Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಜರ್ನಿ ಥೇಟರ್ ಗ್ರೂಪ್ (ರಿ.) ಮತ್ತು ಮಾಂಡ್ ಸೊಭಾಣ್ ಕಲಾಂಗಣ್ ಶಕ್ತಿನಗರ ಇವುಗಳ ಆಶ್ರಯದಲ್ಲಿ ‘ಕ್ರಾಸ್ ಫೇಡ್’ ಮೂರು ದಿವಸಗಳ ಬೆಳಕಿನ ವಿನ್ಯಾಸದ ಕಾರ್ಯಾಗಾರವನ್ನು ದಿನಾಂಕ 25-06-2024ರಿಂದ 27-06-2024ರವರೆಗೆ ಮಂಗಳೂರಿನ ಶಕ್ತಿನಗರದ ಕಲಾಂಗಣ್ ಇಲ್ಲಿ ಆಯೋಜಿಸಲಾಗಿದೆ. ರಂಗಾಯಣದ ಕೃಷ್ಣಕುಮಾರ್ ನಾರ್ಣಕಜೆ ಮತ್ತು ನೀನಾಸಂನ ಮಧುಸೂದನ್ ಇವರುಗಳು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9380412518 ಸಂಪರ್ಕಿಸಿರಿ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ 133ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 06-06-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಉತ್ತಮ ಆಡಳಿತಗಾರರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದರು, ಜೀವನ ಪತ್ರಿಕೆಯನ್ನು ನಡೆಸಿದರು. ಬರಹಗಾರರಿಗೆ ಬೆಂಬಲವಾಗಿ, ಪುಸ್ತಕ ಪ್ರಕಾಶನಕ್ಕೆ ಸಹಾಯ ಮಾಡಿದ್ದರಿಂದ ಕನ್ನಡ ಸಾಹಿತ್ಯ ಬಹುಮುಖಿಯಾಗಿ ಬೆಳೆಯುವುದು ಸಾಧ್ಯವಾಯಿತು. ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಬೇಕು ಎಂದು ಸೂಚಿಸಿದವರಲ್ಲಿ ಮಾಸ್ತಿಯವರೂ ಪ್ರಮುಖರು. 1943ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಮಾಸ್ತಿಯವರ ಮುಖ್ಯವಾದ ಕೊಡುಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಕೇಂದ್ರೀಕರಣ. ಅವರ ಕಾಲದಲ್ಲಿ ಸದಸ್ಯರ ಸಂಖ್ಯೆ 2,500ಕ್ಕೆ ಏರಿತು. ಮಹಿಳಾ ಶಾಖೆ ಕೂಡ ಆರಂಭವಾಯಿತು. ‘ಕನ್ನಡ ಸರಸ್ವತಿ ಹಳ್ಳಿಗೆ ಬಂದಳು’ ಎನ್ನುವ ಯೋಜನೆಯಡಿ ಹಳ್ಳಿ-ಹಳ್ಳಿಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆದವು. ಮಾಸ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಕಲಾಪಗಳಿಗೆ ಎಷ್ಟೇ ದೂರ ಪ್ರಯಾಣ ಮಾಡಿದರೂ…
ಉಡುಪಿ : ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಗಳ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗ ಅವರ ನೆನಪಿನಲ್ಲಿ ಕೊಡುವ 15ನೇ ವರ್ಷದ ‘ಕಾದಂಬರಿ ಪ್ರಶಸ್ತಿ’ಗೆ 2023ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ ಹಾಗೂ ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ, ‘ಶ್ರೀ’ ಚಿತ್ರಪಾಡಿ, ಅಂಚೆ ಸಾಲಿಗ್ರಾಮ, ಉಡುಪಿ ಜಿಲ್ಲೆ – 575225 ವಿಳಾಸಕ್ಕೆ ದಿನಾಂಕ 30-08-2024ರ ಒಳಗೆ ತಲುಪುವಂತೆ ಕಳುಹಿಸಿಕೊಡಬಹುದು. ನವೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿರುವ ಈ ಪ್ರಶಸ್ತಿಯು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ರೂ.10 ಸಾವಿರ ನಗದನ್ನು ಒಳಗೊಂಡಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಭಾಸ್ಕರಾಚಾರ್ಯ ತಿಳಿಸಿದ್ದಾರೆ.
