Author: roovari

ಮಂಗಳೂರು : ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 16-06-2024ರಂದು ಡಾನ್ ಬಾಸ್ಕ್ ಹಾಲ್ ಇಲ್ಲಿ ಹಮ್ಮಿಕೊಂಡಿರುವ ‘ಪುರುಷ ನಾಟ್ಯ ವಿಲಾಸ’ ಹಾಗೂ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಸನ್ಮಾನ ಸಮಾರಂಭವು ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೃತ್ಯ ಗುರು ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯಾಯ ಮಾತನಾಡಿ “ನೃತ್ಯ ಗುರುಗಳು ಪರೀಕ್ಷೆಗಳನ್ನು ಪೂರೈಸಿಕೊಂಡರೆ ಸಾಲದು, ಆಳವಾದ ಅಧ್ಯಯನ ಜ್ಞಾನ ಸೃಜನಶೀಲತೆ ಬೆಳೆಸಿಕೊಳ್ಳಬೇಕು, ಹಾಗಾದಾಗ ಮಾತ್ರ ಸಮರ್ಥ ನೃತ್ಯ ಗುರು ಎನಿಸಿಕೊಳ್ಳಲು ಸಾಧ್ಯ. ಸಮರ್ಥ ನೃತ್ಯ ಗುರು ಅಥವಾ ನೃತ್ಯ ಕಲಾವಿದರು ಸತ್ಯ ಘಟನೆಗಳು ಮತ್ತು ಸಮಕಾಲೀನ ಸಂಗತಿಗಳನ್ನು ತಮ್ಮ ನೈಪುಣ್ಯತೆಯಿಂದ ಮಾತ್ರ ಪ್ರತಿಬಿಂಬಿಸಲು ಸಾಧ್ಯ. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಭರತಾಂಜಲಿ ನೃತ್ಯ ಸಂಸ್ಥೆಯ ನೃತ್ಯ ಗುರುಗಳು ಶ್ಲಾಘನೀಯರು” ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಗುರು ಮೋಹನ್ ಕುಮಾರ್ ಇವರನ್ನು ತುಳುನಾಡಿನ ಜನಪದೀಯ ಕಲೆಯಾದ…

Read More

ಬೆಂಗಳೂರು : ಆರ್ಯಭಟ ಸಾಂಸ್ಕೃತಿಕ ಸಂಸ್ಥೆ (ರಿ.) ಇದರ ವತಿಯಿಂದ ಕೊಡಮಾಡುವ 49ನೇ ವರ್ಷದ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಆರ್ಯಭಟ ನೃತ್ಯೋತ್ಸವ ಕಾರ್ಯಕ್ರಮವು ದಿನಾಂಕ 23-06-2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಸಮಾರಂಭವನ್ನು ನಿವೃತ್ತ ನ್ಯಾಯಮೂರ್ತಿ ಡಾ. ಹೆಚ್.ಬಿ. ಪ್ರಭಾಕರ ಶಾಸ್ತ್ರಿ ಇವರು ಉದ್ಘಾಟನೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಭಾರತೀಯ ಚಲನಚಿತ್ರ ನಿರ್ದೇಶಕರಾದ ಶ್ರೀ ಹೆಚ್.ಆರ್. ಭಾರ್ಗವ ಮತ್ತು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹೆಚ್.ಎಲ್.ಎನ್. ರಾವ್ ಇವರುಗಳು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ‘ಆರ್ಯಭಟ ನೃತ್ಯೋತ್ಸವ’ ಕಾರ್ಯಕ್ರಮದಲ್ಲಿ ದಿವಾಕರ್ ದಾಸ್ ಇವರ ನಿರ್ದೇಶನದಲ್ಲಿ ಕಾವಳಕಟ್ಟೆ ಬಂಟ್ವಾಳದ ಶೃತಿ ಆರ್ಟ್ಸ್ ಇವರಿಂದ ಜಾನಪದ ಗೊಂಬೆಗಳ ಪ್ರದರ್ಶನ ಮತ್ತು ನೃತ್ಯ, ಕೆ. ಲಕ್ಷ್ಮಣ ಸುವರ್ಣರವರಿಂದ ಮೇಲೋಡಿಕ ವಾದನ ಹಾಗೂ ರವಿರಾಜ,…

