Subscribe to Updates
Get the latest creative news from FooBar about art, design and business.
Author: roovari
ಉಡುಪಿ : ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 19-05-2024ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗುರುರಾಜ ಮಾರ್ಪಳ್ಳಿ “ನನ್ನ ಮನೆಯ ಪರಿಸ್ಥಿತಿ ಮತ್ತು ಕಲಾಸಕ್ತಿ ನಾನು ಸದಾ ಕಲೆಯಲ್ಲಿ ಕ್ರಿಯಾಶೀಲನಾಗಲು ಕಾರಣವಾಯಿತು. ನಾನು ಒಂದು ಕಡೆ ನೆಲೆ ನಿಲ್ಲದೆ ಕಲೆಗಾಗಿ ಅಲೆದಾಡಿದೆ. ಇದರಿಂದ ಹಲವು ಶ್ರೇಷ್ಠ ಕಲಾ ಸಾಧಕರ ಒಡನಾಟದ ಭಾಗ್ಯ ಲಭಿಸಿತು. ಹೊಸತನ್ನು ಅನ್ವೇಷಿಸುವ ನನ್ನ ಸ್ವಭಾವಕ್ಕೆ ಅವರೆಲ್ಲ ತಮ್ಮ ಅನುಭವ ಧಾರೆ ಎರೆದರು. ಕಲಾ ಕ್ಷೇತ್ರದ ಅನ್ಯಾನ್ಯ ಪ್ರಕಾರಗಳಲ್ಲಿ ಪ್ರಯೋಗ ನಡೆಸುತ್ತಾ ಸಾಗಿದೆ.” ಎಂದರು. ಪ್ರಶಸ್ತಿಯ ಪ್ರಾಯೋಜಕರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರೊ. ಎಂ. ಎಲ್. ಸಾಮಗರು ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಅಭ್ಯಾಗತರಾಗಿದ್ದ ಶ್ರೀ ಶ್ರೀಧರ ಡಿ. ಎಸ್. ಮಾರ್ಪಳ್ಳಿಯವರೊಂದಿಗಿನ ಕಲಾ ಸಂಬಂಧಿ ಒಡನಾಟವನ್ನು…
ಮೂಲ್ಕಿ : ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೂಲ್ಕಿ ಕೊಳಚಿಕಂಬಳ ಸಮುದ್ರ ಬದಿಯ ಮಂತ್ರ ಸರ್ಫ್ ಕ್ಲಬ್ ಆವರಣದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕಂಡ ಸಾಹಿತ್ಯ ಮತ್ತು ಕನ್ನಡ ನೋಟ ಕಾರ್ಯಕ್ರಮವು ದಿನಾಂಕ 19-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಉಪನ್ಯಾಸ’ ನೀಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ “ಕುವೆಂಪುರವರ ಹೊರತಾಗಿ ಇತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಊರುಗಳಲ್ಲಿ ಇರುವ ಸ್ಮಾರಕಗಳು ಇನ್ನಷ್ಟು ಅಭಿವೃದ್ಧಿ ಆಗಬೇಕಾಗಿದೆ. ಕೋಟದಲ್ಲಿ ಶಿವರಾಮ ಕಾರಂತರ ನೆನಪಿನಲ್ಲಿ ಸುಮಾರು ಆರು ಕೋಟಿ ರೂಪಾಯಿ ಖರ್ಚು ಮಾಡಿ, ಥೀಮ್ ಪಾರ್ಕ್ ನಿರ್ಮಿಸಿದ್ದು ಇದೇ ಉದ್ದೇಶದಿಂದ. ಇತರ ಸಾಹಿತಿಗಳ ನೆನಪಿನಲ್ಲಿ ಇದೇ ರೀತಿಯ ಸ್ಮಾರಕಗಳು, ಕೃತಿಗಳ ಪ್ರಕಟನೆ, ಸೂಕ್ತ ಗೌರವ ಕೊಡುವ ಕೆಲಸ ಆಗಬೇಕಾಗಿದೆ. ಕನ್ನಡದ ಹೋರಾಟದ ಬಗ್ಗೆ ಸಮಾಜ ಚಿಂತನೆ ಮಾಡಬೇಕಾಗಿದೆ. ಸಿದ್ದಲಿಂಗಯ್ಯ ಸಾಹಿತ್ಯದ ಮೂಲಕ ದಲಿತ ಚಳುವಳಿಯ ಶಕ್ತಿಯ ಬೆಳೆ ತೆಗೆಯುತ್ತಿದ್ದರು. ರೈತ ಚಳುವಳಿ ರುದ್ರಪ್ಪ ಅವರಂತಹವರ…
