Author: roovari

17 ಫೆಬ್ರವರಿ 2023, ಕಾರ್ಕಳ: ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದ್ದು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ  ಅಧ್ಯಕ್ಷರಾಗಿರುವ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಅವರ ಹೆಸರಿನ ಗಮಕ ಕಲಾ ಪ್ರವಚನ ಪ್ರಶಸ್ತಿಯನ್ನು ಪ್ರಸಿದ್ಧ ಗಮಕ ವಾಚನಕಾರರಾದ  ಡಾ.ರಾಘವೇಂದ್ರ ರಾವ್ ಪಡುಬಿದ್ರಿ ಅವರಿಗೆ, ಪ್ರಸಿದ್ಧ ಗಮಕಿ ಉಡುಪಿಯ ಶ್ರೀಮತಿ ಯಾಮಿನಿ ಭಟ್ ಅವರು ಸ್ಥಾಪಿಸಿದ ಗಮಕ ಕಲಾ ವಾಚನ ಪ್ರಶಸ್ತಿಯನ್ನು ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ ಅವರಿಗೆ ಮತ್ತು ಭಾರತ ಸರಕಾರದ ‘ಶಿಲ್ಪಗುರು’ ಪ್ರಶಸ್ತಿ ಪುರಸ್ಕೃತ ಕಾರ್ಕಳದ ಶಿಲ್ಪಿ ಕೆ. ಶಾಮರಾಯ ಆಚಾರ್ಯ ಅವರ ಹೆಸರಿನ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಯನ್ನು ಶಿಲ್ಪಿ ಶ್ರೀ ಬಿ.ಎಸ್.ಭಾಸ್ಕರ ಆಚಾರ್ಯ ಕಾರ್ಕಳ ಅವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿಗಳ ನಗದು, ತಾಮ್ರ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಇದೇ ಫೆಬ್ರವರಿ 26ರಂದು ಕಾಂತಾವರದಲ್ಲಿ ನಡೆಯುವ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನದ ಜೊತೆ ಮೂರು ದತ್ತಿ ಪ್ರಶಸ್ತಿಗಳ…

Read More

17 ಫೆಬ್ರವರಿ 2023, ಮಂಗಳೂರು: ಲೇಖಕಿ ಶರೋನ್ ಶೆಟ್ಟಿ ಐಕಳ ಪೆರಾರ ಅವರು ಬರೆದ ‘ನಾಗ-ಯಕ್ಷರ ಬೀಡು ತುಳುನಾಡು – ಪ್ರಕೃತಿಯ ಸೃಷ್ಟಿ’ ಕೃತಿ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ  ಗುರುವಾರ ಫೆಬ್ರವರಿ 16ರಂದು ಬಿಡುಗಡೆಗೊಂಡಿತು. ಉದಯವಾಣಿಯ ವಿಶ್ರಾಂತ ಸಹಾಯಕ ಸಂಪಾದಕ ಶ್ರೀ ಮನೋಹರ್ ಪ್ರಸಾದ್ ಅವರು ಪುಸ್ತಕ ಬಿಡುಗಡೆ ಮಾಡಿ “ಮೌಲಿಕ ಕೃತಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುತ್ತವೆ. ತುಳುನಾಡು ಹೆಮ್ಮೆಯ ವ್ಯಾಪ್ತಿ ಹೊಂದಿದ್ದು ಅದರ ಕುರಿತಾದ ಪುಸ್ತಕ ಬಿಡುಗಡೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಶೆರೋನ್ ಶೆಟ್ಟಿ ಐಕಳ ಪೆರಾರ ಅವರ ಎರಡನೇ ಕೃತಿಯು ಸಾಹಿತ್ಯ ವಲಯದಲ್ಲಿ ಹೊಸ ಮನ್ವಂತರ ಬರೆಯಲಿ” ಎಂದು ಶುಭ ಹಾರೈಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಹರಸಿದರು. ಪ್ರಮುಖರಾದ ವಿಜಯಲಕ್ಷ್ಮಿ, ಬಿ. ಶೆಟ್ಟಿ ಹಾಗೂ ಹರಿಶ್ಚಂದ್ರ ಪಿ ಸಾಲಿಯಾನ್ ಶುಭ ಹಾರೈಸಿದರು ಲೇಖಕಿ ಶರೋನ್ ಶೆಟ್ಟಿ ಐಕಳ, ಐಕಳ ಜಯಪಾಲ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

