Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಸಂಸ್ಕಾರ ಭಾರತೀ ದ. ಕ. ಜಿಲ್ಲೆ ಪುತ್ತೂರು ವಿಭಾಗ ಇದರ ವತಿಯಿಂದ ಆಯೋಜಿಸಲ್ಪಟ್ಟ ತ್ಯಾಗರಾಜ ಆರಾಧನಾ ಮಹೋತ್ಸವವು ದಿನಾಂಕ 12-3-2024ನೇ ಮಂಗಳವಾರದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಭಕ್ತಿ, ಭಾವಪೂರ್ಣ ಹಾಗೂ ವಿಜೃಂಭಣೆಯಿಂದ ಜರುಗಿತು. ಹಿರಿಯ ಸದಸ್ಯರು ಹಾಗೂ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಶ್ರೀಮತಿ ವತ್ಸಲಾ ರಾಜ್ಞಿ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ, ಪುತ್ತೂರಿನ ವಿವಿಧ ಸಂಗೀತ ಶಾಲಾ ಗುರುಗಳು ಹಾಗೂ ವಿದುಷಿಯರಾದ, ವೀಣಾ ರಾಘವೇಂದ್ರ, ವಿದ್ಯಾ ಈಶ್ವರ ಚಂದ್ರ, ರಮಾ ಪ್ರಭಾಕರ್, ಪ್ರೀತಿಕಲಾ, ಪಾರ್ವತಿ ಹೊಸಮೂಲೆ, ಸ್ವರ್ಣ ಭಟ್, ಗೀತಾ ಸಾರಡ್ಕ ಮುಂತಾದವರು ಭಾಗವಹಿಸಿ, ಪಂಚರತ್ನ ಕೀರ್ತನೆ ಗೋಷ್ಠಿ ಗಾಯನವನ್ನು ನಡೆಸಿಕೊಟ್ಟರು. ವಿದುಷಿ ಮೇಘನಾ ಪಾಣಾಜೆ, ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ, ಶ್ರೀರಾಗ, ಭಾರತಿ ಶಶಿ ಹಾಗೂ ಇತರ ಕಲಾವಿದರು ಮುಂಚೂಣಿಯಲ್ಲಿದ್ದು ಸಹಕರಿಸಿದರು. ಹಿಮ್ಮೇಳನವಾದ ಮೃದಂಗದಲ್ಲಿ ಶ್ಯಾಮ ಭಟ್ ಸುಳ್ಯ ಮತ್ತು ಪ್ರಸನ್ನ ಭಟ್ ಬಲ್ನಾಡು, ವೀಣೆಯಲ್ಲಿ ಮಧುಲಿತಾ…
ಉಡುಪಿ : ಚುಟುಕು ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಲೇಖಕಿ ಸುಲೋಚನಾ ಪಚ್ಚಿನಡ್ಕ ಅವರನ್ನು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅವರು ನೇಮಕ ಮಾಡಿರುತ್ತಾರೆ. ಮುಂದಿನ ಆದೇಶದವರೆಗೆ ಸುಲೋಚನಾ ಪಚ್ಚಿನಡ್ಕ ಅವರು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ‘ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ’ ಎಂಬ ಧ್ಯೇಯದೊಂದಿಗೆ ಚುಟುಕು ಸಾಹಿತ್ಯ ಪರಿಷತ್ತು 23 ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದಾದ್ಯಂತ ಚುಟುಕು ಸಾಹಿತ್ಯದ ಏಳಿಗೆಗೆ ಶ್ರಮಿಸುತ್ತಾ ಕಾರ್ಯಾಚರಿಸುತ್ತಿದೆ. 25 ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸುಲೋಚನಾ ಪಚ್ಚಿನಡ್ಕ ಅವರು ಒಂದು ಕವನ ಸಂಕಲನ, ಎರಡು ಆತ್ಮ ಚರಿತ್ರೆ, ಒಂದು ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ತುಳು ಕಥಾ ಸಂಕಲನ ‘ತುಡರ್’ ಪ್ರಕಟಣೆಯ ಹಂತದಲ್ಲಿದೆ. ನೂರಾರು ಸಾಹಿತ್ಯ ಗೋಷ್ಠಿಗಳಲ್ಲಿ ಸಾಹಿತಿಯಾಗಿ ಭಾಗವಹಿಸಿದ ಅನುಭವವನ್ನು ಹೊಂದಿದ್ದಾರೆ.
