Author: roovari

ಮಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಕಥಾಬಿಂದು ಪ್ರಕಾಶನ ಮಂಗಳೂರು ಇದರ ಸಹಯೋಗದಲ್ಲಿ ‘ಸಾಹಿತ್ಯ ಸುಗ್ಗಿ’ ಕಾರ್ಯಕ್ರಮವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ‘ಸಾನಿಧ್ಯ’ ಸಭಾಂಗಣದಲ್ಲಿ 27 ಜುಲೈ2024 ರಂದು ನೆರವೇರಿತು. ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಆಲ್ವೇನ್ ಡಿ’ಸೋಜಾ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮಾಹಿತಿ ಮತ್ತು ತಂತ್ರ ಜ್ಞಾನ ಇಂಜಿನಿಯರ್ ಆದ  ಶ್ರೀ ಬಿ. ಮಹಾಬಲ ತಿಲಕ ಇವರು  ಬಿ. ಸತ್ಯವತಿ ಭಟ್ ಕೊಳ್ಚಪ್ಪು ವಿರಚಿತ ‘ಮತ್ತೆ ನಕ್ಕಳು ಪ್ರಕೃತಿ’ ಕೃತಿ ಬಿಡುಗಡೆ ಗೊಳಿಸಿದರು. ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಹಾಗೂ ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ಇವರಿಗೆ ಕೃತಿ ಕರ್ತೃ ಬಿ. ಸತ್ಯವತಿ ಭಟ್ ಕೊಳ್ಚಪ್ಪೆ ಕೃತಿಯ ಪ್ರತಿ ನೀಡುವ ಮೂಲಕ ಲೋಕಾರ್ಪಣೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ವಸಂತ್ ಕುಮಾರ್ ಪೆರ್ಲ, ಕನ್ನಡ ಪ್ರಾಧ್ಯಾಪಕರಾದ ಡಾ.…

Read More

ಬ್ರಹ್ಮಾವರ :  ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು 27 ಜುಲೈ2024ರಂದು ನಡೆಯಿತು. ತರಗತಿಯನ್ನು ಉದ್ಘಾಟಿಸಿದ ಪ್ರಸಾಧನ ತಜ್ಞರಾದ ಕೃಷ್ಣಮೂರ್ತಿ ಮಾತನಾಡಿ “ಯಕ್ಷಗಾನ ಕಲಿಕೆಯಿಂದ ಶಿಸ್ತು, ಆತ್ಮವಿಶ್ವಾಸ ಮಾತ್ರವಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳು ಸದೃಢರಾಗುತ್ತಾರೆ.” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಇದರ ಸದಸ್ಯರಾದ ಗಣೇಶ್ ಬ್ರಹ್ಮಾವರ, ಶಾಲಾ ಹಳೆ ವಿದ್ಯಾರ್ಥಿ ಸಾಗರ್ ಜೋಗಿ, ಗುರುಗಳಾದ ಮಂಜುನಾಥ್ ಐರೋಡಿ, ಶಾಲಾ ಪ್ರಾಂಶುಪಾಲರಾದ ವಂದನೀಯ ಸಿಸ್ಟರ್ ಕನುಕಾ, ಯಕ್ಷಗಾನ ಉಸ್ತುವಾರಿ ಶಿಕ್ಷಕಿ ಅನುರಾಧ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿ ಪ್ರಗತಿ ನಿರೂಪಿಸಿ, ಮಾನ್ವಿ ವಂದನಾರ್ಪಣೆಗೈದರು.