Read More

ಬಂಟ್ವಾಳ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಾಹಿತ್ಯ ಮತ್ತು ಪರಿಸರ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 18-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಗಣರಾಜ ಕುಂಬ್ಳೆ ಮಾತನಾಡಿ “ಪರಿಸರ ನಿತ್ಯನೂತನವಾಗಿದ್ದು ಪ್ರಕೃತಿಯೊಂದಿಗಿನ ಸಂವೇದನೆ ಕವಿಗಳಿಗೆ ಕವನ ರಚನೆಗೆ ಸ್ಪೂರ್ತಿಯಾಗುತ್ತದೆ.” ಎಂದು ಹೇಳಿದರು. ಕಲ್ಲಡ್ಕ ಪ. ಪೂ. ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ನಾಗೇಶ ಕಲ್ಲಡ್ಕ, ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ತಾಕೋಡೆ, ಶ್ರೀ ರಾಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಅಮ್ಟೂರು ಅತಿಥಿಗಳಾಗಿ ಭಾಗವಹಿಸಿದ್ದರು. ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಇಳಂತಿಲ ಜವಾಬ್ದಾರಿ ಘೋಷಣೆ ಮಾಡಿದರು. ಬಂಟ್ವಾಳ ತಾಲೂಕು ಸಮಿತಿ ಮಾಜಿ ‌ಅಧ್ಯಕ್ಷ ಜಯಾನಂದ ಪೆರಾಜೆ‌ ಅಭಿನಂದನೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸುರೇಶ ನೆಗಳಗುಳಿ ಮಾತನಾಡಿ ಹೊಸ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಅಧ್ಯಕ್ಷರಾಗಿ ಪ್ರೊ.…

Read More

ಮಂಗಳೂರು : ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇದರ ವತಿಯಿಂದ ನಡೆಯುವ ಎರಡನೇ ವರ್ಷದ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ದಿನಾಂಕ 15-06-2024ರಂದು ಜರಗಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು-ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಎಂ. ಶೆಟ್ಟಿ ಕಟೀಲು ಇವರು ಮಾತನಾಡಿ “ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಸಮಾಜಮುಖಿ ಚಿಂತನೆಯನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಯಕ್ಷಗಾನವು ಒಂದು ರಮ್ಯ ಅದ್ಭುತ ಕಲೆ” ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು ನೆರವೇರಿಸಿದರು. ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣಕ್ಕೆ ಸಂಬಂಧಿಸಿ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು. “ಸುಮಾರು 60 ವಿದ್ಯಾರ್ಥಿಗಳು ಯಕ್ಷಶಿಕ್ಷಣ ತರಗತಿಗೆ ನೋಂದಾಯಿಸಿದ್ದು, ವಾರದಲ್ಲಿ ಎರಡು ತರಗತಿಗಳನ್ನು ನೀಡಿ ಅಭ್ಯಾಸ ಮಾಡಿಸಲಾಗುವುದು.…

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಹಿರಿಯರ ವಿಭಾಗ ಇದರ ವತಿಯಿಂದ 11ನೇ ವರ್ಷದ ಡಿಪ್ಲೋಮೊ ವಿದ್ಯಾರ್ಥಿಗಳ ಮೇಜರ್ ಪ್ರೊಡಕ್ಷನ್ ಭಾಸ ಮಹಾಕವಿಯ ‘ಸ್ವಪ್ನವಾಸವದತ್ತ’ ನಾಟಕ ಪ್ರದರ್ಶನವನ್ನು ದಿನಾಂಕ 21-06-2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಎಲ್. ಗುಂಡಪ್ಪ ಇವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಎಸ್.ವಿ. ಕಶ್ಯಪ ಇವರು ನಿರ್ದೇಶನ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.

Read More

ಮೈಸೂರು : ಜಾನಪದ ವಿದ್ವಾಂಸರಾದ ಡಾ. ಜಯಲಕ್ಷ್ಮೀ ಸೀತಾಪುರ ದಿನಾಂಕ 16-06-2024ರ ಭಾನುವಾರದಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ ವಾರ ಅವರು ಮಂಡ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದವರಾದ ಡಾ.ಜಯಲಕ್ಷ್ಮಿ, ಮೈಸೂರು ವಿ. ವಿ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಜಯಲಕ್ಷ್ಮಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಜೀಶಂಪ ಪ್ರಶಸ್ತಿ, ಜನಪದಲೋಕ ಪ್ರಶಸ್ತಿಗಳು ಲಭಿಸಿವೆ. ಅವರ ತಾಯಿ ಬೋರಮ್ಮ ನಿಧನ ಹೊಂದಿದ ಸಂದರ್ಭದಲ್ಲಿ ಇವರೇ ಕೇಶಮುಂಡನೆ ಮಾಡಿಸಿಕೊಂಡು ಅಂತ್ಯ ಸಂಸ್ಕಾರ ಮಾಡಿದ್ದರು.

Read More

ಹೊಸ ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಸಾಲಿನ ‘ಯುವ ಪುರಸ್ಕಾರ’ ಪ್ರಕತಗೊಂಡಿದ್ದು, ವೈಶಾಲಿಯ ಆತ್ಮಕಥೆ ‘ಹೋಮ್‌ಲೆಸ್ ಗೋವಿಂಗ್ ಅಪ್ ಲೆಸ್ಬಿಯನ್ ಅಂಡ್ ಡೈಸೆಕ್ಸಿಕ್ ಇನ್ ಇಂಡಿಯಾ’ ಕೃತಿಗೆ ಮತ್ತು ಗೌರವ್ ಪಾಂಡೆ ಅವರ ಕವನ ಸಂಗ್ರಹ ‘ಸ್ಮೃತಿಯೋಂ ಕೆ ಬೀಚ್ ಗಿರೀ ಹೈ ಪೃಥ್ವಿ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಸುಮಾರು 10 ಕಾವ್ಯಗಳು, ಕಿರುಕಥೆಗಳ ಏಳು ಸಂಗ್ರಹಗಳು, ಎರಡು ಲೇಖನ ಸಂಗ್ರಹ ಮತ್ತು ಒಂದು ಗಝಲ್ ಪುಸ್ತಕ ಸಹಿತ ಹಲವು ಕೃತಿಗಳು ಯುವ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಕನ್ನಡ ಬರಹಗಾರ್ತಿ ಶೃತಿ ಬಿ. ಆರ್., ಅಸ್ಸಾಮ್‌ನ ನಾರಾಯಣಜ್ಯೋತಿ, ಬಂಗಾಳದ ಸುತಪ ಚಕ್ರವರ್ತಿ, ರಾಣಿ ಬರೋ(ಬೋಡೋ), ರಿಂಕು ರಾಥೋಡ್ (ಗುಜರಾತ್), ಶ್ಯಾಮಕೃಷ್ಣನ್ ಆರ್.(ಮಲಯಾಳಂ), ಲೋಕೇಶ್‌ ರಘುರಾಮನ್ (ತಮಿಳ್), ರಮೇಶ್ ಕಾರ್ತಿಕ್ ನಾಯಕ್ (ತೆಲುಗು), ದೇವಿದಾಸ್ ಸೌದಾಗರ್ (ಮರಾಠಿ), ಸಂಜಯಕುಮಾರ್ ಪಾಂಡಾ(ಒಡಿಯಾ), ರಣಧೀರ್ (ಪಂಜಾಬಿ), ಸೋನಾಲಿ ಸುತರ್ (ರಾಜಸ್ಥಾನಿ), ಜಾವೇದ್ ಅಂಬರ್ ಮಿಸ್ಬಹಿ(ಉರ್ದು) ವೈಖಂ ಚಿಂಗ್ ಖೈಗನ್ಬಾ (ಮಣಿಪುರಿ)…

Read More

ಮಡಿಕೇರಿ : ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ನಿಮ್ಮ ಪ್ರತಿಭೆ ನಮ್ಮ ಪ್ರೋತ್ಸಾಹ’ ಕಾರ್ಯಕ್ರಮದಡಿ ಮಕ್ಕಳಿಗೆ ವೈಯಕ್ತಿಕ ವಿಭಾಗದಲ್ಲಿ ನೃತ್ಯ ಹಾಗೂ ಕಥೆ ಹೇಳುವ ಆನ್ ಲೈನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ತಿಳಿಸಿದ್ದಾರೆ. ಇದು ವೈಯಕ್ತಿಕ ಸ್ಪರ್ಧೆಯಾಗಿದ್ದು, ‘ಕಥೆ ಹೇಳುವ ಸ್ಪರ್ಧೆ’ಗೆ 3 ವರ್ಷದಿಂದ 6 ವರ್ಷದ ಒಳಗಿನ ಮಕ್ಕಳು ಮಾತ್ರ ಭಾಗವಹಿಸಬಹುದು ಹಾಗೂ ಮೂರು ನಿಮಿಷದ ಅವಧಿಯಲ್ಲಿ ಕಥೆಯ ನೀತಿಯನ್ನು ಹೇಳಬೇಕು. ಕಥೆ ಕನ್ನಡದಲ್ಲಿಯೇ ಇರಬೇಕು. ವಿಡಿಯೋ ವಾಟ್ಸಪ್ ಮಾಡಬೇಕಾದ ಸಂಖ್ಯೆ – ಕಥೆ ಹೇಳುವ ಸ್ಪರ್ಧೆ : 9353748962 ರಜನಿ ನವೀನ್. ‘ನೃತ್ಯ ಸ್ಪರ್ಧೆ’ಗೆ 7 ವರ್ಷದಿಂದ 12 ವರ್ಷದ ಒಳಗಿನ ಮಕ್ಕಳು ಮಾತ್ರ ಭಾಗವಹಿಸಬಹುದು. ಕನ್ನಡ ಭಕ್ತಿ ಗೀತೆಗಳ ಮೂರು ನಿಮಿಷದ ಅವಧಿಯಲ್ಲಿ ನೃತ್ಯದ ವಿಡಿಯೋ ಮಾಡಿ ನೃತ್ಯ ಸ್ಪರ್ಧೆ : 9632870102 ಅಖಿಲಾ ಭಟ್ ಹಾಗೂ ಭರತನಾಟ್ಯ : 9480783156 ಉಮಾ ಇವರಿಗೆ ಕಳುಹಿಸತಕ್ಕದ್ದು.

Read More

ಧರ್ಮಸ್ಥಳ : ಮಂಗಳೂರಿನ ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ನೃತ್ಯ ಭಾರತಿ (ರಿ.) ಪ್ರಸ್ತುತ ಪಡಿಸುವ ವಿದುಷಿ ಕುಮಾರಿ ಚೈತ್ರ ಭಟ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 22-06-2024ರಂದು ಸಂಜೆ 6-00 ಗಂಟೆಗೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಲ್ಯದ ನಾಟ್ಯನಿಕೇತನದ ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು ಶುಭಾಶಂಸನೆಗೈಯಲಿದ್ದು, ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಶ್ರೀ ಸುಧಾಕರ್ ರಾವ್ ಪೇಜಾವರ ಇವರು ಅತಿಥಿಯಾಗಿ ಭಾಗವಹಿಸಲಿರುವರು. ಭರತನಾಟ್ಯ ರಂಗಪ್ರವೇಶಕ್ಕೆ ಹಿಮ್ಮೇಳದಲ್ಲಿ ನೃತ್ಯ ಭಾರತಿಯ ಗುರು ಗೀತಾ ಸರಳಾಯ ಇವರ ನೃತ್ಯ ನಿರ್ದೇಶನ, ನೃತ್ಯ ಭಾರತಿಯ ವಿದುಷಿ ರಶ್ಮಿ ಚಿದಾನಂದ ನಟುವಾಂಗ, ಮಾಹೆಯ ಸ್ವರಾಗ್ ಹಾಡುಗಾರಿಕೆ, ಉಡುಪಿಯ ವಿದ್ವಾನ್…

Read More

ಉಡುಪಿ : ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಇದರ ಸಂಯೋಜನೆಯ ‘ನೃತ್ಯ ಶಂಕರ’ ಸಾಪ್ತಾಹಿಕ ನೃತ್ಯ ಸರಣಿ 50ರಲ್ಲಿ ಕುಮಾರಿಯರಾದ ಅನ್ವಿತ ತಂತ್ರಿ ಮತ್ತು ಅರ್ಪಿತ ತಂತ್ರಿ ಸಹೋದರಿಯರಿಂದ ಕಿಕ್ಕಿರಿದು ತುಂಬಿದ್ದ ಕೊಡವೂರು ದೇವಳದ ವಸಂತ ಮಂಟಪದಲ್ಲಿ ನೃತ್ಯಾರ್ಪಣೆ ಕಾರ್ಯಕ್ರಮವು ದಿನಾಂಕ 17-06-2024ರಂದು ಅಮೋಘ ಅಭಿನಯದ ಮೂಲಕ ಸಂಪನ್ನಗೊಂಡಿತು. ಭರತನಾಟ್ಯದಲ್ಲಿ ಸಮಕಾಲೀನ ನೃತ್ಯದೊಂದಿಗೆ ಸೈ ಎನಿಸಿಕೊಂಡ ಪ್ರಸ್ತುತಿಯು ಪೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ನೃತ್ಯಶಂಕರ ಸರಣಿ ಮೂಲಕ ಹಲವಾರು ಪ್ರತಿಭೆಗಳಿಗೆ ಶ್ರೀದೇವಳದಲ್ಲಿ ವೇದಿಕೆ ಅವಕಾಶ ಮಾಡಿಕೊಟ್ಟ ಸಂಯೋಜಕರ ಕೆಲಸ ಶ್ಲಾಘನೀಯ. ಕೊಡವೂರು ನೃತ್ಯನಿಕೇತನದ ವಿದ್ವಾನ್ ಸುಧೀರ್ ರಾವ್ ಕೊಡವೂರು ಹಾಗು ವಿದುಷಿ ಮಾನಸಿ ಸುಧೀರ್ ಶಿಷ್ಯೆಯರಾದ ಈ ಸಹೋದರಿಯರು ವೇದಮೂರ್ತಿ ತೊಟ್ಟಂ ಮಧುಸೂದನ ತಂತ್ರಿ ಹಾಗು ಅಕ್ಷತಾ ತಂತ್ರಿಯವರ ಮುದ್ದಿನ ಕುವರಿಯರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ, ಪದವಿ ಪೂರ್ವ ಶಿಕ್ಷಣವನ್ನು ಎಂ.ಜಿ.ಎಂ. ಕಾಲೇಜಿನಲ್ಲಿ ಪೂರೈಸಿ ಪ್ರಸ್ತುತ ಅನ್ವಿತ…

Read More