Read More

17 ಫೆಬ್ರವರಿ 2023, ಬೈಂದೂರು: 4 ದಶಕಗಳಿಗಿಂತಲೂ ಮಿಗಿಲಾಗಿ ಕಲಾ ಸೇವೇಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಲಾವಣ್ಯ ರಿ. ಬೈಂದೂರು ಊರಿನ ಪ್ರಾತಿನಿಧಿಕ ಕಲಾ ಸಂಸ್ಥೆಯಾಗಿ ರೂಪುಗೊಂಡಿದೆ. ಸದಾ ಲವಲವಿಕೆಯಿಂದಲೇ ತನ್ನನ್ನು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಈ ವರ್ಷವೂ ಕೂಡಾ ಯಕ್ಷಗಾನ ಹಾಗೂ ನಾಟಕೋತ್ಸವದ ರಂಗ ಪಂಚಮಿ 2023 ಆಯೋಜಿಸಿದೆ. ಫೆಬ್ರವರಿ 20ರಿಂದ 24ರವರೆಗೆ ನಡೆಯಲಿರುವ ಈ ಕಲಾ ಹಬ್ಬದಲ್ಲಿ ಎಲ್ಲಾ ಕಲಾವಿದರು ಭಾಗವಹಿಸಿಹಬೇಕಾಗಿ ಆಯೋಜಕರು ವಿನಂತಿಸಿದ್ದಾರೆ. ಫೆಬ್ರವರಿ 20, ಸೋಮವಾರ ನಾಟಕ: ನಾಯಿ ಕಳೆದಿದೆ ತಂಡ: ಲಾವಣ್ಯ (ರಿ.) ಬೈಂದೂರು ರಚನೆ/ನಿರ್ದೇಶನ: ಶ್ರೀ ರಾಜೇಂದ್ರ ಕಾರಂತ, ಬೆಂಗಳೂರು ಪ್ರಾಯೋಜಕರು: ಶ್ರೀ ಯು. ಬಿ. ಎಸ್. ಚಾರಿಟೇಬಲ್ ಟ್ರಸ್ಟ್ (ರಿ.) ಧಾರವಾಡ ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ…

Read More

16 ಫೆಬ್ರವರಿ 2023, ಮೂಡಬಿದಿರೆ: ಯಕ್ಷ ರಂಗದ ಭೀಷ್ಮ, ಭಾಗವತಿಕೆಯಲ್ಲಿ ತನ್ನದೇ ಮೇರು ಶೈಲಿಯಾದ ‘ಬಲಿಪ ಹಾಡುಗಾರಿಕೆ’ಯನ್ನು ದಶಕಗಳಿಂದ ಯಕ್ಷಪ್ರಿಯರಿಗೆ ಉಣಪಡಿಸಿದ ಶ್ರೀಯುತ ಬಲಿಪ ನಾರಾಯಣ ಭಾಗವತರು ಇಂದು (84 ವರ್ಷ) ನಮ್ಮನ್ನಗಲಿದ್ದಾರೆ… ಕಂಚಿನ ಕಂಠ ಮೌನವಾಗಿದೆ… ಭಾಗವತಿಕೆಯ ರಂಗದಲ್ಲಿ ಅಗ್ರಜರಾಗಿ ನಿಂತ ಬಲಿಪರು ಮಂಗಳ ಹಾಡಿನೊಂದಿಗೆ ಇಹಲೋಕದ ಬಂಧ ಕಳಚಿ ಸರ್ವವಂದ್ಯನ ಕಿವಿಗಳನ್ನು ತಂಪಾಗಿಸಲು ನಾಕಕ್ಕೆ ಸರದಿದ್ದಾರೆ… “ನೋಡಿ ನಿರ್ಮಲ ಜಲ ಸಮೀಪದಿ…”, “ಜಗವು ನಿನ್ನಾಧೀನ ಖಗಪತಿ ವಾಹನ…”, “ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೊ”, “ಎಲವೋ ಕುಂತೀ ಸುತನೇ” ಎಂಬಿತ್ಯಾದಿ ವಿವಿಧ ಸ್ವರ ಏರಿಳಿತದ ಸಮ್ಮಿಲನ-ಸಮತೋಲನ ಹೊಂದಿದ್ದ ‘ಬಲಿಪ’ ಶೈಲಿಗೆ ಅದರದ್ದೇ ಆದ ತೂಕ-ಸ್ಥರ… ಅಜ್ಜ ಬಲಿಪರು ಹುಟ್ಟುಹಾಕಿದ ಯಕ್ಷಗಾನ ತೆಂಕುತಿಟ್ಟು ಹಾಡುಗಾರಿಕೆಯ ಬಲಿಪ ಶೈಲಿಯ ಪ್ರಬಲ ಪ್ರತಿಪಾದಕ,ಕಾಸರಗೋಡು ಪೆರ್ಲ ಪಡ್ರೆಯ ಯಕ್ಷಗಾನ ಸೊಗಡಿನ ಮಣ್ಣಲ್ಲಿ ಹುಟ್ಟಿ ಬೆಳೆದು ಮೂಡುಬಿದಿರೆ ನೂಯಿಯಲ್ಲಿದ್ದು ತನ್ನ ಮುಂದಿನ ತಲೆಮಾರಿಗೆ ಬಲಿಪ ಛಾಪನ್ನು ಮೆರೆದ ಶ್ರೀ ಬಲಿಪ ನಾರಾಯಣ ಭಾಗವತರು ಇದೀಗ ನಿಧನರಾದ…

Read More

16 ಫೆಬ್ರವರಿ 2023, ಮಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕುತ್ತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾ ರಥೋತ್ಸವ ಶುಭ ಸಂದರ್ಭದಲ್ಲಿ ಸುವರ್ಣ ಸಾಂಸ್ಕೃತಿಕ ವೈಭವದ ಸಂಭ್ರಮವು ಫೆಬ್ರವರಿ 20ರಂದು ರಾತ್ರಿ ಏಳು ಗಂಟೆಗೆ ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ನಡೆಯಲಿದೆ. 13ನೇ ವರ್ಷದ ಈ ಸುವರ್ಣ ಸಾಂಸ್ಕೃತಿಕ ವೈಭವದ ಸಂಭ್ರಮದಲ್ಲಿ ನಾಡಿನ ಪ್ರತಿಷ್ಠಿತ ಮೂವರು ಕಲಾ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಭರತನಾಟ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ನಾಟ್ಯಾಚಾರ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಕಮಲಾಕ್ಷ ಆಚಾರ್, ಯಕ್ಷಗಾನದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಅರುವ ಕೊರಗಪ್ಪ ಶೆಟ್ಟಿ, ಸ್ಯಾಕ್ಸೋಫೋನ್ ಮಾಂತ್ರಿಕ ರಾಜ್ಯದ ಸ್ಯಾಕ್ಸೋಫೋನ್ ವಾದನದಲ್ಲಿ ಏಕೈಕ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರಾದ ಶ್ರೀ ಪ್ರಕಾಶ್ ದೇವಾಡಿಗ ಈ ಮೂರು ಮಂದಿಗೆ ಸುವರ್ಣ ರಂಗ ಸನ್ಮಾನ್ – 2023 ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ…

Read More

16 ಫೆಬ್ರವರಿ 2023, ಬೆಂಗಳೂರು:  ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಕೃತಿ, ಮಹಾಕವಿ ಕುವೆಂಪು ರವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ. ಫೆಬ್ರವರಿ 17ರಂದು ಸಂಜೆ 7ಕ್ಕೆ, ಕೆ. ಹೆಚ್. ಕಲಾಸೌಧ, ಹನುಮಂತನಗರ, ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ

Read More

ಶೂದ್ರ ಶಿವ…. ಈ ಒಂದು ಹೆಸರೇ ವಿಶಿಷ್ಠ ಮತ್ತು ವಿನೂತನ. ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆರಂಭಿಸಿದ ದೇವಾಲಯ ಸ್ಥಾಪನೆಯ ಸಂದರ್ಭದಲ್ಲಿ ಮೇಲ್ವರ್ಗದ ಪ್ರತಿರೋಧದ ಉಪಶಮನಕ್ಕಾಗಿ ತಳೆದ ಜಾಣ ನಡೆ, “ನಾನು ಪ್ರತಿಷ್ಠಾಪಿಸಿದ್ದು ನಿಮ್ಮ ಶಿವನನ್ನಲ್ಲ… ನಮ್ಮ ಶಿವನನ್ನು… ಅವನು ಶೂದ್ರ ಶಿವ.” ಎಂಬ ಶಾಂತ ಉತ್ತರ. ಇದೇ ಪರಿಕಲ್ಪನೆಯನ್ನು ಇಟ್ಟು ಕೊಂಡು ಹೊಸದಾಗಿ ಹುಟ್ಟಿಕೊಂಡ ರುದ್ರ ಥೇಟರ್, ಮಂಗಳೂರು ಇವರು ನಿರ್ಮಿಸಿ ಫೆಬ್ರವರಿ 5ರಂದು ಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಸ್ತುತ ಪಡಿಸಿದ ಚೊಚ್ಚಲ ಪ್ರಯೋಗವೇ ‘ಶೂದ್ರ ಶಿವ’ ಕನ್ನಡ ನಾಟಕ. ಇಂತಹದ್ದೊಂದು ಪ್ರಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ ಎಂಬ ಸುದ್ಧಿ ಕೆಲ ತಿಂಗಳ ಹಿಂದೆ ಬಂದಿದ್ದು ರುದ್ರ ಥೇಟರ್‌ನ ಉದ್ಘಾಟನೆಯೂ ವಿದ್ಯುಕ್ತವಾಗಿ ನಡೆದಿತ್ತು. ಬಳಿಕ ರಾಜ್ಯಾದ್ಯಂತದಿಂದ ಕಲಾವಿದರನ್ನು ಆಯ್ಕೆ ಮಾಡಿ ರಂಗ ತರಬೇತಿ ನಡೆಸಿ ನಾಟಕವನ್ನು ಸಿದ್ಧಗೊಳಿಸಲಾಯಿತು. ಇಂತಹ ಒಂದು ಪ್ರಯತ್ನದ ಬಗ್ಗೆ ಸಹಜವಾಗಿಯೇ ರಂಗಾಸಕ್ತರಲ್ಲಿ, ನಾರಾಯಣ ಗುರುಗಳ ಭಕ್ತರಲ್ಲಿ ಕುತೂಹಲ ಮೂಡಿತ್ತು. ನಾಟಕದ ವೀಕ್ಷಣೆಗೆ…

Read More

ಮಾನವನ ಬಾಳಿಗೆ ಬೆಳಕಾಗಬಲ್ಲ ಕೃತಿಗಳು ಹೆಚ್ಚು ಪ್ರಸ್ತುತ : ಡಾ.ನಿ.ಬೀ.ವಿಜಯ ಬಲ್ಲಾಳ್ 16 ಫೆಬ್ರವರಿ 2023, ಉಡುಪಿ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿಯ ಪ್ರವರ್ತಕ, ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ `ನಿತ್ಯ ಸತ್ಯ-ಬಾಳಿಗೆ ಬೆಳಕು ‘ ಕೃತಿಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಗುರುವಾರ ಎಂಜಿಎA ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ರಂಗಭೂಮಿ ಉಡುಪಿಯ ಎರಡನೇ ದಿನದ ರಂಗೋತ್ಸವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಾವು ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದೇವೆ. ಜೀವನದಲ್ಲಿ ನೆಮ್ಮದಿ ಕಡಿಮೆಯಾಗುತ್ತಿದೆ. ಹೀಗಾಗಿ ಬದುಕಿಗೆ ದಾರಿ ದೀಪವಾಗಬಲ್ಲ ಭಗವದ್ಗೀತೆ, ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಮೊದಲಾದ ಕೃತಿಗಳನ್ನು ಓದುತ್ತಾ ನೆಮ್ಮದಿಯ ಹುಡುಕಾಟ ನಡೆದಿದೆ. 1೦೦೦ದಷ್ಟು ಲೋಕೋಕ್ತಿಗಳನ್ನು ಹೊಂದಿರುವ ಈ ಕೃತಿ ಜನರ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು. ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರದ್ದು ಬಹುಮುಖ ಪ್ರತಿಭೆ. ಜಾನಪದ, ಯಕ್ಷಗಾನಕ್ಕೆ ಹೆಚ್ಚಿನ ಮನ್ನಣೆ ಕೊಟ್ಟವರು. ಸ್ವತ:…

