Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಮಹಿಳಾ ದಿನಾಚರಣೆ ಮತ್ತು ಹಿರಿಯ ಸಾಹಿತಿ ಮನೆ ಭೇಟಿ ಕಾರ್ಯಕ್ರಮವು ದಿನಾಂಕ 08-03-2024ರಂದು ಮಂಗಳೂರಿನ ಮೇರಿಹಿಲ್ ನಲ್ಲಿರುವ ಹಿರಿಯ ಕವಯಿತ್ರಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಅವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು “ಸಾಹಿತ್ಯವೆಂಬ ಸತ್ಯ ನಿತ್ಯ ನಿರಂತರ ಓದುಗರನ್ನು ತಟ್ಟುತ್ತಲೇ ಇರಬೇಕು. ಅದಕ್ಕಾಗಿ ಸಾಹಿತಿಗಳು ಹೊಸ ದೃಷ್ಟಿ ಮತ್ತು ಸೃಷ್ಟಿಯೊಂದಿಗೆ ತಮ್ಮ ಕೊಡುಗೆ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿ ಮನೆಗೆ ಬಂದು ಮಾತನಾಡಿಸಿದ್ದು ನನ್ನ ಜೀವನದ ಅತ್ಯಂತ ಮಧುರ ಕ್ಷಣ. ಇದರಿಂದ ನನಗಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರದ ಎಲ್ಲರಿಗೂ ಸ್ನೇಹ ಸದ್ಭಾವನೆಯೊಂದಿಗೆ ಸ್ಫೂರ್ತಿ ಸಿಗುತ್ತದೆ.” ಎಂದು ಹೇಳಿದರು. ಕಸಾಪ ಕೇಂದ್ರ ಪರಿಷತ್ತಿನ ಮಾರ್ಗದರ್ಶಿ ಸಮಿತಿ ಸದಸ್ಯ ಮುರಲೀ ಮೋಹನ್ ಚೂಂತಾರು ಅಭಿನಂದನೆಯ ಮಾತುಗಳನ್ನಾಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ…
ಉಡುಪಿ : ಎಂ. ಜಿ. ಎಂ. ಸಂಧ್ಯಾ ಕಾಲೇಜು ವತಿಯಿಂದ ಕಾಲೇಜಿನ ಬುಲೆಟಿನ್ ‘ದಿ ಹಾರಿಝಾನ್’ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ನಾಯ್ಕ ಕೂಜಳ್ಳಿ ಅವರ ‘ಕದಂಬ ವೃಕ್ಷ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮಮವು ದಿನಾಂಕ 02-03-2024ರ ಶನಿವಾರದಂದು ಕಾಲೇಜಿನ ನೂತನ ರವೀಂದ್ರ ಮಂಟಪ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಟ್ರಸ್ಟಿನ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಕಾಲೇಜಿನ ‘ಬುಲೆಟಿನ್’ ಮತ್ತು ‘ಕದಂಬ ವೃಕ್ಷ’ ಕೃತಿ ಲೋಕರ್ಪಣೆ ಮಾಡಿದರು. ಕೃತಿಯ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಿದ ಹಿರಿಯ ಲೇಖಕ ಸುಮುಖಾನಂದ ಜಲವಳ್ಳಿ “ಜನಪದ ದಾಖಲೀಕರಣಕ್ಕೆ ಗ್ರಾಮೀಣ ಸೊಗಡಿನ ಸಂಸ್ಕೃತಿ ಬಿಂಬಿಸುವ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ‘ಕದಂಬ ವೃಕ್ಷ’ ಕೃತಿಯಲ್ಲಿ ಜನಪದ ಸಂಸ್ಕೃತಿ, ಗ್ರಾಮೀಣ ಬದುಕಿನ ಚಿತ್ರಣವನ್ನು ಲೇಖಕರು ಅದ್ಭುತವಾಗಿ ಚಿತ್ರಿಸಿದ್ದಾರೆ. ಜನಪದ ಸಂಸ್ಕೃತಿಯನ್ನು ದಾಖಲಿಸುವ ಕಳಕಳಿ ಈ ಕೃತಿಯಲ್ಲಿ ಕಂಡು ಬರುತ್ತದೆ. ಕೃತಿಯಲ್ಲಿ ಕೃಷಿ ಬದುಕಿನ ನೋಟವನ್ನು ಸ್ಕೂಲವಾಗಿ ಚಿತ್ರಿಸಲಾಗಿದೆ.