Author: roovari

ನವದೆಹಲಿ : ದಿನಾಂಕ 03-04-2024ರಂದು ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಾಲೆಯ ಒಂದು ಕೊಠಡಿಯಲ್ಲಿ ಕನ್ನಡ ನಾಟಕದ ಪ್ರಯೋಗ ನಡೆಯಿತು. ದ.ರಾ. ಬೇಂದ್ರೆಯವರ ನಾಟಕ ‘ತಿರುಕರ ಪಿಡುಗು’. ನಾಟಕದ ಪರಿಚಯ ಮಾಡುತ್ತಾ ನಿರ್ದೇಶಕರು ಮಾಹಿತಿ ನೀಡಿದ ಪ್ರಕಾರ ದ.ರಾ. ಬೇಂದ್ರೆಯವರು ಈ ನಾಟಕವನ್ನು ರಚಿಸಿದ್ದು ಬರೋಬ್ಬರಿ ಒಂದು ನೂರು ವರುಷಗಳ ಹಿಂದೆ (1924ರಲ್ಲಿ). ಬೇಂದ್ರೆ ಅವರ 128ನೇ ಜನ್ಮ ದಿನದ ಕಾರಣಕ್ಕಾಗಿ ಈ ನಾಟಕ, ನಮ್ಮ ಬಿಜಾಪುರದ ಒಂದು ಕಾಲದ ಸಕ್ರಿಯ ರಂಗಕಾರ್ಯಕರ್ತ, ಕಳೆದ ಮೂವತ್ತು ವರುಷಗಳಿಂದ ದೆಹಲಿ ವಾಸಿ ನಿರ್ದೇಶಕ ಶಿವಾನಂದ ಇಂಗಳೇಶ್ವರ ಅವರು ದೆಹಲಿಯಲ್ಲಿನ ಕೇಂದ್ರ ಸರ್ಕಾರಿ ಕಚೇರಿಗಳು ಸರ್ಕಾರ, ದೆಹಲಿ ರಾಜ್ಯ ಸರ್ಕಾರ ಕಚೇರಿಗಳು, ದೆಹಲಿ ಮತ್ತು ಕೇಂದ್ರ ಸರ್ಕಾರಗಳ ಹಲವು ನಿಗಮ ಮತ್ತು ಮಂಡಳಿಗಳಲ್ಲಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ದೆಹಲಿ ಕನ್ನಡಿಗರನ್ನು ಸೇರಿಸಿ ಕಟ್ಟಿಕೊಂಡಿರುವಂತಹ ಒಂದು ಕನ್ನಡ ಭಾಷೆಯ ಸಾಂಸ್ಕೃತಿಕ ಚಟುವಟಿಕೆಗಳ ಸಂಸ್ಥೆ ‘ದಿನಕರ ಫೌಂಡೇಷನ್’. ದೆಹಲಿ ನಗರ ಕನ್ನಡ ಕಲಾವಿದರ…

Read More

ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಸ್ಥಳೀಯ ಕಲಾಸಂಸ್ಥೆ ಲಾವಣ್ಯ ಇದರ 47ನೇ ವಾರ್ಷಿಕೋತ್ಸವ ಹಾಗೂ ರಂಗಪಂಚಮಿ -2024 ಐದು ದಿನಗಳ ನಾಟಕೋತ್ಸವವು ದಿನಾಂಕ 02-03-2024ರಂದು ಪ್ರಾರಂಭವಾಯಿತು. ಈ ನಾಟಕೋತ್ಸವವನ್ನು ಉದ್ಘಾಟಿಸಿದ ಘಟಪ್ರಭಾ ಜೆ.ಎನ್.ಎಸ್. ಕನ್ಸ್ಟ್ರಕ್ಷನ್ ಆಡಳಿತ ನಿರ್ದೇಶಕ ಎಚ್. ಜಯಶೀಲ ಎನ್. ಶೆಟ್ಟಿ ಇವರು ಮಾತನಾಡಿ “ರಂಗಭೂಮಿ ಕ್ಷೇತ್ರದಲ್ಲಿ ‘ಲಾವಣ್ಯ’ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆ ಹೆಗ್ಗಳಿಕೆಯಾಗಿದೆ” ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ “ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು, ಕಲಾ ಪೋಷಕರು ಕೈಹಿಡಿದು ಮುನ್ನೆಡಿಸಿದ ಪರಿಣಾಮ ಕಳೆದ ನಲವತ್ತಾರು ವಸಂತಗಳಲ್ಲಿ ಲಾವಣ್ಯ ಲವಲವಿಕೆಯಿಂದಲೇ ಬೆಳೆದುಬಂದಿದೆ. ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಲಾವಣ್ಯ, ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ” ಎಂದರು.…

