Author: roovari

ಮೈಸೂರು : ಪರಿವರ್ತನ ರಂಗ ಸಮಾಜ ಪ್ರಸ್ತುತ ಪಡಿಸುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತ ಪ್ರೀತಂ ಅವರ ಜೀವನ, ಪ್ರೀತಿ, ಕಾವ್ಯದ ಬಗ್ಗೆ ರಂಗ ಪ್ರಸ್ತುತಿ ‘ನನ್ನ ಪ್ರೀತಿಯ ಅಮೃತ’ ಮೇ 28ನೇ ಭಾನುವಾರ ಸಂಜೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರೊ. ಎಸ್.ಆರ್.ರಮೇಶ್ ರವರ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ನಾಟಕದಲ್ಲಿ ಸಾಹಿರ್ ನ ಪಾತ್ರದಲ್ಲಿ ಎಂ.ದ್ವಾರಕಾನಾಥ್, ಇಮ್ರೋಜ್ಹನಾಗಿ ಸತೀಷ್.ಬಿ.ಎಸ್. ಹಾಗೂ ಅಮೃತಾ ಪಾತ್ರವನ್ನು ತೇಜಸ್ವಿಜಿ ಜೊಯಿಸ್ ನಿರ್ವಹಿಸಲಿದ್ದಾರೆ. ನಾಟಕದ ಬಗ್ಗೆ : ಸಾಹಿರ್ ಮತ್ತು ಅಮೃತಾ ಪ್ರೀತಮ್ ಅವರ ಪ್ರೀತಿ ಭಾರತದ ಪ್ರೇಮ ಕಾವ್ಯದ ಅಪೂರ್ವವಾದ ಅಘಟಿತ ಘಟನೆಯಾಗಿದೆ. ಆತ 24ರ ವಯಸ್ಸಿನಲ್ಲಿ ತನ್ನ ಮೊದಲ ಕವನ ಸಂಕಲನದಿಂದ ಆಧುನಿಕ ಉರ್ದು ಕಾವ್ಯವನ್ನು ಗುಡಿಸಲು ಗಲ್ಲಿಗಳಿಗೆ ಕರೆದೊಯ್ದು, ತಾಜ್ ಮಹಲ್ ಕಟ್ಟಿ ಬಾದಷಹನೊಬ್ಬನು ತಮ್ಮ ಪ್ರೀತಿಗಳ ಗೋರಿಗಳ ಮೇಲೆ ಅಮೃತಶಿಲೆಯ ನೆನಪಿನ ಸೌಧಗಳನ್ನು ಕಟ್ಟಲಾಗದ ನಮ್ಮೆಲ್ಲರನ್ನು ಮೂದಲಿಸಿದ ಎಂದು ಹೇಳಿದ ಕ್ರಾಂತಿಕಾರಿ ಕವಿ.…

Read More

ಮಂಗಳೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ಮಂಗಳೂರು ನಗರ ವಲಯ ಸಮಿತಿ ನೇತೃತ್ವದಲ್ಲಿ ಯುವವಾಹಿನಿ ಮಂಗಳೂರು ಘಟಕ ಹಾಗೂ ಕಂಕನಾಡಿ ಘಟಕ ಸಹಕಾರದಲ್ಲಿ ಗೆಜ್ಜೆಗಿರಿ ಮೇಳದವರಿಂದ ಮಂಗಳೂರಿನ ಪುರಭವನದಲ್ಲಿ 150ನೇ ಪ್ರದರ್ಶನ ಮತ್ತು ಸನ್ಮಾನ ಸಮಾರಂಭವು ದಿನಾಂಕ 20-05-2023ರಂದು ಜರಗಿತು. ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗವು ಪ್ರಾರಂಭಗೊಂಡ ಈ ವರ್ಷದಲ್ಲಿಯೇ ದಾಖಲೆಯ 150ನೇ ಪ್ರದರ್ಶನಗೊಂಡ ಬಗ್ಗೆ ಸಂಭ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಪೀತಾ೦ಬರ ಹೆರಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೇಳದ ಸಂಚಾಲಕರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ನವೀನ್ ಸುವರ್ಣ ಸಜಿಪ, ನವೀನ್ ಅಮೀನ್ ಶಂಕರಪುರ, ಯಕ್ಷ ಪ್ರಸಂಗ ಕರ್ತ ನಿತಿನ್ ಪೂಜಾರಿ ತೆಂಕಕಾರಂದೂರು, ಮೇಳದ ಹಿಮ್ಮೇಳ, ಮುಮ್ಮೇಳದ ಎಲ್ಲಾ ಕಲಾವಿದರನ್ನು ಸನ್ಮಾನಿಸಲಾಯಿತು. ಎಂ.ಪಿ. ದಿನೇಶ್, ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಂಗಳೂರು ನಗರ ಸಮಿತಿ ಪ್ರಧಾನ ಸಂಚಾಲಕ ಹರೀಶ್‌ ಕೆ. ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್, ಮಂಗಳೂರು…

