Author: roovari

ಮನಸ್ಸು” ಸೇವಾಶ್ರಮ! ಭಾವಲೋಕಕ್ಕೆ ಸುಸ್ವಾಗತ ಕಾರು ನಿಲ್ಲಿಸಿ ಗೇಟಿನ ಮೇಲೆ ತೂಗು ಹಾಕಿದ್ದ ಫಲಕವನ್ನೊಮ್ಮೆ ಓದಿದ ಸಾಗರ್. “ಹ್ಮ್……ಎಷ್ಟು ಚೆಂದದ ಹೆಸರು, ಮನಸ್ಸು…..ಹಾ ಮನಸ್ಸು” ಪುನರುಚ್ಛರಿಸಿದವನು ಕಾರನ್ನು ಗೇಟಿನ ಹೊರಗಡೆಯಿದ್ದ ದೇವದಾರು ಮರದ ಕೆಳಗೆ ನಿಲ್ಲಿಸಿ ಮೊಬೈಲ್ ತೆಗೆದು ಕರೆ ಮಾಡಿದ. “ಮಹೋದಯ, ಬಂದಿದ್ದೇನೆ…..ಗೇಟಿನ ಹೊರಗಿರುವೆ” ಎಂದಾಗ “ಸರಿ, ಒಳಗೆ ಬನ್ನಿ” ಅತ್ತ ಕಡೆಯಿಂದ ಹೇಳಿದ್ದೇ ಗೇಟಿನ ಬಳಿ ಬಂದು ನಿಂತ. “ಕೌನ್ ಹೋ ತುಮ್?” ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ “ಮಹೋದಯ್ ಬುಲಾಯ” ಎಂದು ಹೇಳಿದಾಗ “ಠೀಕ್ ಹೈ ಸಾಬ್” ಗೇಟು ತೆರೆದು ಒಳಬಿಟ್ಟ. ಗೇಟು ದಾಟಿ ಒಳಬಂದವನ ಮನಸ್ಸೂ ಚಿಟ್ಟೆಯ ಲಾರ್ವದಂತೆ ಮೆಲ್ಲಮೆಲ್ಲನೆ ತೆವಳಲಾರಂಭಿಸಿತು ಮಹೋದಯರ ಕೊಠಡಿ ಕಡೆಗೆ. ನಡೆಯುತ್ತಿದ್ದವನೊಮ್ಮೆ ಸುತ್ತಲೂ ಕಣ್ಣಾಡಿಸಿದ. ಐದಾರು ವರ್ಷದ ಪುಟ್ಟ ಮಗುವಿನಿಂದ ಹಿಡಿದು ಎಂಬತ್ತರ ಹರೆಯದವರೆಗಿನ ಬದುಕಿನ ಎಲ್ಲಾ ಮುಖ್ಯಘಟ್ಟಗಳೂ ಒಂದೇ ಬಿಂದುವಿನಲ್ಲಿ ಸಂಧಿಸಿದಂತೆ ಕಂಡಿತು. ಎಲ್ಲರೂ ತಂತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿ ವಿಹರಿಸುವವರು ಹೊರಗಿನ ಆಗುಹೋಗುಗಳ ಕುರಿತು ಚಿಂತೆಯಿಲ್ಲ. ಎಷ್ಟು ಚೆಂದದ…

