Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನ ಮತ್ತು ‘ಸ್ಥಿತಿಗತಿ’ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ ಹದಿನಾಲ್ಕನೆಯ ವರ್ಷದ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯನ್ನು ಮತ್ತು ‘ಚಡಗ ಸಂಸ್ಕರಣಾ ಪುರಸ್ಕಾರ’ಕ್ಕೆ ಬಿ.ಜಿ. ಸತ್ಯಮೂರ್ತಿಯವರನ್ನು ಆಯ್ಕೆ ಮಾಡಿದೆ. ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯು ಅಪರೂಪದ ಸಸ್ಯ ವೈವಿಧ್ಯಗಳಲ್ಲಿ ಮತ್ತು ಅಷ್ಟೇ ಅಪರೂಪದ ದಂತಕತೆಯಂತೆ ಇರುವ ಅಬ್ಬೆ ಜೇಡ ಮತ್ತಿತರ ಜೀವ ವೈವಿಧ್ಯಗಳಲ್ಲಿ ಆಸಕ್ತನಾದ ಬ್ಯಾಂಕ್ ನೌಕರನೊಬ್ಬ, ಪರಿಸರವನ್ನು ಅವಲಂಬಿಸಿರುವ ಮನುಷ್ಯ ಜೀವಿಯು, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೆಚ್ಚು ಅಪಾಯಕಾರಿಯಾಗಬಲ್ಲ ಎಂಬ ಕಟು ಸತ್ಯವನ್ನು ಕಂಡುಕೊಳ್ಳುವ ಕಥೆಯನ್ನು ಹೇಳುತ್ತದೆ. ಬಿ.ಜಿ.ಎಲ್. ಸ್ವಾಮಿಯವರೂ ಪೂರ್ಣಚಂದ್ರ ತೇಜಸ್ವಿಯವರೂ ಸೃಷ್ಟಿಸಿ ಕೈಬಿಟ್ಟ ನಿಗೂಢ ಜಗತ್ತುಗಳ ಮುಂದುವರಿಕೆಯಂತೆ ಕಾಣಿಸುವ ಇಲ್ಲಿನ ವಸ್ತು ಮತ್ತು ನಿರೂಪಣೆಯ ಸ್ನಿಗ್ಧತೆ ಮತ್ತು ಗಹನತೆಗಳನ್ನು ಗುರುತಿಸಿ, ಮೂವರು ತೀರ್ಪುಗಾರರ ಸಮಿತಿಯು ಈ ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆಯೆಂದು…
ಮಂಗಳೂರು : ಮಂಗಳೂರಿನ ಉರ್ವ ಹೊಯಿಗೆಬೈಲ್ ಬಳಿಯ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ವತಿಯಿಂದ ನಡೆಯುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಮೇಳ ಆರಂಭಗೊಳ್ಳಲಿದೆ. ನೂತನ ಮೇಳದ ಉದ್ಘಾಟನೆಯು ದಿನಾಂಕ 22-10-2023ರಂದು ಸಂಜೆ 6.30ಕ್ಕೆ ಶ್ರೀ ಕ್ಷೇತ್ರದಲ್ಲಿ ಜರಗಲಿದೆ. ಉದ್ಘಾಟನಾ ಸಮಾರಂಭದ ಬಳಿಕ ಮೇಳದ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಶ್ರೀ ಚಾಮುಂಡೇಶ್ವರೀ ಯಕ್ಷಗಾನ ಮೇಳ ಆರಂಭವಾದ ಬಗ್ಗೆ : ಸುಮಾರು 2013ರಲ್ಲಿ ಹರಕೆಗಾಗಿ ಬಂದ ಚೆಂಡೆ ಮತ್ತು ಮದ್ದಳೆಗಳನ್ನು ತಾಳಮದ್ದಳೆಯಲ್ಲಿ ಉಪಯೋಗಿಸಿಕೊಳ್ಳಲಾಯಿತು. ವಾರದಲ್ಲಿ ಒಂದು ದಿನದಂತೆ ಪ್ರತೀ ವಾರ ತಾಳಮದ್ದಳೆಯ ಸೇವೆ ದೇವರಿಗೆ ನಡೆಯುತಿತ್ತು. ಸುಮಾರು 2016ರಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭವಾಗಿ ಪರಿಸರದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಶ್ರೀಕೃಷ್ಣ ಲೀಲೆ, ಕಂಸ ವಧೆ, ಮಹಿಷ ಮರ್ಧಿನಿ, ಸುದರ್ಶನ ವಿಜಯ, ಏಕಾದಶಿ ದೇವಿ ಮಹಾತ್ಮೆ ಇವುಗಳ ಯಶಸ್ವೀ ಪ್ರದರ್ಶನ ಹಾಗೂ ಮತ್ತೊಂದು ಬಾರಿ ಹರಕೆ ರೂಪದಲ್ಲಿ ‘ಸುದರ್ಶನ…
ಸಮುದ್ರದ ತೆರೆಗಳು ಸ್ನಾನಕ್ಕೋಸ್ಕರವೇ ಬೇರೆಯಾಗಿ ಬರುವುದಿಲ್ಲ. ಬಂದ ತೆರೆಗೆ ನಾವು ತಲೆಯೊಡ್ಡಿ ಸ್ನಾನ ಮಾಡಬೇಕು. ಬದುಕಿನಲ್ಲೂ ಅವಕಾಶಗಳು ನಮಗೋಸ್ಕರವೇ ಬೇರೆಯಾಗಿ ಸೃಷ್ಟಿಯಾಗುವುದಿಲ್ಲ. ಇದ್ದ ಅವಕಾಶವನ್ನೇ ನಮ್ಮದಾಗಿಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಡಾ. ಸುಬೋಧ ಕೆರ್ಕರ್ ಅವರು ದಿನನಿತ್ಯ ಸಮುದ್ರವನ್ನು ನೋಡುತ್ತಾ, ನಡೆಯುತ್ತಾ ಕಲಾವಿದರಾಗಿ ರೂಪುಗೊಂಡು ಕಲೆಯನ್ನು ಸಿದ್ಧಿಸಿಕೊಂಡವರು. ಸಮುದ್ರದ ತೆರೆಗಳು ಬಂದ ಹಾಗೆ ಇವರಲ್ಲಿ ಕಲಾ ಅಲೆಗಳು ರೂಪುಗೊಂಡವು. ಡಾಕ್ಟರ್ ಆಗಿ ರೋಗಿಗಳ ಮೈದಡವಿ ಸಾಂತ್ವನ ಹೇಳುತ್ತಿದ್ದವರು ಕಲೆಗೆ ಮಾರುಹೋಗಿ ಕಲಾವಿದರಾದವರು. ಗೋವಾ ಸಮುದ್ರ ದಂಡೆಯ ನಿಸರ್ಗ ಸವಿಯನ್ನು ಸವಿಯುತ್ತಾ ಕಲಾಸೃಷ್ಟಿಯಲ್ಲಿ ತೊಡಗಿಸಿಕೊಂಡವರು. ಗೋವಾ ಬೀಚಿನ ಮರಳಿನ ವಾಸನೆಯನ್ನೇ ಕಲೆಯಾಗಿಸಿದವರು. ಬೆಂಗಳೂರಿನ ಕಿಂಕಿಣಿ ಆರ್ಟ್ ಗ್ಯಾಲರಿಯಲ್ಲಿ Fish Tales & Catamarans ಹೆಸರಿನಲ್ಲಿ ಇವರ ಕಲಾಪ್ರದರ್ಶನ ನಡೆಯುತ್ತಿದೆ. ಮೀನುಗಾರರ ಮುಖದ ಭಾವನೆಗಳು, ಮರಳಿನಲ್ಲಿ ಮೂಡಿದಂತೆ ಕಾಣುವ ಭಿತ್ತಿ ಶಿಲ್ಪಗಳು, ಗೂಡು ಬಿಟ್ಟು ಹಾರಿಹೋದ ಕಣಜದ ಗೂಡು, ಜೇನುಗೂಡಿನ ಮರದಲ್ಲಿ ಕಾಣುವ ಅವಶೇಷದ ಬಿಳಿಪೊರೆಗಳು, ಮಂಗೇಶ್ಕರ್ ದೇವಸ್ಥಾನದ ಕಾವಿಕಲೆಯ ಚಿತ್ರದಂತೆ ಕಾಣುವ ಬಣ್ಣದ ಚಿತ್ರಗಳು. ಮೀನಿನ…