Read More

ಕಾಸರಗೋಡು : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕಾಸರಗೋಡು ಮತ್ತು ಕನ್ನಡ ಭವನ ಪ್ರಕಾಶನ ಇದರ ವತಿಯಿಂದ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) – ಕಥಾ ಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕೇರಳ-ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ 2024’ವು ದಿನಾಂಕ 10-03-2024ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ. ಸಮಾರಂಭವನ್ನು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷರಾದ ಮಾನ್ಯ ಶ್ರೀ ಎಂ.ಕೆ. ಪ್ರಾಣೇಶ್ ಇವರು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಇದರ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಸ್ವಾಗತಿಸಲಿದ್ದು, ಕಥಾ ಬಿಂದು ಪ್ರಕಾಶನದ ಅಧ್ಯಕ್ಷರಾದ ಪಿ.ವಿ. ಪ್ರದೀಪ್ ಕುಮಾರ್ ಪ್ರಾಸ್ತಾವಿಕ ಭಾಷಣ ಗೈಯಲಿದ್ದಾರೆ.…

Read More

ಮಂಗಳೂರು : ಉಡುಗೊರೆ ಪ್ರಕಾಶನ ಪ್ರಕಟಿಸಿದ ಕವಯಿತ್ರಿ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನವು ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ದಿನಾಂಕ 24-02-2024ರಂದು ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಜೆ.ಎನ್‌.ಯು. ನಿವೃತ್ತ ಪ್ರಾಧ್ಯಾಪಕರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ “ಈ ದೇಶವನ್ನು ಮುಸ್ಲಿಮರು 600 ವರ್ಷಗಳ ಕಾಲ ಆಳಿದ್ದಾರೆ. ಅವರು ಮರಣವನ್ನಪ್ಪಿದ್ದು ಕೂಡಾ ಇಲ್ಲೇ. ಹಾಗಾಗಿ ಅವರು ದೋಚಲಿಲ್ಲ. ಈ ದೇಶದ ಹಿಂದೂಗಳು ಶೇಕಡಾ 24ರಷ್ಟು ಹಿಂದುಳಿದಿದ್ದರೆ ಮುಸ್ಲಿಮರು ಶೇ.38ರಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರು ದೋಚಿದ್ದರೆ ಹಿಂದೂಗಳಿಗಿಂತ ಶ್ರೀಮಂತರಾಗಬೇಕಿತ್ತು. ಈ ಕಹಿಸತ್ಯವನ್ನು ಜಗತ್ತಿಗೆ ತಿಳಿಸುವುದಕ್ಕಾಗಿಯಾದರೂ ಮುಸ್ಲಿಮರು ಬರವಣಿಗೆಯಲ್ಲಿ ಸಕ್ರಿಯವಾಗಬೇಕು” ಎಂದು ಅಭಿಪ್ರಾಯಪಟ್ಟರು. ಕಥೆಗಾರ್ತಿ ಸುಧಾ ಆಡುಕಳ ಕೃತಿಯನ್ನು ಪರಿಚಯಿಸಿ, ಕವಯಿತ್ರಿ ಫಾತಿಮಾ ರಲಿಯಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಪತ್ರಕರ್ತ ಮುಆದ್ ಜಿ.ಎಂ. ಕವನ ವಾಚಿಸಿದರು. ಕವಿ ವಿಲ್ಸನ್ ಕಟೀಲ್ ಮುಖ್ಯ ಅತಿಥಿಗಳಾಗಿದ್ದರು. ಲೇಖಕಿ ಉಮೈರತ್ ಕುಮೇರು ಸ್ವಾಗತಿಸಿ, ಎಚ್.ಎಂ. ಪೆರ್ನಾಳ್ ಕಾರ್ಯಕ್ರಮವನ್ನು ನಿರೂಪಿಸಿದರು.