ಮಂಗಳೂರು : ಪ್ರವಚನಕಾರ ಹರಿದಾಸ ದಿ. ಪೇಜಾವರ ವಿಜಯಾನಂದ ರಾವ್ ಸಂಸ್ಮರಣಾರ್ಥ, ಹರಿಕಥಾ ಪರಿಷತ್, ಶೇಣಿ ಚಾರಿಟೇಬಲ್ ಟ್ರಸ್ಟ್, ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ಶ್ರೀ ರಮಾನಂದ ಸ್ವಾಮೀ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ‘ದ್ವಾದಶ ಹರಿಕಥಾ ಸತ್ಸಂಗ’ ಕಾರ್ಯಕ್ರಮವು ದಿನಾಂಕ 12-03-2024 ರಂದು ಉದ್ಘಾಟಣೆಗೊಂಡಿತು . ಕಾರ್ಯಕ್ರಮವನ್ನು ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ “ಹರಿಕಥಾ ಕಾರ್ಯಕ್ರಮವು ಕೇವಲ ಮನೋರಂಜನೆಗಾಗಿರದೆ ಸಮಾಜದಲ್ಲಿ ಆಧ್ಯಾತ್ಮ ಹಾಗೂ ಪುರಾಣ ಚಿಂತನೆಗಳ ಒಂದು ಸಂಸ್ಕೃತಿ ಶಿಕ್ಷಣ ಕಲೆಯಾಗಿದೆ. ನಾಡಿನ ಎಲ್ಲ ಧಾರ್ಮಿಕ ಕ್ಷೇತ್ರಗಳು ನಡೆಸುವ ಉತ್ಸವಗಳ ಸಾಂಸ್ಕೃತಿಕ ಸರಣಿಯಲ್ಲಿ ಹರಿಕಥೆಯಂಥ ಕಲೆಗೆ ಪ್ರಾಶಸ್ತ್ಯ ನೀಡಿ ಪ್ರೋತ್ಸಾಹಿಸಬೇಕು.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಸಾಧಕರ ಸಂಸ್ಮರಣೆ, ಸನ್ಮಾನಗಳು ಸೇರಿದಂತೆ ಉಪಯುಕ್ತ ಚಟುವಟಿಕೆಗಳನ್ನು ಮಾಡುವಂತದ್ದು ಸಾಂಸ್ಕೃತಿಕ ಸಂಘಟನೆಗಳ ಕರ್ತವ್ಯ. ಈ ನಿಟ್ಟಿನಲ್ಲಿ ನಿರಂತರ ಕಾರ್ಯಶ್ರದ್ಧೆಯಲ್ಲಿರುವ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ…
ಮಂಗಳೂರು : ಉರ್ವ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಅಂಗವಾಗಿ ‘ನೃತ್ಯಾಮೃತ’ ಸರಣಿ ಕಾರ್ಯಕ್ರಮ ಹಿನ್ನೆಲೆ ಪಾವಂಜೆ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ‘ನೃತ್ಯ ಲಹರಿ’ ಕಾರ್ಯಕ್ರಮವು ದಿನಾಂಕ 03-03-2024 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹವ್ಯಾಸಿ ಯಕ್ಷಗಾನ ಕಲಾವಿದ ಡಾ. ಸತ್ಯಮೂರ್ತಿ ಐತಾಳ್ “ಭರತನಾಟ್ಯ ಕಲೆಯು ಕಲಾವಿದರಿಗೆ ಮಾತ್ರವಲ್ಲದೆ ಕಲಾ ಪ್ರೇಕ್ಷಕರನ್ನೂ ಆಧ್ಯಾತ್ಮಿಕ ಆನಂದ ಕಡಲಲ್ಲಿ ತೇಲಿಸಿ ಆತ್ಮೋನ್ನತಿಗೆ ಪೂರಕವಾದ ಭಾವಾನಂದ ನೀಡುತ್ತದೆ. ಅದು ಭರತನಾಟ್ಯ ಕಲೆಯ ಶಕ್ತಿ.” ಎಂದರು. ಉದ್ಯಮಿ ವಿಶ್ವೇಶ್ವರ ಬದವಿದೆ ಹೊಸಬೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಬೈಕಾಡಿ ಶ್ರೀನಿವಾಸ ರಾವ್, ವಿದುಷಿ ಸುಲೋಚನಾ ವಿ. ಭಟ್, ವಿದುಷಿ ವೀಣಾ ಎಂ. ಸಾಮಗ ಉಡುಪಿ, ವೈ. ರಾಘವೇಂದ್ರ ರಾವ್ ಸುರತ್ಕಲ್, ನಯನ ಹೆಜಮಾಡಿ, ಸಂಸ್ಥೆಯ ಟ್ರಸ್ಟಿ ರತ್ನಾಕರ ರಾವ್, ತ್ರಿಂಶೋತ್ಸವ ಸಮಿತಿ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಉಪಸ್ಥಿತರಿದ್ದರು. ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಖಂಡಿಗೆ-ಚೇಳಾಯ್ರು , ಸನಾತನ ನಾಟ್ಯಾಲಯ ಮಂಗಳೂರು, ನೃತ್ಯಾಂಗನ್ ಮಂಗಳೂರು,…
