Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಹಿರಿಯ ವಿದ್ವಾಂಸರು, ವಿಮರ್ಶಕರೂ ಆಗಿರುವ ಶ್ರೀ ಲಕ್ಷ್ಮೀಶ ತೋಳ್ಪಾಡಿ ಇವರ ‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ‘ಸಾರ್ವಜನಿಕ ಅಭಿನಂದನಾ ಸಮಾರಂಭ’ವನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಲಕ್ಷ್ಮೀಶ ತೋಲ್ಪಾಡಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ದಿನಾಂಕ 17-03-2024ರ ಆದಿತ್ಯವಾರ ಸಂಜೆ 4:00 ಗಂಟೆಗೆ ಪುತ್ತೂರಿನ ಶ್ರೀ ರಾಧಾಕೃಷ್ಣ ಮಂದಿರ ರಸ್ತೆಯಲ್ಲಿರುವ ಅನುರಾಗ ವಠಾರದಲ್ಲಿ ಆಯೋಜನೆ ಮಾಡಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ವಹಿಸಲಿದ್ದು, ಪ್ರಾಧ್ಯಾಪಕರು ಸಾಹಿತಿಗಳು ಹಾಗೂ ವಿಮರ್ಶಕರಾದ ಡಾ. ನರೇಂದ್ರ ರೈ ದೇರ್ಲ ಇವರು ಉದ್ಘಾಟಿಸಲಿರುವರು. ಹಿರಿಯ ವಿದ್ವಾಂಸರು, ಸಾಹಿತಿಗಳು ಹಾಗೂ ವಿಮರ್ಶಕರಾದ ಡಾ. ತಾಳ್ತಜೆ ವಸಂತ ಕುಮಾರ ಇವರು ಶ್ರೀ ಲಕ್ಷ್ಮೀಶ ತೋಲ್ಪಾಡಿಯವರನ್ನು ಅಭಿನಂದಿಸಿ ಸನ್ಮಾನಿಸಲಿದ್ದು, ‘ಮಹಾಭಾರತ ಅನುಸಂಧಾನ…
ಮಂಗಳೂರು : ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಯಕ್ಷಾವಾಸ್ಯಮ್ ಕಾರಿಂಜ (ರಿ.), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ವಿಭಾಗ ಮತ್ತು ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ‘ಯಕ್ಷ ಸುಮತಿ 2024’ ರಾಜ್ಯ ಮಟ್ಟದ ಯಕ್ಷಗಾನ ಮಹಿಳಾ ಕಲಾವಿದೆಯರ ಸಾಧನೆಯ ಸಂಭ್ರಮದ ಸಮ್ಮಿಲನ ಕಾರ್ಯಕ್ರಮವನ್ನು ದಿನಾಂಕ 16-03-2024ರಂದು ಬೆಳಿಗ್ಗೆ ಗಂಟೆ 9-00ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವನ್ನು ಮಾನ್ಯ ವಿಧಾನ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಉದ್ಘಾಟನೆ ಮಾಡಲಿದ್ದು, ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಷನ್ ಇವರ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಇವರು ದೀಪೋಜ್ವಲನ ಮಾಡಲಿರುವರು. ಬೆಳಗ್ಗೆ ಗಂಟೆ 9-45ರಿಂದ ‘ಯಕ್ಷಗಾನದಲ್ಲಿ ಮಹಿಳೆ : ನಿನ್ನೆ-ಇಂದು-ನಾಳೆ’, ‘ಯಕ್ಷಗಾನದಲ್ಲಿ ಮಹಿಳಾ ಸಂವೇದನೆ’ ಹಾಗೂ ‘ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಮಹಿಳೆ’ ಎಂಬ…