Read More

ತೆಕ್ಕಟ್ಟೆ : ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಪುಷ್ಕರಣಿಯಲ್ಲಿ ಯಶಸ್ವೀ ಕಲಾವೃಂದದ ಸಿನ್ಸ್ 1999 ಶ್ವೇತಯಾನದ ಶ್ವೇತ ಸಂಜೆಯ ಮೂರನೇ ದಿನವನ್ನು ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಯೋಗದೊಂದಿಗೆ ನಾದ ಮಣಿನಾಲ್ಕೂರು ಇವರ ‘ಪುಷ್ಕರಣಿಯಲ್ಲೊಂದು ಕತ್ತಲ ಹಾಡು’ ಕಾರ್ಯಕ್ರಮವು ದಿನಾಂಕ 25-02-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಅಡಿಗ ಇವರು ಮಾತನಾಡಿ “ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮವಾಗಬೇಕಾದರೆ ವಾತಾವರಣಗಳು ಪೂರಕವಾಗಿರಬೇಕು. ವಿಶಿಷ್ಠ ಪರಿಕಲ್ಪನೆಯ ನಾದ ಮಣಿನಾಲ್ಕೂರು ಇವರ ‘ಪುಷ್ಕರಣಿಯಲ್ಲೊಂದು ಕತ್ತಲ ಹಾಡು’ ಹೆಚ್ಚು ಅರ್ಥಗರ್ಭಿತ. ಮನಸ್ಸಿನ ಉದ್ವೇಗವನ್ನು ಸಮತೋಲನಕ್ಕೆ ತರುವ ಈ ಹಾಡು ಮಾನಸಿಕ ಪ್ರಸನ್ನತೆಗೆ ಮದ್ದು” ಎಂದು ಹೇಳಿದರು. ಪ್ರಾಯೋಜಕರಾದ ಶ್ರೀನಿವಾಸ ಅಡಿಗರನ್ನು ಲೆಕ್ಕಪರಿಶೋಧಕರಾದ ಟಿ.ಎನ್. ಪ್ರಭು, ಸಾಹಿತಿ ನರ್ಮದಾ ಪ್ರಭು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ರೊಟೇರಿಯನ್ ಸುಧಾಕರ ಶೆಟ್ಟಿ, ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಗೋಪಾಲ ಪೂಜಾರಿ ಕೊಮೆ ಉಪಸ್ಥಿತರಿದ್ದು ಗೌರವಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಣೆ…

