Subscribe to Updates
Get the latest creative news from FooBar about art, design and business.
Author: roovari
ದೇವೀಕಳೆಯಿಂದ ರಾರಾಜಿಸುತ್ತಿದ್ದ ಪುಟ್ಟ ನೃತ್ಯಕಲಾವಿದೆ ಕುಮಾರಿ ಅದಿತಿ ಗೋಪಾಲ್ ಇವರು ಕೆ.ಇ.ಎ. ಪ್ರಭಾತ್ ರಂಗಮಂದಿರದ ವೇದಿಕೆಯಲ್ಲಿ ತನ್ಮಯತೆಯಿಂದ ನರ್ತಿಸಿದ ದೈವೀಕ ನಾಟ್ಯದ ಶೀರ್ಷಿಕೆ ‘ನರ್ತಿಸು ಆದಿಶಕ್ತಿ’- ಅನ್ವರ್ಥಕವಾಗಿ ಸಾಕಾರಗೊಂಡಿತು. ‘ಚಿತ್ರ ನಾಟ್ಯ ಫೌಂಡೇಶನ್’ ನೃತ್ಯ ಸಂಸ್ಥೆಯ ಸೃಜನಶೀಲ ನೃತ್ಯಗುರು ವಿದುಷಿ ಎಲ್.ಜಿ. ಮೀರಾ ನುರಿತ ಗರಡಿಯಲ್ಲಿ ತರಬೇತಿಯನ್ನು ಪಡೆದ ಅದಿತಿ ತನ್ನ ರಂಗಪ್ರವೇಶದ ಸ್ಮರಣೀಯ ಸಂದರ್ಭದಲ್ಲಿ ಅನೇಕ ದೇವೀ ಕೃತಿಗಳನ್ನು ಭಕ್ತಿಪರವಶತೆಯಿಂದ ಸುಮನೋಹರವಾಗಿ ನರ್ತಿಸಿದಳು. ತಮ್ಮ ಶಿಷ್ಯೆಯ ವಯಸ್ಸು ಮತ್ತು ಮನೋಧರ್ಮವನ್ನು ಗಮನದಲ್ಲಿಟ್ಟುಕೊಂಡು ಗುರು ಮೀರಾ, ಅದಿತಿಗೆ ತಕ್ಕುದಾದ ಭಕ್ತಿಪ್ರಧಾನ ಕೃತಿಗಳನ್ನೇ ಆಯ್ದುಕೊಂಡು ಸುಂದರ ಪ್ರದರ್ಶನಕ್ಕೆ ಅನುವು ಮಾಡಿದ್ದರು. ಶುಭಾರಂಭದಲ್ಲಿ ಪ್ರಾರ್ಥನಾರೂಪದ ಸಮರ್ಪಣೆಯಾಗಿ ಆದಿಪೂಜಿತ ಗಣೇಶನನ್ನು ‘ಪುಷ್ಪಾಂಜಲಿ’ಯ ನೃತ್ತ ನಮನಗಳ ಮೂಲಕ ಆರಾಧಿಸಿ, ಅನಂತರ ‘ನಟೇಶ ಕೌತ್ವಂ’- ಕೃತಿಯಲ್ಲಿ ನಟರಾಜನ ವೈಶಿಷ್ಯ-ಮಹತ್ವವನ್ನು ನಾನಾ ಭಂಗಿಗಳಲ್ಲಿ ಅಭಿವ್ಯಕ್ತಿಸಿದಳು. ಮುಂದೆ ಅದಿತಿ ನಗುಮೊಗದಿಂದ ಪ್ರಸ್ತುತಪಡಿಸಿದ ‘ಸರಸ್ವತಿ ಅಲರಿಪು’ (ಖಂಡಜಾತಿ) ಶಿರೋ ಭೇದ, ದೃಷ್ಟಿ-ಗ್ರೀವ ಭೇದಗಳಿಂದ ಕೂಡಿದ್ದು, ನೃತ್ಯವ್ಯಾಕರಣದ ಬಹತೇಕ ಅಂಶಗಳನ್ನೂ ಒಳಗೊಂಡು ವೀಣಾಪಾಣಿ ಸರಸ್ವತಿಯ…
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23ನೇ ಸಾಲಿನ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 09-07-2024ರಂದು ಮಧ್ಯಾಹ್ನ 2.30 ಗಂಟೆಗೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅವರು ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಮಂಗಳೂರು ವಿವಿ ಕುಲಸಚಿವರಾದ ಶ್ರೀ ಕೆ. ರಾಜು ಮೊಗವೀರ ಭಾಗವಹಿಸುವರು. ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಅಭಿನಂದನಾ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ, 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ‘ಶ್ರೀರಾಮ ದರ್ಶನ’ ಯಕ್ಷಗಾನ ನೃತ್ಯರೂಪಕ ನಡೆಯಲಿದೆ ಎಂದು ಯಕ್ಷಗಾನ…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2022-2023ನೇ ಸಾಲಿನ ‘ಗೌರವ ಪ್ರಶಸ್ತಿ’ಗಾಗಿ ಅರ್ಜಿ ಆಹ್ವಾನಿಸಿದೆ. ಬ್ಯಾರಿ ಭಾಷೆ, ಕಲೆ ಮತ್ತು ಬ್ಯಾರಿ ಸಾಹಿತ್ಯ- ಸಂಶೋಧನೆ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 6 ಮಂದಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಗೌರವ ಪ್ರಶಸ್ತಿಯು ₹50,000/- ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪವನ್ನೊಳಗೊಂಡಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬರಂತೆ 2022ನೇ ಸಾಲಿಗೆ ಮೂವರು ಹಾಗೂ 2023ನೇ ಸಾಲಿಗೆ ಮೂವರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಪರವಾಗಿ ಇತರರು ಶಿಫಾರಸು ಮಾಡಬಹುದು. ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗದಿರುವ ಸಾಧಕರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗುವುದು. ಪೂರಕ ವಿವರಗಳಿದ್ದಲ್ಲಿ ಮಾತ್ರ ಅಕಾಡೆಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿ, ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಗಳೊಂದಿಗೆ ಅಕಾಡೆಮಿಗೆ ಕಳುಹಿಸಿ ಕೊಡಬೇಕು. ಲಕೋಟೆಯ ಮೇಲೆ ‘ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ’ ಎಂದು ಬರೆದು, ರಿಜಿಸ್ಟ್ರಾರ್, ಕರ್ನಾಟಕ…
