Subscribe to Updates
Get the latest creative news from FooBar about art, design and business.
Author: roovari
ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ದಿನಾಂಕ : 16-07-2023ರಂದು ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವರು ಕುರಿಯ ಇಲ್ಲಿ ಡಿಂಬ್ರಿ ಗುತ್ತು ಶ್ರೀ ಕೊರಗಪ್ಪ ರೈ ಹಾಗೂ ಶ್ರೀಮತಿ ವಸಂತಿ ರೈ ಇವರ ಸೇವಾರ್ಥ ರಂಗಪೂಜೆ ಹಾಗೂ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು. ಇದೇ ಸಂದರ್ಭದಲ್ಲಿ ಉತ್ತಮ ಸಂಘಟನೆ ಮತ್ತು ಕಲಾವಿದನಾಗಿ ಎಲ್ಲಾ ರೀತಿಯಿಂದಲೂ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಏಳಿಗೆಗಾಗಿ ಸಹಕಾರ ನೀಡಿರುವುದಕ್ಕೆ ಶ್ರೀ ಭಾಸ್ಕರ್ ಬಾರ್ಯ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಯಪ್ರಕಾಶ್ ನಾಕೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಮುರಳೀಧರ ಕಲ್ಲೂರಾಯ, ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶಂತನು), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ದಾಶರಾಜ),ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ (ಮತ್ಸ್ಯಗಂಧಿ) ಹಾಗೂ ಶ್ರೀ ಗುಡ್ಡಪ್ಪ ಬಲ್ಯ (ದೇವವೃತ) ಸಹಕರಿಸಿದರು. ರವೀಂದ್ರನಾಥ ರೈ ಬಳ್ಳಮಜಲು ಸ್ವಾಗತಿಸಿ,…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದಿಂದ ನೀಡುವ ವಿವಿಧ ದತ್ತಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದ್ದು, ಸಂಘದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ಎಂ.ಎಸ್. ಆಶಾದೇವಿ, ಡಾ.ಭೈರಮಂಗಲ ರಾಮೇಗೌಡ ಹಾಗೂ ಚಂದ್ರಿಕಾ ಪುರಾಣಿಕ ಇವರುಗಳು ಕೃತಿಗಳಿಗೆ ಪ್ರಶಸ್ತಿಗಳನ್ನು ಘೋಷಿಸಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿಯು ಈ ಕೆಳಗಿನಂತಿದೆ. ‘ಕಾಕೋಳು ಸರೋಜಮ್ಮ (ಕಾದಂಬರಿ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಲೀಲಾ ಮಣ್ಣಾಲ ಅವರ ‘ರಾಜ್ಯ ರಾಜಶ್ರೀ ಹರ್ಷವರ್ಧನ’ ಕಾದಂಬರಿ ಹಾಗೂ 2022ನೇ ಸಾಲಿಗೆ ಎಚ್.