Subscribe to Updates
Get the latest creative news from FooBar about art, design and business.
Author: roovari
10 ಮಾರ್ಚ್ 2023, ಉಳ್ಳಾಲ: ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇದೇ 17ರಂದು ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ತಾಲೂಕಿನ ಮೊದಲ ಸಾಹಿತ್ಯ ಸಮ್ಮೇಳನ ಇದಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮತ್ತು ತಜ್ಞರ ಸಮಿತಿ ಶ್ರೀಮತಿ ಶ್ಯಾಮಲಾ ಮಾಧವ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ಕಸಾಪ ಉಳ್ಳಾಲ ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಉಳ್ಳಾಲ ಸೋಮೇಶ್ವರದ ಯು. ನಾರಾಯಣ ಮತ್ತು ವಸಂತಿ ದಂಪತಿಯ ಪುತ್ರಿ ಶ್ಯಾಮಲಾ ಮಾಧವ ಅವರು ಮುಂಬೈಯಲ್ಲಿ ವಾಸವಾಗಿದ್ದು, ಹಿಂದಿ ಕಾದಂಬರಿ ‘ಅಲಂಪನಾ’, ಇಂಗ್ಲೀಷ್ ವಿಶ್ವ ಸಾಹಿತ್ಯ ಕೃತಿಗಳಾದ ‘ಗಾನ್ ವಿದ್ ದ ವಿಂಡ್’, ಫ್ರಾಂಕ್ಲಿನ್ ಸ್ಟೈನ್’, ‘ಜೇನ್ ಏರ್’, ‘ವುದರಿಂಗ್ ಹೈಟ್ಸ್’, ರಾಮಯ್ಯ ರೈ ಅವರ ‘ಪೊಲೀಸ್ ಡೈರಿ’, ಎಂ.ಆರ್. ಪೈ ಅವರ ‘ಏನ್ ಅನ್ ಕಾಮನ್ ಕಾಮನ್ ಮ್ಯಾನ್’…
10 ಮಾರ್ಚ್ 2023, ಅಜೆಕಾರು: ಬೆಂಗಳೂರಿನ ಹಾವನೂರು ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿರುವ ಅಜೆಕಾರಿನ ಶಿಕ್ಷಕಿ ಬಿಂದು ಕೆ ಅವರು ಸ್ವರ್ಣ ಭೂಮಿ ಪೌಂಡೇಶನ್ ಬೆಂಗಳೂರು ನೀಡುವ ಮಹಿಳಾ ಚೈತನ್ಯ ರತ್ನ ಪ್ರಶಸ್ತಿಯನ್ನು ಮಾರ್ಚ್ 12 ರಂದು ಸ್ವೀಕರಿಸಲಿದ್ದಾರೆ. ಬೆಂಗಳೂರು ನೈರುತ್ಯ ತಾಲೂಕು ಮಟ್ಟದ ಸರಕಾರದ ಉತ್ತಮ ಶಿಕ್ಷಕಿ,ಕಾವ್ಯ ಸಂಭ್ರಮ ಪ್ರಶಸ್ತಿ, ಸಾಧನಾ ರತ್ನ ಪ್ರಶಸ್ತಿ, ಕೆಂಪಮ್ಮ ಪುರಸ್ಕಾರ,ಸೇವಾ ರತ್ನ ರಾಜ್ಯ ಪ್ರಶಸ್ತಿ,ಕನ್ನಡ ರತ್ನ ಪ್ರಶಸ್ತಿ, ಆದಿಗ್ರಾಮೋತ್ಸವ ಯುವ ಸಿರಿ ಗೌರವ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಆದಿಗ್ರಾಮೋತ್ಸವ ಸಮಿತಿ ಮತ್ತು ಅ.ಕ.ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅವರನ್ನು ಅಭಿನಂದಿಸಿದೆ.
