Author: roovari

ಮೆಲ್ಬೋರ್ನ್‌: ಆಸ್ಟ್ರೇಲಿಯಾ ಏಶಿಯಾದ ಬಸವ ಸಮಿತಿಯ ಮೆಲ್ಬೋರ್ನ್‌ ಘಟಕದಲ್ಲಿ ಹಮ್ಮಿಕೊಂಡ ‘ಮಹಾನ್ ಮಾನವತಾವಾದಿ ಬಸವಣ್ಣ’ ಎಂಬ ವಿಷಯದ ಬಗ್ಗೆ ವಿಶೇಷ ಸಂವಾದ ಕಾರ್ಯಕ್ರಮವು ದಿನಾಂಕ 10-07-2023ರಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಭಾಗವಹಿಸಿ ಮಾತನಾಡುತ್ತಾ “1999ರ ಏಪ್ರಿಲ್‌ ತಿಂಗಳಿನಲ್ಲಿ ಮೆಲ್ಬೋರ್ನ್‌ನಲ್ಲಿ ಬಸವ ಸಮಿತಿ ಸ್ಥಾಪನೆಯಾದಾಗ ಡಾ. ಮಲ್ಲಿಕಾರ್ಜುನ ಮಾಲಿ ಪಾಟೀಲ್‌ ಅವರು ಸಂಸ್ಥಾಪಕ ಅಧ್ಯಕ್ಷರಾಗಿ, ಶ್ರೀ ಗಂಗಾಧರ ಬೇವಿನಕೊಪ್ಪ ಅವರು ಉಪಾಧ್ಯಕ್ಷರಾಗಿ ಘಟಕವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮಹಾನ್‌ ಮಾನವತಾವಾದಿ ಬಸವಣ್ಣನವರು ಕಾಯಕ ಧರ್ಮದ ತಿರುಳನ್ನು ಮನುಜಕುಲಕ್ಕೆ ತಿಳಿಸಿದ ವಿಶ್ವಮಾನವರು. ಅವರ ತತ್ವಗಳನ್ನು ಕಾಂಗರೂ ನಾಡಿನಲ್ಲಿ ಪಾಲಿಸುತ್ತಿರುವ ಆಸ್ಟ್ರೇಲಿಯನ್‌ ಏಷಿಯಾ ಬಸವ ಸಮಿತಿಯ ಮೆಲ್ಬೋರ್ನ್‌ ಘಟಕವು ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದೆ. ಮೆಲ್ಬೋರ್ನ್‌ನಲ್ಲಿರುವ ಬಸವ ಸಮಿತಿಯ ‘ಮಾಹಾಮನೆ’ಯಲ್ಲಿ ನಡೆಯುವ ಚಟುಟಿಕೆಗಳ ಬಗ್ಗೆ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದರು. ಬಸವಣ್ಣನವರ ತತ್ವವನ್ನು ಒಪ್ಪಿಕೊಂಡು ಅದನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಈ ʻಮಹಾಮನೆʼ ಸಾರ್ಥಕತೆ ಮೆರೆಯುತ್ತಿದೆ. ಬಸವಣ್ಣನವರು ಕನ್ನಡದಲ್ಲಿ ವಚನಗಳನ್ನು…

Read More

ಬೈಲಹೊಂಗಲ: ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಅಕ್ಕಮಹಾದೇವಿ ವಿಮೆನ್ಸ್ ಆಂಡ್ ಕಾಮರ್ಸ್ ಪದವಿ ಕಾಲೇಜು ಸಹಕಾರದೊಂದಿಗೆ ಬೈಲಹೊಂಗಲದಲ್ಲಿ ಏರ್ಪಡಿಸಿದ ‘ರಂಗ ರಸಗ್ರಾಹಿ’ ಶಿಬಿರವು ದಿನಾಂಕ 08-07-2023 ಹಾಗೂ 09-07-2023 ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಬೇವಿನಕೊಪ್ಪದ ಆನಂದಾಶ್ರಮದ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಒರೆಗೆ ಹಚ್ಚಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾಡಿದ್ದಾರೆ. ಗಡಿನಾಡು ಕಾಸರಗೋಡಿನಿಂದ ‘ರಂಗ ಚಿನ್ನಾರಿ’ ತಂಡದ ನೇತೃತ್ವದಲ್ಲಿ ಬೆಳಗಾಂನ ಗಡಿಯಲ್ಲಿರುವ ಬೈಲಹೊಂಗಲದ ವಿದ್ಯಾರ್ಥಿಗಳಿಗೆ ‘ರಂಗ ರಸಗ್ರಾಹಿ’ ಶಿಬಿರವನ್ನು ಮಾಡುವ ಮೂಲಕ ಹೊಸ ಸಾಹಸದೊಂದಿಗೆ ರಂಗಭಾಷೆಯನ್ನು ಬರೆದಿದ್ದಾರೆ. ರಂಗಭೂಮಿ ಅನ್ನುವುದು ಜಾತಿ, ಮತ ಮತ್ತು ಧರ್ಮವನ್ನು ಮೀರಿದ ವೇದಿಕೆ. ಅಲ್ಲಿ ಸಿಗುವ ಅನುಭವ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಪೂರ್ವಾಶ್ರಮದಲ್ಲಿ ದೇಶಪ್ರೇಮಿ ಎಂಬ ನಾಟಕವನ್ನು ರಚಿಸಿ ನಿರ್ದೇಶಿಸಿದ ಮೂಲತಃ ಗಡಿಪ್ರದೇಶವಾದ ಮಂಜೇಶ್ವರದ ನಿವಾಸಿಯಾಗಿದ್ದ ನಾನು ಕಾಸರಗೋಡು ಚಿನ್ನಾ…

Read More

ಮಂಗಳೂರು: ಕೋಡಿಕಲ್‌ನ ವಿಪ್ರ ವೇದಿಕೆಯು ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ದಿನಾಂಕ 09-07-2023ರಂದು ವಿಶು ಕುಮಾರ್ ಜೋಯಿಸರ ಸಭಾಗೃಹದಲ್ಲಿ ನಡೆಯಿತು. “ಸಂಸ್ಕಾರ, ಸಂಸ್ಕೃತಿ ಮತ್ತು ಸಂಸ್ಕೃತ” ಎಂಬ ವಿಷಯದ ಅತಿಥಿಯಾಗಿ ಆಗಮಿಸಿದ ಶಕ್ತಿ ರೆಸಿಡೆನ್ಸಿಯಲ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಳ್ಳಿ ಮಾತನಾಡುತ್ತಾ ಈ ಮೂರು ಶಬ್ದಗಳೊಂದಿಗೆ ನಮ್ಮ ಸನಾತನ ಸಂಸ್ಕೃತಿ ಇನ್ನೂ ನಮ್ಮೆಲ್ಲರ ರಕ್ತದಲ್ಲಿ ಇದೆ. ಆದರೆ ಇಂದು ನಾವುಗಳು ಅದನ್ನು ಗುರುತಿಸಲು ಮರೆತಿದ್ದೇವೆ. ಯುವ ಜನತೆಯಲ್ಲಿ ಜ್ಞಾನ ಸಂಪತ್ತಿಗೆ ಕೊರತೆ ಇಲ್ಲ. ಆದರೆ ಸಂಸ್ಕಾರದಿಂದ ಒಳಗೊಂಡ ಜ್ಞಾನವಿದ್ದಾಗ ಆತ ದೇಶಕ್ಕೆ ಒಂದು ಆಸ್ತಿಯಾಗಲು ಸಾಧ್ಯ. ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಪರಂಪರೆಯ ಸಂಕೇತ. ಇದು ನಮ್ಮ ಪುರಾತನ ಗ್ರಂಥಗಳನ್ನು ರಕ್ಷಿಸುವ ಮತ್ತು ಪೋಷಿಸುವ ಮಾರ್ಗವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ವಿಪ್ರ ವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ದುರ್ಗಾದಾಸ್ ಕಟೀಲು ವಂದಿಸಿದರು. ಕೋಶಾಧಿಕಾರಿ ಕಿಶೋರ್ ಕೃಷ್ಣ, ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ್‌ ಪದಕಣ್ಣಾಯ, ನಿಕಟಪೂರ್ವ…