Read More

ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಸಹಭಾಗಿತ್ವದಲ್ಲಿ ದಿನಾಂಕ 21-05-2023 ಭಾನುವಾರ ಅನುಪಲ್ಲವಿಯಲ್ಲಿ ನಡೆಯುತ್ತಿರುವ ಶಾಸ್ತ್ರೀಯ ಸಂಗೀತ ಸರಣಿಯ ‘ಉದಯರಾಗ’ ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಅಧಿಕಾರಿ ಮುರಳೀಧರ ಅಡಕೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. “ಸಹೃದಯರ ಮನ ತಣಿಸುವ ಸಂಗೀತದ ಉಪಾಸನೆ ನಿರಂತರವಾಗಬೇಕು. ಯುವ ಶಾಸ್ತ್ರೀಯ ಸಂಗೀತದ ಕಲಾವಿದರಿಗೆ ಅವಕಾಶಗಳು ಲಭ್ಯವಾಗುತ್ತಿರುವುದು ಸ್ವಾಗತಾರ್ಹ” ಎಂದು ನುಡಿದರು. ಅನ್ವಿತಾ, ತಲ್ಪಣಾಜೆ ಅವರಿಂದ ಹಾಡುಗಾರಿಕೆ ನಡೆಯಿತು. ಸುನಾದ ಪಿ.ಎಸ್. ಮಾವೆ ವಯಲಿನ್ ನಲ್ಲಿ ಹಾಗೂ ಶಾಶ್ವತ್ ಕಂಬಾರ ಮೃದಂಗದಲ್ಲಿ ಸಹಕರಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್‌ ರಾವ್, ಸಂಗೀತ ಗುರುಗಳಾದ ಗೀತಾ ಸಾರಡ್ಕ ಉಡುಪಿ ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ, ಶ್ರೀ ನಾಟ್ಯಾಂಜಲಿ ಅಕಾಡೆಮಿ, ನಿರ್ದೇಶಕ ವಿದ್ವಾನ್ ಕೆ. ಚಂದ್ರಶೇಖರ ನಾವಡ, ಕೃಷ್ಣಕುಮಾರಿ ಉಪಸ್ಥಿತರಿದ್ದರು. ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.

Read More

ಬೆಂಗಳೂರು : ಚಿಗುರು ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ‘ಹೆಜ್ಜೆ ಗೆಜ್ಜೆ’ ಶೀರ್ಷಿಕೆಯಡಿ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಕ್ಕಳಿಂದ ಹಿರಿಯರವರೆಗೆ ನಾಲ್ಕು ಪ್ರತ್ಯೇಕ ತಂಡಗಳಲ್ಲಿ ಸ್ಪರ್ಧೆ ನಡೆಯಲಿದೆ. 3ರಿಂದ 8 ವರ್ಷದೊಳಗಿನ ಮಕ್ಕಳಿಗೆ ಸಬ್ ಜೂನಿಯರ್, 9ರಿಂದ 14 ವರ್ಷದೊಳಗಿನ ಮಕ್ಕಳಿಗೆ ಜೂನಿಯರ್, 15ರಿಂದ 20 ವರ್ಷದೊಳಗಿನವರಿಗೆ ಸೀನಿಯರ್ ವಿಭಾಗದಲ್ಲಿ ಹಾಗೂ 20 ವರ್ಷ ಮೇಲ್ಪಟ್ಟವರಿಗೆ ಸೂಪರ್ ಸೀನಿಯರ್ಸ್ ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೋಲೊ ಮತ್ತು ಸಮೂಹ ಸ್ಪರ್ಧೆ ಕೂಡ ಇದೆ. ಸ್ಪರ್ಧೆಯು ಜೂ.25ರಂದು ನಡೆಯಲಿದೆ. ಪ್ರತಿ ವಿಭಾಗದಲ್ಲೂ ಮೂವರು ವಿಜೇತರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು. ಜತೆಗೆ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಆಸಕ್ತರು ಜೂನ್ 3ರೊಳಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಹಾಗೂ ಮಾಹಿತಿಗೆ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ : 98866 13199.