ಆರ್. ಸುಜಾತ ಅವರ ‘ಮಣಿಬಾಲೆ’ ಕಾದಂಬರಿಗಳು ಆಯ್ಕೆಯಾಗಿವೆ. ‘ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಡಾ. ಎನ್. ಸುಧಾ ಅವರ ‘ಮಾನವನ ಅನುವಂಶೀಯ ಕಾಯಿಲೆಗಳು’ ಹಾಗೂ 2022ನೇ ಸಾಲಿಗೆ ಸುಕನ್ಯಾ ಸೂನಗಳ್ಳಿಯವರ ‘ಬೆಳೆರೋಗಗಳು ಕೀಟಗಳು ಮತ್ತು ಅವುಗಳ ನಿರ್ವಹಣೆ’ ಕೃತಿಗಳು ಆಯ್ಕೆಯಾಗಿವೆ. ‘ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಮತ್ತು 2022ನೇ ಸಾಲಿಗೆ ನಳಿನಿ ಟಿ.ಭೀಮಪ್ಪರ ‘ಸೆಲ್ಫೀ…
ಮಂಗಳೂರು : ಉರ್ವದ ‘ಯಕ್ಷಾರಾಧನಾ ಕಲಾ ಕೇಂದ್ರ’ವು 14ನೇ ವರ್ಷಾಚರಣೆ ಸಂಭ್ರಮವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ : 15-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣರು “ಯಕ್ಷಗಾನದಲ್ಲಿ ಸಾತ್ವಿಕ ಭಾವದ ಅವಶ್ಯಕತೆ ಇದೆ. ಅದರ ಪ್ರತಿಪಾದನೆ ಕಲಾವಿದನ ಮೂಲಕ ಆಗಿ ಪಾತ್ರದ ಪರಕಾಯ ಪ್ರವೇಶದಿಂದ ಕಲಾವಿದ ಮತ್ತು ಕಲೆ ಬೆಳಗುತ್ತದೆ. ಸುಮಂಗಲಾರತ್ನಾಕರ ರಾವ್ ಇವರ ನಿರಂತರ ಪ್ರಯತ್ನದಿಂದಾಗಿ ಅನೇಕ ಕಲಾವಿದರು ಸಿದ್ಧರಾಗಿದ್ದಾರೆ. ಯಕ್ಷಗಾನದ ಪ್ರತಿಯೊಬ್ಬ ಗುರು ಮತ್ತು ಕಲಾವಿದ ಸಾತ್ವಿಕ ಅಭಿಯನದ ಬಗ್ಗೆ ತಿಳಿದು ರಂಗದಲ್ಲಿ ಪ್ರದರ್ಶನ ನೀಡಬೇಕು. ಯಕ್ಷಗಾನ ಅಲೌಕಿಕವಾದ ಪೌರಾಣಿಕ ಕಲ್ಪನೆ ನೀಡುವ ಕಲೆ. ಒಳ್ಳೆಯ ಸಂಗತಿ ಹಾಗೂ ಕೆಟ್ಟ ವಿಚಾರ ಯಾವುದು ಎಂಬುದನ್ನು ಯಕ್ಷಗಾನದ ಮೂಲಕ ನಾವು ತಿಳಿಯಬಹುದು. ಧರ್ಮ- ಅಧರ್ಮದ ಕುರಿತು ಯಕ್ಷಗಾನ ನಮಗೆ ತಿಳಿ ಹೇಳುತ್ತದೆ. ಯಕ್ಷಗಾನದಲ್ಲಿ ರಾಮಾಯಣ ಪ್ರಸಂಗ ವೀಕ್ಷಿಸಿದಾಗ ರಾಮನಂತೆ ನಾವೂ ಜೀವನ ನಡೆಸಬೇಕು ಎಂಬ ಭಾವನೆ ಮೂಡುತ್ತದೆ. ಆದರೆ,…
ಕಾಸರಗೋಡು : ಮೇಘ ರಂಜನಾ ಚಂದ್ರಗಿರಿ, ಸಾಹಿತ್ಯಿಕ – ಸಾಂಸ್ಕೃತಿಕ ಸಂಸ್ಥೆಯ ಐದನೇ ವರ್ಷದ ಸಂಭ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪದಲ್ಲಿ ದಿನಾಂಕ : 16-07-2023ರಂದು ‘ಭಜಿಸು ಕನ್ನಡ’ ಕಾರ್ಯಕ್ರಮ ನಡೆಯಿತು. ರಂಗ ನಿರ್ದೇಶಕ ಮತ್ತು ನಟರಾದ ಕಾಸರಗೋಡು ಚಿನ್ನಾ ದೀಪ ಬೆಳಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಕಾಸರಗೋಡಿನ ಕನ್ನಡಿಗರು ಆಲಸಿ ಮನೋಭಾವ ಹೊಂದಿದರೆ ಇಂದಲ್ಲ ನಾಳೆ, ನಾವು ಅನ್ಯ ಭಾಷಿಗರ ಗುಲಾಮರಾಗಿ ಬಾಳಬೇಕಾದೀತು. ನಾವು ಕನ್ನಡಿಗರು ಎಂಬ ಸ್ವಾಭಿಮಾನವನ್ನು ಇಟ್ಟುಕೊಳ್ಳದೇ ಹೋದರೆ ಮುಂದಿನ ತಲೆಮಾರಿಗೆ ಕಷ್ಟ ಕಟ್ಟಿಟ್ಟ ಬುತ್ತಿ. ನಮ್ಮ ಹಕ್ಕನ್ನು ನಾವು ಕೇಳದೆ ಹೋದರೆ ಹೇಗೆ ? ಕನ್ನಡ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳಿಸಿದರೆ ಮಾತ್ರ ಕನ್ನಡ ಭಾಷೆ ಉಳಿದೀತು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಮ್ಮ ಮಕ್ಕಳಿಗೆ ಹೇಳಿಕೊಡುವ ಕೆಲಸ ಪ್ರಾಮಾಣಿಕವಾಗಿ ಹಿರಿಯರು ಮಾಡಬೇಕು ಹಾಗೂ ಇದು ನಮ್ಮ ಕರ್ತವ್ಯವಾಗಬೇಕು” ಎಂದು ಹೇಳಿದರು. ಶ್ರೀ…
ಮಂಗಳೂರು : ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ರಾಮಕೃಷ್ಣ ಮಠದ ಸಹಯೋಗದೊಂದಿಗೆ ವಿವೇಕಾನಂದ ಸಭಾಂಗಣದಲ್ಲಿ ದಿನಾಂಕ : 15-07-2023ರಂದು ‘ದಾಸ ಸೌರಭ’ ಹರಿದಾಸರ ಕೃತಿ ಕೀರ್ತನೆಗಳ ಗಾಯನ ಕಾರ್ಯಕ್ರಮ ಜರಗಿತು. ಗಾಯಕಿ ಸುರಮಣಿ ಮಹಾಲಕ್ಷ್ಮೀ ಶೆಣೈ ಅವರು ಪುರಂದರದಾಸರು, ಕನಕದಾಸರು, ವಿಜಯದಾಸರು, ವಾದಿ ರಾಜ ಗುರುಸಾರ್ವಭೌಮರ ಕೃತಿ ಸೇರಿದಂತೆ ಅನೇಕ ಹರಿದಾಸರ ಕೀರ್ತನಗಳನ್ನು ಪ್ರಸ್ತುತಪಡಿಸಿದರು. ತಬ್ಲಾದಲ್ಲಿ ರಾಜೇಶ್ ಭಾಗವತ್, ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಹಾಗೂ ತಾಳದಲ್ಲಿ ದಾಮೋದರ್ ಭಾಗವತ್ ಅವರು ಸಾಥ್ ನೀಡಿದರು. ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಕಾರ್ಯಕ್ರಮ ಪ್ರಾಯೋಜಿಸಿತ್ತು. ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಗುರುರಾಜ್ ಸ್ವಾಗತಿಸಿ, ಪ್ರಸ್ತಾವಿಸಿದರು.
ಉಡುಪಿ : ಕಾಪು ದಂಡತೀರ್ಥ ಪ್ರೌಢಶಾಲೆಯಲ್ಲಿ ದಿನಾಂಕ : 15-07-2023ರಂದು ಯಕ್ಷ ಶಿಕ್ಷಣ ತರಗತಿಯನ್ನು ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅವರನ್ನು ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಉಪಾಧ್ಯಕ್ಷ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಯೂ ಆದ ವಿ.ಜಿ.ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾ ಸಂಸ್ಥೆಯ ಸಂಚಾಲಕರಾದ ಡಾ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಯಕ್ಷ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಯಕ್ಷ ಗುರುಗಳಾದ ಮಂಜುನಾಥ್ ಕುಲಾಲ್, ಉಭಯ ಶಾಲಾ ಮುಖ್ಯ ಶಿಕ್ಷಕಿಯರು ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಮೂವತ್ತಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಯಕ್ಷಗಾನ ಕಲಿಯಲು ಆಸಕ್ತರಾಗಿರುವುದು ಸಂತಸದ ವಿಚಾರ.