10-03-2023,ಮಂಗಳೂರು: ಮಣಿ ಕೃಷ್ಣ ಸ್ವಾಮಿ ಅಕಾಡೆಮಿ(ರಿ ) ಮತ್ತು ನಾಗರಿಕ ಸಲಹಾ ಸಮಿತಿ (ರಿ ) ಸುರತ್ಕಲ್ ಇವರು ನಡೆಸಿಕೊಂಡು ಬಂದಿರುವ ‘ಉದಯರಾಗ’ ಸರಣಿ ಕಾರ್ಯಕ್ರಮದ ಈ ಬಾರಿಯ ಸಂಗೀತ ಕಛೇರಿಯು ಇದೆ ಬರುವ ದಿನಾಂಕ 12.03.2023ರ ಭಾನುವಾರದ ಬೆಳಿಗ್ಗೆ ಗಂ 6.00 ರಿಂದ 7.00 ರ ವರೆಗೆ ಸುರತ್ಕಲ್ ನಲ್ಲಿರುವ ಕೆನರಾ ಬ್ಯಾಂಕ್ ಅಡ್ಡರಸ್ತೆಯ ‘ಅನುಪಲ್ಲವಿ’ ಇಲ್ಲಿ ನಡೆಯಲಿದೆ. ಹಾಡುಗಾರಿಕೆಯಲ್ಲಿ ಪ್ರಣವ್ ಅಡಿಗ ಉಡುಪಿ ಇವರಿಗೆ ವಯಲಿನ್ ನಲ್ಲಿ ಧನಶ್ರೀ ಶಬರಾಯ ಮಂಗಳೂರು, ಮೃದಂಗದಲ್ಲಿ ಅಚಿಂತ್ಯಕೃಷ್ಣ ಪುತ್ತೂರು ಇವರು ಸಹಕರಿಸಲಿರುವರು. ಪ್ರಣವ್ ಅಡಿಗ : ಅಂಬಲಪಾಡಿಯ ಶ್ರೀಮತಿ ವೀಣಾ ಹಾಗೂ ಪ್ರಕಾಶ್ ಅಡಿಗ ದಂಪತಿಗಳ ಪುತ್ರ ಚಿ| ಪ್ರಣವ್ ಅಡಿಗ ಪ್ರಸ್ತುತ ಆನಂದ ತೀರ್ಥ ವಿದ್ಯಾಲಯದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ. ಕಳೆದ 6 ವರ್ಷಗಳಿಂದ ಕೊಳಲು ವಾದನ ಹಾಗೂ ಸಂಗೀತವನ್ನು ವಿದ್ವಾನ್ ಕೆ. ರಾಘವೇಂದ್ರ ರಾವ್ ಹಾಗೂ ವಿದ್ವಾನ್ ಕೆ. ರವಿಚಂದ್ರ ಕೂಳೂರು ಇವರಲ್ಲಿ ಕಲಿಯುತ್ತಿದ್ದಾನೆ ಹಾಗೂ ವಿದುಷಿ ಶ್ರೀಮತಿ…
9 ಮಾರ್ಚ್ 2023, ಕಾಸರಗೋಡು: ಬಹುಭಾಷಾ ಪ್ರದೇಶವಾಗಿರುವ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅನುವಾದದ ಕುರಿತಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣ ಔಚಿತ್ಯಪೂರ್ಣ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಪ್ರೊ. ಎಚ್. ವೆಂಕಟೇಶ್ವರಲು ಅವರು ಹೇಳಿದರು. ಭಾಷೆಗಳ ಅಳಿವು ಉಳಿವಿನ ಮೇಲೆ ಮನುಷ್ಯನ ಅಸ್ತಿತ್ವವಿದೆ. ಭಾರತದ ವಿವಿಧ ಪ್ರಾದೇಶಿಕ ಭಾಷೆಗಳ ಅಭಿವೃದ್ದಿಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು. ಕಾಸರಗೋಡಿನ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ನಡೆದ ‘ಅನುವಾದ – ಅನುಸಂಧಾನ: ತತ್ವ ಮತ್ತು ಪ್ರಯೋಗ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಭಾಗಗಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಸಶಕ್ತವಾಗಿ ಕಟ್ಟುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ವಿಭಾಗವು ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಅನುವಾದ ತತ್ವ ಮತ್ತು ಪ್ರಯೋಗ ಕುರಿತ ವಿಚಾರ ಸಂಕಿರಣವು ಅತ್ಯಂತ ಮಹತ್ವವನ್ನು ಪಡೆದಿದೆ ಎಂದರು. ವಿಚಾರ ಸಂಕಿರಣದ ಕುರಿತು ದಿಕ್ಸೂಚಿ ಮಾತುಗಳನ್ನಾಡಿದ ಖ್ಯಾತ…