Read More

ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯರ ‘ಅಪ್ಪಯ್ಯನ ಆಸ್ತಿಕತೆ’ ಎನ್ನುವ 680 ಪುಟಗಳ ಅಪ್ಪಟ ಕುಂದ ಕನ್ನಡದ ಅದ್ಭುತ ಪುಸ್ತಕವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಸುಮಾರು 70 ವರ್ಷಗಳ ಹಿಂದಿನ ಅಮೋಘ ಚಿತ್ರಣಗಳನ್ನು ಈ ಪುಸ್ತಕದಲ್ಲಿ ಉಪಾಧ್ಯಾಯರು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರು ಶ್ರೀ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಶ್ರೀಮತಿ ಕಲ್ಯಾಣಿ ಇವರ ಸುಪುತ್ರ. ಸ್ವಂತ ಊರು ಕಟೀಲು ಆದರೂ ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಸ್ವಯಂ ನಿವೃತ್ತಿ ಹೊಂದಿದ ಬಿ.ಎಸ್.ಎನ್.ಎಲ್. ಉದ್ಯೋಗಿ. ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ನೃತ್ಯ ಇವುಗಳಲ್ಲಿ ಆಸಕ್ತಿ ಇರುವ ಇವರು ಪಿಟೀಲು ವಾದನವನ್ನು ಹವ್ಯಾಸವಾಗಿರಿಸಿಕೊಂಡಿದ್ದಾರೆ. ಡಾ. ಎಸ್.ಎಲ್. ಭೈರಪ್ಪ ಅವರ ಸರಸ್ವತೀ ಸಮ್ಮಾನ್ ಪ್ರಶಸ್ತಿ ಕೃತಿಯಾದ ‘ಮಂದ್ರ’ದ ರಂಗ ರೂಪಾಂತರ, ಭಾಸಕವಿಯ ‘ಮಧ್ಯಮವ್ಯಾಯೋಗ’ದ ಕನ್ನಡ ರೂಪ, ವಿಶಾಖದತ್ತನ ‘ಮುದ್ರಾರಾಕ್ಷಸ’ದ ಕನ್ನಡ ರೂಪ, ಕೆ.ಎಂ. ಮುನ್ಶಿ ಅವರ ‘ಸ್ವಾರ್ಥಸಿದ್ಧಿ’ಯ ಕನ್ನಡ ರೂಪ, ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತಿ’ ನಾಟಕ ರೂಪ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಥೆಗಾರ್ತಿ ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿದೆ. ಗೌರಮ್ಮ ದತ್ತಿ ಕಾರ್ಯಕ್ರಮವಾಗಿ ಈ ಸ್ಪರ್ಧೆ ನಡೆಯಲಿದೆ. ಸಣ್ಣ ಕತೆಗಳ ಗೌರಮ್ಮ ದತ್ತಿ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಬೆಳವಣಿಗೆ ಉಂಟಾಗಲು ಮತ್ತು ಆಸಕ್ತಿ ಮೂಡಲು ಇದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. • ಕೊಡಗು ಜಿಲ್ಲೆಯ ಪ್ರೌಡಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. • ಸ್ಥಳದಲ್ಲೇ ಕತೆ ರಚಿಸತಕ್ಕದ್ದು. • ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ಕತೆ ರಚಿಸತಕ್ಕದ್ದು. • ಕತೆ ಬರೆಯಲು ಹಾಳೆಯನ್ನು ಸ್ಥಳದಲ್ಲಿ ನೀಡಲಾಗುವುದು. • ಕತೆಯ ವಿಷಯದ ಆಯ್ಕೆಗೆ ನಾಲ್ಕು ವಿಷಯ ನೀಡಲಾಗುವುದು. • ಒಂದು ಶಾಲೆಯಿಂದ…