Read More

ಕುಂದಾಪುರ : ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ.) ಕುಂದಾಪುರ ಇವರು ಜೆ.ಸಿ.ಐ. ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಮೇ ತಿಂಗಳ ಓದು’ ಅವಿಭಜಿತ ಕುಂದಾಪುರ ತಾಲೂಕು ಮಟ್ಟದ ಕವಿಗೋಷ್ಠಿಯು ದಿನಾಂಕ 28-05-2023ರಂದು ಕುಂದಾಪುರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಜೆ.ಸಿ.ಐ. ಭವನದಲ್ಲಿ ನಡೆಯಲಿದೆ. ವಿಲ್ಸನ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ರೇಖಾ ಬನ್ನಾಡಿ, ರಾಮಕೃಷ್ಣ ಹೇರ್ಳೆ, ಸುಧಾ ಅಡುಕಳ, ಅಭಿಲಾಷಾ ಹಂದೆ, ಅಬ್ದುಲ್ ರವೂಫ್ ಇವರುಗಳ ವಿಶೇಷ ಉಪಸ್ಥಿತಿಯಲ್ಲಿ ಈ ಕವಿಗೋಷ್ಠಿಯು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಂಕರ ಕೆಂಚನೂರು, ಶಶಿಧರ ಹೆಮ್ಮಾಡಿ, ಉದಯ ಗಾಂವಕರ, ಸಂತೋಷ ಗುಡ್ಡಿಯಂಗಡಿ, ವಿಜಯಶ್ರೀ ಹಾಲಾಡಿ, ಸಂಪೂರ್ಣಾನಂದ ಬಳ್ಳೂರು, ಜಯಲಕ್ಷ್ಮಿ ಸತೀಶ್, ಶರತ್ ಶೆಟ್ಟಿ ವಂಡ್ಸೆ, ಸಚಿನ್ ಅಂಕೋಲ, ವಿಜಯಕುಮಾರ ಕುಂಭಾಶಿ, ಮಂಜುನಾಥ್ ಚಾಂದ್, ರಾಮು ಯು. ಸಿರಿಗೆರೆ, ಉಪ್ಪಿನಕುದ್ರು, ಸುಜಿತ್ ಕಾರ್ಕಳ, ರೇವತಿ ರಾಮ್, ಶ್ರೀಕಲಾ ಅಮರೇಶ ಶೆಟ್ಟಿಗಾರ, ವಿನಯಾ ಕೌಂಜೂರು, ಮಂಜುನಾಥ ಮಧ್ಯಸ್ಥ, ಲೋಲಾಕ್ಷಿ ಮರವಂತೆ, ಗಣೇಶ ಭಟ್, ರಾಘವೇಂದ್ರ ಡಿ. ಆಲೂರು, ದಿಶಾ ಗುಲ್ವಾಡಿ,…

Read More

ಕಾಸರಗೋಡು: ರಂಗ ಚಿನ್ನಾರಿಯ 17ನೆಯ ವಾಷಿ೯ಕೋತ್ಸವವು ನಾರಿಚಿನ್ನಾರಿಯ ಸಹಯೋಗದೊಂದಿಗೆ  ಎಡನೀರು ಶ್ರೀ ಸ್ವಾಮೀಜೀಸ್ ಹೈಯರ್  ಸೆಕೆಂಡರಿಯ ಸಭಾಂಗಣದಲ್ಲಿ 20-05 2023 ರಂದು ಅಥ೯ಪೂಣ೯ವಾಗಿ ಜರಗಿತು. ನಾರಿಚಿನ್ನಾರಿಯ ಸದಸ್ಯೆಯರಾದ  ಉಷಾ ರಾಮ್, ಗೀತಾ ಭಟ್ ಹಾಗೂ ವಿಜಯಲಕ್ಷ್ಮೀ ಶಾನುಭೋಗರ ಪ್ರಾಥ೯ನೆಯೊಂದಿಗೆ ಆರಂಭವಾದ ಕಾಯ೯ಕ್ರಮವನ್ನು  ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ರಂಗಚಿನ್ನಾರಿಯ ಅಧ್ಯಕ್ಷ ರಾದ ಕಾಸರಗೋಡು ಚಿನ್ನಾ ಅವರು ಸಂಘಟನೆಯ ಹುಟ್ಟು ಮತ್ತು ನಡೆದು ಬಂದ ದಾರಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನು ಆಡಿ ಮುಂದಿನ ಯೋಜನೆಗಳ ಕುರಿತು ತಮ್ಮ ಕನಸನ್ನು ಬಿಚ್ಚಿಟ್ಟರು. ರಂಗಚಿನ್ನಾರಿಯ  ಶ್ರೀ ಕೇಶವಾನಂದ ಪ್ರಶಸ್ತಿಗೆ ಭಾಜನರಾದ ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ಟ ರನ್ನು ಶಾಸಕ ಪ್ರತಾಪಸಿಂಹನಾಯಕ್ ಪೇಟತೊಡಿಸಿ,ಹಾರ,ಫಲ ತಾಂಬೂಲ, ಸ್ಮರಣಿಕೆ ನಗದು ನೀಡಿ ಗೌರವಿಸಿದರು.ಹಾಗೆಯೇ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಠಲ ಗಟ್ಟಿ ಉಳಿಯ ಮತ್ತು ಗಮಕ ಹಾಗೂ ಮಹಿಳಾ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಜಯಲಕ್ಷ್ಮೀ ಕಾರಂತರನ್ನು ಸನ್ಮಾನಿಸಿದರು. ರಂಗಚಿನ್ನಾರಿ ಯುವ ಪ್ರಶಸ್ತಿಯನ್ನು ಜಾನಪದ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2022 ಹಾಗೂ 2023ನೇ ಸಾಲಿನ ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ʻಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿʼ ಪ್ರಕಟಗೊಂಡಿದೆ. ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಒಬ್ಬ ಲೇಖಕ ಹಾಗೂ ಒಬ್ಬ ಲೇಖಕಿಯನ್ನು ಪ್ರತಿವರ್ಷ ಪರಿಷತ್ತಿನ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ʻಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿʼಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಅಧ್ಯಕ್ಷರಿಗೆ ನೀಡುವ ಮಾಸಿಕ ಗೌರವ ಸಂಭಾವನೆಯನ್ನು ಪರಿಷತ್ತಿನಲ್ಲಿಯೇ ದತ್ತಿ ನಿಧಿ ರೂಪದಲ್ಲಿ ಸ್ಥಾಪಿಸಿದ್ದಾರೆ. 12,61,000 ( ಹನ್ನೆರಡು ಲಕ್ಷದ ಅರವತ್ತೊಂದು ಸಾವಿರ)ರೂ. ಗಳ ಖಾಯಂ ದತ್ತಿನಿಧಿಯನ್ನು ಸ್ಥಾಪಿಸಿರುತ್ತಾರೆ. ಪ್ರತಿವರ್ಷ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಒಬ್ಬ ಲೇಖಕ ಹಾಗೂ ಲೇಖಕಿಗೆ ತಲಾ 30,000 (ಮೂವತ್ತು ಸಾವಿರ)ರೂ. ನಗದು, ಸ್ಮರಣಿಕೆ, ಹಾರ ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಗುತ್ತದೆ.…