ಬಂಟ್ವಾಳ : ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ.ಕ. ಜಿಲ್ಲಾ ಬಂಟ್ವಾಳ ತಾಲೂಕು ಘಟಕದಿಂದ ಪತ್ತನಾಜೆ ಜಾನಪದ ಹಬ್ಬ ಆಚರಣೆಯ ಅಂಗವಾಗಿ ಏರ್ಪಡಿಸಲಾದ ಆಹಾರ ಮೇಳ, ವಸ್ತುಪ್ರದರ್ಶನ, ಕ್ರೀಡಾಕೂಟ, ಸಾಂಸ್ಕೃತಿಕ ಮೇಳವು ದಿನಾಂಕ 19-05-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಜೋಗತಿ ಮಂಜಮ್ಮ ಮಾತನಾಡಿ “ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಯಲ್ಲಿ ಹತ್ತನೆ ತರಗತಿವರೆಗೆ ಓದಿಸಿದರೆ ನಮ್ಮ ಭಾಷೆ, ಸಂಸ್ಕಾರ, ಸಂಸ್ಕೃತಿ ಉಳಿಯುತ್ತದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿದರೆ ಅವರಿಗೆ ಬೇರೆ ಕೋಚಿಂಗ್ ಅಗತ್ಯ ವಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಅವಕಾಶ ಮಾಡಿಕೊಡಬೇಕು. ಶಾಲಾ ಕಾಲೇಜುಗಳಲ್ಲಿ ಜಾನಪದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮೂಲ ಹಳ್ಳಿಯ ಸಂಸ್ಕೃತಿ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾನಪದ ಕಲೆಯ ಮೂಲಕ ಪದ್ಮಶ್ರೀ ಪ್ರಶಸ್ತಿ ಪಡೆದ ಮೇಲೆ ಎಲ್ಲರೂ ಗೌರವಿಸಿದ್ದಾರೆ. ತೃತೀಯ ಲಿಂಗಿಗಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಾಭಿಮಾನದಿಂದ ಬದುಕಲು ಅವಕಾಶ…
ಮಂಗಳೂರು : ನಾಟ್ಯಾಲಯ ಉರ್ವ (ರಿ.) ಮಂಗಳೂರು ಇದರ ವತಿಯಿಂದ ಕರ್ನಾಟಕ ಸರಕಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಭರತನಾಟ್ಯ ವಿದ್ವತ್ ಪಠ್ಯ ಪದ್ಧತಿಯಲ್ಲಿ ಪ್ರಧಾನವಾಗಿ ಬರುವ ನಾಯಕಾ – ನಾಯಿಕಾ ಭಾವ ಹಾಗೂ ರಸಭಾವ ವಿಷಯದ ಎರಡು ದಿನಗಳ ಕಾರ್ಯಾಗಾರವು ನಾಟ್ಯಾಲಯ ಸಭಾಂಗಣದಲ್ಲಿ ದಿನಾಂಕ 18-05-2024 ಮತ್ತು 19-05-2024ರಂದು ನಡೆಯಿತು. ಈ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕಿಯಾಗಿರುವ ಹುಬ್ಬಳ್ಳಿಯ ಡಾ. ಸಹನಾ ಪ್ರದೀಪ ಭಟ್ ಇವರು ಉದ್ಘಾಟಿಸಿದರು. ಸಂಯೋಜಕಿ ಕಲಾಶ್ರೀ ಗುರು ವಿದುಷಿ ಕಮಲಾ ಭಟ್, ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ವಿನಯ ರಾವ್, ಸುನೀತಾ ಉಪಾಧ್ಯಾಯ ಬಪ್ಪನಾಡು, ಕಲಾ ಸಂಘಟಕ ಶ್ರೀಧರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ನಗರದ ಸುಮಾರು 35 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು.
ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ‘ಸ್ವರ ಸಂಧ್ಯಾ’ ಶಾಸ್ತ್ರೀಯ ಹಿಂದೂಸ್ತಾನೀ ಸಂಗೀತ ಜುಗಲ್ ಬಂದಿ ಕಾರ್ಯಕ್ರಮವು ದಿನಾಂಕ 19-05-2024ರ ಭಾನುವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಫಾ. ಎಲ್. ಎಫ್. ರಸ್ಕಿನಾ ಸಭಾಂಗಣದಲ್ಲಿ ನಡೆಯಿತು. ಪೂರ್ವಾರ್ಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಹೊಸದಿಲ್ಲಿಯ ಖ್ಯಾತ ಪಿಟೀಲು ವಾದಕ ಪಂಡಿತ್ ಸಂತೋಷ್ ಕುಮಾರ್ ನಹರ್ ಅವರಿಂದ ವಯೋಲಿನ್ ಕಾರ್ಯಕ್ರಮ ನಡೆದರೆ, ಉತ್ತರಾರ್ಧದಲ್ಲಿ ಶಿವಮೊಗ್ಗದ ನೌಶಾದ್ ಹರ್ಲಾಪುರ್ ಮತ್ತು ನಿಶಾದ್ ಹರ್ಲಾಪುರ್ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಗಾಯನ ಕಾರ್ಯಕ್ರಮ ನಡೆಯಿತು. ಇವರಿಗೆ ಹಿಮ್ಮೇಳದಲ್ಲಿ ರಾಜೇಂದ್ರ ನಾಕೋಡ್, ಶ್ರೀಧರ್ ಭಟ್, ಗುರುರಾಜ್ ಅಡುಕಳ ಸಾಥ್ ನೀಡಿದರು.
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಪಾಕ್ಷಿಕ ತಾಳಮದ್ದಳೆ ಕಾರ್ಯಕ್ರಮದಲ್ಲಿ ‘ಭರತಾಗಮನ’ ಎಂಬ ಪ್ರಸಂಗದ ತಾಳಮದ್ದಳೆಯು ದಿನಾಂಕ 18-05-2024ರಂದು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಮತ್ತು ಮಾಸ್ಟರ್ ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಹರಿಣಾಕ್ಷಿ ಜೆ. ಶೆಟ್ಟಿ), ಭರತ (ಶುಭಾ ಜೆ.ಸಿ. ಅಡಿಗ), ವಸಿಷ್ಠ (ಮನೋರಮಾ ಜಿ. ಭಟ್), ಲಕ್ಷ್ಮಣ (ಭಾರತೀ ರೈ ಅರಿಯಡ್ಕ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ಶುಭಾ ಅಡಿಗ ಪ್ರಾಯೋಜಿಸಿದ್ದರು.
ಉಪ್ಪಳ : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕವಾದ ‘ಸ್ವರ ಚಿನ್ನಾರಿ’ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಕಾಸರಗೋಡು ಕನ್ನಡ ಹಬ್ಬ’ದ ಪ್ರಯುಕ್ತ ಉಪ್ಪಳ ಐಲದ ತರುಣ ಕಲಾ ವೃಂದ (ರಿ.) ಇವರಿಂದ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮ ‘ಕನ್ನಡ ಉಸಿರು’ ದಿನಾಂಕ 25-05-2024ರಂದು ಸಂಜೆ 5-00 ಗಂಟೆಗೆ ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಐಲ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಕೋಡಿಬೈಲು ನಾರಾಯಣ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ಖ್ಯಾತ ನಟರು ಮತ್ತು ಸಾಹಿತಿಯಾದ ಶ್ರೀ ಶಶಿರಾಜ್ ಕಾವೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಸಂಗೀತ ಗುರುಗಳಾದ ಶ್ರೀಮತಿ ಸುನೀತಾ ಬೈಪಾಡಿತ್ತಾಯ ಇವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಯಾಗಿ ಖ್ಯಾತ ನಟರು ಗಾಯಕರಾದ ಶ್ರೀ ಮೈಮ್ ರಾಮದಾಸ್ ಇವರು ಭಾಗವಹಿಸಲಿರುವರು ಎಂದು ರಂಗಚಿನ್ನಾರಿಯ ನಿರ್ದೇಶಕರಾದ ಶ್ರೀ ಕಾಸರಗೋಡು ಚಿನ್ನಾ ಇವರು ತಿಳಿಸಿರುತ್ತಾರೆ.