Read More

ಕಟೀಲು : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು, ಲಲಿತಕಲಾ ಸಂಘದ ಸಹಯೋಗದಲ್ಲಿ ಕನಕದಾಸರ ರಾಮಧಾನ್ಯ ಚರಿತೆ ಅರ್ಥಾನುಸಂಧಾನ – ಗಾಯನ ವ್ಯಾಖ್ಯಾನ ಕಾರ್ಯಕ್ರಮವನ್ನು ದಿನಾಂಕ :04-07-2023ರಂದು ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಿ ಮಾತನಾಡುತ್ತಾ “ವರ್ಣಾಶ್ರಮದ ಹೆಸರಿನಲ್ಲಿ ನಾರಾಯಣಗುರು, ನಿತ್ಯಾನಂದರು. ದಾಸಶ್ರೇಷ್ಟರಾದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸಮಾಜವನ್ನು ಒಂದಾಗಿಸುವ ಕನಕದಾಸರ ಕೀರ್ತನೆಗಳನ್ನು ಕೇಳುವ ಅರ್ಥೈಸುವ ಮೂಲಕ ಬದುಕನ್ನು ಅರಿಯುವ ಚಿಂತನೆಗಳಿಂದ ಬೆಳೆಯುವ ಅಗತ್ಯವಿದೆ” ಎಂದು ಹೇಳಿದರು. ಆಶಯ ಭಾಷಣ ಮಾಡಿದ ವಿವಿಯ ಕನಕದಾಸ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಕನಕದಾಸರ ಕೀರ್ತನೆಗಳು ಕಾವ್ಯಮೌಲ್ಯದ ದೃಷ್ಟಿಯಿಂದ ಮಹತ್ವಪೂರ್ಣವಾದವು. ಅವರ ಕಾವ್ಯಗಳಿಗೆ ಭಕ್ತಿ ಮತ್ತು ಸಾಮಾಜಿಕ ಕಾಳಜಿಗಳೆಂಬ ಎರಡು ಧಾರೆಗಳಿವೆ. ಧಾನ್ಯಗಳ ಮೂಲಕ ಸಾಮಾಜಿಕ ಧ್ಯಾನವನ್ನು ಮಾಡಿದ…

Read More

ಪೆರ್ಡೂರು: ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಹಾಗೂ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಶಾಲೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 16-07-2023ರ ರವಿವಾರ ಬೆಳಗ್ಗೆ ಅವಿಭಜಿತ ಉಡುಪಿ ಹಾಗೂ ದ.ಕ. ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಜನಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯರಾದ ಬಾಲು ಕೋಟ್ಯಾನ್ ಬೆಳ್ಳಂಪಳ್ಳಿ, ರಾಘವೇಂದ್ರ ನಾಯಕ್ ದೊಂಡೇರಂಗಡಿ ಹಾಗೂ ವಿಶ್ವ ದಾಖಲೆಯ ಈಜುಪಟು ಗಂಗಾಧರ ಜಿ. ಕಡೆಕಾರು ಹಾಗೂ ಪ್ರಸಿದ್ಧ ರಂಗ ಮತ್ತು ಚಲನಚಿತ್ರ ಕಲಾವಿದ ಸತೀಶ್ ಆಚಾರ್ಯ ಪೆರ್ಡೂರು ಅವರನ್ನು ಗೌರವಿಸಲಾಗುವುದು. ಸ್ಪರ್ಧೆಯ ವಿಜೇತ ತಂಡಗಳಿಗೆ ಕ್ರಮವಾಗಿ ಪ್ರಥಮ ಬಹುಮಾನ ರೂ 13,000, ದ್ವಿತೀಯ ರೂ.11,000 ಹಾಗೂ ತೃತೀಯ ರೂ.9,000 ಇದರೊಂದಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ವೈಯಕ್ತಿಕ ಬಹುಮಾನ ನೀಡಿ ಪುರಸ್ಕರಿಸಲಾಗುವುದು. ಈ ಭಜನಾ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ,…

Read More

ಮಡಿಕೇರಿ : ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ವೆಂಕಟರಾಜು ಇವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದಿನಾಂಕ : 07-07-2023ರಂದು ಭೇಟಿಯಾಗಿ ಜಿಲ್ಲೆಗೆ ಸ್ವಾಗತ ಕೋರಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕನ್ನಡ ಶಲ್ಯವನ್ನು ಮತ್ತು ಕನ್ನಡದ ಪುಸ್ತಕವನ್ನು ಜಿಲ್ಲಾಧಿಕಾರಿಯವರಿಗೆ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು. ಆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಂಡರು ಹಾಗೂ ಕನ್ನಡದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಇರುವುದಾಗಿ ತಿಳಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ಎಸ್.ಐ. ಮುನಿರ್ ಅಹ್ಮದ್ ಮತ್ತು ಶ್ರೀಮತಿ ರೇವತಿ ರಮೇಶ್ ಉಪಸ್ಥಿತರಿದ್ದರು.