9 ಮಾರ್ಚ್ 2023, ಬೆಂಗಳೂರು: ರಾಣಿ ಅಬ್ಬಕ್ಕ ಉತ್ಸವ ಸಮಿತಿ ಬೆಂಗಳೂರು ಇದರ ವತಿಯಿಂದ ಇದೇ ಮಾರ್ಚ್ 12 ಭಾನುವಾರದಂದು ‘ರಾಣಿ ಅಬ್ಬಕ್ಕ ಉತ್ಸವ’ವನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿರುವ ‘ರಾಣಿ ಅಬ್ಬಕ್ಕ ಕ್ರೀಡಾಂಗಣ’ದಲ್ಲಿ ಆಯೋಜಿಸಲಾಗಿದೆ. ದಿನಾಂಕ 07-03-2023 ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ವೀರರಾಣಿ ಅಬ್ಬಕ್ಕನ ಹೆಸರು, ಕೆಚ್ಚೆದೆಯ ಹೋರಾಟ ಮತ್ತು ಕೀರ್ತಿಯನ್ನು ನಾಡಿನೆಲ್ಲೆಡೆ ಪಸರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಸಂಘ ಸಂಸ್ಥೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿವೆ. ಅಂದು ಪೂರ್ವಾಹ್ನ 9 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಅಬಕಾರಿ ಸಚಿವ ಗೋಪಾಲಯ್ಯ, ಶಾಸಕ ಯು.ಟಿ. ಖಾದರ್ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸುಮಾರು 20 ಸಾವಿರ…
9 ಮಾರ್ಚ್ 2023 ಮಂಗಳೂರು: ಟಿ. ಸುನಂದಮ್ಮ ಸ್ಮಾರಕ ಪ್ರತಿಷ್ಠಾನ ನೀಡುವ “ಟಿ. ಸುನಂದಮ್ಮ ಪ್ರಶಸ್ತಿ”ಗೆ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಆಯ್ಕೆಯಾಗಿದ್ದಾರೆ. ಹಾಸ್ಯ ಸಾಹಿತಿ ಟಿ. ಸುನಂದಮ್ಮ ಅವರ ಸ್ಮರಣಾರ್ಥ ಈ ಪ್ರತಿಷ್ಠಾನವು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು ರೂ.30,000/- ನಗದು ಹಾಗೂ ಸ್ಮರಣ ಫಲಕಗಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 18ರ ಸಂಜೆ 5-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನೆರವೇರಲಿದೆ. ಹಾಸ್ಯ ಬರಹಗಾರ ಎಂ.ಎಸ್. ನರಸಿಂಹ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
