Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ವತಿಯಿಂದ ವಿಶ್ವಶಾಂತಿಗಾಗಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ದಿನಾಂಕ 02-12-2023ರಂದು ಉದ್ಘಾಟನೆಗೊಂಡಿದೆ. ಕುಮಾರ ಶಿವಕುಮಾರ್ ಬೋಳಂತೂರು ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು “ಪರಿಸರ ಸ್ವಚ್ಛತೆಯಂತೆ ಸಾಮಾಜಿಕ ಸ್ವಚ್ಛತೆಯನ್ನೂ ಮಾಡಲೇಬೇಕಾದ ಕಾಲಘಟ್ಟವಿದು. ಪರಸ್ಪರ ಹೊಂದಾಣಿಕೆ, ಸ್ನೇಹ, ಸಹಜೀವನ, ಸಹಕಾರ, ಪ್ರೀತಿ, ಸಮಯ ಪಾಲನೆ ಮುಂತಾದ ಬದುಕಿನ ಅನಿವಾರ್ಯ ಅಂಶಗಳ ಕೊರತೆಯನ್ನು ನೀಗಿ, ಸದ್ಭಾವಪೂರ್ಣ, ಶಾಂತ ಮನಸ್ಕ ಸಮಾಜ ನಿರ್ಮಾಣದಲ್ಲಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಬೆಂಬಲವಾಗಿ ಕೂಡಿ ಬರಲಿ” ಎಂದರು. ಇದೇ ಸಂದರ್ಭದಲ್ಲಿ ಸಾಹಿತಿ ಭಾಸ್ಕರ ಅಡ್ವಳ ವಿರಚಿತ ‘ಘಮ ಘಮಿಸುವ ಗುಟ್ಟು’ ಎಂಬ ಜೀವನ ಮೌಲ್ಯಗಳ ಚಿಂತನಾ ಕೃತಿಯನ್ನು ಓಜಾಲ ಸ.ಹಿ.ಪ್ರಾ ಶಾಲಾ 7ನೇ ತರಗತಿ ವಿದ್ಯಾರ್ಥಿನಿ, ಎಳೆಯ ಸಾಹಿತಿ ಕುಮಾರಿ ಶ್ರುತಿಕಾ ಬಾಕಿಮಾರು ಅನಾವರಣಗೊಳಿಸಿದರು. ಈ ಕೃತಿಯು ಸಾಮಾಜಿಕ ಸ್ವಚ್ಛತಾ ಅಭಿಯಾನ…
ಮುಂಬೈ : ಮುಂಬೈ ವಿವಿ ಕನ್ನಡ ವಿಭಾಗ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ ಇವರ ಸಂಯುಕ್ತ ಆಯೋಜನೆಯಲ್ಲಿ ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ. ನಾಯಕ್ ಭವನದಲ್ಲಿ ‘ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮವು ದಿನಾಂಕ 01-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವ್ಯಾಸರಾಯ ಬಲ್ಲಾಳ ಚೊಚ್ಚಲ ‘ಕಥಾ ಪ್ರಶಸ್ತಿ’ ಸ್ವೀಕರಿಸಿದ ಹಿರಿಯ ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರ ಅವರು ಅಂದು ‘ಕತೆಗಾರರಾಗಿ ವ್ಯಾಸರಾಯ ಬಲ್ಲಾಳ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. “ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ ಅವರಂತಹ ದೊಡ್ಡ ದೊಡ್ಡ ಲೇಖಕರೆಲ್ಲ ತಮ್ಮ ಬರಹಗಳಲ್ಲಿ ಬದುಕಿನ ಪ್ರಯಾಣದ ಕುರಿತಾಗಿ ನಿರಂತರವಾಗಿ ಬರೆಯುತ್ತಾರೆ. ಬಲ್ಲಾಳರು ತಮ್ಮ ಕೃತಿಗಳಲ್ಲಿ ತಮ್ಮ ತೊಳಲಾಟಗಳನ್ನು, ಪಯಣವನ್ನು, ಅನುಭವಗಳನ್ನು ಬರೆಯುತ್ತಾ ಅದರ ಮೂಲಕ ಓದುಗರನ್ನು ಜಾಗೃತಗೊಳಿಸುವ ಮತ್ತು ಬದುಕಿನ ಪಥದಲ್ಲಿ ಒಳ್ಳೆಯದನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾರೆ. ಕ್ಷಮಿಸುವುದರಲ್ಲಿಯೇ ಘನತೆ, ದೊಡ್ಡಸ್ತಿಕೆ ಇದೆಯೆಂಬ ಭಾವ ಅವರ ಎಲ್ಲಾ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆಯಲ್ಲಿ ಇರುವ ಪರಿಷತ್ತಿನ ಕೃಷ್ಣರಾಜ ಮಂದಿರದಲ್ಲಿ ಹಮ್ಮಿಕೊಂಡ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 03-12-2023ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಎಲ್ಲ ಧರ್ಮಗಳ ಗುರಿಯೂ ಒಂದೇ. ಕೃಷ್ಣ-ಕ್ರೈಸ್ತರ ವಿಚಾರಗಳಲ್ಲಿ ವ್ಯತಾಸಗಳಿಲ್ಲ. ಅದರಂತೆ ಸಾಹಿತ್ಯಕ್ಕೂ ಯಾವುದೇ ಗಡಿ ಎನ್ನುವುದಿಲ್ಲ. ಕನ್ನಡ ಭಾಷೆಗೆ ಕ್ರೈಸ್ತ ಧರ್ಮದ ಕೊಡುಗೆ ಅಪಾರ. ಕನ್ನಡಕ್ಕೆ ನಿಘಂಟು ಸೇರಿದಂತೆ ಅನೇಕ ಐತಿಹಾಸಿಕ ಕೊಡುಗೆಯನ್ನು ನೀಡುವ ಮೂಲಕ ಭಾಷೆಗೆ ಧರ್ಮ ಅಡ್ಡಿಯಲ್ಲ ಎನ್ನುವುದು ಸ್ಪಷ್ಟ. ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಿಕ, ಸಾಂಸ್ಕೃತಿಕ, ಬಳಗದಲ್ಲಿ ‘ಚಸರಾ’ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ, ಕನ್ನಡಿಗರಿಗೆ ದೊರೆಯಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡಪರ ಕಾಳಜಿ ಮತ್ತು ಜನಪರ ಕಾಳಜಿಯಿಂದ ಚಸರಾ ಪ್ರಗತಿಪರ ಹೋರಾಟಗಾರರಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ 2023-24ನೇ ಸಾಲಿನ ತಿಂಗಳ ಸರಣಿ ತಾಳಮದ್ದಳೆಯ ಕೂಟವು ಪಾರ್ತಿಸುಬ್ಬ ವಿರಚಿತ ‘ಸೀತಾ ಕಲ್ಯಾಣ’ ಎಂಬ ಆಖ್ಯಾನದೊಂದಿಗೆ ದಿನಾಂಕ 25-11-2023ರಂದು ಪುತ್ತೂರು ಸಮೀಪದ ಭಾರತಿ ನಗರದ ಬನ್ನೂರು ಇಲ್ಲಿರುವ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಮಾ.ಪರೀಕ್ಷಿತ್ ಮತ್ತು ಮಾ.ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ದಶರಥ), ಜಯರಾಮ ದೇವಸ್ಯ (ವಿಶ್ವಾಮಿತ್ರ), ಶುಭಾ ಅಡಿಗ (ಜನಕ), ಮಾಂಬಾಡಿ ವೇಣುಗೋಪಾಲ್ ಭಟ್ (ಪರಶುರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಗುಡ್ಡಪ್ಪ ಬಲ್ಯ (ಶ್ರೀ ರಾಮ), ಚಂದ್ರಶೇಖರ ಭಟ್ ಬಡೆಕ್ಕಿಲ (ಗೌತಮ), ದುಗ್ಗಪ್ಪ ನಡುಗಲ್ಲು (ಅಹಲ್ಯೆ) ಹಾಗೂ ಅಚ್ಯುತ ಪಾಂಗಣ್ಣಾಯ (ಶತಾನಂದ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಚಂದ್ರಶೇಖರ ಭಟ್ ಬಡೆಕ್ಕಿಲ ಪ್ರಾಯೋಜಿಸಿದರು