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ…
ಮಂಗಳೂರು : ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಸುಳ್ಯ ಗುತ್ತಿಗಾರು ಬಂಟಮಲೆ ಅಕಾಡೆಮಿ ವತಿಯಿಂದ ‘ಕಲ್ಲೆ ಶಿವೋತ್ತಮ ರಾವ್ ಜನಪ್ರಗತಿಯ ಪಂಜು’ ಕೃತಿ ಬಿಡುಗಡೆ ಮತ್ತು ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09-03-2024 ಶನಿವಾರ ನಗರದ ಸಹೋದಯ ಸಭಾಂಗಣದಲ್ಲಿ ಜರಗಿತು. ಪುಸ್ತಕ ಬಿಡುಗಡೆ ಮಾಡಿದ ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ “ಕಲ್ಲೆ ಶಿವೋತ್ತಮ ರಾವ್ ಅವರು ಪತ್ರಕರ್ತನಾಗಿ 70 ರ ದಶಕದ ಎಲ್ಲ ಕ್ರಾಂತಿಕಾರಕ ಬದಲಾವಣೆಗಳನ್ನು ಬೆಂಬಲಿಸಿದ್ದರು. ಕ್ರಾಂತಿಕಾರಕ ಮಾನವತಾವಾದಿಯಾಗಿದ್ದರು” ಎಂದರು. ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಮಾತನಾಡಿ “ದೇಶದ ಪ್ರಗತಿಗೆ ಸಾಹಿತಿ, ಪತ್ರಕರ್ತರ ಕೊಡುಗೆ ದೊಡ್ಡದು. ಕಲ್ಲೆ ಶಿವೋತ್ತಮ ರಾವ್ ತುಳಿತಕ್ಕೊಳಗಾದವರಿಗೆ ದನಿಯಾದವರು.” ಎಂದು ಹೇಳಿದರು. ಕಲ್ಲೆಶಿವೋತ್ತಮರಾವ್ ಅವರ ಪರವಾಗಿ ಅವರ ಪುತ್ರ ಅಜಿತ್ ಅಶುತೋಷ್ ಕಲ್ಲೆ ಮತ್ತು ಪುತ್ರಿ ಅಲಕಾ ಕುಮಾರ್ ಅವರು ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ನಾಟಕಕಾರ ಎ. ಕೆ. ಹಿಮಕರ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಶಕ್ತಿ ಪತ್ರಿಕೆಯ ಸಂಸ್ಥಾಪಕರಾದ ದಿ. ಜಿ. ಗೋಪಾಲಕೃಷ್ಣ ದತ್ತಿನಿಧಿ ಕಾರ್ಯಕ್ರಮ ಹಾಗೂ ಮುಕ್ತ ಕಥಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ದಿನಾಂಕ 19-03-2024ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಬಾಳೆಲೆಯ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಿ. ಬಿ. ಎಸ್ ಗೋಪಾಲಕೃಷ್ಣ ದತ್ತಿಯ ಮುಕ್ತ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಯ 23ಮಂದಿ ಕತೆಗಾರರು