ಕಾರ್ಕಳ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ಹೊಸಸಂಜೆ ಬಳಗದ ವತಿಯಿಂದ ದಿನಾಂಕ 10-03-2024ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಜಯಶ್ರೀ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಯಕ್ಷಗಾನ ಕಲೆ ಅತ್ಯಂತ ಶ್ರೀಮಂತ ಕಲೆ. ಬಯಲಾಟ ಮತ್ತು ತಾಳಮದ್ದಳೆ ಎರಡೂ ಪ್ರಕಾರಗಳಲ್ಲಿಯೂ ಕೂಡ ವಿಪುಲ ಸಾಹಿತ್ಯ ಜೊತೆಗೆ ಪುರಾಣ ಇತಿಹಾಸಗಳ ವಿಸ್ತೃತ ಪರಿಚಯ ದೊರಕುತ್ತದೆ. ವೇಷಗಾರಿಕೆ, ಸಂಗೀತ, ನಾಟ್ಯ, ವಾಙ್ಮಯ ಮುಂತಾದ ಎಲ್ಲವೂ ಒಳಗೊಂಡ ಸರ್ವಾಂಗೀಣ ಕಲೆಯಾಗಿದ್ದು ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಯಕ್ಷಗಾನ ಕಲೆಯನ್ನು ಬೆಳೆಸಿ ಭವಿಷ್ಯದ ಪೀಳಿಗೆಗೂ ತಲುಪಿಸುವ ಕೆಲಸ ಕಲಾವಿದರಿಂದ ನಿರಂತರವಾಗಿ ನಡೆಯಬೇಕು” ಎಂದು ಹೇಳಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಸುವರ್ಣಾ ನಾಯಕ್, ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಅರುಣಾ ಎಸ್., ಹಿರಿಯ ನಾಗರಿಕ ಭಾಸ್ಕರ ಕಾರಂತ, ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯಕ್ಷಗಾನ ಗುರು ಹರೀಶ ಶೆಟ್ಟಿ ಸೂಡ, ವಿಜಯಾ…
ಬೆಂಗಳೂರು : ಶ್ರೀ ಅನ್ನಪೂರ್ಣೇಶ್ವರಿ ಸಂಗೀತ ಸಭಾ ವತಿಯಿಂದ ಬೆಂಗಳೂರಿನ ಸುಂಕದಕಟ್ಟೆ, ಅನ್ನಪೂರ್ಣೇಶ್ವರಿ ನಗರ, ಆರ್.ಎಚ್.ಸಿ.ಎಸ್. ಲೇಔಟ್, 2ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ದಿನಾಂಕ 16-03-2024ರಂದು ಸಂಜೆ ಗಂಟೆ 6ಕ್ಕೆ ‘ಮಾಸಿಕ ಸಂಗೀತ ಕಾರ್ಯಕ್ರಮ’ ನಡೆಯಲಿದೆ. ಕರ್ನಾಟಕದ ಪ್ರಸಿದ್ಧ ಹಿರಿಯ ಗಾಯಕರು ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ್ ಕುಮಾರ್ ಇವರ ಹಾಡುಗಾರಿಕೆಗೆ ವಿದ್ವಾನ್ ವೆಂಕಟೇಶ್ ಜೋಷಿಯರ್ ವಯೋಲಿನ್, ವಿದುಷಿ ರಂಜನಿ ವೆಂಕಟೇಶ್ ಮೃದಂಗ ಹಾಗೂ ವಿದ್ವಾನ್ ಭಾನು ಪ್ರಕಾಶ್ ಮೋರ್ಚಿಂಗ್ ಸಾಥ್ ನೀಡಲಿದ್ದಾರೆ.
ಕನ್ನಡದ ಯುವ ಬರಹಗಾರ್ತಿ ವಿದ್ಯಾ ಕೆ.ಎನ್. ಅವರ ಎರಡನೇ ಕಾದಂಬರಿ ‘ಯೋಗದಾ’. ಶೀರ್ಷಿಕೆಯೇ ಸೂಚಿಸುವಂತೆ ಇದು ಸನಾತನ ಹಿಂದೂ ಸಂಸ್ಕೃತಿಯನ್ನು ಜೀವಾಳವಾಗಿಸಿಕೊಂಡ ಒಂದು ಕೃತಿ. ಆಧುನಿಕತೆಯ ಹುಚ್ಚು ಪ್ರವಾಹದಲ್ಲಿ ತನ್ನತನವನ್ನು ಮರೆಯುತ್ತಿರುವ ಇಂದಿನ ಜನತೆಗೆ ಭಾರತೀಯ ಸಂಸ್ಕೃತಿಯೊಳಗಿನ ಅಗಾಧ ಶಕ್ತಿಯ ಮಹತ್ವವನ್ನು ನೆನಪಿಸುವ ಈ ಕೃತಿಯ ತಿರುಳು ಒಂದು ಸುಂದರ ಕೌಟುಂಬಿಕ ಕಥೆಯ ಕಣಕದೊಳಗೆ ಬೆಸೆದ ತತ್ವಜ್ಞಾನದ ಸಿಹಿ ಹೂರಣದಂತಿದೆ. ನಮ್ಮ ಹಿರಿಯರು ಹಿಂದೆ ಶ್ರದ್ಧೆಯಿಂದ ಮನೆ ಮನೆಗಳಲ್ಲಿ ಮಾಡುತ್ತಿದ್ದ ಶಕ್ತಿಯ ಉಪಾಸನೆ ಮತ್ತು ಆ ಮೂಲಕ ಮನೆಯೊಳಗೆ ಸಂಚರಿಸುವ ಧನಾತ್ಮಕ ವಾತಾವರಣದ ಬಗ್ಗೆ ಅವರ ಕಾಳಜಿಯನ್ನು ಈ ಕಾದಂಬರಿ ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತದೆ. ಆಧುನಿಕತೆಯನ್ನು ರೂಢಿಸಿಕೊಂಡ ಕುಟುಂಬದೊಳಗೂ ಇದು ಸಾಧ್ಯ ಅನ್ನುವುದನ್ನು ತೋರಿಸಿ ಕೊಡುತ್ತದೆ. ಹುಟ್ಟೂರು ಸಾಂಸ್ಕೃತಿಕ ಮಹತ್ವದ ಸ್ಥಳ ಶೃಂಗೇರಿಯಾದರೂ ಉದ್ಯೋಗದ ಕಾರಣದಿಂದ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿರುವ ಶಂಕರ್ ದೀಕ್ಷಿತರು, ಅವರ ಪತ್ನಿ ಸುವರ್ಣಾ, ಮಕ್ಕಳಾದ ಅನಘಾ ಮತ್ತು ಅಭಿಜ್ಞಾರ ಸುಂದರ ಕೌಟುಂಬಿಕ ಬದುಕಿನ ಸುತ್ತ ಈ ಕಾದಂಬರಿ…
