Author: roovari

ಕಾಸರಗೋಡು : ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನೋತ್ಸವದ ಅಂಗವಾಗಿ ‘ಪುರಾತನ ಕಲಾಕೃತಿ ಮತ್ತು ಕರಕುಶಲ ವಸ್ತು ಪ್ರದರ್ಶನ’ವನ್ನು ದಿನಾಂಕ 23-09-2023ರಂದು ಏರ್ಪಡಿಸಲಾಗಿತ್ತು. ಈ ವೇಳೆ ಹಿಂದಿನ ತಲೆಮಾರುಗಳ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ತಾಳೆಗರಿ, ವಾಲುರುಳಿ, ಚಾಪೆ, ಗೆರಸೆ, ತೈಲ ಬಾಂಡಲೆ, ರಾಟೆ, ಪೀಕದಾನಿ, ಬುಡ್ಡಿದೀಪ, ಕುಂಭ, ಕಡೆಗೋಲು, ಭಸ್ಮ ಪೆಟ್ಟಿಗೆ, ಚಿಮಣಿ ದೀಪ, ಗೆರಟೆಯ ವಿವಿಧ ವಸ್ತುಗಳು, ಪೂಜಾ ದೀಪಗಳು, ಟೇಪ್ ರೆಕಾರ್ಡರ್, ಕ್ಯಾಸೆಟ್, ಪ್ರಾಚೀನ ಕಾಲದ ಡಯಲ್‌ ಗಳು ಇತ್ಯಾದಿ ಗಮನ ಸೆಳೆದವು. ವಸ್ತು ಪ್ರದರ್ಶನವು ಹೊಸ ಪೀಳಿಗೆಗೆ ಆಸಕ್ತಿದಾಯಕವಾಗಿ ಆಕರ್ಷಿಸಿದವು. ಅಲ್ಲದೆ ಗೆರಟೆ, ಹುಲ್ಲು, ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸಿದ ಕರಕುಶಲ ಮತ್ತು ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ವಸ್ತು ಪ್ರದರ್ಶನ ವೀಕ್ಷಿಸಲು ಪರಿಸರದ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರು. ಇದೇ ಸಂದರ್ಭ ನಡೆದ ವಿಜ್ಞಾನ ಮೇಳ, ಸಮಾಜ ವಿಜ್ಞಾನ ಮೇಳ, ಗಣಿತ ಮೇಳ, ಐಟಿ ಮೇಳ ಹಾಗೂ ವೃತ್ತಿ…

Read More

ಮಂಗಳೂರಿನ ಹಲವಾರು ರಂಗ ಸಂಘಟನೆಗಳು ಜೊತೆಯಾಗಿ, ಸಂತ ಅಲೋಷಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ‘ಗಾಯಗಳು’ ಎಂಬ ಸುಂದರ ನಾಟಕ ಪ್ರದರ್ಶನವನ್ನು ದಿನಾಂಕ 28-09-2023ರಂದು ಆಯೋಜನೆ ಮಾಡಿದ್ದರು. ಶ್ರೀರಂಗಪಟ್ಟಣದ ‘ನಿರ್ದಿಗಂತ’ ನಾಟಕ ತಂಡ ಅಭಿನಯಿಸಿದ ಈ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಖ್ಯಾತ ರಂಗ ನಿರ್ದೇಶಕರಾದ ಡಾ.ಶ್ರೀಪಾದ ಭಟ್ ಅವರದ್ದು. ಗಾಯಗಳು ರಂಗಪ್ರಯೋಗ ಆಳವಾದ ಅನುಭವ ನೀಡಿದ ನಾಟಕ. ಒಂದೇ ನಾಟಕದೊಳಗೆ ನಾಲ್ಕು ಕತೆಗಳಿವೆ ನಾಲ್ಕೂ ಮನಸ್ಸಿಗಾದ ಗಾಯದ ಕತೆಗಳು.  ದೇಶದ ಯುದ್ಧಕ್ಕಾಗಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿ, ಅವರು ಹಿಂದಿರುಗಿ ಬರುತ್ತಾರೋ, ಇಲ್ಲವೋ ಎಂದು ಕಾಯುತ್ತಾ ಪರಿತಪಿಸುವ ತಂದೆ ತಾಯಂದಿರು. ತಮ್ಮ ಮಕ್ಕಳನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದೇವೆ ಎಂದು ಗರ್ವದಿಂದ ಎದೆ ಉಬ್ಬಿಸಿಕೊಳ್ಳುತ್ತಲೇ ಒಳಗೊಳಗೇ ಕೊರಗುವ ನೋವನ್ನು ಅನುಭವಿಸುವ ಪೋಷಕರು. ಮಹಾಭಾರತದ ಸ್ಮಶಾನ ಕುರುಕ್ಷೇತ್ರ ಪ್ರಸಂಗದಲ್ಲಿ ಸತ್ತು ಹೋದ ತಮ್ಮ ಮಕ್ಕಳನ್ನು ಹುಡುಕುತ್ತಿರುವ ಕೌರವ ಮತ್ತು ಪಾಂಡವ ಪಡೆಯ ಪೋಷಕರು ತಮ್ಮ ಮಕ್ಕಳ ಹೆಣವನ್ನು ಕಂಡಾಗ ನೋವಿಗೆ ದುಃಖಕ್ಕೆ ಪಕ್ಷ ಬೇಧ…