Read More

ಮಂಗಳೂರು: ಮಂಗಳೂರಿನ ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ್ದ ‘ಯುವ ನೃತ್ಯೋತ್ಸವ – 2025’ ಕಾರ್ಯಕ್ರಮವು ದಿನಾಂಕ 08 ಜೂನ್ 2025ರ ಭಾನುವಾರದಂದು ಮಂಗಳೂರಿನ ಡಾನ್‌ ಬಾಸ್ಕೊ ಹಾಲ್‌ನಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರಿನ ಭರತಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಮಾತನಾಡಿ “’ನೃತ್ಯಾಂಗನ್’ನ ‘ರಾಧಿಕಾ ಶೆಟ್ಟಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆ ಒದಗಿಸುತ್ತಿದ್ದಾರೆ” ಎಂದರು. ಭರತನಾಟ್ಯದ ಲಾಲಿತ್ಯ, ಒಡಿಸ್ಸಿ ನೃತ್ಯದ ಭಕ್ತಿ ಭಾವ, ಸಮೂಹ ನೃತ್ಯದ ಸೊಬಗಿನೊಂದಿಗೆ ಯುವ ಕಲಾವಿದೆಯರು ಕಲಾರಸಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಉಡುಪಿಯ ಶ್ರೇಷ್ಠಾ ದೇವಾಡಿಗ, ಮೈಸೂರಿನ ಪೂಜಾ ಸುಗಮ್ ಮತ್ತು ಕಿನ್ನಿಗೋಳಿಯ ಶ್ರೇಯಾ ಜಿ. ಭರತನಾಟ್ಯ, ಬೆಂಗಳೂರಿನ ಪೃಥ್ವಿ ನಾಯಕ್ ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿದರು. ನಗರದ ಭರತಾಂಜಲಿ ಸಂಸ್ಥೆಯ ಸದಸ್ಯೆಯರಿಂದ ಸಮೂಹ ನೃತ್ಯ ಪ್ರದರ್ಶಿಸಲ್ಪಟ್ಟಿತು.    ಶ್ರೇಷ್ಠಾ ದೇವಾಡಿಗ    ಪೂಜಾ ಸುಗಮ್      ಶ್ರೇಯಾ ಜಿ. ಪೃಥ್ವಿ ನಾಯಕ್

Read More

ಬೆಂಗಳೂರು : ರಂಗನಿರಂತರ ಅರ್ಪಿಸುವ ರಂಗಾಸಕ್ತರ ಗಮನ ಸೆಳೆದ ಈ ವರ್ಷದ ಒಂದು ಪ್ರಮುಖ ನಾಟಕ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ಮೋಹನಚಂದ್ರ ಪಠ್ಯ ಮತ್ತು ನಿರ್ದೇಶನದಲ್ಲಿ ‘ಅಶ್ವತ್ಥಾಮ’ ದಿನಾಂಕ 12 ಜೂನ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಮೊದಲನೇ ಬಾರಿ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ತ್ಯಾಗರಾಜ್ 9449074898, ಕಿರಣ್ ಸಿಜಿಕೆ 9663574999 ಮತ್ತು ವಿನೋದ್ 9448063542 ಸಂಖ್ಯೆಯನ್ನು ಸಂಪರ್ಕಿಸಿರಿ. ನಾಟಕದ ಬಗ್ಗೆ : ಮಹಾಭಾರತದ ಹಲವಾರು ದುರಂತ ಪಾತ್ರಗಳಲ್ಲಿ ಅಶ್ವತ್ಥಾಮನ ಪಾತ್ರವೂ ಒಂದು. ಕುರುಕ್ಷೇತ್ರ ಯುದ್ಧದ ಬಳಿಕ ಉಪಪಾಂಡವರ ಹತ್ಯೆಯ ಕಾರಣದಿಂದಾಗಿ ಸಾವಿಲ್ಲದೆ ಸದಾ ಮರಣಕ್ಕಾಗಿ ಹಪಹಪಿಸುವ ಶಾಪಗ್ರಸ್ತ. ನಾಟಕ ಸುತ್ತುವುದೇ ಸಾವಿಲ್ಲದ ಬದುಕು ಒಂದು ಶಾಪ ಎಂದು ಗ್ರಹಿಸಿದ (ಕೃಷ್ಣನ) ಚಿಂತನೆ ; ಸತ್ತಿದ್ದರೂ ಇನ್ನೂ ಅಜರಾಮರ ಎಂದು ಬದುಕುವ (ಅಶ್ವತ್ಥಾಮನ) ಮನ:ಸ್ಥಿತಿ. ಇವೆರಡರ ನಡುವೆ ತನ್ನವರ ಕೊಲೆಯ ಪ್ರತೀಕಾರದಿಂದ ನಿರ್ಮಾಣಗೊಂಡ ಯುದ್ಧದ ಕಾರಣಗಳ ಹಿಂದಿರುವ (ಶಕುನಿಯ) ಮರ್ಮ..…