ಭಾಗವಹಿಸಿದ್ದು, ತೀರ್ಪುಗಾರರು ಮೌಲ್ಯಮಾಪನ ಮಾಡಿ ನೀಡಿದ ಪಲಿತಾಂಶದಂತೆ ಪ್ರಥಮ ಸ್ಥಾನವನ್ನು ಕುಶಾಲನಗರದ ಶ್ರೀಮತಿ ಕುಕ್ಕನೂರು ರೇಷ್ಮಾ ಮನೋಜ್, ದ್ವಿತೀಯ ಸ್ಥಾನವನ್ನು ನಾಪೋಕ್ಲಿನ ಮಧುಸೂಧನ್ ಬಿಳಿಗುಲಿ ಮತ್ತು ತೃತಿಯ ಸ್ಥಾನವನ್ನು ಮೂರ್ನಾಡಿನ ಕಿಗ್ಗಾಲು ಗಿರೀಶ್ ರವರು ಪಡೆದು ಕೊಂಡಿದ್ದಾರೆ. ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ…
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕಥಾಬಿಂದು ಪ್ರಕಾಶನ ಇದರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನ ಬಯಲು ರಂಗಮಂಟಪದಲ್ಲಿ ‘ಕೇರಳ-ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ’ವು ದಿನಾಂಕ 10-03-2024ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ಮಾತನಾಡಿ “ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಸಂವರ್ಧನೆಗೆ ಇಲ್ಲಿನ ಸಂಘ ಸಂಸ್ಥೆಗಳ ಪಾತ್ರ ಹಿರಿದು” ಎಂದು ಹೇಳಿದರು. ಸಮಾರಂಭವನ್ನು ಪಿ.ವಿ. ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ವಿ.ಬಿ. ಕುಳಮರ್ವ, ಕರ್ನಾಟಕ ಜಾನಪದ ಪರಿಷತ್ ಕೇರಳ ರಾಜ್ಯ ಘಟಕ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಸಾಹಿತಿ ಕೊಳ್ಚಪ್ಪೆ ಗೋವಿಂದ ಭಟ್, ಸಂಧ್ಯಾರಾಣಿ ಟೀಚರ್, ಪ್ರೊ. ಎ. ಶ್ರೀನಾಥ್ ಕಾಸರಗೋಡು, ಸಾಹಿತಿ ಬಿ. ಸತ್ಯವತಿ ಭಟ್, ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು.…
ಕಾರ್ಕಳ : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ ಇದರ ಸಹಯೋಗದಲ್ಲಿ ಕಾಲೇಜಿನ ಸಾಹಿತ್ಯ ಸಂಘ ಏರ್ಪಡಿಸಿದ್ದ ರಾಜ್ಯಮಟ್ಟದ ‘ಬಸವರಾಜ ಕಟ್ಟೀಮನಿ ಸಾಹಿತ್ಯ : ಹೊಸ ಓದು’ ಎಂಬ ವಿಚಾರವಾಗಿ ರಾಜ್ಯಮಟ್ಟದ ಒಂದು ದಿನದ ವಿಚಾರಸಂಕಿರಣವು ದಿನಾಂಕ 02-03-2024ರಂದು ನಡೆಯಿತು. ಈ ವಿಚಾರಸಂಕಿರಣವನ್ನು ಉದ್ಘಾಟಿಸಿದ ಕನ್ನಡದ ಸಾಹಿತಿ, ಕವಿ, ಡಾ. ನಾ. ಮೊಗಸಾಲೆಯವರು ಮಾತನಾಡಿ “ಪ್ರಜ್ಞಾವಂತ ನಾಗರಿಕರಾಗಿ ಬದುಕು ಮಾಡಬೇಕಾದರೆ ಹಿರಿಯ ಸಾಹಿತಿ ವ್ಯಕ್ತಿತ್ವಗಳನ್ನು ಅರಿತುಕೊಳ್ಳಬೇಕು. ಬಸವರಾಜ ಕಟೀಮನಿಯವರು ಸಮಾಜದ ಹಲವು ಸ್ತರಗಳ ಕೊರತೆಗಳನ್ನು ಗಮನಿಸಿ ತಮ್ಮ ಕಥೆ, ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದರು. ಅಂಥವರ ಸ್ಮರಣೆ ಇಂದಿಗೂ ಮನನೀಯವಾದುದು. ವಿದ್ಯಾರ್ಥಿಗಳು ಅವರ ಕೃತಿಗಳನ್ನು ಸದಾ ಗಮನಿಸುವಂತಾಗಬೇಕು. ಅವರಲ್ಲಿ ತಿಳಿವಳಿಕೆ ಮೂಡಬೇಕು. ಆಗ ಲೋಕದಲ್ಲಿ ಜ್ಞಾನದ ಬೆಳಕು ಮೂಡುತ್ತದೆ” ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ “ಜಗತ್ತಿನಲ್ಲಿ ಎರಡು ಯುದ್ಧಗಳಾದರೂ ಶಾಂತಿ ಇನ್ನೂ ಸಿಕ್ಕಿಲ್ಲ. ತಿಳಿವಳಿಕೆಯ ಕೊರತೆ ಎದ್ದುಕಾಣುತ್ತದೆ. ಅಕ್ಷರ…
ಮಂಗಳೂರು : ಸಂಗೀತ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ಸ್ತ್ರೀ ಶಕ್ತಿ’ ಸಂಗೀತ ಕಾರ್ಯಕ್ರಮವು ದಿನಾಂಕ 24-03-2024ರಂದು ಸಂಜೆ 5.30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ಶ್ರೀಲಕ್ಷ್ಮಿ ಬೆಳ್ಮಣ್ಣು ಇವರ ಹಾಡುಗಾರಿಕೆಗೆ ನೀತಾ ಬೆಳ್ಮಣ್ಣು ಹಾಮೋನಿಯಂ ಹಾಗೂ ವಿಘ್ನೇಶ್ ಕಾಮತ್ ತಬ್ಲಾ ಸಾಥ್ ನೀಡಲಿದ್ದಾರೆ. ಸಂಸ್ಕೃತಿ ಮತ್ತು ಪ್ರಕೃತಿ ವಹನೆ ಇವರ ಸೀತಾರ್-ಸಂತೂರ್ ಜುಗಲ್ ಬಂಧಿಗೆ ಹೇಮಂತ್ ಜೋಶಿ ತಬ್ಲಾ ಸಾಥ್ ನೀಡಲಿದ್ದಾರೆ.
ಪುತ್ತೂರು : ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ ಮೆಂಟ್ ಆ್ಯಂಡ್ ಎಜುಕೇಶನ್ ಇದರ ಅಂಗ ಸಂಸ್ಥೆಯಾದ ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಇದರ ವತಿಯಿಂದ ‘ಕೃತಿ ಲೋಕರ್ಪಣಾ ಕಾರ್ಯಕ್ರಮ’ವು ದಿನಾಂಕ 23-03-2024ರಂದು ನಡೆಯಲಿದೆ. ಪುತ್ತೂರಿನ ಶ್ರೀಮತಿ ಕವಿತಾ ಅಡೂರು ಇವರ ವಿಜಯವಾಣಿ ದೈನಿಕದ ‘ಕಗ್ಗದ ಬೆಳಕು’ ಅಂಕಣಬರಹಗಳ ಸಂಕಲನ ‘ಎಲ್ಲರೊಳಗೊಂದಾಗು’ ಕೃತಿ ಲೋಕರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಇದರ ಅಧ್ಯಕ್ಷರು/ನಿರ್ದೇಶಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಇವರು ವಹಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರು, ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಶ್ರೀ ವಿ.ಜಿ. ಅರ್ತಿಕಜೆ ಇವರು ಕೃತಿ ಲೋಕರ್ಪಣೆಗೊಳಿಸಲಿದ್ದು, ಮಡಿಕೇರಿ ಆಕಾಶವಾಣಿಯ ಉದ್ಘೋಷಕರು, ಸಾಹಿತಿಗಳಾದ ಶ್ರೀ ಸುಬ್ರಾಯ ಸಂಪಾಜೆ ಕೃತಿ ಪರಿಚಯ ಮಾಡಲಿದ್ದಾರೆ.
