Author: roovari

15 February 2015, Mangaluru: Ranga Adhyayana Kendra in collaboration with UGC STRIDE Project & Kannada Department will be organizing the Yaksharoopaka “NIRUTTARAAYANA”. This show will be staged by St Aloysius Yakshagaana Team on 17th February 2023 at 2:15pm in the LCRI Auditorium, St Aloysius Autonomous College, Mangalore. This is a unique performance using modern Theatrical lights & techniques within the traditional art form Yakshagana. The veteran Yakshagana artist Mr K Govinda Bhat will perform the character of Bhishma. The grand narratives of Bhishma will be presented with alternative perspectives in this tale & also raising questions on Bhishma’s silence in…

Read More

15 ಫೆಬ್ರವರಿ 2023, ಮಂಗಳೂರು: “ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಕಲಾವಿದನ ನೈಜ ಪ್ರತಿಭೆಯ ಅನಾವರಣ” – ಮೋಹನ್ ಕುಮಾರ್ ಉಳ್ಳಾಲ ಚಕ್ರಪಾಣಿ ನೃತ್ಯ ಕಲಾಕೇಂದ್ರದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಆವರಣದಲ್ಲಿ ಪುರುಷ ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಿದರು. ಕಲಾವಿದನಲ್ಲಿ ಲಯಬದ್ಧ ಚಲನೆ, ನಾಟಕೀಯತೆಯೊಂದಿಗೆ ನೃತ್ಯ ಸಂಯೋಜನೆ ಈ ಮೂರು ಅಂಶಗಳು ಇದ್ದಾಗ ಮಾತ್ರ ಗುಣಮಟ್ಟ ನಿರ್ಧಾರವಾಗುತ್ತದೆ ಎಂದು ಹಿರಿಯ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು. ಮುಖ್ಯ ಅತಿಥಿ ಸ್ಥಾನದಿಂದ ರತೀಂದ್ರನಾಥ್ ಮಾತನಾಡಿ ಕಲಾಸೇವೆಯೊಂದಿಗೆ ಶ್ರೀ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡ ಚಕ್ರಪಾಣಿ ಸಂಸ್ಥೆಯ ನಿರ್ದೇಶಕ ಶ್ರೀ ಸುರೇಶ್ ಅತ್ತಾವರ ಇವರನ್ನು ಅಭಿನಂದಿಸಿದರು. ಕ್ಷೇತ್ರದ ಮಾಜಿ ಆಡಳಿತ ಅಧ್ಯಕ್ಷ ಧರ್ಮಣ್ಣ ನಾಯಕ್ ಶುಭ ಹಾರೈಸಿದರು. ನಿರ್ದೇಶಕ ಸುರೇಶ್ ಅತ್ತಾವರ ಸ್ವಾಗತಿಸಿ, ಲಕ್ಮ್ಮೀಶ ನಿರೂಪಿಸಿ ವಂದಿಸಿದರು.

Read More

15 ಫೆಬ್ರವರಿ 2023, ಮಂಗಳೂರು: ಜಾತಿ ಮತ ಕಂದಕವ ಮೀರಿದ ಸಂತ ಕವಿ ಕನಕದಾಸರು: ಪುತ್ತೂರು ನರಸಿಂಹ ನಾಯಕ್ ಮುಡಿಪು: ಕನಕದಾಸರ ಸಾಹಿತ್ಯದ ಶಕ್ಯಿ, ಕಾವ್ಯದ ಶಕ್ತಿ ಅತ್ಯದ್ಭುತವಾದುದು. ಅಂದಿನ‌ ಕಾಲದಲ್ಲೇ ಅವರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ತೋರಿಸುವುದರ ಜೊತೆಗೆ ಮನಸ್ಸು ಮನಸ್ಸು ಗಳನ್ನು ಬೆಸೆಯುವ , ಜಾತಿ‌,‌ಮತ ಕಂದಕಗಳನ್ನು ದೂರಗೊಳಿಸುವ ಪ್ರಯತ್ನವನ್ನು ಮಾಡಿದವರು ಕನಕದಾಸರು ಎಂದು ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಹೇಳಿದರು. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಗಾಯನ ಮತ್ತು ಸಮೂಹ ನೃತ್ಯ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನಕದಾಸರ ಪ್ರತಿಯೊಂದು ಕಾವ್ಯದಲ್ಲೂ ಅವರ ಪ್ರಗತಿಪರ ಚಿಂತನೆ ಎದ್ದು ಕಾಣುತ್ತದೆ. ಪ್ರಗತಿಪರ ಚಿಂತನೆಯೊಂಂದಿಗೆ ಸಾಮರಸ್ಯವನ್ನು ತರುವಲ್ಲಿ ಕನಕರು ಕೊಂಡಿಯಾಗುವುದನ್ನು ಗಮನಿಸಲು ಸಾಧ್ಯವಾಗುತ್ತದೆ. ಕನಕದಾಸರ ಹಲವಾರು ಹಾಡುಗಳಲ್ಲಿ ಕಾವ್ಯದ…

Read More

15 ಫೆಬ್ರವರಿ 2023, ಮಂಗಳೂರು: ಫೆಬ್ರವರಿ 11 ಮತ್ತು 12ರಂದು ಸಂಪನ್ನಗೊಂಡ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಕುರಿತು ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಷಿ ಇವರ ಅನಿಸಿಕೆ “ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಕಾರ್ಕಳ, ಶಾಸಕ ರಘುಪತಿ ಭಟ್ ಹಾಗೂ ಸಂಘಟನಾ ಸಮಿತಿಯ ಎಲ್ಲರೂ, ಜಿ.ಎಲ್.ಹೆಗ್ಡೆ ಮತ್ತು ಅವರ ಬಳಗ, ಉಡುಪಿ ಕಲಾರಂಗ ಬಳಗ ತುಂಬಾ ದುಡಿದು ಒಂದು ಅದ್ಭುತವಾದ ಕೆಲಸ ಮಾಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಮುತುವರ್ಜಿ ಸಹಕಾರವೂ ಸ್ಮರಣೀಯ. ಅಕಾಡೆಮಿ ರಿಜಿಸ್ಟ್ರಾರ್ ಮತ್ತವರ ಸಿಬ್ಬಂದಿಗಳು, ಸ್ವಯಂಸೇವಕರು, ಅನೇಕ ದಾನಿಗಳು, ಸಹಕಾರಿ ಸಂಸ್ಥೆಗಳು, ದೇವಾಲಯಗಳ ಆಡಳಿತ ಮಂಡಳಿಗಳು ಜೊತೆಗಿದ್ದು ಸಹಕರಿಸಿದ್ದು ಶ್ಲಾಘನೀಯ. ಅದಕ್ಕೆ ಪೂರಕವಾಗಿ ಮಾಹೆಯವರ ಬಿ. ಎಡ್. ಕಾಲೇಜೂ ಸಿಕ್ಕಿತು. ಎಂ. ಜಿ. ಎಂ. ಕಾಲೇಜಿಗೂ ಇದು ಹತ್ತಿರವಾಯಿತು. ಉತ್ತಮ ಜಾಗ ಮತ್ತು ಎಲ್ಲಾ ಸೌಕರ್ಯಗಳಿರುವ ಜಾಗವೂ ಹೌದು. ಅತ್ಯಲ್ಪ…