Read More

16 ಫೆಬ್ರವರಿ 2023, ಮೈಸೂರು: ಶಿವರಾತ್ರಿಯ ಪ್ರಯುಕ್ತ ಚಿದಂಬರ ದೇಗುಲದಲ್ಲಿ ಫೆಬ್ರವರಿ 18ರಂದು ನಡೆಯುವ ವಿಜೃಂಭಣೆಯ “ನಾಟ್ಯಾಂಜಲಿ ಉತ್ಸವ”ದಲ್ಲಿ, ಮೂಲತಃ ಮಂಗಳೂರಿನವರಾದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಸಂಸ್ಥೆಯ ನೃತ್ಯ ಗುರುಗಳಾದ ವಿದುಷಿ ಶ್ರೀ ವಿದ್ಯಾ ಶಶಿಧರ್ ಮತ್ತು ಬಳಗದವರಿಂದ ಸಂಜೆ 6.30 ರಿಂದ ಭರತನಾಟ್ಯ ವೈಭವವು ಜರುಗಲಿದೆ. ತಂಜಾವೂರಿನ ಬೃಹದೇಶ್ವರ ದೇಗುಲದಲ್ಲಿ ಫೆಬ್ರವರಿ 19ರಂದು ಮಧ್ಯಾಹ್ನ 3.30 ರಿಂದ ನಡೆಯುವ “ಬೃಹನ್ ನಾಟ್ಯಂಜಲಿ”ಯಲ್ಲಿಯೂ ನೃತ್ಯ ಮತ್ತು ನಟವಾಂಗ ಕಲಾವಿದರಾಗಿ ಗುರು ವಿದುಷಿ ಶ್ರೀವಿದ್ಯಾ ಶಶಿಧರ್ ಅವರು ಪಾಲ್ಗೊಳ್ಳಲಿದ್ದಾರೆ.

Read More

16 ಫೆಬ್ರವರಿ 2023, ಪುತ್ತೂರು: ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಇವರು ಈ ಬಾರಿ ಶಿವರಾತ್ರಿಯ ಪ್ರಯುಕ್ತ ಚಿದಂಬರಂನಲ್ಲಿ ನಡೆಯುತ್ತಿರುವ ವಿಜೃಂಭಣೆಯ  “ನಾಟ್ಯಾಂಜಲಿ ಉತ್ಸವ”ದಲ್ಲಿ ಭರತನಾಟ್ಯ ಮತ್ತು ನಟವಾಂಗ ಕಲಾವಿದರಾಗಿ ಭಾಗವಹಿಸಲಿದ್ದಾರೆ. ತಂಜಾವೂರಿನ ಬೃಹದೇಶ್ವರ ದೇಗುಲದಲ್ಲಿ ನಡೆಯುವ “ಬೃಹನ್ ನಾಟ್ಯಾಂಜಲಿ”ಯಲ್ಲೂ ಭಾಗವಹಿಸಲಿದ್ದಾರೆ.ಇವರು ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆ, ಕಲಬುರಗಿ ಇದರ ನಿರ್ದೇಶಕರಾಗಿರುತ್ತಾರೆ.

Read More