ಗೋವಾ : ಸಪ್ತಕ್ ಬೆಂಗಳೂರು ಮತ್ತು ಸ್ವಸ್ತಿಕ್ ಕಲ್ಚರಲ್ ಆಸೋಶಿಯೇಷನ್ ಗೋವಾ ಪ್ರಸ್ತುತ ಪಡಿಸುವ ‘ಸ್ವರ ಸ್ವಸ್ತಿಕ್’ ಕಾರ್ಯಕ್ರಮವು ದಿನಾಂಕ 17-03-2024ರಂದು ಸಂಜೆ 5.30ಕ್ಕೆ ಗೋವಾ ಪಣಜಿಯ ಕಲಾ ಅಕಾಡೆಮಿ ಬ್ಲಾಕ್ ಬಾಕ್ಸ್ ಇಲ್ಲಿ ನಡೆಯಲಿದೆ. ಪಲ್ಲವಿ ಪಾಟೀಲ ಇವರ ಹಾಡುಗಾರಿಕೆಗೆ ಶ್ರೀ ರೋಹಿದಾಸ್ ಪರಬ್ ತಬಲದಲ್ಲಿ, ಶ್ರೀ ಅನೈ ಘಾಟೆ ಹಾರ್ಮೋನಿಯಂ ಮತ್ತು ಶ್ರೀ ವಾಸೀಮ್ ಖಾನ್ ಸಾರಂಗಿ ಸಾಥ್ ನೀಡಲಿದ್ದಾರೆ. ಬೆಂಗಳೂರಿನ ಶ್ರೀ ಕೌಶಿಕ್ ಐತಾಳ್ ಇವರ ಹಾಡುಗಾರಿಕೆಗೆ ಡಾ. ಉದಯ್ ಕುಲಕರ್ಣಿ ತಬಲದಲ್ಲಿ ಮತ್ತು ಶ್ರೀ ಸುಭಾಷ್ ಫತರ್ಪೆಕರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಕಾರ್ಕಳ : ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಹಾಗೂ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ‘ರಾಷ್ಟ್ರೀಯ ಚಿಂತನೆ –ಕನಕ ವೈಚಾರಿಕತೆಯ ಸೊಬಗು’ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 16-03-2024ರಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಿಯೋ ವಿಶುವಲ್ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ಈ ವಿಚಾರ ಸಂಕಿರಣವನ್ನು ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಉದ್ಘಾಟನೆ ಮಾಡಲಿರುವರು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿ.ಎ. ಶಿವಾನಂದ ಪೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಡುಪಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಗಂಟೆ 10-45ರಿಂದ ನಡೆಯುವ ಚಿಂತನೆ 1ರಲ್ಲಿ ‘ಕನಕ ಕೀರ್ತನೆ – ದೇಸೀ ಚಿಂತನೆಯ ವೈಶಿಷ್ಟ್ಯ’, ಚಿಂತನೆ…
ಬೆಂಗಳೂರು: 2024ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ.ಎಚ್.ವಿಶ್ವ ನಾಥ್ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ಪ್ರಶಸ್ತಿ’ ಗೆ ವಿಶೇಷ ದೃಷ್ಟಿ ಚೇತನ ಲೇಖಕರಾದ ರಮಾ ಫಣಿ ಭಟ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ದೃಷ್ಟಿ ವಿಶೇಷ ಚೇತನ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಡಾ. ಎಚ್. ವಿಶ್ವನಾಥ್ ಅವರು ಈ ಪುರಸ್ಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದು, ಪರಿಷತ್ತಿನ ಅನನ್ಯವಾದ ಪ್ರಶಸ್ತಿ ಎಂಬ ಹೆಗ್ಗಳಿಕೆ ಈ ಪುರಸ್ಕಾರಕ್ಕಿದೆ. ರಮಾ ಫಣಿ ಭಟ್ ಗೋಪಿಯವರು ಎಂ.