Read More

ಬೆಂಗಳೂರು : ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಕೆ. ರವಿಕುಮಾರ ಚಾಮಲಾಪುರ ಅವರ ನಿಧನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಯೋಜಿತವಾಗಿರುವ ಸಂದರ್ಭದಲ್ಲಿ ಈ ಅಗಲುವಿಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ ಎಂದು ಅವರು ಕಂಬನಿಯನ್ನು ಮಿಡಿದಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ.ಕೆ. ರವಿಕುಮಾರ ಚಾಮಲಾಪುರ ಇವರು ದಿನಾಂಕ 04-03-2024ರ ಬೆಳಿಗ್ಗೆ ನಿಧನರಾಗಿದ್ದಾರೆ. ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಚಾಮಲಾಪುರ ಗ್ರಾಮದ ಶ್ರೀಮತಿ ಸಣ್ಣಮ್ಮ ಮತ್ತು ಶ್ರೀ ಸಿ. ಕಾಳೇಗೌಡ ದಂಪತಿಗಳ ಮಗನಾದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೂ, ಪ್ರೌಢ ಶಿಕ್ಷಣವನ್ನು ಹುಲಿವಾನದಲ್ಲಿ ಪಡೆದು, ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ಮಂಡ್ಯದ ಪ್ರತಿಷ್ಠಿತ ಪಿ.ಇ.ಎಸ್. ವಿಜ್ಞಾನ ಕಾಲೇಜಿನಲ್ಲಿ ಐಚ್ಛಿಕ ಕನ್ನಡ ವಿಷಯದೊಂದಿಗೆ ಪೂರೈಸಿರುತ್ತಾರೆ.…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಮಂದಿರದಲ್ಲಿ ಕೆಂಗಲ್ ಹನುಮಂತಯ್ಯ ದತ್ತಿ ಮತ್ತು ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ವಿತರಣಾ ಸಮಾರಂಭವು ದಿನಾಂಕ 03-03-2024ರಂದು ನಡೆಯಿತು. ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಉದ್ಘಾಟನಾ ಭಾಷಣದಲ್ಲಿ “ಕೆಂಗಲ್ ಹನುಮಂತಯ್ಯನವರು ಸದಾ ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದರು. ಅವರ ಕಾಲದಲ್ಲಿಯೇ ಕನ್ನಡ ಸಂಸ್ಕೃತಿ ಕ್ಷೇತ್ರಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿತವಾಯಿತು. ಮಾಸ್ತಿ ಮತ್ತು ಕುವೆಂಪು ಅವರ ಸಂಪಾದಕತ್ವದಲ್ಲಿ ಕುಮಾರವ್ಯಾಸ ಸಂಪುಟವನ್ನು ಎರಡು ರೂಪಾಯಿ ನೀಡಿ ನಾಡಿನೆಲ್ಲೆಡೆ ತಲುಪುವಂತೆ ಮಾಡಿದ್ದರು. ಅಪರೂಪದ ರಾಜಕೀಯ ಮತ್ಸದ್ದಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ನೈಜ ಪುಸ್ತಕ ಪ್ರೇಮಿಯಾಗಿದ್ದರು, ತಮ್ಮ ವಿರುದ್ಧ ರಾಜಕೀಯ ಷಡ್ಯಂತರಗಳು ನಡೆಯುತ್ತಿದ್ದ ಕಾಲದಲ್ಲಿ ಪ್ಲೇಟೋ ರಚಿಸಿದ ‘ರಿಪಬ್ಲಿಕ್’ ಓದುತ್ತಿದ್ದರು. ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಅಪಾರ ಕೊಡುಗೆ ನೀಡಿದ ಕೆಂಗಲ್ಲರು ರಾಷ್ಟ್ರಮಟ್ಟದಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ರೈಲ್ವೇ ಸಚಿವರಾಗಿ ಕರ್ನಾಟಕಕ್ಕೆ ಮಹತ್ವದ ಯೋಜನೆಗಳನ್ನು ತಂದರು. ಕೆಂಗಲ್ಲರ ಕೊಡುಗೆಗಳನ್ನ…

Read More

ಉಡುಪಿ : ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಶ್ರೀ ದೇವಳದ ವಸಂತ ಮಂಟಪದಲ್ಲಿ ದಿನಾಂಕ 04-03-2024ರಂದು ನಡೆದ ಸಾಪ್ತಾಹಿಕ ನೃತ್ಯಸರಣಿ ‘ನೃತ್ಯ ಶಂಕರ’ದಲ್ಲಿ ವಿದುಷಿ ಡಾ. ಶೀತಲ್ ರಾವ್ ಮನೋಜ್ಞವಾಗಿ ಅಭಿನಯಿಸಿ ಪೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದಳು. ಈಕೆ ನೃತ್ಯನಿಕೇತನ ಕೊಡವೂರು ಇದರ ಗುರುಗಳಾದ ಸುಧೀರ್ ರಾವ್ ಕೊಡವೂರ್ ಹಾಗೂ ಮಾನಸಿ ಸುಧೀರ್ ಇವರ ಶಿಷ್ಯೆ. ಪ್ರದೀಪ್ ಚಕ್ರಪಾಣಿ ಹಾಗೂ ಗೀತಾಂಜಲಿ ಪ್ರದೀಪ್ ಇವರ ಮುದ್ದಿನ ಕುವರಿ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ದಿನಾಂಕ 04-03-2024ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ಪಾರ್ತಿಸುಬ್ಬ ವಿರಚಿತ ‘ಲಂಕಾದಹನ-ಹನೂಮನಿಗೆ ಮುಂದಿನ ಬ್ರಹ್ಮಪಟ್ಟ ಪ್ರದಾನ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ. ಜಯರಾಮ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ (ಹನೂಮಂತ), ಭಾಸ್ಕರ ಬಾರ್ಯ (ಶ್ರೀರಾಮ ಮತ್ತು ರಾವಣ), ಶ್ರೀಧರ್ ರಾವ್ ಕುಂಬ್ಳೆ (ಪ್ರಹಸ್ತ), ದುಗ್ಗಪ್ಪ ನಡುಗಲ್ಲು (ಅಕ್ಷ ಕುಮಾರ), ಗುಡ್ಡಪ್ಪ ಬಲ್ಯ (ಇಂದ್ರಜಿತು) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಟಿ. ರಂಗನಾಥ ರಾವ್‌ ವಂದಿಸಿದರು.