ಮೂಲ್ಕಿ : ವಿಜಯ ಕಾಲೇಜು ಮೂಲ್ಕಿ, ವಿಜಯ ಮ್ಯಾಗಝೀನ್ ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದೊಂದಿಗೆ ದಿನಾಂಕ 13-10-2023ರಂದು ವಿಜಯ ಕಾಲೇಜಿನ ಕಿರು ಸಭಾಂಗಣದಲ್ಲಿ ಸೃಜನಶೀಲ ಬರಹ ಕಾರ್ಯಾಗಾರವು ನಡೆಯಿತು. ಈ ಕಾರ್ಯಾಗಾರವನ್ನು ತುಳುವೆರೆ ಆಯನೊ ಕೂಟದ ಅಧ್ಯಕ್ಷೆ ಶಮೀನಾ ಜಿ. ಆಳ್ವ ಇವರು ಉದ್ಘಾಟಿಸಿ ಮಾತನಾಡುತ್ತಾ “ಬರವಣಿಗೆ ಒಂದು ಸೃಜನಶೀಲ ಪ್ರಕ್ರಿಯೆ. ಪ್ರತಿ ವ್ಯಕ್ತಿ ತನ್ನದೇ ಚಿಂತನೆ, ಸಂವೇದನೆ ಮತ್ತು ಮಾತುಗಳನ್ನು ಭಾಷೆಯ ಕಲಾತ್ಮಕ ರೀತಿಯಲ್ಲಿ ಅಭಿವ್ಯಕ್ತಿಸುವ ರೀತಿ ವಿಶೇಷವಾದದ್ದು. ಇದು ಭಾಷೆಯ ಶಕ್ತಿ, ವ್ಯಕ್ತಿಯ ವಿಶಿಷ್ಟ ಶಕ್ತಿ” ಎಂದು ಹೇಳಿದರು. ಯುವ ಬರಹಗಾರ ರಾಜೇಶ್ ಕುಮಾರ್ ಕಲ್ಯಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಮಣಿಯವರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ನುಡಿದರು. ವಿಜಯ ವಾರ್ಷಿಕ ಸಂಚಿಕೆಯ ಸಂಪಾದಕಿ ಡಾ. ಶೈಲಜಾ ವೈ.ವಿ. ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ಪ್ರತಿನಿಧಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ತಮ್ಮ ಸ್ವಅನುಭವ ಹಂಚಿಕೊಂಡರು. ಸಮಾರೋಪ ಸಮಾರಂಭದ…
ಉಡುಪಿ : ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹಿರಿಯರ ನೆನಪಲಿ ರಂಗೋತ್ಸವ ‘ರಂಗನಮನ’ ಕಾರ್ಯಕ್ರಮವು ದಿನಾಂಕ 13-10-2023ರಿಂದ 15-10-2023ರವರೆಗೆ ನಡೆಯಿತು. ದಿನಾಂಕ 13-10-2023ರಂದು ನಡೆದ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಸಹಕುಲಾಧಿಪತಿ ಹಾಗೂ ರಂಗಭೂಮಿ ಉಡುಪಿ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಎಚ್.ಎಸ್. ಬಲ್ಲಾಳ್ ಇವರು ಮಾತನಾಡುತ್ತಾ “ಸಂಸ್ಥೆಯ ಏಳ್ಗೆಗೆ ಜೀವನವನ್ನು ಮುಡಿಪಿಟ್ಟ ಹಿರಿಯ ಚೇತನಗಳನ್ನು ಸ್ಮರಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಅಗಲಿದ ಪದಾಧಿಕಾರಿಗಳ ಸ್ಮರಣೆ ಹಾಗೂ ಸಾಧಕ ಕಲಾವಿದರಿಗೆ ಗೌರವಾರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಮಾಹೆಯಿಂದ ರಂಗಭೂಮಿ ಉಡುಪಿ ಸಂಸ್ಥೆಯ ಚಟುವಟಿಕೆಗಳಿಗೆ ಆಶ್ರಯ ಹಾಗೂ ಪ್ರೋತ್ಸಾಹವನ್ನು ನಿರಂತರವಾಗಿ ನೀಡುತ್ತಾ ಬರಲಾಗಿದೆ. ರಂಗಭೂಮಿ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿವೆ. ರಂಗಭೂಮಿಯತ್ತ ಯುವ ಜನತೆಯನ್ನು ಸೆಳೆಯುವ ಅಗತ್ಯವಿದ್ದು ರಂಗಾಸಕ್ತಿ ಬೆಳೆಸಬೇಕಿದೆ” ಎಂದರು. ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, “ರಂಗಭೂಮಿಗೆ ಅವಿರತವಾಗಿ ದುಡಿದು ಅಗಲಿದ ಪಿ.ವಾಸುದೇವ ರಾವ್, ಯು.ಉಪೇಂದ್ರ, ಶ್ರೀನಿವಾಸ ಶೆಟ್ಟಿಗಾರ್, ಎಂ. ನಂದ ಕುಮಾರ್,…
ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಪ್ರಚಾರೋಪನ್ಯಾಸ ಮಾಲಿಕೆಯಡಿ ‘ಕನ್ನಡ ಸಾಹಿತ್ಯ ಚರಿತ್ರೆ ರಚನೆ ಪ್ರಾರಂಭಿಕ ಪ್ರಯತ್ನಗಳು’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 18-10-2023ರ ಬುಧವಾರದಂದು ಮಂಗಳೂರು ವಿವಿ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ವಿದ್ವಾಂಸರಾದ ಪ್ರೊ. ಎ.ವಿ ನಾವಡ “ಕನ್ನಡ ಸಾಹಿತ್ಯ ಚರಿತ್ರೆಯನ್ನು ರೂಪಿಸಿದ ಆರಂಭದ ದಿನಗಳಲ್ಲಿ ವಿದೇಶಿ ವಿದ್ವಾಂಸರುಗಳಾದ ವೈಗ್ಲೆ, ಕಿಟ್ಟೆಲ್, ಇ.ಪಿ.ರೈಸ್, ಮೋಗ್ಲಿಂಗ್ ಮೊದಲಾದವರ ಕೊಡುಗೆ ಅಪಾರ. ಅರ್ ನರಸಿಂಹಾಚಾರ್, ಕನ್ನಡವಕ್ಕಿ, ಮುಗಳಿ, ಮರಿಯಪ್ಪ ಭಟ್ಟರಂತಹ ದೇಶೀ ವಿದ್ವಾಂಸರು ಸೇರಿಕೊಂಡು ಸಾಹಿತ್ಯ ಚರಿತ್ರೆ ನಿರ್ಮಾಣದ ಪ್ರಕ್ರಿಯೆ ಹುಲುಸಾಗಿ ಬೆಳೆಯಿತು. ವಿದೇಶದಿಂದ ಬಂದು ಇಲ್ಲಿನ ಸಂಸ್ಕೃತ, ಕನ್ನಡ ಭಾಷೆಗಳನ್ನು ಕಲಿತು ಇಲ್ಲಿನ ಲಿಖಿತ ಮತ್ತು ಮೌಖಿಕ ಸಾಹಿತ್ಯ ಸಂಗ್ರಹ ಮತ್ತು ಗ್ರಂಥಸಂಪಾದನೆಯನ್ನು ಮಾಡಿದ ವಿದ್ವಾಂಸರ ಶ್ರಮ,…
ಮೂಡುಬಿದಿರೆ : ಮೂಡುಬಿದಿರೆ ಜೈನ ಕಾಶಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಟ್ಟಾಭಿಷೇಕ ರಜತ ಮಹೋತ್ಸವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 08.10.2023ನೇ ರವಿವಾರ ಶ್ರೀ ಜೈನ ಮಠ ಮೂಡುಬಿದಿರೆಯ ಭಟ್ಟಾರಕ ಸಭಾಭವನದಲ್ಲಿ ನಡೆಯಿತು. ಮೂಡುಬಿದಿರೆ ಜೈನ ಕಾಶಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭಾ ಆಶೀರ್ವಾದಗಳೊಂದಿಗೆ ಶ್ರೀ ಜೈನ ಮಠ ಮೂಡುಬಿದಿರೆ, ಧವಳತ್ರಯ ಶ್ರೀ ಜೈನ ಕಾಶಿ ಟ್ರಸ್ಟ್ (ರಿ), ಶ್ರೀ ಜೈನ ಮಠ ಟ್ರಸ್ಟ್ ಇವುಗಳ ಜಂಟಿ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ “ಶರಸೇತು ಬಂಧ” ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಗಿರೀಶ್ ಮುಳಿಯಾಲ, ಚೆಂಡೆ ಮದ್ದಳೆಗಳಲ್ಲಿ ಶ್ರೀ ದೇವಾನಂದ ಭಟ್ ಬೆಳ್ವಾಯಿ, ಮಾ.ದಿವಿಜೇಶ್ ಭಟ್ ಬೆಳ್ವಾಯಿ, ಮಾ.ಸುಮುಖ್ ತುಲ್ಪುಲೆ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ…
ಕಣಿಯೂರು : ನವರಾತ್ರಿ ಮಹೋತ್ಸವದ ಅಂಗವಾಗಿ ದಿನಾಂಕ 17-10-2023ರ ಮಂಗಳವಾರದಂದು ಸಂಜೆ ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಇವರಿಂದ ಯಕ್ಷಗಾನ ತುಳು ತಾಳಮದ್ದಳೆ ಪಂದುಬೆಟ್ಟು ವೆಂಕಟರಾಯ ವಿರಚಿತ ‘ಕೋಟಿ – ಚೆನ್ನಯ’ ಪ್ರಸಂಗವು ಬಹಳ ಸೊಗಸಾಗಿ ನಡೆಯಿತು. ಭಾಗವತರಾಗಿ ಶ್ರೀ ಸೂರ್ಯನಾರಾಯಣ ಭಟ್ ಕಣಿಯೂರು, ಮದ್ದಳೆ ಮತ್ತು ಚೆಂಡೆವಾದನದಲ್ಲಿ ಶ್ರೀ ರಾಮಮೂರ್ತಿ ಕುದ್ರೆಕೋಡ್ಳು, ಟಿ.ಡಿ.ಗೋಪಾಲಕೃಷ್ಣ ಭಟ್ ಪುತ್ತೂರು, ರಾಮದಾಸ್ ಶೆಟ್ಟಿ ದೇವಸ್ಯ ಹಾಗೂ ಮಾ. ಅದ್ವೈತ್ ಕನ್ಯಾನ ಅವರು ಭಾಗವಹಿಸಿದ್ದರು. ಅರ್ಥಗಾರಿಕೆಯಲ್ಲಿ ಶ್ರೀಗಳಾದ – ಪೆರುಮಳ ಬಲ್ಲಾಳ – ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು, ಕೋಟಿ – ಕೊಳ್ತಿಗೆ ನಾರಾಯಣ ಗೌಡ, ಚೆನ್ನಯ- ದೀಕ್ಷಿತ್ ಕಣಿಯೂರು, ರಾಮ ಜೋಯಿಸ/ಕೇಮರ ಬಲ್ಲಾಳ- ರಾಜಗೋಪಾಲ್ ಕನ್ಯಾನ, ಕಿನ್ನಿದಾರು- ಶ್ರೀಮತಿ ರೇಣುಕಾ ಕಣಿಯೂರು, ಚಂದುಗಿಡಿ- ಶಂಕರ್ ಸಾರಡ್ಕ, ದೇವಣ್ಣ ಬಲ್ಲಾಳ- ಜಯರಾಂ ಭಟ್ ದೇವಸ್ಯ ಅವರು ಸಹಕರಿಸಿದರು. ಶ್ರೀ ಕೊಳ್ತಿಗೆಯವರ ಕೋಟಿಯ ಅರ್ಥವು ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಇದೇ ಸಂದರ್ಭದಲ್ಲಿ ಸುಮಾರು…
ಸುರತ್ಕಲ್ : ಗೋವಿಂದ ದಾಸ ಕಾಲೇಜು ಗ್ರಂಥಾಲಯ, ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶಗಳ ಸಹಭಾಗಿತ್ವದಲ್ಲಿ, ಗೋವಿಂದದಾಸ ಕಾಲೇಜಿನ ಗ್ರಂಥಾಲಯದಲ್ಲಿ ಶಿವರಾಮ ಕಾರಂತರ 121ನೇ ಜನ್ಮ ದಿನಾಚರಣೆಯು ದಿನಾಂಕ 10-10-2023ರಂದು ನಡೆಯಿತು. ಇದರ ಪ್ರಯುಕ್ತ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು “ಶಿವರಾಮ ಕಾರಂತರು ಮಾನವತಾವಾದಿ ಹಾಗು ಪರಿಸರವಾದಿಯಾಗಿ, ನಾಡು-ನುಡಿಗಳ ಚಿಂತಕರಾಗಿದ್ದವರು.” ಎಂದು ನುಡಿದರು. ಕಾಲೇಜಿನ ಉಪಪ್ರಾಂಶುಪಾಲ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಪ್ರೋ. ರಮೇಶ ಭಟ್, ಎಸ್.ಜಿ, ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್, ಉಪನ್ಯಾಸಕರಾದ ಪ್ರೋ. ಕುಮಾರ ಮಾದರ, ಡಾ.ಆಶಾ, ಡಾ. ಪ್ರಶಾಂತ, ಗ್ರಂಥಾಲಯದ ಸಿಬ್ಬಂದಿಗಳಾದ ಸಾವಿತ್ರಿ ಮತ್ತು ಸುಮನ್ ಉಪಸ್ಥಿತರಿದ್ದರು. ಗ್ರಂಥಪಾಲಕಿ ಡಾ. ಸುಜಾತ ಬಿ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಕ್ಷತಾ ಶೆಟ್ಟಿ ವಂದಿಸಿದರು.
ಮಂಗಳೂರು : ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಅಕ್ಷಯ ಆರ್. ಶೆಟ್ಟಿಯವರ ‘ಪೆರ್ಗ’ ತುಳು ನಾಟಕ ಕೃತಿ ನಗರದ ಪ್ರೆಸ್ ಕ್ಲಬ್‌ನಲ್ಲಿ ದಿನಾಂಕ 12-10-2023ರಂದು ಅನಾವರಣಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಹಾವೇರಿ ಜಾನಪದ ವಿವಿಯ ವಿಶ್ರಾಂತ ಉಪ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ, “ತುಳು ಸಾಹಿತ್ಯ ಕ್ಷೇತ್ರದಲ್ಲಿ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿಗಳಿಗಿಂತಲೂ ತುಳು ನಾಟಕ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಳ್ಳುವ ಮೂಲಕ ಅಪಾರ ಕೊಡುಗೆಯನ್ನು ನೀಡಿವೆ. ತುಳುವಿನಲ್ಲಿ 5000ಕ್ಕೂ ಅಧಿಕ ನಾಟಕಗಳು ರಚನೆಯಾಗಿದ್ದು, ಸುಮಾರು 1000ದಷ್ಟು ನಾಟಕ ಕೃತಿಗಳು ಪ್ರಕಟಗೊಂಡಿವೆ. 400ರಷ್ಟು ಕವನ ಸಂಕಲನ, 200ರಷ್ಟು ಕಥಾ ಸಂಕಲನ ಹಾಗೂ 75 ಕಾದಂಬರಿಗಳು ತುಳುವಿನಲ್ಲಿ ಪ್ರಕಟವಾಗಿವೆ. ನವ ಸಾಹಿತಿ, ಲೇಖಕರು ತುಳು ಸಂಸ್ಕೃತಿಯನ್ನು ಹೊಸ ರೀತಿಯ ಶೋಧನೆಯ ಮೂಲಕ ವರ್ತಮಾನದಲ್ಲಿ ಇತಿಹಾಸವನ್ನು ನಾಟಕ, ಕದಾಂಬರಿಗಳ ಮೂಲಕ ಕಟ್ಟಿಕೊಡುವ ಕಾರ್ಯವನ್ನು ನಡೆಸುತ್ತಿರುವುದು ಕಂಡು ಬರುತ್ತಿದೆ. ರತ್ನವರ್ಮ ಹೆಗ್ಗಡೆ ಹಾಗೂ ಎಸ್.ವಿ. ಪಣಿಯಾಡಿ ಅವರಿಂದ ತುಳು ನಾಟಕ ಕೃತಿಗಳಿಗೆ…