ಬೆಳ್ತಂಗಡಿ : ಸಾಹಿತಿ ಹಾಗೂ ಉದಯವಾಣಿ ಪತ್ರಿಕೆಯ ಬೆಳ್ತಂಗಡಿ ತಾಲೂಕಿನ ಬಿಡಿ ವರದಿಗಾರರಾಗಿ 30 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಪ್ರೊ. ನಾ’ವುಜಿರೆ (ಪ್ರೊ. ಎನ್. ನಾಗರಾಜ ಪೂವಣಿ ) ಅಲ್ಪಕಾಲದ ಅನಾ ರೋಗ್ಯದಿಂದ ದಿನಾಂಕ 11-03-2024ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಅವರಿಗೆ 87ವರ್ಷ ವಯಸ್ಸಾಗಿತ್ತು. ಉಜಿರೆಯ ವಿದ್ಯಾನಗರದಲ್ಲಿ ವಾಸವಾಗಿದ್ದ ಅವರು ಎಸ್. ಡಿ. ಎಂ. ಸ್ವಾಯತ್ತ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ನಾರಾವಿ ಗ್ರಾಮದ ಹೊಸಬೆಟ್ಟಿನಲ್ಲಿ 12-02-1938ರಂದು ಜನಿಸಿದ ಅವರು ಸಿದ್ಧವನ ಗುರುಕುಲದ ವಿದ್ಯಾರ್ಥಿಯಾಗಿ ಎಸೆಸೆಲ್ಸಿ ಉತ್ತೀರ್ಣರಾದ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಕನ್ನಡ ಮತ್ತು ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಉಜಿರೆಯ ಪ್ರೌಢ ಶಾಲೆಯಲ್ಲಿ ಹಿಂದಿ ಪಂಡಿತರಾಗಿ ಬಳಿಕ ಎಸ್. ಡಿ. ಎಂ. ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದರು. ಬಳಿಕ ಮಂಜುವಾಣಿ ಮಾಸಪತ್ರಿಕೆಯ ಸಹ ಸಂಪಾದಕರಾಗಿದ್ದರಲ್ಲದೇ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಾಹಿತಿಯಾಗಿ,…
ಮಂಗಳೂರು : ಕನ್ನಡ ಸಂಘ ಮತ್ತು ಕನ್ನಡ ವಿಭಾಗ ಸಂತ ಅಲೋಶಿಯಸ್ ( ಪರಿಗಣಿತ ವಿಶ್ವವಿದ್ಯಾನಿಲಯ) ಮಂಗಳೂರು. ಇವರ ಸಹಭಾಗಿತ್ವದೊಂದಿಗೆ ‘ಗಡಿನಾಡ ಸಾಹಿತ್ಯ ದಿಂಡಿಮ-2024’ ಕಾರ್ಯಕ್ರಮವು ದಿನಾಂಕ 14-03-2024 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿರುವ ರೇಡಿಯೊ ಸಾರಂಗ್ ಸಮೀಪದ ಸಾನಿಧ್ಯ ಸಭಾಂಗಣದಲ್ಲಿ ನಡೆಯಲಿದೆ. ಕಥಾಬಿಂದು ಪ್ರಕಾಶನದ ಶ್ರೀ ಪಿ. ವಿ. ಪ್ರದೀಪ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಲಕ್ಷ್ಮೀ ವಿ.ಭಟ್ ಅವರ ‘ಅಷ್ಟದ್ರವ್ಯ’ ಹಾಗೂ ‘ಝೇಂಕಾರ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಡಾ. ಧನಂಜಯ ಕುಂಬ್ಳೆಯವರು ‘ಅಷ್ಟದ್ರವ್ಯ’ ಕೃತಿ ಲೋಕಾರ್ಪಣೆಗೊಳಿಸಿ, ಅವಲೋಕಿಸಲಿದ್ದು, ಝೇಂಕಾರ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಲೋಕಾರ್ಪಣೆ ಗೊಳಿಸಲಿದ್ದಾರೆ.
