Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಕನ್ನಡದ ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ,ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾದ್ಯಾಪಕ. ಡಾ.ಪಂಚಾಕ್ಷರಿ ಹಿರೇಮಠ ಇವರು ದಿನಾಂಕ 14 ಮಾರ್ಚ್ 2025 ರಂದು ಧಾರವಾಡದ ಜಯನಗರದಲ್ಲಿನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಡಾ.ಪಂಚಾಕ್ಷರಿ ಹಿರೇಮಠ ಅವರು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 6 ಜನವರಿ 1933ರಂದು ಜನಿಸಿದ್ದಾರೆ. ನಿಜವಾದ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಕವಿ, ಬಹುಭಾಷಾ ವಾಗ್ಮಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ ಎಂದು ಹೆಸರುವಾಸಿಯಾಗಿದ್ದಾರೆ. ವಿದ್ಯಾವಾಚಸ್ಪತಿ ಬಿರುದಾಂಕಿತರಾದ ಡಾ. ಪಂಚಾಕ್ಷರಿ ಹಿರೇಮಠ ಅವರು 19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, 7 ಚಿಂತನ ಸಾಹಿತ್ಯ ಕೃತಿಗಳು, 6 ಜೀವನ ಚರಿತ್ರೆಗಳು, 3 ಪತ್ರ ಸಾಹಿತ್ಯ ಕೃತಿಗಳು, 2 ಚರಿತ್ರೆಗಳು, 7 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ…
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಚುಟುಕು ರಚನಾ ಸ್ಪರ್ಧೆ -2025 ನಡೆಯಲಿದೆ. ಸ್ಪರ್ಧೆಗೆ ವಿಷಯ ನಿರ್ಬಂಧ ಇಲ್ಲ. ಒಬ್ಬರು 4 ಸಾಲಿನ ಉತ್ತಮ ಎನಿಸುವ ಐದು ಚುಟುಕವನ್ನು ಕಳುಹಿಸಬೇಕು. ಸ್ಪರ್ಧಾ ವಿಜೇತರಿಗೆ ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮ. ಆಸಕ್ತರು 15 ಏಪ್ರಿಲ್ 2025ರ ಮೊದಲು 9746093552 ಅಥವಾ 9633073400 ಸಂಖ್ಯೆಗೆ ವಾಟ್ಸಪ್ ಮೂಲಕ ಚುಟುಕಗಳನ್ನು ಕಳುಹಿಸಬಹುದು. ಚುಟುಕಗಳ ಜತೆಗೆ ಸ್ಪಷ್ಟ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು. ಎಂದು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.
ಬೆಂಗಳೂರು : ಕಲಾವಿಲಾಸಿ ತಂಡದ ಕಲಾವಿದರು ಪ್ರಸ್ತುತ ಪಡಿಸುವ ‘ಕ್ರಾಂತಿ ಬಂತು # ಕ್ರಾಂತಿ’ ಎಂಬ ನಾಟಕ ಪ್ರದರ್ಶನವನ್ನು ದಿನಾಂಕ 16 ಮಾರ್ಚ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 100 ನಿಮಿಷಗಳು. ಹೆಚ್ಚಿನ ಮಾಹಿತಿಗೆ 8861465482 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮಾಡಬಹುದು. ‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು ನೋವಿನ ಸಂಗತಿ. ಸಮಾಜವಾದ, ಸಮತಾವಾದ, ಕ್ರಾಂತಿಯಂತಹ…
ಐರೋಡಿ : ಯಕ್ಷಗಾನ ಕಲಾಕೇಂದ್ರ (ರಿ.) ಹಂಗಾರಕಟ್ಟೆ – ಐರೋಡಿ ಆಯೋಜಿಸುವ ‘ನಲಿ- ಕುಣಿ’ ಯಕ್ಷಗಾನ ತರಬೇತಿ ಶಿಬಿರ – 2025ಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು. ಕಳೆದ 53 ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸಂಸ್ಥೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮುಖ್ಯೋಪಾಧ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರರಿಂದ ಸ್ಥಾಪಿಸಲ್ಪಟ್ಟು ದಿವಂಗತ ನಾರ್ಣಪ್ಪ ಉಪ್ಪೂರರು ಸ್ಥಾಪಕ ಪ್ರಾಚಾರ್ಯರಾಗಿದ್ದ, ದಿ. ಕಾಳಿಂಗ ನಾವಡರಂಥ ಹಲವಾರು ಶ್ರೇಷ್ಠ ಕಲಾವಿದರನ್ನು ಯಕ್ಷಲೋಕಕ್ಕೆ ನೀಡಿದ ಸಂಸ್ಥೆ ಇದು. ಐವತ್ತೆರಡು ವರ್ಷದ ಅನುಭವ ಹೊಂದಿರುವ ಈ ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಮಕ್ಕಳಿಗಾಗಿ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸುತ್ತಾ ಬಂದಿದೆ. ಈ ವರ್ಷ ದಿನಾಂಕ 13 ಏಪ್ರಿಲ್ 2025ರ ಆದಿತ್ಯವಾರದಿಂದ 03 ಮೇ 2025ರ ಶನಿವಾರದ ವರೆಗೆ ಬೆಳಿಗ್ಗೆ ಘಂಟೆ 9.15 ರಿಂದ ಮಧ್ಯಾಹ್ನ ಘಂಟೆ 1.15ರ ತನಕ ಶಾಲಾ ವಿದ್ಯಾರ್ಥಿಗಳಿಗಾಗಿ “ನಲಿ-ಕುಣಿ” ಎಂಬ ಯಕ್ಷಗಾನ…
ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೊ ಸಂಯೋಜಿಸುವ ‘ಬಾಲ ಲೀಲಾ -2025’ ಚಿಣ್ಣರ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 13 ಏಪ್ರಿಲ್ 2025ರವರೆಗೆ ಬೆಳಗ್ಗೆ 9-00 ಗಂಟೆಯಿಂದ ಸಂಜೆ 5-00 ಗಂಟೆ ತನಕ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ನೋಂದಣಿಗಾಗಿ ಸಂಪರ್ಕಿಸಿರಿ : ವಿಶು ರಾವ್ ಹಾವಂಜೆ 9880052105 ಜನಾರ್ದನ ಹಾವಂಜೆ 9845650544
ಉಡುಪಿ : ರಂಗ ಭಾಷೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಕಲಾವಿದರುಗಳಿಗೆ ಹಾಗೂ ರಂಗಾಸಕ್ತರಿಗೆ ಮತ್ತೊಂದು ಹೆಜ್ಜೆ. ಪ್ರೇಕ್ಷಕರು – ವೀಕ್ಷಕರು ಮರೆಯಲಾಗದ ಕಲಾವಿದರಾಗ ಬಯಸುವ ಮನಗಳಿಗೆ, ಒಂದಷ್ಟು ಶಕ್ತಿ – ಬಣ್ಣ ತುಂಬಿ, ಅದ್ಭುತ ಕಲಾವಿದರಾಗಬೇಕೆಂಬ ಆಸೆಯನ್ನು ತನ್ನೊಳಗೆ ತುಂಬಿಕೊಂಡಿರುವ ಆಸಕ್ತರಿಗೆ, ಆ ಯಶಸ್ಸಿನ ದಾರಿಯ ಹುಡುಕಾಟಕ್ಕೆ ಇಂಬು ಕೊಡುವ ಪ್ರಕ್ರಿಯೆ…. ಎರಡು ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರವು ಉಡುಪಿ ರಂಗಭೂಮಿ (ರಿ.) ವತಿಯಿಂದ ದಿನಾಂಕ 29 ಮತ್ತು 30 ಮಾರ್ಚ್ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಹೆಸರಾಂತ ರಂಗ ನಿರ್ದೇಶಕ, ಝೀ ಟಿವಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮತ್ತು ರಂಗಭೂಮಿಯು ಆಯೋಜಿಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಮೂರು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ ಶ್ರೀ ಮಂಜುನಾಥ ಎಲ್. ಬಡಿಗೇರ್ ಇವರಿಂದ ಎರಡು ದಿನಗಳ ಅಭಿನಯ ಕೇಂದ್ರಿತ ರಂಗ ತರಬೇತಿ ಶಿಬಿರ. ಎರಡು ದಿನಗಳ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಲು,…
ಬೆಂಗಳೂರು : ದೃಶ್ಯ ರಂಗತಂಡ ಪ್ರಸ್ತುತ ಪಡಿಸುವ ದಾಕ್ಷಾಯಿಣಿ ಭಟ್ ಎ. ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ತಾಜ್ ಮಹಲಿನ ಟೆಂಡರ್’ ನಾಟಕ ಪ್ರದರ್ಶನವನ್ನು ದಿನಾಂಕ 16 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಅಜಯ್ ಶುಕ್ಲಾ ಇವರು ರಚಿಸಿದ್ದು, ದಾಕ್ಷಾಯಿಣಿ ಸೋಮ ಶೇಖರ್ ಕನ್ನಡಕ್ಕೆ ಅನುವಾದಿಸುತ್ತಾರೆ.