Read More

ಗೋಪಾಡಿ : ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದಲ್ಲಿ ‘7ನೇ ಅರ್ಥಾಂಕುರ’ ಹೊಸ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮವು ದಿನಾಂಕ 03-03-2024ರಂದು ಗೋಪಾಡಿಯ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಚಂದ್ರಶೇಖರ ಇವರನ್ನು ಅಭಿನಂದಿಸಿ ಮಾತನ್ನಾಡಿದ ಯಕ್ಷಗುರು ಕೃಷ್ಣಮೂರ್ತಿ ಉರಾಳ “ಮುಂದಿನ ತಲೆಮಾರಿಗೆ ಹಾಗೂ ಯಕ್ಷಗಾನ ತಾಳಮದ್ದಳೆಗೆ ಅರ್ಥಧಾರಿಗಳನ್ನು ತಯಾರಿ ಮಾಡುವ ಮತ್ತು ಇತರ ಹಲವಾರು ವಿಭಾಗದ ಕಲಾ ಚಟುವಟಿಕೆಯನ್ನು ನೆರವೇರಿಸುತ್ತಾ ಬಂದ ಸಂಸ್ಥೆಯ ಕಾರ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೋಪಾಡಿಯ ಗಂಗಾ ಪ್ರೊಡೆಕ್ಟ್ ಮಾಲಕರಾದ ಚಂದ್ರಶೇಖರ್ ಪ್ರಾಯೋಜಕತ್ವವನ್ನು ನಿರ್ವಹಿಸಿಕೊಂಡು ಕಲಾಸಕ್ತಿಯನ್ನು ಮೆರೆದಿದ್ದಾರೆ. ಇವರ ಕಲಾವಂತಿಕೆಯ ಪ್ರೇಕ್ಷಕನಾಗಿ, ಪ್ರೋತ್ಸಾಹಕನಾಗಿ ಮನಮೆಚ್ಚಿ ಹೃದಯದಿಂದ ಕೊಟ್ಟ ಕೊಡುಗೆ ನಿಜಕ್ಕೂ ಶ್ಲಾಘನೀಯ.” ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಉದ್ಘಾಟನೆಯ ಕಾರ್ಯಕ್ರಮಗಳು ದಾಖಲೆಯ ಕಾರ್ಯಕ್ರಮವಾದವು. ರಾಜಕೀಯ ನೇತಾರರು, ವೈದ್ಯರುಗಳು, ಉದ್ಯಮಿಗಳು ಎಲ್ಲರೂ ಪ್ರಥಮವಾಗಿ ರಂಗದಲ್ಲಿ ಅಭಿನಯಿಸಿದ ಹಿರಿಮೆ ಸಂಸ್ಥೆಯದ್ದು. ವಿವಿಧ ಕಲಾ ಪ್ರಕಾರಗಳ ತರಗತಿಗಳನ್ನು ನಡೆಸುತ್ತಾ ಸಾಗಿ ಬಂದ ಸಂಸ್ಥೆ 25ನೇ…

Read More