Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರಿನ ಖ್ಯಾತ ‘ಸಾಧನ ಸಂಗಮ’ ನೃತ್ಯಸಂಸ್ಥೆ ಎರಡು ದಿನಗಳ ಕಾಲ ನಡೆಸಿದ ‘ಯುಗಳ’ ಮತ್ತು ‘ಬಹುಳ’ ನೃತ್ಯೋತ್ಸವಗಳು ವರ್ಣರಂಜಿತವಾಗಿ ನೆರೆದ ಕಲಾರಸಿಕರ ಮನರಂಜಿಸಿತು. ‘ಯುಗಳ’ದಲ್ಲಿ ಹಲವು ಜೋಡಿ ಕಲಾವಿದೆಯರ ಪ್ರತಿಭಾ ಪ್ರದರ್ಶನ ಕಣ್ತುಂಬಿದರೆ, ‘ಬಹುಳ’ ಕಾರ್ಯಕ್ರಮದಲ್ಲಿ ಶೀರ್ಷಿಕೆಯೇ ಸೂಚಿಸುವಂತೆ ಬಹು ಕಲಾವಿದರ ತಂಡ ಅರ್ಪಿಸುವ ಎರಡು ನೃತ್ಯರೂಪಕಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಸಂಸ್ಥೆ, ಪ್ರತಿವರ್ಷ ತಪ್ಪದೆ ನಡೆಸಿಕೊಂಡು ಬರುತ್ತಿರುವ ನೃತ್ಯೋತ್ಸವಗಳಲ್ಲಿ ‘ಸಾಧನ ಸಂಗಮ’ದ ಆಶ್ರಯದಲ್ಲಿ ನಾಡಿನ ಬಹುತೇಕ ನೃತ್ಯತಂಡಗಳು ಈ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಿ, ಜನಮೆಚ್ಚುಗೆ ಗಳಿಸಿವೆ ಅಷ್ಟೇ ಅಲ್ಲದೆ ಇದರಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಗತಿಯೂ ಆಗಿದೆ. ಇತ್ತೀಚೆಗೆ ಬೆಂಗಳೂರಿನ ‘ರಂಗೋಪನಿಷತ್’ ಸಭಾಂಗಣದಲ್ಲಿ ಸಾಧನ ಸಂಗಮದ ‘ನಾಟ್ಯ ನಿಪುಣ’ ಹಿರಿಯ ಶಿಷ್ಯೆಯರ ತಂಡ ಅಭಿನಯಿಸಿದ ಮಹಾಭಾರತದ ಒಂದು ಪ್ರಮುಖ ಸನ್ನಿವೇಶದ ಸುತ್ತ ಹೆಣೆದ ರಸವತ್ತಾದ ‘ಪ್ರೇಕ್ಷಾಗೃಹ’- ಮನೋಜ್ಞ ನೃತ್ಯರೂಪಕ ಮನರಂಜನೆಯೊಡನೆ ಗಾಢ ಪರಿಣಾಮ ಬೀರಿತು. ದೇವಲೋಕಕ್ಕೆ ಆಗಮಿಸಿದ್ದ ಸುಂದರಾಂಗ ಅರ್ಜುನನನ್ನು ಕಂಡು ಊರ್ವಶಿ, ಅವನಲ್ಲಿ ಮೋಹಗೊಂಡಾಗ, ಅದನ್ನವನು, ನಿರಾಕರಿಸಿ ಅವಳಿಂದ ಶಾಪಗ್ರಸ್ತನಾಗಿ…
ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಸಂಗೀತ ವಿದ್ಯಾರ್ಥಿಗಳು ಮತ್ತು ಸಂಗೀ ತಾಸಕ್ತರಿಗಾಗಿ ‘ದಾಸ ನಮನ’ ಸಂಗೀತ ಕಾರ್ಯಾಗಾರ ದಿನಾಂಕ 09-03-2024 ರಂದು ಆಯೋಜಿಸಲಾಗಿದೆ. ಮಂಗಳೂರು ವಿ.ಟಿ ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರ ಸಭಾಂಗಣದಲ್ಲಿ ಸಂಜೆ ಘಂಟೆ 4.00ರಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ಮಲ್ಲಿಕಾರ್ಜುನ ಸಂಶಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಲಿರುವರು. ಕಾರ್ಯಾಗಾರದಲ್ಲಿ ಶುಲ್ಕರಹಿತವಾಗಿ ಹೆಸರು ನೋಂದಾಯಿಸಿಕೊಳ್ಳಲು 9886914748 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಮಂಗಳೂರು : ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಬಂಟಮಲೆ ಅಕಾಡೆಮಿ (ರಿ) ಗುತ್ತಿಗಾರು ಸುಳ್ಯ ಇವರ ವತಿಯಿಂದ ಪುಸ್ತಕ ಬಿಡುಗಡೆ ಹಾಗೂ ‘ಕುವೆಂಪು ಬಂಟಮಲೆ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 09-03-2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಇವರು ವಹಿಸಲಿದ್ದು, ಸಾಹಿತಿ ಪಾರ್ವತೀಶ ಬಿಳಿದಾಳೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕಲ್ಲೆ ಶಿವೋತ್ತಮ ರಾವ್ ಇವರ ‘ಬದುಕು ಹಾಗೂ ಕೊಡುಗೆ’ ಬಗ್ಗೆ ಬರಹಗಾರರಾದ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ‘ಬಂಟಮಲೆ ಅಕಾಡೆಮಿ ಹಾಗೂ ಪ್ರಶಸ್ತಿ’ ಕುರಿತು ನಾಟಕಕಾರರು ಹಾಗೂ ಸಾಮಾಜಿಕ ಚಿಂತಕರಾದ ಎ.ಕೆ. ಹಿಮಕರ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಲ್ಲೆ ಶಿವೋತ್ತಮ ರಾವ್ ಇವರಿಗೆ ‘ಕುವೆಂಪು ಬಂಟಮಲೆ ಪ್ರಶಸ್ತಿ’ಯನ್ನು ಪುತ್ತೂರಿನ ಖ್ಯಾತ ಶಿಕ್ಷಣ ತಜ್ಞರಾದ ಡಾ. ಎನ್. ಸುಕುಮಾರ ಗೌಡ ಇವರು ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ ಹಾಗೂ ಕಲ್ಲೆ ಶಿವೋತ್ತಮ ರಾವ್ ಇವರ…
ನವ್ಯ ಕತೆಗಳು ತರುಣ ಜನಾಂಗದವರಲ್ಲಿ ಜನಪ್ರಿಯವಾಗುತ್ತಾ ಹೋಗಿದ್ದ ಕಾಲ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶರು ಆಗಲೇ ಉತ್ತಮ ಕತೆಗಾರರೆಂದು ಗುರುತಿಸಿಕೊಂಡಿದ್ದರು. ನವ್ಯ ಕತೆಗಳ ಹಾದಿಯು ಹೆಚ್ಚು ಕಡಿಮೆ ಸ್ಪಷ್ಟವಾಗಿತ್ತು. ವಸ್ತು, ತಂತ್ರ, ವೈಚಾರಿಕತೆ ಮತ್ತು ಶೈಲಿಗೆ ಖಚಿತ ರೂಪ ಬಂದಿತ್ತು. ತಕ್ಕಮಟ್ಟಿಗಿನ ಪ್ರಬುದ್ಧತೆಯನ್ನೂ ಸಾಧಿಸಿಕೊಂಡಿತ್ತು. ತಾವು ಅರ್ಥಮಾಡಿಕೊಂಡಿದ್ದ ರೀತಿಯಲ್ಲಿ ನವ್ಯಕತೆಗಳ ಸಂಪ್ರದಾಯವನ್ನು ಮುಂದುವರಿಸಿದ್ದ ಶ್ರೀಕೃಷ್ಣ ಆಲನಹಳ್ಳಿ, ಆರ್ಯ ಮೊದಲಾದವರು ಕತೆಯ ವೈಲಕ್ಷಣ್ಯಗಳಿಗೆ ಸ್ಥಿರತೆಯನ್ನು ತಂದುಕೊಟ್ಟಿದ್ದರೂ ವಸ್ತು ಮತ್ತು ತಂತ್ರಗಳಲ್ಲಿ ಹೊಸ ಸಾಧ್ಯತೆಗಳು ಹುಟ್ಟಿಕೊಂಡಿರಲಿಲ್ಲ. ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ.ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ.…
ಮಂಗಳೂರು : ‘ಪಯಣ ಬೆಂಗಳೂರು’ ತಂಡವು ಸಮಾನತೆಯೆಡೆಗೆ ಎಂಬ ಶೀರ್ಷಿಕೆಯಲ್ಲಿ ಅಭಿನಯಿಸಿದ ನಾಟಕ ‘ತಲ್ಕಿ’. ಈ ನಾಟಕದ 9ನೇ ಪ್ರಯೋಗ ದಿನಾಂಕ 05-03-2024ರ ಮಂಗಳವಾರ ಸಂಜೆ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪ್ರದರ್ಶನಗೊಂಡಿತು. ಆಯನ ನಾಟಕದ ಮನೆ ಆಯೋಜಿಸಿದ್ದ ಎರಡು ದಿನದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಈ ನಾಟಕದ ಎಲ್ಲಾ ಪಾತ್ರಧಾರಿಗಳು ತೃತೀಯ ಲಿಂಗಿಗಳೇ. ಅದೂ 55 ವರ್ಷ ದಾಟಿದವರು. ಇದು ಯಾವುದೇ ಕಥೆಯನ್ನು ಆಧರಿಸಿದ ನಾಟಕವಾಗಿರದೆ ಅವರ ಬದುಕಿನ ಕಥೆಯನ್ನೇ, ಅವರು ಬಾಲ್ಯದಲ್ಲಿ ಕಂಡ ಕನಸುಗಳನ್ನೇ ನಾಟಕವಾಗಿಸಿದ ಈ ನಾಟಕ. ಅವರ ವಿಶಿಷ್ಟ ಖಾದ್ಯವಾದ ‘ತಲ್ಕಿ’ ಎಂಬ ಹೆಸರಿನಿಂದ ರೂಪುಗೊಂಡ ಈ ನಾಟಕ, ಅವರ ಬದುಕಿನ ತೊಳಲಾಟಗಳು, ಅವರೊಳಗೆ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಾರೆ, ಅವರ ಬದುಕಿನಲ್ಲಿರುವ ಆಚಾರ ವಿಚಾರಗಳು, ಅವರ ಪ್ರೀತಿ, ಪ್ರೇಮ, ನೋವು, ನಲಿವು, ಬದುಕಬೇಕೆಂಬ ಆಸೆ ಮತ್ತು ಅವರ ಕುಟುಂಬ ಅವರನ್ನು ನಡೆಸಿಕೊಂಡ ರೀತಿ ಇದೆಲ್ಲವನ್ನೂ ಒಂದು ಕಥೆಯಾಗಿ ಹೇಳಿಕೊಳ್ಳುತ್ತಾ ಸಾಗುತ್ತದೆ. 55 ವರ್ಷ ದಾಟಿದ ಈ…
ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ದ ರಂಗಪಂಚಮಿ-2024 ಐದು ದಿನಗಳ ನಾಟಕೋತ್ಸವದ ಎರಡನೇ ದಿನದ ಸಮಾರಂಭವು ದಿನಾಂಕ 03-03-2024ರಂದು ನಡೆಯಿತು. ಈ ಸಮಾರಂಭದಲ್ಲಿ ಶುಭಾಶಂಸನೆಗೈದ ಚಲನಚಿತ್ರ ಸಾಹಿತಿ ಪ್ರಮೋದ್ ಮರವಂತೆ “ಕರಾವಳಿಯ ಭಾಗಗಳಲ್ಲಿ ಸಾಂಪ್ರದಾಯಿಕ ಕಂಬಳ, ಹಬ್ಬ ಹರಿದಿನಗಳು, ಯಕ್ಷಗಾನ, ರಥೋತ್ಸವ ಮುಂತಾದವುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವಾಗ ರಂಗಭೂಮಿಯ ಅಸ್ಥಿತ್ವಕ್ಕಾಗಿ 47 ವರ್ಷಗಳಿಂದ ನಿರಂತರ ಚಟುವಟಿಕೆಯಲ್ಲಿರುವ ಲಾವಣ್ಯದ ಕಾರ್ಯ ಶ್ಲಾಘನೀಯವಾದದ್ದು. ರಂಗಭೂಮಿ, ಸಿನೇಮಾ, ಇನ್ನಿತರ ಕಲಾಪ್ರಕಾರಗಳಿಗೆ ಮೂಲ ಎನ್ನುವುದು ಬರವಣಿಗೆ ಹಾಗೂ ಸಾಹಿತ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ನಿಂದಾಗಿ ಸಾಹಿತ್ಯಾಭಿರುಚಿ ಕಡಿಮೆಯಾಗುತ್ತಿದೆ. ಪ್ರತಿದಿನ ಮನೆಯಲ್ಲಿ ದಿನಪತ್ರಿಕೆ, ವಾರಪತ್ರಿಕೆಗಳನ್ನು ತರಿಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಮೂಲಕ ಮಕ್ಕಳಿಗೂ ಓದಿನ ಕಡೆ ಗಮನಹರಿಸುವಂತೆ ಮಾಡುವುದು ಇಂದಿನ ಅನಿವಾರ್ಯ. ಹೆತ್ತವರು ಸಂಜೆ ವೇಳೆಯಲ್ಲಿ ಧಾರಾವಾಹಿಗಳನ್ನು ನೋಡುವುದನ್ನು ಕಡಿಮೆ ಮಾಡಿಕೊಂಡು ಆ ಸಮಯವನ್ನು ಓದುವುದರ ಬಗ್ಗೆ ಗಮನಹರಿಸಬೇಕು. ನಮ್ಮೊಳಗಿನ ಸೆಲೆಯನ್ನು ಅಲೆಯಾಗಿಸುವುದೇ ಕಲೆಯಾಗಿದ್ದು ಇದರೊಂದಿಗೆ ನಮ್ಮ ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಿ” ಎಂದು…
ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಕರ್ನಾಟಕ ಸಂಘ, ಪುತ್ತೂರು ಕನ್ನಡ ವಿಭಾಗ, ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ಸಹಯೋಗದಲ್ಲಿ ‘ನೆನಪಾಗಿ ಉಳಿದವರು’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 29-02-2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕಿನ ಅಧ್ಯಕ್ಷ ಉಮೇಶ್ ನಾಯಕ್ ಇವರು ಮಾತನಾಡಿ “ಸಾಹಿತ್ಯಕವಾಗಿ ಬಹಳ ಸಮೃದ್ಧ ಮತ್ತು ಫಲ ಭರಿತವಾದ ಕ್ಷೇತ್ರ ಪುತ್ತೂರು. ಇದಕ್ಕೆ ಬಹಳ ಹಿಂದಿನ ಒಂದು ಸಾಕ್ಷಿ ಅಥವಾ ಎಲ್ಲರೂ ತಿಳಿದಿರುವಂತಹ ಹಾಗೂ ನೋಡಿರುವಂತಹ ಹಿರಿಯ ಸಾಹಿತಿಗಳು ಇಲ್ಲಿ ಮಾಡಿರುವಂತಹ ಕೃಷಿ ಇದಕ್ಕೆ ಪೂರಕವಾದ ಅಂಶವಾಗಿದೆ. ಅನೇಕ ಸಾಹಿತಿಗಳು ಇಲ್ಲಿಗೆ ಬಂದು ಸಾಹಿತ್ಯ ಕೃಷಿಯನ್ನು ಮಾಡಿ ಪ್ರಶಸ್ತಿಯನ್ನು ಪಡೆದು ಪುತ್ತೂರಿಗೆ ಗೌರವವನ್ನು ತಂದಿದ್ದಾರೆ” ಎಂದು ಹೇಳಿದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ “ಬದಲಾಗುತ್ತಿರುವ ಈ ವ್ಯವಸ್ಥೆಯಲ್ಲಿ ಹಿಂದೆ ಅನುಭವಿಸಿ…
ಮಂಗಳೂರು : ಕುಡ್ಲ ತುಳುಕೂಟ (ರಿ) ಇದರ ವತಿಯಿಂದ ದಿನಾಂಕ 01-03-2024ರಂದು ನಿಧನರಾದ ಖ್ಯಾತ ಪತ್ರಕರ್ತ ಮನೋಹರ ಪ್ರಸಾದ ಇವರಿಗೆ ಶ್ರದ್ಧಾಂಜಲಿ ಸಭೆಯು ತುಳುಕೂಟದ ಕಛೇರಿಯಲ್ಲಿ ದಿನಾಂಕ 03-03-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಕುಡ್ಲ ತುಳುಕೂಟ (ರಿ) ನ ಅಧ್ಯಕ್ಷ ಮರೋಳಿ ಶ್ರೀ ದಾಮೋದರ ನಿಸರ್ಗ ಬಿ. “ಪತ್ರಿಕಾ ಧರ್ಮವನ್ನು ಭಕ್ತಿಯಿಂದ ಸೃಜನಶೀಲತೆಯಿಂದ ಪಾಲಿಸಿಕೊಂಡು ಬಂದವರು ಮನೋಹರ ಪ್ರಸಾದರು. ತುಳು ಐತಿಹ್ಯ ಲೇಖನ, ಸಂಶೋಧನಾ ಬರಹಗಳಿಗೆ ಪ್ರಸಿದ್ಧರಾಗಿದ್ದರು. ತುಳುಕೂಟ ನಡೆಸುವ ರತ್ನವರ್ಮ ಹೆಗ್ಗಡೆ ಅಪ್ರಕಟಿತ ತುಳು ನಾಟಕ ಸ್ಪರ್ಧೆಯ ತೀರ್ಪುಗಾರರಾಗಿಯೂ ಮೂರು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿದ ಕೀರ್ತಿ ಅವರದ್ದು, ಅವರ ಅಕಾಲಿಕ ಮರಣ ನಮ್ಮ ಕೂಟಕ್ಕೆ ನಷ್ಟ ಉಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ.” ಎಂದು ಹೇಳಿದರು. ಸಭೆಯಲ್ಲಿ ವರ್ಕಾಡಿ ರವಿ ಅಲೆವೂರಾಯ, ಹೇಮಾ ನಿಸರ್ಗ, ಸುಜಾತಾ ಸುವರ್ಣ, ಸತ್ಯವತಿ ಆರ್. ಬೋಳೂರು, ರಮೇಶ್ ಕುಲಾಲ್ ಬಾಯಾರ್, ವಿಜಯಕುಮಾರ್ ಮತ್ತು ಭಾಸ್ಕರ ಕುಲಾಲ್ ಬರ್ಕೆ ಉಪಸ್ಥಿತರಿದ್ದರು.
ಮಂಗಳೂರು : ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಕಲ್ಲೂರಾಯ ಪ್ರತಿಷ್ಠಾನ ಬನದಗದ್ದೆ ಇವರ ಜಂಟಿ ಆಶ್ರಯದಲ್ಲಿ ಸಾಹಿತಿ ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ಇವರ 48ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಕಡಲ ಕವಿಗೋಷ್ಠಿ – ಸಾಹಿತ್ಯ ಕೃತಿ ಬಿಡುಗಡೆ – ಸಾಂಸ್ಕೃತಿಕ ಮಹಾ ಸಮ್ಮೇಳನವು ಮಂಗಳೂರಿನ ಸಮುದ್ರದ ಅಬ್ಬಕ್ಕ ರಾಣಿ ವಿಹಾರ ನೌಕೆಯಲ್ಲಿ ದಿನಾಂಕ 08-02-2024ರಂದು ಅದ್ದೂರಿಯಾಗಿ ಜರುಗಿತು. ಸಮಾರಂಭದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಅವರು ವಹಿಸಿದ್ದರು. ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಹಿಂದುಳಿದ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದ ಉದ್ಘಾಟನೆಯನ್ನು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರರವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕಲ್ಲೂರಾಯ ಪ್ರತಿಷ್ಠಾನಕ್ಕೆ ಚಾಲನೆ ನೀಡಲಾಯಿತು. ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ದಿವಂಗತ ಮಹಾಂತಪ್ಪ ಮೇಟಿ ಅವರ ಸಂಸ್ಮರಣೆ ಪ್ರಯುಕ್ತ ಹಿರಿಯ ಸಾಹಿತಿಗಳಾದ ಶ್ರೀ ಹರಿ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕದ ಏಕೀಕರಣ ಮತ್ತು ನಾಮಕರಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಪರಿಷತ್ತು ಹುಟ್ಟಿದ್ದೇ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಅಲ್ಲಿಂದ ಮುಂದೆ ಪ್ರತಿ ಅಖಿಲ ಭಾರತ ಸಮ್ಮೇಳನಗಳೂ ಈ ನಿಟ್ಟಿನಲ್ಲಿ ಇಟ್ಟ ದಿಟ್ಟ ಹೆಜ್ಜೆಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಪ್ರವೃತ್ತವಾಗಿದೆ. ಕರ್ನಾಟಕ ಎಂಬ ಹೆಸರಿನ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ, ಐವತ್ತು ಮಹತ್ವದ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡಲು ತಾತ್ವಿಕವಾಗಿ ನಿರ್ಧರಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿರಿಮೆಗೆ ಅದರಲ್ಲಿಯೂ ಮುಖ್ಯವಾಗಿ ಕರ್ನಾಟಕದ ಏಕೀಕರಣಕ್ಕೆ ಹಾಗೂ ನಾಮಕರಣಕ್ಕೆ ದುಡಿದ ಐವತ್ತು ವ್ಯಕ್ತಿ-ಸಂಘ ಸಂಸ್ಥೆಗಳನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗುವುದು. ಈ ಕುರಿತ ಆಯ್ಕೆಗೆ ಸರ್ವೊಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು. ಈ ಪ್ರಶಸ್ತಿಗಳಿಗೆ ‘ಸುವರ್ಣ ಕರ್ನಾಟಕ…