ಉಡುಪಿ : ಝೇಂಕಾರ ತಂಡದ 10ನೇ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ‘ನಾದ ಝೇಂಕಾರ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 09-06-2024ರಂದು ಸಂಜೆ 7-00 ಗಂಟೆಗೆ ಉಡುಪಿಯ ಟೌನ್ ಹಾಲ್ ಇಲ್ಲಿ ಆಯೋಜಿಸಲಾಗಿದೆ. ಕುಮಾರಿ ಸೂರ್ಯಗಾಯತ್ರಿ ಇವರು ಹಾಡುಗಾರಿಕೆಗೆ ಮೃದಂಗದಲ್ಲಿ ವಿದ್ವಾನ್ ಪಿ.ವಿ. ಅನಿಲ್ ಕುಮಾರ್, ವಯೋಲಿನ್ ವಿದ್ವಾನ್ ಗಣರಾಜ ಕಾರ್ಲೆ, ತಬಲಾದಲ್ಲಿ ವಿದ್ವಾನ್ ಪ್ರಶಾಂತ್ ಶಂಕರ್, ಕೀಬೋರ್ಡಿನಲ್ಲಿ ವಿದ್ವಾನ್ ವಿನೀಶ್ ಕೆ.ಪಿ. ಹಾಗೂ ತಾಳ ವಾದ್ಯದಲ್ಲಿ ವಿದ್ವಾನ್ ಸಿಲೇಶ್ ಮಾರಾರ್ ಇವರುಗಳು ಸಹಕರಿಸಲಿದ್ದಾರೆ.
ಕವಿ ಕಯ್ಯಾರರ ಒಂದು ಕವಿತೆಯ ಪಾಠವನ್ನು ಅವರಿಂದಲೇ ಹೇಳಿಸಿಕೊಳ್ಳುವ ಭಾಗ್ಯ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಅವರ ವಿದ್ಯಾರ್ಥಿನಿಯಾಗಿದ್ದ ನನಗೆ ದೊರೆತಿತ್ತು. ಮಹಾಭಾರತದ ಕರ್ಣನ ಪಾತ್ರವನ್ನು ಕೇಂದ್ರೀಕರಿಸಿದ ಆ ರಚನೆಯು ಕಯ್ಯಾರರ ‘ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು’ ಎಂಬ ಶೀರ್ಷಿಕೆಯ ಸಣ್ಣಕಾವ್ಯದ ಒಂದು ಭಾಗವಾಗಿತ್ತು. ಒಂಬತ್ತನೇ ತರಗತಿಯಲ್ಲಿ ನಮಗೆ ಅದು ಪಠ್ಯವಾಗಿತ್ತು. ಈ ಪಠ್ಯಭಾಗವು ಕರ್ಣನ ಬದುಕಿನ ಒಂದು ನಿರ್ಣಾಯಕ ಪ್ರಸಂಗದ ನಿರೂಪಣೆಯಾಗಿತ್ತು. ಕರ್ಣನ ಭೇಟಿಗಾಗಿ ಬಂದ ಕುಂತಿ, ತಾಯಿ ಮಗನ ನಡುವೆ ನಡೆದ ಹೃದಯಸ್ಪರ್ಶಿ ಸಂಭಾಷಣೆ, ಆಕೆಯ ಕೋರಿಕೆಯಂತೆ ವರವನ್ನು ನೀಡುವ ಕರ್ಣ-ಒಟ್ಟಿನಲ್ಲಿ ಕರುಣರಸ ಮಡುಗಟ್ಟಿದ ಸನ್ನಿವೇಶ. ಕರ್ಣನ ಬದುಕಿನ ದುರಂತ ಎಂಥವರ ಮನಸ್ಸನ್ನೂ ಕಲಕಿಬಿಡುವಂಥದ್ದು. ಕಂಚಿನ ಕಂಠದ ನಮ್ಮ ಗುರುಗಳು ಆ ದುರಂತದ ಎಳೆಯನ್ನು ಕವಿ ಕಲ್ಪನೆಯಿಂದ ಅನುಭವಿಸಿ ಬರೆದರು. ಪಾಠ ಮಾಡುವಾಗ ಮತ್ತೆ ಅದು ಮರುಹುಟ್ಟು ಪಡೆದು ರಸಸ್ಯಂದಿಯಾಗಿ ನಮ್ಮ ಎಳೆಯ ಕಿವಿಗಳನ್ನು ಮುಟ್ಟುತ್ತಿದ್ದರೆ ಗುರುಗಳ ಕಪೋಲದಲ್ಲೂ ನಮ್ಮ ಕಣ್ಣಲ್ಲೂ ನೀರು. ಈಗ ಮತ್ತೆ ಐವತ್ತು ವರ್ಷಗಳ ಬಳಿಕ…