Read More

ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-47’ ಕಾರ್ಯಕ್ರಮದಡಿಯಲ್ಲಿ ಗುರುಪರಂಪರಾ ಸಂಗೀತ ಸಭಾ ಕುಂದಾಪುರ ಇದರ ವಾರ್ಷಿಕ ಕಾರ್ಯಕ್ರಮವು 28 ಜುಲೈ2024ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಗೀತ ಗುರು ಸತೀಶ್ ಭಟ್ ಮಾಳಕೋಡು ಮಾತನಾಡಿ “ಸಂಗೀತದ ದೀಪ ಜಗತ್ತನ್ನೇ ಬೆಳಗಿವೆ. ಮಾನಸಿಕ ಸಮತೋಲನಕ್ಕಾಗಿ ಸಂಗೀತವು ನೆರವಾಗುತ್ತದೆ. ಸಂಗೀತದ ಬೆಳಕು ಪ್ರಪಂಚದಾದ್ಯಂತ ಪಸರಿಸಲಿ. ಮಾನವನಿಗೆ ಸಂಗೀತವೇ ಉಸಿರಾಗಬೇಕು. ಸಕಲ ಜೀವರಾಶಿಯೂ ಸಂಗೀತವನ್ನು ಆಸ್ವಾದಿಸುತ್ತದೆ.” ಎಂದರು. ಸಂಗೀತ ವಿದುಷಿ ಪ್ರತಿಮಾ ಭಟ್ ಗೋಪಾಡಿ, ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಕಾರ್ಯದರ್ಶಿ ವೆಂಕಟೇಶ ವೈದ್ಯ, ನಾಗರಾಜ ಭಟ್, ವೀಣಾ ನಾಯಕ್, ಕುಮಾರಿ ನೇಹಾ ಹೊಳ್ಳ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗುರುಪರಂಪರಾ ಸಂಗೀತ ಸಭಾ ಶಿಷ್ಯರಿಂದ ಹಿಂದೂಸ್ಥಾನಿ ಸಂಗೀತ ಗಾಯನ ರಂಗದಲ್ಲಿ ಪ್ರಸ್ತುತಿಗೊಂಡಿತು.

Read More

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕ ಹಾಗೂ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವು 27 ಜುಲೈ2024ರಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಮಾತನಾಡಿ “ಪ್ರತಿದಿನ ಪತ್ರಿಕೆಗಳನ್ನು ಓದುವುದರಿಂದ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಪರಿಣಾಮಕಾರಿ ಸಂವಹನ ಹಾಗೂ ಶಬ್ದ ಸಂಪತ್ತಿನ ವೃದ್ಧಿ ಸಾಧ್ಯ. ಇಂದಿನ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ವಿವಿಧ ನವ ಮಾಧ್ಯಮಗಳು ನಕಾರತ್ಮಕ, ಅತಿರಂಜಿತ ಸುದ್ದಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿವೆ. ಆದರೆ ಪತ್ರಿಕೆಗಳ ಮೂಲಕ ದೊರೆಯುವ ಸಕಾರಾತ್ಮಕ ಮತ್ತು ಮಹತ್ವಪೂರ್ಣ ದಾಖಲೆಗಳು ಜ್ಞಾನದ ಜೊತೆ ಓದಿನ ಸುಖವನ್ನು ನೀಡುತ್ತವೆ. ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಸಂಪಾದಕೀಯ, ಸ್ಥಳೀಯ, ರಾಜ್ಯ ರಾಷ್ಟ್ರ ಮಟ್ಟದ ಸುದ್ದಿಗಳ ಜೊತೆಗೆ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ಆಸಕ್ತಿದಾಯಕ ಸಂಗತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.” ಎಂದು ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆ…

Read More

ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಪತ್ರಿಕಾ ವರದಿಗಾರಿಕೆ ಕಾರ್ಯಾಗಾರವು 27 ಜುಲೈ2024ರಂದು ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ರವಿ ಮುಂಗ್ಲಿಮನೆ ಮಾತನಾಡಿ “ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ಕ್ರಿಯಾಶೀಲ ವ್ಯಕ್ತಿಗಳಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ. ನೈಜತೆಯ ವರದಿ ಮಾಡುವುದು ಕೂಡಾ ಒಂದು ರೀತಿಯ ಸೇವೆಯೇ ಆಗಿದ್ದು ವಿದ್ಯಾರ್ಥಿಗಳು ಇಂತಹ ಕೆಲಸಗಳಲ್ಲಿ ಭಾಗಿಗಳಾಗಿ ಸಮಾಜಸೇವೆ ಹಾಗೂ ದೇಶಸೇವೆ ಮಾಡಬೇಕು.” ಎಂದು ನುಡಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಗಾರದ ಉದ್ಘಾಟನಾ ಸಮರಸಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ ಎನ್‌. ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಮಾತನಾಡಿ “ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಸಾಹಿತ್ಯಸಂಘ ಆರಂಭಿಸುವುದು ಕಾಲೇಜು ಆಡಳಿತ ಮಂಡಳಿಯ ಆಶಯವಾಗಿದ್ದು,…