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಂಡೆಚ್ಚ ಪ್ರಶಸ್ತಿ ಸಮಿತಿ ಆಶ್ರಯದಲ್ಲಿ ಕಟೀಲು ಸರಸ್ವತೀ ಸದನದಲ್ಲಿ ದಿನಾಂಕ : 15-07-2023ರಂದು ಪ್ರಸಿದ್ಧ ಭಾಗವತರಾಗಿದ್ದ ದಾಮೋದರ ಮಂಡೆಚ್ಚ ಸ್ಮರಣಾರ್ಥ ‘ಮಂಡೆಚ್ಚ ಪ್ರಶಸ್ತಿ’ ಪ್ರದಾನ ಮತ್ತು ‘ಕುಬಣೂರು ಸಂಸ್ಮರಣೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಂಡೆಚ್ಚ ಪ್ರಶಸ್ತಿಯನ್ನು ಸ್ವೀಕರಿಸಿದ ಖ್ಯಾತ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ ಮಾತನಾಡುತ್ತಾ “ಯಕ್ಷಗಾನೀಯ ಚೌಕಟ್ಟು ಪಾಲಿಸಿಕೊಂಡು ಕಲೆಯನ್ನು ಗೌರವದಿಂದ ಬೆಳೆಸಿದಾಗ ಹಿಮ್ಮೇಳ, ಮುಮ್ಮೇಳಗಳು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಉಳಿಯಲು ಸಾಧ್ಯ” ಎಂದು ಹೇಳಿದರು. ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ ಪ್ರಶಸ್ತಿಯನ್ನು ಪ್ರಾಯೋಜಿಸಿದ್ದು ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನು ಒಳಗೊಂಡಿತ್ತು. ಕಟೀಲು ದೇವಳದ ಭಾಗವತ ಹಾಗೂ ಪ್ರಸಂಗಕರ್ತರಾಗಿದ್ದ ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆ ನಡೆಯಿತು. ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಡೆಚ್ಚ ಪ್ರಶಸ್ತಿ ಪುರಸ್ಕೃತ ಮದ್ದಳೆಗಾರ ಪದ್ಯಾಣ…
ಕರಾವಳಿಯ ಗಂಡು ಕಲೆ ಯಕ್ಷಗಾನ. ಇಂತಹ ಶ್ರೀಮಂತ ಕಲೆಯಲ್ಲಿ ಅನೇಕ ಯುವ ಕಲಾವಿದರು, ಹವ್ಯಾಸಿ ಕಲಾವಿದರು, ಮಹಿಳಾ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡುತ್ತಿದ್ದಾರೆ. ಇಂದು ನಾವು ಪರಿಚಯ ಮಾಡಲು ಹೊರಟ ಕಲಾವಿದರು ವೃತ್ತಿಯಲ್ಲಿ ಡಾಕ್ಟರ್, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆಯಾಗಿ ಮಿಂಚುತ್ತಿರುವವರು ಡಾ.ವರ್ಷ ಶೆಟ್ಟಿ. 18.07.1991ರಂದು ಶಶಿಕುಮಾರ್ ಹಾಗೂ ವಸುಧಾ ಶೆಟ್ಟಿ ಇವರ ಮಗಳಾಗಿ ಜನನ. ಡಾಕ್ಟರ್ ಹಾಗೂ PG in Hospital Administration ಇವರ ವಿದ್ಯಾಭ್ಯಾಸ. ಪ್ರಸ್ತುತ Ph.D in Hospital Administration ಮಾಡುತ್ತಿದ್ದಾರೆ. ಚಿಕ್ಕಮ್ಮನವರು ಪ್ರಮದಾ ಶೆಟ್ಟಿ, ಶುಭದ ಶೆಟ್ಟಿ ಹಾಗೂ ತಾಯಿ ವಸುಧಾ ಶೆಟ್ಟಿ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಗಣೇಶಪುರ ಗಿರೀಶ್ ನಾವಡ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಭಾಗವತರಲ್ಲಿ ಪ್ರಸಂಗದ ಪಾತ್ರದ ಕುರಿತು ಕೇಳಿ, ಚಿಕ್ಕಮ್ಮನವರಲ್ಲಿ ಪ್ರಸಂಗದ ಮಾಹಿತಿ ಪಡೆದುಕೊಂಡು ಹಾಗೂ ಸಹ ಕಲಾವಿದರ ಬಳಿ…