ಅದೊಂದು ಸಂಭ್ರಮದ ದೃಶ್ಯ. ಕಿವಿ ತುಂಬುವ ಚಂಡೆಯ ಸುನಾದ. ಹೆಜ್ಜೆ ಕುಣಿಸುವ ಕಂಚಿನ ತಾಳಕಂಠದ ಮಾರ್ಮೊಳಗು, ದೀಪಧಾರಿಣಿ ಲಲನೆಯರ ಮೆರವಣಿಗೆಯ ಸಾಲಿನಲ್ಲಿ ವಿಘ್ನ ವಿನಾಯಕ ಮೂರ್ತಿಯನ್ನು ಹೊತ್ತ ನೃತ್ಯಗುರುಗಳು, ರಂಗಪ್ರವೇಶಕ್ಕೆ ಸಜ್ಜಾದ ಉತುಕ್ಸ ಕಲಾವಿದೆ -ಹಿಂದೆ ಕಲಾಭಿಮಾನಿಗಳ ಆಮೋದದ ರಂಗು ಮನದಂಗಳದಲ್ಲಿ ಸ್ಥಾವರವಾಯಿತು. ಇದು ಬೆಂಗಳೂರಿನ ‘ಲೀಲಾ ನಾಟ್ಯ ಕಲಾವೃಂದ’ದ ನೃತ್ಯಗುರು ಉದಯ ಕೃಷ್ಣ ಉಪಾಧ್ಯಾಯರ ಶಿಷ್ಯೆ ಡಾ. ಸುಶ್ಮಿತಾ ಎನ್. ಶೆಟ್ಟಿಯ ವಿದ್ಯುಕ್ತ ರಂಗ ಪಾದಾರ್ಪಣೆಯ ಶುಭ ಸಂದರ್ಭ. ಕನ್ನಡ ಪ್ರೀತಿಯ ಗುರು ಉದಯಕೃಷ್ಣರ ಪ್ರಯೋಗಾತ್ಮಕ ಕೃತಿಗಳ ಆಯ್ಕೆ, ನೃತ್ಯ ಸಂಯೋಜನೆಯ ಬಗೆ ನೋಡುಗರಿಗೆ ಹೊಸ ಅನುಭೂತಿ ನೀಡಿತು. ಅಂದು ಸುಶ್ಮಿತಾ ಪ್ರದರ್ಶಿಸಿದ ನೃತ್ಯಗಳ ಲೀಲಾಜಾಲ ಆತ್ಮವಿಶ್ವಾಸದ ಪರಿ, ಅಂಗಶುದ್ಧ ಅಡವುಗಳ ಖಾಚಿತ್ಯ, ಹಸ್ತಮುದ್ರೆಗಳ ಸ್ಫುಟತೆ, ನಿರಾಯಾಸ ಆಂಗಿಕ ಚಲನೆಯ ಮೋಡಿ, ಪ್ರಬುದ್ಧ ಅಭಿನಯದ ರಸಾನುಭವ ನೇರವಾಗಿ ಕಲಾರಸಿಕರ ಹೃದಯವನ್ನು ಸ್ಪರ್ಶಿಸಿತು. ಪ್ರಥಮ ನೋಟದಲ್ಲಿ ಎತ್ತರದ ನಿಲುವಿನಿಂದ ಆಕರ್ಷಿಸಿದ ಕಲಾವಿದೆ ನಗುಮೊಗದಿಂದ ಮೊದಲು ಅರ್ಪಿಸಿದ್ದು ಭಕ್ತಿಪೂರ್ವಕ ‘ಪುಷ್ಪಾಂಜಲಿ’. ವಿಘ್ನೇಶ್ವರ, ಸರಸ್ವತಿ…
ಹರೇಕಳ : ಯಕ್ಷಧ್ರುವ ಫೌಂಡೇಶನ್ ( ರಿ.) ಮಂಗಳೂರು ವತಿಯಿಂದ ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ತರಗತಿಯು ದಿನಾಂಕ 04-07-2024ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮುಡಿಪು ಘಟಕದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ಪ್ರತಿಯೊಬ್ಬರು ಕೂಡ ಕಲಿತ ವಿದ್ಯಾಸಂಸ್ಥೆ ಕಲಿಸಿದ ಗುರುಗಳು, ಹೆತ್ತ ತಂದೆ ತಾಯಿ, ಹೊತ್ತ ನಾಡು ಇದನ್ನು ಮರೆಯಲೇಬಾರದು. ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುವಾಗ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತನ್ನನ್ನು ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ. ಇದರಿಂದ ಮುಂದಕ್ಕೆ ಉತ್ತಮ ನಾಯಕರಾಗಿ ಮೂಡಿ ಬರಬಹುದು. ಯಕ್ಷಧ್ರುವ ಫೌಂಡೇಶನ್ ನವರು ಈ ಸೇವೆಯನ್ನು ಕಳೆದ 9 ವರ್ಷಗಳಿಂದ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಧ್ರುವ ಫೌಂಡೇಶನ್ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಆಳ್ವ ಕದ್ರಿ ಇವರು ಮಾತನಾಡಿ ನಾಟ್ಯ, ಅರ್ಥಗಾರಿಕೆ,…
