Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ಮತ್ತು ಶ್ರೀ ಶಾರದಾ ಮಾತೃ ಮಂಡಳಿ ಸುರತ್ಕಲ್ ಇವರು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸುವರ್ಣ ವರ್ಷಾಚರಣೆಯ ಪ್ರಯುಕ್ತ ನಡೆಯುತ್ತಿರುವ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮವಾಗಿ ದಿನಾಂಕ 22 ಸೆಪ್ಟೆಂಬರ್ 2024ರಂದು ಸಾರ್ವಜನಿಕ ಭಜನಾ ಸ್ಪರ್ಧೆ ನಡೆಯಿತು. ಸುರತ್ಕಲ್ ಶಾರದಾ ಮಂದಿರದಲ್ಲಿ ನಡೆದ ಸ್ಪರ್ಧೆಯನ್ನು ಶ್ರೀ ಶಾರದಾ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವೈ. ರಾಘವೇಂದ್ರ ರಾವ್ ವಿದ್ಯುಕ್ತವಾಗಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಶ್ರೀ ಸುರೇಶ್ ಶೆಟ್ಟಿ, ಶ್ರೀ ಶಾರದಾ ಮಾತೃ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಅನುರಾಧಾ ರಾಜೀವ್, ಗೌರವಾಧ್ಯಕ್ಷರಾದ ಶ್ರೀಮತಿ ವೀಣಾ ಟಿ. ಶೆಟ್ಟಿ, ಶ್ರೀಮತಿ ಸುನೀತಾ ಶೇಖರ್, ಶ್ರೀಮತಿ ತಾರಾ ಧನುರಾಜ್ ಉಪಸ್ಥಿತರಿದ್ದರು. ಭಜನಾ ಸ್ಪರ್ಧೆಯ ಸಂಚಾಲಕಿಯಾದ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್…
ಬೆಂಗಳೂರು : ‘ಸ್ಪಷ್ಟ ಥಿಯೇಟರ್’ನ ಬುಡಕಟ್ಟು ನಾಟಕವಾದ ‘ಕಾಡ್ ರೇಖೈ’ ಮೂಲಕ ಸೆರೆಹಿಡಿಯಲು ಸಿದ್ಧರಾಗಿ. ಬರಹಗಾರ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಗಗನ್ ಪ್ರಸಾದ್ ಇವರು ರಚಿಸಿರುವ ಈ ನಾಟಕವು ಶಮಂತ್ ಹೊಸಹೊಳಲು ಅವರ ಸಾಹಿತ್ಯ ಮತ್ತು ಸಂಭಾಷಣೆಯನ್ನು ಮತ್ತು ಅರುಣ್ ಎಸ್. ಪೂಜಾರಿಯವರ ಸಮ್ಮೋಹನಗೊಳಿಸುವ ಸಂಗೀತವನ್ನು ಒಳಗೊಂಡಿದೆ. ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್‌ಗಳಿವೆ. ಕಾಡ್ ರೇಖೈ – ಒಂದು ಬುಡಕಟ್ಟು ಕಥೆ ‘ಅಜ್ಞಾತದ ಮುಸುಕಿನ ಆಚೆಗೆ’ : ಚಾಮರಾಜನಗರದ ದಟ್ಟ ಕಾಡಿನ ಹೃದಯಭಾಗದಲ್ಲಿ, ಒಂದು ಕಾಲದಲ್ಲಿ ಬುಡಕಟ್ಟು ಜನಾಂಗದ ಸಾಮರಸ್ಯದ ವಸ್ತ್ರವು ಅಸ್ತಿತ್ವದಲ್ಲಿತ್ತು, ಮದುವೆ ಮತ್ತು ತಲೆಮಾರುಗಳ ಸ್ನೇಹದ ಸಂಬಂಧಗಳಿಂದ ಬಂಧಿತವಾಗಿತ್ತು. ಈ ದುರ್ಬಲವಾದ ಶಾಂತಿಯನ್ನು ಯಾವುದು ಛಿದ್ರಗೊಳಿಸಿತು? ಈ ಆಕರ್ಷಕ ನಾಟಕವು ಪ್ರೀತಿ, ಸೇಡು, ನ್ಯಾಯ ಮತ್ತು ಕನಸುಗಳ ವಿಷಯಗಳನ್ನು ಅನ್ವೇಷಿಸುವ ಮಾನವನ ಭಾವನೆಯ ಆಳವನ್ನು ಪರಿಶೀಲಿಸುತ್ತದೆ. ಆಯಾ ಬುಡಕಟ್ಟುಗಳ…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ, ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಮತ್ತು ರಂಗಮಂಡಲ ಸಾಂಸ್ಕೃತಿಕ ಸಂಘ (ರಿ.) ಇವುಗಳ ಸಂಯುಕ್ತ ಆಯೋಜನೆಯಲ್ಲಿ ‘ಕಾಲೇಜು ವಿದ್ಯಾರ್ಥಿಗಳ ನಾಟಕ ಶಿಬಿರ’ದ ಉದ್ಘಾಟನೆಯನ್ನು ದಿನಾಂಕ 26 ಸೆಪ್ಟೆಂಬರ್ 2024ರಂದು ಮಧ್ಯಾಹ್ನ 1-30 ಗಂಟೆಗೆ ಬೆಂಗಳೂರಿನ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ಆಯೋಜಿಸಲಾಗಿದೆ. ನಾಟಕ ಅಕಾಡಮಿಯ ಸದಸ್ಯರಾದ ಜಗದೀಶ್ ಜಾಲ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಇದರ ಪ್ರಾಂಶುಪಾಲರಾದ ಡಾ. ಜಯರಾಮ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯರಾದ ಎನ್.ರಮೇಶ್, ಹೆಚ್.ಎಸ್. ಸುಧೀಂದ್ರಕುಮಾರ್ ಹಾಗೂ ಕಲಾವಿದೆ ನಿರ್ಮಲಾ ನಾದನ್ ಇವರುಗಳು ಉದ್ಘಾಟನೆಯಲ್ಲಿ ನಮ್ಮೊಂದಿಗೆ ಭಾಗವಹಿಸಲಿದ್ದಾರೆ. ರಂಗಕರ್ಮಿ ಶಿಬಿರದ ನಿರ್ದೇಶಕರಾದ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅಕಾಡಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಹಾಗೂ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ನಾಡೋಜ ವೂಡೇ ಪಿ. ಕೃಷ್ಣ ಮತ್ತು ಡಾ. ಜಯರಾಮ್ ಇವರು ನಾಟಕ ತಂಡ ‘ರಂಗಮಂಡಲ’ಕ್ಕೆ…
ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ ಹಾಗೂ ಪುತ್ತೂರು ತಾಲೂಕು ಘಟಕದ ವತಿಯಿಂದ ಆಯೋಜಿಸಿದ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 17 ಸೆಪ್ಟೆಂಬರ್ 2024ರಂದು ನಿವೃತ್ತ ಪ್ರಾಂಶುಪಾಲರು ಹಾಗೂ ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ ಇವರ ಸ್ವಗೃಹ, ಪುತ್ತೂರಿನ ನೆಹರು ನಗರದ ‘ಶ್ರೀಮಾ’ದಲ್ಲಿ ನಡೆಯಿತು. ಅನಂತಪದ್ಮನಾಭ ವ್ರತದ ಸಮಾರೋಪ ಪೂಜಾಕಾರ್ಯದ ಅಂಗವಾಗಿ ‘ಗುರು ಚರಿತಾಮೃತ’ದಿಂದ ಆಯ್ದ ‘ಅನಂತಪದ್ಮನಾಭ ವ್ರತ ಮಹಾತ್ಮೆ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕಿ ಮಂಜುಳಾ ಸುಬ್ರಹ್ಮಣ್ಯ ಭಟ್ ಇವರು ಗಮಕ ವಾಚನಗೈದು, ಶ್ರೀಯುತ ಮುಳಿಯ ಶಂಕರ ಭಟ್ ವ್ಯಾಖ್ಯಾನಗೈದರು. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರನ್ನು ರಂಜಿಸಿತು. ಗಮಕ ಕಲಾ ಪರಿಷತ್ತು ಬಂಟ್ವಾಳ ಘಟಕದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಸ್ವಾಗತಿಸಿ, ನಿವೃತ್ತ ಕನ್ನಡ ಪ್ರಾಚಾರ್ಯರಾದ ವಸಂತ ಕುಮಾರ್ ತಾಳ್ತಜೆ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಘಟಕದ ಗೌರವಾಧ್ಯಕ್ಷರಾದ ಭಾಸ್ಕರ ಬಾರ್ಯ, ಕಾರ್ಯದರ್ಶಿ ಶಂಕರಿ…