ಕಾಸರಗೋಡು : ಚಿನ್ಮಯ ಮಿಷನಿನ ಸಂಸ್ಥಾಪಕ ಚಿನ್ಮಯಾನಂದ ಸ್ವಾಮೀಜಿಯವರ 108ನೇ ಜಯಂತಿಯ ಪ್ರಯುಕ್ತ ಚಿನ್ಮಯ ವಿದ್ಯಾಲಯದಲ್ಲಿ ‘ಚಿನ್ಮಯ ಮಾತೃ ಸಂಸ್ಕೃತಿ ಸೇವಾ ಸಮಿತಿ’ ಯ ಸಂಯುಕ್ತ ಆಶ್ರಯದೊಂದಿಗೆ “ಮೆಗಾ ತಿರುವಾದಿರ”ವು ದಿನಾಂಕ 06-03-2024 ರಂದು ಪ್ರದರ್ಶನಗೊಂಡಿತು. ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಾತೃ ಸಂಸ್ಕೃತಿ ಸೇವಾ ಸಮಿತಿಯ ಸದಸ್ಯರು, ವಿದ್ಯಾಲಯದ ಅಧ್ಯಾಪಿಕೆಯರು, ಮಾತೆಯರು ಮತ್ತು ವಿದ್ಯಾರ್ಥಿನಿಯರನ್ನೊಳಗೊಂಡ 108ಸದಸ್ಯರ ‘ಮೆಗಾ ತಿರುವಾದಿರ’ವು ನೋಡುಗರ ಕಣ್ಮನವನ್ನು ಸೆಳೆಯಿತು. ಬ್ರಹ್ಮಚಾರಿಣಿ ದಿಶಾ ಚೈತನ್ಯ, ಚಿನ್ಮಯ ಮಿಷನಿನ ಸದಸ್ಯರು, ಪ್ರಾಂಶುಪಾಲರಾದ ಸುನಿಲ್ ಕುಮಾರ್ ಕೆ. ಸಿ, ಉಪ ಪ್ರಾಂಶುಪಾಲರಾದ ಪ್ರಶಾಂತ್ ಬೆಳಿಂಜ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್. ಆರ್. ಮತ್ತು ಸಿಂಧು ಶಶೀಂದ್ರನ್ ಉಪಸ್ಥಿತರಿದ್ದರು. ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿದರು. ‘ಮೆಗಾ ತಿರುವಾದಿರ’ದಲ್ಲಿ ಭಾಗವಹಿಸಿದವರೆಲ್ಲರಿಗೂ ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು…
ಮಂಗಳೂರು : ಕರಾವಳಿ ಲೇಖಕಿಯರ, ವಾಚಕಿಯರ ಸಂಘ (ರಿ.) ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಇವರು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸಿದ ದತ್ತಿ ಪ್ರಶಸ್ತಿ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭವು ದಿನಾಂಕ 20-03-2024ರಂದು ಅಪರಾಹ್ನ 1.30ರಿಂದ ಮಂಗಳೂರಿನ ಬಲ್ಮಠದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಂಶುಪಾಲರಾದ ಡಾ. ಜಗದೀಶ್ ಬಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಡಾ. ವಿದ್ಯಾ ಕುಮಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾರ್ರು ಸ್ವಾಗತ ಮತ್ತು ಪ್ರಸ್ತಾವನೆ ಗೈಯ್ಯಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಇಸ್ಮಾಯಿಲ್, ತುಳು ಮತ್ತು ಕನ್ನಡ ಲೇಖಕರಾದ ಶ್ರೀ ಬೆನೆಟ್ ಜಿ. ಅಮ್ಮನ್ನ ಹಾಗೂ ಹಿರಿಯ ಲೇಖಕಿಯಾದ ಶ್ರೀಮತಿ ಮಮತಾ ರಾವ್ ಭಾಗವಹಿಸಲಿದ್ದಾರೆ.…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 18-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರದ್ಧಾ ಶ್ರೀನಿವಾಸ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಮತಿ ವಿದ್ಯಾ ಮತ್ತು ಶ್ರೀ ಕೆ.ಪಿ. ಶ್ರೀನಿವಾಸ್ ದಂಪತಿಗಳ ಸುಪುತ್ರಿಯಾಗಿರುವ ಶ್ರದ್ಧಾರವರು ಮೂಲತಃ ಕರ್ನಾಟಕ ಶೈಲಿಯ ಗಾಯನ, ಭರತನಾಟ್ಯ ಮತ್ತು ಯೋಗ ಮುಂತಾದ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ದಕ್ಷಿಣ ಕನ್ನಡ ಕುಟುಂಬ ವರ್ಗದ ಹಿನ್ನಲೆಯಿಂದ ಬಂದವರು. ಏಳನೇ ವರ್ಷದಿಂದಲೇ ಗುರುಗಳಾದ ಶ್ರೀಯುತ ಕಿರಣ್ ಸುಬ್ರಹ್ಮಣ್ಯಮ್ ಹಾಗೂ ಶ್ರೀಮತಿ ಸಂಧ್ಯಾ ಕಿರಣ್ ಇವರ ಮಾರ್ಗದರ್ಶನದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು. ಗುರುಗಳ ತಂಡದೊಂದಿಗೆ ಭಾರತದ ಅನೇಕ ಪ್ರಖ್ಯಾತ ಸ್ಥಳಗಳಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮ ಹಾಗೂ ಉತ್ಸವಗಳಲ್ಲಿ…
ಮಂಗಳೂರು : ಅಡ್ಯಾರ್ ಗಾರ್ಡನ್‌ನಲ್ಲಿ ದಿನಾಂಕ 26-05-2024ರಂದು ನಡೆಯಲಿರುವ ‘ಯಕ್ಷಧ್ರುವ ಪಟ್ಲ ಸಂಭ್ರಮ’ದ ಸಿದ್ಧತೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯು ದಿನಾಂಕ 05-03-2024ರಂದು ಪತ್ತುಮುಡಿ ಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ “ಯಕ್ಷಧ್ರುವ ಯಕ್ಷ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿದೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಯಕ್ಷ ಶಿಕ್ಷಣದಲ್ಲಿ ಸುಮಾರು 4,000 ಮಕ್ಕಳು ಭಾಗವಹಿಸಿದ್ದರು. ಯಕ್ಷ ಕಲೆ ಪಸರಿಸುವ ದೃಷ್ಟಿಯಿಂದ ಯುರೋಪ್ ರಾಷ್ಟ್ರದಲ್ಲಿ ಈ ವರ್ಷ ಪಟ್ಲ ಫೌಂಡೇಶನ್ ಟ್ರಸ್ಟಿನ ಘಟಕ ರಚನೆಯಾಗಲಿದೆ. ಪಟ್ಲ ಫೌಂಡೇಶನ್ ಟ್ರಸ್ಟ್ ಈವರೆಗೆ 24 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಿದೆ. ಯಕ್ಷಾಶ್ರಯ ವಸತಿ ಯೋಜನೆಯಡಿ 25ನೇ ಮನೆಯ ಹಸ್ತಾಂತರ ದಿನಾಂಕ 22-03-2024ರಂದು ಕುಂಬಳೆಯ ಸಮೀಪ ನಡೆಯಲಿದೆ. ಸುಮಾರು 200 ಮನೆಗಳ ದುರಸ್ತಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಆರೋಗ್ಯ, ವಿದ್ಯಾರ್ಥಿವೇತನ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಕಲಾವಿದರಿಗೆ ಕೋಟ್ಯಂತರ ರೂಪಾಯಿ ನೆರವು ನೀಡಲಾಗಿದೆ.…