ಬೆಂಗಳೂರು : ಕಾಜಾಣ ಅರ್ಪಿಸುವ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ಡಾ. ಬೇಲೂರು ರಘುನಂದನ್ ಇವರ ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಸಾಲು ಮರಗಳ ತಾಯಿ ತಿಮ್ಮಕ್ಕ’ ನಾಟಕ ಪ್ರದರ್ಶನವು ದಿನಾಂಕ 08-07-2024ರಂದು ಸಂಜೆ 6-00 ಗಂಟಗೆ ಬೆಂಗಳೂರಿನ ಮಲ್ಲತ್ತಹಳ್ಳಿ, ನಾಗರಭಾವಿ, 2ನೇ ಸ್ಟೇಜ್, ಎನ್.ಜಿ.ಇ.ಎಫ್. ಲೇಔಟ್ ಇಲ್ಲಿರುವ ಕಲಾಗ್ರಾಮದಲ್ಲಿ ನಡೆಯಲಿದೆ. ವೃಕ್ಷಮಾತೆ, ನಾಡೋಜ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಇವರ ಗೌರವ ಉಪಸ್ಥಿತಿಯಲ್ಲಿ ಸಮಾಜ ಸೇವಕರಾದ ಶ್ರೀಮತಿ ಕನ್ನಿಕಾಪರಮೇಶ್ವರಿ ಮತ್ತು ಡಾ. ಜಿ. ಪರಮೇಶ್ವರ್ ಇವರು ನಾಟಕಕ್ಕೆ ಚಾಲನೆ ನೀಡಲಿದ್ದಾರೆ. ಭಾರತೀಯ ರಾಷ್ಟ್ರೀಯ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಎಂ. ರಾಮಚಂದ್ರ (ಹೂಡಿ ತಿಮ್ಮಿ), ವೀರಲೋಕ ಪ್ರಕಾಶನದ ಶ್ರೀ ವೀರಕಪುತ್ರ ಶ್ರೀನಿವಾಸ್, ಸಾಲುಮರದ ತಿಮ್ಮಕ್ಕನವರ್ ದತ್ತು ಪುತ್ರ ಶ್ರೀ ಬಳ್ಳೂರು ಉಮೇಶ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಜೆ.ಪಿ.ಓ. ಚಂದ್ರು ಮತ್ತು ಖ್ಯಾತ ಜಾನಪದ ಗಾಯಕಿ ಶ್ರೀಮತಿ ಸವಿತಕ್ಕ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಮಂಗಳೂರು : ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಜುಲೈ ಕೊನೆಯ ವಾರ ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಉಳ್ಳಾಲ ತಾಲೂಕು ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ‘ಮಕ್ಕಳ ಅಬ್ಬಕ್ಕ’ ಕಾರ್ಯಕ್ರಮದ ಬಗ್ಗೆ ನಡೆಸುವ ಬಗ್ಗೆ ಚಿಂತನಾ ಸಭೆಯೊಂದು ತೊಕ್ಕೊಟ್ಟು ರತ್ನಂ ಸಭಾಂಗಣದಲ್ಲಿ ದಿನಾಂಕ 06-07-2024ರಂದು ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಮಾತನಾಡಿ “ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸ್ಥಳೀಯ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ಮಕ್ಕಳ ಅಬ್ಬಕ್ಕ’ ಎಂಬ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ನಡೆಸಲಾಗುವುದು. ಇದರಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪಠ್ಯಪುಸ್ತಕದಲ್ಲಿ ಅಬ್ಬಕ್ಕ’ ಎಂಬ ಪ್ರಬಂಧ ಸ್ಪರ್ಧೆ ಮತ್ತು ‘ನನ್ನ ಕಲ್ಪನೆಯಲ್ಲಿ ಅಬ್ಬಕ್ಕನ ಚಿತ್ರ’ ಎಂಬ ಚಿತ್ರಕಲಾ ಸ್ಪರ್ಧೆಯನ್ನು ಪೂರ್ವಭಾವಿಯಾಗಿ ಏರ್ಪಡಿಸಲಾಗಿದೆ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಉಲ್ಲಾಳ ಘಟಕದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ” ಎಂದು ತಿಳಿಸಿದರು. ಸಂಚಾಲಕ ರವೀಂದ್ರ ಶೆಟ್ಟಿ…
ಮನುಷ್ಯನಲ್ಲಿ ವೃತ್ತಿ ಬೇರೆ ಪ್ರವೃತ್ತಿ ಬೇರೆ. ವೃತ್ತಿಯಿಂದ ನಿವೃತ್ತಿಯಾದ ಮೇಲೆ ಪ್ರವೃತ್ತಿಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡು, ತಾನು ತನ್ನವರೊಂದಿಗೆ ನೆಮ್ಮದಿಯಿಂದ ಇರಬೇಕು ಎಂದು ವ್ಯಕ್ತಿ ಬಯಸುತ್ತಾನೆ.ಅದು ಜೀವನ. ಆದರೆ ಅದಕ್ಕೆ ಇಂದು ಅವಕಾಶಗಳು ಕಡಿಮೆ. ಈ ಜೀವ ನಿರಂತರ ಸುಖವನ್ನು ಬಯಸುತ್ತದೆ.ಸುಖ ಪಡೆಯುವುದಕ್ಕೆ ಹಲವು ಹವಣಿಕೆಗಳನ್ನು ಸದಾ ಮಾಡುತ್ತಲೆ ಇರುತ್ತದೆ. ಕುಟುಂಬದಲ್ಲಿ ಸ್ವಲ್ಪ ಏನಾದರೂ ಏರು ಪೇರುಗಳಾದರೆ ಜೀವನ ಸದಾಕಾಲ ಬೇಸರದ ಚೌಕಟ್ಟಿನಲ್ಲಿ ಜಾಗರಣೆ ಮಾಡುತ್ತಿರುತ್ತದೆ.ಬಂದ ಬೇಸರವನ್ನು ಕಳೆದುಕೊಳ್ಳಲು ಪಲಾಯನವಾದವನ್ನು ಮೈ ಮನದಲ್ಲಿ ಅಳವಡಿಸಿಕೊಳ್ಳುವದು ಇಂದು ಸ್ವಾಭಾವಿಕ ಗುಣ ಧರ್ಮವಾಗಿದೆ.ಆತ್ಮ ರತಿಗೆ ‘ಸುಳ್ಳು’ ಹೇಳುವದನ್ನು ಉಸಿರಾಟದಷ್ಟು ಸಹಜ ಮಾಡಿಕೊಂಡಿರುತ್ತಾರೆ. ಪೂರ್ವದಲ್ಲಿ ಭಾರತೀಯ ಅವಿಭಕ್ತ ಕುಟುಂಬದಲ್ಲಿ ಬೇಸರ ಎಂಬ ‘ಧ್ವನಿ’ ಇದ್ದಿದ್ದಿಲ್ಲ.ಇಂದಿನ ಜಾಗತಿಕರಣದ ವಿಭಕ್ತ ಕುಟುಂಬದಲ್ಲಿ ಬೇಸರದ ಧ್ವನಿ ಗಡಿಯಾರದ ಗಂಟೆಯಂತೆ ಸದಾ ಬಾರಿಸುತ್ತಲೇ ಇರುತ್ತದೆ. ಬಾಲ್ಯದಿಂದ ಕಟ್ಟು – ನಿಟ್ಟಿನ ಸಂಸ್ಕಾರದಲ್ಲಿ ಬೆಳೆದುಬಂದ ವ್ಯಕ್ತಿಗಳು ನಿವೃತ್ತಿಯ ನಂತರ ಆಧ್ಯಾತ್ಮ ಎಂಬ ಗುಹೆಯಲ್ಲಿ ಹೊಕ್ಕು,ನೆಮ್ಮದಿ ಹುಡುಕಲು ಪ್ರಯತ್ನಿಸುತ್ತಾರೆ. ಕೆಲವರು ಪಡೆಯುತ್ತಾರೆ. ಮತ್ತೆ…
