Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಶ್ರೀ ವಾಗೀಶ್ವರಿ ಯಕ್ಷಗಾನ ಸಂಘವು ಮಂಗಳೂರು ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ದಿನಾಂಕ 11-02-2024ರಂದು ಅಗಲಿದ ಶ್ರೀ ನಾಗೇಶ ಪ್ರಭುಗಳಿಗೆ ಶೃದ್ಧಾಂಜಲಿ ಸಮರ್ಪಸಿತು. ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ, ಕಾರ್ಯದರ್ಶಿ ಸಂಜಯ ಕುಮಾರ್, ಭಾಗವತ ಅಶೋಕ್ ಬೋಳೂರು, ಪ್ರಭಾಕರ ಕಾಮತ್, ಭಾಗವತ ಸುಧಾಕರ ಸಾಲಿಯಾನ್ ನುಡಿ ನಮನ ಸಲ್ಲಿಸಿದರು. ಶೋಭಾ ಐತಾಳ್, ಜಯರಾಮ ಉರ್ವ, ಸುದರ್ಶನ್ ದಂಬೆಲ್, ಶಿವಾನಂದ ಪೆರ್ಲಗುರಿ, ರಮೇಶ್ ಆಚಾರ್ಯ ಕಾವೂರು, ಪುರುಷೋತ್ತಮ ಆಚಾರ್ಯ, ಬಿ.ಟಿ. ಕುಲಾಲ್ ಉಪಸ್ಥಿರಿದ್ದರು. ಬಳಿಕ ‘ಮಾರ್ಕಂಡೇಯ ಚರಿತ್ರೆ’ ತಾಳಮದ್ದಳೆ ಜರಗಿತು.
ಮಂಗಳೂರು : ಖ್ಯಾತ ರಂಗಕರ್ಮಿ, ರಾಜ್ಯ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಇವರಿಗೆ ಡಾ. ಪಿ. ದಯಾನಂದ ಪೈ ಪ್ರಾಯೋಜಿತ ವಿಶ್ವ ಕೊಂಕಣಿ ಕೇಂದ್ರ ನೀಡುವ ‘ರಂಗ ಶ್ರೇಷ್ಟ ಪುರಸ್ಕಾರ’ವನ್ನು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಭಾಂಗಣದಲ್ಲಿ ದಿನಾಂಕ 11-02-2024ರಂದು ನಡೆದ ವಿಶ್ವ ಕೊಂಕಣಿ ಸಮಾರೋಹ ಎಂಬ ಸಾಹಿತ್ಯ ಕಲೋತ್ಸವದಲ್ಲಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಯರಾಂ ಅಮೀನ್ ಮಾತನಾಡಿ “ಉದ್ಯಮ, ಸಾಹಿತ್ಯ, ಕಲೆ, ಸೇವೆ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಂಕಣಿಗರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಕೊಂಕಣಿ ಭಾಷೆ ಮಾತನಾಡುವ ವಿವಿಧ ಧರ್ಮ ಜಾತಿಯ ಬಹು ಸಂಸ್ಕೃತಿ ಜೀವನ ಪದ್ಧತಿಯ ಜನ ವಿಶ್ವ ಕೊಂಕಣಿ ಕೇಂದ್ರ ಎಂಬ ಕೊಡೆಯ ಅಡಿ ಒಂದಾಗಿದ್ದಾರೆ” ಎಂದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ನಂದ ಗೋಪಾಲ ಶೆಣೈ ಮಾತನಾಡಿ “ಕೊಂಕಣಿಗರು ಇಂದು…
ಮಂಗಳೂರು : ಕೈಕಂಬದ ‘ಯಕ್ಷತರಂಗಿಣಿ’ ಇದರ 17ನೇ ವರ್ಷದ ‘ಪೌರಾಣಿಕ ಯಕ್ಷಸಂಭ್ರಮ’ವು ದಿನಾಂಕ 03-02-2024ರಂದು ಕೈಕಂಬ ಕಿನ್ನಿಕಂಬಳದ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಶ್ರೀ ಕೋದಂಡರಾಮ ಕೃಷಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದ ಯಕ್ಷಗಾನ ರಂಗ ಪೂಜೆ ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ಗುಂಡಿಮಜಲು ಗೋಪಾಲಕೃಷ್ಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಜಗದಾಭಿರಾಮ ಸ್ವಾಮಿ ಪಡುಬಿದ್ರಿ, ಅ.ನ.