Read More

15 ಫೆಬ್ರವರಿ 2023, ಉಡುಪಿ: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಫೆಬ್ರವರಿ 12ರಂದು ಜರುಗಿದ ಸರಣಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅರುಣ ಜ್ಯುವೆಲರ್ಸ್ ಮಾಲಕ ಅರುಣ್ ಜಿ. ಶೇಟ್ ಮೇಲಿನಂತೆ ನುಡಿದರು.ಯಕ್ಷಗಾನವನ್ನು ಹಿಂದಿನವರು ಅತ್ಯಂತ ಶೃದ್ಧೆಯಿಂದ ಪ್ರದರ್ಶಿಸುತ್ತಲಿದ್ದರು.ಕೇಳುಗರು ಇಲ್ಲದಿದ್ದರೂ ದೇವರ ಆರಾಧನೆ ಎಂಬ ನೆಲೆಯಲ್ಲಿ ಕಲಾ ಸೇವೆ ಮಾಡುತ್ತಿದ್ದುದೇ ಯಕ್ಷಗಾನದ ಉಳಿವಿಗೆ ಕಾರಣ ಎಂದರು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ,ಶ್ರೀ ಮಹಾಮಾಯೀ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಹಾರ್ಮೋನಿಯಂ ವಾದಕನಾಗಿ ಸಂಘದಲ್ಲಿ ಸೇವೆ ಮಾಡುತ್ತಿದ್ದ ಭವಾನಿಶಂಕರ ಆಚಾರ್ಯರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು. ಸಂಘದ ಬಯಲಾಟದಂದೂ ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುತ್ತಿದ್ದ ಭವಾನಿ ಶಂಕರರ ಸೇವೆ ಅನನ್ಯ ಎಂದು ಶ್ಲಾಘಸಿದರು. ಸಂಘಟನಾ ಕಾರ್ಯದರ್ಶಿ ಅಶೋಕ್ ಬೋಳೂರು ಸಂಮಾನ ಪತ್ರದ ವಾಚನ ಗೈದರು. ಕೀರ್ತಿಶೇಷ ಪೆರ್ಲ ಕೃಷ್ಣ ಭಟ್ಟರು ವಾಗೀಶ್ವರೀ ಯಕ್ಷಗಾನ ಸಂಘದಲ್ಲಿ ಅರ್ಥಧಾರಿಯಾಗಿ ಭಾಗವಹಿಸಿ ಸಲ್ಲಿಸಿದ್ದ ಸೇವೆಗಾಗಿ ನುಡಿ ನಮನ ಸಲ್ಲಿಸಲಾಯಿತು.ಉಡುಪಿಯಲ್ಲಿ ಜರಗಿದ ಪ್ರಪ್ರಥಮ…

Read More

15 ಫೆಬ್ರವರಿ 2023, ಮಂಡ್ಯ: ರಂಗಬಂಡಿ ಮಳವಳ್ಳಿ ಟ್ರಸ್ಟ್ (ರಿ). ಇದರ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ಇದೇ 16/02/2023ರಂದು ಸಂಜೆ 6:00ಕ್ಕೆ ಬಯಲು ರಂಗಮಂದಿರ ಶಾಂತಿ ಕಾಲೇಜು ಅವರಣ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ಸಹಕಾರದೊಂದಿಗೆ ನಡೆಯಲಿದೆ. ಗಂಗೆ ಗೌರಿ ಪ್ರಸಂಗ – ನಾಟಕದ ಬಗ್ಗೆ ಬೆಸ್ತರ ಹುಡುಗಿ ಗಂಗೆ ಭುವಿಗೆ ಬಂದ ಶಿವನಲ್ಲಿ ಮೋಹಗೊಳ್ಳುತ್ತಾಳೆ.ಶಿವ ಗಂಗೆಯಲ್ಲಿ ಅನುರಕ್ತ ನಾಗಿ ಅವಳನ್ನು ತನ್ನ ಜಡೆಯಲ್ಲಿ ಹುದುಗಿಸಿಕೊಂಡು ಕೈಲಾಸಕ್ಕೆ ಕರೆದೋಯ್ಯುತಾನೆ. ಸವತಿ ಮತ್ಸರ್ಯದಿಂದ ಗೌರಿ ಗಂಗೆಯನ್ನು ಹೀನಕುಲದವಳೆಂದು ಜರಿದು ಕೈಲಾಸದಿಂದ ಹೊರ ಅಕಲು ಬಯಸುತ್ತಾಳೆ. ಗಂಗೆ ಕೈಲಾಸದಿಂದ ಹೊರಡುವಾಗ ಗೌರಿ ಹೊರಗಾಗುತ್ತಾಳೆ (ಮುಟ್ಟಗುತ್ತಾಳೆ ). ಗೌರಿ ಸೂತಕದಿಂದ ಹೊರಬರಬೇಕಾದರೆ ಗಂಗೆ ಬೇಕೇಬೇಕೆಂದು ಅರಿತ ಗಂಗೆ ಕೈಲಾಸದಿಂದ ಮಾಯವಾಗುತ್ತಾಳೆ. ಗಂಗೆಯನ್ನು ತರಲು ಗೌರಿ ವೀರಣ್ಣನನ್ನು ಭೂಮಿಗೆ ಕಳಿಸುತ್ತಾಳೆ. ಭೂಮಿಯಲ್ಲೂ ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಜನರು ಎಲ್ಲ ನದಿಯ ನೀರನ್ನು ಕಲುಷಿತ ಮಾಡಿದ್ದಾರೆ.…

