Author: roovari

01 ಮಾರ್ಚ್ 2023, ಉಡುಪಿ: ಸಾಮಾಜಿಕ ನೆರವಿಗಾಗಿ ಹುಟ್ಟಿ ಸಾಂಸ್ಖೃತಿಕ ಸಂಘಟನೆಯಾದ ಸುಮನಸಾ: ಜಯಕರ ಶೆಟ್ಟಿ ತನ್ನೂರಿನಲ್ಲಿ ಅವಘಡ ಉಂಟಾದಾಗ ಅವರ ನೆರವಿಗೆ ಸಮಾನ ಮನಸ್ಕರು ಒಟ್ಟಾಗಿ ಕಟ್ಟಿದ ಸಂಸ್ಥೆ ಸುಮನಸಾ ಇಂದು ಸಾಮಾಜಿಕ ಕಳಕಳಿಯನ್ನು ಮುಂದುವರಿಸುತ್ತಾ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬೇರೆ ಬೇರೆ ವಯೋಮಾನದವರು 60ಕ್ಕೂ ಅಧಿಕ ಮಂದಿ ಈ ಸಂಸ್ಥೆಯಲ್ಲಿದ್ದಾರೆ. ಇಷ್ಟೊಂದು ಶಿಸ್ತುಬದ್ಧವಾದ ತಂಡ ಮತ್ತೊಂದಿಲ್ಲ. ಈ ತಂಡದ ಶಿಸ್ತೇ ಬೇರೆಯವರಿಗೆ ಮಾದರಿ ಎಂದು ಶ್ಲಾಘಿಸಿದರು. ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಸುಮನಸಾ ತಂಡವು ರಂಗಭೂಮಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಇಂದು ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರಿಗೆ ರಂಗಸನ್ಮಾನ ನೀಡಿರುವುದು ತುಳುಕೂಟಕ್ಕೆ ನೀಡಿದ…

Read More

01 ಮಾರ್ಚ್ 2023, ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ಚಳವಳಿಗೆ ಸಾಕ್ಷಿ ಪ್ರಜ್ಞೆಯಂತಿರುವ ಮತ್ತು ಅದಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಶ್ರೀನಿವಾಸ ಜಿ ಕಪ್ಪಣ್ಣ ಅವರನ್ನು ಕುರಿತ ಪುಸ್ತಕವನ್ನು ಜಯದೇವ್ ಕಪ್ಪಣ್ಣ, ಸ್ನೇಹಾ ಕಪ್ಪಣ್ಣ ಹೊರತರುತ್ತಿದ್ದು, ಈ ಪುಸ್ತಕವನ್ನು ಪ್ರೋ.ನಾ. ದಾಮೋದರ ಶೆಟ್ಟಿಯವರು ಸಂಪಾದಿಸಿದ್ದಾರೆ. ಈ ಪುಸ್ತಕವು ಒಂದು ನೂರ ಮೂವತ್ತನಾಲ್ಕು ಹಿರಿಯರು ಗೆಳೆಯರು ಬರೆದಿರುವ ಲೇಖನಗಳ ಸಂಗ್ರಹ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾರ್ಚ್ 4, ಶನಿವಾರ ಸಂಜೆ 5.00 ಗಂಟೆಗೆ ಸಂಸ ಬಯಲು ರಂಗಮಂದಿರ ಕಲಾಕ್ಷೇತ್ರ ಆವರಣದಲ್ಲಿ ನಡೆಯಲಿದೆ.

