Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಮೈಸೂರಿನ ಜಿ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ದಿನಾಂಕ 26-02-2024ರಂದು ನಡೆದ ದಕ್ಷಿಣ ಪೂರ್ವ ವಲಯ ಅಂತರ್ ವಿಶ್ವವಿದ್ಯಾನಿಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗೋವಿಂದ ದಾಸ ಕಾಲೇಜಿನ ಕಿರು ಪ್ರಹಸನ ತಂಡವು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದೆ. ಚರ್ಮವಾದ್ಯ ಸ್ಪರ್ಧೆಯಲ್ಲಿ ಮತ್ತು ಇನ್ಸ್ಟಲೇಷನ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿರುತ್ತಾರೆ. ತಂಡದಲ್ಲಿ ಅರುಣ್, ಗಣೇಶ್ ಭಟ್, ಭರತ್, ಪ್ರೀತೇಶ್, ಮನೀಶ್ ಬಿ., ಹಿಮಾಂಗಿ ಡಿ. ಉಳ್ಳಾಲ್, ಜಿತೀನ್ ಜೆ. ಶೆಟ್ಟಿ, ಸಂಪತ್ ಎಸ್. ಬಿ., ನಿರ್ಮಿಕಾ ಎನ್. ಸುವರ್ಣ, ಸೈನಾಕುಮಾರ್, ವೈಭವಿ, ಮಹಾಂತೇಶ್ ಬಿ. ಭಾಗವಹಿಸಿದ್ದರು. ತಂಡದ ವ್ಯವಸ್ಥಾಪಕರಾಗಿ ಪುನೀತಾ ಆರ್. ಮತ್ತು ರವಿಚಂದ್ರ ಸಹಕರಿಸಿದರು.
ಕಾಸರಗೋಡು : ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಗಡಿನಾಡು ಘಟಕ ಹಾಗೂ ಕನ್ನಡ ಭವನ ಕಾಸರಗೋಡು ಆಶ್ರಯದಲ್ಲಿ ಸುಭಾಷಿಣಿ ಚಂದ್ರ ಕನ್ನಟಿಪಾರೆ ಬೇಕೂರು ಸಾರಥ್ಯದಲ್ಲಿ ‘ಗಡಿನಾಡು ಕಾಸರಗೋಡು ಕನ್ನಡ ಹಬ್ಬ’ವು ದಿನಾಂಕ 10-03-2024ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ. ಕಾಸರಗೋಡಿನ ಕನ್ನಡ ಭವನದ ಸಂಸ್ಥಾಪಕರಾದ ಶ್ರೀ ವಾಮನ ರಾವ್ ಬೇಕಲ್ ಇವರ ಅಧ್ಯಕ್ಷತೆಯಲ್ಲಿ ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಲೇಖಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೃತಿಗಳ ಬಿಡುಗಡೆ ಹಾಗೂ ‘ಕನ್ನಡ ರತ್ನ ರಾಜ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 02-03-2024ರಂದು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಚೂಡಾಮಣಿ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಹೊಸ ಮೂಲೆ ಗಣೇಶ್ ಭಟ್, ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ್ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ. ಜಯರಾಮ್ ಭಟ್ ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ ಮತ್ತು ಭಾಸ್ಕರ ಬಾರ್ಯ (ಹನೂಮಂತ), ಶ್ರೀಧರ್ ರಾವ್ ಕುಂಬ್ಳೆ (ಸೀತೆ), ಭಾರತಿ ಜಯರಾಮ್ (ತೃಣಬಿಂದು), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಂಕಿಣಿ), ಹರಿಣಾಕ್ಷಿ ಜೆ. ಶೆಟ್ಟಿ (ಶೃಂಗಾರ ರಾವಣ), ಲಕ್ಷ್ಮೀ ವಿ.ಜಿ. ಭಟ್ (ತ್ರಿಜಟೆ), ಭಾರತಿ ಅರಿಯಡ್ಕ (ಅನುಕೂಲ ನಾರಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.
ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಇದರ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀಮನ್ಮಹಾಶಿವರಾತ್ರಿಯ ಪಯುಕ್ತ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಆಹ್ವಾನಿತ ತಂಡಗಳ ಭಜನೆ ಸ್ಪರ್ಧೆ’ಯನ್ನು ದಿನಾಂಕ 10-03-2024ರಂದು ಪೂರ್ವಾಹ್ನ 9-00 ಗಂಟೆಗೆ ಉಡುಪಿ ಬನ್ನಂಜೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಸಮಾರಂಭದ ನಂತರ ಶ್ರೀ ಭೈರವನಾಥೇಶ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಗಂಟೆ 9-30ರಿಂದ ಭಜನಾ ಸ್ಪರ್ಧೆಯು ಆರಂಭವಾಗಲಿದ್ದು, ಸಂಜೆ ಗಂಟೆ 5.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಜನಾ ಕ್ಷೇತ್ರದ ಹಿರಿಯ ಸಾಧಕರಾದ ಮಲ್ಪೆ ಶ್ರೀರಾಮ ಭಜನಾ ಮಂಡಲಿಯ ಮಾಲಕರಾದ ಶ್ರೀ ಸೋಮಪ್ಪ ಕುಂದರ್ ತೊಟ್ಟಂ ಮತ್ತು ಉಡುಪಿಯ ಕನ್ನರ್ಪಾಡಿ ಜಯ ದುರ್ಗೆ ಭಜನಾ ಮಂಡಳಿಯ ಶ್ರೀ ಕಾಳಪ್ಪ ಶೆಟ್ಟಿ ಕನ್ನರ್ಪಾಡಿ ಒಡ್ಡಾಡಿ ಮನೆ ಇವರುಗಳನ್ನು ಸನ್ಮಾನಿಸಲಾಗುವುದು. ಈ ಭಜನಾ ಸ್ಪರ್ಧೆಯ ಬಹುಮಾನಗಳು : ಪ್ರಥಮ ರೂ.20,000/-,…
ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲದ ನಗರಸಭೆಯ ಮಹಾತ್ಮಾ ಗಾಂಧಿ ರಂಗ ಮಂದಿರದಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2023-24’ ಕಾರ್ಯಕ್ರಮಗಳು ದಿನಾಂಕ 24-02-2024ರಂದು ಜರಗಿದವು. ಈ ಸಮಾರಂಭಕ್ಕೆ ಚಾಲನೆ ನೀಡಿದ ಚೌಟರ ಅರಮನೆ ಮೂಡುಬಿದಿರೆ ಅಬ್ಬಕ್ಕ ವಂಶಸ್ಥೆ ಮತ್ತು ವೀರರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಮಂಗಳೂರು ಇದರ ಕಾರ್ಯದರ್ಶಿ ಡಾ. ಅಕ್ಷತಾ ಅದರ್ಶ್ ಜೈನ್ ಇವರು ಮಾತನಾಡಿ “ವೀರರಾಣಿ ಅಬ್ಬಕ್ಕ ಉಳ್ಳಾಲ ಮತ್ತು ಮೂಡುಬಿದಿರೆಗೆ ಮಾತ್ರ ಸೀಮಿತವಲ್ಲ. ಅವರು ಇಡೀ ಭಾರತ ದೇಶದ ಸುಪುತ್ರಿ. ಈ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ಉತ್ಸವವನ್ನು ಇಡೀ ಭಾರತ ದೇಶದಾದ್ಯಂತ ಆಚರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು. ವಿವಿಧ ಗೋಷ್ಠಿಗಳಿಗೆ ಚಾಲನೆ ನೀಡಿದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ, “ರಾಣಿ ಅಬ್ಬಕ್ಕನ ಬಗ್ಗೆ ಮಾತನಾಡುವಾಗ ಅವಳು ನಮ್ಮವಳು ಮತ್ತು ರಾಷ್ಟ್ರ ಇತಿಹಾಸಕ್ಕೆ ಸೇರಿದವಳು ಎನ್ನವುದು ಉಲ್ಲೇಖಾರ್ಹವಾಗಿದೆ. ಅಬ್ಬಕ್ಕಳ ಇತಿಹಾಸವನ್ನು ಮರು ಕಟ್ಟುವ ಕೆಲಸವಾಗಬೇಕಾಗಿದ್ದು, ಕಳೆದ 27 ವರುಷಗಳಿಂದ ಅಬ್ಬಕ್ಕಳ…
