Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2023ನೇ ಸಾಲಿನ ʻನಾಗಡಿಕೆರೆ- ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿಗೆʼ ಹಿರಿಯ ಪತ್ರಕರ್ತರಾದ ಶ್ರೀ ಸುದರ್ಶನ ಚನ್ನಂಗಿಹಳ್ಳಿ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10,000(ಹತ್ತು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸ್ವಾತಂತ್ರ್ಯಹೋರಾಟಗಾರಾದ ಶ್ರೀ ನಾಗಡಿಕೆರೆ ಕಿಟ್ಟಪ್ಪಗೌಡ ಅವರು ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ ರಾಜ್ಯಮಟ್ಟದ ಈ ಪುರಸ್ಕಾರವನ್ನು ಕನ್ನಡ ಪತ್ರಿಕೋದ್ಯಮದಲ್ಲಿ ನಿರ್ಭಿತವಾಗಿ ಯಾವುದೇ ಆಮಿಷಗಳಿಗೂ ಒಳಗಾಗದೆ ಪ್ರಾಮಾಣಿಕವಾಗಿ ವಿಮರ್ಶಿಸಿ, ಸರ್ಕಾರದ, ರಾಜಕಾರಣಿಗಳ, ಸರಕಾರಿ ನೌಕರರ. ಸಮಾಜದ ನ್ಯೂನತೆಗಳನ್ನು ಎತ್ತಿ ಹಿಡಿದು ತೋರಿಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡಬೇಕು ಎನ್ನುವುದು ದತ್ತಿ ದಾನಿಗಳ ಆಶಯವಾಗಿದೆ. ಈವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 13 ಜನರಿಗೆ ಈ ಪ್ರಶಸ್ತಿʼಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರದಾನ ಮಾಡಲಾಗಿದ್ದು ಈ ಬಾರಿ 2023ನೇ ಸಾಲಿನ ಪ್ರಶಸ್ತಿಯು 14ನೇ ಪ್ರಶಸ್ತಿಯಾಗಿದೆ. ಪ್ರಸ್ತುತ ಕನ್ನಡದ ಪ್ರಮುಖ ದಿನಪತ್ರಿಕೆಯಾಗಿರುವ…
ಮಂಗಳೂರು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳ ‘ಸರಯೂ ಬಾಲ ಯಕ್ಷ ವೃಂದ ಕೋಡಿಕಲ್’ ಇವರು ಕದ್ರಿ ದೇವಸ್ಥಾನ ಸಹಕಾರದೊಂದಿಗೆ ನಡೆಯುವ ‘ಸರಯೂ ಸಪ್ತಾಹ -2023’ ದಿನಾಂಕ 25-05-2023 ರಿಂದ 31-05-2023ರವರೆಗೆ ಪ್ರತಿ ದಿನ ಸಂಜೆ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ. ಈ ಸಪ್ತಾಹ ಕಾರ್ಯಕ್ರಮದಲ್ಲಿ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆಗಳು ನಡೆಯಲಿದ್ದು, ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಕ್ಷೇತ್ರ ಕದ್ರಿಯ ವೇ.ಮೂ. ಶ್ರೀ ನರಸಿಂಹ ತಂತ್ರಿಗಳು ನೆರವೇರಿಸಲಿರುವರು. ಯಕ್ಷಗಾನ ಬಯಲಾಟಗಳು ಪ್ರತೀದಿನ ಸಂಜೆ 5.30ರಿಂದ 25-05-2023 ಗುರುವಾರ : ವಿಜಯದ್ವಯ 26-05-2023 ಶುಕ್ರವಾರ : ಓಂ ನಮೋ ಭಗವತೇ ವಾಸುದೇವಾಯ, ಓಂ ನಮಃ ಶಿವಾಯ 27-05-2023 ಶನಿವಾರ : ದೇವಿ ಮಹಾತ್ಮೆ (ಅಪರಾಹ್ನ 2:30ರಿಂದ) 28-05-2023 ರವಿವಾರ : ವೀರ ವೀರೇಶ (ಕಥೆ : ಉದನೇಶ್ವರ ಪ್ರಸಾದ್ ಮೂಲಡ್ಕ ಪ್ರಸಂಗ ರಚನೆ : ರವಿ ಅಲೆವೂರಾಯ…