Read More

01 ಮಾರ್ಚ್ 2023, ಮಂಗಳೂರು: ಮನಸ್ಸು ಮನಸ್ಸುಗಳ ಬೆಸೆಯುವ ಕೆಲಸ ಸಾಹಿತ್ಯದಿಂದ ಸಾಧ್ಯ ಎಂದು ಡಾ. ಹರಿಕೃಷ್ಣ ಪುನರೂರು ಹೇಳಿದ್ದಾರೆ. ಬಹುಭಾಷಾ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯುಗಪುರುಷ ನೇತೃತ್ವದಲ್ಲಿ ಕಥಾ ಬಿಂದು ಪ್ರಕಾಶನ ಆಶ್ರಯದಲ್ಲಿ ಬಹುಭಾಷಾ ಸಾಹಿತ್ಯ ಸಂಭ್ರಮ, ಪಿ. ಪ್ರದೀಪ್ ಕುಮಾರ್ ಅವರ ರಹಸ್ಯ ಗುಂಪು ಮತ್ತು ಕಣಜ ಎಂಬ ಎರಡು ಕೃತಿಗಳ ಅನಾವರಣ ಹಾಗೂ ಕಂಬಳ ಕ್ಷೇತ್ರದ ಸಾಧಕ ಪ್ರಸಾದ್ ಶೆಟ್ಟಿ, ಶ್ರೀನಿವಾಸ ಭಜನಾ ತಂಡದ ಅಧ್ಯಕ್ಷ ಕಿಶೋರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮವು ದಿನಾಂಕ 26 ಫೆಬ್ರವರಿ 2023 ಅದಿತ್ಯವಾರದಂದು ನಡೆಯಿತು. ಸಾಹಿತ್ಯಿಕ ಕೆಲಸದಿಂದ ಆಗಲಿ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿ, ಆಧುನಿಕತೆ ಬೆಳೆದು ಬಂದಂತೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಹೊಸ ಹೊಸ ಕವಿಗಳು ಹುಟ್ಟಿಕೊಂಡಿದ್ದಾರೆ. ಅವರನ್ನು ಇನ್ನಷ್ಟು ಮುಖ್ಯ ವಾಹಿನಿಗೆ ತರುವ ಕೆಲಸ ಇಂತಹ ಸಾಹಿತ್ಯಿಕ ಕೆಲಸ ಕಾರ್ಯದಿಂದ…

Read More

01 ಮಾರ್ಚ್ 2023, ಬೆಂಗಳೂರು: ವಿಜ್ಞಾನ ಪ್ರಸಾರ್ ನವ ದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಕುತೂಹಲಿ ಸ್ಕೋಪ್ ವಿಜ್ಞಾನ ನಾಟಕೋತ್ಸವ 24, 25, 26 ಫೆಬ್ರವರಿ 2023ರಂದು ಬೆಂಗಳೂರಿನ ಬಿ.ವಿ. ಕಾರಂತ ರಂಗ ಮನೆಯಲ್ಲಿ ಜರಗಿತು. ಮೊದಲ ದಿನದ ನಾಟಕ : ಅಬ್ದುಸ್ ಸಲಾಮ್ ಒಂದು ವಿಚಾರಣೆ 24 ಫೆಬ್ರವರಿ 2023, ಶುಕ್ರವಾರ ಪ್ರಸ್ತುತಿ : ಅರಿವು ರಂಗ, ಮೈಸೂರು ನಿರ್ದೇಶನ : ಯತೀಶ್ ಎನ್. ಕೊಳ್ಳೇಗಾಲ ರಚನೆ : ಶಶಿಧರ್ ಡೋಂಗ್ರೆ ಮೂಲ : ನೀಲಾಂಜನ್ ಚೌಧುರಿ ಸಂಗೀತ : ಸಾಯಿ ಶಿವ್ ಮೊಹಮ್ಮದ್ ಅಬ್ದುಸ್ ಸಲಾಂ ಪಾಕಿಸ್ತಾನ ಕಂಡ ಅಪ್ರತಿಮ ವಿಜ್ಞಾನಿ. ಪರಮಾಣು ವಿಜ್ಞಾನದ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಸಲಾಂ ಅವರು ಜನಿಸಿದ್ದು ಪಾಕಿಸ್ತಾನದ  ಝಾಂಗ್ ಎಂಬ ಹಳ್ಳಿಯಲ್ಲಿ.  ಚಿಕ್ಕಂದಿನಿಂದಲೇ ಬುದ್ಧಿವಂತ ಹುಡುಗ ಎನಿಸಿಕೊಂಡಿದ್ದ ಅಬ್ದುಸ್ ಮ್ಯಾಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದುಕೊಂಡು ಲಾಹೋರ್ ನಲ್ಲಿದ್ದ…

Read More

28 ಫೆಬ್ರವರಿ 2023, ಮಂಗಳೂರು: ತುಳು ಸಿನಿಮಾ ರಂಗವು ಕೂಡು ಕುಟುಂಬ ಕಲ್ಪನೆಯಲ್ಲಿ ಬೆಳೆದು ಬಂದಿದೆ. ಇಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಸಹಿತ ಎಲ್ಲರ ನಡುವೆ ಸಂಬಂಧ ಪರಸ್ಪರ ಬೆಸೆದುಕೊಂಡಿದೆ ಎಂದು ವಿದ್ವಾಂಸ ಪ್ರೊ. ಬಿ. ಎ. ವಿವೇಕ ರೈ ಹೇಳಿದರು. ತಮ್ಮ ಲಕ್ಷ್ಮಣ ಅವರು ಬರೆದ ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ “ತುಳು ಬೆಳ್ಳಿ ತೆರೆಯ ಸುವರ್ಣ ಯಾನ” ಕೃತಿ ಯನ್ನು ಫೆ.27 ಸೋಮವಾರದಂದು ನಗರದ ಪುರಭವನ ದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಭಾಷೆಯ ಮೇಲಿನ ಭಾವನಾತ್ಮಕ ಸಂಬಂಧ ಪ್ರೀತಿ, ಅಭಿಮಾನದಿಂದ ಮಾಡುವ ಸಿನಿಮಾ ಗಳನ್ನು ನಾವು ನೋಡಿ, ಬೆಂಬಲಿಸಬೇಕು. ನಮ್ಮ ಭಾಷೆಯ ಸಿನಿಮಾ ವನ್ನು ನಾವು ತುಳು ಭಾಷಿಕರೇ ನೋಡದಿದ್ದರೆ ಅದು ಸರಿಯಲ್ಲ. ತುಳು ಸಿನಿಮಾ ಗಳ ವೀಕ್ಷಣೆ ಹೆಚ್ಚುವ ಮೂಲಕ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು. ತಮ ಲಕ್ಷ್ಮಣ ಅವರು ತುಳು ಸಿನಿಮಾ ರಂಗದ ಚರಿತ್ರಾ ಅರ್ಹ ಕೃತಿಯನ್ನು ಅರ್ಪಿಸಿದ್ದಾರೆ. ತಲಸ್ಪರ್ಶಿ ಜ್ಞಾನ ನೀಡಬಹುದಾದ…

Read More

28, ಫೆಬ್ರವರಿ 2023 ಉಡುಪಿ:  ಕಲಾವಿದರ ಗೂಡಾದ ಕೊಡವೂರು ಬೀಡಾಗಲಿ: ಜಯರಾಜ್ ಕಾಂಚನ್. ಸುಮಧುರ ಮನಸ್ಸಿನ ಎಲ್ಲರ ಸುಮನಸಾ ಸಂಸ್ಥೆಯು ಕೊಡವೂರಿನಲ್ಲಿ ಕಲಾವಿದರ ಗೂಡು ಕಟ್ಟಿದೆ. ಈ ಗೂಡು ಬೀಡಾಗಿ ಬೆಳೆಯಲಿ ಎಂದು ಹಿರಿಯ ನಾಟಕಕಾರ ಜಯರಾಜ್ ಎಸ್. ಕಾಂಚನ್ ಹೇಳಿದರು. ಸಾಂಸ್ಕøತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಫೆಬ್ರವರಿ 27ರಂದು ಹಮ್ಮಿಕೊಂಡ ರಂಗಹಬ್ಬ-11 ಇದರ ಎರಡನೇ ದಿನದ ಕಾರ್ಯಕ್ರಮದಲ್ಲಿ ರಂಗಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಹಳ ಸಂಸ್ಥೆಗಳು ಹುಟ್ಟುತ್ತವೆ. ಆರಂಭಶೂರತ್ವ ತೋರಿಸುತ್ತವೆ. ಬಳಿಕ ಮುನ್ನಡೆಯುವುದಿಲ್ಲ. ಆದರೆ ಸುಮನಸಾ ಸಂಸ್ಥೆ ಈ ರೀತಿಯಾಗದೇ ಎಲ್ಲ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಧೀರ ಕಲಾವಿದರನ್ನು ಸೃಷ್ಟಿಸಿ 21 ವರ್ಷಗಳಿಂದ ಮುಂದೆ ಸಾಗುತ್ತಿದೆ ಎಂದು ಅವರು ಶ್ಲಾಘಿಸಿದರು. ಹೋಟೆಲ್ ಉದ್ಯಮಿ, ಕಲಾಪೋಷಕ ಟಿ. ರವೀಮದ್ರ ಪೂಜಾರಿ ಮಾತನಾಡಿ, ಸುಮನಸಾ ಸಂಸ್ಥೆಯು ಕೇವಲ ತನ್ನ ನಾಟಕಗಳನ್ನು ಪ್ರದರ್ಶಿಸುವುದಲ್ಲ. ರಾಜ್ಯ, ಬೇರೆ ರಾಜ್ಯಗಳ ತಂಡಗಳನ್ನು ಕರೆಸಿ ಅವರ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ಇಲ್ಲಿನ…