Read More

ಮೈಸೂರು: ಮಂಗಳೂರಿನ ‘ಆಕೃತಿ ಆಶಯ’ ಪ್ರಕಾಶನ 2022ರಲ್ಲಿ ಪ್ರಕಟಿಸಿದ ಲೇಖಕಿ ಬಿ.ಎಂ.ರೋಹಿಣಿ ಅವರ ‘ವೇಶ್ಯಾವಾಟಿಕೆಯ ಕಥೆ-ವ್ಯಥೆ’ ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸ್ಥಾಪಿಸಿರುವ ಈ ಪ್ರಶಸ್ತಿಗೆ 2019 – 2022 ರ ಅವಧಿಯಲ್ಲಿ ಮಹಿಳೆಯರಿಂದ ಪ್ರಕಟವಾದ ‘ವಿಮರ್ಶೆ ಮತ್ತು ಸಂಶೋಧನಾ ಕೃತಿಗಳನ್ನು’ ಆಹ್ವಾನಿಸಲಾಗಿದ್ದು, 46 ಲೇಖಕಿಯರು ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಎಲ್ಲ ಕೃತಿಗಳನ್ನು ಅವಲೋಕಿಸಿದ ಡಾ. ಎಂ.ಉಷಾ, ಡಾ.ಸೆಲ್ವಕುಮಾರಿ ಮತ್ತು ಡಾ.ಆರ್.ಸುನಂದಮ್ಮ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸಂಶೋಧನೆಯ ವಸ್ತು, ವ್ಯಾಪ್ತಿ, ವಿಷಯ ಮತ್ತು ಒಳನೋಟಗಳನ್ನು ಪರಿಗಣಿಸಿ ರೋಹಿಣಿಯವರ ಕೃತಿಯನ್ನು ಆಯ್ಕೆ ಮಾಡಿದೆ. ಸಾಹಿತ್ಯ ಪ್ರಶಸ್ತಿಯು 25,000 ರೂ. ನಗದು ಬಹುಮಾನ, ಫಲಕವನ್ನು ಒಳಗೊಂಡಿದ್ದು, ಜೂನ್ 1ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ರೋಹಿಣಿ ಪರಿಚಯ ಹೊಸ ವಿಚಾರ, ಆಲೋಚನೆಗಳಿಗೆ ಸದಾ ತೆರೆದುಕೊಳ್ಳುವ…

Read More

ಬೆಂಗಳೂರು : ಕಳೆದ 55 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದು, ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದಿರುವ ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಕಾಲೇಜು ಹೊಸ ಶೈಕ್ಷಣಿಕ ವರ್ಷದ ಪತ್ರಿಕೋಧ್ಯಮದ ತರಗತಿಗಳನ್ನು ಆರಂಭಿಸುತ್ತಿದೆ. ಜುಲೈ2023ರಿಂದ ಆರಂಭವಾಗಲಿರುವ ಒಂದು ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮೋದ ಪ್ರವೇಶಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವು ಹಲವು ಸಾಧಕರು ಇಲ್ಲಿ ವಿಶೇಷ ತರಬೇತಿ ನೀಡುತ್ತಾರೆ. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಕಾರ್ಪೋರೇಟ್ ಜರ್ನಲಿಸಂ ಮೂರೂ ಕ್ಷೇತ್ರದಲ್ಲಿ ಇಲ್ಲಿ ವಿಶೇಷ ತರಬೇತಿ ನೀಡಲಿದ್ದು ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸ ಬಹುದಾಗಿದೆ. ಪ್ರವೇಶಕ್ಕೆ ಮತ್ತು ಇತರ ವಿವರಗಳಿಗೆ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೂ ಭಾರತೀಯ ವಿದ್ಯಾ ಭವನದ ಕಚೇರಿಯನ್ನು ಸಂಪರ್ಕಿಸ ಬಹುದು. ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ: 9538181140

Read More

ಮೈಸೂರು: ಮೈಸೂರಿನ ರಂಗಾಯಣ ವತಿಯಿಂದ ರಂಗ ಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲಮೊ ಕೋರ್ಸ್ ನ 2023-24 ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು  ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಜೂನ್ 5 ಕೊನೇ ದಿನವಾಗಿದೆ. ರಂಗ ತರಬೇತಿ  ಕೋರ್ಸ್ ಗೆ ಸೇರ ಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಟ ದ್ವಿತೀಯ   ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷ ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ  ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮತ್ತು ಮಾಹೆಯಾನ 5 ಸಾವಿರ ರೂಪಾಯಿಗಳ ವಿದ್ಯಾರ್ಥಿವೇತನ ಪಾವತಿಸಲಾಗುವುದು. ಹೆಚ್ಚಿನ ವಿವರಕ್ಕಾಗಿ  ದೂ: 0821-2512639, 9448938661, 9148827720 ಸಂಪರ್ಕಿಸಬಹುದು ಎಂದು ರಂಗಾಯಣದ ಉಪನಿರ್ದೇಶಕರು ತಿಳಿಸಿದ್ದಾರೆ.

Read More