Read More

13 ಫೆಬ್ರವರಿ 2023, ಮಂಗಳೂರು: ನಿಲ್ಲದ ಕಾಲ ,ಸಿಗದ ಬಿಡುವು, ಸತ್ತ ಬದುಕು,ಇವೆಲ್ಲದರ ನಡುವೆ ತಪ್ಪಿಸಿಕೊಳ್ಳಲಾಗದಂತೆ ತಮ್ಮನ್ನು ತಾವೇ ಬಂಧಿಸಿಕೊಂಡಿರುವ ನಗರವಾಸಿಗಳ ಆಂತರ್ಯದ ಕೂಗು ಕೆಂಡೋನಿಯನ್ಸ್. ಇಲ್ಲಿ Hope for the best ಎನ್ನುತ್ತಲೇ ನಾಗರಿಕತೆಯ ಅಲಗಿಗೆ ಕೊರಳೊಡ್ಡಬೇಕು. ಮ್ಯಾನೇಜರ್, ಆಫೀಸರ್, ಜವಾನ, ಎನ್ನುತ್ತಾ ಕಟ್ಟಿಕೊಂಡಿರುವ ತಾರತಮ್ಯದ ಹೈರಾರ್ಕಿಯಲ್ಲಿ ಎಲ್ಲರೂ ಸಮಾನ ದುಃಖಿಗಳೇ. ಇವರನ್ನೆಲ್ಲೋ ನೋಡಿದ್ದೀನಿ ಎನ್ನುತ್ತಾ ಪಾತ್ರಧಾರಿ ದಾಮು ಗ್ರಾಮಗಳಿಂದ ನಗರಗಳಿಗೆ ಎಳೆದು ತರುವ ಭ್ರಮೆಗಳೊಡನೆ ನಗುತ್ತಲೇ ವ್ಯವಹರಿಸುತ್ತಾನೆ, ತನ್ನ ಹಳ್ಳಿಯನ್ನು ನೆನಪಿಸುತ್ತಾ ನಮ್ಮನ್ನು ಜೊತೆಯಲ್ಲೇ ಕರೆದೊಯ್ಯುತ್ತಾನೆ. ನಮ್ಮದೇ ಕಥೆಯನ್ನು ನಮ್ಮ ಮುಂದೆ ಹರವಿ ನಿಲ್ಲುತ್ತಾನೆ. ಅದೇ ದಾಮು ಸರ್ಕಸ್ನಲ್ಲಿ ಕುಣಿಯುತ್ತಾ ನಲಿಯುತ್ತಾ ಹಸಿವಿನಿಂದ ಬಳಲುತ್ತಾ ವೀಕೆಂಡ್ಗಳಿಗೆ ಕಾಯುವ ನಮ್ಮನ್ನು ಅಣಕಿಸುತ್ತಾನೆ. “ಇಲ್ಲೊಂದು ಮೆಷಿನ್ ಇದೆ ಅದರಲ್ಲಿ ನನೆಲ್ಲಾ ನೋಡ್ಬಹುದು, ನಾನ್ಯಾರಿಗೂ ಕಾಣೋದಿಲ್ಲ” ಎನ್ನುತ್ತಾ ಕಟ್ಟಿಕೊಡುವ ಜಾತ್ರೆಯ ದೃಶ್ಯ ಗದ್ಗದಿತವಾಗುವಂತೆ ಮಾಡುತ್ತದೆ. ದಾಮೂ, ಪುಷ್ಪ ,ದಿನೇಶ, ಅಷ್ಪಕ್, ಸಿಪ್ರಿಯನ್ ಪಾತ್ರಗಳು ನಮ್ಮ ಸುತ್ತವೇ ಕನ್ನಡಕ ಹಾಕಿ “ಸ್ಟೈಲಾಗಿ ಕಾಣ್ತಿರಬಹುದು. ಆದ್ರೆ…