9 ಮಾರ್ಚ್ 2023, ಮಂಗಳೂರು: ಸಂತ ಆಲೋಶಿಯಶ್ ಕಾಲೇಜು (ಸ್ವಾಯತ್ತ) ಮಂಗಳೂರು, ಯುಜಿಸಿ ಸ್ಟ್ರೈಡ್ ಯೋಜನೆ, ಸಂತ ಆಲೋಶಿಯಶ್ ರಂಗ ಅಧ್ಯಯನ ಕೇಂದ್ರ, ಸಂತ ಆಲೋಶಿಯಶ್ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಪ್ರೊ. ಅಮೃತ ಸೋಮೇಶ್ವರ ವಿರಚಿತ, ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ, ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಅಭಿನಯಿಸುವ “ಗೋಂದೊಳು” ತುಳು ಭಾಷಾ ಸೊಗಡಿನ ಜಾನಪದ ನಾಟಕ ದಿನಾಂಕ :10-03-2023ರಂದು ಸಂತ ಆಲೋಶಿಯಶ್ ಕಾಲೇಜ್ ನ ಎಲ್.ಸಿ.ಆರ್.ಐ. ಸಭಾಭವನದಲ್ಲಿ ಮಧ್ಯಾಹ್ನ ಗಂಟೆ 3-15 (ವಿದ್ಯಾರ್ಥಿಗಳಿಗೆ) ಸಂಜೆ ಗಂಟೆ 6-15 (ಸಾರ್ವಜನಿಕರಿಗೆ) ಹೀಗೆ ಎರಡು ಪ್ರದರ್ಶನಗಳು ನಡೆಯಲಿವೆ. ನಾಟಕದ ಕುರಿತು : ತುಳುನಾಡಿನ ಸತ್ಯ-ಸತ್ವಗಳೆರಡನ್ನೂ ಚಿತ್ರಿಸುವ ಗೋಂದೊಳು ನಾಟಕ ತುಳುವಿನ ಜಾನಪದ ಕಥೆಯನ್ನು ವಸ್ತುವನ್ನಾಗಿಸಿಕೊಂಡಿದೆ. ದೇಬೆ ಎನ್ನುವ ಸಾಮಾನ್ಯ ಹೆಣ್ಣೊಬ್ಬಳು ಊರಿನ ಪ್ರಮುಖ ಗುರಿಕಾರನಿಂದ ಅನ್ಯಾಯಕ್ಕೆ ಒಳಗಾಗಿ ಪ್ರತಿಭಟಿಸುವ, ಕಡೆಗೆ ಮಾಸ್ತಿಯಮ್ಮನಾಗಿ ದೈವತ್ವಕ್ಕೇರುವ ಕಥೆಯೇ ಗೋಂದೊಳು ನಾಟಕ. ತುಳುಮಣ್ಣಿನ ಸೊಬಗನ್ನು ಭಾಷೆಯ ಸೌಂದರ್ಯವನ್ನು ದೈವ ದೇವರ ಇತಿಹಾಸದೊಳಗೆ ಮಣ್ಣಾದ ಅನ್ಯಾಯದ…
9 ಮಾರ್ಚ್ 2023 ಮಂಗಳೂರು: ತುಳುನಾಡಿನ ಸಾಂಸ್ಕೃತಿಕ ಪರಂಪರೆ ಅನನ್ಯವಾದುದು: ಪ್ರೊ.ಪಿ.ಎಸ್. ಯಡಪಡಿತ್ತಾಯ ಮುಡಿಪು: ತುಳುನಾಡಿನ ದೈವಾರಾಧನೆ, ಕಂಬಳ, ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಬಹಳ ವಿಶೇಷವಾದುದು ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆ ಅನನ್ಯವಾದುದು. ಯುವ ಸಮುದಾಯ ಇದರ ಮಹತ್ವವನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ “ಸಂಸ್ಕೃತಿ ಸಿರಿ-2023” ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತ ಕಾರ್ಯಕ್ರಮವನ್ನು ದಿನಾಂಕ 07-03-2023 ಮಂಗಳವಾರದಂದು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಕಂಬಳ ಅಥವಾ ಇತರ ಜಾನಪದ ಕ್ರೀಡೆಗಳು ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿರುವ ಧಾರ್ಮಿಕತೆ ಮತ್ತು ನೈಜ ಸತ್ಯವನ್ನು ಅರಿಯಬೇಕಿದೆ. ಕರಾವಳಿಯ ಜನರ ಆಚರಣೆಗಳು, ಮೂಲನಂಬಿಕೆಗಳು ಇಲ್ಲಿಯ ಜೀವನದೊಂದಿಗೆ ಬೆಸೆದುಕೊಂಡಿದೆ. ಇಂದಿನ ವೈಜ್ಞಾನಿಕ ಯುಗದಲ್ಲೂ ಕೆಲವೊಂದು ರೋಗಗಳಿಗೆ ತುಳುನಾಡಿನ ನಾಟಿವೈದ್ಯರೇ ಆಗಬೇಕಿದೆ. ತುಳುನಾಡಿನ ಸತ್ವ ಸತ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ಸಂಸ್ಕೃತಿಯ ಅರಿವು, ಜಾಗೃತಿಯಾಗುತ್ತದೆ ಎಂದರು. ಬಿ.ಸಿ.ರೋಡ್ ರಾಣಿ…
9 ಮಾರ್ಚ್ 2023 ಮಂಗಳೂರು: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ. ಮುಳಿಯ ತಿಮ್ಮಪ್ಪಯ್ಯ ಇವರ ಸ್ಮರಣಾರ್ಥ ಮುಳಿಯ “ತಿಮ್ಮಪ್ಪಯ್ಯ ಪ್ರಶಸ್ತಿ” ನೀಡಲಾಗುತ್ತಿದೆ. ಖ್ಯಾತ ವಿದ್ವಾಂಸ ಡಾ| ಬಿ.ಎ. ವಿವೇಕ ರೈಯವವರು ಅಧ್ಯಕ್ಷರಾಗಿರುವ ಈ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಹಿರಿಯ ಲೇಖಕಿ ಚಿಂತಕಿ ಹಾಗೂ ಸಂಶೋಧಕಿ ಬಿ.ಎಂ. ರೋಹಿಣಿಯವರು ಆಯ್ಕೆ ಮಾಡಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರದಾನ ಮಾಡುವ ಈ ಪ್ರಶಸ್ತಿಯ ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಮಾರ್ಚ್ 25ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
08-03-2023, ಧರ್ಮಸ್ಥಳ: ‘ಸಾಹಿತ್ಯವನ್ನು ಪೋಷಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳ ಪಾಲೂ ಬಹುಮುಖ್ಯ’- ಡಾ.ಹೇಮಾವತಿ.ವೀ.ಹೆಗ್ಗಡೆ ‘ಬರೆಹಗಾರರನ್ನು ಪ್ರೋತ್ಸಾಹಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಂತರ್ಜಾಲ ಲಭ್ಯವಾಗದ ಗ್ರಾಮೀಣ ಭಾಗಗಳಲ್ಲಿ ಓದಿಗೆ ಲಭ್ಯವಾಗುವ ಸ್ಥಳೀಯ ಪತ್ರಿಕೆಗಳು ಸುತ್ತಮುತ್ತಲಿನ ಘಟನೆಗಳ ಬಗ್ಗೆ ಮಾಹಿತಿಗಳನ್ನು ಕೊಡುವುದಲ್ಲದೆ ಜನರನ್ನು ಮತ್ತಷ್ಟು ಆತ್ಮೀಯರಾಗಲು ಸಹಕಾರಿಯಾಗುತ್ತದೆ. ಆದುದರಿಂದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳು ಓದುಗರನ್ನು ಹೆಚ್ಚು ತಟ್ಟಬಲ್ಲದು. ಸ್ತ್ರೀಪರ ಚಿಂತನೆಗಳು ಅಂಕಣಗಳು ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚು ಪ್ರಕಟವಾಗಬೇಕಿದೆ’ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಅಕ್ಷತಾ ರಾಜ್ ಪೆರ್ಲ ಅವರು ಬರೆದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಚಂದ್ರಭಾಗಿ ರೈ ದತ್ತಿನಿಧಿ ಪುರಸ್ಕೃತ ಲೇಖನ ಸಂಕಲನ ‘ಅವಲಕ್ಕಿ ಪವಲಕ್ಕಿ’ ಬಿಡುಗಡೆ ಹಾಗೂ ಸಾಹಿತ್ಯ ಪ್ರಕಾಶನದ ಲಾಂಛನ ಅನಾವರಣಗೊಳಿಸಿ ನುಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಅಕ್ಷತಾರಾಜ್ ಪೆರ್ಲ, ಪತ್ರಕರ್ತ ರಾಜೇಶ್ ಶೆಟ್ಟಿ ದೋಟ, ರೇಡಿಯೋ ನಿನಾದ ಸಮುದಾಯ ಬಾನುಲಿಯ ಕಾರ್ಯಕ್ರಮ ಸಂಯೋಜಕರಾದ ವಿ.ಕೆ ಕಡಬ,…