ಇತ್ತೀಚಿಗೆ ನಮ್ಮನ್ನು ಅಗಲಿದ ಸಾಹಿತಿ, ಕಲಾವಿದ ಶಿಮುಂಜೆ ಪರಾರಿ ಅವರ ಸಾಂಸ್ಕೃತಿಕ ಪರಿಚಾರಿಕೆ ಗುರುತರವಾದುದು.ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಅವರು ತಮ್ಮನ್ನು ತಾವು ರೂಪಿಸಿಕೊಂಡು ಮುಂಬೈನ ತುಳು ಕನ್ನಡಿಗರಿಗೆ ಮಾದರಿಯಾಗಿದ್ದ ಕ್ರಿಯಾಶೀಲ ಚೇತನ.ಸದ್ದುಗದ್ದಲವಿಲ್ಲದೇ ಅವರು ಮಾಡಿದ ಸಾಹಿತ್ಯ ಕೃಷಿಯೂ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ.ಶಿಮುಂಜೆ ಅವರ ಜೀವನ ಯಾನದ ಕಿರು ಲೇಖನ ಇಲ್ಲಿದೆ. ಮುಂಬಯಿ ಕನ್ನಡಿಗರಿಗೆ ಶಿಮುಂಜೆ ಪರಾರಿ (1940-2024)ಅವರು ಚಿರಪರಿಚಿತರಾಗಿದ್ದರು.ಅವರು ನಾಟಕಕಾರರಾಗಿ, ಅಧ್ಯಾಪಕರಾಗಿ, ಅನುವಾದಕರಾಗಿ, ನಟರಾಗಿ, ಆಧುನಿಕ ವಚನಕಾರರಾಗಿ, ಸ್ನೇಹಸೇತುವಾಗಿ ಮುಂಬಯಿಯ ಸಾಂಸ್ಕೃತಿಕ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರು. ಅವರದು ಬಹುಮುಖ ಪ್ರತಿಭೆ ಹಾಗೂ ಬಹು ಭಾಷಿಕ ಸಂವೇದನೆ.ಕನ್ನಡ, ತುಳು, ಹಿಂದಿ,ಮರಾಠಿ, ಗುಜರಾತಿ ಮೊದಲಾದ ಭಾಷೆಗಳಲ್ಲಿ ನಿರರ್ಗಳ ವ್ಯವಹಾರ, ಸಾಹಿತ್ಯ ರಚನೆ, ಆದಾನ ಪ್ರದಾನ. ಹಾಗೆಯೇ ‘ಅವಳ ತೊಡಿಗೆ ಇವಳಿಗಿಟ್ಟು’ ನೋಡುವ ಪ್ರಯೋಗಶೀಲ ಮನಸ್ಸು.ಶಿಮುಂಜೆ ಅವರು ತುಳು ಭಾಷೆಯಲ್ಲಿ ಸಾವಿರಾರು ಚುಟುಕುಗಳನ್ನು ಬರೆದ ಸರದಾರ. ರಂಗದ ಮೇಲೆ ಬಣ್ಣ ಹಚ್ಚಿ ಕುಣಿದು ಬೆಳ್ಳಿ ತೆರೆಯಲ್ಲೂ ಮಿಂಚಿ ಸೈ ಸೈ ಎನಿಸಿಕೊಂಡ ಅಪೂರ್ವ…
ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಭಾಗವತರು ಸಾಂಸ್ಕೃತಿಕ ಸಂಘಟನೆ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ತೃತೀಯ ಕವಿಗೋಷ್ಠಿ ಜನಸಾಮಾನ್ಯರ ದನಿಯಾಗಲಿ ಕಾವ್ಯ ರಾಜಧಾನಿ ಬೆಂಗಳೂರಿನಿಂದ ತೊಗರಿನಾಡು ಕಲಬುರಗಿ ಕಡೆಗೆ ‘ಕಾವ್ಯದೀವಟಿಗೆಯ ಪಯಣ’ವು ದಿನಾಂಕ 28 ಸೆಪ್ಟೆಂಬರ್ 2024ರಂದು ಇಳಿ ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ ಕರ್ನಾಟಕ ನಾಟಕ ಅಕಾಡೆಮಿ ಚಾವಡಿಯಲ್ಲಿ ನಡೆಯಲಿದೆ. ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಲಕ್ಷ್ಮೀಪತಿ ಕೋಲಾರ ವಹಿಸಲಿದ್ದು, ಕವಿ ಡಾ. ಬಂಜಗೆರೆ ಜಯಪ್ರಕಾಶ್ ಉದ್ಘಾಟನೆಯನ್ನು ಮಾಡಲಿದ್ದಾರೆ. ನಾಡಿನ ಖ್ಯಾತ ಕವಿಗಳು ಕವಿತಾ ವಾಚನ ಮತ್ತು ಗೀತ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ಬೆಂಗಳೂರು ಹಾಗೂ ಕಲಬುರಗಿಯ ನಾವಿಕರಾಗಿ ಕೆ. ರೇವಣ್ಣ ಹಾಗೂ ಮಹಿಪಾಲ ರೆಡ್ಡಿ ಮುನ್ನೂರು ಅವರು ಯಾನವನ್ನು ಮುನ್ನೆಡೆಸಲಿದ್ದಾರೆ.
ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಮತ್ತು ಗಮಕ ಕಲಾ ಪರಿಷತ್ತು ಮಂಗಳೂರು ತಾಲೂಕು ಆಯೋಜಿಸಿದ ‘ಮನೆಮನೆ ಗಮಕ’ ಇದರ 24ನೇ ಪಲ್ಲವ ಕಾರ್ಯಕ್ರಮವು ದಿನಾಂಕ 25 ಸೆಪ್ಟೆಂಬರ್ 2024ರ ಬುಧವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ಉಳ್ಳಾಲ ತಾಲ್ಲೂಕು ಬೀರಿ ಸಮೀಪದ ಕವಿ ಶ್ರೀಶಂಕರ ಶರ್ಮಾ ಕುಳಮರ್ವ ಇವರ ಮನೆ “ಹವಿಷಾ” ದಲ್ಲಿ ನಡೆಯಲಿದೆ. ಕವಿ ಶಂಕರ ಶರ್ಮ ಕುಳಮರ್ವ ರಚಿಸಿದ “ಉತ್ತರ ಕಾಂಡ ಕಾವ್ಯಧಾರ” ಕಾವ್ಯದ ‘ರಾಮ ನಿರ್ಯಾಣ’ ಭಾಗವನ್ನು ಕವಿಯ ಮುಂದೆಯೇ ವಾಚನ, ವ್ಯಾಖ್ಯಾನ ನಡೆಯಲಿರುವುದು. ಅಂದು ಶ್ರೀ ಸುರೇಶ್ ರಾವ್ ಅತ್ತೂರು ವಾಚಿಸಲಿದ್ದು, ಶ್ರೀ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನಿಸಲಿದ್ದಾರೆ. : ಈ ಕಾರ್ಯಕ್ರಮಕ್ಕೆ ಕವಿ ಶ್ರೀ ಶಂಕರ ಶರ್ಮ ಮತ್ತು ಮಗಳು ಶೀಲಾಶಂಕರಿ, ಬಂಧು ಬಾಂಧವರು, ಗಮಕ ಕಲಾಪರಿಷತ್ತು ಮಂಗಳೂರು ಇದರ ಅಧ್ಯಕ್ಷರು ಮತ್ತು ಸದಸ್ಯರು ಸರ್ವರಿಗೂ ಸ್ವಾಗತ ಬಯಸಿದ್ದಾರೆ.
ಬೆಂಗಳೂರು : ಶ್ರೀ ಪಂಚಮುಖಿ ವಿನಾಯಕ ಗೆಳೆಯರ ಬಳಗ ಇದರ ವತಿಯಿಂದ 3ನೇ ವರ್ಷದ ಅತ್ತಿಬೆಲೆ ಗಣೇಶ ಉತ್ಸವ ಪ್ರಯುಕ್ತ ಶಕ್ತಿ ಶ್ರೀ ಗಣಪತಿ ಯಕ್ಷಗಾನ ಬೆಂಗಳೂರು ಇವರಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನವು ದಿನಾಂಕ 26 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಆನೇಕಲ್ ತಾಲೂಕು ಅತ್ತಿಬೆಲೆ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಶ್ರೀ ಸುಬ್ರಾಯ ಹೆಬ್ಬಾರ್ ಹಾಗೂ ಶ್ರೀ ಕಾರ್ತಿಕ ಧಾರೇಶ್ವರ ಮತ್ತು ಮುಮ್ಮೇಳದಲ್ಲಿ ಶ್ರೀಕೃಷ್ಣ ಕುಮಾರ, ಶ್ರೇಯಾ ಶರವೂರ, ಶ್ರೀ ಸುಧಾಕರ ಜೈನ ಹೊಸಬೆಟ್ಟು ಗುತ್ತು, ಶ್ರೀ ಗಣೇಶ ಹಳದಿಪುರ, ಕೌಸ್ತುಭ ಉಡುಪ, ಸುಪ್ರಿತಾ ಹಳದಿಪುರ, ವಿಭಾ ದೇವಾಡಿಗ ಇವರುಗಳು ಸಹಕರಿಸಲಿರುವರು.
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವಂತೆ ಸುಮಾರು ರೂ.13 ಸಾವಿರ ಮೊತ್ತದ ಪುಸ್ತಕಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಇವರಿಗೆ ದಿನಾಂಕ 21 ಸೆಪ್ಟೆಂಬರ್ 2024ರಂದು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ. ಇವರು ಪುಸ್ತಕಗಳನ್ನು ಹತ್ತಾಂತರಿಸಿದ್ದು, ಖ್ಯಾತ ಸಾಹಿತಿ ಕು.ಗೋ ರವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸಾಹಿತಿ ಸುಧಾ ಅಡುಕಳ, ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಸಂತ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಲಯಾಳಂ ಭಾಷೆ ಮತ್ತು ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಾಹಿತಿಗಳಲ್ಲಿ ತಗಳಿ ಶಿವಶಂಕರ ಪಿಳ್ಳೈಯವರೂ ಒಬ್ಬರು. ಅವರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಅಸಮಾನತೆ, ಅನಾಚಾರಗಳನ್ನು ಚಿತ್ರಿಸಿದರು. ಕೆಳಸ್ತರದವರು, ಬೆಸ್ತರು ಮತ್ತು ರೈತಾಪಿ ವರ್ಗದವರ ಶ್ರಮಜೀವನವನ್ನು ತೋರಿಸಿದರು. ಮಲಯಾಳಂ ಸಾಹಿತ್ಯದಲ್ಲಿ ದೀನ ದಲಿತರ ಬದುಕನ್ನು ಮೊದಲ ಬಾರಿಗೆ ದಾಖಲಿಸಿದ ತಗಳಿ ಶಿವಶಂಕರ ಪಿಳ್ಳೈಯವರು ನಗರ ಸಭೆಯ ಕೆಲಸಗಳ ಮೂಲಕ ನಗರದ ದುರ್ವಾಸನೆಯನ್ನು ನಿವಾರಿಸುವ ಜಾಡಮಾಲಿಗಳ ಬಗ್ಗೆ ಬರೆದ ‘ತೋಟಿಯುಡೆ ಮಗನ್’ (1947) ಎಂಬ ಕಾದಂಬರಿಯಲ್ಲಿ ಅಧಿಕಾರಶಾಹಿಯು ಜಾಡಮಾಲಿಗಳನ್ನು ನಿರಂತರವಾಗಿ ಶೋಷಿಸುವ ಚಿತ್ರಣವಿದೆ. ಮೂರು ತಲೆಮಾರುಗಳಿಗೆ ಸೇರಿದ ಜಾಡಮಾಲಿಗಳ ಬದುಕಿನ ಏರುಪೇರುಗಳನ್ನು ಚಿತ್ರಿಸುತ್ತಾ ದುಡಿಯುವ ಜನರ ನಿಕೃಷ್ಟ ಬದುಕನ್ನು ಅನಾವರಣಗೊಳಿಸಿದ್ದಾರೆ. ದುಡಿಯುವ ಜನರಿಗೆ ವ್ಯವಸ್ಥೆಯು ಬದುಕುವ ಅವಕಾಶವನ್ನು ಕೊಡದೆ, ನಿಕೃಷ್ಟವಾಗಿ ಕಾಣುವ ರೀತಿಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ತರಾದ ಡಾ. ಮೋಹನ ಕುಂಟಾರರು ಈ ಕೃತಿಯನ್ನು ‘ತೋಟಿಯ ಮಗ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊದಲ ತಲೆಮಾರಿಗೆ ಸೇರಿದ…