Read More

ಪ್ರತಿಯೊಬ್ಬರನ್ನೂ ಒಳಗೊಳ್ಳುವ, ಸಮಾಜ ಬೆಸೆವ ಕಲೆ ಯಕ್ಷಗಾನ 13 ಫೆಬ್ರವರಿ 2023, ಉಡುಪಿ: ಭಾರತೀಯ ಸಂಸ್ಕೃತಿಯ ಮೂವರು ಮಕ್ಕಳಂತಿರುವ ವೇದ ವೇದಾಂತ, ಮಹಾಕಾವ್ಯಗಳ ಹೊರತು ಪುರಾಣ ಪ್ರಪಂಚದ ವಿರುದ್ಧ ಸೋ ಕಾಲ್ಡ್ ಬುದ್ಧಿ ಜೀವಿಗಳು ದಾಳಿ ನಡೆಸಿ ಸಮಾಜ ಒಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಉಡುಪಿ ಮೂಲದ ಬೆಂಗಳೂರಿನ ಲೇಖಕ ರೋಹಿತ್ ಚಕ್ರತೀರ್ಥ ಆರೋಪಿಸಿದ್ದಾರೆ. ಅವರು ಕುಂಜಿಬೆಟ್ಟಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಂಗವಾಗಿ ಕೆರೆಮನೆ ಶಿವರಾಮ ಹೆಗಡೆ ವೇದಿಕೆಯಲ್ಲಿ ಗೋಷ್ಟಿಗಳನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಪೂರ್ಣ ಲಿಖಿತವೂ ಆಶುವೂ ಅಲ್ಲದ, ಪಠ್ಯ ಗದ್ಯಗಳ ಸಮ್ಮಿಲನ, ದೇಶಿ ಮತ್ತು ಮಾರ್ಗ, ಸಂಸ್ಕೃತಿ ಮತ್ತು ಪ್ರಾದೇಶಿಕತೆ, ಪೌರಾಣಿಕಮತ್ತು ಸಾಮಾಜಿಕ ಸಮಸ್ಯೆಗಳ ಸಮನ್ವಯವೇ ಯಕ್ಷಗಾನ. ಬೌದ್ಧಿಕ, ಭಾವನಾತ್ಮಕತೆ ಪ್ರಚೋದಿಸುವ, ಪಂಡಿತ ಪಾಮರರನ್ನೂ ತಲುಪುವ ಯಕ್ಷಗಾನ ಮಾನಸಿಕ ಸಂಸ್ಕಾರ ನೀಡಬಲ್ಲದು. ಜಗತ್ತಿನ ರಾಷ್ಟ್ರಗಳ ನಾಗರಿಕತೆ ಮ್ಯೂಸಿಯಂಗಳಲ್ಲಿದ್ದರೆ ಜೀವಂತವಾದ ಭಾರತೀಯ ನಾಗರಿಕತೆಯಲ್ಲಿ ಸಾಂಸ್ಕ?ತಿಕವಾಗಿ ಜೀವಂತಿಕೆಯುಳ್ಳ ಯಕ್ಷಗಾನ ಕಲೆಯ ಬಗ್ಗೆ ಹೆಮ್ಮೆ, ಗೌರವದ ಜತೆಗೆ ಎಚ್ಚರವೂ…

Read More

13 ಫೆಬ್ರವರಿ 2023, ಬೆಳಗಾವಿ: ರಂಗಸಂಪದ ಬೆಳಗಾವಿ ಫೆಬ್ರವರಿ 11 ಮತ್ತು 12ರಂದು ಆಯೋಜಿಸಿದ ಎರಡು ದಿನಗಳ ರಂಗತರಬೇತಿ ಕಾರ್ಯಾಗಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಅತೀ ಯಶಸ್ವಿಯಾಗಿ ಮೂಡಿಬಂತು. 16 ರಿಂದ 70 ವರ್ಷ ವಯಸ್ಸಿನ 25 ಅತೀ ಉತ್ಸಾಹೀ ರಂಗಾಸಕ್ತರು ತಮ್ಮ ಜೀವನದ ಸರ್ವ ಶ್ರೇಷ್ಠ ರಂಗತರಬೇತಿಯನ್ನು ಆನಂದಿಸಿದರು. ತರಬೇತಿದಾರ ಶ್ರೀ. ವೈಭವ ಲೋಕೂರ ಅವರ ಶ್ರೇಷ್ಟ ರಂಗತರಬೇತಿ ಎಲ್ಲರನ್ನೂ ಸತತವಾಗಿ ಒಂದು ಬೇರೆಯೇ ಲೋಕಕ್ಕೆ ಕೊಂಡೊಯ್ದು ವಿಶಿಷ್ಟ ಅನುಭವ ನೀಡಿತು. ರಂಗಸಂಪದ ಬೆಳಗಾವಿ ಮತ್ತೊಮ್ಮೆ ರಂಗಭೂಮಿಯ ಮತ್ತೊಂದು ಚಟುವಟಿಕೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿತು.

Read More

13 ಫೆಬ್ರವರಿ 2023, ಮಂಗಳೂರು:  “ಕಲೆ ಒಂದು ಧ್ಯಾನ. ಕಲೆಯನ್ನು ಪ್ರೀತಿಸಿ.” ಕುಳಾಯಿ ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ಆಶ್ರಯದ ರಜತ ಸಂಭ್ರಮದ ಪ್ರಯುಕ್ತ ” ನೃತ್ಯ ಶರಧಿ ” ಸರಣಿ ಕಾರ್ಯಕ್ರಮವು ಫೆಬ್ರವರಿ 12ರಂದು ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ನಟರಾಜನಿಗೆ ದೀಪ ಹಚ್ಚಿ ಸಾಂಕೇತಿಕವಾಗಿ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾತನಾಡುತ್ತ ” ಕಲೆ ಒಂದು ಧ್ಯಾನ. ನಾವು ಕಲೆಯನ್ನು ಪ್ರೀತಿಸಿದರೆ, ಸಮಾಜವೇ ಪ್ರೀತಿಸುತ್ತದೆ.” ಎಂದು ಹೇಳುವ ಮೂಲಕ ನೃತ್ಯ ಕಲೆಯ ಬಗ್ಗೆ ಅವರಿಗಿರುವ ಅಭಿಮಾನ ಪ್ರಕಟವಾಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪಿ. ಕಮಲಾಕ್ಷ ಆಚಾರ್ “ನೃತ್ಯ ಪಾರಮಾರ್ಥಿಕ ಕಲೆ. ಅದು ಕೊಡುವ ಪರಮಾನಂದ ಭಗವಂತನನ್ನು ತಲುಪುವುದಕ್ಕೆ ಸಾಧನವಾಗಿದೆ. ” ಎಂದರು. ನೃತ್ಯ ಗುರು ವಿದುಷಿ ಭಾರತಿ ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರಿಯಾದ ಸಮಯಕ್ಕೆ ಆರಂಭಿಸಿ ಸಮಯ ಪ್ರಜ್ಞೆಯನ್ನು ಮರೆದಿರುವುದು ಗಮನಾರ್ಹ. ಸಂಸ್ಥೆಯ ಸದಸ್ಯೆಯರಿಂದ ನೃತ್ಯ ಪ್ರದರ್ಶನ ನಡೆಯಿತು.…

Read More