ಬೆಳಗಾವಿ: ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 22-05-2023 ರಂದು ಪ್ರದರ್ಶನವಾದ ಹಾಸ್ಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ತುಂಬಿದ ರಂಗಮಂದಿರದಲ್ಲಿಯ ಪ್ರೇಕ್ಷಕರಿಗೆ 90 ನಿಮಿಷಗಳು ಸತತವಾಗಿ ನಗಿಸುತ್ತಾ ಹಾಸ್ಯದ ಔತಣ ಕೊಡುವಲ್ಲಿ ಯಶಸ್ವಿಯಾಯಿತು. ನಾಟಕದ ನಂತರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ ಬೆಳಗಾವಿಯವರು ನಾಟಕದ ನಿರ್ದೇಶಕ ಡಾ.ಅರವಿಂದ ಕುಲಕರ್ಣಿ ಮತ್ತು ಶ್ರೀಮತಿ ಪ್ರತಿಭಾ ಕಳ್ಳಿಮಠ ಇವರನ್ನು ಸನ್ಮಾನಿಸಿ ನಾಟಕದ ಬಗ್ಗೆ ತುಂಬಾ ಅಭಿಮಾನದ ಮಾತುಗಳನ್ನು ಆಡಿದರು. “ತಮ್ಮ ಜೀವನದಲ್ಲಿ ಈ ರೀತಿಯ ಸತತವಾಗಿ ನಗಿಸುವ ಅತ್ಯುತ್ತಮವಾಗಿ ಅಭಿನಯಿಸಿದ ಮತ್ತು ನಿರ್ದೇಶನದ ನಾಟಕವನ್ನು ಪ್ರಥಮ ಬಾರಿ ನೋಡಿದ್ದೇನೆ” ಎಂದು ಹೇಳಿದರು. ಈ ನಾಟಕವನ್ನು ಬೇರೆ ಕಡೆಗೆ ಸಹ ಪ್ರದರ್ಶನಕ್ಕೆ ಅನುವು ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಜೈಶೀಲಾ ಬ್ಯಾಕೋಡಿ ಮತ್ತು ಶ್ರೀಮತಿ ಶೈಲಜಾ ಭಿಂಗೆ ಅವರೂ ಸಹ ನಾಟಕದ ಉತ್ತಮ ಪ್ರದರ್ಶನ ಹಾಗೂ ಅಭಿನಯದ ಕುರಿತು ಮೆಚ್ಚಗೆಯ ಮಾತುಗಳನ್ನಾಡಿದರು. ಶೈಲಜಾ ಭಿಂಗೆ ಅವರು…
ಉಡುಪಿ: ತುಳು ಕೂಟ ಉಡುಪಿ (ರಿ.) ಈ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ 28ನೇ ವರ್ಷದ ‘ಪಣಿಯಾಡಿ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು 28 ಮೇ 2023ರಂದು ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್ ಟಾಪ್ ಸಭಾಂಗಣದಲ್ಲಿ ನಡೆಸಲಿದೆ. ತುಳು ಕೂಟ ಉಡುಪಿಯ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಉಡುಪಿ ಕ್ಷೇತ್ರದ ಶಾಸಕರಾದ ಶ್ರೀ ಯಶಪಾಲ್ ಸುವರ್ಣ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನ ಚಿತ್ರನಟಿ ಶ್ರೀಮತಿ ಹರಿಣಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಉದ್ಯಮಿ ಹಾಗೂ ಸಮಾಜ ಸೇವಕರಾದ ಶ್ರೀ ಯು. ವಿಶ್ವನಾಥ ಶೆಣೈ ಇವರುಗಳು ಪಾಲ್ಗೊಳ್ಳಲಿದ್ದಾರೆ. ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ದಿ.ಎಸ್.ಯು.ಪಣಿಯಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಗುರುತಿಸಿಕೊಂಡವರು. ಇವರ ಸವಿನೆನಪಿಗಾಗಿ ಉಡುಪಿ ತುಳು ಕೂಟವು ಕಳೆದ 28 ವರ್ಷಗಳಿಂದ…