ಮಂಗಳೂರು : ‘ಬ್ಯಾರಿ ಎಲ್ತ್ ಕಾರ್ ಪಿನ್ನೆ ಕಲಾವಿದಮ್ಮಾರೆ ಕೂಟ’ವಾದ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ‘ತರವಾಡ್ಲ್ ಒರು ನಾಲ್’ ವಾರ್ಷಿಕ ಅಭಿಯಾನಕ್ಕೆ ಮಂಜನಾಡಿ ಗ್ರಾಮದ ‘ಸಾರ್ತಾಲ್ ತರವಾಡ್’ ಮನೆಯಲ್ಲಿ ದಿನಾಂಕ 01-03-2024ರ ಶುಕ್ರವಾರ ಚಾಲನೆ ನೀಡಲಾಯಿತು. ಅಭಿಯಾನದ ಪೋಸ್ಟ್ ಬಿಡುಗಡೆಗೊಳಿಸಿ ಮಾತನಾಡಿದ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ “‘ನಙಲೋ ತರವಾಡ್-ನಙಲೊ ಪೆರಿಮೆ’ ಎಂಬುದು ನೂತನ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಅವರ ಹೊಸ ಪರಿಕಲ್ಪನೆಯಾಗಿದೆ. ಹಿಂದೆ ಬ್ಯಾರಿಗಳಲ್ಲಿ ತರವಾಡ್ ಮನೆತನಕ್ಕೆ ತನ್ನದೇ ಆದ ಗೌರವ, ಹಿರಿಮೆಯಿತ್ತು. ಆದರೆ ಅವಿಭಕ್ತ ಕುಟುಂಬ ಪದ್ಧತಿ ಕ್ಷೀಣಿಸುತ್ತಲೇ ತರವಾಡ್ ಮನೆತನದ ಹಿರಿಮೆಯ ಬಗ್ಗೆ ಯುವ ಪೀಳಿಗೆಗೆ ಮಾಹಿತಿ ಇಲ್ಲದಂತಾಗಿದೆ. ಆ ಅರಿವು ಎಲ್ಲರಿಗೂ ಮೂಡಿಸುವ ಪ್ರಯತ್ನ ಇದಾಗಿದೆ. ಹಾಗಾಗಿ ‘ತರವಾಡ್ಲ್ ಒರು ನಾಲ್’ ಕಾರ್ಯಕ್ರಮದ ಮೂಲಕ ಉಳ್ಳಾಲ ತಾಲೂಕು ವ್ಯಾಪ್ತಿಯ ಎಲ್ಲಾ ತರವಾಡ್ ಮನೆತನಗಳ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರುವ ಉದ್ದೇಶ ‘ಮೇಲ್ತೆನೆ’ ಹೊಂದಿದೆ.” ಎಂದರು. ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ವಿಷಯ ಮಂಡಿಸಿದರು. ಬಳಿಕ…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಮಂಗಳೂರು ವಿ. ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಲಿಯಬ್ಬ ಜೋಕಟ್ಟೆ ಅವರ ‘ಬ್ಯಾರಿ: ನಾನು ಕಂಡಂತೆ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 01-03-2024ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದ ಮಂಗಳೂರು ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ “ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದಂತೆ ನಡೆಯುವ ಅಧ್ಯಯನವು ತಳಸ್ಪರ್ಶಿಯಾಗಬೇಕು. ಆವಾಗ ಮಾತ್ರ ಬ್ಯಾರಿ ಕ್ಷೇತ್ರ ಕಾರ್ಯದ ವಿಸ್ತರಣೆ ಸಾಧ್ಯ. ಬ್ಯಾರಿ ಭಾಷೆಯಲ್ಲಿ ಸಾಹಿತ್ಯದ ಅನೇಕ ಪ್ರಕಾರಗಳು ಬಂದಿವೆ. ಆದರೆ ತಳಸ್ಪರ್ಶಿ ಅಧ್ಯಯನದ ಕೊರತೆ ಕಾಡುತ್ತಿವೆ. ಈ ನಿಟ್ಟಿನಲ್ಲಿ ಅಧ್ಯಯನ ಪೀಠವು ಕ್ಷೇತ್ರ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಆಲಿಯಬ್ಬ ಜೋಕಟ್ಟೆಯವರ ಈ ಅನುಭವ ಕಥನವು ಸಂಶೋಧನಾಸಕ್ತ ವಿದ್ಯಾರ್ಥಿಗಳಿಗೆ ಆಕರ ಕೃತಿಯಾಗಲಿ.” ಎಂದು ಆಶಿಸಿದರು. ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ…
ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ಬಯಲು ರಂಗಮಂದಿರದಲ್ಲಿ ‘ರಂಗಚಂದಿರ’ ಆಯೋಜಿಸಿದ್ದ ಉಪನ್ಯಾಸ, ಅಭಿನಂದನೆ ಹಾಗೂ ಯಕ್ಷಗಾನ ಕಾರ್ಯಕ್ರಮವು ದಿನಾಂಕ 17-02-2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರನ್ನು ಅಭಿನಂದಿಸಿ ಮಾತನಾಡಿದ ಸಂಗೀತ ವಿದ್ವಾಂಸ ಶ್ರೀ ವಿದ್ಯಾಭೂಷಣ “ಉಪನಿಷತ್ತಿನಲ್ಲಿ ಉಲ್ಲೇಖಿಸಿರುವಂತೆ ಲಕ್ಷ್ಮೀಶ ತೋಳ್ಪಾಡಿಯವರು ಕಲಿತ ವಿದ್ಯೆಯನ್ನು ತಪಸ್ಸಿಗೆ ಸೀಮಿತಗೊಳಿಸದೆ, ಎಲ್ಲೆಡೆ ಹರಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲಿತ ವಿದ್ಯೆಯನ್ನು ಅನುಷ್ಠಾನ ಮತ್ತು ತಪಸ್ಸಿಗೆ ಮಾತ್ರ ಕೆಲವರು ಬಳಸುತ್ತಾರೆ. ಶಾಸ್ತ್ರಾಧ್ಯಯನದ ಬಳಿಕ ತಪಸ್ಸಿಗಾಗಿ ಹಿಮಾಲಯಕ್ಕೆ ತೆರಳುವುದು ಕಲಿಕೆಯಲ್ಲ, ಸ್ವಾಧ್ಯಾಯ ಮತ್ತು ಪ್ರವಚನ ಮಾಡುವುದನ್ನು ಕಲಿಕೆ ಎಂದು ಉಪನಿಷತ್ತಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಂತಹ ಮಹತ್ ಕೈಂಕರ್ಯವನ್ನು ಲಕ್ಷ್ಮೀಶ ತೋಳ್ಪಾಡಿ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರಶಸ್ತಿಗಳನ್ನು ಲಾಬಿ ಮಾಡಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ತೋಳ್ಪಾಡಿಯವರು ಪ್ರಶಸ್ತಿಗಾಗಿ ಯಾವುದೇ ಇಲಾಖೆಯನ್ನು ಸುತ್ತಿದವರಲ್ಲ” ಎಂದು ಪ್ರಶಂಸಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಮಾತನಾಡಿ “ಮಹಾಕಾವ್ಯಗಳಾದ…