Read More

ಮಂಗಳೂರು: ಲವಿ ಗಂಜಿಮಠ ಅವರು ಕೊಂಕಣಿ ಭಾಷೆಯಲ್ಲಿ ಬರೆದ ಕಿರು ಕಥೆಗಳ ಸಂಗ್ರಹ ‘ಆಗುಂಬೆಚಿ ಘುಂವ್ಡಿ’ ಪುಸ್ತಕದ ಲೋಕರ್ಪಣಾ ಸಮಾರಂಭವು 21 ಜುಲೈ 2024ನೇ ಭಾನುವಾರದಂದು ಮಂಗಳೂರಿನ ಸಂದೇಶ ಸಭಾಭವನದಲ್ಲಿ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ನಡೆದ ಕೊಂಕಣಿ ಲೇಖಕರ ಸಹಮಿಲನದಲ್ಲಿ ಅಕಾಡೆಮಿ ಅಧ್ಯಕ್ಷ ಸ್ಪ್ಯಾನಿ ಅಲ್ವಾರಿಸ್ ಕೃತಿ ಲೋಕಾರ್ಪಣೆಗೊಳಿಸಿದರು. ಮೈಕಲ್ ಡಿಸೋಜ ಇವರ ವಿಷನ್ ಕೊಂಕಣಿ ಪುಸ್ತಕ ಯೋಜನೆ ಅನುದಾನದಲ್ಲಿ ಮುದ್ರಣಗೊಂಡ ಈ ಪುಸ್ತಕವು ಲವಿ ಗಂಜಿಮಠ ಇವರ ನಾಲ್ಕನೇ ಸಾಹಿತ್ಯ ಕೃತಿಯಾಗಿದೆ. ಕಾರ್ಯಕ್ರಮದಲ್ಲಿ ಕೆ.ಎಲ್.ಎಸ್. ಸಂಚಾಲಕ ರಿಚರ್ಡ್ ಮೋರಸ್ ಅಕಾಡೆಮಿ ಸದಸ್ಯರಾದ ಸ್ವಪ್ನಾ, ನವೀನ್ ಲೋಬೊ, ರೋನೊ ಕ್ರಾಸ್ತಾ ಕೆಲರಾಯ್, ಸಮರ್ಥ್ ಭಟ್ ಹಾಗೂ ಸಂಪನ್ಮೂಲ ವ್ಯಕ್ತಿ ಐರಿನ್ ರೆಬೆಲ್ಲೊ ಉಪಸ್ಥಿತರಿದ್ದರು.

Read More

ಹುಬ್ಬಳ್ಳಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಇವರ ಸಂಯುಕ್ತ ಆಶ್ರಯದಲ್ಲಿ 22 ಜುಲೈ 2024ನೇ ಸೋಮವಾರದಂದು ಸೇಡಿಯಾಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರಶಸ್ತಿ ಪುರಸ್ಕೃತರಾದ ಡಾ. ಬಿ. ವಿ. ಶಿರೂರ ಇವರ ಹುಬ್ಬಳ್ಳಿ ಮಂಜುನಾಥ ನಗರದಲ್ಲಿ ನಿವಾಸದಲ್ಲಿ ನಡೆಯಿತು. ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದ ಡಾ. ಪಾದೇಕಲ್ಲು ವಿಷ್ಣು ಭಟ್ಟ “ನಾಡಿನ ಸಾಕ್ಷಿಪ್ರಜ್ಞೆ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ. ಬಿ. ವಿ. ಶಿರೂರ ಇವರಿಗೆ  ಈ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಶಾಸನ, ಗ್ರಂಥ ಸಂಪಾದನೆ, ಜೈನಸಾಹಿತ್ಯ, ವೀರಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಇವರು ಪ್ರಸಿದ್ಧರಾಗಿದ್ದಾರೆ.” ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ. ವಿ. ಶಿರೂರ “ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವ್ಯಾಕರಣ ಮತ್ತು ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯವುಳ್ಳ ಪಠ್ಯವನ್ನು ವಿಶ್ವವಿದ್ಯಾಲಯಗಳು ಕಡಿತಗೊಳಿಸಿ ಕನ್ನಡ ಭಾಷಾ ಗಟ್ಟಿತನವನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ವರ್ತಮಾನದಲ್ಲಿ ಯುವಕರಿಗೆ…

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಹಿರಿಯರ ವಿಭಾಗ ಇದರ ವತಿಯಿಂದ 12ನೇ ವರ್ಷದ ಡಿಪ್ಲೋಮೊ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ -1 ಐತಿಹ್ಯಮಾಲೆಯ ಕಥೆಗಳ ಆಧಾರಿತ ನಾಟಕ ‘ಇತಿ-ಹ.ಯ’ ಇದರ ಪ್ರದರ್ಶನವನ್ನು ದಿನಾಂಕ 28 ಜುಲೈ 2024ರಂದು ಸಂಜೆ ಗಂಟೆ 4-00 ಮತ್ತು 7-00ಕ್ಕೆ ವಿಜಯನಗರ ಬಿಂಬದ ಸರಳಾಂಗಣದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಬಿ.ಆರ್. ವೆಂಕಟರಮಣ ಐತಾಳ್ ಇವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಸುಷ್ಮಾ ಎಸ್.ವಿ. ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.

Read More

ಬೆಂಗಳೂರು : ನಾಡೋಜ ಪ್ರೊ. ಬರಗೂರು ಸ್ನೇಹ ಬಳಗ ಇದರ ವತಿಯಿಂದ ಪ್ರೊ. ಬರಗೂರು 75 ವರ್ಷ ದಾಟಿದ ಹಿನ್ನೆಲೆಯಲ್ಲಿ ‘ಸಾಂಸ್ಕೃತಿಕ ಸ್ನೇಹ ಗೌರವ ಪುಸ್ತಕಗಳ ಜನಾರ್ಪಣೆ’ ಕಾರ್ಯಕ್ರಮವನ್ನು ದಿನಾಂಕ 28 ಜುಲೈ 2024ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ಡಾ. ಶಮಿತಾ ಮಲ್ನಾಡ್ ಮತ್ತು ತಂಡದವರಿಂದ ಪ್ರೊ. ಬರಗೂರು ರಚಿಸಿದ ಗೀತೆಗಳ ಗಾಯನ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ. ವೀರಪ್ಪ ಮೊಯಿಲಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಯಲ್ಲಪ್ಪ ಹಿಮ್ಮಡಿ ಇವರ ‘ಬರಗೂರ್ ಬುಕ್’ ಮತ್ತು ಡಾ. ರಾಜು ಗುಂಡಾಪುರ ಹಾಗೂ ಬಿ. ರಾಜಶೇಖರಮೂರ್ತಿ ಇವರ ‘ನಮ್ಮ ಬರಗೂರ್ ಮೇಷ್ಟ್ರು’ ಎಂಬ ಕೃತಿಗಳನ್ನು ಕನ್ನಡ ಲೇಖಕರಾದ ಡಾ. ಚಂದ್ರಶೇಖರ ಕಂಬಾರ ಇವರು ಜನಾರ್ಪಣೆಗೊಳಿಸಲಿರುವರು.

Read More

ತೀರ್ಥಹಳ್ಳಿ : ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮೇಲಿನ ಕುರುವಳ್ಳಿಯಲ್ಲಿ ದಿನಾಂಕ 25 ಜುಲೈ 2024ರಂದು ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಥೆ, ಕವನ, ಪ್ರಬಂಧ ರಚನೆ ಮತ್ತು ಮಂಡನೆಯ ಕುರಿತಾದ ಒಂದು ವಿಭಿನ್ನವಾದ ‘ಸಾಹಿತ್ಯ ಕಮ್ಮಟ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಹೆಗಡೆ, ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ ಹಾಗೂ ಆಗಮಿಸಿದ ಮುಖ್ಯ ಅತಿಥಿಗಳು ‘ಕಾವ್ಯ ಕಮ್ಮಟ’ ಕಾರ್ಯಕ್ರಮದ ಮೂಲ ಉದ್ದೇಶಗಳು, ಪ್ರಸ್ತುತ ಸನ್ನಿವೇಶಕ್ಕೆ ಅದರ ಅವಶ್ಯಕತೆಗಳು ಹಾಗೂ ಮಕ್ಕಳು ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಕಾವ್ಯ ಕಮ್ಮಟದ ಮಹತ್ವವನ್ನು ತಿಳಿಸಿಕೊಟ್ಟರು. ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಥೆ, ಕವನ ಮತ್ತು ಪ್ರಬಂಧಕ್ಕೆ ಮೂರು ವಿಭಾಗ ಮಾಡಿ ಪ್ರತ್ಯೇಕ ಕೊಠಡಿಗಳಲ್ಲಿ…

Read More