Read More

28 ಫೆಬ್ರವರಿ 2023, ಮೈಸೂರು: ಸಂಚಲನ (ರಿ.) ಮೈಸೂರು ಇವರ ಆಯೋಜನೆಯಲ್ಲಿ ರಂಗಬಂಡಿ ಮಳವಳ್ಳಿ (ರಿ.) ಇವರ ಸಹಭಾಗಿತ್ವದಲ್ಲಿ ಗಮ್ಯ (ರಿ.) ಶ್ರೀರಂಗಪಟ್ಟಣ ಇದರ “ಗಮ್ಯ ರಂಗ ಹಬ್ಬ -2023” ಮಾರ್ಚ್ 4 ಮತ್ತು 5ರಂದು ಮೈಸೂರಿನ ಕಿರು ರಂಗ ಮಂದಿರದಲ್ಲಿ ನಡೆಯಲಿದೆ. ಗಮ್ಯ…… ಗಮನೀಯ …… ಸಾಂಸ್ಕೃತಿಕವಾಗಿ ಮತ್ತು ಇತಿಹಾಸದ ಹಲವು ಕುರುಹುಗಳ ಬಾಹುಳ್ಯದಿಂದಾಗಿ ಶ್ರೀರಂಗಪಟ್ಟಣ ಎಂದಿಗೂ ಗಮನೀಯವೇ ಆಗಿದೆ. ಮಂಡ್ಯ ಜಿಲ್ಲೆಯ ಕಲಾಪರಂಪರೆಗೆ ಇಲ್ಲಿನ ಮಣ್ಣಿನ ಕೊಡುಗೆಯು ಅಪಾರವೇ ಸರಿ. ಹೀಗಿದ್ದೂ ಹೊಸತನಕ್ಕೆ ತೆರೆದುಕೊಳ್ಳುವ, ರೂಢಿಸಿಕೊಳ್ಳುವ ತುರ್ತು ಇದ್ದೇ ಇತ್ತು ಎನ್ನುವುದೂ ಅಷ್ಟೇ ಸಮೀಚೀನ. ಹಾಗೇ ಚಿಂತನಾಶೀಲರಾದವರ ಮನದಲ್ಲಿ ಗುರಿಯೊಂದನ್ನು ಇರಿಸಿಕೊಂಡು ಮುನ್ನಡೆಯುವ ಮಾರ್ಗವನ್ನು ಹುಡುಕುತ್ತಿದ್ದಾಗ ಹೊಳೆದದ್ದೇ “ಗಮ್ಯ”. ಗ್ರಾಮೀಣ ಭಾಗದ ಆಸಕ್ತರಿಂದ ಮೊದಲ್ಗೊಂಡು, ಪಟ್ಟಣವಾಸಿಗಳನ್ನೂ ಒಳಗೊಂಡ ಒಂದು ಶಿಷ್ಯ ತಂಡವಾಗಿ ರೂಪುಗೊಳ್ಳುತ್ತಾ ರಂಗಾಭ್ಯಾಸದ ಹಿನ್ನೆಲೆಯೊಂದಿಗೆ ಒಂದಿಷ್ಟು ಕಲಾಕೈಂಕರ್ಯವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸಿನಲ್ಲಿ ‘ಗಮ್ಯ’ ರೂಪುಗೊಳ್ಳುತ್ತಿದೆ. ನಿರಂತರ ಕಲಿಕೆಯ ಸೊಗಡಿನೊಂದಿಗೆ ಕಲಿತಿದ್ದನ್ನು ಪ್ರದರ್ಶಿಸುವ ಉತ್ಸಾಹ ಹೊಂದಿರುವ ಈ ತಂಡದಿಂದ ಕಲಾ…