ಕಾಸರಗೋಡು : ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನವಾದ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೂಲ ಸ್ಥಾನವಾದ, ಕಾಸರಗೋಡಿನ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಕಾರ್ಯಕ್ರಮ ದಿನಾಂಕ 27-02-2024 ರಂದು ನಡೆಯಿತು. ತಂಡದ ಗುರುರಾಜ್ ಕಾಸರಗೋಡು, ಜ್ಞಾನ ರೈ ಪುತ್ತೂರು, ಕೌಶಿಕಾ, ಸ್ವೀಕೃತಿ, ಅಹನಾ ಎಸ್. ರಾವ್, ಆಜ್ಞಾ ರೈ ಪುತ್ತೂರು, ಅನನ್ಯ ಎನ್. ಶೆಟ್ಟಿ, ದೇವಿಶಾ, ಹಿತಾಶ್ರೀ, ಇನಿಶಾ, ಆರಾಧ್ಯ ಆರ್., ಅಕ್ಷರ, ಸಾನ್ವಿ ಆರ್. ಚೌಟಾ, ಅನನ್ಯ, ಹರೀಶ್ ಪಂಜಿಕಲ್ಲು, ದೀಪ್ತಿ ಅಡ್ಡoತ್ತಡ್ಕ, ನವ್ಯಶ್ರೀ, ದಿಯಾ, ಶೈಲಜಾ, ಭವ್ಯ, ಜಯಾ, ಮಧುಮತಿ, ರಾಜಿ, ಪ್ರಮೀಳಾ, ಅಶ್ವತಿ, ಯಾಮಿನಿ ಕಾರ್ತಿಕ್, ಲತಾ ನಾಗೇಶ್, ಸಾಹಿತ್ಯ, ಜಿಶಾನ್ವಿ, ರಿತ್ವಿ, ಪೂಜಶ್ರೀ, ಸನುಷಾ ಸುನಿಲ್, ಉಷಾ ಸುಧಾಕರನ್, ಸಮಿತಾ ಭಟ್, ತೇಜಸ್ವಿನಿ, ವರ್ಷ…
ಮೈಸೂರು : ಬಿರುಬೇಸಿಗೆಯ ಧಗೆಯಲ್ಲಿ ತೂರಿಬಂದ ಮಳೆಯ ತಿಳಿ ತಂಗಾಳಿಯ ಸಿಂಚನದಂತೆ ಮಕ್ಕಳ ನಗೆ, ಅದಕ್ಕೊಂದು ಕಲೆಯ ಚೌಕಟ್ಟು. ನಲಿವಿನಲ್ಲೇ ನಡೆವ ಕಲಿಕೆಯ ತಿಂಗಳ ಸಂಭ್ರಮ ‘ರಜಾಮಜಾ’. ಮೈಸೂರಿನ ನಟನ ಇವರ ವತಿಯಿಂದ ಮಂಡ್ಯ ರಮೇಶ ನೇತೃತ್ವದಲ್ಲಿ ದಿನಾಂಕ 11-04-2024ರಿಂದ 05-05-2024ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಮೈಸೂರಿನ ದಟ್ಟಗಳ್ಳಿ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ನಡೆಯುವ ಮಕ್ಕಳ ಈ ಸಡಗರದ ಶಿಬಿರ. ನೂರಾರು ಮಕ್ಕಳ ವೈವಿಧ್ಯಮಯ ಕಲೆಯ ಮುಖಗಳನ್ನು ಅಪ್ಪ-ಅಮ್ಮಂದಿರಿಗೆ, ಬಂಧು-ಮಿತ್ರರಿಗೆ ಮತ್ತು ಬಾಳುವ ಈ ಸಮಾಜಕ್ಕೆ ಸರಳವಾಗಿ ದಾಖಲಿಸುತ್ತಾ ಹೋಗುತ್ತದೆ. ನಮ್ಮ ಕನ್ನಡ ಜಾನಪದದ ಪ್ರಖರ ಶಕ್ತಿಯನ್ನು ಆಧುನಿಕ ರಂಗಭೂಮಿಗೆ ದಾಟಿಸುವ ಆರಂಭದ ಕಲಿಕೆಯ ಶಿಬಿರವಿದು. ಎರಡು ದಶಕಗಳ ಸುದೀರ್ಘ ಯಾನದ ಅನುಭವವೂ ಇದರೊಂದಿಗಿದೆ. ತಿಂಗಳಿಡೀ ಮಕ್ಕಳು ಹಲವು ಸಾಧಕರೊಂದಿಗೆ, ಶ್ರೇಷ್ಠ ಸಂಪನ್ಮೂಲರೊಂದಿಗೆ, ಹೊಸ ಗೆಳೆಯ-ಗೆಳತಿಯರೊಂದಿಗೆ ಒಡನಾಡುತ್ತಾ, ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾ ಸಾಗುವುದನ್ನು ಮತ್ತು ಅರಳುವುದನ್ನು ಗಮನಿಸುವುದೇ ಒಂದು ಚಂದ. ಪ್ರವೇಶ ಪ್ರಕ್ರಿಯೆಯು ದಿನಾಂಕ 31-03-2024ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ…