Subscribe to Updates
Get the latest creative news from FooBar about art, design and business.
Author: roovari
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಅಮರಸುಳ್ಯ ಅಧ್ಯಯನ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ‘ಸಾಹಿತ್ಯ ಸಂಭ್ರಮ’ ಡಾ. ಶಂಕರ ಪಾಟಾಳಿ ಬದಿಯಡ್ಕ ವಿರಚಿತ ಆಕೃತಿ ಆಶಯ ಮಂಗಳೂರು ಇವರ ಪ್ರಕಟಣೆ ‘ಶಿಶಿಲ ಚಿಂತನೆ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 29-03-2024ರಂದು ಸುಳ್ಯ ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಇವರು ವಹಿಸಲಿದ್ದು, ಹಿರಿಯ ಯಕ್ಷಗಾನ ಅರ್ಧದಾರಿಗಳಾದ ಶ್ರೀ ಜಬ್ಬಾರ್ ಸಮೊ ಕೃತಿ ಬಿಡುಗಡೆ ಮಾಡಲಿದ್ದಾರೆ. ಮಾಜಿ ರಾಜ್ಯಪಾಲರಾದ ಲಯನ್ ಎಂ.ಬಿ. ಸದಾಶಿವ ಇವರು ಕೃತಿ ಪರಿಚಯ ಮಾಡಲಿದ್ದಾರೆ.
ಬದಿಯಡ್ಕ : ಬದಿಯಡ್ಕದ ಇಕ್ಕೇರಿ ಶ್ರೀ ಶಂಕರನಾರಾಯಣ ದೇವರ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆ(ರಿ) ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 18-03-2024ರಂದು ನಡೆಯಿತು. ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಹಾಗೂ ‘ತರಣಿಸೇನ ಕಾಳಗ’ ಪ್ರಸಂಗಗಳ ಪ್ರದರ್ಶನ ನಡೆಯಿತು. ಸುದರ್ಶನ ವಿಜಯ ಪ್ರಸಂಗದಲ್ಲಿ ದೇವೇಂದ್ರನಾಗಿ ಶಶಿಧರ ಕುದಿಂಗಿಲ, ದೇವೇಂದ್ರ ಬಲಗಳಾಗಿ ಶ್ರೇಯಾ ಹಾಗೂ ಸುಕೃತಾ, ಶತ್ರುಪ್ರಸೂದನನಾಗಿ ಶರತ್, ರಾಕ್ಷಸ ಬಲಗಳಾಗಿ ಮೋಕ್ಷಾ ಹಾಗೂ ವಿಷ್ಣು, ಈಶ್ವರನಾಗಿ ಶ್ರಾವ್ಯಾ, ವಿಷ್ಣುವಾಗಿ ಮೇಘನಾ ಕುಡಾಣ, ಲಕ್ಷ್ಮೀಯಾಗಿ ಶರಣ್ಯಾ, ಸುದರ್ಶನನಾಗಿ ಅಭಿಜ್ಞಾ ಭಟ್ ಬೊಳುಂಬು ಪಾತ್ರಗಳಿಗೆ ಜೀವ ತುಂಬಿದರು. ತರಣಿಸೇನ ಕಾಳಗದಲ್ಲಿ ತರಣಿ ಸೇನನಾಗಿ ವಿದ್ಯಾ ಆನಂದ್ ಕೆಕ್ಕಾರು, ಶ್ರೀರಾಮನಾಗಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ವಿಭೀಷಣನಾಗಿ ಶಶಿಧರ ಕುದಿಂಗಿಲ ಹಾಗೂ ಸರಮೆಯಾಗಿ ಸುಧಾ ಇವರುಗಳು ಪಾತ್ರಗಳಲ್ಲಿ ಪ್ರಬುದ್ಧತೆ ಮೆರೆದರು. ಭಾಗವತರಾಗಿ ದಯಾನಂದ ಕೋಡಿಕಲ್, ಚೆಂಡೆ ಮದ್ದಳೆಗಳಲ್ಲಿ ಸುದರ್ಶನ ಕಲ್ಲೂರಾಯ, ಕೃಷ್ಣಮೂರ್ತಿ ಎಡನಾಡು…
ಮಂಗಳೂರು : ಕಲಾಭಿ ಥಿಯೇಟರ್ ಮಂಗಳೂರು, ಕೆನರಾ ಕಲ್ಚರಲ್ ಅಕಾಡೆಮಿಯ ಸಹಕಾರದೊಂದಿಗೆ 9ರಿಂದ 17 ವರ್ಷದ ಮಕ್ಕಳಿಗೆ ಹತ್ತು ದಿನಗಳ ವೃತ್ತಿಪರ ರಂಗಭೂಮಿ ಕಾರ್ಯಾಗಾರ ‘ಅರಳು 2024’ ದಿನಾಂಕ 11-04-2024ರಿಂದ 21-04-2024ರವರೆಗೆ ಕೊಡಿಯಾಲ್ ಬೈಲಿನ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಕೊನೆಯ ದಿನ ಕೆನರಾ ಪಿ.ಯು. ಕಾಲೇಜಿನಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಮಂಗಳೂರಿನ ಎಲ್ಲಾ ಮಕ್ಕಳಿಗೂ ಮುಕ್ತ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 8431631998 ಮತ್ತು 8746930404 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಮಂಗಳೂರು : ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿ ನಡೆದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರಾವಳಿ ಲೇಖಕಿಯರ, ವಾಚಕಿಯರ ಸಂಘ ಮತ್ತು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಠ, ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆದಿರುವ ಡಾ. ಸುನೀತಾ ಶೆಟ್ಟಿ ಪ್ರಾಯೋಜಿತ ‘ತೌಳವಸಿರಿ’ ಪ್ರಶಸ್ತಿ, ನಾಡೋಜ ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ ಮತ್ತು ಚಂದ್ರಭಾಗಿ ರೈ ದತ್ತಿನಿಧಿ ಬಹುಮಾನ ಇವುಗಳ ಪ್ರದಾನ ಸಮಾರಂಭವು ದಿನಾಂಕ 20-03-2024ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಠ, ಮಂಗಳೂರು ಇಲ್ಲಿನ ಪ್ರಾಚಾರ್ಯರಾಗಿರುವ ಡಾ. ಜಗದೀಶ್ ಬಾಳ ಇವರು ಮಾತನಾಡಿ “ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಅಧ್ಯಯನದೊಂದಿಗೆ ಸಾಹಿತ್ಯ ಕೃತಿಗಳನ್ನು ಓದುವುದರ ಮೂಲಕ ಬರವಣಿಗೆಯ ಕಡೆಗೂ ಆಸಕ್ತಿಯನ್ನು ತೋರಿಸಬೇಕು, ಸಾಹಿತ್ಯದಷ್ಟು ಮನಸ್ಸಿಗೆ ಹಿತ ಕೊಡುವಂತಹದ್ದು ಬೇರೆ ಯಾವುದೂ ಇಲ್ಲ. ಇಂತಹ ಸಾಹಿತ್ಯದ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು…
ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಯಕ್ಷಕಲಾ ಕೇಂದ್ರ ಹಾಗೂ ಎನ್. ಎಸ್. ಕಿಲ್ಲೆ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಯಕ್ಷ ಸಂವಾದ ಕಾರ್ಯಕ್ರಮವು ದಿನಾಂಕ 09-03=2024ರಂದು ಪುತ್ತೂರಿನ ಸಂತ ಫಿಲೊಮಿನ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ “ಪರಮ ಶಿಷ್ಯ ಭೀಷ್ಮ” ಎಂಬ ಯಕ್ಷಗಾನ ತಾಳಮದ್ದಳೆಯನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಿಲ್ಲೆ ಪ್ರತಿಷ್ಠಾನ ಕೆದಂಬಾಡಿ ಇದರ ಅಧ್ಯಕ್ಷರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಕಡಮಜಲು ಸುಭಾಷ್ ರೈ “ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರವು ಭಾರತೀಯ ಮಹಾ ಕಾವ್ಯ ಹಾಗೂ ಕಲಾ ಶ್ರೀಮಂತಿಕೆಯನ್ನು ಯಕ್ಷಪ್ರೇಮಿಗಳಿಗೆ ಯಕ್ಷಸಂವಾದ ಸರಣಿ ಕಾರ್ಯಕ್ರಮಗಳ ಮೂಲಕ ಉಣಬಡಿಸುತ್ತಿದೆ. ಯಕ್ಷ ಕಲಾ ಕೇಂದ್ರದ ವತಿಯಿಂದ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ. ಕೇಂದ್ರವು ಆಯೋಜಿಸುವ ಎಲ್ಲಾ ಕರ‍್ಯಕ್ರಮಗಳಿಗೆ ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ.” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟೊನಿ ಪ್ರಕಾಶ್ ಮೊಂತೆರೋ ಮಾತನಾಡಿ “ಸಂಭಾಷಣೆಯೇ ತಾಳಮದ್ದಳೆಯ ಜೀವಾಳ. ತಾಳಮದ್ದಳೆಯಲ್ಲಿ ಪ್ರಮುಖವಾಗಿ…
ಬೆಂಗಳೂರು : ಸುರಾನ ಕಾಲೇಜಿನಲ್ಲಿ ವಿಶ್ವ ಕಾವ್ಯದಿನದ ಅಂಗವಾಗಿ ಕವಿ ಕುಮಾರವ್ಯಾಸ ಕುರಿತ ವಿಚಾರ ಸಂಕಿರಣ ಹಾಗೂ ಕಾವ್ಯ ವಾಚನ ಕಾರ್ಯಕ್ರಮ ದಿನಾಂಕ 20-03-2024ರಂದು ನಡೆಯಿತು. ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ ಸಹಯೋಗದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದಲ್ಲಿ ಗಾದೆ ಮಾತುಗಳು ಹಾಗೂ ಉತ್ತರ ಕುಮಾರನ ಪೌರುಷದ ವಿಷಯ ಕುರಿತ ವಿಚಾರ ಮಂಡನೆ ನಡೆಯಿತು. ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಚೈತ್ರ ಮೂರ್ತಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ.ವತ್ಸಲಾ ಮೋಹನ್ ಹಾಗೂ ಡಾ. ಸುಷ್ಮಾ ಕ್ರಮವಾಗಿ ವಿಷಯ ಮಂಡಿಸಿದ ನಂತರ, ಶ್ರೀಮತಿ ವಿಜಯಾ ವಿಷ್ಣುಭಟ್ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರೆ, ಡಾ. ಕೆ. ಪಿ. ಪುತ್ತೂರಾಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶ್ರೀಮತಿ ಗೌರಿ ವಿಶ್ವನಾಥ್ ಕಾವ್ಯ ವಾಚನ ಮಾಡಿದರು. ವಿದ್ಯಾರ್ಥಿಗಳೇ ನಿರೂಪಣೆ, ಸ್ವಾಗತ ಹಾಗೂ ವಿಷಯ ಮಂಡನೆಯನ್ನು ನಿರ್ವಹಿಸಿದ್ದು ವಿಶೇಷವಾಗಿತ್ತು. ವಿವಿಧ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಂಗಳೂರು : ಕಳೆದ ಮೂರು ದಶಕಗಳಿಗೂ ಮಿಕ್ಕಿ ತುಳುಕೂಟದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ, ಪ್ರಸ್ತುತ ಉಪಾಧ್ಯಕ್ಷರುಗಳಲ್ಲಿ ಓರ್ವರಾದ ಹಿರಿಯ ರಂಗಕರ್ಮಿ, ಸಂಘಟಕ ವಿ. ಜಿ. ಪಾಲ್ ರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 21-03-2024ರಂದು ಮಂಗಳೂರಿನ ತುಳುಕೂಟದ ಕಛೇರಿಯಲ್ಲಿ ನಡೆಯಿತು. ತುಳುಕೂಟದ ಅಧ್ಯಕ್ಷರಾದ ಮರೋಳಿ ಬಿ. ದಾಮೋದರ ನಿಸರ್ಗ ಮಾತನಾಡಿ “ತುಳುಕೂಟ ನಡೆಸಿದ ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲೂ ಸಲಹೆ ಮತ್ತು ಸೂಚನೆ ನೀಡುತ್ತಾ ಕೂಟದ ಏಳಿಗೆಗೆ ಸಹಕರಿಸುತ್ತಿದ್ದ ಸನ್ಮಿತ್ರ ಪಾಲ್ ರ ಆತ್ಮಕ್ಕೆ ಶ್ರೀದೇವರು ಚಿರಶಾಂತಿಯನ್ನು ನೀಡಲಿ.” ಎಂದರು. ಸಭೆಯಲ್ಲಿ ವರ್ಕಾಡಿ ರವಿ ಅಲೆವೂರಾಯ, ಜೆ. ವಿ. ಶೆಟ್ಟಿ, ಚಂದ್ರಶೇಖರ ಸುವರ್ಣ, ಪದ್ಮನಾಭ ಕೋಟ್ಯಾನ್, ನಾರಾಯಣ ಬಿ. ಡಿ., ಪಿ. ಗೋಪಾಲಕೃಷ್ಣ, ಭಾಸ್ಕರ ಕುಲಾಲ್ ಬರ್ಕೆ, ಹೇಮಾ ನಿಸರ್ಗ, ಸುಜಾತಾ ಸುವರ್ಣ ಕೊಡ್ಮಾಣ್, ಸತ್ಯವತಿ ಆರ್. ಬೋಳೂರು, ರಮೇಶ್ ಕುಲಾಲ್ ಬಾಯಾರು, ದಿನೇಶ್ ಬಗಂಬಿಲ, ವಿಜಯ ಪ್ರಕಾಶ್ ತಾಳ್ತಜೆ, ವಿಶ್ವನಾಥ ಪೂಜಾರಿ ಸೋಣಳಿಕೆ, ರತ್ನ ಕುಮಾರ್ ಎಂ., ಉಪಸ್ಥಿತರಿದ್ದರು.
ಸುರತ್ಕಲ್ : ಚಿರಂತನ ಚಾರಿಟೇಬಲ್ ಟ್ರಸ್ಟ್ ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಾನ್ಸುರಿ ವಾದನ ಕಾರ್ಯಕ್ರಮವು ದಿನಾಂಕ 25-03-2024ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಂಗಳೂರಿನ ಕಾರ್ತಿಕ್ ಭಟ್ ಬಾನ್ಸುರಿ ನುಡಿಸಲಿದ್ದು, ಧಾರವಾಡದ ಹೇಮಂತ್ ಜೋಶಿ ತಬಲಾದಲ್ಲಿ ಸಾಥ್ ನೀಡಲಿದ್ದಾರೆ.
ಉಡುಪಿ : ಉಡುಪಿಯ ರಂಗಭೂಮಿ (ರಿ.) ವತಿಯಿಂದ ಎಂ.ಜಿ.ಎಂ. ಕಾಲೇಜು ಉಡುಪಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ‘ವಿಶ್ವ ರಂಗಭೂಮಿ ದಿನಾಚರಣೆ -2024’ಯನ್ನು ದಿನಾಂಕ 27-03-2024ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ರಂಗಭೂಮಿ ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ವಹಿಸಲಿದ್ದು, ಮಣಿಪಾಲದ ಮಾಹೆಯ ಉಪ ಕುಲಾಧಿಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ, ಕಲಾವಿದೆ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಮಾಧವಿ ಎಸ್. ಭಂಡಾರಿ ಇವರಿಗೆ ವಿಶ್ವ ರಂಗಭೂಮಿ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಉಡುಪಿಯ ರಂಗಭೂಮಿ ತಂಡದವರು ಶ್ರೀ ಗಣೇಶ್ ಮಂದಾರ್ತಿ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಸೀತಾರಾಮ ಚರಿತಾ’ ಎಂಬ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ‘ಉದಯರಾಗ – 51’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ಕೆಳಗಡೆ ದಿನಾಂಕ 24-03-2024 ಭಾನುವಾರ ಪೂರ್ವಾಹ್ನ ಗಂಟೆ 6ಕ್ಕೆ ನಡೆಯಲಿದೆ. ಸಾರಡ್ಕದ ರೋಶ್ನಿ ಉಪಾಧ್ಯಾಯ ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯಿ ಉಪ್ಪಂಗಳ ವಯಲಿನ್ ಮತ್ತು ಮಂಗಳೂರಿನ ಅವಿನಾಶ್ ಬಿ. ಮೃದಂಗದಲ್ಲಿ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುರತ್ಕಲ್ ಇನ್ನರ್ವೀಲ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ರಮೇಶ್ ಭಟ್ ಇವರು ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.