Read More

ಹೊಸಕೋಟೆ: ನಿಂಬೆಕಾಯಿಪುರದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ರಂಗಮಂದಿರದಲ್ಲಿ ‘ಜನಮನದಾಟ- ಹೆಗ್ಗೋಡು’ ವಿಶೇಷ ತಿರುಗಾಟ ಪ್ರಯುಕ್ತ ಏರ್ಪಡಿಸಿದ್ದ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲಾ…’ ನಾಟಕದ ಪ್ರದರ್ಶನವು ದಿನಾಂಕ 09-07-2023 ರಂದು ನಡೆಯಿತು. ‘ಜನಪದರು ಸಾಂಸ್ಕೃತಿಕ ವೇದಿಕೆ’ಯ ಅಧ್ಯಕ್ಷರಾದ ಕೆ.ವಿ.ವೆಂಕಟರಮಣಪ್ಪ ಪಾಪಣ್ಣ ಕಾಟಂನಲ್ಲೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಸಮಾಜದಲ್ಲಿ ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಮೌಢ್ಯತೆ, ಅನಕ್ಷರತೆಯಂತಹ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ರಂಗಕಲೆಯು ಪರಿಣಾಮಕಾರಿಯಾದ ಸಾಧನವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಡಾ.ಎಂ.ಗಣೇಶ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ನವ್ಯ, ಪ್ರಗತಿಶೀಲ ಹಾಗೂ ಬಂಡಾಯದ ಮಹತ್ವದ ಲೇಖಕರಾದ ಪಿ.ಲಂಕೇಶರ ಕಥೆಗಳ ಸಂಕಲನದಲ್ಲಿನ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿವೆ” ಎಂದರು. ನಾಟಕವು ಸಮಾಜದಲ್ಲಿರುವ ಹಸಿವು ಹಾಗೂ ಭ್ರಷ್ಟಾಚಾರದಿಂದ ನಲುಗಿ, ಅಧಿಕಾರ ಶಾಹಿಯ ಬುದ್ಧಿಗೇಡಿತನವನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಪ್ರಶಂಸೆ ಗಳಿಸಿತು. ಇದೇ ಸಂದರ್ಭದಲ್ಲಿ ನಿನಾಸಂ ಹೆಗ್ಗೋಡು ಇದರ ಪ್ರಾಂಶುಪಾಲರಾದ ಡಾ.ಎಂ.ಗಣೇಶ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಓ ಸುರೇಶ್, ಸಿದ್ದೇಶ್ವರ…

Read More

ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ‘ಚೂಡಾಮಣಿ’ ಎಂಬ ತಾಳಮದ್ದಳೆ, ದಿನಾಂಕ : 10-07-2023ರಂದು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ಆಶ್ರಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಎಲ್.ಎನ್. ಭಟ್ ಬಟ್ಯಮೂಲೆ, ಶ್ರೀ ಆನಂದ ಸವಣೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ದಂಬೆ ಈಶ್ವರ ಶಾಸ್ತ್ರಿ, ಶ್ರೀ ಶ್ರೀಪತಿ ಭಟ್ ಉಪ್ಪಿನಂಗಡಿ, ಶ್ರೀ ಅಮೋಘ ಶಂಕರ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ ಮತ್ತು ಶ್ರೀಮತಿ ಶುಭಾ ಜೆ.ಸಿ. ಅಡಿಗ (ಹನೂಮಂತ), ಶ್ರೀ ಕುಂಬಳೆ ಶ್ರೀಧರ ರಾವ್ (ಸೀತೆ), ಶ್ರೀ ದುಗ್ಗಪ್ಪ ಎನ್. (ಶೃಂಗಾರ ರಾವಣ) ಸಹಕರಿಸಿದರು.

Read More