Read More

ಪುತ್ತೂರು : ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದಿನಾಂಕ 08 ಜೂನ್ 2025ರಂದು ಡಾ. ವೆಂಕಟ ಗಿರೀಶ್ ಹಾಗೂ ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ‘ಶತ ಸಂಭ್ರಮ’ ಹಾಗೂ ಆಶುಕವಿ ಪೊಟ್ಟಿಪ್ಪಲ ನಾರಾಯಣ ಭಟ್ಟರ ‘ನುಡಿ ನಮನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿ ಡಾ. ಸುರೇಶ ನೆಗಳಗುಳಿಯವರು ಮಾತನಾಡಿ “ಎಲ್ಲರೂ ಭಾವಪೂರ್ಣರೂ ಕವಿ ಮನದವರೂ ಆಗಿರುತ್ತಾರೆ. ಆದರೆ ಅದಕ್ಕೆ ಚೌಕಟ್ಟು ಹಾಗೂ ಅವಕಾಶ ದೊರಕಿದಾಗ ಕವಿಗಳಾಗುತ್ತಾರೆ ಹಾಗೂ ಪ್ರಶಸ್ತಿಗಳು ಖರೀದಿ ಯೋಗ್ಯವಲ್ಲ” ಎಂದು ಹೇಳಿದರು. ಪುತ್ತೂರಿನ ದೇವಸ್ಥಾನದ ವ್ಯವಸ್ಥಾಪಕ ಈಶ್ವರ ಭಟ್ಟರು ದೀಪ ಪ್ರಜ್ವಲನೆ ಗೈದು ಪುತ್ತೂರು ಕ.ಸಾ.ಪ. ಅಧ್ಯಕ್ಷ ಉಮೇಶ ನಾಯಕ್ ಉದ್ಘಾಟಿಸಿದ ಸಮಾರಂಭವು ಡಾ. ವೆಂಕಟ ಗಿರೀಶ್ ರ ಸಭಾಧ್ಯಕ್ಷತೆಯಲ್ಲಿ ಮುಂದುವರಿಯಿತು. ಪೆರ್ಲದ ಉದ್ಯಮಿ ಪ್ರಸಾದ್ ಪೆರ್ಲ ಕೀರ್ತಿಶೇಷ ನಾರಾಯಣ ಭಟ್ಟರ ಗುಣಗಾನ ಮಾಡಿದರು. ಶಿವಮಣಿ ಕಲಾಸಂಘದ ಶಿವಮಣಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಜಯಾನಂದ ಪೆರಾಜೆ,…

Read More

ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತಿದ್ದು, ನಿರೂಪಣಾ ವಿಷಯ : ಸಮಗ್ರತೆ ಆಗಿರುತ್ತದೆ. ದಿನಾಂಕ 27 ಜೂನ್ 2025 ನೋಂದಾವಣೆಗಾಗಿ ಕೊನೆಯ ದಿನಾಂಕವಾಗಿದ್ದು, 29 ಜೂನ್ 2025ರಂದು ಪ್ರಾಥಮಿಕ ಹಂತದ ಸ್ಪರ್ಧೆ ಹಾಗೂ 12 ಜುಲೈ 2025ರಂದು ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9902590303 ಮತ್ತು 9686869676 ಸಂಖ್ಯೆಯನ್ನು ಸಂಪರ್ಕಿಸಿರಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ನಾಟಕ, ಪ್ರೇಕ್ಷಕರ ಆಯ್ಕೆಯ ಅತ್ಯುತ್ತಮ ನಾಟಕ, ಸ್ವರಚಿತ ಅತ್ಯುತ್ತಮ ಕಥೆ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ವಿನ್ಯಾಸ, ಅತ್ಯುತ್ತಮ ನಿರ್ವಹಣೆ ಮತ್ತು ಅತ್ಯುತ್ತಮ ಭಿತ್ತಿ ಪತ್ರ ವಿನ್ಯಾಸ ಮುಂತಾದ ಪ್ರಶಸ್ತಿಗಳು ಈ ನಾಟಕೋತ್ಸವದಲ್ಲಿ ಪ್ರಕಟಗೊಳ್ಳಲಿವೆ.

Read More

ಬೆಂಗಳೂರು : ಎಸ್.ಎಲ್. ಭೈರಪ್ಪ ಪ್ರತಿಷ್ಠಾನ (ರಿ.) ಇವರ ಉದ್ಘಾಟನಾ ಸಮಾರಂಭವನ್ನು ದಿನಾಂಕ 14 ಜೂನ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಬಸವನಗುಡಿ ರಸ್ತೆಯಲ್ಲಿರುವ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬಸವರಾಜ ಬೊಮ್ಮಾಯಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಶತಾವಧಾನಿ ಡಾ. ರಾ. ಗಣೇಶ್ ಇವರು ‘ಭೈರಪ್ಪನವರ ಕೃತಿಗಳಲ್ಲಿ ಮೌಲ್ಯಮೀಮಾಂಸೆ’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿರುವರು. ಶ್ರೀಮತಿ ಸಹನಾ ವಿಜಯಕುಮಾರ್ ಇವರು ಪ್ರಸ್ತಾವನೆ ಮಾಡಲಿದ್ದು, ಶ್ರೀಯುತರಾದ ಎಸ್.ಎಲ್. ಭೈರಪ್ಪ, ಕೃಷ್ಣ ಪ್ರಸಾದ್ ಹಾಗೂ ಅರುಣ ಇವರುಗಳು ಭಾಗವಹಿಸಲಿದ್ದಾರೆ.

