Subscribe to Updates
Get the latest creative news from FooBar about art, design and business.
Author: roovari
ಸಾಲಿಗ್ರಾಮ : ಕರ್ನಾಟಕ ಯಕ್ಷಧಾಮ, ಮಂಗಳೂರು ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನವು ದಿನಾಂಕ : 22-05-2023, ಸೋಮವಾರ ಸಂಜೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ, ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತರು ನೆರವೇರಿಸಲಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀ ಸುದರ್ಶನ ಉರಾಳರನ್ನು ಮಂಗಳೂರಿನ ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಇವರು ಸನ್ಮಾನಿಸಲಿರುವರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಲಾ ಸಾಹಿತಿ ಶ್ರೀ ಎಚ್. ಜನಾರ್ದನ ಹಂದೆ ಹಾಗೂ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ ಇವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಮಯ್ಯ ಯಕ್ಷ ಬಳಗ (ರಿ) ಹಾಲಾಡಿ ಇವರಿಂದ ‘ಆದರ್ಶ ಪುತ್ರ ಭೀಷ್ಠ’ ಯಕ್ಷಗಾನ ಪ್ರದರ್ಶನವು ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಿ.…
ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ.ಇನಾಂದಾರ್ ನೆನಪಿನಲ್ಲಿ ನೀಡುವ 2021ರ ಸಾಲಿನ ಇನಾಂದಾರ್ ಪ್ರಶಸ್ತಿಗೆ ಲೇಖಕಿ, ವಿಮರ್ಶಕಿ ಆರ್. ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚು ಪಟ್ಟಿ’ ವಿಮರ್ಶಾ ಕೃತಿ ಹಾಗೂ 2022ರ ಸಾಲಿನ ಪ್ರಶಸ್ತಿಗೆ ಹಿರಿಯ ಲೇಖಕ, ಕಾದಂಬರಿಕಾರ ಡಿ.ಎ.ಶಂಕರ್ ಅವರ ವಿಮರ್ಶಾ ಕೃತಿ ‘ವಾಗರ್ಥ’ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತಾರಿಣಿ ಶುಭದಾಯಿನಿ ಮೈಸೂರಿನವರಾಗಿದ್ದು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದ್ದಾರೆ. ತೋಡಿ ರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ ಅವರ ಕವನ ಸಂಕಲನಗಳು, ಗಳಿಗೆ ಬಟ್ಟಲು, ಹೆಡೆಯಂತಾಡುವ ಸೊಡರು ವಿಮರ್ಶಾ ಕೃತಿ, ನಿರ್ವಸಾಹತೀಕರಣ, ಸ್ತ್ರೀ ಶಿಕ್ಷಣ-ಚರಿತ್ರೆಯ ಹೆಜ್ಜೆಗಳು ಮುಂತಾದವು ಅವರ ಪ್ರಕಟಿತ ಕೃತಿಗಳು. ಅವರಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ, ಕಥಾರಂಗಂ…
ಮಂಗಳೂರು : ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಆಡಳಿತಕ್ಕೊಳಪಟ್ಟ ಪುರಾತನ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಕ್ಷೇತ್ರದ ಬಗೆಗಿನ 2 ತುಳು ಮತ್ತು 6 ಕನ್ನಡ ಹಾಡುಗಳ ಸಂಗಮ ‘ಪುಣ್ಯನೆಲ ಪೆರಣಂಕಿಲ’ ಭಕ್ತಿಗೀತೆಗಳ ಧ್ವನಿ ಕರಂಡಿಕೆ ಬಿಡುಗಡೆಗೆ ಸಿದ್ಧವಾಗಿದೆ. ಮುಂಬಯಿಯ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನೇತೃತ್ವದಲ್ಲಿ ಬೆಂಗಳೂರಿನ ಓಂಕಾರ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನೆರವೇರಿದೆ. ಮುಂಬೈ ವಿದ್ಯಾ ವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಾಲಯದ ಧರ್ಮದರ್ಶಿ ಹಾಗೂ ಪೆರ್ಣಂಕಿಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಮೂರ್ತಿ ಪೆರ್ಣಂಕಿಲ ಶ್ರೀ ಹರಿದಾಸ್ ಭಟ್ ಅವರು ಈ 8 ಹಾಡುಗಳ ಆಡಿಯೋ ಆಲ್ಬಂನ ನಿರ್ಮಾಪಕರಾಗಿ ಯೋಜನೆಯ ಸಂಪೂರ್ಣ ಪ್ರಾಯೋಜತ್ವ ವಹಿಸಿದ್ದಾರೆ. ಡಾ. ವಿದ್ಯಾ ಭೂಷಣರ ಹಾಡುಗಾರಿಕೆ: ಮಂಗಳೂರಿನ ಕವಿ – ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಕ್ಷೇತ್ರ ಇತಿಹಾಸ, ಸುಪ್ರಭಾತ ಮತ್ತು ಸಾನಿಧ್ಯ ಮಹಿಮೆಗಳನ್ನೊಳಗೊಂಡ ಭಕ್ತಿ…
ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಅವರು ನಾಡಿನ ಮಹಾನ್ ಪ್ರತಿಭೆ. ಖ್ಯಾತ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಶ್ರೀಹರಿ ಖೋಡೆ ಅವರು ನಿರ್ಮಿಸಿದ ʻಸಂತ ಶಿಶುನಾಳ ಶರೀಫʼ ಚಲನಚಿತ್ರದಲ್ಲಿ ಗುರು ಗೋವಿಂದ ಭಟ್ಟರ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಗುರು ಗೋವಿಂದ ಭಟ್ಟರ ವಂಶಸ್ಥನಾಗಿದ್ದ ತಮ್ಮೊಂದಿಗೆ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಚರ್ಚಿಸಿದ್ದರು. ಆ ಮೂಲಕ ಗೋವಿಂದ ಭಟ್ಟರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ದೂರದರ್ಶನದಲ್ಲಿ ʻಈಶ್ವರ ಅಲ್ಲಾ ನೀನೇ ಎಲ್ಲಾʼ ಧಾರಾವಾಹಿಯಲ್ಲಿಯೂ ಗಿರೀಶ ಕಾರ್ನಾಡ್ ಅವರೇ ಗುರು ಗೋವಿಂದ ಭಟ್ಟರ ಪಾತ್ರ ನಿರ್ವಹಿಸಬೇಕು ಬೇಡಿಕೆಯು ನಾಡಿನಾದ್ಯಂತ ಕೇಳಿ ಬಂದಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಗಿರೀಶ್ ಕಾರ್ನಾಡರ ಕುರಿತ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡ ಗಿರೀಶ್ ಕಾರ್ನಾಡ್‌ರ 89ನೆಯ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ಶ್ರೀ ರಘುನಾಥ್ ಕಾರ್ನಾಡ್ ಹಾಗೂ ಶ್ರೀಮತಿ ಕೃಷ್ಣಾಬಾಯಿ…
ಇಂದು ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದೆಯಾಗಿ ಮತ್ತು ಸಮಾಜ ಸೇವಾ ಧುರೀಣೆ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆಯ ಪೂರ್ಣಿಮಾ ರಜಿನಿ ಅವರದು ಅನನ್ಯ ಸೇವೆ. ಏಳರ ಎಳವೆಯಲ್ಲೇ ಹಿರಿಯ ನಾಟ್ಯಗುರು ರಾಧಾ ಶ್ರೀಧರ್ ಅವರಲ್ಲಿ ಭರತನಾಟ್ಯ ಕಲಿತು, ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪರಿಶ್ರಮಿಸಿ, ಸಾಧನೆಯ ಪಥದಲ್ಲಿ ಸಾಗಿರುವ ಪೂರ್ಣಿಮಾ ಅವರದು, ಎರಡೂವರೆ ದಶಕಗಳ ಕಾಲದ ಅವಿರತ ಪರಿಶ್ರಮ. ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರ ವೈಶಿಷ್ಟ್ಯವೆಂದರೆ ಚಿಕ್ಕವಯಸ್ಸಿನಲ್ಲೇ ಭಾರತ ಸರ್ಕಾರದ ಫೆಲೋಶಿಪ್ ದೊರೆತದ್ದು ಆಕೆಯ ಪ್ರತಿಭೆಗೆ ಸಾಕ್ಷಿ. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮತ್ತು ನಟುವಾಂಗದಲ್ಲೂ ಸಮರ್ಥ ತರಬೇತಿ ಪಡೆದರು. ದೇಶಾದ್ಯಂತ ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ ಖ್ಯಾತಿ. ಮೈಕ್ರೋ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಯಲ್ಲೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ.ಪದವಿಯನ್ನೂ ಪಡೆದುಕೊಂಡರು. ಪಿ.ಇ.ಎಸ್. ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಯಾಗಿರುವ ಇವರು ಬೆಂ. ವಿ.ವಿ.ದಿಂದ ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ಇವರಿಗೆ ಕಲ್ಕತ್ತೆಯ ಐ.ಐ.ಎಂ.ನಿಂದ ‘ವುಮನ್ ಎಂಟರ್ಪ್ರಿನರ್ಷಿಪ್ ಮತ್ತು ಲೀಡರ್ ರ್ಶಿಪ್ ಪ್ರೋಗ್ರಾಮ್’ ಪದವಿ ಲಭ್ಯ. ದೂರದರ್ಶನದಲ್ಲಿ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಅಧ್ಯಕ್ಷರಾಗಿ ಅಪಾರ ಸೇವೆಯನ್ನು ಸಲ್ಲಿಸಿದ ಹಾಗೂ ಜಾನಪದ ಸಾಹಿತಿಯಾಗಿ, ಸಂಘಟಕರಾಗಿ, ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ನಾಡೋಜ ಡಾ. ಗೊ.ರು. ಚನ್ನಬಸಪ್ಪನವರ 95ನೆಯ ಜನ್ಮದಿನದ ಹಿನ್ನೆಲೆಯಲ್ಲಿ ದಿನಾಂಕ 18-05-2023ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಶ್ರೀಯುತರಿಗೆ ಶುಭಾಶಯಗಳನ್ನು ಸಲ್ಲಿಸಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಇರುವ ಡಾ. ಗೊ.ರು.ಚನ್ನಬಸಪ್ಪ ಅವರ ಮನೆಗೆ ತೆರಳಿ ಜನ್ಮದಿನದ ಶುಭಾಶಯಗಳನ್ನು ಹೇಳುವುದರೊಂದಿಗೆ, ಗೊರುಚ ಅವರು ನೂರುಕಾಲ ಆರೋಗ್ಯವಂತರಾಗಿ ಬಾಳಲಿ ಎಂದು ಹಾರೈಸಿದ್ದರು. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಸದಾ ದೊರಕುತ್ತಿರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಡಾ. ಗೊ.ರು.ಚನ್ನಬಸಪ್ಪನವರು 1992ರಿಂದ 1995ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 18ನೆಯ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದವರು. ಕೊಪ್ಪಳ (1993), ಮಂಡ್ಯ (1994),…
ಕಡಬ : ನೃತ್ಯ ನಿನಾದ, ಕಡಬ ನೃತ್ಯ ಸಂಸ್ಥೆಯು ತಮ್ಮ ವಿದ್ಯಾರ್ಥಿಗಳಿಗಾಗಿ ಯುವ ನೃತ್ಯ ಕಲಾವಿದರಾದ ತಾಳ ಪ್ರವೀಣ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರ ಮೂಲಕ ಎರಡು ದಿನಗಳ ‘ತಾಳ ಕಾರ್ಯಗಾರ’ವನ್ನು 2023 ಮೇ ತಿಂಗಳ 20 ಮತ್ತು 21ರಂದು ಏರ್ಪಡಿಸಿದೆ ಎಂದು ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ವಿದುಷಿ ಪ್ರಮೀಳಾ ಲೋಕೇಶ್ ಅವರು ತಿಳಿಸಿದ್ದಾರೆ.
ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘದಲ್ಲಿ ದಿನಾಂಕ 21-05-2023ರಂದು ಅಪರಾಹ್ನ ಗಂಟೆ 2-30ಕ್ಕೆ ಕಾಸರಗೋಡಿನ ಪ್ರಬುದ್ಧ ಲೇಖಕಿ ಶ್ರೀಮತಿ ಶೀಲಾಲಕ್ಷ್ಮೀಯವರ ‘ಸರಸ ಸಮರಸ’ ಕಾದಂಬರಿ ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ರಶ್ಮಿ ಅರಸ್ ಅವರ ಆಶಯ ಗೀತೆಯೊಂದಿಗೆ ಆರಂಭವಾಗುವ ಈ ಕಾರ್ಯಕ್ರಮವು ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಲೇಖಕಿ ಬಿ. ಸತ್ಯವತಿ ಭಟ್ ಕೊಳಚಪ್ಪು ಕೃತಿ ಲೋಕಾರ್ಪಣೆ ಮಾಡುವರು. ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಶೈಲಜಾ ಕೆ. ಲೋಕಾರ್ಪಣೆಗೊಂಡ ಕೃತಿಯ ಪರಿಚಯ ಮಾಡಿಕೊಡುತ್ತಾರೆ. ಕೃತಿಯ ಲೇಖಕಿ ಶೀಲಾಲಕ್ಷ್ಮೀ ಕಾಸರಗೋಡು ಉಪಸ್ಥಿತರಿರುತ್ತಾರೆ. ಸ್ವಾಗತ ಮತ್ತು ಪ್ರಸ್ತಾವನೆ ಶ್ರೀಮತಿ ಆಕೃತಿ ಎಸ್. ಭಟ್ ಮತ್ತು ಶ್ರೀಮತಿ ರೇಖಾ ಶಂಕರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಕ.ಲೇ.ವಾ.ದ ಬಗ್ಗೆ ಎರಡು ಮಾತು : ದ.ಕ. ಜಿಲ್ಲೆ ಮತ್ತು ಕಾಸರಗೋಡಿನ ಲೇಖಕರು ಮತ್ತು ಸಾಹಿತ್ಯಾಸಕ್ತರನ್ನು ಒಳಗೊಂಡ ಒಂದು ಸಂಘಟನೆ ಕರಾವಳಿ ಲೇಖಕಿಯರ ವಾಚಕಿಯರ ಸಂಘ. ಇದು ಸ್ವಂತ…
ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರವರೆಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಇಂತಹ ಶ್ರೇಷ್ಠ ಕಲೆಯಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಕಲಾವಿದರು ಗಿಳಿಯಾರು ಗೋಪಾಲಕೃಷ್ಣ ಪೈ. 16.01.1961ರಂದು ಶ್ರೀ ಕೆ.ರಾಮನಾಥ ಪೈ ಮತ್ತು ಶ್ರೀಮತಿ ರಾಧಾ ಬಾಯ್ ಇವರ ಮಗನಾಗಿ ಗಿಳಿಯಾರು ಗೋಪಾಲಕೃಷ್ಣ ಪೈ ಜನನ. ಪ್ರಾಥಮಿಕ ಶಿಕ್ಷಣವನ್ನು ಪರಮಹಂಸ ಪ್ರೌಢ ಪ್ರಾಥಮಿಕ ಶಾಲೆ ಬನ್ನಾಡಿ, ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣವನ್ನು ವಿವೇಕ ಪದವಿಪೂರ್ವ ಕಾಲೇಜು ಕೋಟ ಹಾಗೂ ಬಿಕಾಂ ಪದವಿಯನ್ನು ಭಂಡಾರ್ ಕಾರ್ಸ್ ಕಾಲೇಜು ಕುಂದಾಪುರದಲ್ಲಿ ಪಡೆದರು. ಯಕ್ಷಗಾನದ ಗುರುಗಳು:- ಶ್ರೀ ಗುಂಡ್ಮಿ ಸದಾನಂದ…
ಉಡುಪಿ : ಇಲ್ಲಿನ ಯಕ್ಷಗಾನ ಕಲಾರಂಗ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕರ್ಣಾಟಕ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ ತಾಳಮದ್ದಲೆ ಸಪ್ತಾಹ -2023 ಹಾಗೂ ತಾಳಮದ್ದಲೆ ಪ್ರಶಸ್ತಿ ಪ್ರದಾನ ಸಮಾರಂಭ ಮೇ 21ರಿಂದ 27ರವರೆಗೆ ನಡೆಯಲಿದೆ. ತಾಳಮದ್ದಲೆ ಸಪ್ತಾಹವನ್ನು ದಿನಾಂಕ ಮೇ 21, 2023 ರವಿವಾರದಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು ಶ್ರೀ ಯಶಪಾಲ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಖ್ಯಾತ ವೈದ್ಯರಾದ ಡಾ. ಕಬ್ಯಾಡಿ ಹರಿರಾಮ ಆಚಾರ್ಯ ಉದ್ಘಾಟಿಸಲಿದ್ದಾರೆ. ಉಡುಪಿ ಎ.ಜಿ.ಎಂ. ಕರ್ನಾಟಕ ಬ್ಯಾಂಕಿನ ಶ್ರೀ ಬಿ. ರಾಜಗೋಪಲ್, ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ದಿಲೀಪ್ ರಾಜ್ ಹೆಗ್ಡೆ ಹಾಗೂ ಪರ್ಕಳ ಪಾಟೇಲ್ ಕ್ಲೋತ್ ಸ್ಟೋರ್ ಮಾಲಕರಾದ ಶ್ರೀ ಗಣೇಶ ಪಾಟೀಲ್ ಇವರುಗಳು ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಮೇ 21 ಮತ್ತು 22ರಂದು ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಅನುಕ್ರಮವಾಗಿ ‘ಭೀಷ್ಮಾರ್ಜುನ’ ಮತ್ತು ‘ಅತಿಕಾಯ ಕಾಳಗ’ ಹಾಗೂ 23 ಮತ್ತು 24ರಂದು ಬನ್ನಂಜೆ…