ಉಡುಪಿ : ಸುಹಾಸಂ ಉಡುಪಿ ಮತ್ತು ಕಲ್ಕೂರ ಪ್ರತಿಷ್ಠಾನ (ರಿ.), ಮಂಗಳೂರು ವತಿಯಿಂದ ಲೇಖಕ ಎಚ್. ಶಾಂತರಾಜ ಐತಾಳರ ‘ಬಿಸಿಲುದುರೆಯ ಬೆನ್ನೇರಿದವ’ (ಆತ್ಮಕಥನ) ಮತ್ತು ‘ಬಾಲಂಗೋಚಿ’ (ಮಂದಹಾಸ ಮೂಡಿಸುವ ಮಾತ್ರೆಗಳು) ಎರಡು ಕೃತಿಗಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿದಿಯೂರು ಹೊಟೇಲಿನ ರೂಫ್ ಟಾಪ್ ನಲ್ಲಿ ದಿನಾಂಕ 02-12-2023 ಶನಿವಾರದಂದು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಭುವನ ಪ್ರಸಾದ್ ಹೆಗಡೆ ಮಣಿಪಾಲ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ ಉಪಸ್ಥಿತರಿದ್ದರು. ಲೇಖಕ ದಂಪತಿಗಳನ್ನು ಹಾಗೂ ಶಾಸಕ ಗುರ್ಮೆ ಸುರೇಶ ಶೆಟ್ಟಿಯವರನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಇವರು ಅಭಿನಂದಿಸಿ, ಗೌರವಿಸಿದರು. ಡಾ. ಸಂಧ್ಯಾ ಅಡಿಗ ಕುಂದಾಪುರ ಪ್ರಾರ್ಥಿಸಿ, ಎಚ್. ಶಾಂತರಾಜ್ ಐತಾಳ್ ಸ್ವಾಗತಿಸಿ, ಕೃತಿ ಪರಿಚಯವನ್ನು ವಿದ್ಯಾ ಪ್ರಸಾದ್ ಉಡುಪಿ ಮಾಡಿದರು. ಡಾ. ಸಪ್ಪಾ ಜೆ. ಉಕ್ಕಿನಡ್ಕ ವಂದಿಸಿ, ಸುಹಾಸಂ ಶ್ರೀನಿವಾಸ ಉಪಾಧ್ಯ ನಿರೂಪಿಸಿದರು.
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಈ ಬಾರಿಯ ‘ಕಿಶೋರ ಯಕ್ಷಗಾನ ಸಂಭ್ರಮ -2023’ವು ಬ್ರಹ್ಮಾವರದ ಬಂಟರ ಸಭಾಭವನದ ಮುಂಭಾಗದಲ್ಲಿ ದಿನಾಂಕ 29-11-2023ರಂದು ಉದ್ಘಾಟನೆಗೊಂಡಿತು. ಉಡುಪಿ ಶಾಸಕರೂ, ಯಕ್ಷಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ ಆದ ಯಶ್ ಪಾಲ್ ಎ. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭವನ್ನು ಡಾ. ಜಿ. ಶಂಕರ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ರಘುರಾಮ ಮಧ್ಯಸ್ಥ, ಬಿ.ಭುಜಂಗ ಶೆಟ್ಟಿ, ಬಿ.ಎನ್.ಶಂಕರ ಪೂಜಾರಿ, ಪ್ರತಾಪ್ ಹೆಗ್ಡೆ, ಬಿರ್ತಿ ರಾಜೇಶ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಧನಂಜಯ ಅಮೀನ್, ಜ್ಞಾನ ವಸಂತ ಶೆಟ್ಟಿ, ಎಂ.ಗಂಗಾಧರ ರಾವ್, ಶ್ರೀಮತಿ ಉಮಾ, ಕೇಶವ ಕುಂದರ್, ನಿತ್ಯಾನಂದ ಬಿ.ಆರ್. ಅಭ್ಯಾಗತರಾಗಿ ಭಾಗವಹಿಸಿದರು. ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು. ಗಣೇಶ್ ಬ್ರಹ್ಮಾವರ…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನಗರದ ಎನ್.ಆರ್.ಕಾಲನಿಯಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ಹಿರಿಯ ಲೇಖಕಿ ‘ಎಚ್.ಎಸ್. ಪಾರ್ವತಿ ದತ್ತಿ ನಿಧಿ’ 2022 ಮತ್ತು 2023ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 30-11-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ “ಲೇಖಕಿಯರ ಸಾಹಿತ್ಯ ನಿರ್ಲಕ್ಷಿಸಿ ನಾವು ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ ಅದನ್ನು ಶ್ರೇಷ್ಠತೆಯ ಸೊಕ್ಕು ಎಂದೇ ಭಾವಿಸಬೇಕಾಗುತ್ತದೆ. ಎಲ್ಲರನ್ನೂ, ಎಲ್ಲವನ್ನೂ ಒಳಗೊಂಡು ಮುನ್ನಡೆದಾಗ ಅದು ಶ್ರೇಷ್ಠತೆಯ ಶೋಧವಾಗುತ್ತದೆ. ಸಾಹಿತ್ಯ ವಲಯದಲ್ಲಿ ಶ್ರೇಷ್ಠತೆಯ ಸೊಕ್ಕು ಇದೆ, ಅದು ಶ್ರೇಷ್ಠತೆಯ ಶೋಧ ಆಗಬೇಕು. ಆಗ ಮಾತ್ರ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ನ್ಯಾಯ ಒದಗಿಸಲು ಸಾಧ್ಯ. ಜನಪ್ರಿಯ ಸಾಹಿತಿ ಎಚ್.ಎಸ್.ಪಾರ್ವತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಈ ಮೂವರೂ ಸಾಹಿತ್ಯವಲಯದ ಬೇರೆ ಬೇರೆ ಪ್ರಕಾರಗಳಲ್ಲಿ ಗುರುತಿಸಿಕೊಂಡವರು. ವಿಭಿನ್ನ ರೀತಿಯ ಈ ಮೂರು ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸುತ್ತಿರುವುದು ಕನ್ನಡ ಸಾಹಿತ್ಯ…
ಸೋಮವಾರಪೇಟೆ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭ ದಿನಾಂಕ 30-11-2023ರಂದು ನಡೆಯಿತು. ಈ ಸಮಾರಂಭದಲ್ಲಿ ಸಾಹಿತಿ ಶ.ಗ. ನಯನತಾರಾ ಪ್ರಕಟಿಸಿರುವ ‘ಶನಿವಾರಸಂತೆ ಕೊಡ್ಲಿಪೇಟೆ ಒಂದು ಸಾಂಸ್ಕೃತಿಕ ಪಕ್ಷಿನೋಟ’ ಕೃತಿ ಬಿಡುಗಡೆಗೊಳಿಸಿದ ಶಾಸಕ ಡಾ. ಮಂತರ್ ಗೌಡ ಇವರು ಮಾತನಾಡಿ “ನವೆಂಬರ್ ತಿಂಗಳಲ್ಲಿ ಶಾಲು ಹಾಕಿ, ಸಂಭ್ರಮಿಸಿದರೆ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದವರು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೂ ಮನೆಯಲ್ಲಿ ಮಕ್ಕಳೊಂದಿಗೆ ಬಾಯಿ ತುಂಬಾ ಕನ್ನಡದಲ್ಲಿ ಮಾತನಾಡಬೇಕು. ಮಕ್ಕಳು ಕನ್ನಡ ಸಾಹಿತ್ಯ ಓದಲು ಪ್ರೋತ್ಸಾಹ ನೀಡಿಬೇಕು. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಕೆಗೆ ಅವಕಾಶ ಮಾಡಿಕೊಡಬೇಕು” ಎಂದು ಸಲಹೆ ನೀಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ “ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, 8 ಜ್ಞಾನಪೀಠ ಪ್ರಶಸ್ತಿ ಸಹ ಪಡೆದುಕೊಂಡಿದೆ. ಇಂತಹ ಶ್ರೀಮಂತ…
ಕುಂದಾಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಕನಕ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಕನಕದಾಸ ಕೀರ್ತನೆಗಳ ಗಾಯನ ಮತ್ತು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 30-11-2023ರಂದು ಕುಂದಾಪುರದ ‘ನುಡಿ’ಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರದ ಖ್ಯಾತ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ “ಪುರಾಣ ಹಾಗೂ ಆಧುನಿಕ ಕಾವ್ಯಗಳ ಸುಲಭ ಅರ್ಥೈಸುವಿಕೆಗೆ ಗಮಕ ಕಲೆ ಪೂರಕವಾದುದು. ಕಾವ್ಯಗಳಲ್ಲಿನ ಸಾಂದರ್ಭಿಕವಾದ ಸಾಹಿತ್ಯ ಶ್ರೀಮಂತಿಕೆಗೆ ರಸಬದ್ಧವಾದ ರಾಗಗಳ ಸಂಯೋಜನೆಯು ಶೋತೃಗಳಿಗೆ ಹೃದ್ಯವಾಗುತ್ತದೆ. ಮನೆಮನೆಗಳಲ್ಲಿ ಗಮಕ ಕಲೆ ಪ್ರಸ್ತುತಗೊಳ್ಳಬೇಕು ಯುವ ಮನಸುಗಳನ್ನು ಅರಳಿಸಬೇಕು.” ಎಂದು ಅವರು ಅಭಿಪ್ರಾಯಪಟ್ಟರು. ಗಮಕಿಯಾಗಿ ಶ್ರೀಮತಿ ಮಂಜುಳಾ ಸುಬ್ರಮಣ್ಯ ಮಂಚಿ ಹಾಗೂ ವ್ಯಾಖ್ಯಾನಕಾರರಾಗಿ ಸಂಸ್ಕೃತ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರೆ ಇವರು ದ.ರಾ. ಬೇಂದ್ರೆಯವರ ಮೇಘದೂತ ಕಾವ್ಯ ಭಾಗವನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್…
ಕೋಟ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಾಹೆ ಹಾಗೂ ವಿವೇಕಾ ಪದವಿಪೂರ್ವ ಕಾಲೇಜು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿಸ್ತರಣಾ ಉಪನ್ಯಾಸ ಮಾಲಿಕೆಯ 6ನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 17-11-2023ರಂದು ಕೋಟದ ವಿವೇಕಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಕನಕದಾಸರ ಸಾಹಿತ್ಯದ ಭಾಷೆ-ಸಮಕಾಲೀನ ಪ್ರಜ್ಞೆ’ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಕುಂದಾಪುರ ಹಕ್ಲಾಡಿಯ ಸರಕಾರಿ ಪ್ರೌಢಶಾಲೆಯ ಕನ್ನಡ ಉಪನ್ಯಾಸಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿಯವರು “ಕನಕದಾಸರು ಕಾವ್ಯ ಮತ್ತು ಕೀರ್ತನ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು. ಹಿರಿಯ ಮಾನವ ಬಂಧು ಎಂಬ ವಿಚಾರವನ್ನು ಸಾಂಸಾರಿಕ ಬದುಕಿನ ಅನುಭವ ರಹಸ್ಯವನ್ನು ಸಮಾಜದ ಲೋಪ, ದೋಷಗಳನ್ನು ಸಮರ್ಥವಾಗಿ ಗುರುತಿಸಿ ಮೃದುವಾಗಿ ಟೀಕಿಸಿದವರು. ರಾಮಾಯಣ, ಮಹಾಭಾರತ, ಭಾಗವತ, ವೇದೋಪನಿಷತ್ತು ಹಾಗೂ ಪುರಾಣ ಮುಂತಾದವುಗಳನ್ನು ಚೆನ್ನಾಗಿ ಬಲ್ಲ ಕನಕದಾಸರು ಸಂಗೀತದ ಸಹಚರ್ಯೆಯ ಸರಳ ಕನ್ನಡದ ಮೂಲಕ ಸಮಕಾಲೀನ ಸಮಾಜದ ಆರ್ಥಿಕ, ಸಾಮಾಜಿಕ, ನೈತಿಕ, ತಾತ್ವಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಕಾವ್ಯ ಮತ್ತು…