Read More

ನಿತೀಶ್ ಪಿ. ಬೈಂದೂರು ಇವರ ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ, ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜಿಸಿದ ‘ಕೌಟಿಲ್ಯ ಅವಾರ್ಡ್ಸ್ – 2023’ರ ‘ಯಂಗ್ ಫೋಟೋಗ್ರಾಫರ್ ಆಫ್ ದ ಇಯರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೈಂದೂರಿನ ಶ್ರೀಮತಿ ಕಲಾವತಿ ಮತ್ತು ಪಿ. ಸುಬ್ರಾಯ ದಂಪತಿಯ ಸುಪುತ್ರ. ಪದವಿ ಶಿಕ್ಷಣವನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು ಕೊಂಡಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಪ್ರಸ್ತುತ ಡಾ.ಬಿ.ಶೈಲಶ್ರೀ ಅವರ ಮಾರ್ಗದರ್ಶನದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್‌.ಡಿ. ಸಂಶೋಧನಾ ಅಧ್ಯಯನವನ್ನು ನಡೆಸುತ್ತಿದ್ದಾರೆ. ಛಾಯಚಿತ್ರ ಪ್ರಶಸ್ತಿ: • ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, • ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, • ಮಂಗಳೂರು ವಿಶ್ವವಿದ್ಯಾನಿಲಯದ ಟೂರಿಸಂ…

Read More

ಬೆಂಗಳೂರು : ಬೆಂಗಳೂರಿನ ‘ತಿಂಮ ಸೇನೆ’ ತಂಡ ಆಯೋಜಿಸುವ ಸಂವಾದ ಕಾರ್ಯಕ್ರಮವು ದಿನಾಂಕ 28-09-2023ರಂದು ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದ ಜಂಬೂ ಸವಾರಿ ದಿಣ್ಣೆಯ ಟಿ.ಕೆ ದೀಪಕ್ ಲೇಔಟಿನಲ್ಲಿ ನಡೆಯಿತು. ತಿಂಮಸೇನೆಯ ಈ ವಿಶೇಷ ಕಾರ್ಯಕ್ರಮಕ್ಕೆ ಕಳೆ ತಂದವರು ಸಾಹಿತಿ, ಕವಿ, ಗೀತರಚನಕಾರರಾದ  ಶ್ರೀ ಜಯಂತ್ ಕಾಯ್ಕಿಣಿ. ಈ ಕಾರ್ಯಕ್ರಮದಲ್ಲಿ 40 ಪದಗಳಿಗೆ ಮೀರದ ಒಂದು ಸಣ್ಣಕತೆಯ ರಚನೆಯನ್ನು ಎಲ್ಲ ಸದಸ್ಯರು ಮಾಡಿ, ಅದನ್ನು ಅಲ್ಲಿ ಓದಿದರು. ಒಬ್ಬೊಬ್ಬರದೂ ಒಂದೊಂದು ರೀತಿಯ ವಿನ್ಯಾಸ, ವಿಷಯ ವೈವಿಧ್ಯ ಮತ್ತು ನಿರೂಪಣಾ ಚಾತುರ್ಯ.  ಆ ಕತೆಗಳ ಬಗ್ಗೆ ಮಾತನಾಡುತ್ತಲೇ, ತಮ್ಮ ನೆನಪಿನ ಬುತ್ತಿಯಿಂದ ಅನೇಕ ಸಂಗತಿಗಳನ್ನು ಹೊರ ತೆಗೆದು ಕತೆಗಳ ಬಗ್ಗೆ ವಿಶೇಷ ವ್ಯಾಖ್ಯಾನವನ್ನು ಜಯಂತ ಕಾಯ್ಕಿಣಿಯವರು ಮಾಡಿದರು. ಬಳಿಕ ಮಾತನಾಡಿದ ಅವರು ‘ಕತೆ ಅನುಭವದಿಂದ ಉದ್ಭವಿಸಿದರೂ, ಅದು ಕತೆಗಾರರನ್ನು ಮೀರಿದ್ದು’ ಎಂದರು. ಸಂವೇದನಾ ಭರಿತ ಅವರ ಮಾತುಗಳು, ಕೇಳುಗರ ಮನಸ್ಸು ಸೆಳೆದುದಷ್ಟೇ ಅಲ್ಲದೆ ಕಥೆಯ ರಚನೆಗೆ ಬೇಕಾದ ಅನೇಕ ಸಲಹೆ, ಮಾರ್ಗದರ್ಶನವನ್ನು…

Read More

ಬೆಂಗಳೂರು : ಹಿಂದೂಸ್ತಾನಿ ಸಂಗೀತದ ಅಧ್ಯಯನ ಮತ್ತು ಅಧ್ಯಾಪನದಲ್ಲಿ 20 ವರ್ಷಗಳಿಂದ ಕಾರ್ಯನಿರತವಾಗಿರುವ ಸ್ವರ ಗಾಂಧಾರ ಸಂಗೀತ ವಿದ್ಯಾಲಯ ಅರ್ಪಿಸುವ ವಿಂಶತಿ ಗಾನ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮವು ದಿನಾಂಕ 02-10-2023ರ ಸೋಮವಾರದಂದು ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅಖಿಲ ಹವ್ಯಕ ಮಹಾಸಭಾದಲ್ಲಿ ಸಂಜೆ ಘಂಟೆ 5.00 ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ.ಅಹಲ್ಯಾ ಶರ್ಮಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ.ಮಲ್ಲೇಪುರಂ ಜಿ.ವೆಂಕಟೇಶ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಳಗ್ಗೆ ಘಂಟೆ  9.00ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯ ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಪ್ರಸ್ತುತಿ ನಡೆಯಲಿದ್ದು, ತಬಲಾದಲ್ಲಿ ಶ್ರೀ ಪ್ರಕಾಶ ದೇಶಪಾಂಡೆ, ಶ್ರೀ ನಾಗರಾಜ ಹೆಗಡೆ, ಶ್ರೀ ಮಂಜುನಾಥ ಭಟ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀಮತಿ ಪ್ರತಿಭಾ ಹೆಗಡೆ ಸಹಕರಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಸಂಜೆ ಘಂಟೆ 6.00ರಿಂದ ನಡೆಯಲಿರುವ ‘ಗಾನ ಸಂಭ್ರಮ’ದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ವಿದುಷಿ…

Read More

ಮುಡಿಪು : ನೃತ್ಯಲಹರಿ ನಾಟ್ಯಾಲಯ ಉಳ್ಳಾಲ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ‘ದಶಾವರಣ -2023’ ಕಾರ್ಯಕ್ರಮವು ದಿನಾಂಕ 24-09-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ್‌ ಕುಮಾರ್ ಅವರು ಉದ್ಘಾಟಿಸಿ ಮಾತನಾಡುತ್ತಾ “ಸನಾತನ ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಸಮರ್ಥ ಕಲಾಕಾರರ ಅಗತ್ಯವೂ ಇದೆ. ಶಾಸ್ತ್ರೀಯ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿ, ಮುಂದುವರಿಸುವಲ್ಲಿ ರೇಷ್ಮಾ ನಿರ್ಮಲ್ ಭಟ್ ಅವರು ನೃತ್ಯಲಹರಿ ನಾಟ್ಯಾಲಯದ ಮೂಲಕ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ” ಎಂದು ಹೇಳಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ.ಸುವರ್ಣ ಮಾತನಾಡಿದರು. ಶಾರದಾ ಗಣಪತಿ ವಿದ್ಯಾಲಯದ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಪ್ರೊ.ಬಿ.ಕೆ. ಸರೋಜಿನಿ, ಪ್ರಾಧ್ಯಾಪಕ ಧನಂಜಯ ಕುಂಬ್ಳೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಬೋಳಿಯಾರ್, ವಿದ್ಯಾರತ್ನ ವಿದ್ಯಾ ಸಂಸ್ಥೆಯ ಸಂಚಾಲಕ ರವೀಂದ್ರ…

Read More

ಕೋಟ : ಕೋಟತಟ್ಟು ಗ್ರಾಮ ಪಂಚಾಯತ್, ಕೋಟತಟ್ಟು, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19ನೇ ವರುಷದ ಸಂಭ್ರಮ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ‘ಇಂಪನ’ ಸಂಗೀತ ಸಂಪುಟದ ಸಂಚಲನ ಕಾರ್ಯಕ್ರಮವು ದಿನಾಂಕ 03-10-2023ರಿಂದ 10-10-2023ರವರೆಗೆ ಕೋಟದ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ನಡೆಯಲಿದೆ. ದಿನಾಂಕ 03-10-2023ರಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಇವರು ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎ. ಕಿರಣ ಕುಮಾರ್ ಕೊಡ್ಗಿಯವರು ಅಧ್ಯಕ್ಷತೆ ವಹಿಸಲಿರುವರು. ದಿನಾಂಕ 04-10-2023ರಿಂದ 08-10-2023ರವರೆಗೆ ಕಾರಂತ ದರ್ಶನ : ಚಲನಚಿತ್ರ ಪ್ರದರ್ಶನಗಳು ಪ್ರತಿದಿನ ಸಂಜೆ 6ರಿಂದ ಪ್ರದರ್ಶನಗೊಳ್ಳಲಿವೆ. ದಿನಾಂಕ 04-10-2023ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿ…

Read More

ಪುತ್ತೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಪುತ್ತೂರು ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಉಪವಿಭಾಗ ಆಶ್ರಯದಲ್ಲಿ ದಿನಾಂಕ 10-10-2023ರಂದು ಪುತ್ತೂರು ಬಾಲವನದಲ್ಲಿ ಹಿರಿಯ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮದಿನೋತ್ಸವ ನಡೆಯಲಿದೆ. ಈ ಸಂದರ್ಭ ನೀಡಲಾಗುವ ಕೋಟ ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಖ್ಯಾತ ವರ್ಣ ಚಿತ್ರಕಲಾವಿದ ಬೆಂಗಳೂರಿನ ಕೆ.ಚಂದ್ರನಾಥ ಆಚಾರ್ಯ ಆಯ್ಕೆಯಾಗಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಸಾಹಿತಿ ಡಾ.ವರದರಾಜ ಚಂದ್ರಗಿರಿ, ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಹಾಗೂ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಕಾರ್ಯನಿರ್ವಹಿಸಿದ್ದಾರೆ. ಸುಳ್ಯದ ಲಿಬರಲ್ ಅಕಾಡೆಮಿ ಆಫ್ ಎಜುಕೇಶನ್ ಸ್ಥಾಪಕಾಧ್ಯಕ್ಷರಾಗಿದ್ದ ದಿ.ಕುರುಂಜಿ ವೆಂಕಟರಮಣ ಗೌಡ ಅವರ ಹೆಸರಿನಲ್ಲಿ ಸ್ಥಾಪನೆಯಾದ ಶಾಶ್ವತ ನಿಧಿಯಲ್ಲಿ ಪ್ರತೀ ವರ್ಷ ಕಾರಂತ ಬಾಲವನ ಪ್ರಶಸ್ತಿ ನೀಡಲಾಗುತ್ತಿದೆ. ಕೆ.ಚಂದ್ರನಾಥ ಆಚಾರ್ಯ : ಶಿವರಾಮ ಕಾರಂತರಂತಹ ವ್ಯಕ್ತಿತ್ವಗಳಿಂದ ಅಪಾರವಾಗಿ ಪ್ರಭಾವಿತರಾದ ಚಂದ್ರನಾಥ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನ, ಭಾರತೀ ನಗರ, ಬನ್ನೂರು ಇಲ್ಲಿ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ‘ಮಾಯಾಮೃಗ’ ಎಂಬ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 26-09-2023ರಂದು ನಡೆಯಿತು. ಮುಮ್ಮೇಳದಲ್ಲಿ ಶ್ರೀ ಪಕಳಕುಂಜ ಶ್ಯಾಮ್ ಭಟ್ (ರಾವಣ), ಶ್ರೀ ಗುಡ್ಡಪ್ಪ ಬಲ್ಯ (ಸನ್ಯಾಸಿ ರಾವಣ), ಶ್ರೀ ಭಾಸ್ಕರ ಬಾರ್ಯ (ಶ್ರೀ ರಾಮ), ಶ್ರೀ ದುಗ್ಗಪ್ಪ ನಡುಗಲ್ಲು (ಸೀತೆ), ಶ್ರೀ ಮಾಂಬಾಡಿ ವೇಣುಗೋಪಾಲ್ ಭಟ್ (ಲಕ್ಷ್ಮಣ) ಮತ್ತು ಶ್ರೀ ಬಡೆಕ್ಕಿಲ ಚಂದ್ರಶೇಖರ ಭಟ್ (ಮಾರೀಚ) ಪಾತ್ರಗಳಲ್ಲಿ ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಮತ್ತು ಶ್ರೀ ಆನಂದ್ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪ್ರೊ.ಶ್ರೀ ದಂಬೆ ಈಶ್ವರ ಶಾಸ್ತ್ರೀ, ಶ್ರೀ ಅಚ್ಯುತ ಪಾಂಗಣ್ಣಾಯ ಮತ್ತು ಮಾಸ್ಟರ್ ಪರೀಕ್ಷಿತ್ ಸಹಕರಿಸಿದರು. ಶ್ರೀ ದೇವಳದ ಸಂಚಾಲಕರು ಹಾಗೂ ಸದಸ್ಯರು ಸಹಕಾರದೊಂದಿಗೆ ಇಂಜಿನಿಯರ್ ಶಂಕರ್ ಭಟ್ ಪ್ರಾಯೋಜಿಸಿದರು.

Read More

ಮುಂಬಯಿ : ಮಂಗಳೂರಿನ ಮಧುರತರಂಗ ಸಂಸ್ಥಾಪಕ ಸ್ವರ ತಪಸ್ವಿ ‘ಕರ್ನಾಟಕ ಸ್ವರ ಕಂಠೀರವ’ ಜೂ.ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಇವರ ಸ್ವರ ಗಾಯನ ಲೋಕದ 50ರ ಸುವರ್ಣ ಸಂಭ್ರಮ ಆಚರಣೆಯು ದಿನಾಂಕ 24-09-2023ರ ಭಾನುವಾರ ಮುಂಬಯಿಯ ಸಾಂತಾಕ್ರೂಸ್ (ಪೂ.)ನಲ್ಲಿರುವ ಬಿಲ್ಲವ ಭವನದಲ್ಲಿ ನಡೆಯಿತು. ‘ಸ್ವರ ಕಂಠೀರವ’ ಡಾ.ರಾಜ್ ಸವಿನೆನಪು, ಡಾ.ರಾಜ್ ಕುಮಾರ್ ಅವರ ನೆನಪಿನ ಮಧುರ ಗೀತೆಗಳು ಮತ್ತು ನೃತ್ಯ ವೈಭವಗಳ ವಿಭಿನ್ನ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮವನ್ನು ಸವಿತಾ ಅಶೋಕ್ ಪುರೋಹಿತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನವಿಮುಂಬಯಿಯ ಪನ್ವೇಲ್ ನಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅಧ್ಯಕ್ಷ ಸಿ.ಎ. ಶ್ರೀಧರ್ ಆಚಾರ್ಯ ವಹಿಸಿಕೊಂಡಿದ್ದರು. ಶ್ರೀಯುತರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ ತನ್ನ ಕಂಠ ಸ್ವರದ ಮೂಲಕ ಡಾ.ರಾಜಕುಮಾರ್ ಅವರನ್ನು ಸದಾ ಸ್ಮರಿಸಿ, ನೆನಪಿಸಿಕೊಂಡು ಬಂದಿರುವ ಜಗದೀಶ್ ಶಿವಪುರ ಶ್ರೀ ಕಾಳಿಕಾಂಬಾ ದೇವಸ್ಥಾನದ ಭಕ್ತಿಗೀತೆಯನ್ನೂ ಹಾಡಿ ಭಕ್ತ ಜನರನ್ನು ಮುದಗೊಳಿಸಿದ್ದಾರೆ. ಮುಂಬಯಿ ನಗರದಲ್ಲಿ…

Read More