Read More

ವಿವಿಧ ರಾಜ್ಯಗಳ ಸಾಧಕರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪ್ರದಾನ ಮಾಡಿದರು. 2019ನೇ ಸಾಲಿನ ಪ್ರಶಸ್ತಿಯನ್ನು ವಿನಾಯಕ ತೊರವಿ (ಹಿಂದೂಸ್ಥಾನಿ ಸಂಗೀತ), ವಸುಂಧರಾ ದೊರೆಸ್ವಾಮಿ (ಭರತನಾಟ್ಯ), ಮಂಜು ಭಾರ್ಗವಿ (ಕೂಚಿಪುಡಿ) ಸ್ವೀಕರಿಸಿದರು. 2020ನೇ ಸಾಲಿನ ಪ್ರಶಸ್ತಿಯನ್ನು ಆರ್.ಕೆ.ಪದ್ಮನಾಭ (ಕರ್ನಾಟಕ ಸಂಗೀತ) ಎಸ್.ಜಿ. ಲಕ್ಷ್ಮಿ ದೇವಮ್ಮ (ಜನಪದ), ಅರತಿ ಅಂಕಲಿಕರ್ (ಹಿಂದೂಸ್ಥಾನಿ ಸಂಗೀತ), 2021ನೇ ಸಾಲಿನ ಪ್ರಶಸ್ತಿಯನ್ನು ರವೀಂದ್ರ ಯಾವಾಗಲ್ (ತಬಲಾ), ಎಚ್.ಆರ್. ಲೀಲಾವತಿ (ಸುಗಮ ಸಂಗೀತ), ಗರ್ತಿಕೆರೆ ರಾಘಣ್ಣ (ಜನಪದ) ಹಾಗೂ ಡಿ. ಬಾಲಕೃಷ್ಣ (ವೀಣೆ ) ಅವರಿಗೆ ಫೆಬ್ರವರಿ 22ರಂದು ಪ್ರದಾನ ಮಾಡಲಾಯಿತು. ರಂಗ ಭೂಮಿ – ವಸ್ತ್ರ ವಿನ್ಯಾಸ ವಿಭಾಗದಲ್ಲಿ 2020ರ ಪ್ರಶಸ್ತಿಯನ್ನು ಪುರುಷೋತ್ತಮ ತಲವಾಟ ಸ್ವೀಕರಿಸಿದರು. 500ಕ್ಕೂ ಹೆಚ್ಚು ನಾಟಕಗಳಿಗೆ ನೇಪಥ್ಯ ಕಲಾವಿದರಾಗಿ, ಅನೇಕ ನಾಟಕಗಳ ನಿರ್ದೇಶಕರಾಗಿ, ವಿನ್ಯಾಸಕಾರರಾಗಿ, ನಟರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

Read More

28 ಫೆಬ್ರವರಿ 2023, ಮಂಗಳೂರು: ‘ಹಿರಿಯ ವಿದ್ವನ್ಮಣಿಗಳ ಕಣ್ಮರೆ ನಮ್ಮ ತಲೆಮಾರಿನ ದುರಂತ’: ಕುಕ್ಕುವಳ್ಳಿ ‘ಕಲೆ, ಸಾಹಿತ್ಯ, ಸಂಸ್ಕೃತಿಗಳ ಪ್ರಸರಣದಲ್ಲಿ ಹಿರಿಯರ ಕೊಡುಗೆ ಅಪಾರ. ಇತ್ತೀಚಿನ ವರ್ಷಗಳಲ್ಲಿ ಅಂತಹ ಹಲವು ಹಿರಿಯ ವಿದ್ಮನ್ಮಣಿಗಳು ಕಣ್ಮರೆಯಾದುದು ನಮ್ಮ ತಲೆಮಾರಿನ ದೊಡ್ಡ ದುರಂತ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ‌ ಕುಕ್ಕುವಳ್ಳಿ ಹೇಳಿದ್ದಾರೆ. ಮಂಗಳೂರಿನ ಕೊಡಿಯಾಲಬೈಲ್ ‘ಶಿವಾರ್ಪಣಂ’ ವಠಾರದಲ್ಲಿ ಜರಗಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಇತ್ತೀಚೆಗೆ ನಿಧನರಾದ ಬಲಿಪ ನಾರಾಯಣ ಭಾಗವತ ಮತ್ತು ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ‘ಬಲಿಪ ಭಾಗವತರು ಮತ್ತು ಮುದ್ರಾಡಿಯವರು ಇಬ್ಬರೂ ತೀರಾ ಸಾತ್ವಿಕ ಸ್ವಭಾವದ ವಿದ್ವಾಂಸರು. ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಗಣನೀಯ. ಅವರ ನಿಧನದಿಂದ ನಾಡಿನ ವಿದ್ವತ್ ಪರಂಪರೆಯ ಹಿರಿಯ ಕೊಂಡಿಗಳು ಕಳಚಿ ಹೋದಂತಾಯಿತು’ ಎಂದವರು ವಿಷಾದ ವ್ಯಕ್ತಪಡಿಸಿದರು. ಬಳಿಕ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಗಣ್ಯರಿಗೆ ಸದ್ಗತಿ ಕೋರಲಾಯಿತು.…

Read More

28 ಫೆಬ್ರವರಿ 2023, ಕಾಂತಾವರ: “ಕವಿಯಾದವನಿಗೆ ಸಮಾಜದ ಸಂಕಟಗಳಿಗೆ ಪರಿಹಾರ ಹುಡುಕುವ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಇದೆ ಎಂದು ರಾಯಚೂರಿನ ಕವಿ ಡಾ. ಚಿದಾನಂದ ಸಾಲಿ ಹೇಳಿದರು. ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಕಾಂತಾವರ ಕನ್ನಡ ಭವನದಲ್ಲಿ 26-02-2023ರಂದು ನಡೆದ ಮುದ್ದಣ ಸಾಹಿತ್ಯೋತ್ಸವ- 43ನೇ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದು, ಈ ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲರಾದ ಕಲಾವಿದ ಪ್ರೊ. ಎಂ.ಎಲ್. ಸಾಮಗ ಉದ್ಘಾಟಿಸಿದರು. ಕವಿ ರಾಯಚೂರಿನ ಡಾ. ಚಿದಾನಂದ ಸಾಲಿ ಅವರಿಗೆ “ಮುದ್ದಣ ಕಾವ್ಯ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಸಂಘದಲ್ಲಿ ಹೊಸತಾಗಿ ಸ್ಥಾಪನೆಯಾದ “ಗಮಕ ಕಲಾ ಪ್ರವಚನ ಪ್ರಶಸ್ತಿ”ಯನ್ನು ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಅವರಿಗೆ, “ಗಮಕ ವಾಚನ ಪ್ರಶಸ್ತಿ” ಮಂಜುಳಾ ಸುಬ್ರಮಣ್ಯ ಮಂಚಿ ಅವರಿಗೆ ಹಾಗೂ “ಕಾರ್ಕಳದ ಶಿಲ್ಪಿ ಶಾಮರಾಯ ಆಚಾರ್ಯ ಸ್ಮಾರಕ ಶಿಲ್ಪಕಲಾ ಪ್ರಶಸ್ತಿ”ಯನ್ನು ಬಿ.ಎಸ್. ಭಾಸ್ಕರ ಆಚಾರ್ಯ ಕಾರ್ಕಳ…

Read More