೆಂಗಳೂರು : 2024ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಮನೋಹರಿ ಪಾರ್ಥಸಾರಥಿ ‘ಮನುಶ್ರೀ ದತ್ತಿ ಪ್ರಶಸ್ತಿ’ಗೆ ಹಿರಿಯ ಲೇಖಕ ಪ. ರಾಮಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀಮತಿ ಮನೋಹರಿ ಪಾರ್ಥಸಾರಥಿಯವರು ಈ ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಬರಹಗಾರರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಬೆಳ್ತಂಗಡಿಯ ತೆಂಕಕಾರಂದೂರಿನವರಾದ ಪ. ರಾಮಕೃಷ್ಣ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಕಂಡ ವಿಶಿಷ್ಟ ಲೇಖಕರು. ವೃತ್ತಿಯಲ್ಲಿ ಕೃಷಿಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಕರು. 1964ರಿಂದ ಹಿಡಿದು ಇಂದಿನವರೆಗೂ ದಣಿವರಿಯದೆ ನಿರಂತರವಾಗಿ ಬರೆಯುತ್ತಾ ಬರುತ್ತಿರುವ ಇವರ ಹನ್ನೆರಡು ಸಾವಿರಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ವಿವಿಧ ಪ್ರಾಕಾರದಲ್ಲಿ 104 ಕೃತಿಗಳು ಅಚ್ಚಾಗಿವೆ. ಇದರಲ್ಲಿ ಮಕ್ಕಳಿಗಾಗಿಯೇ 50 ಕಥಾ ಸಂಕಲನಗಳಿರುವುದು ವಿಶೇಷ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಕಥೆ-ಕಾದಂಬರಿಗಳನ್ನು ಬರೆದಿರುವ ಇವರು ವಿಜ್ಞಾನ, ಅಧ್ಯಾತ್ಮ, ವೈಚಾರಿಕ ಕ್ಷೇತ್ರಗಳಲ್ಲಿಯೂ ಬರಹಗಳನ್ನು ಮಾಡಿದ್ದಾರೆ. ಮೂವತ್ತಕ್ಕೂ ಹೆಚ್ಚು ವಿವಿಧ ಪುರಸ್ಕಾರಗಳನ್ನು ಪಡೆದಿರುವ ರಾಮಕೃಷ್ಣ ಶಾಸ್ತ್ರಿಗಳು…