ತಾವರಗೇರಾ: ಮೇ ಸಾಹಿತ್ಯ ಮೇಳದ ಅಂಗವಾಗಿ ಆಯೋಜಿಸಿದ ಚಿತ್ರಕಲಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 18-05-2024 ರಂದು ಕೊಪ್ಪಳದ ತಾವರಗೇರಾ ಬುದ್ಧ ವಿಹಾರದ ಮಾನವ ಬಂಧುತ್ವ ವೇದಿಕೆಯ ಬುದ್ಧ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ “ಸಾಹಿತ್ಯ ಜನರ ನಾಡಿ ಮಿಡಿತವಾಗಬೇಕು. ಸಾಹಿತ್ಯ ಖಡ್ಗವಾಗಬೇಕು. ಸಂವಿಧಾನ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಸಂವಿಧಾನದ ಮೂಲಕ ನ್ಯಾಯದ ಧ್ವನಿಯನ್ನು ಎತ್ತಿ ಹಿಡಿದಿದೆ. ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದ ಸಂವಿಧಾನವನ್ನು ಬದಲಾಯಿಸುವ ಹಂತದಲ್ಲಿ ಇರುವುದು ವಿಪರ್ಯಾಸ. ಇಂತಹ ವಿಷಯಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಆದ್ದರಿಂದ ಮೇ 18, 19,20 ಮೂರು ದಿನ ಶಿಬಿರ ಏರ್ಪಡಿಸಲಾಗಿದೆ.” ಎಂದು ಹೇಳಿದರು. ಶಿಬಿರವನ್ನು ಉದ್ಘಾಟಿಸಿದ ಹಿರಿಯ ಚಿತ್ರ ಕಲಾವಿದ ಬಿ. ಎಲ್. ಚವ್ಹಾಣ್ ಮಾತನಾಡಿ “ಎಲ್ಲ ಸಮುದಾಯವು ಒಂದಾಗಬೇಕು ಎನ್ನುವುದು ನಮ್ಮ ಕಲ್ಪನೆ. ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಗಳನ್ನು ಶಾಲಾ ಕಾಲೇಜುಗಳಲ್ಲಿ ನಮ್ಮ ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ. ಲಲಿತ ಕಲೆಯಿಂದ…
ರಾಯಚೂರು : ಸಮುದಾಯ ರಾಯಚೂರು ಪ್ರಸ್ತುತ ಪಡಿಸುವ ನೂತನ ನಾಟಕ ‘ರಕ್ತ ವಿಲಾಪ’ ಇದರ ಪ್ರಥಮ ಪ್ರದರ್ಶನವು ದಿನಾಂಕ 19-05-2024ರ ಭಾನುವಾರದಂದು ರಾಯಚೂರಿನ ಸಿದ್ದರಾಮ ಜಂಬಲದನ್ನಿ ರಂಗಮಂದಿರದಲ್ಲಿ ಸಂಜೆ ಘಂಟೆ 6.30 ಕ್ಕೆ ಪ್ರದರ್ಶನಗೊಳ್ಳಲಿದೆ. ಡಾ. ವಿಕ್ರಮ ವಿಸಾಜಿ ವಿರಚಿತ ಈ ನಾಟಕದ ನಿರ್ದೇಶನವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ ಮಾಡಿದ್ದು, ಸಹ ನಿರ್ದೇಶನದಲ್ಲಿ ನಿರ್ಮಲಾ ವೇಣುಗೋಪಾಲ್ ಸಹಕರಿಸಿದ್ದಾರೆ. ಇನ್ಸಾಫ್ ಹೊಸಪೇಟೆ ನಾಟಕಕ್ಕೆ ಸಂಗೀತ ನೀಡಲಿದ್ದು, ಲಕ್ಷ್ಮಣ್ ಮಂಡಲಗೇರ ಬೆಳಕಿನ ವಿನ್ಯಾಸ ಮಾಡಲಿದ್ದಾರೆ. ವೆಂಕಟ ನಾರಸಿಂಹಲು ಕಲಾವಿದರಿಗೆ ಪ್ರಸಾದನ ಮಾಡಲಿದ್ದು, ಎಂ. ಸುರೇಶ್ ಚಿಕ್ಕಸೂಗೂರು ಹಾಗೂ ಎನ್. ನಾಗರಾಜ್ ಸಿರಿವಾರ ರಂಜಸಜ್ಜಿಕೆ ನಿರ್ವಹಿಸಲಿದ್ದಾರೆ. ‘ರಕ್ತ ವಿಲಾಪ’ : ಕಾಲಗರ್ಭದಿಂದ ಸತ್ಯವನ್ನು ಹೆಕ್ಕಿ ತೆಗೆಯಲು ಹಂಬಲಿಸುವ ಸಂಶೋಧಕನ ತಳಮಳಗಳನ್ನು ‘’ರಕ್ತ ವಿಲಾಪ ನಾಟಕ ಅನನ್ಯವಾಗಿ ಅಭಿವ್ಯಕ್ತಿಸಿದೆ. ಸತ್ಯವೆಂಬ ಅಗ್ನಿದಿವ್ಯವನ್ನು ಹಿಡಿಯಲು ಯತ್ನಿಸಿ ಮೈ ಸುಟ್ಟುಕೊಂಡ ಜ್ಞಾನಿಗಳ ಪರಂಪರೆಯೇ ಲೋಕದಲ್ಲಿದೆ. ಲೋಕವು ತಾನು ಕಟ್ಟಿಕೊಂಡು ಬಂದ ನಂಬಿಕೆಗಳ ಗುಳ್ಳೆಯೊಡೆಯುವುದನ್ನು ಸಹಿಸದು. ಸತ್ಯದ ಸೂಜಿಮೊನೆ ಸುಮ್ಮನಿರುವುದನ್ನು ಅರಿಯದು.…
ಬಂಟ್ವಾಳ : ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 19-05-2024ರಂದು ಬೆಳಗ್ಗೆ 8.30ರಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ‘ಪತ್ತನಾಜೆ’ ಜಾನಪದ ಹಬ್ಬ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಡಾ. ಮಂಜಮ್ಮ ಜೋಗತಿ ಉದ್ಘಾಟಿಸಲಿದ್ದಾರೆ. ಪತ್ತನಾಜೆಯ ವಿಶೇಷತೆಯನ್ನು ಜನಮಾನಸಕ್ಕೆ ತಿಳಿಯಪಡಿಸುವ ಜತೆ ತುಳುನಾಡಿನ ಜನಪದ ಆಹಾರ ಪದ್ಧತಿಯನ್ನು ಪರಿಚಯಿಸುವ ದೃಷ್ಟಿಯಿಂದ ‘ಜಾನಪದ ಆಹಾರ ಮೇಳ’, ಜಾನಪದ ಕಲೆಗಳನ್ನು ಪ್ರತಿಬಿಂಬಿಸುವ ಉದ್ದೇಶದಿಂದ ‘ಸಾಂಸ್ಕೃತಿಕ ಮೇಳ’, ತುಳುನಾಡಿನ ಆಟಕೂಟಗಳ ‘ಜಾನಪದ ಕ್ರೀಡಾ ಕೂಟ’ ಹಾಗೂ ಜನಪದರು ಬಳಸುತ್ತಿದ್ದ ಭೌತಿಕ ಪರಿಕರಗಳ ಪ್ರದರ್ಶನ ‘ಜಾನಪದ ವಸ್ತು ಪ್ರದರ್ಶನ’ವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಉಜಿರೆ ಎಸ್.ಡಿ.ಎಂ.ನ ಕನ್ನಡ ಸಹಪ್ರಾಧ್ಯಾಪಕಿ ಡಾ. ದಿವಾ ಕೊಕ್ಕಡ ಪತ್ತನಾಜೆ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಮಾಣೂರು ಅಧ್ಯಕ್ಷತೆ ವಹಿಸಲಿದ್ದು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ…