Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತಿಗಳ ಮನೆ ಭೇಟಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 02-10-2023ರಂದು ಹಿರಿಯ ಸಾಹಿತಿ, ಸಂಶೋಧಕ ಡಾ.ಅಮೃತ ಸೋಮೇಶ್ವರ ಅವರನ್ನು ಸೋಮೇಶ್ವರದ ಅವರ ಮನೆ ‘ಒಲುಮೆ’ಯಲ್ಲಿ ಭೇಟಿಯಾಗಿ ಗೌರವಿಸಲಾಯಿತು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಅಮೃತರ ಪರವಾಗಿ ಪತ್ನಿ ಶ್ರೀಮತಿ ನರ್ಮದಾ ಸೋಮೇಶ್ವರ ಇವರನ್ನು ಗೌರವಿಸಿ ಅಮೃತರ ವ್ಯಕ್ತಿತ್ವದ ಮಾನವೀಯತೆಯನ್ನು ಕುರಿತು ಮಾತನಾಡಿದರು. ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ದ.ಕ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಸೋಮೇಶ್ವರ ಗ್ರಾಮ ಸಂಚಾಲಕ ಕಲಾವಿದ ತೋನ್ಸೆ ಪುಷ್ಕಳ ಕುಮಾರ್, ಅಮೃತರ ಮಗ ಸಾಹಿತಿ ಡಾ.ಚೇತನ ಸೋಮೇಶ್ವರ, ಜೀವನ್, ಸೊಸೆ ಸತ್ಯಜೀವನ್ ಮತ್ತಿತರರು ಉಪಸ್ಥಿತರಿದ್ದರು.
ಉಚ್ಚಿಲ : ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಾಸುದೇವ ರಾವ್ ಇವರ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ‘ರುಕ್ಮಿಣಿ ಕಲ್ಯಾಣ’ವು ದಿನಾಂಕ 30-09-2023ರಂದು ನಡೆಯಿತು. ಹಿಮ್ಮೇಳದಲ್ಲಿ ರಾಘಣ್ಣ ಉಚ್ಚಿಲ, ಸುರೇಶ ಭಟ್ ಸಾಂತೂರು ಭಾಗವತರಾಗಿ ಸತೀಶ ಆಚಾರ್ಯ ಕಾಪು, ಮನೀಷ್ ರಾವ್ ಪಡುಬಿದ್ರಿ ಮತ್ತು ಸುರೇಶ ಭಟ್ ಚಂಡೆ ಮದ್ದಳೆಯಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಇದರ ಸದಸ್ಯೆರಾದ ಶ್ರೀಮತಿಯರಾದ ಸುಲೋಚನ ವಿ. ರಾವ್ (ರುಕ್ಮ), ಸುಮಿತ್ರ ಶಶಿಕಾಂತ ಕಲ್ಲೂರಾಯ (ಶ್ರೀಕೃಷ್ಣ), ಸುಮತಿ ಭಟ್ ಕೆ.ಯನ್. (ರುಕ್ಮಿಣಿ)ಯಾಗಿಯೂ, ವಿಶ್ವನಾಥ ಸಾಂತೂರು (ಭೀಷ್ಮಕ), ಅಶೋಕ ನಾಯಕ್ (ಬಲರಾಮ), ಜನಾರ್ದನ ಆಚಾರ್ಯ (ಅಗ್ನಿದ್ಯೋತ), ರಂಗನಾಥ ಭಟ್ ಕಳತ್ತೂರು (ಶಿಶುಪಾಲ) ಮತ್ತು ಮೋಹನ ಕಟಪಾಡಿ (ಚಾರಕ)ನಾಗಿ ಭಾಗವಹಿಸಿ ನಡೆಸಿಕೊಟ್ಟರು.
ಮೂಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಸಾಹಿತ್ಯ ಬೆಳಕು ಕಾರ್ಯಕ್ರಮವು ದಿನಾಂಕ 01-10-2023ರ ಭಾನುವಾರ ಸಂಜೆ ಬಪ್ಪನಾಡಿನ ಮಾತಾ ಪಂಚದುರ್ಗಾ ರೆಸಿಡೆನ್ಸಿಯ ಮಾಳಿಗೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು “ವಿಶಿಷ್ಟ ಕಲ್ಪನೆಯ ಇಂತಹ ಸಾಹಿತ್ಯ ಕಾರ್ಯಕ್ರಮಗಳು ಸಾಹಿತ್ಯಾಸಕ್ತರನ್ನು ಹೆಚ್ಚಿಸಲಿ ಹಾಗೂ ಮಕ್ಕಳಿಗೂ ಪ್ರೇರಣೆ ನೀಡಲಿ” ಎಂದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳೈರು ಮಾತನಾಡಿ “ಕಡಲ ಕತ್ತಲೆ, ಪಶ್ಚಿಮ ಘಟ್ಟದ ಕತ್ತಲೆಯ ನಡುವಿನ ಈ ಸ್ಥಳದಲ್ಲಿ ಬೆಳಕಿನ ಚಿಂತನೆ ವಿಶಿಷ್ಟವಾದುದು” ಎಂದರು. ಕಾರ್ಯಕ್ರಮದಲ್ಲಿ ಬೆಳಕಿನ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಕಲಾವಿದ ತಾರಾನಾಥ ವರ್ಕಾಡಿ “ಕತ್ತಲಿದ್ದಾಗ ಬೆಳಕಿನ ಅನುಭವ. ಬೆಳಕೆಂದರೆ ಜ್ಞಾನ, ಆಧ್ಯಾತ್ಮ, ಧನಾತ್ಮಕ ಚಿಂತನೆ, ವಿಜ್ಞಾನ, ಆಧ್ಯಾತ್ಮ ಹೀಗೆ ಎಲ್ಲವೂ ಬೆಳಕಿನ ಚಿಂತನೆಯಲ್ಲೇ ಇರುವಂತಹವು. ನಮ್ಮೊಳಗಿನ ಬೆಳಕು ಬೆಳಗುವ ನಿಟ್ಟಿನಲ್ಲಿ ನಮ್ಮ ಓದು, ಅಧ್ಯಯನ, ನಡುವಳಿಕೆ ಇತ್ಯಾದಿಗಳಿರಬೇಕು, ದಿವ್ಯ ಬೆಳಕೆಂದರೆ ಪರಬ್ರಹ್ಮ, ಅಪರಿಮಿತ ಆನಂದದ ಆ…
ಸಾಗರ ಗಾತ್ರದ ಪ್ರಾಚೀನ ಕಥಾಸಂಪತ್ತಿದ್ದೂ ಪಾಶ್ಚಾತ್ಯ ಸಣ್ಣಕತೆಗಳ ಪ್ರವಾಹದೆದುರು ನಾವು ಕಂಗಾಲಾದೆವು. ನಮ್ಮ ದೇಶದ ಸಾಹಿತ್ಯ ಹೊರಗಿನಿಂದ ಬಂದದ್ದೆಂದೂ ಅದು ನಡೆಯದ ನಾಣ್ಯವೆಂದೂ ಆಕ್ರಮಣಕಾರರು ಘೋಷಿಸಿದ್ದರು. ಅಷ್ಟೊಂದು ಮೋಡಿ ಮಾಡುವ ಶಕ್ತಿ ಪಾಶ್ಚಾತ್ಯ ಸಾಹಿತ್ಯಕ್ಕೆ ಸಿಕ್ಕಿದ್ದೂ ಸತ್ಯ. ಅದಕ್ಕೆ ಕಾರಣಗಳೂ ಇವೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ವಲಯಗಳಲ್ಲಿ ತಾವು ಆಕ್ರಮಿಸಿದ ದೇಶಗಳಲ್ಲಿ ಸುಧಾರಣೆಗಳನ್ನು ತರುವುದಕ್ಕೆ ಶ್ರಮಿಸಿದ ಬ್ರಿಟಿಷರು ನಮಗಿಂತ ಮೊದಲೇ ಯಂತ್ರಗಳ ಬಳಕೆಯನ್ನು ಆರಂಭಿಸಿದ್ದರು. ಮುದ್ರಣ ಯಂತ್ರಗಳ ಮೂಲಕ ಅವರು ಪತ್ರಿಕೆಗಳನ್ನು ಬಳಕೆಗೆ ತಂದರು. ಸಾರಿಗೆ ಸೌಕರ್ಯವನ್ನು ಅಭಿವೃದ್ಧಿಪಡಿಸಿಕೊಂಡು ನಮಗಿಂತ ಮೊದಲೇ ನಾಗರಿಕರೆನಿಸಿಕೊಂಡರು. ಬರೆದ ತಕ್ಷಣ ಸಾಹಿತ್ಯ ಕೃತಿಗಳನ್ನು ಓದುಗರಿಗೆ ತಲುಪಿಸುವುದಕ್ಕೆ ಸಾಧ್ಯವಾದಂದಿನಿಂದ ನಮ್ಮ ದೇಶದಲ್ಲೂ ಕಥಾ ರಚನೆಗೆ ವೇಗ ಸಿಕ್ಕಿತು. ಆಧುನಿಕ ಕಥಾ ಸಾಹಿತ್ಯಕ್ಕೂ ಚಾಲನೆ ದೊರಕಿತು. ಭಾರತೀಯ ಸಾಹಿತ್ಯಲೋಕದಲ್ಲಿ ಆಧುನಿಕ ಸಣ್ಣಕತೆ ದೇಶದಾದ್ಯಂತ ಚಿಗುರೊಡೆಯಿತು. ಸಾಹಿತ್ಯ ರಚನೆಗಳಲ್ಲಿ ರೈಲು, ಬಸ್ಸು, ಕಾರು, ಅಫೀಮು, ಕೋರ್ಟು ಕಛೇರಿ, ಬ್ಯಾಡ್ಮಿಂಟನ್, ಸೊಳ್ಳೆ ಬಲೆ, ಸಾಬೂನು, ಕ್ವಿನೀನು ಇದ್ದುವು. ಮುಕ್ತ ಪ್ರೇಮ ಕಾಮ…
ಬೆಂಗಳೂರು : ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲಾ ಘಟಕ ಆಯೋಜಿಸುವ ತಿಂಗಳ ಕಾರ್ಯಕ್ರಮ ದಿನಾಂಕ 06-10-2023 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಇರುವ ಸಚಿವಾಲಯ ಕ್ಲಬ್ಬಿನ ಸಿ.ಎಂ.ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗಾಂಧೀಜಿ – ಸಮಕಾಲೀನ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ.ಅಶ್ವತ್ಥ ನಾರಾಯಣ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಭಾರತದ ಅಧ್ಯಕ್ಷರಾದ ಶ್ರೀ ಕಿಗ್ಗ ರಾಜಶೇಖರ್ ಎಸ್.ಜಿ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಲಕರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವರ ಸ್ವಾಗತ ಕೋರಿದ್ದಾರೆ.
ಬೆಂಗಳೂರು: ‘ನಮ್ಮ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದು ಖ್ಯಾತ ಪತ್ರಕರ್ತ, ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಾದ ಪಿ. ಸಾಯಿನಾಥ್ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ಇಂದು ‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಪಿ ಸಾಯಿನಾಥ್ ಅವರ, ಜಿ ಎನ್ ಮೋಹನ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಕೊನೆಯ ಹೀರೋಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಬಹುರೂಪಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಿ ಸಾಯಿನಾಥ್ ಅವರ ‘ಕೊನೆಯ ಹೀರೋಗಳು’ ಕೃತಿಯನ್ನು ಹಿರಿಯ ವಿದ್ವಾಂಸರಾದ ಪ್ರೊ ಪುರುಷೋತ್ತಮ ಬಿಳಿಮಲೆ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀಜಾ ವಿ ಎನ್, ಡಾ ವಿಜಯಮ್ಮ, ಸ್ವಾತಂತ್ರ್ಯ ಹೋರಾಟದ ಕುಟುಂಬಸ್ಥರು, ಎಚ್ ಎನ್ ನಾಗಮೋಹನ ದಾಸ್, ಎನ್ ಆರ್ ವಿಶುಕುಮಾರ್, ಜಿ ಎನ್ ಮೋಹನ್ ಉಪಸ್ಥಿತರಿದ್ದರು. ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ನಾಶವನ್ನು ತಡೆಯುವುದ ತುರ್ತು ಅಗತ್ಯವಾಗಿದೆ. ಕೇಂದ್ರ ಸರಕಾರವು ರೂಪಿಸುತ್ತಿರುವ ಕಾಯಿದೆಗಳು ಜನ ವಿರೋಧಿಯಾಗಿದೆ. ಸಮಾಜವನು ನಿಧಾನವಾಗಿ ಉಸಿರುಗಟ್ಟಿಸುತ್ತಿದೆ. ರೈತರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ರೈತರ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಾಗಿರಲಿಲ್ಲ,…
ಮಂಗಳೂರು: ಹಿರಿಯ ನೃತ್ಯ ಗುರು ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ಗುರು ಬಿ.ಪ್ರೇಂನಾಥ್ ದಿನಾಂಕ 01-10-2023ರಂದು ಮಧ್ಯಾಹ್ನ ತಮ್ಮ 87ನೇ ವಯಸ್ಸಿನಲ್ಲಿ ಇಹವನ್ನು ತ್ಯಜಿಸಿದ್ದಾರೆ. ಗುರು ಪರಂಪರೆಯಿಂದ ಬಂದ ಶಾಸ್ತ್ರೀಯ ನೃತ್ಯ ಕಲೆಯ ಶುದ್ಧತೆಯನ್ನು ಉಳಿಸಿ ಬೆಳೆಸಿ ನೃತ್ಯ ಕಲೆಗೆ ನ್ಯಾಯ ಒದಗಿಸಿದ ನೃತ್ಯ ಗುರುಗಳಲ್ಲಿ ಹಿರಿಯರಾದ ಪ್ರೇಂನಾಥ್ ಇವರೂ ಒಬ್ಬರು. 1961ರಲ್ಲಿ ‘ಲಲಿತ ಕಲಾ ಸದನ’ ಎಂಬ ಹೆಸರಿನಲ್ಲಿ ನೃತ್ಯ ಸಂಗೀತ ಶಾಲೆಯನ್ನು ಮಂಗಳೂರಿನ ಉರ್ವಸ್ಟೋರ್ ನಲ್ಲಿ ಸ್ಥಾಪಿಸಿದರು. ಗುರುಗಳು ತಾವು ಮಾತ್ರ ನೃತ್ಯ ಶಾರದೆಯ ಸೇವೆ ಮಾಡಿದ್ದಲ್ಲದೆ ತಮ್ಮ ಪೂರ್ಣ ಕುಟುಂಬವೇ ಭರತನಾಟ್ಯ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳಿಗೆ ಮಾರ್ಗದರ್ಶನ ಮಾಡಿದವರು. ಅಭಿನಯ ಶಿರೋಮಣಿ ಗುರು ರಾಜರತ್ನಂ ಪಿಳ್ಳೆಯವರಿಂದ ಪಂದನಲ್ಲೂರು ಶೈಲಿಯ ಭರತನಾಟ್ಯ ಪಾಠವನ್ನು ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಸಮರ್ಪಣಾ ಭಾವದಿಂದ ಕಲಾಮಾತೆಗೆ ನ್ಯಾಯ ಒದಗಿಸಿದ್ದಾರೆ. ದೇಶ-ವಿದೇಶಗಳಲ್ಲಿ ಶಿಷ್ಯರನ್ನು ಹೊಂದಿದ್ದ ಇವರು ಕಥಕ್ಕಳಿ, ಭರತನಾಟ್ಯ ಅಭ್ಯಾಸದೊಂದಿಗೆ ಸಂಗೀತ, ಮೃದಂಗ ವಾದನವನ್ನೂ ಕಲಿತಿದ್ದರು. ಕರಾವಳಿ ನೃತ್ಯ ಕಲಾ ಪರಿಷತ್…
ಕೊಚ್ಚಿ : ಮಾತಂಗಿ ಮತ್ತು ಅಕ್ಬರ್ ಟ್ರಾವೆಲ್ಸ್ ಪ್ರಸ್ತುತಪಡಿಸುವ ‘ಮಾತಂಗಿ ಫೆಸ್ಟಿವಲ್ 2023’ ಕಾರ್ಯಕ್ರಮವು ದಿನಾಂಕ 02-10-2023ರಿಂದ 06-10-2023ರವರೆಗೆ ಕೊಚ್ಚಿಯ ತ್ರಿಪುನಿಥುರ, ಜೆ.ಟಿ.ಪಿ.ಎ.ಸಿ.ಯಲ್ಲಿ ನಡೆಯಲಿದೆ. ದಿನಾಂಕ 02-10-2023ರಂದು ನವ್ಯಾ ನಾಯರ್, ದಿನಾಂಕ 03-10-2023ರಂದು ರಮಾ ವೈದ್ಯನಾಥನ್, ದಿನಾಂಕ 04-10-2023ರಂದು ಮೀನಾಕ್ಷಿ ಶ್ರೀನಿವಾಸನ್, ದಿನಾಂಕ 05-10-2023ರಂದು ಪ್ರಿಯದರ್ಶಿನಿ ಗೋವಿಂದ್ ಮತ್ತು ದಿನಾಂಕ 06-10-2023ರಂದು ಜಾನಕಿ ರಂಗರಾಜನ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ನವ್ಯಾ ನಾಯರ್ : ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಎದ್ದು ಕಾಣುವ ನಟಿಯರಲ್ಲಿ ಒಬ್ಬರಾದ ನವ್ಯಾ ನಾಯರ್ ಭಾರತೀಯ ನೃತ್ಯ ಸಂಪ್ರದಾಯವನ್ನು ಮೀರಿದ ಅಯಸ್ಕಾಂತೀಯ ಆಕರ್ಷಣೆಯನ್ನು ಹೊಂದಿದ್ದಾರೆ. ಅವರ ನೃತ್ಯ ಕೌಶಲ್ಯವು ಭಾವನೆಗಳ ಸ್ವರಮೇಳವಾಗಿದೆ. ಸೊಗಸಾದ ಚಲನೆಗಳು ಮತ್ತು ಅಭಿವ್ಯಕ್ತಿಯು ಸನ್ನೆಗಳ ಮತ್ತು ಭಂಗಿಗಳ ಮೂಲಕ ವ್ಯಕ್ತವಾಗುತ್ತದೆ. ಈ ಭಾವಪೂರ್ಣವಾದ ಪ್ರದರ್ಶಕರು ಕೇರಳ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಂದ ಗೌರವ ಪಡೆದಿದ್ದಾರೆ. ಸಂಸ್ಥಾಪಕಿಯಾಗಿ ‘ಮಾತಂಗಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ನ್ನು ನೃತ್ಯ ಕ್ಷೇತ್ರದ ಪ್ರದರ್ಶನ…
ಸುವರ್ಣ ಕುಮಾರಿ ಹಾಗೂ ಮಧೂರು ಮೋಹನ ಕಲ್ಲೂರಾಯ ಇವರ ಮಗನಾಗಿ 02.02.1996ರಂದು ರಾಮಪ್ರಕಾಶ ಕಲ್ಲೂರಾಯ ಮಧೂರು ಅವರ ಜನನ. M-tech in mechanical engineering ಇವರ ವಿದ್ಯಾಭ್ಯಾಸ. ಮನೆಯ ವಾತಾವರಣ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣಂದಿರು ಹಾಗೂ ಹಿಮ್ಮೇಳದ ಮೇಲಿನ ಆಸಕ್ತಿ ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆಯಾಯಿತು. ಯಕ್ಷಗಾನದ ಚೆಂಡೆ ಮದ್ದಲೆ ಗುರುಗಳು:- ಮುಂಡೃಪ್ಪಾಡಿ ಶ್ರೀಧರ್ ರಾವ್. ಮೋಹನ ಬೈಪಡಿತ್ತಾಯ. ಚಂದ್ರ ಶೇಖರ್ ಆಚಾರ್ಯ ಗುರುವಾಯನಕೆರೆ. ಕೃಷ್ಣ ಪ್ರಕಾಶ ಉಳಿತ್ತಾಯ. ಕನ್ನಡಿಕಟ್ಟೆ, ಬಲಿಪರು, ಪ್ರದೀಪ್ ಕುಮಾರ್ ಗಟ್ಟಿ, ಹೊಳ್ಳ, ತಲಪಾಡಿ ಆಳ್ವ, ಅಮ್ಮಣ್ಣಾಯ, ಗಿರೀಶ್ ಕಕ್ಕೆಪದವು, ಕಾವ್ಯಶ್ರೀ ನೆಚ್ಚಿನ ಭಾಗವತರು. ಶಂಕರನಾರಾಯಣ ಪದ್ಯಾಣ, ದೇಲಂತಮಜಲು ಸುಬ್ರಮಣ್ಯ ಭಟ್ , ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ, ಕೃಷ್ಣ ಪ್ರಕಾಶ ಉಳಿತ್ತಾಯ, ಚೈತನ್ಯ ಪದ್ಯಾಣ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು. ದೇವಿ ಮಹಾತ್ಮೆ, ದುಶ್ಯಾಸನ ವಧೆ, ಸುಧಾಮ, ಇಂದ್ರಜಿತು ಎಲ್ಲಾ ಪುರಾಣ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ…
ಕುಳಾಯಿ : ಕುಳಾಯಿಯ ವಿಷ್ಣುಮೂತಿ೯ದೇವಸ್ಥಾನದಲ್ಲಿ ನಡೆಯುವ ಮಾಸಿಕ ಹುಣ್ಣಿಮೆಯ ಯಕ್ಷಗಾನ ತಾಳಮದ್ದಳೆ ಕಾಯ೯ಕ್ರಮದ ಅಂಗವಾಗಿ ‘ಇಂದ್ರಜಿತು’ ಪ್ರಸಂಗದ ತಾಳಮದ್ದಳೆ ದಿನಾಂಕ 29-09-2023ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಶ್ರೀರಾಮನಾಗಿ ಹಿರಿಯ ಹವ್ಯಾಸಿ ಅರ್ಥದಾರಿ ಶ್ರೀ ರಾಧಾಕೃಷ್ಣ ಭಟ್, ಇಂದ್ರಜಿತು ಪಾತ್ರದಲ್ಲಿ ಉದಯೋನ್ಮುಖ ಪ್ರತಿಭೆ ಶ್ರೀ ಚಂದ್ರಶೇಖರ ಕೊಡಿಪ್ಪಾಡಿ, ಹನುಮಂತನ ಪಾತ್ರದಲ್ಲಿ ಹಿರಿಯ ಹವ್ಯಾಸಿ ಅರ್ಥದಾರಿ ಹಾಗೂ ಪ್ರವಚನಕಾರ, ಶ್ರೀ ಮನೋಹರ ಕುಂದರ್ ಬಡಾ ಎರ್ಮಾಳು, ಲಕ್ಷ್ಮಣನಾಗಿ ಈ ಸಂಘದ ಸಂಚಾಲಕ ಹಾಗೂ ಹಿರಿಯ ಅರ್ಥದಾರಿಗಳಾದ ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಮಾಯಾಸೀತೆ ಪಾತ್ರದಲ್ಲಿ ಮಹಿಳಾ ಯಕ್ಷಗಾನ ಸಂಘದ ಸದಸ್ಯೆ ಹಾಗೂ ನಿವೃತ್ತ ಕಾಲೇಜು ಉಪನ್ಯಾಸಕಿರಾಗಿರುವ ಶ್ರೀಮತಿ ಲಲಿತಾ ಭಟ್ ತಾಳ್ತಜೆ ಹಾಗೂ ವಿಭೀಷಣನ ಪಾತ್ರದಲ್ಲಿ ಯವ ಪ್ರತಿಭೆ ಮತ್ತು ರಂಗಭೂಮಿ ಕಲಾವಿದ ಶ್ರೀ ವೈಶಾಖ್ ಸಹಕರಿಸಿದರು. ಹಿಮ್ಮೇಳದಲ್ಲಿ ಹಿರಿಯ ಭಾಗವತರಾದ ಶ್ರೀ ದಯಾನಂದ ಕೋಡಿಕಲ್, ಚೆಂಡೆಯಲ್ಲಿ ಯುವ ಕಲಾವಿದ ಕಟೀಲು ಮೇಳದ ಮದ್ದಳೆಗಾರರಾದ ಶ್ರೀ ಸೂರಜ್ ಆಚಾರ್ಯ ಮುಲ್ಕಿ,ಮದ್ದಳೆಯಲ್ಲಿ ಶ್ರೀ ಎಸ್.ಎನ್.ಭಟ್…