ಉಡುಪಿ : ಬಾಲಕಿಯರ ಪ್ರೌಢಶಾಲೆಯಲ್ಲಿ 2024ನೇ ಸಾಲಿನ ಯಕ್ಷಶಿಕ್ಷಣ ತರಬೇತಿಯು ದಿನಾಂಕ 05-07-2024ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯದರ್ಶಿ ಮುರಲಿ ಕಡೆಕಾರ್ “ಹದಿನೇಳು ವರ್ಷಗಳ ಹಿಂದೆ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಉದ್ದೇಶದಿಂದ ಆರಂಭಗೊಂಡ ಯಕ್ಷ ಶಿಕ್ಷಣ ಇಂದು ಸನಿಹದ ಕಾಪು, ಕುಂದಾಪುರ, ಬೈಂದೂರು ಸೇರಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ವ್ಯಾಪಿಸಿದ್ದು,ಈ ಬಾರಿ 90 ಪ್ರೌಢಶಾಲೆಗಳಲ್ಲಿ 40 ಯಕ್ಷಗಾನ ಗುರುಗಳು ನಮ್ಮ ನೆಲದ ಅಪೂರ್ವಕಲೆಯ ಶಿಕ್ಷಣವನ್ನು ನೀಡುತ್ತಿದ್ದಾರೆ. ನಾಲ್ಕನೇ ಮೂರು ಭಾಗ ಹುಡುಗಿಯರೇ ಭಾಗವಹಿಸುತ್ತಿದ್ದು, ಈ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರತೀ ವರ್ಷ ಸುಂದರವಾದ ಪ್ರದರ್ಶನ ನೀಡುತ್ತಿರುವುದು ಅಭಿನಂದನೀಯ. ಈ ಶಾಲೆಗೆ, ಯಕ್ಷಶಿಕ್ಷಣದ ವಿದ್ಯಾರ್ಥಿಯಾಗಿ, ಪ್ರಕೃತ ಐ.ಟಿ. ಉದ್ಯೋಗಿಯಾಗಿರುವ, ಉಭಯತಿಟ್ಟುಗಳಲ್ಲೂ ಪ್ರಾವೀಣ್ಯತೆ ಹೊಂದಿದ, ಆದ್ಯತಾ ಭಟ್ ಶಿಕ್ಷಕಿಯಾಗಿ ದೊರೆತಿರುವುದು ನಮ್ಮ ಅಭಿಯಾನದ ಸಾರ್ಥಕತೆಯ ಸಂಕೇತ” ಎಂಬುದಾಗಿ ನುಡಿದರು. ಇದೇ ಸಂದರ್ಭದಲ್ಲಿ ಶಾಲಾ ಸಂಸತ್ತನ್ನೂ ಉದ್ಘಾಟಿಸಲಾಯಿತು. ಆರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಎಲ್ಲರನ್ನು ಸ್ವಾಗತಿಸಿದರು.…
ಬೆಂಗಳೂರು : ಶ್ರೀ ರಾಮ ಲಲಿತ ಕಲಾ ಮಂದಿರ ಪ್ರಸ್ತುತ ಪಡಿಸುವ ‘ಗಾಯನ ಗೋಷ್ಠಿ’ಯು ದಿನಾಂಕ 07-07-2024ರಂದು ಸಂಜೆ 5-30 ಗಂಟೆಗೆ ಎಸ್.ಆರ್.ಎಲ್.ಕೆ.ಎಂ. ಸಭಾಂಗಣದಲ್ಲಿ ನಡೆಯಲಿದೆ. ವಿದ್ವಾನ್ ನಿರಂಜನ ದಿಂಡೋಡಿ ಇವರ ಹಾಡುಗಾರಿಕೆಗೆ ವಿದ್ವಾನ್ ಮೈಸೂರು ಕೇಶವ್ ವಯೋಲಿನ್, ವಿದ್ವಾನ್ ಬಿ.ಎಸ್. ಪ್ರಶಾಂತ್ ಇವರು ಮೃದಂಗ ಮತ್ತು ವಿದ್ವಾನ್ ನಾರಾಯಣ ಮೂರ್ತಿಯವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.