ಮಂಗಳೂರು : ಇತ್ತೀಚೆಗೆ ಅಗಲಿದ ಹಿರಿಯ ಕೊಂಕಣಿ ಸಾಹಿತಿ, ಸಂಘಟಕ ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷ ಸಿಕೇರಾಮ್, ಸುರತ್ಕಲ್ ಇವರಿಗೆ ನುಡಿನಮನ ಕಾರ್ಯಕ್ರಮವು ಅವರ 70ನೇ ಜನ್ಮದಿನವಾದ 05-06-2024ರ ಬುಧವಾರ ಸಂಜೆ ಮಂಗಳೂರಿನ ಬೆಂದೂರ್ ಮಿನಿ ಸಭಾಗೃಹದಲ್ಲಿ ನಡೆಯಿತು. ಸಿಕೇರಾಮ್ ಅವರ ಅತ್ಯಂತ ಕಿರಿಯ ಅಭಿಮಾನಿ ಪುಟಾಣಿ ಜೊಅನ್ ನೈರಾ ಮೊರಾಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಕೇರಾಮ್ ಸುರತ್ಕಲ್ ಕಾವ್ಯನಾಮದಿಂದಲೇ ಖ್ಯಾತರಾಗಿರುವ ರೊನಾಲ್ಡ್ ಜೋಸೆಫ್ ಸಿಕ್ವೇರಾ ಇವರ ಬದುಕಿನ ಬಗ್ಗೆ ಶ್ರೀಮತಿ ಎವ್ಲಾಲಿಯಾ ಡಿ ಸೊಜಾ ಮಾತನಾಡಿ ಅವರ ಅಪರೂಪದ, ಜನಾನುರಾಗಿ – ಜೀವನೋತ್ಸಾಹಿ ವ್ಯಕ್ತಿತ್ವದ ವಿಭಿನ್ನಮಜಲುಗಳನ್ನು ತೆರೆದಿಟ್ಟರು. ” ರೊನಾಲ್ಡ್ ಹನ್ನೆರಡು ಭಾಷೆಗಳನ್ನು ಬಲ್ಲವರಾಗಿದ್ದು, ಕೊಂಕಣಿ – ಕನ್ನಡ ಮಾತ್ರವಲ್ಲ ಹಿಂದೀ ಗೀತೆಗಳ ಬಗ್ಗೆಯೂ ಅವರಿಗೆ ಅಪಾರ ಜ್ಞಾನವಿತ್ತು. ವಿಲ್ಪಿ ರೆಬಿಂಬಸ್ ಹಾಗೂ ಮೊಹಮ್ಮದ್ ರಫೀ ಹಾಡುಗಳೆಲ್ಲವೂ ಅವರಿಗೆ ಕಂಠಪಾಠ ಇದ್ದವು. ಇಳಿವಯಸ್ಸಿನಲ್ಲೂ ತಬ್ಲಾ ತರಗತಿಗೆ ಹಾಜರಾಗುತ್ತಿದ್ದರು. ಅಮೆಚೂರ್ ರೇಡಿಯೊ ಕ್ಲಬ್ ಸದಸ್ಯರಾಗಿದ್ದ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ಪದವರ್ಣಗಳ ವಿಶಿಷ್ಟ ಪ್ರಸ್ತುತಿಯಾದ ‘ನೃತ್ಯಾಂತರಂಗ 111’ (ವರ್ಣಿಕ 2) ಕಾರ್ಯಕ್ರಮವನ್ನು ದಿನಾಂಕ 09-06-2024ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಅಕ್ಷತಾ ಕೆ. ಮತ್ತು ವಿದುಷಿ ಅಪೂರ್ವ ಗೌರಿ ದೇವಸ್ಯ ಇವರುಗಳು ನೃತ್ಯ ಪ್ರಸ್ತುತಿ ನೀಡಲಿದ್ದು, ಮಂಗಳೂರಿನ ಸಹಾಯಕ ಪ್ರೊಫೆಸರ್ ಆಗಿರುವ ಡಾ. ನಿರೀಕ್ಷಾ ಶೆಟ್ಟಿ ಇವರು ಭಾಗವಹಿಸಲಿರುವರು.