ಭ. ಪೊಳಲಿ ಮತ್ತು ನಾರಾಯಣ ಮಳಲಿ ಅವರನ್ನು ಸಮಾನಿಸಲಾಯಿತು. ಸಮ್ಮಾನಿತ ಜಗದಾಭಿರಾಮ ಪಡುಬಿದ್ರಿ ಮಾತನಾಡಿ, ಕಲಾವಿದರನ್ನು ಗುರುತಿಸುವ, ಸಮ್ಮಾನಿಸುವ ಕಲೆಗೆ ಬೆಲೆ ಕೊಡುವ ಕೈಕಂಬದ ಯಕ್ಷತರಂಗಿಣಿಯ ಯಕ್ಷಕಲಾ ಸೇವೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಎಂ. ಹರಿರಾವ್ ಕೈಕಂಬ, ಎಂ. ನರಸಿಂಗ ರೈ ಕಿನ್ನಿಕಂಬಳ, ಡಾ. ಶ್ರೀಪತಿ ಕಿನ್ನಿಕಂಬಳ, ಮೇಳದ ಪ್ರಬಂಧಕ ಹರೀಶ್ ಭಟ್ ಬೋಳಂತಿಮೊಗರು, ರಾಜೀವ್ ಕೈಕಂಬ ಕಲಾವಿದರನ್ನು ಸಮ್ಮಾನಿಸಿದರು. ಶ್ರೀಧರ್ ರಾವ್, ಸತೀಶ್ ಶೆಟ್ಟಿ, ಪ್ರಾಣೇಶ್ ಶೆಟ್ಟಿ, ಜಯಕರ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಉಮೇಶ್ ಆರ್. ಭಂಡಾರಿ, ಶ್ರೀನಾಥ್…
ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಲೆ ಕ್ಷೇತ್ರದಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಹೊಸ ತಲೆಮಾರನ್ನೇ ಸೃಷ್ಟಿಸುತ್ತಿರುವ ಮಹಿಳಾ ಕಲಾವಿದೆಯರಿಗೆ ಸನ್ಮಾನ ಹಾಗೂ ಕಲಾವಿದೆಯರಿಂದ ‘ಸೀತಾ ಪರಿತ್ಯಾಗ’ ತಾಳಮದ್ದಲೆ ಕಾರ್ಯಕ್ರಮವು ಆನಂದ ರಾವ್ ವೃತ್ತದ ಬಳಿಯಿರುವ ಕೆ.ಪಿ.ಟಿ.ಸಿ.ಎಲ್. ಲೆಕ್ಕಾಧಿಕಾರಿಗಳ ಸಂಘದಲ್ಲಿ ದಿನಾಂಕ 04-02 -2024ರಂದು ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ, ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು, ತಾವು ಇತ್ತೀಚೆಗೆ ಕೆಂಪಣ್ಣ ಕವಿ ಎಂಬವನ ಯಕ್ಷಗಾನ ಪ್ರಸಂಗ ಸಾಹಿತ್ಯ ಕುರಿತು ಸಂಶೋಧನೆ ಪುಸ್ತಕ ರಚಿಸಿದ್ದನ್ನು ಪ್ರಸ್ತಾಪಿಸಿ, ಕಾವ್ಯವು ಹೇಗೆ ದೃಶ್ಯ ಮತ್ತು ಶ್ರವ್ಯ ಕಾವ್ಯವಾಗಿ ಆಯಾಮ ಪಡೆದುಕೊಂಡಿದೆ ಹಾಗೂ ಅದಕ್ಕೆ ಯಕ್ಷಗಾನದ ಕೊಡುಗೆಯೇನು?; ಯಕ್ಷಗಾನ- ತಾಳಮದ್ದಲೆ ಹೇಗೆ ಜನಮಾನಸವನ್ನು ವ್ಯಾಪಿಸಿದೆ ಎಂಬುದನ್ನು ವಿವರಿಸಿ, ಯಕ್ಷಗಾನ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಲಾಂಛನವಾಗುವ ಅಗತ್ಯವಿದೆಯೆ0ದು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ಕಲಾವಿದೆಯರಾದ ಸುಮಾ ಹೆಗಡೆ ಗಡಿಗೆಹೊಳೆ, ಡಾ.ವಿಜಯನಳಿನಿ ರಮೇಶ ಶಿರಸಿ, ನಿರ್ಮಲಾ ಹೆಗಡೆ…
ಕರಿಕೆ : ಕರ್ನಾಟಕ ಗಡಿ ಸಾಂಸ್ಕೃತಿಕ ಉತ್ಸವ ಆಚರಣಾ ಸಮಿತಿಯು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪು 2022-23ನೇ ಸಾಲಿನಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸಾಹಿತ್ಯ ಪರಿಷತ್ತು. ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕರಿಕೆ ಗಡಿ ಸಾಂಸ್ಕೃತಿಕೋತ್ಸವ ಆಚರಣಾ ಸಮಿತಿ, ಕರಿಕೆ ಗ್ರಾಮ ಪಂಚಾಯಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ‘ಗಡಿ ಉತ್ಸವ ಸಮಾರಂಭ’ವು ಕರಿಕೆಯ ಎಳ್ಳುಕೊಚ್ಚಿ ಬೇಕಲ್ ಉಗ್ಗಪ್ಪ ಮೈದಾನದಲ್ಲಿ ದಿನಾಂಕ 27-01-2024ರಂದು ಸಂಭ್ರಮದಿಂದ ನಡೆಯಿತು. ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆಯಿಂದ ಎಳ್ಳುಕೊಚ್ಚಿ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕರಿಕೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿ. ಇಸಾಕ್, ಜಮಾಯತ್ ಸಮಿತಿಯ ಎಂ.ಇ. ಹಸೈನಾರ್ ಹಾಜಿ, ಅಯ್ಯಪ್ಪ ದೇವಾಲಯ ಪ್ರಮುಖ ಹೊಸಮನೆ ಎಂ. ರಾಘವ ಚಾಲನೆ ನೀಡಿದರು. ಶಾಲಾ ಮಕ್ಕಳು, ಗ್ರಾಮಸ್ಥರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಂಜೀವಿನಿ ಒಕ್ಕೂಟ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಸ್ವಸಹಾಯ ಗುಂಪುಗಳು, ಅಂಗನವಾಡಿ – ಆಶಾ…
ಚಾಮರಾಜನಗರ : ರಂಗವಾಹಿನಿ, ಕರ್ನಾಟಕ ರಂಗ ಪರಿಷತ್ತು, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕಲಾವಿದರ ಸಂಘ ಇವರ ಸಹಯೋಗದಲ್ಲಿ ದಿನಾಂಕ 27-02-2024 ಮತ್ತು ದಿನಾಂಕ 28-02-2024ರಂದು ಸಂಜೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಸಿಜಿಕೆ ನಾಟಕೋತ್ಸವ -2024 ಹಾಗೂ ‘ಸಿಜಿಕೆ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೆ. ವೆಂಕಟರಾಜು ಮಾತನಾಡಿ, “ಸಿಜಿಕೆ ಎಂದರೆ ಸಿ.ಜಿ. ಕೃಷ್ಣಸ್ವಾಮಿ. ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರು. ಸಿಜಿಕೆ ಎಂದರೆ ನಾಟಕ. ಅವರು ಗಾಂಧಿ ಭವನ ನಿರ್ದೇಶಕರು ಆಗಿದ್ದರು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ದೊಡ್ಡ ಚಳವಳಿಯಾದಾಗ ರಂಗಭೂಮಿಗೆ ಬಂದವರು ಸಿಜೆಕೆ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಮ್ಮ ಸ್ವಶಕ್ತಿಯಿಂದ ಮೇಲೆ ಬಂದು ರಂಗಭೂಮಿಯನ್ನೂ ಬೆಳೆಸಿ, ಹಲವಾರು ರಂಗ ಕಲಾವಿದರಿಗೆ ದಾರಿದೀಪವಾಗಿದ್ದರು” ಎಂದರು. ಸಮಾರಂಭ ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರು ಮಾತನಾಡಿ “ರಂಗಭೂಮಿಯ ದೈತ್ಯ…
ಮೂಡುಬಿದಿರೆ : ಮುದ್ದಣ ಕವಿಯ ಶ್ರೇಷ್ಠ ಯಕ್ಷಗಾನ ಪ್ರಸಂಗ ಕೃತಿಗಳಾದ ‘ಕುಮಾರ ವಿಜಯ’ ಹಾಗೂ ‘ರತ್ನಾವತಿ ಕಲ್ಯಾಣ’ದ ಎಲ್ಲಾ ಹಾಡುಗಳ ಧ್ವನಿಮುದ್ರಣವನ್ನು ದಿನಾಂಕ 17-02-2024ರ ಅಪರಾಹ್ನ 3 ಗಂಟೆಗೆ ಮೂಡುಬಿದಿರೆಯ ಆಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಈ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಸಂತ ಭಾರಧ್ವಾಜ್ ಕಬ್ಬಿನಾಲೆ ಇವರು ಧ್ವನಿಮುದ್ರಣ ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ನಂದಳಿಕೆ ಬಾಲಚಂದ್ರ ಹೆಬ್ಬಾರ್ ಮತ್ತು ಚಂದ್ರಶೇಖರ ಭಟ್ ಕೊಂಕಣಾಜೆ ಸಂಯೋಜಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಲಿಪ ಶಿವಶಂಕರ ಭಟ್ ಹಾಗೂ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಹಾಡುಗಾರಿಕೆಯಲ್ಲಿ ‘ಕುಮಾರ ವಿಜಯ’ ಪ್ರಸಂಗದ ಆಯ್ದ ಪದಗಳ ‘ಬಲಿಪ ಗಾನ ಯಾನ’ ಪ್ರಸ್ತುತಿಯಾಗಲಿದೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪ್ರಸಂಗದ ನಡೆ, ಪದ್ಯಗಳ ಹಾಡುವಿಕೆ, ಮಟ್ಟುಗಳ ಪ್ರಸ್ತುತಿ, ರಂಗ ನಡೆಗಳು, ಧಿತ್ತ ಧೀಂಗ್ಣ ಎಲ್ಲಿ ಯಾವಾಗ ಎಂಬೆಲ್ಲ ಮಾಹಿತಿ ಇದುವರೆಗೆ ದಾಖಲಾಗದೇ…
ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 20-02-2024ರಂದು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ. ಅನನ್ಯ ರಂಗಕರ್ಮಿ, ಪುಸ್ತಕ ಪ್ರೇಮಿ, ಕಿರುತೆರೆ-ಹಿರಿತೆರೆ ಕಲಾವಿದ ಶ್ರೀಪತಿ ಮಂಜನಬೈಲ್ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ತಾಲೂಕಿನ ಪ್ರಥಮ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಅವರಿಗೆ ಸಲ್ಲುತ್ತಿದೆ. ವಿವಿಧ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಸಮ್ಮೇಳನವು ಅರ್ಥಪೂರ್ಣವಾಗಿ ನಡೆಯಲಿರುವುದೆಂದು ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ತಿಳಿಸಿದ್ದಾರೆ.
ಉಪ್ಪಿನಂಗಡಿ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ‘ಸಾಹಿತ್ಯ ಸಂಜೆ’ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿನಿಧಿ ಉಪನ್ಯಾಸ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭವು ದಿನಾಂಕ 18-02-2024ರಂದು ಉಪ್ಪಿನಂಗಡಿಯ ಪಂಜಳದ ಸುಧಾಮ ಮನೆಯಂಗಳದ ಮಣಿಮಂಟಪ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ವಿದ್ವಾಂಸರಾದ ಡಾ. ತಾಳ್ತಜೆ ವಸಂತ ಕುಮಾರ ಕಾರ್ಯಕ್ರಮ ಉದ್ಘಾಟಿಸಲಿರುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ‘ಮಹಾಭಾರತದ ಅನುಸಂಧಾನ’ ಎಂಬ ವಿಷಯದಲ್ಲಿ ದತ್ತಿ ನಿಧಿ ಉಪನ್ಯಾಸ ನೀಡಲಿದ್ದು, ಡಾ. ವರದರಾಜ ಚಂದ್ರಗಿರಿ ಇವರು ಲಕ್ಷ್ಮೀಶ ತೋಳ್ಪಾಡಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಮಹಾಭಾರತದ ಅನುಸಂಧಾನ’ದ ಕೃತಿ ಪರಿಚಯ ನಡೆಸಿಕೊಡಲಿರುವರು. ಕಾರ್ಯಕ್ರಮದಲ್ಲಿ ಕಸಾಪ ಪುತ್ತೂರು ಇದರ ಅಧ್ಯಕ್ಷರಾದ ಪುತ್ತೂರು ಉಮೇಶ್…
ಉಡುಪಿ : ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ಕುರಾಡಿ ಸೀತಾರಾಮ ಅಡಿಗರ ಸ್ಮರಣಾರ್ಥ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಸಂಸ್ಥೆಯು 2023ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನವನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ಸ್ವರಚಿತ ಸ್ವತಂತ್ರ ಕವನ ಸಂಕಲನದ ಮೂರು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಅಂಶುಮನೆ, ಬುಡ್ನಾರ್ ರಸ್ತೆ ಕುಂಜಿಬೆಟ್ಟು ಉಡುಪಿ. ಕವನ ಸಂಕಲನಗಳ ಪ್ರತಿಗಳನ್ನು ಕಳುಹಿಸಲು ಕೊನೆಯ ದಿನಾಂಕ 20-03-2024. ಪ್ರಶಸ್ತಿಯು ರೂಪಾಯಿ 10,000 ಗೌರವ ನಗದಿನೊಂದಿಗೆ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ತಿಳಿಸಿರುತ್ತಾರೆ. ಕೃತಿಗಳು ಸ್ವರಚಿತ, ಸ್ವತಂತ್ರ ಕವನ ಸಂಕಲನಗಳಾಗಿರಬೇಕು. ಅನುವಾದ, ರೂಪಾಂತರ, ಶಿಶುಪ್ರಾಸ, ಹನಿಗವನ ಇತ್ಯಾದಿ ಕೃತಿಗಳನ್ನು ಸ್ಪರ್ಧಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. 98452 40309…