ಮಂಗಳೂರು : ಪಕ್ಕಲಡ್ಕ ಯುವಕ ಮಂಡಲ (ರಿ), ಡಿವೈಎಫ್ಐ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ಒಂದು ವಾರಗಳ ಕಾಲ ನಡೆದ ‘ಆಟ ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 20-05-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಿಟೆಲ್ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಠಲ್ ಎ.ರವರು ಮಾತನಾಡುತ್ತಾ “ಶಿಕ್ಷಣದ ಖಾಸಗೀಕರಣವು ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಈ ಸಮಾಜದಲ್ಲಿ ಬಡವರ ಮಕ್ಕಳೂ ಶಿಕ್ಷಣ ಪಡೆಯುತ್ತಿದ್ದಾರೆ. ಅವರ ಜೀವನ ಕ್ರಮಗಳು, ಬದುಕು, ಕಷ್ಟ ಸುಖಗಳು ಶ್ರೀಮಂತ ವಿದ್ಯಾರ್ಥಿಗಳಿಗೆ ಅದರ ಅರಿವೇ ಇಲ್ಲದ ರೀತಿಯಲ್ಲಿದ್ದು ಬಡವರ ಮತ್ತು ಶ್ರೀಮಂತರ ನಡುವಿನ ಅಂತರ, ತಾರತಮ್ಯಗಳು ಹೆಚ್ಚಾಗಲು ಕಾರಣವಾಗಿದೆ. ಮಕ್ಕಳಲ್ಲಿ ಸಹೋದರತೆ, ಪ್ರೀತಿ, ವಾತ್ಸಲ್ಯ, ಸೌಹಾರ್ದತೆಗಳೆಲ್ಲವೂ ಜೀವಂತವಾಗಿರಬೇಕಾದರೆ ಸರಕಾರ ಪದವಿ ಪೂರ್ವವರೆಗಿನ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕು. ಸರಕಾರ ಸರಿಯಾಗಿ ಮನಸ್ಸು ಮಾಡಿದರೆ ಸರಕಾರಿ ಶಾಲೆಗಳನ್ನು ಮಾದರಿಯಾಗಿ ನಡೆಸುವುದು ಬಹಳ ಕಷ್ಟದ ಕೆಲಸವೇನಲ್ಲ. ಈ ಹಿಂದೆ ಎಲ್ಲರೂ ಸರಕಾರಿ ಶಾಲೆಯಲ್ಲೇ…
16.04.1996ರಂದು ರಾಜಕುಮಾರ್ ಹಾಗೂ ಕಸ್ತೂರಿ ಇವರ ಮಗಳಾಗಿ ಛಾಯಾಲಕ್ಷ್ಮೀ ಆರ್.ಕೆ ಅವರ ಜನನ. Msc.(Chemistry), BEd ಇವರ ವಿದ್ಯಾಭ್ಯಾಸ. ತಂದೆಯೇ ಯಕ್ಷಗಾನದ ಮೊದಲ ಗುರು. ನಂತರದಲ್ಲಿ ಪೂರ್ಣಿಮಾ ಯತೀಶ್ ರೈ, ರಮೇಶ್ ಶೆಟ್ಟಿ ಬಾಯಾರು ಇವರ ಬಳಿ ಹೆಚ್ಚಿನ ನಾಟ್ಯವನ್ನು ಕಲಿತು ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಮೂಲ ಪ್ರೇರಣೆ ಇವರ ತಂದೆ ಹಾಗೂ ಗಣೇಶಪುರ ಕೈಕಂಬದಲ್ಲಿ ಪ್ರತೀ ವರ್ಷ ನವರಾತ್ರಿಯ ಸಂದರ್ಭದಲ್ಲಿ ನಡೆಯುತ್ತಿದ್ದ ಯಕ್ಷಗಾನಗಳು ಯಕ್ಷಗಾನಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಛಾಯಾಲಕ್ಷ್ಮೀ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪೂರ್ತಿ ಕಥೆಯನ್ನು ತಿಳಿದುಕೊಳ್ಳುತ್ತೇನೆ. ನಾವು ಬರೀ ನಮ್ಮ ವೇಷದ ಬಗ್ಗೆ ತಿಳಿದುಕೊಂಡರೆ ಸಾಕಾಗುವುದಿಲ್ಲ, ಅದರಿಂದ ಜ್ಞಾನವು ಬೆಳೆಯುವುದಿಲ್ಲ. ಮೊದಲೆಲ್ಲ ಪುಸ್ತಕಗಳನ್ನು ಓದಬೇಕಿತ್ತು, ಆದರೆ ಈಗ ಸುಲಭವಾಗಿ ಯೂಟ್ಯೂಬ್ ಅಲ್ಲಿ ಬೇರೆ ಬೇರೆ ಮೇಳಗಳು ಆಡಿದ ಇಡೀ ಪ್ರಸಂಗವೇ ಸಿಗುತ್ತದೆ, ಆದ್ದರಿಂದ ಇಡೀ ಪ್ರಸಂಗವನ್ನು ನೋಡಿಕೊಳ್ಳುತ್ತೇನೆ ಹಾಗೂ ಪ್ರತಿಯೊಂದು ವೇಷದ ನಡೆಯನ್ನು ನೋಡಿಕೊಳ್ಳುತ್ತೇನೆ. ನಾನು ಎಷ್ಟೊತ್ತಿಗೆ ರಂಗ…
ಮಂಗಳೂರು: ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ದಿನಾಂಕ 21-05-2023ರಂದು ಶ್ರೀಮತಿ ಶೀಲಾಲಕ್ಷ್ಮೀ ಕಾಸರಗೋಡು ಇವರ ‘ಸರಸ-ಸಮರಸ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀಮತಿ ರಶ್ಮಿ ಅರಸ್ ಇವರ ಆಶಯ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕೃತಿಯ ಲೇಖಕಿಯಾದ ಶ್ರೀಮತಿ ಶೀಲಾಲಕ್ಷ್ಮೀ ಕಾಸರಗೋಡು ಇವರು ಉಪಸ್ಥಿತಿಯಲ್ಲಿ ಹಿರಿಯ ಲೇಖಕಿ ಬಿ. ಸತ್ಯವತಿ ಭಟ್ ಕೊಳಚಪ್ಪು ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಾ “ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಒತ್ತಡದ ವಶವಾಗಿದ್ದಾರೆ. ಅಂಥಹವರು ಈ ಕಾದಂಬರಿಯನ್ನು ಓದಲೇ ಬೇಕು. ಯಾಕೆಂದರೆ ಹದಿಹರೆಯದ ಮಕ್ಕಳ ಸಂಘರ್ಷವನ್ನು ಅವರು ಅತಿ ಸೊಗಸಾಗಿ ಚಿತ್ರಿಸಿದ್ದಾರೆ. ಓರ್ವ ತಾಯಿ ಬಡವಳಿದ್ದು ತನ್ನ ಕಷ್ಟ ಕೋಟಲೆಗಳ ಮಧ್ಯೆಯಿಂದ ಮೇಲೆ ಬರುವಾಗ ತನ್ನ ಸ್ಥಾನಮಾನಕ್ಕೆ ಚ್ಯುತಿ ಬಾರದಂತೆ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗುತ್ತಿರುವುದು ಕೃತಿಯಲ್ಲಿ ಗಮನಿಸಬೇಕಾದ ಅಂಶ” ಎಂದರು. ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಶೈಲಜಾ ಕೆ. ಲೋಕಾರ್ಪಣೆಗೊಂಡ ಕೃತಿಯ…
ಉಡುಪಿ : ಯಕ್ಷಗಾನ ಕಲಾರಂಗದ ಈ ಬಾರಿಯ ತಾಳಮದ್ದಲೆ ಸಪ್ತಾಹವು ಮೇ 21, 2023ರಂದು ಸಂಜೆ 5.00 ಗಂಟೆಗೆ ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಖ್ಯಾತ ವೈದ್ಯ ಡಾ. ಕಬ್ಯಾಡಿ ಹರಿರಾಮ ಆಚಾರ್ಯರು ಸಪ್ತಾಹವನ್ನು ದೀಪ ಬೆಳಗಿ ಉದ್ಘಾಟಿಸಿ “ಅರ್ಥಧಾರಿಗಳು ಪುರಾಣದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ವಾಹಕರು” ಎಂದರು. ಉಡುಪಿಯ ಮಾನ್ಯ ಶಾಸಕರಾದ ಯಶ್ಪಾಕಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ, ಎ.ಜಿ.ಎಂ. ಕರ್ಣಾಟಕ ಬ್ಯಾಂಕ್ನೆ ಬಿ. ರಾಜಗೋಪಾಲ, ಪರ್ಕಳದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ದಿಲೀಪ್ರಾಾಜ್ ಹೆಗ್ಡೆ ಹಾಗೂ ಪಾಟೀಲ್ ಕ್ಲೋತ್ ಸ್ಟೋರ್ನ ಮಾಲಕರಾದ ಗಣೇಶ ಪಾಟೀಲ್, ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 21-05-2023ರಂದು ಒಂದೇ ದಿನದಲ್ಲಿ ನಿಧನರಾದ ಸಂಸ್ಥೆಯ ಆಜೀವ ಸದಸ್ಯರಾಗಿದ್ದ ಮಾಜಿ ಶಾಸಕ ಯು.ಆರ್. ಸಭಾಪತಿ ಹಾಗೂ ಯಕ್ಷಗಾನ ಕಲಾವಿದ ರಾಮಕೃಷ್ಣ ಶೆಟ್ಟಿಗಾರ್ ಇವರಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನುಡಿನಮನ…
ಕಡಬ: ನೃತ್ಯ ನಿನಾದ, ಕಡಬ ನೃತ್ಯ ಸಂಸ್ಥೆಯು ತಮ್ಮ ವಿದ್ಯಾರ್ಥಿಗಳಿಗಾಗಿ ಯುವ ನೃತ್ಯ ಕಲಾವಿದರಾದ ತಾಳ ಪ್ರವೀಣ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರಿಂದ ಎರಡು ದಿನಗಳ ತಾಳ ಕಾರ್ಯಗಾರವನ್ನು ಮೇ 20 ಮತ್ತು 21ರಂದು ಏರ್ಪಡಿಸಿತ್ತು. ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ವಿದುಷಿ ಪ್ರಮೀಳಾ ಲೋಕೇಶ್ ಅವರು ನೃತ್ಯ ಸಂಸ್ಥೆಯನ್ನು ಸ್ಥಾಪಿಸಿ, ಸುಮಾರು 25 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ನೀಡುತ್ತಿದ್ದು, ಈ ತಾಳ ಕಾರ್ಯಗಾರದಲ್ಲಿ 21 ವಿದ್ಯಾರ್ಥಿಗಳು ಪಾಲ್ಗೊಂಡು ತಾಳದ ಬಗೆಗಿನ ಜ್ಞಾನವನ್ನು ಪಡೆದುಕೊಂಡರು. ಇದು ಸಂಪನ್ಮೂಲ ವ್ಯಕ್ತಿ ವಿದ್ವಾನ್ ಮಂಜುನಾಥ್ ಅವರ 72ನೆಯ ಕಾರ್ಯಗಾರವಾಗಿದೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಪಾಕ್ಷಿಕ ತಾಳಮದ್ದಳೆ “ಪಂಚವಟಿ” ದಿನಾಂಕ 20-05-2023ರಂದು ಸಂಜೆ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್.ಭಟ್, ಆನಂದ ಸವಣೂರು, ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇದಲ್ಲಿ ಶ್ರೀರಾಮ (ಗುಂಡ್ಯಡ್ಕ ಈಶ್ವರ ಭಟ್), ಘೋರ ಶೂರ್ಪನಖಿ (ಪಕಳಕುಂಜ ಶ್ಯಾಮ್ ಭಟ್), ಮಾಯ ಶೂರ್ಪನಖಿ (ಕು೦ಬ್ಳೆ ಶ್ರೀಧರ್ ರಾವ್), ಲಕ್ಷ್ಮಣ (ಬಡೆಕ್ಕಿಲ ಚಂದ್ರಶೇಖರ್ ಭಟ್), ಸೀತೆ (ದುಗ್ಗಪ್ಪ ಎನ್.) ಹಾಗೂ ಮುನಿಗಳು (ಭಾಸ್ಕರ್ ಬಾರ್ಯ) ಸಹಕರಿಸಿದರು.