Read More

ಬದಿಯಡ್ಕ : ಕವಿ ನಾಡೋಜ ಕೈಯಾರ ಕಿಂಞಣ್ಣ ರೈ ಅವರ 110ನೇ ಜನ್ಮ ದಿನಾಚರಣೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಹಾಗೂ ಕುಟುಂಬದ ಸಹಕಾರದೊಂದಿಗೆ ಅವರ ಮನೆಯಲ್ಲಿ ದಿನಾಂಕ 08 ಜೂನ್ 2025ರಂದು  ಆಚರಿಸಲಾಯಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಚನಿಯಪ್ಪ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ .ಆರ್. ಸುಬ್ಬಯ್ಯಕಟ್ಟೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಹಿನ್ ಕೇಳೋಟ್  ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊಫೆಸರ್ ಶ್ರೀನಾಥ್, ಡಾ.  ಶ್ರೀನಿಧಿ ಸರಳಾಯ, ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರವಿ ನಾಯ್ಕಾಪು, ಪತ್ರಕರ್ತರುಗಳಾದ ಗಂಗಾಧರ ತೆಕ್ಕೆ ಮೂಲೆ, ಪುರುಷೋತ್ತಮ ಭಟ್, ಹರೀಶ್ ಗೋಸಾಡ, ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ಶ್ರೀ ನಿರಂಜನ್ ರೈ ಪೆರಡಾಲ, ವಸಂತ ಬಾರಡ್ಕ ಹಾಗೂ ಕಯ್ಯಾರರ ಪುತ್ರ ಪ್ರದೀಪ್ ರೈ ಹಾಗೂ ಸೊಸೆ ಆರತಿ ರೈ  ಉಪಸ್ಥಿತರಿದ್ದರು. ಕುಮಾರಿ ಶ್ರೇಯಾ ತೆಕ್ಕೆಮೂಲೆ ಪ್ರಾರ್ಥನೆ…

Read More

ಇತ್ತೀಚೆಗೆ ಗತಿಸಿದ ಕನ್ನಡದ ʻಕಾವ್ಯ ಕಾಮಧೇನುʼ ಎನಿಸಿದ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಎಚ್.‌ಎಸ್.‌ ವೆಂಕಟೇಶಮೂರ್ತಿ ಇವರಿಗೆ ಸಾರ್ವಜನಿಕವಾಗಿ ಗೌರವಾರ್ಪಣೆ ಮಾಡುವ ಅಪೂರ್ವ ಅವಕಾಶವೊಂದನ್ನು ಕಪ್ಪಣ್ಣ ಅಂಗಳ ಹಾಗೂ ಸಮಂಜಸ ತಂಡಗಳು ದಿನಾಂಕ 08 ಜೂನ್ 2025ರಂದು ಎನ್‌.ಆರ್‌. ಕಾಲೋನಿಯ ಸಿ. ಅಶ್ವತ್ಥ ಕಲಾಭವನದಲ್ಲಿ ಕಲ್ಪಿಸಿಕೊಟ್ಟರು. ಕನ್ನಡ ಸಾಹಿತ್ಯ ಲೋಕದ ಸರ್ವ ಪ್ರಕಾರಗಳಲ್ಲೂ ಬದ್ಧತೆಯಿಂದ ಕೃಷಿ ಮಾಡಿದ ಎಚ್.ಎಸ್.ವಿ. ಇವರಿಗೆ ಆ ಎಲ್ಲಾ ಪ್ರಕಾರಗಳಲ್ಲೂ ಅಪಾರ ಅಭಿಮಾನಿಗಳು. ಪೂರ್ವಾಹ್ನ ನಿಗದಿತ ಸಮಯಕ್ಕೂ ಮುಂಚಿತವಾಗಿ ಅಭಿಮಾನಿಗಳು ಬಂದು ಸಭಾಂಗಣ ತುಂಬಿಕೊಂಡದ್ದು ನೋಡಿ ತುಸು ತಡವಾಗಿ ಬಂದ ಅತಿಥಿಗಳೂ ತಬ್ಬಿಬ್ಬು. ಕಾರ್ಯಕ್ರಮದ ಸಂಯೋಜಕರಲ್ಲೊಬ್ಬರಾದ ಶ್ರೀನಿವಾಸ ಜಿ. ಕಪ್ಪಣ್ಣ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯದ ʻಅತ್ಯತ್ತಮ ಸಾಂಸ್ಕೃತಿಕ ಸಂಘಟಕʼ ಎಂದು ಹೆಸರು ಪಡೆದವರು, ತಮ್ಮ ಹೆಸರಿಗೆ ತಕ್ಕಂತೆ ಸರಳವಾಗಿಯಾದರೂ ಗಂಭೀರವಾದ ಕಾರ್ಯಕ್ರಮವನ್ನೇ ಆಯೋಜಿಸಿದ್ದರು. ಇನ್ನೋರ್ವ ಸಾಂಸ್ಕೃತಿಕ ಸಂಘಟಕ, ಸಾಹಿತಿಗಳೂ ಆದ ಕೆ.ಈ. ರಾಧಾಕೃಷ್ಣರವರು ಕಪ್ಪಣ್ಣ ಅವರಿಗೆ ಸಾಥ್‌ ನೀಡಿದರು. ಕಾರ್ಯಕ್ರಮದ ವಿನ್ಯಾಸವೇ ವಿನೂತನವಾಗಿತ್ತು. ವೇದಿಕೆಯಲ್ಲಿ ಯಾವುದೇ ಕುರ್ಚಿಗಳಿರಲಿಲ್ಲ.…

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2025ರ ವಿನೂತನ ಕಾರ್ಯಕ್ರಮ ಸರಣಿಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಶ್ರೀಮತಿ ವಸಂತಿ ಆರ್. ಪಂಡಿತ್ ಕುಂದಾಪುರ ಇವರಿಂದ ‘ವೈವಿಧ್ಯಮಯ ಕಾರ್ಯಕ್ರಮ’ವನ್ನು ದಿನಾಂಕ 15 ಜೂನ್ 2025ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.

Read More

ಬೆಂಗಳೂರು : ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್ ಪ್ರಸ್ತುತ ಪಡಿಸುವ 19ನೇ ಹಾರ್ಮೋನಿಯಂ ಹಬ್ಬ ಕಾರ್ಯಕ್ರಮವನ್ನು ಪಂಡಿತ್ ಗೋವಿಂದರಾವ್ ಪಟವರ್ಧನ್ ಇವರ ಶತಮಾನೋತ್ಸವ ಆಚರಣೆ ಪ್ರಯುಕ್ತ ದಿನಾಂಕ 15 ಜೂನ್ 2025ರಂದು ಸಂಜೆ 3-30 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೇವಾ ಸದನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಮೈ ಬೀಚು ಇವರ ಹಾರ್ಮೋನಿಯಂ ಸೋಲೋ, ಅನಿರುದ್ಧ ಐತಾಳ್ ಇವರ ಹಾಡುಗಾರಿಕೆ, ಪಂಡಿತ್ ಪ್ರವೀಣ್ ಶಿಯೋಲಿಕರ್ ಮತ್ತು ಡಾ. ರವೀಂದ್ರ ಗುರುರಾಜ್ ಕಟೋಟಿ ಇವರಿಂದ ವಯೋಲಿನ್ ಮತ್ತು ಹಾರ್ಮೋನಿಯಂ ದ್ವಂದ್ವ ವಾದನ, ಪಂಡಿತ್ ವಿಶ್ವನಾಥ್ ಕನ್ಹೆರೆ ಇವರಿಂದ ಹಾರ್ಮೋನಿಯಂ ಸೋಲೋ ಪ್ರಸ್ತುತಗೊಳ್ಳಲಿದ್ದು, ಇವರಿಗೆ ರೂಪಕ್ ಕಲ್ಲೂರ್ಕರ್ ಮತ್ತು ಪಂಡಿತ್ ಗುರುಮೂರ್ತಿ ವೈದ್ಯ ತಬಲಾ ಹಾಗೂ ತೇಜಸ್ ಕಟೋಟಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More