ಮಂಗಳೂರು : ಕನ್ನಡ ತುಳು ವಿದ್ವಾಂಸರಾದ ಅಮೃತ ಸೋಮೇಶ್ವರ ಅವರ ಸಾಧನೆಗಳ ಕುರಿತು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವ ವಿದ್ಯಾಲಯ) ಕಾಲೇಜಿನ ಸಭಾಂಗಣದಲ್ಲಿ ‘ಅಮೃತಾನುಸಂಧಾನ’ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 10-03-2024ರಂದು ನಡೆಯಿತು. ಸೋಮೇಶ್ವರ ಉಚ್ಚಿಲದ ಕಲಾ ಗಂಗೋತ್ರಿ ಯಕ್ಷಗಾನ ಕೇಂದ್ರ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕರಾವಳಿಯ ಅನೇಕ ವಿದ್ವಾಂಸರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಕುಲಪತಿ ಮತ್ತು ಅಮೃತರ ದೀರ್ಘ ಕಾಲದ ಒಡನಾಡಿ ಡಾ. ವಿವೇಕ ರೈಯವರು ಮಾತನಾಡಿ “ಭಾಷೆ, ಸಾಹಿತ್ಯದ ಪ್ರಬೇಧಗಳು, ಮಾಧ್ಯಮ ಮತ್ತು ಓದುಗ, ಕೇಳುಗ, ನೋಡುಗ ವರ್ಗ ಎಂದು ನಾಲ್ಕು ರೀತಿಯಿಂದ ಅಮೃತರ ಒಟ್ಟು ಸಾಧನೆಗಳನ್ನು ವಿಭಜಿಸಿ ಅರ್ಥಮಾಡಿಕೊಳ್ಳಬೇಕು. ಮೂರು ಭಾಷೆಯನ್ನು ಮಾತಾಡುತ್ತಿದ್ದ ಅಮೃತರು ತುಳುವನ್ನು ತನ್ನ ಮೂಲ ಶಕ್ತಿಯಾಗಿ ಬಳಸಿಕೊಂಡು ಕನ್ನಡದಲ್ಲಿ ಬರೆದರು. ಭಗವತೀ ಆರಾಧನೆಯಂತ ಪುಸ್ತಕ ಬರೆಯುವಾಗ ಅವರು ಮಲೆಯಾಳ ಭಾಷೆಯ ಅನುಭವಗಳನ್ನು ಬಳಸಿಕೊಂಡರು. 1962ರಷ್ಟು ಹಿಂದೆಯೇ ಇಂತಹ ಕೆಲಸಗಳನ್ನು…
ಮಂಗಳೂರು : ಅಳಪೆ-ಕಣ್ಣೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಕೊಡಕಾಲ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲೋತ್ಸವ ಅಂಗವಾಗಿ ದಿನಾಂಕ 13-03-2024ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶ್ರೀರಾಮ ದರ್ಶನ (ಜಾಂಬವತಿ ಕಲ್ಯಾಣ)’ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಚೆಂಡೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ಮದ್ದಳೆಯಲ್ಲಿ ಮಯೂರ್ ನಾಯಗ ಭಾಗವಹಿಸಿದ್ದರು. ಅರ್ಥಧಾರಿಗಳಲ್ಲಿ ಬಲರಾಮನಾಗಿ ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ಜಾಂಬವಂತನಾಗಿ ಶಂಭು ಶರ್ಮ ವಿಟ್ಲ, ಶ್ರೀಕೃಷ್ಣನಾಗಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ನಾರದನಾಗಿ ಡಾ. ದಿನಕರ ಎಸ್. ಪಚ್ಚನಾಡಿ ಭಾಗವಹಿಸಿದ್ದರು. ಕೊಡಕಾಲ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಲಾವಿದರಿಗೆ ಶಾಲು ಹೊದಿಸಿ, ಸ್ಮರಣಿಕೆಯಿತ್ತು ಗೌರವಿಸಿದರು. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಕಲಾವಿದರ ವಿವರ ನೀಡಿದರು. ಸಮಿತಿ ಕಾರ್ಯದರ್ಶಿ ಗೋಪಾಲಕೃಷ್ಣ…