ಮಡಿಕೇರಿ : ಕೊಡವ ಮಕ್ಕಡ ಕೂಟದ ವತಿಯಿಂದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ ಅವರು ಬರೆದಿರುವ ‘ಕೊಯ್ತ ಮುತ್ತ್’ ಕೊಡವ ಪುಸ್ತಕ ಲೋಕಾರ್ಪಣಾ ಸಮಾರಂಭವು ದಿನಾಂಕ 06-06-2024ರಂದು ನಡೆಯಿತು. ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ 92ನೇ ಪುಸ್ತಕವಾಗಿ ಸಮಾಜ ಸೇವಕಿ ಬೈರೆಟ್ಟಿರ ಗಿರಿಜಾ ಅಯ್ಯಪ್ಪ ಪುಸ್ತಕ ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು. ಪುಸ್ತಕದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ ಮಾತನಾಡಿ “ ‘ಕೊಯ್ತ ಮುತ್ತ್’ ಪುಸ್ತಕದಲ್ಲಿ, ಸಮಾಜದಲ್ಲಿ ನಡೆಯುವಂತಹ ದೈನಂದಿನ ಹಲವು ವಿಷಯಗಳ ಕುರಿತು ತಮ್ಮ ಚಿಂತನೆಗಳನ್ನು ಕವನಗಳ ಮೂಲಕ ರಚಿಸಲಾಗಿದ್ದು, ಇದನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ತಾನು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಆಡು ಭಾಷೆಯಲ್ಲಿ ಪುಸ್ತಕ ಬರೆಯಬೇಕು ಎಂಬ ಕನಸು ಹೊಂದಿದ್ದೆ. ಈ ನಿಟ್ಟಿನಲ್ಲಿ ಕೊಡವ ಭಾಷೆಯಲ್ಲೆ ಕಥೆ, ಕವನ, ಚುಟುಕು ಬರೆಯಲಾರಂಭಿಸಿ, ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಕಾರದಿಂದ ಪುಸ್ತಕ ಬಿಡುಗಡೆಗೊಳಿಸಲಾಗಿದೆ. ಇದನ್ನು ಓದಿದವರು ತಮ್ಮ ಜೀವನದಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣುವರು ಎಂಬ ನಿರೀಕ್ಷೆ…
ಮಂಗಳೂರು : ಕಳೆದ ನಲ್ವತ್ತಮೂರು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ‘ಸೀತಾ ಕಲ್ಯಾಣ’ ಕೊಂಕಣಿ ಕಾಲಮಿತಿ ಯಕ್ಷಗಾನ ಪ್ರದರ್ಶನವು ದಿನಾಂಕ 31-05-2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಯಕ್ಷಗಾನದ ಸಾಧನೆಗಾಗಿ ಕಟೀಲು ಮೇಳದ ಕಲಾವಿದ ಗಣೇಶ್ ಪಾಲೆಚ್ಚಾರ್ ಇವರಿಗೆ ‘ಕೊಂಕಣಿ ಸಾಂಸ್ಕೃತಿಕ ರಾಯಭಾರಿ’ ಎಂಬ ಬಿರುದು ನೀಡಿ ಸಮ್ಮಾನಿಸಲಾಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಟಾಟಾ ಗ್ರೂಪ್ನ ನಿವೃತ್ತ ನಿರ್ದೇಶಕ ಸಿ.