ಕುಂದಾಪುರ : ಕುಂದಾಪುರದ ‘ಶಬ್ದಗುಣ’ ಸಭಾಂಗಣದಲ್ಲಿ ದಿನಾಂಕ 16-07-2023ರಂದು ಕವಿ ವಸಂತ ಬನ್ನಾಡಿಯವರ ಎರಡು ಕವನ ಸಂಕಲನಗಳಾದ ‘ಊರು ಮನೆ ಉಪ್ಪು ಕಡಲು’ ಮತ್ತು ‘ಬೆಳದಿಂಗಳ ಮರ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂತೋಷ್ ನಾಯಕ್ ಪಟ್ಲ ಅವರು ಮಾತನಾಡುತ್ತಾ “ನಾನು ಗೌರವಿಸುವ ಕವಿ ವಸಂತ ಬನ್ನಾಡಿಯವರ ಎರಡು ಕವನ ಸಂಕಲನಗಳ ಬಿಡುಗಡೆಯಲ್ಲಿ ಭಾಗಿಯಾದ ಸಂತಸವಿಂದು. ಕವಿಯೊಬ್ಬ ತನ್ನ ಕಾಲದ ಕವಿಯಾಗುವುದು ಹೀಗೇನೇ ಏನೋ….. ಹಾಗಾಗಿಯೇ ಬನ್ನಾಡಿ ನಮ್ಮ ಕಾಲದ ಕವಿ” ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಹೇರ್ಳೆ ಅವರು ‘ಬೆಳದಿಂಗಳ ಮರ’ ಸಂಕಲನದ ‘ಮಗುಚುವ ಕಡಲು’ ಹಾಗೂ ಸಂತೋಷ್ ನಾಯಕ್ ಪಟ್ಲ ಅವರು ‘ಊರು ಮನೆ ಉಪ್ಪು ಕಡಲು’ ಸಂಕಲನದ ‘ಬದಲಾದ ಕಾಲದಲ್ಲಿ’ ಕವನ ವಾಚಿಸಿದರು. ಈ ಕಾರ್ಯಕ್ರಮದಲ್ಲಿ ಉದಯ ಗಾಂವ್ಕರ್, ಸದಾನಂದ ಬೈಂದೂರು, ವಾಸುದೇವ ಗಂಗೇರ, ದಿನೇಶ ಹೆಗ್ಡೆ, ಶಶಿಧರ ಹೆಮ್ಮಾಡಿ ಮತ್ತು ತಿಮ್ಮಪ್ಪ ಗುಲ್ವಾಡಿಯವರು ಉಪಸ್ಥಿತರಿದ್ದರು. ಕವಿಯ ಬಗ್ಗೆ : ಉಡುಪಿ…
ಮುಂಬಯಿ : ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ದಿನಾಂಕ : 21-07-2023ರಂದು ಶುಕ್ರವಾರ ನಾಲ್ಕು ಕೃತಿಗಳ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಡಾ.ಎಸ್.ಎಲ್ ಭೈರಪ್ಪನವರೊಂದಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಪದ್ಮಭೂಷಣ ಪುರಸ್ಕೃತರಾದ ಡಾ.ಎಸ್.ಎಲ್. ಭೈರಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ‘ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ’ ಈ ವಿಷಯದ ಕುರಿತು ಪುಣೆಯ ಖ್ಯಾತ ಸಾಹಿತಿ, ವಿಮರ್ಶಕರಾಗಿರುವ ಡಾ.ಸುಪ್ರಿಯಾ ಸಹಸ್ರಬುದ್ಧೆ ಅವರು ವಿಶೇಷ ಉಪನ್ಯಾಸವನ್ನು ನೀಡುವರು. ಡಾ.ಎಸ್.ಎಲ್ ಭೈರಪ್ಪ ಡಾ.ಉಮಾ ರಾಮರಾವ್ ಡಾ.ಜಿ.ಎನ್. ಉಪಾಧ್ಯ ಕಲಾ ಭಾಗ್ವತ್ ಡಾ.ಸುಪ್ರಿಯಾ ಸಹಸ್ರಬುದ್ಧೆ – ವಿಶೇಷ ಉಪನ್ಯಾಸ ಇದೇ ಸಂದರ್ಭದಲ್ಲಿ ನಾಲ್ಕು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಡಾ.ಉಮಾ ರಾಮರಾವ್ ಅವರು ಸಂಪಾದಿಸಿರುವ ‘ಭಾಷೆಗಳ ಗಡಿಗೆದ್ದ ಭಾರತೀಯ’, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಅವರ ‘ಮುಂಬಯಿ ಕನ್ನಡ ಪರಿಸರ’, ಡಾ.ಉಮಾ ರಾಮರಾವ್ ಅವರ ‘ಸಂಶೋಧನೆಯಲ್ಲಿ ಶಿಸ್ತು ಮತ್ತು…