ಎ ಮತ್ತು ಎಂ.ಕಾಂ. ಹೀಗೆ ಎರಡು ಸ್ನಾತಕೋತ್ತರ ಪದವಿಯನ್ನು ಪಡೆದವರಾಗಿದ್ದು ಬದುಕನ್ನು ಸವಾಲಾಗಿ ತೆಗೆದುಕೊಂಡ ಸೃಜನಶೀಲ ಬರಹಗಾರರಾಗಿದ್ದಾರೆ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿದ್ದು , ಚಂದನ, ಎಫ್. ಎಂ. ವಾಹಿನಿಗಳೂ ಸೇರಿದಂತೆ ಹಲವೆಡೆ ಕವಿಗೋಷ್ಟಿಗಳಲ್ಲಿ ತಮ್ಮ ಕವಿತೆಗಳನ್ನು ವಾಚಿಸಿದ್ದಾರೆ. ‘ಭಾವಲೋಕ’ ಮತ್ತು ‘ಆಕಾಶ…
ಬೆಂಗಳೂರು : 2024ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿಗೆ ಹಿರಿಯ ಬರಹಗಾರರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ ಮತ್ತು ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ದತ್ ಸ್ಟೀಫನ್ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಕನ್ನಡದಲ್ಲಿಯೇ ಕ್ತೈಸ್ತ ಪ್ರಾರ್ಥನೆಗಳು ನಡೆಯ ಬೇಕು ಎಂದು ಹೋರಾಟ ಮಾಡಿದ ಫಾದರ್ ಚಸರಾ ಎಂದೇ ಸಾಂಸ್ಕೃತಿಕ ವಲಯಗಳಲ್ಲಿ ಚಿರಪರಿಚಿತರಾದ ಫಾದರ್ ಚೌರಪ್ಪ ಸೆಲ್ವರಾಜ್ ಚರ್ಚ್ ಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ ಮತ್ತು ಸಂಗೀತ ರೂಪುಗೊಳ್ಳಲು ಶ್ರಮಿಸಿದವರು. ‘ಇಕ್ಕಟ್ಟಿಗೆ ಸಿಲುಕಿಸಿ ಬಿಟ್ಟೆ ಕ್ರಿಸ್ತಾ’ ‘ಅದುಮಿಟ್ಟ ನೆನಪಿನ ಪುಟಗಳಿಂದ’ ಇವರ ಪ್ರಮುಖ ಕೃತಿಗಳು. ಅನೇಕ ಕ್ರೈಸ್ತ…
ಪಡುಬಿದ್ರಿ : ನಟೇಶ ನೃತ್ಯನಿಕೇತನ ಉಚ್ಚಿಲದ ವಿಂಶತಿ ವಾರ್ಷಿಕೋತ್ಸವವು ದಿನಾಂಕ 08-03-2024ರಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಆವರಣದಲ್ಲಿ ನಡೆಯಿತು. ವಿದುಷಿ ವೀಣಾ ಎಂ. ಸಾಮಗ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮನ್ನು ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಅರ್ಚಕ ಗೋವಿಂದ ರಾಜ್ ಭಟ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ “ಸಂಸ್ಕಾರಯುತ ಮಾನವ ಸಂಪನ್ಮೂಲ ದೇಶದ ಆಸ್ತಿ. ಪಾಶ್ಚಿಮಾತ್ಯದೆಡೆಗೆ ಮಕ್ಕಳು ವಾಲುತ್ತಿರುವ ಈ ಸಂದರ್ಭದಲ್ಲಿ ನಮ್ಮ ನೆಲದ ಸಂಸ್ಕೃತಿ, ಸಂಗೀತದ ಅಭಿರುಚಿ ಬೆಳೆಸುವುದು ಅನಿವಾರ್ಯ. ಐತಿಹಾಸಿಕ ಸಾಂಸ್ಕೃತಿಕ ನೃತ್ಯ ಪ್ರಾಕಾರವಾದ ಭರತನಾಟ್ಯವನ್ನು ನೂರಾರು ಮಕ್ಕಳಿಗೆ ಕಲಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕೀರ್ತಿ ನಟೇಶ ನೃತ್ಯ ನಿಕೇತನ ಸಂಸ್ಥೆಗಿದೆ.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಪತ್ರಿಕಾರಂಗದಲ್ಲಿ ಕಾಪು ತಾಲೂಕು ಪತ್ರಕರ್ತರಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಸಂಗೀತ ಕ್ಷೇತ್ರದಲ್ಲಿ ಶರತ್ ಉಚ್ಚಿಲ,…