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಕೊಂಕಣಿ ಸಾಹಿತ್ಯ ಕ್ಷೇತ್ರದಿಂದ ಎಂ. ಪ್ಯಾಟ್ರಿಕ್ ಕಾಮಿಲ್ ಮೊರಾಸ್ ಮಂಗಳೂರು, ಕೊಂಕಣಿ ಕಲೆ ವಿಭಾಗದಿಂದ ಜೊಯಲ್ ಪಿರೇರಾ ಮಂಗಳೂರು ಮತ್ತು ಕೊಂಕಣಿ ಜಾನಪದ ವಿಭಾಗದಿಂದ ಸೋಬಿನಾ ಮೊತೇಶ್ ಕಾಂಬ್ರೆಕರ್ ಹಳಿಯಾಳ ಇವರು ಆಯ್ಕೆಯಾಗಿದ್ದಾರೆ. 2024ನೇ ಸಾಲಿನ ‘ಪುಸ್ತಕ ಪುರಸ್ಕಾರ’ಕ್ಕೆ ಕೊಂಕಣಿ ಕವನ ಪುಸ್ತಕ ವಿಭಾಗದಲ್ಲಿ ಫೆಲ್ಲಿ ಲೋಬೊ ದೇರೆಬೈಲ್ ಇವರ ‘ಪಾಲ್ವಾ ಪೊಂತ್’ ಕೃತಿ ಹಾಗೂ ಕೊಂಕಣಿ ಲೇಖನ ಪುಸ್ತಕ ವಿಭಾಗದಲ್ಲಿ ವಲೇರಿಯನ್ ಸಿಕ್ವೇರಾ ಕಾರ್ಕಳ ಇವರ ‘ಶೆತಾಂ ಭಾಟಾಂ ತೊಟಾಂನಿ’ ಪುಸ್ತಕ ಆಯ್ಕೆಯಾಗಿದೆ. ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಮಾಣ ಪತ್ರ ಹಾಗೂ ಪುಸ್ತಕ ಪುರಸ್ಕಾರವು ರೂ.25,000/- ನಗದು, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತಿಳಿಸಿರುತ್ತಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಮೈಸೂರು ಸಹಯೋಗದಲ್ಲಿ ದಿನಾಂಕ 23 ಮಾರ್ಚ್ 2023ರಂದು…
ಬೆಂಗಳೂರು : ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಇದರ ವತಿಯಿಂದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ರಂಗಭೂಮಿ, ಬೀದಿನಾಟಕ, ಚಲನಚಿತ್ರ, ಕಿರುತೆರೆ, ಕೃಷಿ, ಪರಿಸರ, ಶಿಕ್ಷಣ, ಕಾನೂನು ಮಾಧ್ಯಮ, ಪತ್ರಕರ್ತರು, ಕ್ರೀಡೆ, ಉದ್ಯಮಿಗಳು, ವೈದ್ಯಕೀಯ, ಜ್ಯೋತಿಷ್ಯ ಮತ್ತು ಕ್ರೀಯಾಶೀಲ ಸಂಘ, ಸಂಸ್ಥೆಗಳಿಂದ ‘ಅನ್ವೇಷಣೆ ರಾಷ್ಟ್ರ ಪ್ರಶಸ್ತಿ -2025’ಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸ್ತಕರು ತಮ್ಮ ಇತ್ತೀಚಿನ ಭಾವ ಚಿತ್ರ, ಕಿರುಪರಿಚಯವನ್ನು ದಿನಾಂಕ 15 ಏಪ್ರಿಲ್ 2025ರ ಒಳಗಾಗಿ 9880181671 ಈ ನಂಬರ್ಗೆ ವ್ಯಾಟ್ಸ್ಆ್ಯಪ್ ಮಾಡಬಹುದು. ಪಿ.ಡಿ.ಎಫ್. ಅಥವಾ ಡಾಕ್ಯುಮೆಂಟ್ ಫೈಲ್ ಮಾತ್ರ ಸ್ವೀಕರಿಸಲಾಗುವುದು.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರಣ್ಯ ಪ್ರತಿಷ್ಠಾನ ಸ್ಥಾಪಿಸಿರುವ ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸ ಪ್ರೊ. ಅ. ರಾ. ಮಿತ್ರ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಗೌರವದಿಂದ ವಿದ್ಯಾರಣ್ಯ ಪ್ರತಿಷ್ಠಾನವು ಇಪ್ಪತ್ತು ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ದತ್ತಿಯನ್ನು ಇರಿಸಿದ್ದು, ಇದರಿಂದ ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸ ಬೇಕೆಂದು ತಿಳಿಸಿರುತ್ತಾರೆ. ಅ.ನ. ಕೃಷ್ಣರಾಯರ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’, ಕೆ. ಎಸ್. ನರಸಿಂಹ ಸ್ವಾಮಿ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಕಾವ್ಯ ಪ್ರಶಸ್ತಿ’, ಪ್ರೊ. ಜಿ. ವೆಂಕಟಸುಬ್ಬಯ್ಯ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಭಾಷಾ ಪ್ರಶಸ್ತಿ’, ಹಾರನಹಳ್ಳಿ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಆಡಳಿತ ಪ್ರಶಸ್ತಿ’, ಟಿ.’ಎಸ್.’ರಾಮಚಂದ್ರ ರಾವ್ ಸ್ಮಾರಕ ನೀಡಲಾಗುವ ‘ವಿದ್ಯಾರಣ್ಯ ಕನ್ನಡ ಪತ್ರಿಕೋದ್ಯಮ ಪ್ರಶಸ್ತಿ’ ಇವುಗಳನ್ನು ಆವರ್ತವಾಗಿ ನೀಡಬೇಕೆಂದು ದತ್ತಿದಾನಿಗಳು…