ಡಿ. ಕಾಮತ್ ಮಾತನಾಡಿ, “ಕೊಂಕಣಿ ಸಾಂಸ್ಕೃತಿಕ ರಂಗದ ಪ್ರಗತಿಗೆ ಕೊಂಕಣಿ ಸಾಂಸ್ಕೃತಿಕ ಸಂಘದ ಕೊಡುಗೆ ಅಪಾರವಾಗಿದೆ. 43 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಕೊಂಕಣಿ ಕ್ಷೇತ್ರಕ್ಕೆ ನಿರಂತರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ” ಎಂದರು. ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಆಡಳಿತಾಧಿಕಾರಿ ಬಾಚೋಡಿ ದೇವದಾಸ ಪೈ, ಮಂಗಳೂರು ಸಾಧನಾ ಬಳಗದ ಗೌರವಾಧ್ಯಕ್ಷ ನರಸಿಂಹ ಭಂಡಾರ್ಕಾರ್ ಶುಭಹಾರೈಸಿದರು. ಸಂಘದ ಕಾರ್ಯದರ್ಶಿ ಕೃಷ್ಣ ಕಾಮತ್, ಯಕ್ಷಗಾನ ಕಲಾವಿದ ಎಂ. ಶಾಂತರಾಮ ಕುಡ್ವ, ಯಕ್ಷ ಕಲಾವಿದ ಗಣೇಶಪುರ ಗಿರೀಶ್ ನಾವಡ…
ಯಕ್ಷಗಾನ – ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆಯಲ್ಲಿ ಪ್ರಜ್ವಲಿಸುತ್ತಿರುವ ಪ್ರತಿಭೆ ದಿವ್ಯಶ್ರೀ ಮನೋಜ್ ಪೂಜಾರಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಡೊಂಬಯ ಪೂಜಾರಿ ಹಾಗೂ ಇಂದಿರಾ ಇವರ ಮಗಳಾಗಿ 17.08.1994ರಂದು ಜನನ. M.Com, NET, K.SET ಇವರ ವಿದ್ಯಾಭ್ಯಾಸ. ತಂದೆ, ತಾಯಿ ಹಾಗೂ ಬಾಲ್ಯದಲ್ಲಿ ನೋಡುತ್ತಿದ್ದ ಟೆಂಟ್ ಆಟಗಳು ಇವರು ಯಕ್ಷಗಾನ ಕಲಿಯಲು ಪ್ರೇರಣೆ. ಭಾಸ್ಕರ ರೈ (ಹವ್ಯಾಸಿ ಕಲಾವಿದರು), ಡಾ.ಕೋಳ್ಯೂರು ರಾಮಚಂದ್ರ ರಾವ್, ಅರುಣ್ ಕುಮಾರ್ ಧರ್ಮಸ್ಥಳ ಇವರ ಯಕ್ಷಗಾನ ಗುರುಗಳು. ಗುರುಗಳು ಹಾಗೂ ಹಿರಿಯ ಕಲಾವಿದರಲ್ಲಿ ಚರ್ಚಿಸಿ, ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರೆದ ಕಾರಣದಿಂದಾಗಿ Google ಹಾಗೂ YouTube ನಲ್ಲಿ ಕೆಲವು ಮಾಹಿತಿಯನ್ನು ಪಡೆದುಕೊಂಡು ಹಾಗೂ ಕೆಲವು ಯಕ್ಷಗಾನ ಪ್ರಸಂಗಗಳ ಪುಸ್ತಕಗಳನ್ನು ಖರೀದಿಸಿ ಮಾಹಿತಿಯನ್ನು ಪಡೆದು ರಂಗಕ್ಕೆ ಹೋಗುವ…